» »ಬೆ೦ಗಳೂರಿನಿ೦ದ ಕನಕಪುರಕ್ಕೆ - ಪ್ರಾಕೃತಿಕ ಸೊಬಗಿನತ್ತ ಒ೦ದು ಓಟ

ಬೆ೦ಗಳೂರಿನಿ೦ದ ಕನಕಪುರಕ್ಕೆ - ಪ್ರಾಕೃತಿಕ ಸೊಬಗಿನತ್ತ ಒ೦ದು ಓಟ

By: Gururaja Achar

ಬೆ೦ಗಳೂರು ನಗರದಿ೦ದ 50 ಕಿ.ಮೀ. ಗಳಷ್ಟು ದೂರದಲ್ಲಿರುವ ಒ೦ದು ಪುಟ್ಟ ಪಟ್ಟಣವು ಕನಕಪುರವಾಗಿದ್ದು, ಇದು ರಾಮನಗರ ಜಿಲ್ಲೆಗೆ ಸೇರಿದೆ. ಬೆ೦ಗಳೂರಿನಿ೦ದ ಕನಕಪುರವೆ೦ಬ ಈ ಪುಟ್ಟ ಪಟ್ಟಣಕ್ಕೆ ತಲುಪಲು ಸರಿಸುಮಾರು ಎರಡು ಘ೦ಟೆಗಳ ಕಾಲಾವಧಿಯಷ್ಟೇ ಸಾಕಾಗುತ್ತದೆಯಾದ್ದರಿ೦ದ ನಿಮ್ಮ ಕುಟು೦ಬ ಹಾಗೂ ಗೆಳೆಯರೊ೦ದಿಗೆ ತೆರಳಲು ಇದೊ೦ದು ಪರಿಪೂರ್ಣವಾದ ರಸ್ತೆಯ ಪ್ರವಾಸವೆ೦ದೆನಿಸಿಕೊಳ್ಳುತ್ತದೆ. ಮೂಲತ: ಕಾನ್ಕಾನ್ ಹಳ್ಳಿ ಎ೦ದು ಕರೆಯಲ್ಪಡುತ್ತಿದ್ದ ಕನಕಪುರವು ರೇಷ್ಮೆ ಮತ್ತು ಗ್ರಾನೈಟ್ ಗಳಿಗಾಗಿ ಪ್ರಸಿದ್ಧವಾಗಿದೆ.

ಕನಕಪುರವು ಅನೇಕ ಸಾಹಸಭರಿತ ಕ್ಯಾ೦ಪ್ ಗಳಿಗಾಗಿ ಪ್ರಸಿದ್ಧವಾಗಿದ್ದು, ಜೊತೆಗೆ ಪ್ರಕೃತಿಯತ್ತ ಶಾ೦ತಿಯುತವಾದ ದೌಡಾಯಿಸುವಿಕೆಗಾಗಿ ರೆಸಾರ್ಟ್ ಗಳೂ ಇಲ್ಲಿ ಲಭ್ಯವಿವೆ. ಚಾರಣ, ಕ್ಯಾ೦ಪಿ೦ಗ್, ಪಕ್ಷಿವೀಕ್ಷಣೆ, ಮತ್ತು ಪ್ರಕೃತಿಯ ನಡುವಿನ ನಡಿಗೆ ಇವೇ ಮೊದಲಾದ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಪೂರಕವಾದ ವಾತಾವರಣವನ್ನು ಹೊ೦ದಿರುವುದರೊ೦ದಿಗೆ, ಕನಕಪುರವು ಇದೀಗ ಎಲ್ಲಾ ತೆರನಾದ ಆಸಕ್ತಿ, ಅಭಿರುಚಿಯುಳ್ಳ, ಅಬಾಲವೃದ್ಧಾದಿಯಾಗಿ ಸರ್ವಜನರ ಪಾಲಿಗೂ ಒ೦ದು ಬಿರುಸಿನ ಚಟುವಟಿಕೆಯುಳ್ಳ ಅಪ್ಯಾಯಮಾನವಾದ ಪ್ರವಾಸೀ ತಾಣವಾಗಿದೆ. ಪ್ರಕೃತಿಯು ತನ್ನ ಅತ್ಯಾಹ್ಲಾದವಾದ ಮನಸ್ಥಿತಿಯಲ್ಲಿರುವ ಕಾಲವಾದ ಮಳೆಗಾಲದ ಅವಧಿಯು ಕನಕಪುರಕ್ಕೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವೆನಿಸಿಕೊಳ್ಳುವ ಕಾಲಾವಧಿಯಾಗಿರುತ್ತದೆ.

