Search
  • Follow NativePlanet
Share
» »ಬೆಂಗಳೂರಿನ ಕೆರೆಗಳು ಹಾಗು ಕಂಡುಬರುವ ಪಕ್ಷಿಗಳು

ಬೆಂಗಳೂರಿನ ಕೆರೆಗಳು ಹಾಗು ಕಂಡುಬರುವ ಪಕ್ಷಿಗಳು

By Vijay

ಒಂದೊಮ್ಮೆ ಕೆರೆಗಳ ನಗರವಾಗಿದ್ದ ಬೆಂಗಳೂರು ಮಹಾನಗರವು ಪ್ರಸ್ತುತ ಆ ಬಿರುದನ್ನು ಹಿಂಪಡೆಯುವ ಮಾರ್ಗದಲ್ಲಿ ಮುಂದುವರೆಯುತ್ತಿರುವುದೆ? ಎಂಬ ಆಭಾಸ ಮೂಡಿಸಿರುವುದರಲ್ಲಿ ಯಶಸ್ವಿಯಾಗಿರುವುದು ದುರದೃಷ್ಟವೆ ಸರಿ. ಬೆಂಗಳೂರಿಗೆ ಯಾವುದೆ ನದಿ ಹತ್ತಿರವಿಲ್ಲದಿದ್ದರೂ, ಸಾಕಷ್ಟು ಸಂಖ್ಯೆಯಲ್ಲಿ ಕೆರೆಗಳಿದ್ದು ನಗರಕ್ಕೆ ಹಿತಕರವಾದ ವಾತಾವರಣ ಒದಗಿಸುವುದರಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿವೆ. 1985 ರ ಸಮಯದಲ್ಲಿ 51 ಕೆರೆಗಳನ್ನು ಹೊಂದಿದ್ದ ಬೆಂಗಳೂರು ನಗರದಲ್ಲಿ ಪ್ರಸ್ತುತ ಕೇವಲ 17 ಕೆರೆಗಳನ್ನು ನೋಡಬಹುದಾಗಿದೆ.

ಹಾಗಾದರೆ ಉಳಿದ ಕೆರೆಗಳೆಲ್ಲಿ? ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ, ಕಾಲವೆಂಬ ಹೊಡೆತಕ್ಕೆ ಸಿಕ್ಕಿ, ಕೈಗಾರೀಕರಣದಿಂದಾಗಿ ಹೆಚ್ಚಿನ ಕೆರೆಗಳು ಅವನತಿ ಹೊಂದಿದ್ದು, ಹಲವು ಕೆರೆಗಳು ಬಸ್ ನಿಲ್ದಾಣಗಳಾಗಿ, ವಸತಿ ಪ್ರದೇಶಗಳಾಗಿ, ಗಾಲ್ಫ್ ಹಾಗೂ ಆಟದ ಮೈದಾನಗಳಾಗಿ ಪರಿವರ್ತಿತವಾಗಿರುವುದು ದೌರ್ಭಾಗ್ಯವೆ ಸರಿ. ಕೆಲವು ಕೆರೆಗಳಂತೂ ಹೂಳಿನಿಂದ ತುಂಬಿದ್ದು ಅವಸಾನದ ಅಂಚಿನಲ್ಲಿವೆ. ಈಗಾಗಲೆ ಕೆರೆ ಅಭಿವೃದ್ಧಿ ನಿಗಮವು ಕೆರೆಗಳ ಸಂರಕ್ಷಣೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನಗೊಂಡು ಮತ್ತೆ ಬೆಂಗಳೂರು ನಗರವು ಮತ್ತೆ ಕೆರೆಗಳಿಂದ ಕಂಗೊಳಿಸಲಿ.

ಕೆಲವು ಆಯ್ದ ಕೆರೆಗಳ ಪರಿಚಯ ಹಾಗು ಈ ಪ್ರದೇಶಗಳಲ್ಲಿ ಕಂಡುಬರುವ ಸುಂದರವಾದ ಪಕ್ಷಿಗಳ ವಿವರ ಈ ಲೇಖನದಲ್ಲಿ ನೀಡಲಾಗಿದೆ. ಸ್ಲೈಡುಗಳನ್ನು ತಿರುಗಿಸುತ್ತ ಒಂದೊಂದಾಗಿ ತಿಳಿದುಕೊಳ್ಳಿ. ಮಡಿವಾಳ ಕೆರೆಯ ಚಿತ್ರವನ್ನು www.itslife.in ವೆಬ್ ತಾಣದ ಕೃಪೆಯಿಂದ ಪಡೆದುಕೊಳ್ಳಲಾಗಿದೆ.

