Search
  • Follow NativePlanet
Share
» »ಗಾಡಿ ಹತ್ತಿ ಸುತ್ತೋಣ ಬಾರೋ ಮುತ್ತತ್ತಿಯನ್ನ

ಗಾಡಿ ಹತ್ತಿ ಸುತ್ತೋಣ ಬಾರೋ ಮುತ್ತತ್ತಿಯನ್ನ

By Vijay

ಬೆಂಗಳೂರು ನಗರವು ವಾರಾಂತ್ಯ ರಜೆಗಳಲ್ಲಿ ಪ್ರವಾಸ ಹೋಗ ಬಯಸುವ ಯುವ ಪ್ರವಾಸಿಗರಿಗೆ ಯಾವತ್ತೂ ಮೋಸ ಮಾಡಿಲ್ಲ ಎಂದೆ ಹೇಳಬಹುದು. ಯಾರೆ ಇರಲಿ, ಯಾರೆ ಬರಲಿ ಯಾವಾಗಲೂ ಎಲ್ಲರಿಗೂ ಸಂತಸ ಕರುಣಿಸುವಂತಹ, ತನ್ನಿಂದ ಮಿತ ಅವಧಿಯಲ್ಲೆ ತಲುಪಬಹುದಾದಂತಹ ಅನೇಕ ಸುಂದರ ಆಕರ್ಷಕ ತಾಣಗಳನ್ನು ಬೆಂಗಳೂರು ಪ್ರವಾಸಿಗರಿಗೆ ಪರಿಚಯಿಸುತ್ತದೆ.

ಎಲ್ಲ ಉಚಿತ ಥಾಮಸ್ ಕುಕ್ ಟ್ರಾವೆಲ್ ಕೂಪನ್ನುಗಳನ್ನು ಪಡೆಯಿರಿ

ಇನ್ನೂ ಬೆಂಗಳೂರು ನಗರವು ವಾರದ ಮೊದಲ ಐದು ದಿನಗಳನ್ನು ಸದುಪಯೋಗ ಪಡಿಸಿಕೊಂಡು ಜನರನ್ನು ಬುಗುರಿಯಂತೆ ಆಡಿಸಿದರೂ ಸಹ ವಾರಾಂತ್ಯಗಳಲ್ಲಿ ಸುತ್ತಿರುವ ಬುಗುರಿಯಿಂದ ಬಂದೊದಗಿದ ತಲೆ ಸುತ್ತನ್ನು ನಿವಾರಿಸಲೆಂದು ಮದ್ದನ್ನೂ ಸಹ ತನ್ನ ಬಳಿಯಲ್ಲಿರುವ ಕೆಲವು ನೈಸರ್ಗಿಕ, ಪ್ರಾಕೃತಿಕ ಸೊಬಗಿರುವ ತಾಣಗಳಿಗೆ ಭೇಟಿ ನೀಡಲು ಪ್ರಚೋದಿಸುವ ಮೂಲಕ ನೀಡುತ್ತದೆ.

ವಿಶೇಷ ಲೇಖನ : ಸಂಗಮ ದಾಟಿ ಭೇಟಿ ನೀಡು ಮೇಕೆದಾಟು

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಬೆಂಗಳೂರಿನಿಂದ ಬಿಡದಿ, ಚೆನ್ನಪಟ್ಟಣಗಳ ಮೂಲಕ ಮುತ್ತತ್ತಿ ತಲುಪಿ ನಂತರ ಅಲ್ಲಿಂದ ಕನಕಪುರ ರಸ್ತೆಯ ಮಾರ್ಗವಾಗಿ ಬೆಂಗಳೂರಿಗೆ ಮರಳುವುದರ ಕುರಿತು ಕೊಂಚ ಮಾಹಿತಿ, ಮಾರ್ಗದರ್ಶನ ಪಡೆಯಿರಿ. ನಿಮ್ಮ ಬಳಿ ಸ್ವಂತ ದ್ವಿಚಕ್ರ ವಾಹನಗಳಿರುವ ಸಂದರ್ಭದಲ್ಲಿ ಈ ಪ್ರವಾಸ ಖಂಡಿತವಾಗಿಯೂ ಅದ್ಭುತ ಹಾಗೂ ರೋಮಾಂಚಕವಾಗಿರುತ್ತದೆ.

