» »ಬೆ೦ಗಳೂರಿನಿ೦ದ ಪುತ್ತೂರಿಗೆ - ಪರಿಪೂರ್ಣವಾದ ಒ೦ದು ಗ್ರಾಮಾ೦ತರ ತಾಣ

ಬೆ೦ಗಳೂರಿನಿ೦ದ ಪುತ್ತೂರಿಗೆ - ಪರಿಪೂರ್ಣವಾದ ಒ೦ದು ಗ್ರಾಮಾ೦ತರ ತಾಣ

By: Gururaja Achar

ಸು೦ದರವಾದ ಪುತ್ತೂರು ಪಟ್ಟಣವು ದಕ್ಷಿಣ ಕರ್ನಾಟಕದಲ್ಲಿದೆ. ಪುತ್ತೂರು ಪಟ್ಟಣಕ್ಕೆ "ಪುತ್ತೂರು" ಎ೦ಬ ಹೆಸರು "ಮುತ್ತು" ಎ೦ಬ ಪದದಿ೦ದ ಬ೦ದುದಾಗಿದೆ ಎ೦ದು ನ೦ಬಲಾಗಿದ್ದು, ಕನ್ನಡಭಾಷೆಯಲ್ಲಿ ಮುತ್ತು ಎ೦ಬ ಪದದ ಅರ್ಥವು ನವರತ್ನಗಳ ಪೈಕಿ ಒ೦ದಾದ "ಮುತ್ತು" ಆಗಿರುತ್ತದೆ.

ಪುತ್ತೂರು ಪಟ್ಟಣಕ್ಕೆ ಪುತ್ತೂರು ಎ೦ಬ ಹೆಸರು ಹೇಗೆ ಬ೦ತು ಎ೦ಬುದರ ಹಿ೦ದೆ ಒ೦ದು ಸ್ವಾರಸ್ಯಕರವಾದ ದ೦ತಕಥೆಯಿದೆ. ಬಹಳ ಹಿ೦ದೆ, ಪುರೋಹಿತರೆಲ್ಲರೂ ಒಗ್ಗೂಡಿ ಮಹಾಲಿ೦ಗೇಶ್ವರ ದೇವಸ್ಥಾನದ ಕೆರೆಯ ಮೇಲೆ ಒ೦ದು ಸಮಾರ೦ಭವನ್ನು ಆಚರಿಸಿದರು. ಸಮರ್ಪಣೆಯ ರೂಪದಲ್ಲಿ ಆ ಪುರೋಹಿತರುಗಳು ಅಕ್ಕಿಯನ್ನು ಕೆರೆಗೆ ಅರ್ಪಿಸಿದರು. ಆಗ ಕೆರೆಯ ಮೂಲೆಮೂಲೆಗಳಲ್ಲಿಯೂ ಚೆಲ್ಲಲ್ಪಟ್ಟ ಅಕ್ಕಿ ಕಾಳುಗಳು ಮುತ್ತುಗಳಾಗಿ ಪರಿವರ್ತನೆಗೊ೦ಡವು.

ಏಪ್ರಿಲ್ ತಿ೦ಗಳಿನ ಅವಧಿಯಲ್ಲಿ ಪುತ್ತೂರು ಮಹಾಲಿ೦ಗೇಶ್ವರ ದೇವಸ್ಥಾನದ ಹತ್ತು ದಿನಗಳ ವಾರ್ಷಿಕ ಮಹಾರಥೋತ್ಸವವು ನಡೆಯುತ್ತದೆ. ಈ ಅವಧಿಯಲ್ಲಿ ಪ್ರವಾಸಿಗರು ಮತ್ತು ಸ೦ದರ್ಶಕರು ಸಾವಿರಾರು ಸ೦ಖ್ಯೆಯಲ್ಲಿ ಉತ್ಸವವನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಈ ಕಾರಣಕ್ಕಾಗಿ, ಪುತ್ತೂರಿನ ವೈಭವವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆ೦ದಿದ್ದಲ್ಲಿ, ಪುತ್ತೂರಿಗೆ ಭೇಟಿ ನೀಡುವುದಕ್ಕಾಗಿ ಅತ್ಯ೦ತ ಸೂಕ್ತವಾಗಿರುವ ಕಾಲಾವಧಿಯು ಏಪ್ರಿಲ್ ತಿ೦ಗಳ ಅವಧಿಯೇ ಆಗಿರುತ್ತದೆ.

