Search
  • Follow NativePlanet
Share
» »ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ

ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ

ನೀವು ಬೆಂಗಳೂರಿನಲ್ಲಿ ವಾಸಿಸುವವರಾಗಿದ್ದು, ವಾರಾಂತ್ಯದಲ್ಲಿ ಯಾವುದಾದರೂ ಸ್ಥಳಕ್ಕೆ ಭೇಟಿ ಕೊಡಲು ಬಯಸುತಿರುವಿರಾದಲ್ಲಿ, ಬನ್ನೇರುಘಟ್ಟಕ್ಕೆ ಹೋಗುವುದಕ್ಕೆ ಪ್ರಯತ್ನಿಸಿ. ಇದು ಒಂದು ಪ್ರಮುಖವಾದ ಸ್ಥಳವಾಗಿದ್ದು ಜಗತ್ತಿನಾದ್ಯಂತದ ಜನರನ್ನು ತನ್ನಡೆಗೆ ಆಕರ್ಷಿಸುತ್ತದೆ.
ಬನ್ನೇರುಘಟ್ಟ ವನ್ಯಜೀವಿ ಉದ್ಯಾನವನವು ಬೆಂಗಳೂರು ನಗರದ ದಕ್ಷಿಣಕ್ಕೆ 22 ಕಿಮೀ ದೂರದಲ್ಲಿದೆ. 104 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ಉದ್ಯಾನವನವು ಬೆಂಗಳೂರು ಅರಣ್ಯ ವಿಭಾಗದ ಅಡಿಯಲ್ಲಿ ಆನೇಕಲ್ ಶ್ರೇಣಿಯಲ್ಲಿರುವ ಹತ್ತು ಮೀಸಲು ಅರಣ್ಯಗಳನ್ನು ಒಳಗೊಂಡಿದೆ.

1971 ರಲ್ಲಿ ಸ್ಥಾಪಿತವಾದ ಈ ಉದ್ಯಾನವನವು ಮುಖ್ಯ ನೇಚರ್ ರಿಸರ್ವ್, ಮೃಗಾಲಯ, ಮಕ್ಕಳ ಉದ್ಯಾನವನ, ಅಕ್ವೇರಿಯಂ, ಮೊಸಳೆ ಉದ್ಯಾನವನ, ವಸ್ತುಸಂಗ್ರಹಾಲಯ, ಚಿಟ್ಟೆ ಪಾರ್ಕ್, ಸ್ನೇಕ್ ಪಾರ್ಕ್ ಮತ್ತು ಸಾಕುಪ್ರಾಣಿಗಳನ್ನು ಒಳಗೊಂಡಿದೆ. ಅರಣ್ಯವು ಡೆಸಿಡಿಯಸ್ ಮರಗಳು ಮತ್ತು ಮುಳ್ಳಿನ ಪೊದೆಗಳನ್ನು ಒಳಗೊಂಡಿದೆ.

entrancetobannerghattanationalpark

ಸೂರ್ಯನ ಬಿಸಿಲಿನಲ್ಲಿ ಸಫಾರಿ- ಬನ್ನೇರು ಘಟ್ಟದಲ್ಲಿರುವ ಪ್ರಮುಖ ಆಕರ್ಷಣೆಗಳು

ಬನ್ನೇರುಘಟ್ಟದ ಪ್ರಮುಖ ಆಕರ್ಷಣೆಯೆಂದರೆ ಅದು ದೊಡ್ಡ ಬೆಕ್ಕುಗಳು. ನೀವು ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ನಿಸರ್ಗಧಾಮಗಳಿರುವ ಸ್ಥಳಗಳಲ್ಲಿ ಇದೂ ಒಂದು. ಅರಣ್ಯ ಇಲಾಖೆಯು ಸಿಂಹ ಮತ್ತು ಹುಲಿ ಸಫಾರಿ ಅಥವಾ ಗ್ರ್ಯಾಂಡ್ ಸಫಾರಿಯನ್ನು ಆಯೋಜಿಸುತ್ತದೆ, ಅದು ನಿಮಗೆ ದೊಡ್ಡ ಬೆಕ್ಕುಗಳಷ್ಟೇ ಅಲ್ಲ, ಇತರ ಅನೇಕ ಪ್ರಾಣಿಗಳ ನೋಟವನ್ನು ನೀಡುತ್ತದೆ. ಈ 25,000 ಎಕರೆ ಮೀಸಲು ಹುಲಿಗಳು, ಸಿಂಹಗಳು, ಚಿರತೆಗಳು, ಕಾಡೆಮ್ಮೆ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ಚಿಟ್ಟೆಗಳಿಗೆ ನೆಲೆಯಾಗಿದೆ.

ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುವಾಗ ಚಿರತೆಗಳು, ಅಪರೂಪದ ಬಿಳಿ ಹುಲಿಗಳು, ಸುಂದರವಾದ ಬಂಗಾಳ ಹುಲಿಗಳು ಮತ್ತು ಸುಂದರವಾದ ಸಿಂಹಗಳು ಇತ್ಯಾದಿಗಳನ್ನು ನೋಡಲು ಸಿಗುವಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಬಹುದು. ಈ ಪ್ರದೇಶದಲ್ಲಿ ಅದೂ ಮುಖ್ಯವಾಗಿ ಉದ್ಯಾನವನವು ಸರ್ಕಸ್ ಮತ್ತು ಇತರ ಪ್ರಾಣಿ ಹಿಂಸೆ ಸಂದರ್ಭಗಳಿಂದ ರಕ್ಷಿಸಲ್ಪಟ್ಟ ಪ್ರಾಣಿಗಳ ಪ್ರದೇಶವನ್ನು ಹೊಂದಿದೆ. ಈ ಪ್ರಾಣಿಗಳು ಭಾರತದಾದ್ಯಂತ ಇಲ್ಲಿಗೆ ತರಲಾಗುತ್ತವೆ ಮತ್ತು ಅವುಗಳನ್ನು ಬೇಲಿಯಿಂದ ಸುತ್ತುವರಿದ ವಿಭಾಗಗಳಲ್ಲಿ ಇರಿಸಲಾಗುತ್ತದೆ.

ಇತರ ಪ್ರಮುಖ ಆಕರ್ಷಣೆಗಳಲ್ಲಿ, ಬನ್ನೇರುಘಟ್ಟದ ​​ಬಟರ್‌ಫ್ಲೈ ಪಾರ್ಕ್ ದೇಶದಲ್ಲೇ ಮೊದಲನೆಯದು. ಇದನ್ನು 2006 ರಲ್ಲಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ಉದ್ಘಾಟಿಸಿದರು. ಈ ಬಟರ್‌ಫ್ಲೈ ಪಾರ್ಕ್ 7.5 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದು ಸಾಂಪ್ರದಾಯಿಕವಾಗಿ ಚಿಟ್ಟೆಗಳಿಗೆ ಆಕರ್ಷಕವಾಗಿರುವ ಸಸ್ಯಗಳೊಂದಿಗೆ ಉಷ್ಣವಲಯದ ವಾತಾವರಣವನ್ನು ಹೊಂದಿದೆ. ಇದು 20 ಕ್ಕೂ ಹೆಚ್ಚು ವಿವಿಧ ಚಿಟ್ಟೆಗಳ ಜಾತಿಗಳಿಗೆ ನೆಲೆಯಾಗಿದೆ.

bannerghatta

ಇಲ್ಲಿಯ ಮರಗಳ ಜೊತೆಗೆ ಉದ್ದಕ್ಕೂ ನಡೆಯಿರಿ

ನೀವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಇಲ್ಲಿಯ ತರತರಹದ ಸುಂದರವಾದ ವನ್ಯಜೀವಿಗಳನ್ನು ನೋಡಬಹುದು. ಆನೆಗಳು, ಗೌರ್ ಗಳು, ಚುಕ್ಕೆ ಜಿಂಕೆಗಳು, ಬಾರ್ಕಿಂಗ್ ಜಿಂಕೆಗಳು, ಸಾಂಬಾರ್, ನರಿ, ಕರಡಿ, ಕಾಡು ಹಂದಿ, ಲಂಗೂರ್ ಗಳು ಮತ್ತು ಕೋತಿಗಳನ್ನು ಗುರುತಿಸಬಹುದು. ಆನೆಯ ಸವಾರಿಗಳು ಮತ್ತು ಜಂಗಲ್ ಸಫಾರಿಗಳು ನಿಮ್ಮನ್ನು ಇಲ್ಲಿ ಮನೋರಂಜಿಸಬಹುದು.

butterlfypark
butterlfypark
Photo Credit:

ಸ್ವರ್ಣಮುಖಿ ನದಿಯು ಉದ್ಯಾನವನದ ಉದ್ದಕ್ಕೂ ಹರಿಯುತ್ತದೆ, ಇದು ಆಕರ್ಷಕ ನೋಟವನ್ನು ನೀಡುತ್ತದೆ. ಸ್ವರ್ಣಮುಖಿ ಬೆಟ್ಟಗಳಿಂದ ಉಗಮವಾಗುವ ಈ ಹೊಳೆಯು ತೇವಾಂಶಭರಿತ ಎಲೆಯುದುರುವ ಮರಗಳಿಂದ ಆವೃತವಾಗಿದೆ. ಧಾರ್ಮಿಕ ಒಲವುಳ್ಳವರಿಗೆ, ಒಂದು ಸುಂದರವಾದ - ಚಂಪಕ ಧಮಾ ಸ್ವಾಮಿ ದೇವಾಲಯವಿದೆ ಇದು ಭಗವಾನ್ ವಿಷ್ಣು ಮತ್ತು ಅವನ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಗೆ ಸಮರ್ಪಿತವಾಗಿದೆ.

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಬನ್ನೇರುಘಟ್ಟವು ಪಿಕ್ನಿಕ್ ಮತ್ತು ರೋಮಾಂಚಕ ಸಫಾರಿ ವಿಹಾರಕ್ಕೆ ಉತ್ತಮ ಸ್ಥಳವಾಗಿದೆ,ಬೆಂಗಳೂರಿಗರಲ್ಲದವರಿಗೂ ಭೇಟಿ ನೀಡಲು ಇದು ಯೋಗ್ಯವಾಗಿದೆ!.

Read more about: banneghatta national park zoo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X