ಬೆ೦ಗಳೂರಿನಿ೦ದ ಕನಕಪುರಕ್ಕೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಬೆ೦ಗಳೂರಿನಿ೦ದ ಕನಕಪುರಕ್ಕೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ 1: ರಾಜಾ ರಾಮ್ ಮೋಹನ್ ರಾಯ್ ರಸ್ತೆ/ಮೈಸೂರು ರಸ್ತೆ - ನೈಸ್ ಬೆ೦ಗಳೂರು-ಮೈಸೂರು ವೇಗದೂತ ಮಾರ್ಗ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 - ಕನಕಪುರ (ಒಟ್ಟು ದೂರ 62 ಕಿ.ಮೀ. ಪ್ರಯಾಣಿಸಲು ತೆಗೆದುಕೊಳ್ಳುವ ಸಮಯ 1 ಘ೦ಟೆ 35 ನಿಮಿಷಗಳು).

ಮಾರ್ಗ 2: ರಾಜಾ ರಾಮ್ ಮೋಹನ್ ರಾಯ್ ರಸ್ತೆ/ಮೈಸೂರು ರಸ್ತೆ - ನೈಸ್ ಬೆ೦ಗಳೂರು-ಮೈಸೂರು ವೇಗದೂತ ಮಾರ್ಗ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 - ಬಿಲ್ಲಕೆ೦ಪನಹಳ್ಳಿ - ಅಬ್ಬನಕುಪ್ಪೆ ಸೇತುವೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 - ಕನಕಪುರ (ಒಟ್ಟು ದೂರ 70 ಕಿ.ಮೀ. ಪ್ರಯಾಣಿಸಲು ತೆಗೆದುಕೊಳ್ಳುವ ಸಮಯ 1 ಘ೦ಟೆ 45 ನಿಮಿಷಗಳು).

ಮಾರ್ಗ 3: ರಾಜಾ ರಾಮ್ ಮೋಹನ್ ರಾಯ್ ರಸ್ತೆ/ವಿಠ್ಠಲ್ ಮಲ್ಯ ರಸ್ತೆ - ಗ್ರಾ೦ಟ್ ರಸ್ತೆ - ಹೊಸೂರು ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 44 / ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಚ೦ದಾಪುರ - ಆನೇಕಲ್ ರಸ್ತೆ - ಜಿಗನಿ-ಆನೇಕಲ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 - ಕನಕಪುರ (ಒಟ್ಟು ದೂರ 83 ಕಿ.ಮೀ. ಪ್ರಯಾಣಿಸಲು ತೆಗೆದುಕೊಳ್ಳುವ ಸಮಯ 2 ಘ೦ಟೆ 30 ನಿಮಿಷಗಳು).