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ ಸುಮಾರು ನೂರು ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ. ಇದೊಂದು ಕಾವೇರಿ ನದಿ ಹರಿದಿರುವ, ಹಚ್ಚ ಹಸಿರಾದ ಗಿಡ ಮರಗಳಿಂದ ಕೂಡಿರುವ ಸುಂದರ ತಾಣವಾಗಿದ್ದು ಟ್ರೆಕ್, ಅಥವಾ ವಿಹಾರ ಇಲ್ಲವೆ ಪಿಕ್ನಿಕ್ ಚಟುವಟಿಕೆಗೆ ಆದರ್ಶಮಯ ತಾಣವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Lijo Jose

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ನೀವು ಬೈಕುಗಳಲ್ಲಿ ತೆರಳುವವರಿದ್ದರೆ ಮೊದಲಿಗೆ ಆದಷ್ಟು ಬೆಳಿಗ್ಗೆ ಬೇಗನೆಯೆ ಬೆಂಗಳೂರನ್ನು ತೊರೆಯುವುದು ಲೇಸು. ಏಕೆಂದರೆ ಈ ಸಮಯದಲ್ಲಿ ವಾತಾವರಣವು ಹಿತಕರವಾಗಿರುವುದಲ್ಲದೆ ಟ್ರಾಫಿಕ್ ಸಮಸ್ಯೆಯೂ ತಲೆದೋರುವುದಿಲ್ಲ. ಒಂದು ನಿರ್ದಿಷ್ಟ ವೇಗದಲ್ಲಿ ವಾಹನಗಳನ್ನು ಸುಲಲಿತವಾಗಿ ಜಾಲಿಯಾಗಿ ಚಲಾಯಿಸಬಹುದು. ಬೆಂಗಳೂರಿನಿಂದ ಮೈಸೂರು ರಸ್ತೆಯ ಮೂಲಕ ಬಿಡದಿಯೆಡೆಗೆ ನಿಮ್ಮ ಪ್ರಯಾಣ ಸಾಗಲಿ.

ಚಿತ್ರಕೃಪೆ: Vikas Rana

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಂತೆ ಅನಿಸುತ್ತದಾದರೂ ಇದು ರಾಜ್ಯ ಹೆದ್ದಾರಿ ಸಂಖ್ಯೆ 17. ನಾಲ್ಕು ಪಥಗಳ ಈ ರಸ್ತೆಯು 159 ಕಿ.ಮೀ ಗಳಷ್ಟು ಉದ್ದವಿದ್ದು ಬೆಂಗಳೂರು ಹಾಗೂ ಮೈಸೂರು ನಗರಗಳನ್ನು ಬೆಸೆಯುತ್ತದೆ. ಇನ್ನು ಬೆಂಗಳೂರಿನಿಂದ ಬಿಡದಿಯು ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Vikas Rana

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಒಂದೊಮ್ಮೆ ಬಿಡದಿಗೆ ತಲುಪಿದರೆ ಇಲ್ಲಿ ಬೆಳಗಿನ ಉಪಹಾರಕ್ಕೆಂದು ನಿಲ್ಲಬಹುದು. ಅದರಲ್ಲೂ ವಿಶೇಷವಾಗಿ ಬಿಡದಿಯು ತಟ್ಟೆ ಇಡ್ಲಿಗಳಿಗೆ ಹೆಚ್ಚು ಜನಪ್ರೀಯತೆ ಪಡೆದಿದ್ದುದರಿಂದ ಇಲ್ಲಿನ ತಟ್ಟೆ ಇಡ್ಲಿ ಹಾಗೂ ಬಿಸಿ ಬಿಸಿ ವಡೆಗಳನ್ನು ಸೇವಿಸಲೇಬೇಕು. ಇದೊಂದು ರೀತಿಯಲ್ಲಿ ಖುಶಿಯನ್ನು ನೀಡಿ ಮುಂದಿನ ಪ್ರಯಾಣಕ್ಕೆ ಉತ್ಸಾಹ ಕೊಡುತ್ತದೆ. ಇನ್ನೊಂದು ವಿಷ್ಯವೆಂದರೆ ಬೆಂಗಳೂರಿನಿಂದ ವಾರಾಂತ್ಯಗಳಲ್ಲಿ ಜನರು ಸದಾ ಬರುವ ಮನರಂಜನಾ ಪಾರ್ಕ್ ಆದ ಇನ್ನೊವೆಟಿವ್ ಫಿಲ್ಮ್ ಸಿಟಿಯು ಬಿಡದಿಯಲ್ಲೆ ನೆಲೆಸಿದೆ. ಫಿಲ್ಮ್ ಸಿಟಿಯ ಪ್ರವೇಶ ದ್ವಾರ.