ಬೆಳಂದೂರು ಕೆರೆ

ಬೆಳಂದೂರು ಕೆರೆ

ಬೆಂಗಳೂರಿನ ಆಗ್ನೇಯ ದಿಕ್ಕಿಗಿರುವ ಈ ಕೆರೆ ನಗರದ ಅತಿ ದೊಡ್ಡ ಕೆರೆಯಾಗಿದೆ. ಬೆಳಂದೂರು ಒಳಚರಂಡಿ ವ್ಯವಸ್ಥೆಯ ಭಾಗವಾಗಿರುವ ಈ ಕೆರೆಯು ಮೇಲ್ಮಟ್ಟದ ಇತರೆ ಮೂರು ಕೆರೆಗಳಿಂದ ನೀರನ್ನು ಪಡೆದು 37000 ಎಕರೆಯಷ್ಟು ಸಂಗ್ರಹಣಾ ಸಾಮರ್ಥ್ಯ (148 ಚ.ಕಿ.ಮೀ) ಹೊಂದಿದೆ. ಪ್ರಸ್ತುತ ಒಳಚರಂಡಿ ನೀರಿನಿಂದ ಕಲುಶಿತಗೊಂಡಿರುವ ಈ ಕೆರೆಯಲ್ಲಿ ಯಾವುದೆ ಪ್ರವಾಸಿ ಚಟುವಟಿಕೆಗಳಿಲ್ಲ.

ಬೆಳಂದೂರು ಕೆರೆ

ಬೆಳಂದೂರು ಕೆರೆ

ಸ್ಥಳೀಯರು ಆವಾಗಾವಾಗ ಈ ಕೆರೆಯಲ್ಲಿ ಬೆಳೆಯುವ ಪಾಚಿ ಸಸ್ಯಗಳನ್ನು ಕೀಳುತ್ತಿದ್ದರೂ ಅವು ಮತ್ತೆ ಶೀಘ್ರ ಗತಿಯಲ್ಲಿ ಬೆಳೆದು ಕೆರೆಯ ಜೀವರಾಶಿಗಳಿಗೆ ಸಂಚಕಾರವನ್ನು ತಂದಿವೆ.

ಬೆಳಂದೂರು ಕೆರೆ

ಬೆಳಂದೂರು ಕೆರೆ

ಸಂಜೆ ಸಮಯದಲ್ಲಿ ಕಾಣುವ ಬೆಳಂದೂರು ಕೆರೆಯ ಮೋಹಕ ನೋಟ. ಕೆರೆಯ ಹೆಚ್ಚಿನ ಭಾಗವು ಹೂಳಿನಿಂದ ಆವರಿಸಿದೆ.

ಅಲಸೂರು/ಹಲಸೂರು ಕೆರೆ

ಅಲಸೂರು/ಹಲಸೂರು ಕೆರೆ

ಬೆಂಗಳೂರಿನ ಕೇಂದ್ರ ಭಾಗದಲ್ಲಿ ನೆಲೆಸಿರುವ ಈ ಕೆರೆಯು ಪ್ರಸಿದ್ಧ ಎಂ.ಜಿ ರಸ್ತೆಯ ಪೂರ್ವ ದಿಕ್ಕಿನ ಟರ್ಮಿನಸ್ ದಿಸೆಯಲ್ಲಿ ಸ್ಥಿತಗೊಂಡಿದೆ. 50 (123.6 ಎಕರೆ) ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿರುವ ಈ ಕೆರೆಯು ಹಲವಾರು ಪುಟ್ಟ ದ್ವೀಪಗಳನ್ನು ಒಳಗೊಂಡಿದೆ. ಪ್ರಸ್ತುತ, ಈ ಕೆರೆಯು ಕಲುಶಿತಗೊಳ್ಳುವ ಅಪಾಯವನ್ನು ಎದುರಿಸುತ್ತಿದೆ.