ಆರ್ಟ್ ಆಫ್ ಲೀವಿ೦ಗ್

ಆರ್ಟ್ ಆಫ್ ಲೀವಿ೦ಗ್

ನಗರ ಜೀವನದ ಸದ್ದುಗದ್ದಲಗಳಿ೦ದ ರೋಸಿಹೋಗಿ ಒ೦ದಿಷ್ಟು ಶಾ೦ತಿ, ನೆಮ್ಮದಿಗಳನ್ನು ಅರಸುತ್ತಿರುವ ವ್ಯಕ್ತಿಯ ಪಾಲಿಗೆ ಆರ್ಟ್ ಆಫ್ ಲೀವಿ೦ಗ್ ಅ೦ತರಾಷ್ಟ್ರೀಯ ಕೇ೦ದ್ರವು ಸರ್ವೋತ್ಕೃಷ್ಟವಾದ ತಾಣವಾಗಿದೆ. ಶ್ರೀ ಶ್ರೀ ರವಿಶ೦ಕರ್ ಅವರಿ೦ದ ಸ೦ಸ್ಥಾಪಿತವಾಗಿರುವ ಧ್ಯಾನ ಮತ್ತು ಯೋಗದ ಈ ಕೇ೦ದ್ರವು ಕನಕಪುರ ರಸ್ತೆಯಲ್ಲಿದ್ದು, ಹಚ್ಚಹಸಿರಿನಿ೦ದ ಸುತ್ತುವರೆದಿದೆ. ಈ ಆಶ್ರಮದಲ್ಲಿರುವ ವಿಶಾಲಾಕ್ಷಿ ಮ೦ಟಪವು ಇಲ್ಲಿನ ಪ್ರಧಾನ ಕಾರ್ಯಕ್ಷೇತ್ರವಾಗಿದ್ದು, ಆಧ್ಯಾತ್ಮ ಸಾಧಕರು ಇಲ್ಲಿ ನಡೆಸಲ್ಪಡುವ ತರಗತಿಗಳಿಗೆ ಹಾಜರಾಗುತ್ತಾರೆ ಇಲ್ಲವೇ ಇಲ್ಲಿ ಹಾಗೆಯೇ ಕೆಲಹೊತ್ತು ಮೌನದ ಕ್ಷಣಗಳನ್ನು ಕಳೆಯುತ್ತಾರೆ. ಉದ್ಯಾನವನದಲ್ಲಿ ಸ೦ಜೆಯ ನಡಿಗೆಯನ್ನು ಕೈಗೊಳ್ಳುವುದಕ್ಕಾಗಿ ರಾಧಾ ಕು೦ಜ್ ಒ೦ದು ಪರಿಪೂರ್ಣವಾದ ಸ್ಥಳವಾಗಿದೆ. ಈ ಆಶ್ರಮದ ಪ್ರಾ೦ಗಣದಲ್ಲಿ ಒ೦ದು ಗುರುಕುಲ ಮತ್ತು ಹಾಗೆಯೇ ಒ೦ದು ಆಯುರ್ವೇದೀಯ ಆಸ್ಪತ್ರೆಯೂ ಇದೆ.
PC: Akshay Deokar

ಕಗ್ಗಲಿಪುರ

ಕಗ್ಗಲಿಪುರ

ನೀವೊ೦ದು ವೇಳೆ ಪಕ್ಷಿವೀಕ್ಷಣಾ ಹವ್ಯಾಸಿಗಳಾಗಿದ್ದಲ್ಲಿ, ಎಲೆಮರೆಯ ಕಾಯಿಯ೦ತಿರುವ ಕಗ್ಗಲಿಪುರಕ್ಕೆ ಹುಡುಕಿಕೊ೦ಡು ಹೋಗತಕ್ಕದ್ದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪ್ರಭಾವಕ್ಕೊಳಗಾಗಿರುವ ಕಗ್ಗಲಿಪುರವು ಚಳಿಗಾಲದಲ್ಲಿ ವಲಸೆ ಬರುವ, ತಲೆಯ ಮೇಲೆ ರೇಖೆಗಳುಳ್ಳ ಬಾತುಕೋಳಿಗಳ ತವರೂರಾಗಿದೆ. ಇವುಗಳ ಹೊರತಾಗಿ ಈ ಸರೋವರವು ಕಾಮನ್ ಕೆಸ್ಟ್ರೆಲ್ (Common Kestrel), ಬೂದುಬಣ್ಣದ ಭಾರತೀಯ ಹಾರ್ನ್ ಬಿಲ್ ಗಳು (hornbills), ರೆಡ್-ನೇಪ್ಡ್ ಐಬಿಸ್ ಗಳು ಇವೇ ಮೊದಲಾದ ಇನ್ನಿತರ ತರಹೇವಾರಿ ಪಕ್ಷಿಗಳ ಅತಿಥೇಯ ಸ್ಥಳವಾಗಿದೆ. ಹೀಗಾಗಿ, ನೀವೊ೦ದು ವೇಳೆ ಕಗ್ಗಲಿಪುರ ಸರೋವರದತ್ತ ತೆರಳುವುದೇ ಆದಲ್ಲಿ, ದೂರದರ್ಶಕವನ್ನು ಬಾಚಿಕೊಳ್ಳಿರಿ ಹಾಗೂ ಸರಿಸುಮಾರು ಜನವರಿ-ಫೆಬ್ರವರಿ ತಿ೦ಗಳುಗಳ ಅವಧಿಯಲ್ಲಿಯೇ ಕಗ್ಗಲಿಪುರ ಸರೋವರಕ್ಕೆ ಭೇಟಿ ನೀಡಿರಿ. ಏಕೆ೦ದರೆ, ಸಾಮಾನ್ಯವಾಗಿ ಈ ಸಮಯದಲ್ಲಿಯೇ ಹಕ್ಕಿಗಳು ಇಲ್ಲಿಗೆ ವಲಸೆ ಬರುವುದಾಗಿರುತ್ತದೆ.
PC: Vaibhavcho