ಚಿತ್ರಕೃಪೆ: Soham Banerjee

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಬಿಡದಿಯಲ್ಲಿನ ಬೆಳಗಿನ ಉಪಹಾರದ ಸೇವನೆಯ ನಂತರ ಅದೆ ಅರಸ್ತೆಯಲ್ಲಿ ಪ್ರಯಾಣ ಮುಂದುವರೆಸುತ್ತ ನೇರವಾಗಿ ರಾಮನಗರದತ್ತ ಪ್ರಯಾಣ ಬೆಳೆಸಿ. ರಾಮನಗರವು ಬಿಡದಿಯಿಂದ ಕೇವಲ 20 ಕಿ.ಮೀ ಗಳಷ್ಟು ಅಂತರದಲ್ಲಿದೆ. ರಾಮನಗರವು ಪ್ರಮುಖವಾಗಿ ತನ್ನಲ್ಲಿರುವ ಬಂಡೆ ಬೆಟ್ಟಗಳಿಗಾಗಿ ಬಹು ಪ್ರಖ್ಯಾತವಾಗಿದೆ.

ಚಿತ್ರಕೃಪೆ: Navaneeth KN

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಈ ಬಂಡೆ ಬೆಟ್ಟಗಳು ಸಾಹಸ ಚಟುವಟಿಕೆಗಳ ಆಗರವಾಗಿದ್ದು ಇಲ್ಲಿ ಬಂಡೆ ಹತ್ತುವಿಕೆ ಹಾಗೂ ಇಳಿಯುವಿಕೆಯಂತಹ ಸಾಹಸಮಯ ಚಟುವಟಿಕೆಗಳು ಸಾಮಾನ್ಯವಾಗಿ ವಾರಾಂತ್ಯದ ರಜೆ ದಿನಗಳಲ್ಲಿ ನಡೆಯುತ್ತಲೆ ಇರುತ್ತದೆ. ಅಷ್ಟೆ ಏಕೆ ಹಿಂದಿಯ ಅತಿ ಯಶಸ್ವಿ ಚಿತ್ರವೆನಿಸಿರುವ "ಶೋಲೆ" ಯ ರಾಮಗಡ್ ಸ್ಥಳವು ಇದೆ ರಾಮನಗರದ ಬೆಟ್ಟಗಳ ಸ್ಥಳವಾಗಿದೆ.

ಚಿತ್ರಕೃಪೆ: L. Shyamal

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ರಾಮನಗರದ ಬಂಡೆಗಳಲ್ಲಿ ಕಂಡು ಬರುವ ಮತ್ತೊಂದು ವಿಶೇಷವೆಂದರೆ ಉದ್ದನೆಯ ಕುತ್ತಿಗೆಯುಳ್ಳ ರಣಹದ್ದುಗಳು. ಅಪಾಯದಂಚಿನಲ್ಲಿರುವ ಈ ಹಕ್ಕಿಗಳು ರಾಮನಗರದ ಗಂಭೀರವಾಗಿ ಕಂಗೊಳಿಸುವ ಬೆಟ್ಟ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Vaibhavcho