ಅಲಸೂರು/ಹಲಸೂರು ಕೆರೆ

ಅಲಸೂರು/ಹಲಸೂರು ಕೆರೆ

ಕನಿಷ್ಠ ಹಾಗು ಗರಿಷ್ಠ ಆಳ ಕ್ರಮವಾಗಿ 19 ಅಡಿ ಮತ್ತು 58 ಅಡಿಗಳಷ್ಟು ಹೊಂದಿರುವ ಈ ಕೆರೆಯು 3 ಕಿ.ಮೀ ಉದ್ದದ ದಂಡೆಯನ್ನು ಹೊಂದಿದೆ. ಬುಧವಾರವೊಂದನ್ನು ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಾಯಂಕಾಲ 6 ರ ವರೆಗೆ ಸಾರ್ವಜನಿಕರ ವೀಕ್ಷಣೆಗೆಂದು ಈ ಕೆರೆಯ ಪ್ರವೇಶ ದ್ವಾರವನ್ನು ತೆರೆದಿರಲಾಗುತ್ತದೆ.

ಸ್ಯಾಂಕಿ ಕೆರೆ/ಟ್ಯಾಂಕ್

ಸ್ಯಾಂಕಿ ಕೆರೆ/ಟ್ಯಾಂಕ್

ಇದೊಂದು ಮಾನವನಿರ್ಮಿತ ಕೆರೆಯಾಗಿದ್ದು ಬೆಂಗಳೂರಿನ ಪಶ್ಚಿಮ ಭಾಗದಲ್ಲಿದೆ. ಮಲ್ಲೇಶ್ವರಂ, ವಯಾಲಿಕಾವಲ್ ಹಾಗು ಸದಾಶಿವನಗರಗಳ ಮಧ್ಯದಲ್ಲಿ ಈ ಕೆರೆಯು ಸ್ಥಿತಗೊಂಡಿದೆ. 800 ಮೀ ಗರಿಷ್ಠ ಅಗಲವನ್ನು ಹೊಂದಿರುವ ಈ ಕೆರೆಯನ್ನು ಮದ್ರಾಸ್ ಸ್ಯಾಪರ್ಸ್ ರೆಜಿಮೆಂಟಿನ ಕರ್ನಲ್ ರಿಚರ್ಡ್ ಹೀಯ್ರಾಮ್ ಸ್ಯಾಂಕಿ ಎಂಬುವವರು 1882 ರಲ್ಲಿ ಬೆಂಗಳೂರಿನ ನೀರಿನ ಅವಶ್ಯಕತೆಯನ್ನು ನೀಗಿಸಲು ನಿರ್ಮಿಸಿದರು.

ಸ್ಯಾಂಕಿ ಕೆರೆ/ಟ್ಯಾಂಕ್

ಸ್ಯಾಂಕಿ ಕೆರೆ/ಟ್ಯಾಂಕ್

ಸರ್ಕಾರಿ ಗಂಧದಕಟ್ಟಿಗೆ ಕೇಂದ್ರವು ಒಂದೊಮ್ಮೆ ಈ ಕೆರೆಯ ಬಳಿಯಲ್ಲೆ ಇದ್ದುದರಿಂದ ಇದನ್ನು 'ಗಂಧದಕೋಟಿ ಕೆರೆ' ಎಂದು ಕೂಡ ಕರೆಯಲಾಗುತ್ತಿತ್ತು.

ಸ್ಯಾಂಕಿ ಕೆರೆ/ಟ್ಯಾಂಕ್

ಸ್ಯಾಂಕಿ ಕೆರೆ/ಟ್ಯಾಂಕ್

ಪ್ರಸ್ತುತ ವಿಹಂಗಮ ನೋಟವನ್ನು ಒದಗಿಸುವ ಈ ಕೆರೆ ಪ್ರದೇಶವು ಒಂದು ಉತ್ತಮ ವಿಹಾರಿ ತಾಣವೂ ಆಗಿದೆ. ಜಾಗಿಂಗ್, ವಾಕಿಂಗ್ ಗಳನ್ನು ಕೂಡ ಮಾಡಬಹುದಾದ ಈ ತಾಣದಲ್ಲಿ ಪ್ರತಿ ವರ್ಷ ಜರುಗುವ ಗಣೇಶ ವಿಸರ್ಜನೆಗೆ ಪ್ರತ್ಯೆಕವಾಗಿ ಸ್ಥಳಾವಕಾಶವನ್ನು ಮಾಡಿ ಕೊಡಲಾಗುತ್ತದೆ.