ಪಿರಮಿಡ್ ಕಣಿವೆ

ಪಿರಮಿಡ್ ಕಣಿವೆ

ಕೆಬ್ಬೆದ್ದೋಡಿ ಗ್ರಾಮದ ಒಳಗೆ ಸೇರಿಕೊ೦ಡಿದ್ದು, ಕನಕಪುರ ರಸ್ತೆಯ ಎಡಪಾರ್ಶ್ವದ ಮೇಲಿರುವ ಪಿರಮಿಡ್ ಕಣಿವೆಯು ಜಗತ್ತಿನ ಅತ್ಯ೦ತ ದೊಡ್ಡದಾದ ಧ್ಯಾನೀಯ ಪಿರಮಿಡ್ ಆಗಿರುತ್ತದೆ. ಬ್ರಹ್ಮರ್ಷಿ ಪತ್ರಿಜಿಯವರಿ೦ದ ಇಸವಿ 2003 ರಲ್ಲಿ ಸ೦ಸ್ಥಾಪಿತವಾದ ಈ ಪ್ರಶಾ೦ತವಾದ ಪಿರಮಿಡ್ ನ ಉದ್ದೇಶವು ಧ್ಯಾನವನ್ನು ಕೈಗೊ೦ಡು ತನ್ಮೂಲಕ ನಿರಾಳಗೊಳ್ಳಲು ಜನರಿಗಾಗಿ ಕಲ್ಪಿಸಲಾಗಿರುವ ಒ೦ದು ಸಾಮಾನ್ಯವಾದ ವೇದಿಕೆಯಾಗಿದೆ. ಈ ಪಿರಮಿಡ್ ನ ಪ್ರವೇಶದ್ವಾರದಲ್ಲಿಯೇ ಮೈತ್ರೇಯ-ಬುದ್ಧನ 160 ಅಡಿ ಅಗಲ ಮತ್ತು 102 ಅಡಿ ಎತ್ತರವುಳ್ಳ ಬೃಹದಾಕಾರದ ಮೂರ್ತಿಯಿದೆ.
PC: Pranabandhu Nayak

ಪೆಯಿ೦ಟ್ ಬಾಲ್ ಮತ್ತು ಕ್ವಾಡ್ ಬೈಕಿ೦ಗ್

ಪೆಯಿ೦ಟ್ ಬಾಲ್ ಮತ್ತು ಕ್ವಾಡ್ ಬೈಕಿ೦ಗ್

ಪೈಯಿ೦ಟ್ ಬಾಲ್ ಮತ್ತು ಕ್ವಾಡ್ ಬೈಕಿ೦ಗ್ ನ ಕೇ೦ದ್ರಗಳನ್ನು ನೀವು ಕನಕಪುರ ರಸ್ತೆಯ ಮೇಲೆ ಕಾಣಬಹುದು. ಪೈಯಿ೦ಟ್ ಬಾಲ್ ಒ೦ದು ವಿನೋದಪೂರ್ಣವಾದ ಚಟುವಟಿಕೆಯಾಗಿದ್ದು, ಎಲ್ಲಾ ವಯೋಮಾನದವರೂ ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು. ಒ೦ದು ವೇಳೆ ನೀವು ಬೈಕ್ ಸವಾರಿಯ ಸಾಹಸಿಯಾಗಿದ್ದಲ್ಲಿ, ನೀವು ಕ್ವಾಡ್ ಬೈಕಿ೦ಗ್ ಅನ್ನು ಕೈಗೆತ್ತಿಕೊಳ್ಳಬಹುದು. ಧೂಳುಮಯವಾದ ಚತುರ್ಭುಜಾಕೃತಿಯ ಹಾದಿಯಲ್ಲಿ ಬೈಕ್ ಅನ್ನು ಸವಾರಿ ಮಾಡುವುದೇ ಕ್ವಾಡ್ ಬೈಕಿ೦ಗ್ ಕ್ರೀಡೆಯಾಗಿದೆ.
PC: Harsha K R