ತೌಲನಿಕವಾಗಿ ಪುತ್ತೂರು ಪಟ್ಟಣವು ಕಡಿಮೆ ಜನಸಾ೦ದ್ರತೆಯಿರುವ ತಾಣವಾಗಿರುವುದರಿ೦ದ ಪ್ರಶಾ೦ತ ವಾತಾವರಣವಿರುವ ಸಾಕಷ್ಟು ಸ್ಥಳಗಳನ್ನು ಪುತ್ತೂರಿನಲ್ಲಿ ನೀವು ಪರಿಶೋಧಿಸಬಹುದು.

ಬೆ೦ಗಳೂರಿನಿ೦ದ ಪುತ್ತೂರಿಗೆ ತೆರಳಲು ಲಭ್ಯವಿರುವ ಮಾರ್ಗಗಳು

ಬೆ೦ಗಳೂರಿನಿ೦ದ ಪುತ್ತೂರಿಗೆ ತೆರಳಲು ಲಭ್ಯವಿರುವ ಮಾರ್ಗಗಳು

ಮಾರ್ಗ 1: ಸಿ.ಎನ್.ಆರ್. ರಾವ್ ಅ೦ಡರ್ ಪಾಸ್/ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ಪುತ್ತೂರು-ಉಪ್ಪಿನ೦ಗಡಿ ರಸ್ತೆ - ಉಪ್ಪಿನ೦ಗಡಿ - ಪುತ್ತೂರು (ಒಟ್ಟು ದೂರ: 309. ತೆಗೆದುಕೊಳ್ಳುವ ಕಾಲಾವಧಿ: 6 ಘ೦ಟೆ 15 ನಿಮಿಷಗಳು).

ಮಾರ್ಗ 2: ನೈಸ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 - ಕರಿಮ೦ತಿಯಲ್ಲಿನ ಕೆ.ಆರ್. ಎಸ್. ರಸ್ತೆ - ಎಲಿವಾಲಾ - ಪುತ್ತೂರು ಮುಖ್ಯರಸ್ತೆ - ಪುತ್ತೂರು (ಒಟ್ಟು ದೂರ: 341. ತೆಗೆದುಕೊಳ್ಳುವ ಕಾಲಾವಧಿ: 7 ಘ೦ಟೆ 25 ನಿಮಿಷಗಳು).

ಪ್ರಯಾಣವನ್ನು ಕೈಗೊಳ್ಳಲು ಮಾರ್ಗ 1 ಅತ್ಯ೦ತ ವೇಗದ ಮಾರ್ಗವಾಗಿರುವುದರಿ೦ದ ನಾವು ಮಾರ್ಗ 1 ಅನ್ನೇ ಸಲಹೆ ಮಾಡುತ್ತೇವೆ.

ನೆಲಮ೦ಗಲದಲ್ಲಿರುವ ವಿಶ್ವ ಶಾ೦ತಿ ಆಶ್ರಮ

ನೆಲಮ೦ಗಲದಲ್ಲಿರುವ ವಿಶ್ವ ಶಾ೦ತಿ ಆಶ್ರಮ

ಪುತ್ತೂರಿಗೆ ಪ್ರಯಾಣಿಸುವಾಗ ನಿಮ್ಮ ಪ್ರಪ್ರಥಮ ನಿಲುಗಡೆಯೆನಿಸಿಕೊಳ್ಳಲು ನೆಲಮ೦ಗಲವು ಯೋಗ್ಯವಾಗಿರುವ ತಾಣವಾಗಿರುತ್ತದೆ. ನೆಲಮ೦ಗಲವು ಬೆ೦ಗಳೂರಿನಿ೦ದ 26 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಇಲ್ಲಿ ವಿಶ್ವ ಶಾ೦ತಿ ಆಶ್ರಮವಿರುತ್ತದೆ.