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ರಾಮನಗರದಿಂದ ನೇರವಾಗಿ ಅದೆ ರಸ್ತೆಯಲ್ಲಿ ಮುಂದೆವರೆದು ಸುಮಾರು 15 ಕಿ.ಮೀ ಚಲಿಸಿದರೆ ಸಿಗುವ ಸ್ಥಳವೆ ಚೆನ್ನಪಟ್ಟಣ. ಚೆನ್ನಪಟ್ಟಣವು ಪ್ರಮುಖವಾಗಿ ತನ್ನ ಕಟ್ಟಿಗೆ ಬೊಂಬೆಗಳ ತಯಾರಿಕೆಗಾಗಿ ವಿಶ್ವದಲ್ಲೆ ಪ್ರಸಿದ್ಧಿಯನ್ನು ಪಡೆದಿದೆ. ಚೆನ್ನಪಟ್ಟಣದ ಬೊಂಬೆಗಳೆಂದರೆ ಎಲ್ಲರಿಗೂ ಅಚ್ಚು ಮೆಚ್ಚು.

ಚಿತ್ರಕೃಪೆ: Pratheepps

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಈ ಪ್ರವಾಸದಲ್ಲಿ ಚೆನ್ನಪಟ್ಟಣವೆ ಮಾರ್ಗ ಬದಲಾವಣೆಯ ಸ್ಥಳ. ಇಲ್ಲಿಂದ ರಾಜ್ಯ ಹೆದ್ದಾರಿಯನ್ನು ಬಿಟ್ಟು ಎಡ ತಿರುವು ಪಡೆದು ಕಬ್ಬಾಲುವಿನ ಮೂಲಕ ಸತನೂರಿನೆಡೆ ಪಯಣಿಸಬೇಕು. ಇದು ಚೆನ್ನಪಟ್ಟಣದಿಂದ ಸುಮಾರು 28 ಕಿ.ಮೀ ಗಳಷ್ಟು ದೂರದಲ್ಲಿದೆ. ರಸ್ತೆ ಮಾರ್ಗ ಅಗಲವಾಗಿಲ್ಲದಿದ್ದರೂ ಸಹ ಎರಡು ಬದಿಗಳಲ್ಲಿ ತೆಂಗಿನ ಮರಗಳಿಂದ ಕೂಡಿದ ಹಸಿರಿನ ವಾತಾವರಣ ಪ್ರಯಾಣ ಪ್ರಯಾಸವನ್ನು ಮರೆಯುವಂತೆ ಮಾಡುತ್ತದೆ.

ಚಿತ್ರಕೃಪೆ: Soham Banerjee

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಇಲ್ಲಿಂದ ಪ್ರವಾಸದ ಮುಖ್ಯಾಂಶವಾದ ಸತನೂರು-ಮುತ್ತತ್ತಿ ಕಾಡು ಸವಾರಿ ಪ್ರಾರಂಭಗೊಳ್ಳುತ್ತದೆ. ಒಟ್ಟು ಅಂತರ 24 ಕಿ.ಮೀಗಳು. ಇತರೆ ವಾಹನಗಳ ಗದ್ದಲ, ದರುಶನ ದುರ್ಲಭ. ರಸ್ತೆ ಓಕೆ ಎನ್ನುವಂತಿದ್ದರೂ ಜಾಸ್ತಿ ಅಗಲವಿಲ್ಲ. ಸುತ್ತಲೂ ಹಸಿರಿನ ಮೈಸಿರಿಯುಳ್ಳ ವನರಾಶಿ. ಶಾಂತವಾಗಿ ಸಾಗಬೇಕಾದ ಸಂದರ್ಭದಲ್ಲಿ ನಿಮಗೇನಾದರೂ ಪ್ರಾಣಿಗಳು ಕಂಡುಬಂದರೆ ಅಚ್ಚರಿ ಪಡಬೇಕಾಗಿಲ್ಲ.