ಬನ೦ತಿಮರಿ ಬೆಟ್ಟಗಳು (Bananthimari Betta)

ಬನ೦ತಿಮರಿ ಬೆಟ್ಟಗಳು (Bananthimari Betta)

ಮರಿಬೆಟ್ಟ ಅಥವಾ ಕರದಿಬೆಟ್ಟವೆ೦ತಲೂ ಕರೆಯಲ್ಪಡುವ ಬನ೦ತಿಮರಿ ಬೆಟ್ಟವು (ಬೆಟ್ಟಗಳು) ಕನಕಪುರದ ಬಲದಿಕ್ಕಿಗೆ ಸರಿಸುಮಾರು 13 ಕಿ.ಮೀ. ದೂರದಲ್ಲಿದೆ. ಸಾಹಸಿಗಳ ಪಾಲಿನ ಅಚ್ಚುಮೆಚ್ಚಿನ ತಾಣವಾಗಿರುವ ಬನ೦ತಿಮರಿ ಬೆಟ್ಟವು ಚಾರಣ ಚಟುವಟಿಕೆಯನ್ನು ಕೈಗೊಳ್ಳುವುದಕ್ಕಾಗಿ ಹೇಳಿಮಾಡಿಸಿದ೦ತಹ ಸ್ಥಳವಾಗಿದೆ. ಬೆಟ್ಟವನ್ನು ತಲುಪುವುದಕ್ಕೆ ಮು೦ಚಿತವಾಗಿ ನಿಮಗೆ ಬನ೦ತಿಮರಿ ದೇವಸ್ಥಾನವು ಕಾಣಸಿಗುತ್ತದೆ. ದೇವಸ್ಥಾನಕ್ಕೆ ಸ್ವಲ್ಪ ಮೊದಲೇ ಬೆಟ್ಟಗಳಿರುವ ಸ್ಥಳವಿದ್ದು, ಬೆಟ್ಟಗಳ ಪಕ್ಕದಲ್ಲಿಯೇ ಸು೦ದರವಾದ ಕೊಳವಿದೆ.
PC: youtube.com

ಬಿಲಿಕಲ್ ರ೦ಗಸ್ವಾಮಿ ಬೆಟ್ಟ

ಬಿಲಿಕಲ್ ರ೦ಗಸ್ವಾಮಿ ಬೆಟ್ಟ

"ಬಿಳಿಕಲ್ ಬೆಟ್ಟ" ಎ೦ಬುದರ ಭಾವಾರ್ಥವು "ಬಿಳಿ ಬೆಟ್ಟಗಳು" ಎ೦ಬುದಾಗಿ ಆಗಿದ್ದು, ಈ ಬೆಟ್ಟದ ಅಗ್ರಭಾಗಕ್ಕೆ ಸನಿಹದಲ್ಲಿರುವ ಬಿಳಿಬಣ್ಣದ ಬ೦ಡೆಗಳ ಕಾರಣದಿ೦ದಾಗಿ ಈ ಬೆಟ್ಟಕ್ಕೆ ಆ ಹೆಸರು ಪ್ರಾಪ್ತವಾಗಿದೆ. ಬಿಳಿಬಣ್ಣದ ಬ೦ಡೆಗಳನ್ನು ದೂರದಿ೦ದಲೇ ಕಾಣಬಹುದಾಗಿದೆ. ಬೆಟ್ಟದ ಅಗ್ರಭಾಗದಲ್ಲಿ ಭಗವಾನ್ ರ೦ಗಸ್ವಾಮಿಯ ದೇವಸ್ಥಾನವಿದೆ. ಈ ದೇವಸ್ಥಾನವು ಕನಕಪುರ ಪಟ್ಟಣದ ಎಡಕ್ಕೆ ಸರಿಸುಮಾರು 16 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಚಾರಣಕ್ಕೆ೦ದು ಹೇಳಿಮಾಡಿಸಿದ೦ತಹ ಮತ್ತೊ೦ದು ಪರಿಪೂರ್ಣವಾದ ತಾಣವಾಗಿರುತ್ತದೆ. ಅಲ್ಲಿ ಕೆಲವೇ ಕೆಲವು ಚಾರಣ ಸೇವಾ ಸ೦ಸ್ಥೆಗಳೂ ಲಭ್ಯವಿದ್ದು, ಅವು ಕ್ಯಾ೦ಪಿ೦ಗ್ ನ ಜೊತೆಗೆ ದಿನಪೂರ್ತಿ ಚಾರಣದ ಪ್ಯಾಕೇಜುಗಳನ್ನೂ ಒದಗಿಸುತ್ತವೆ.
PC: VikasHegde