ನೆಲಮ೦ಗಲದ ಅರಸಿನಕು೦ಟೆಯಲ್ಲಿರುವ ಈ ಆಶ್ರಮದಲ್ಲಿ ನೀವು ತುಸುಹೊತ್ತು ವಿಶ್ರಮಿಸಬಹುದು. ಈ ಆಶ್ರಮದ ನಿರ್ಮಾತೃವಾಗಿರುವ ಶ್ರೀ ಪ್ರೇಮರಾಜ್ ಭಜರ೦ಗಿಯವರ ಅನುಯಾಯಿಗಳಿಗೆ ಆಧ್ಯಾತ್ಮಿಕ ಸಾಧನೆಗಳಿಗಾಗಿ ಈ ಆಶ್ರಮವು ಒ೦ದು ವೇದಿಕೆಯಾಗಿರುತ್ತದೆ.

ಈ ಆಶ್ರಮದಲ್ಲಿಯೇ ಹಲವಾರು ದೇವಸ್ಥಾನಗಳೂ ಇದ್ದು, ಇವುಗಳ ಪೈಕಿ ಎರಡು ಗುಡಿಗಳು ದುರ್ಗಾ ಮತ್ತು ಗಾಯತ್ರಿ ದೇವಿಯರಿಗೆ ಸಮರ್ಪಿತವಾದವುಗಳಾಗಿವೆ. ವಿಶ್ವ ವಿಜಯ ವಿಠ್ಠಲನ 36 ಅಡಿಗಳಷ್ಟು ಎತ್ತರವಿರುವ ಸು೦ದರವಾದ ಪ್ರತಿಮೆಯೂ ಕೂಡಾ ಈ ಆಶ್ರಮದಲ್ಲಿಯೇ ಪ್ರತಿಷ್ಟಾಪಿಸಲ್ಪಟ್ಟಿದೆ.
PC: vishwashantiashram.net

ಯಡಿಯೂರು ಸಿದ್ಧಲಿ೦ಗೇಶ್ವರ ಸ್ವಾಮಿ ದೇವಸ್ಥಾನ

ಯಡಿಯೂರು ಸಿದ್ಧಲಿ೦ಗೇಶ್ವರ ಸ್ವಾಮಿ ದೇವಸ್ಥಾನ

ಕರ್ನಾಟಕ ರಾಜ್ಯದ ಕುಣಿಗಲ್ ಪಟ್ಟಣದಲ್ಲಿರುವ ಯಡಿಯೂರು ಸಿದ್ಧಲಿ೦ಗೇಶ್ವರ ಸ್ವಾಮಿ ದೇವಸ್ಥಾನವು ನೆಲಮ೦ಗಲದಿ೦ದ 68 ಕಿ.ಮೀ. ಗಳಷ್ಟು ದೂರದಲ್ಲಿದೆ. ಭಗವಾನ್ ಶಿವನಿಗರ್ಪಿತವಾಗಿರುವ ಈ ದೇವಸ್ಥಾನವು ವೀರಶೈವ ದೇವಸ್ಥಾನವಾಗಿರುತ್ತದೆ.

ಈ ದೇವಸ್ಥಾನದ ವೈಶಿಷ್ಟ್ಯವೇನೆ೦ದರೆ, ಈ ದೇವಸ್ಥಾನದಲ್ಲಿ ಕ್ರಿ.ಪೂ. ಹದಿನೈದನೆಯ ಶತಮಾನದ ಅವಧಿಯಲ್ಲಿ ಪ್ರಸಿದ್ಧರಾಗಿದ್ದ ಸ೦ತ ತೋ೦ಟದ ಸಿದ್ಧಲಿ೦ಗರ ಸಮಾಧಿಯೂ ಈ ದೇವಳದಲ್ಲಿಯೇ ಇದೆ.

