Search
  • Follow NativePlanet
Share
» »ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಬನ್ನೇರುಘಟ್ಟ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಬನ್ನೇರುಘಟ್ಟ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬನ್ನೇರ್ ಘಟ್ಟ ಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದ್ದು, ಪ್ರಕೃತಿ ಪ್ರೇಮಿಗಳು ಭೇಟಿ ಕೊಡಲೇ ಬೇಕು ಎನ್ನುಂವಂತಹ ಸ್ಥಳವಾಗಿದೆ.

ಈ ರಾಷ್ಟ್ರೀಯ ಉದ್ಯಾನವನವು 104 ಚದರ ಕಿ.ಮೀ ಪ್ರದೇಶಗಳಲ್ಲಿ ಹರಡಿಕೊಂಡಿದ್ದು, ಹಲವಾರು ಜಾತಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳಿಗೆ ನೆಲೆಯಾಗಿದೆ. ಈ ಉದ್ಯಾನವನವು 1971ರಲ್ಲಿ ಸ್ಥಾಪಿತವಾಗಿದ್ದು, ನಂತರದಿಂದ ಇದು ಹುಲಿಗಳು, ಸಿಂಹಗಳು ಮತ್ತು ಮೊಸಳೆಗಳಿಗೆ ವಾಸಸ್ಥಾನವಾಗಿದೆ.

bannerghatta1

ಈ ಉದ್ಯಾನವನದಲ್ಲಿ ಗೌರ್, ಕಾಡು ಹಂದಿಗಳು, ಆನೆಗಳು, ಸೋಮಾರಿ ಕರಡಿಗಳು, ನರಿಗಳು, ಸಾಂಬಾರ್, ಚಿರತೆಗಳು, ಚೀರುವ ಜಿಂಕೆಗಳು, ಮೊಲ ಮತ್ತು ನರಿಗಳಂತಹ ಪ್ರಾಣಿಗಳನ್ನು ಸಹ ಕಾಣಬಹುದು. ಈ ಉದ್ಯಾನವನವು ಶ್ರೀಗಂಧ, ಜಲಾರಿ, ಜಿಜಿಫಸ್, ಹುಣಸೆಹಣ್ಣು, ಬೇವು ಮತ್ತು ಚುಜ್ಜುಲ್ಲುಗಳನ್ನು ಒಳಗೊಂಡಿರುವ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಸಹ ಒಳಗೊಂಡಿದೆ. ಹಾವು ಸಾಕಣೆ ಕೇಂದ್ರಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪ್ರಮುಖ ಆಕರ್ಷಣೆಗಳಾಗಿವೆ. ಈ ಉದ್ಯಾನವನವು ಬೆಂಗಳೂರು ಅರಣ್ಯ ವಿಭಾಗದ ಮೇಲ್ವಿಚಾರಣೆಯಲ್ಲಿರುವ ಆನೇಕಲ್ ಶ್ರೇಣಿಯ ಹತ್ತು ಮೀಸಲು ಅರಣ್ಯಗಳನ್ನು ಒಳಗೊಂಡಿದೆ.

safari-car-attacked-by-a-lion-01

ಪ್ರವಾಸಿಗರು ಇಲ್ಲಿಯ 7.5 ಎಕರೆಗಳಷ್ಟು ವಿಸ್ತಾರ ಪ್ರದೇಶಗಳಲ್ಲಿ ಹರಡಿರುವ ದೇಶದ ಪ್ರಥಮ ಬಟರ್ ಫ್ಲೈ (ಚಿಟ್ಟೆ) ಪಾರ್ಕ್ ಅನ್ನು ಸಹ ಕಾಣಬಹುದಾಗಿದೆ. ಈ ಉದ್ಯಾನವನವನ್ನು ಕರ್ನಾಟಕದ ಮೃಗಾಲಯ ಪ್ರಾಧಿಕಾರ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್ (ಎ ಟಿ ಆರ್ ಇ ಇ) 2006 ರಲ್ಲಿ ಸ್ಥಾಪಿಸಿತು. ಈ ಉದ್ಯಾನವನವು ವಸ್ತುಸಂಗ್ರಹಾಲಯ, ಚಿಟ್ಟೆ ಸಂರಕ್ಷಣಾಲಯ ಮತ್ತು ಶ್ರವಣ - ದೃಶ್ಯ ಕೊಠಡಿಯನ್ನು ಹೊಂದಿದೆ. 20 ಜಾತಿಯ ಚಿಟ್ಟೆಗಳ ವಾಸಸ್ಥಾನ, ಈ ಬಟರ್ಫ್ಲೈ ಉದ್ಯಾನವನವು ಉಷ್ಣವಲಯದ, ಆರ್ದ್ರ ಮತ್ತು ಕೃತಕ ವಾತಾವರಣವನ್ನು ಸೃಷ್ಟಿಸುವ ಪಾಲಿಕಾರ್ಬೊನೇಟ್ ಛಾವಣಿಯಿಂದ ಸುತ್ತುವರಿದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X