ಮಡಿವಾಳ ಕೆರೆ

ಮಡಿವಾಳ ಕೆರೆ

ಬೆಂಗಳೂರಿನಲ್ಲಿ ಕಂಡುಬರುವ ಬೃಹತ್ ಕೆರೆಗಳಲ್ಲಿ ಒಂದಾಗಿದೆ ಮಡಿವಾಳ ಕೆರೆ. ಬೆಂಗಳೂರಿನ ಬಿ.ಟಿ.ಎಂ ಲೇಔಟ್ ಪ್ರದೇಶದ ಹತ್ತಿರದಲ್ಲಿ ಸ್ಥಿತಗೊಂಡಿರುವ ಈ ಕೆರೆಯು 114 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿದೆ. ಈ ಕೆರೆಯಿಂದಾಗಿಯೆ ಕೆರೆ ತಟದ ಪ್ರದೇಶವು ಮಡಿವಾಳ ಎಂಬ ಹೆಸರನ್ನು ಪಡೆದಿದೆ. ಈ ಕೆರೆಯ ವಿಶೇಷತೆ ಇಲ್ಲಿಗೆ ವಲಸೆ ಬರುವ ಪಕ್ಷಿಗಳು. ನವಂಬರ್ ಹಾಗು ಡಿಸೆಂಬರ್ ತಿಂಗಳಿನ ಸಮಯದಲ್ಲಿ ಸ್ಪಾಟ್ ಬಿಲ್ಡ್ ಪೆಲಿಕನ್ ಗಳನ್ನು ಇಲ್ಲಿ ಗಮನಿಸಬಹುದಾಗಿದೆ. ಅಲ್ಲಲ್ಲಿ ಎಗ್ರೆಟ್ ಗಳನ್ನೂ ಕೂಡ ಗಮನಿಸಬಹುದು.

ಲಾಲ್‍ಬಾಗ್ ಕೆರೆ

ಲಾಲ್‍ಬಾಗ್ ಕೆರೆ

ಲಾಲ್‍ಬಾಗ್ ಸಸ್ಯೋದ್ಯಾನದಲ್ಲಿ (ಬೊಟಾನಿಕಲ್ ಗಾರ್ಡನ್) ನೆಲೆಸಿರುವ ಈ ಕೆರೆಯು ಈ ಉದ್ಯಾನದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ನೆಲೆಸಿರುವ ಈ ಉದ್ಯಾನದ ಕೆರೆಯನ್ನು ಕೆಂಪೇಗೌಡ ಬಸ್ ನಿಲ್ದಾಣ ಹಾಗು ಶಿವಾಜಿ ನಗರ ಬಸ್ ತಂಗುದಾಣಗಳಿಂದ ಜಯನಗರ, ಬನಶಂಕರಿ ಮಾರ್ಗವಾಗಿ ಚಲಿಸುತ್ತ ಸುಲಭವಾಗಿ ತಲುಪಬಹುದು.

ಲಾಲ್‍ಬಾಗ್ ಕೆರೆ

ಲಾಲ್‍ಬಾಗ್ ಕೆರೆ

ಪ್ರತಿದಿನ ಬೆಳಿಗ್ಗೆ 6 ರಿಂದ ಸಾಯಂಕಾಲ 7 ಘಂಟೆಯವರೆಗೆ ಈ ಕೆರೆಯಿರುವ ಉದ್ಯಾನವು ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ. ವ್ಯಾಯಾಮಾಸಕ್ತರಿಗೆ, ಜಾಗಿಂಗ್ ಹಾಗು ವಾಕಿಂಗ್ ಪ್ರಿಯರ ಹಿತ ದೃಷ್ಟಿಯಿಂದ ಬೆಳಗಿನ ವೇಳೆ 6 ಘಂಟೆಯಿಂದ 9 ಘಂಟೆಯವರೆಗೆ ಹಾಗು ಸಾಯಂಕಾಲ 6 ಘಂಟೆಯಿಂದ 7 ಘಂಟೆಯವರೆಗೆ ಪ್ರವೇಶ ಉಚಿತವಿದ್ದು ಮಿಕ್ಕ ಸಮಯದಲ್ಲಿ ಪ್ರವೇಶ ಶುಲ್ಕ Rs.10 ಅನ್ನು ಪಾವತಿಸಬೇಕಾಗುತ್ತದೆ.