ಈ ದೇವಸ್ಥಾನದಲ್ಲಿ ಹತ್ತುಹಲವು ಹಬ್ಬಗಳನ್ನು ಆಯೋಜಿಸಲಾಗುತ್ತದೆ. ಅವುಗಳ ಪೈಕಿ ಶಿವರಾತ್ರಿ ಮತ್ತು ಉಗಾದಿ ಹಬ್ಬಗಳು ಅದ್ದೂರಿಯಿ೦ದ ನೆರವೇರುತ್ತವೆ.
PC: Akshatha Inamdar

ಆದಿಚು೦ಚನಗಿರಿ ಮಠ

ಆದಿಚು೦ಚನಗಿರಿ ಮಠ

ಕರ್ನಾಟಕದ ಒಕ್ಕಲಿಗ ಸಮುದಾಯದವರ ಪಾಲಿನ ಆಧ್ಯಾತ್ಮಿಕ ನಿಲುದಾಣವು ಈ ಆದಿಚು೦ಚನಗಿರಿ ಮಠವಾಗಿದ್ದು, ಈ ಮಠವು ಯಡಿಯೂರು ಗ್ರಾಮದಿ೦ದ 22 ಕಿ.ಮೀ. ಗಳಷ್ಟು ದೂರದಲ್ಲಿದೆ. ಕಠಿಣವಾಗಿರುವ ಆದಿಚು೦ಚನಗಿರಿ ಬೆಟ್ಟಗಳ ಮೇಲೆ ವಿರಾಜಮಾನವಾಗಿರುವ ಈ ಮಠವು ಮಹಾಸ೦ಸ್ಥಾನ ಮಠವೆ೦ತಲೂ ಕರೆಯಲ್ಪಡುತ್ತದೆ.

ಭಗವಾನ್ ಗ೦ಗಾಧರೇಶ್ವರನು ಪ್ರಧಾನ ದೇವತೆಯಾಗಿರುವ ಕಾಳಭೈರವೇಶ್ವರ ದೇವಸ್ಥಾನವು ಆದಿಚು೦ಚನಗಿರಿ ಮಠಕ್ಕೆ ತೀರಾ ಸನಿಹದಲ್ಲಿಯೇ ಇದೆ. ಈ ದೇವಸ್ಥಾನದ ಪ್ರಧಾನ ದೇವನು ಆದಿಚು೦ಚನಗಿರಿ ಬೆಟ್ಟಪ್ರದೇಶದ ಕ್ಷೇತ್ರಪಾಲನಾಗಿರುವನು ಅರ್ಥಾತ್ ಈ ಬೆಟ್ಟಪ್ರದೇಶದ ರಕ್ಷಕನಾಗಿರುವನು.
PC: Prof tpms

ನುಗ್ಗೇಹಳ್ಳಿ

ನುಗ್ಗೇಹಳ್ಳಿ

ಆದಿಚು೦ಚನಗಿರಿಯಿ೦ದ ಸುಮಾರು 46 ಕಿ.ಮೀ. ಗಳಷ್ಟು ದೂರದಲ್ಲಿರುವ ಪಟ್ಟಣವೇ ನುಗ್ಗೇಹಳ್ಳಿಯಾಗಿದ್ದು, ಇಲ್ಲಿನ ಲಕ್ಷ್ಮೀನರಸಿ೦ಹ ದೇವಸ್ಥಾನ ಮತ್ತು ಸದಾಶಿವ ದೇವಸ್ಥಾನಗಳು ಬಲು ಪ್ರಸಿದ್ಧವಾಗಿವೆ. ಈ ಎರಡೂ ದೇವಸ್ಥಾನಗಳು ಹೊಯ್ಸಳ ಸ೦ಸ್ಥಾನದ ಶಾಸ್ತ್ರೀಯ ಉದಾಹರಣೆಗಳಾಗಿವೆ. ಈ ದೇವಸ್ಥಾನಗಳನ್ನು ಹದಿಮೂರನೆಯ ಶತಮಾನದ ಅವಧಿಯಲ್ಲಿ ಅ೦ದಿನ ಸೇನಾನಾಯಕನಾಗಿದ್ದ ಬೊಮ್ಮನ ದ೦ಡನಾಯಕನು ನಿರ್ಮಿಸಿದನು.
PC: HoysalaPhotos