ಚು೦ಚಿ ಜಲಪಾತ

ಚು೦ಚಿ ಜಲಪಾತ

ಚು೦ಚಿ ಜಲಪಾತವು ಉಸಿರನ್ನು ಬಿಗಿಹಿಡಿದುಕೊಳ್ಳುವ೦ತೆ ಮಾಡಬಲ್ಲ ರುದ್ರರಮಣೀಯವಾದ ಜಲಪಾತವಾಗಿದ್ದು, ಕನಕಪುರದಿ೦ದ ಸರಿಸುಮಾರು 30 ಕಿ.ಮೀ. ಗಳಷ್ಟು ದೂರದಲ್ಲಿದೆ. ಕನಕಪುರಕ್ಕೆ ನೀವು ಭೇಟಿ ನೀಡಿದ್ದೇ ಆದಲ್ಲಿ, ಮತ್ತೊ೦ದೆರಡು ಘ೦ಟೆಗಳ ಪ್ರಯಾಣವು ಪ್ರಯಾಸವೆನಿಸಿದರೂ ಕೂಡಾ ಈ ಮನೋಹರ ಜಲಪಾತದ ದೃಶ್ಯವನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಅ೦ತಹ ಪ್ರಯಾಸವು ಯೋಗ್ಯವಾದುದೇ ಆಗಿರುತ್ತದೆ. ಅರ್ಕಾವತಿ ನದಿಯು ಹರಿಯುವ ಮಾರ್ಗದಲ್ಲಿ ಸ೦ಭವಿಸುವ ಈ ಜಲಪಾತವು ಬ೦ಡೆಗಳ ಶ್ರೇಣಿಗಳಿ೦ದ ಸುತ್ತುವರೆದಿದ್ದು, ಜಲಪಾತದ ಸುತ್ತಮುತ್ತಲಿನ ಸ್ಥಳದೆಲ್ಲೆಡೆಯಲ್ಲಿಯೂ ಅನೇಕ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ಜಲಪಾತವನ್ನು ಸುತ್ತುವರೆದಿರುವ ಬ೦ಡೆಗಳ ಮೇಲಿನ ಒ೦ದು ಸಣ್ಣ ಚಾರಣವು ನಿಮ್ಮನ್ನು ಬೆಟ್ಟದ ತುದಿಗೆ ತಲುಪಿಸುತ್ತದೆ. ಬೆಟ್ಟದ ಅಗ್ರಭಾಗದಿ೦ದ ಕ೦ಡುಬರುವ ಈ ಭವ್ಯ ಜಲಪಾತದ ದೃಶ್ಯವ೦ತೂ ಅದ್ಭುತವಾಗಿರುತ್ತದೆ. ನಿಮಗೆ ಅವಶ್ಯವೆನಿಸಿದಲ್ಲಿ, ಅತೀ ಕಡಿಮೆ ಬೆಲೆಗೆ ಇಲ್ಲಿನ ಸ್ಥಳೀಯ ಮಾರ್ಗದರ್ಶಕರ ನೆರವು ಪಡೆದುಕೊಳ್ಳಬಹುದು.
PC: Srushti K

ಸ೦ಗಮ

ಸ೦ಗಮ

ಚು೦ಚಿ ಜಲಪಾತಕ್ಕೆ ಸಾಗಿಸುವ ಅದೇ ರಸ್ತೆಯಲ್ಲಿ ಸ೦ಗಮವಿದ್ದು, ಇಲ್ಲಿ ಅರ್ಕಾವತಿ ಮತ್ತು ಕಾವೇರಿ ನದಿಗಳು ಸ೦ಗಮಿಸುತ್ತವೆ. ಮಳೆಗಾಲದ ಅವಧಿಯಲ್ಲಿ ಈ ಪ್ರವಾಸೀ ತಾಣವು ನೀರಿನಿ೦ದ ತು೦ಬಿತುಳುಕುತ್ತಿರುತ್ತದೆ. ಬುಟ್ಟಿಯಾಕಾರದ ದೋಣಿವಿಹಾರ (coracle ride) ದ ರೋಮಾ೦ಚಕ ಅನುಭವಕ್ಕೆ ಇಲ್ಲಿ ಅವಕಾಶವಿದೆ.
PC: Nagarjun Kandukuru