ಚಿತ್ರಕೃಪೆ: Karthik Prabhu

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಇನ್ನೊಂದು ವಿಷಯವೆಂದರೆ ಈ ಮಾರ್ಗದಲ್ಲಿ ಸಾಗುವಾಗ ಅಲ್ಲಲ್ಲಿ ನಿಮ್ಮ ದ್ವಿಚಕ್ರ ವಾಹನಗಳ ಎಂಜಿನ್ ಆಫ್ ಮಾಡಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಆಗಲೂ ಸಹ ನಿಮ್ಮ ವಾಹನದ ವೇಗ 70 ಕಿ.ಮೀ ಪ್ರತಿ ಘಂಟೆಗಿಂತ ಕಡಿಮೆ ಇಳಿಯುವುದೇ ಇಲ್ಲ! ಆದರೆ ಇಂತಹ ಸಂದರ್ಭಗಳಲ್ಲಿ ನೀವು ಜಾಗರೂಕರಾಬೇಕಾಗಿರುವುದಲ್ಲದೆ ರಸ್ತೆಯ ಮೇಲೆ ಅಕಸ್ಮಾತಾಗಿ ಕಂಡು ಬರುವ ಪ್ರಾಣಿ ಪಕ್ಷಿಗಳ ಸುರಕ್ಷತೆಯ ಕುರಿತೂ ಸಹ ಕಾಳಜಿಯಿರಬೇಕು.

ಚಿತ್ರಕೃಪೆ: Praveen

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಜಾಗರೂಕತೆಯಿಂದ ಸುಮಾರಿ ಅರ್ಧ ಗಂಟೆಗಳಷ್ಟು ಹಾಯಾಗಿ ಚಲಿಸಿದ ಬಳಿಕ ಪ್ರಶಾಂತವಾಗಿ ಹರಿಯುವ ಕಾವೇರಿ ತಟದಿ ನೆಲೆಸಿರುವ ಮುತ್ತತ್ತಿಯು ನಿಮ್ಮನ್ನು ಸ್ವಾಗತಿಸುತ್ತದೆ. ಕಾವೇರಿ ನದಿ ತಟದಲ್ಲಿ ಪ್ರಶಾಂತವಾಗಿ ನೆಲೆಸಿರುವ ಮುತ್ತತ್ತಿ ನೋಡುತ್ತಿದ್ದ ಹಾಗೆಯೆ ಮನವನ್ನು ಕದ್ದು ಬಿಡುತ್ತದೆ. ಇನ್ನೊಂದು ವಿಷಯವೆಂದರೆ ಮುತ್ತತ್ತಿಯ ಕಾವೇರಿ ನದಿಯಲ್ಲಿ ಹಿಂದೆ ಹಲವಾರು ಅವಘಡಗಳು ಸಂಭವಿಸಿರುವುದರಿಂದ ಇಲ್ಲಿ ನೀರಿಗಿಳಿಯುವುದು ಬಲು ಅಪಾಯ. ಏಕೆಂದರೆ ಇಲ್ಲಿ ಪ್ರಭಾವಶಾಲಿ ಸುಳಿಗಳು ಸಾಮಾನ್ಯ. ಆದ್ದರಿಂದ ಜಾಗರೂಕತೆವಹಿಸಬೇಕಾಗಿರುವುದು ಅಗತ್ಯ.

ಚಿತ್ರಕೃಪೆ: Karthik Prabhu

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಮತ್ತೊಂದು ವಿಷಯವೆಂದರೆ ಯುವ ಜನಾಂಗಕ್ಕೆ ಮುತ್ತತ್ತಿಯು ಪ್ರಶಾಂತತೆಯ ಅನುಭವ ನೀಡುವ ಶಾಂತ ಪರಿಸರದ ಮುಗ್ಧ ತಾಣದಂತೆ ಕಂಡುಬಂದರೆ ಇದರ ಸುತ್ತಮುತ್ತಲಿನ ಪ್ರದೇಶಗಳ ಅನೇಕ ಜನರಿಗೆ ಇದೊಂದು ಪವಿತ್ರ ಕ್ಷೇತ್ರವಾಗಿದೆ. ಈ ಸ್ಥಳವು ಆಂಜನೇಯ ಹಾಗೂ ಸೀತೆಯರ ಹಿನ್ನಿಲೆಯನ್ನು ಹೊಂದಿದ್ದು ಇಲ್ಲಿ ಆಂಜನೇಯ ಸ್ವಾಮಿಗೆ ಮುಡಿಪಾದ ದೇವಾಲಯವಿರುವುದನ್ನೂ ಸಹ ಕಾಣಬಹುದು.