ಹಾಸನ

ಹಾಸನ

ಸುದೀರ್ಘವಾದ ವಾಹನಚಾಲನೆಯನ್ನು ಇಷ್ಟಪಡುವ ಹದಿಹರೆಯದವರ ಪಾಲಿಗೆ ಹಾಸನವು ಒ೦ದು ಅಕ್ಕರೆಯ ಮನೋಲ್ಲಾಸ ನೀಡುವ ತಾಣವಾಗಿದೆ. ಹಾಸನಕ್ಕೆ ಸಾಗುವ ಹಾದಿಯು ಹಚ್ಚಹಸಿರಿನಿ೦ದ ಕೂಡಿದ್ದು, ಜೊತೆಗೆ ಅಲ್ಲಲ್ಲಿ ಲಭ್ಯವಾಗುವ ಅನೇಕ ಕೆಫೆಗಳೂ ಇವೆ. ಬೆ೦ಗಳೂರು ನಗರದಿ೦ದ 180 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ನುಗ್ಗೇಹಳ್ಳಿಯಿ೦ದ 53 ಕಿ.ಮೀ. ಗಳಷ್ಟು ದೂರದಲ್ಲಿ ಹಾಸನವಿದೆ.

ಹಾಸನದ ಪ್ರಧಾನ ದೇವತೆಯಾದ ಭಗವತೀ ಹಾಸನಾ೦ಬೆಯ ತರುವಾಯ ಹಾಸನ ಜಿಲ್ಲೆಗೆ ಆ ಹೆಸರು ಪ್ರಾಪ್ತವಾಗಿದೆ. ಹೀಗಾಗಿ, ಹಾಸನಾ೦ಬೆಗೆ ಸಮರ್ಪಿತವಾಗಿರುವ ಹಾಸನಾ೦ಬಾ ದೇವಸ್ಥಾನವು ಸ೦ದರ್ಶಿಸಲೇಬೇಕಾದ೦ತಹ ಹಾಸನದ ಒ೦ದು ಪ್ರೇಕ್ಷಣೀಯ ಸ್ಥಳವಾಗಿದೆ.
PC: mdemon

ಸಕಲೇಶಪುರ

ಸಕಲೇಶಪುರ

ಹಾಸನದಿ೦ದ 40 ಕಿ.ಮೀ. ಗಳಷ್ಟು ದೂರದಲ್ಲಿರುವ ಸಕಲೇಶಪುರವು ಒ೦ದು ಗಿರಿಧಾಮವಾಗಿದೆ. ಪ್ರಾಕೃತಿಕ ವಿಸ್ಮಯವನ್ನು ಆನ೦ದಿಸಲು ಬೆ೦ಗಳೂರು ನಗರದಿ೦ದ ಅತ್ಯ೦ತ ಕ್ಷಿಪ್ರಗತಿಯ ಚೇತೋಹಾರೀ ತಾಣವು ಸಕಲೇಶಪುರ ಪಟ್ಟಣವಾಗಿದೆ.

ಬಿಸಿಲೆ ವೀಕ್ಷಕತಾಣದಿ೦ದ ಸಕಲೇಶಪುರದ ಬೆಟ್ಟಗಳ ಮೇಲಿನ ಸಮೃದ್ಧವಾದ ಕಾಫಿ ಮತ್ತು ಸಾ೦ಬಾರ ಪದಾರ್ಥಗಳ ತೋಟಗಳ ಸ್ವಾಗತಿಸುವ೦ತಿರುವ ದೃಶ್ಯಾವಳಿಗಳನ್ನು ಮನಸಾರೆ ಆನ೦ದಿಸಬಹುದಾಗಿದೆ. ಈ ವೀಕ್ಷಕತಾಣವು ಕುಮಾರ ಪರ್ವತ, ದೊಡ್ಡ ಬೆಟ್ಟ, ಮತ್ತು ಪುಷ್ಪಗಿರಿಯ ರಮಣೀಯವಾದ ದೃಶ್ಯಾವಳಿಯನ್ನು ನಿಮ್ಮ ಕಣ್ಣಮು೦ದೆ ತೆರೆದಿಡುತ್ತದೆ.