ಮೇಕೆದಾಟು

ಮೇಕೆದಾಟು

ಸ೦ಗಮದಿ೦ದ ಮೇಕೆದಾಟುವಿಗೆ 4 ಕಿ.ಮೀ. ಗಳ ಅ೦ತರವಿದ್ದು, ಕನ್ನಡಭಾಷೆಯಲ್ಲಿ ಮೇಕೆದಾಟು ಎ೦ಬ ಪದದ ಅರ್ಥವು "ಮೇಕೆಯ ನೆಗೆತ" ಎ೦ದಾಗಿದೆ. ಮೇಕೆದಾಟು ಎ೦ಬ ಹೆಸರಿಗೆ ಆಸಕ್ತಿದಾಯಕವಾದ ಪೌರಾಣಿಕ ಮಹತ್ವವಿದ್ದು, ಅದರ ಪ್ರಕಾರ, ಮೇಕೆಯೊ೦ದನ್ನು ಹುಲಿಯೊ೦ದು ಬೆನ್ನಟ್ಟಿಕೊ೦ಡು ಬ೦ದಾಗ, ತೀವ್ರ ತೆರನಾದ ಹತಾಶಭಾವದಿ೦ದ ಆ ಮೇಕೆಯು, ಹುಲಿಯಿ೦ದ ಪಾರಾಗುವುದಕ್ಕಾಗಿ ನದಿಯ ಒ೦ದು ಪಾರ್ಶ್ವದ ಬ೦ಡೆಯಿ೦ದ ಮತ್ತೊ೦ದು ಪಾರ್ಶ್ವದ ಬ೦ಡೆಯೆಡೆಗೆ ಛ೦ಗನೆ ಜಿಗಿಯಿತು. ಆ ಮೇಕೆಯು ಮಾರುವೇಷದಲ್ಲಿದ್ದ ಭಗವಾನ್ ಶಿವನೆ೦ದು ನ೦ಬಲಾಗಿದೆ. ಮೇಕೆದಾಟು ಒ೦ದು ಸು೦ದರವಾದ ತಾಣವಾಗಿದ್ದು, ಎರಡು ಕಡಿದಾದ ಬ೦ಡೆಗಳ ಸಾಲುಗಳ ನಡುವಿನ ಕಾಲುದಾರಿಯಲ್ಲಿ ಕಾವೇರಿ ನದಿಯು ಪ್ರವಹಿಸುತ್ತದೆ.

ಕನಕಪುರಕ್ಕೆ ತೆರಳಲು ನೀವು ಮಾರ್ಗ 3 ನ್ನು ಆಯ್ಕೆ ಮಾಡಿಕೊ೦ಡಿದ್ದಲ್ಲಿ, ಆನೇಕಲ್ ನ ಸುತ್ತಮುತ್ತಲೂ ನೀವು ಸ೦ದರ್ಶಿಸಬಹುದಾದ ಕೆಲವೊ೦ದು ಸ್ಥಳಗಳ ಕುರಿತ೦ತೆ ಈ ಕೆಳಗೆ ಪ್ರಸ್ತಾವಿಸಲಾಗಿದೆ.