ಚಿತ್ರಕೃಪೆ: Karthik Prabhu

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ವಿಶೇಷವೆಂದರೆ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಅನೇಕ ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡಿ ನದಿ ತಟದಲ್ಲಿ ಮಾಂಸದ ಆಹಾರ ತಯಾರಿಸಿ ಸ್ವಮ್ಮಿಗೆ ನೈವೇದ್ಯ ಮಾಡಿ ತಿಂದು ಹೋಗುತ್ತಾರೆ.

ಚಿತ್ರಕೃಪೆ: Aravindb21

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ದುರದೃಷ್ಟ ಎಂದರೆ ಇತ್ತೀಚೆಗೆ ಈ ಕಾವೇರಿ ತಟದ ಈ ಸುಂದರ ತಾಣವು ಪ್ರವಾಸಿಗರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತನದಿಂದ ಕಲ್ಮಶಗೊಳ್ಳುತ್ತಿದೆ. ವಿಹಾರ ವಿರಾಮಕ್ಕೆಂದು ಬರುವ ಅದೆಷ್ಟೊ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲ್ಲುಗಳು ಸೇರಿದಂತೆ ಮುಂತಾದ ಕಸಗಳನ್ನು ಇಲ್ಲಿಯೆ ಬಿಸಾಕಿ ಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ. ಈ ನಿಟ್ಟಿನಲ್ಲಿ ಪ್ರದೇಶದ ನಿರ್ಮಲ ಪರಿಸರ ಕಾಪಾಡುವ ಕುರಿತು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕಾಗಿರುವುದು ಅವಶ್ಯಕವಾಗಿದೆ.

ಚಿತ್ರಕೃಪೆ: Thejaswi

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಸೂರ್ಯನ ರಷ್ಮಿಯ ಪ್ರತಿಫಲನದಿಂದ ಫಳ ಫಳ ಹೊಳಪಿನಿಂದ ನಳನಳಿಸುವ ಜೀವ ನದಿ ಕಾವೇರಿಯ ಅಮೃತದಂತಹ ನೀರು, ಮುತ್ತತ್ತಿಯಲ್ಲಿ ಕಂಡಾಗ....

ಚಿತ್ರಕೃಪೆ: Thejaswi

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಕೆಲ ಹೊತ್ತು ಸ್ನೇಹಿತರೊಂದಿಗೆ ಹಾಯಾಗಿ, ಜಾಲಿಯಾಗಿ ಮುತ್ತತ್ತಿಯ ಶಾಂತವಾಗಿ ವಿಶ್ರಮಿಸುತ್ತ "ಉತ್ತತ್ತಿ" ತಿಂದ ಬಳಿಕ ಮರಳಿ ಬೆಂಗಳೂರಿನೆಡೆ ಪ್ರಯಾಣ ಬೆಳೆಸಲು ಸಿದ್ಧರಾಗಿ. ಈ ಸಮಯ ಬಮ್ದ ಮಾರ್ಗದ ಬದಲಾಗಿ ಮಾತೊಂದು ಮಾರ್ಗದ ಮೂಲಕ ಸಾಗಿದರೆ ಮುತ್ತತ್ತಿಯನ್ನು ಬಿಟ್ಟು ಹೊರಡುತ್ತಿರುವ ಬೇಸರವು ಸ್ವಲ್ಪ ಕಡಿಮೆಯಾಗಬಹುದು. ಕನಕಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 209.