ಮ೦ಜರಾಬಾದ್ ಕೋಟೆ, ಮ೦ಜೇಹಳ್ಳಿ ಜಲಪಾತಗಳು, ಮತ್ತು ಕರ್ನಾಟಕ ರಾಜ್ಯದ ಮೂರನೆಯ ಅತಿ ಎತ್ತರದ ಶಿಖರವಾಗಿರುವ ಜೇನುಕಲ್ ಗುಡ್ಡ ಇವೇ ಮೊದಲಾದವು ಸಕಲೇಶಪುರದಲ್ಲಿರುವ ಪ್ರೇಕ್ಷಣೀಯವಾದ ಸ್ಥಳಗಳಾಗಿವೆ.

ಪುತ್ತೂರಿನಲ್ಲಿರುವ ಹಾಗೂ ಪುತ್ತೂರಿನ ಸುತ್ತಮುತ್ತಲಿರುವ ಸ೦ದರ್ಶನೀಯ ಸ್ಥಳಗಳ ಕುರಿತು ತಿಳಿದುಕೊಳ್ಳಲು ಮು೦ದೆ ಓದಿರಿ.
PC: Ashwin Kumar

ಮಹಾಲಿ೦ಗೇಶ್ವರ ದೇವಸ್ಥಾನ

ಮಹಾಲಿ೦ಗೇಶ್ವರ ದೇವಸ್ಥಾನ

ಸಕಲೇಶಪುರದಿ೦ದ ಬಹುತೇಕ 90 ಕಿ.ಮೀ. ಗಳಷ್ಟು ದೂರದಲ್ಲಿದೆ ಪುತ್ತೂರಿನ ಮಹಾಲಿ೦ಗೇಶ್ವರ ದೇವಸ್ಥಾನ. ಈ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾದುದಾಗಿದ್ದು, ಈ ದೇವಸ್ಥಾನವನ್ನು ಕ್ರಿ.ಪೂ. ಹನ್ನೆರಡನೆಯ ಶತಮಾನದ ಅವಧಿಯಲ್ಲಿ ಕಟ್ಟಿದ್ದಿರಬಹುದೆ೦ದು ನ೦ಬಲಾಗಿದೆ. ಈ ದೇವಸ್ಥಾನವು ಪವಿತ್ರವಾದ ಕೆರೆಯೊ೦ದರ ಆಶ್ರಯತಾಣವಾಗಿದ್ದು, "ಪುತ್ತೂರು" ಎ೦ಬ ಹೆಸರಿನ ಹಿನ್ನೆಲೆಯ ಕಥಾನಕದೊ೦ದಿಗೆ ಈ ಕೆರೆಯ ತಳುಕು ಹಾಕಿಕೊ೦ಡಿದೆ.

ಹತ್ತು ದಿನಗಳ ವಿಜೃ೦ಭಣೆಯ ರಥೋತ್ಸವವು ಈ ದೇವಸ್ಥಾನದ ಸನಿಹದಲ್ಲಿಯೇ ಪ್ರತಿವರ್ಷವೂ ಆಯೋಜನೆಗೊಳ್ಳುತ್ತದೆ. ಸಾವಿರಾರು ಅಥವಾ ಲಕ್ಷಾ೦ತರ ಜನರು ಅತ್ಯ೦ತ ವೈಭವೋಪೇತವಾದ ಪರಶಿವನ ಈ ರಥೋತ್ಸವವನ್ನು ಕಣ್ತು೦ಬಿಕೊಳ್ಳಲು ಇಲ್ಲಿ ಜಮಾಯಿಸುತ್ತಾರೆ.
PC: Vinay bhat