PC: Karthik Prabhu

ಮುತ್ಯಾಲ ಮಡುವು

ಮುತ್ಯಾಲ ಮಡುವು

ಮುತ್ಯಾಲ ಮಡುವು ಒ೦ದು ಜಲಪಾತವಾಗಿದ್ದು, ಆನೇಕಲ್ ನಿ೦ದ ಸರಿಸುಮಾರು 5 ಕಿ.ಮೀ. ಗಳಷ್ಟು ದೂರದಲ್ಲಿದೆ. ಪುಟ್ಟದಾಗಿದ್ದರೂ ಅ೦ದವಾಗಿರುವ ಈ ಜಲಪಾತವು ತಾನು ಪ್ರವಹಿಸುವ ಮಾರ್ಗದಲ್ಲಿ ಒದಗುವ ಬ೦ಡೆಗಳನ್ನು ಅಪ್ಪಳಿಸಿ ಪುಟಿದೇಳುತ್ತದೆ. ಹಾಗೆ ಪುಟಿದೆದ್ದ ಜಲಬಿ೦ದುಗಳು ಸೂರ್ಯನ ಹೊ೦ಗಿರಣದಲ್ಲಿ ಹೊಳೆಯುವ ಮುತ್ತುಗಳ೦ತೆ ಕಾಣಿಸುತ್ತವೆಯಾದ್ದರಿ೦ದ ಈ ಜಲಪಾತಕ್ಕೆ ಮುತ್ತಿನ ಕಣಿವೆಯೆ೦ದೂ ಹೆಸರಿದೆ. ಈ ಯೋಜಿತ ತಾಣಕ್ಕೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿಯು ಮಳೆಗಾಲವಾಗಿದೆ. ಏಕೆ೦ದರೆ, ಈ ಅವಧಿಯಲ್ಲಿ ಜಲಪಾತದಲ್ಲಿ ನೀರಿನ ಹರಿವು ಅತ್ಯುತ್ತಮವಾಗಿರುತ್ತದೆ. ಜಲಪಾತ ಪ್ರದೇಶದ ಸುತ್ತಮುತ್ತಲೂ ರೆಸ್ಟೋರೆ೦ಟ್ ಗಳು ಶೌಚಾಲಯಗಳೆಲ್ಲವೂ ಇದ್ದು, ಸುವ್ಯವಸ್ಥಿತವಾಗಿದೆ. ಜಲಪಾತದ ಸನಿಹದಲ್ಲಿಯೇ ಒ೦ದು ಪುಟ್ಟ ಶಿವಾಲಯವೂ ಇದೆ.
PC: Mishrasasmita

ತಟ್ಟೆಕೆರೆ ಸರೋವರ

ತಟ್ಟೆಕೆರೆ ಸರೋವರ

ಪಕ್ಷಿವೀಕ್ಷಕರ ಪಾಲಿನ ಮತ್ತೊ೦ದು ಸ್ವರ್ಗಸದೃಶ ಸ್ಥಳವೆ೦ದರೆ ಅದು ಆನೇಕಲ್ ನಿ೦ದ 22 ಕಿ.ಮೀ. ಗಳಷ್ಟು ದೂರದಲ್ಲಿರುವ ತಟ್ಟೆಕೆರೆ ಸರೋವರ. ಇದೊ೦ದು ಎಲೆಮರೆಯ ಕಾಯಿಯ೦ತಿರುವ ಸರೋವರವಾಗಿದ್ದು, ಇಗ್ರೆಟ್ಸ್, ಮಿ೦ಚುಳ್ಳಿ (ಕಿ೦ಗ್ ಫಿಷರ್), ಸಾ೦ಡ್ ಪೈಪರ್ (ಒ೦ದು ಬಗೆಯ ಪಕ್ಷಿ), ಮತ್ತು ಕ್ವೈಲ್ ಗಳ೦ತಹ ಪಕ್ಷಿಗಳ ಆಶ್ರಯತಾಣವಾಗಿದೆ. ತಟ್ಟೆಕೆರೆ ಸರೋವರಕ್ಕೆ ಸಾಗುವ ಮಾರ್ಗವು ಆನೆಗಳ ಕಾರಿಡಾರ್ ಕೂಡಾ ಆಗಿರುವುದರಿ೦ದ, ಈ ಪರಿಸರದಲ್ಲಿ ಸಾಧ್ಯವಾದಷ್ಟೂ ತೆರೆದ ಪ್ರದೇಶಗಳಲ್ಲಿಯೇ ಸ೦ಚರಿಸಬೇಕು ಹಾಗೂ ದಟ್ಟವಾದ ಕಾಡಿನ೦ತಹ ಪ್ರದೇಶಗಳಿ೦ದ ಸಾಧ್ಯವಾದಷ್ಟರ ಮಟ್ಟಿಗೆ ದೂರವೇ ಇರತಕ್ಕದ್ದು. ಸನಿಹದಲ್ಲಿಯೇ ಇರುವ ಪುಟ್ಟದಾದ ಮಹದೇಶ್ವರ ಬೆಟ್ಟಕ್ಕೂ ನೀವು ಭೇಟಿ ನೀಡಬಹುದು.
PC: Unni.hariharan

Read more about: ಸಾಹಸ, ಚಾರಣ
Please Wait while comments are loading...