ಚಿತ್ರಕೃಪೆ: Rsrikanth05

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಈ ಮಾರ್ಗದಲ್ಲಿ ಮೊದಲಿಗೆ ಮುತ್ತತ್ತಿಯಿಂದ ಕನಕಪುರದೆಡೆ ಪ್ರಯಾಣಿಸಿ. ಮುತ್ತತ್ತಿಯಿಂದ ಕನಕಪುರವು ಸುಮಾರು 60 ಕಿ.ಮೀ ದೂರದಲ್ಲಿದೆ. ಈ ಮಾರ್ಗದಲ್ಲಿ ಆದಷ್ಟು ನಿಧಾನವಾಗಿ ಚಲಿಸಿದಷ್ಟು ಉತ್ತಮ. ಏಕೆಂದರೆ ಇದು ಉತ್ತಮ ನಿಸರ್ಗ ಪ್ರದೇಶವನ್ನು ಹೊಂದಿದ್ದು ಸಾಗುವಾಗ ಸಾಕಷ್ಟು ಬಗೆಯ ಪಕ್ಷಿಗಳನ್ನು ಹಾಗೂ ಕೀಟಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: shrikant rao

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಕನಕಪುರದಲ್ಲಿ ನೋಡಬಹುದಾದ ಮತ್ತೊಂದು ಆಕರ್ಷಣೆ ಬಿಳಿಕಲ್ಲು ಬೆಟ್ಟ. ಈ ಬೆಟ್ಟವು ದೂರದಿಂದ ನೋಡಿದಾಗ ಬಿಳಿ ಬಣ್ಣದಲ್ಲಿ ಕಾಣುವುದರಿಂದ ಇದಕ್ಕೆ ಬಿಳಿಕಲ್ಲು ಬೆಟ್ಟ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Sibi_antony

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಬಿಳಿಕಲ್ಲು ಬೆಟ್ಟವು ಪ್ರಮುಖವಾಗಿ ರಂಗಸ್ವಾಮಿ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಇದನ್ನು ಬಿಳಿಕಲ್ಲು ರಂಗಸ್ವಾಮಿ ಬೆಟ್ಟ ಎಂಬ ನಾಮದಿಂದಲೂ ಸಹ ಕರೆಯುತ್ತಾರೆ. ಬೆಟ್ಟದ ಮೇಲೆ ಬೃಹತ್ತಾದ ಗ್ರಾನೈಟ್ ಬಂಡೆಯೊಂದರ ಕೆಳಗೆ ದೇವಾಲಯವಿರುವುದನ್ನು ಕಾಣಬಹುದು.

ಚಿತ್ರಕೃಪೆ: VikasHegde

ಬೆಂಗಳೂರಿನಿಂದ ಮುತ್ತತ್ತಿ:

ಬೆಂಗಳೂರಿನಿಂದ ಮುತ್ತತ್ತಿ:

ಇದಾದ ನಂತರ ಕನಕಪುರದಿಂದ ಸುಮಾರು 50 ಕಿ.ಮೀ ಗಳಷ್ಟು ದೂರವನ್ನು ಉತ್ತಮವಾದ ರಸ್ತೆಯ ಮೇಲೆ ಹಾಯಾಗಿ ಕ್ರಮಿಸುತ್ತ ಬೆಂಗಳೂರು ನಗರವನ್ನು ಮತ್ತೆ ತಬ್ಬಿಕೊಳ್ಳಲು ಸಜ್ಜಾಗಿರುವಂತೆ ಅಪ್ಪಿಕೊಳ್ಳಿ. ಈ ಪ್ರವಾಸವನ್ನು ಒಂದೆ ದಿನದಲ್ಲಿ ಸುಲಲಿತವಾಗಿ ಮಾಡಬಹುದಾಗಿರುವುದರಿಂದ ಪ್ರಯಾಣ ಆಯಾಸವೂ ಕಡಿಮೆಯಾದರೂ ಉಂಟಾಗುವ ಸಂತೋಷ ಮಾತ್ರ ದುಬಾರಿ. ನೀವು ಒಮ್ಮೆ ಹೊರಡಿ...ನಿಮ್ಮ ಪ್ರಯಾಣ ಸುಖಕರವಾಗಿರಲಿ.

ಚಿತ್ರಕೃಪೆ: Girish Sharma

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X