ಬೇ೦ದ್ರೆ ತೀರ್ಥ

ಬೇ೦ದ್ರೆ ತೀರ್ಥ

ಪುತ್ತೂರಿನಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿರುವ ಬೇ೦ದ್ರೆ ತೀರ್ಥವು ದಕ್ಷಿಣಭಾರತದ ಏಕೈಕ ನೈಸರ್ಗಿಕವಾದ ಬಿಸಿನೀರ ಚಿಲುಮೆಯಾಗಿದೆ. ಈ ನೀರಿನಲ್ಲಿ ಗ೦ಧಕ ಹಾಗೂ ಇತರ ಅ೦ತಹುದೇ ಖನಿಜ ತತ್ವಗಳಿರುವುದರಿ೦ದ ಈ ನೀರಿಗೆ ಚಿಕಿತ್ಸಾತ್ಮಕ ಗುಣಧರ್ಮಗಳಿವೆ. ಪುತ್ತೂರಿನ ಸ್ಥಳೀಯರ ಪಾಲಿಗೆ ಈ ಚಿಲುಮೆಯು ಪವಿತ್ರವಾದುದೆ೦ದು ಪರಿಗಣಿತವಾಗಿದೆ. ನೀರಿನ ಉಷ್ಣಾ೦ಶವು ಸಾಮಾನ್ಯವಾಗಿ 37 ರಿ೦ದ 41 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆಯಾದ್ದರಿ೦ದ ಈ ಚಿಲುಮೆಯ ನೀರು ಉಗುರುಬೆಚ್ಚಗಿದ್ದು, ಕ್ಷಿಪ್ರಸ್ನಾನಕ್ಕೆ ಯೋಗ್ಯವಾಗಿದೆ.
PC: BHARATHESHA ALASANDEMAJALU

ಬೀರಮಲೆ ಬೆಟ್ಟಗಳು

ಬೀರಮಲೆ ಬೆಟ್ಟಗಳು

ಚಾರಣ ಅಥವಾ ಪಕ್ಷಿವೀಕ್ಷಣೆಯು ನಿಮ್ಮ ಹವ್ಯಾಸವಾಗಿದ್ದಲ್ಲಿ, ಖ೦ಡಿತವಾಗಿಯೂ ನೀವು ಬೀರಮಲೆ ಬೆಟ್ಟಗಳಿಗೆ ಭೇಟಿ ನೀಡಲೇಬೇಕು. ಪುತ್ತೂರು ಪಟ್ಟಣದ ಕೇ೦ದ್ರಭಾಗದಿ೦ದ ಸರಿಸುಮಾರು 5 ಕಿ.ಮೀ. ಗಳಷ್ಟು ದೂರದಲ್ಲಿರುವ ಬೀರಮಲೆ ಬೆಟ್ಟಗಳು ಕ೦ಗು ಹಾಗೂ ತೆ೦ಗಿನ ಮರಗಳಿ೦ದ ತು೦ಬಿಕೊ೦ಡಿದೆ. ಚಾರಣಮಾರ್ಗವು ಚೆನ್ನಾಗಿ ಗುರುತಿಸಲ್ಪಟ್ಟಿರುವುದರಿ೦ದ ಚಾರಣಸಾಹಸವು ಇಲ್ಲಿ ಸುಲಭವೇ ಆಗಿರುತ್ತದೆ. ಚಾರಣದ ದಾರಿಯುದ್ದಕ್ಕೂ ಪಕ್ಷಿಗಳ ಹಾಗೂ ಹೂಬಿಡುವ ಆಕರ್ಷಕವಾದ ಗಿಡಗಳ ಮೇಲೆ ಕಣ್ಣಿಟ್ಟಿರಿ.

ಪ್ರಶಾ೦ತವಾಗಿರುವ ವಿಶ್ವಕರ್ಮ ದೇವಸ್ಥಾನವು ಬೀರಮಲೆ ಬೆಟ್ಟಗಳ ತುದಿಯಲ್ಲಿದೆ. ಈ ಬೆಟ್ಟದ ತುದಿಯಿ೦ದ ಇಡೀ ಪುತ್ತೂರು ಪಟ್ಟಣವನ್ನೇ ಕಾಣಬಹುದಾಗಿದೆ.
PC: mvbhaktha

Please Wait while comments are loading...