ಹೆಬ್ಬಾಳ ಕೆರೆ

ಹೆಬ್ಬಾಳ ಕೆರೆ

ಬೆಂಗಳೂರು ಉತ್ತರದಲ್ಲಿ ನೆಲೆಸಿರುವ ಹೆಬ್ಬಾಳ ಕೆರೆಯು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 7 ರ ಬಳಿಯಿದ್ದು, ಬಳ್ಳಾರಿ ರಸ್ತೆ ಹಾಗು ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಸಂಧಿಸುವ ಸ್ಥಳದ ಬಳಿಯಲ್ಲಿದೆ. 1537 ರಲ್ಲಿ ಕೆಂಪೇಗೌಡರಿಂದ ನಿರ್ಮಿಸಲಾದ ಮೂರು ಕೆರೆಗಳಲ್ಲಿ ಇದೂ ಕೂಡ ಒಂದು. ನೈಸರ್ಗಿಕ ಕಣಿವೆ ಪ್ರದೇಶದಲ್ಲಿ ಆಣೆಕಟ್ಟು(ಕಟ್ಟೆ ಕಟ್ಟುವುದು ಅಥವಾ ದಿಬ್ಬಗಳನ್ನು ನಿರ್ಮಿಸುವುದು) ಕಟ್ಟುವ ಮೂಲಕ ಈ ಕೆರೆಯನ್ನು ನಿರ್ಮಿಸಲಾಗಿದೆ.

ಹೆಬ್ಬಾಳ ಕೆರೆ

ಹೆಬ್ಬಾಳ ಕೆರೆ

2000 ರಲ್ಲಿ ತಯಾರಿಸಲಾದ ವರದಿಯಂತೆ ಈ ಕೆರೆಯು 75 ಹೆಕ್ಟೇರ್ ಪ್ರದೇಶದಲ್ಲಿ ಚಾಚಿದೆ. ಇದನ್ನು 143 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸುವ ಯೋಜನೆಯನ್ನೂ ಹಾಕಲಾಗಿದೆ. ಚರಂಡಿ ನೀರು ಈ ಕೆರೆಯಲ್ಲಿ ಹರಿಯುವುದರಿಂದ ಇದೊಂದು ಫಲವತ್ತಾದ ಕೆರೆಯಾಗಿದ್ದು ನೀರು ಗಿಡಗಳಾದ ಹಯಸಿಂತ್ ಹಾಗು ಟೈಫಾಗಳ ಬೆಳವಣಿಗೆಗೆ ಸಹಾಯಕವಾಗಿದೆ. ಹಲವು ಬಗೆಯ ಹಕ್ಕಿಗಳಾದ ಸ್ಪಾಟ್ ಬಿಲ್ಡ್ ಪೆಲಿಕನ್, ಯುರೇಷಿಯನ್ ಸ್ಪೂನ್ ಬಿಲ್, ಶೊವೆಲ್ಲರ್, ಪಿನ್‍ಟೇಲ್, ಲಿಟಲ್ ಗ್ರಿಬ್, ಸ್ಪಾಟ್ ಬಿಲ್ಡ್ ಡಕ್ ಗಳನ್ನು ಇಲ್ಲಿ ಕಾಣಬಹುದಾಗಿದೆ.

ವರ್ತೂರು ಕೆರೆ

ವರ್ತೂರು ಕೆರೆ

ಬೆಂಗಳೂರು ನಗರದ ಪೂರ್ವಕ್ಕಿರುವ ಹಾಗು ಅಂತಾರಾಷ್ಟ್ರೀಯ ಖ್ಯಾತಿಯ ವ್ಹೈಟ್ ಫೀಲ್ಡ್ ಟೌನ್‍ಶಿಪ್ ನ ಭಾಗವಾಗಿರುವ ವರ್ತೂರು ಪ್ರದೇಶದಲ್ಲಿದೆ ಈ ಕೆರೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಮಾನವ ನಿರ್ಮಿತ ಈ ಕೆರೆಯನ್ನು ಗಂಗ ರಾಜರು ಕೃಷಿ ಹಾಗು ಇತರೆ ಉದ್ದೇಶಗಳಿಗಾಗಿ ನಿರ್ಮಿಸಿದ್ದಾರೆ. ಪ್ರಸ್ತುತ, ಈ ಕೆರೆಯು ಬೆಂಗಳೂರು ಮಹಾನಗರದಿಂದ ಸುಮಾರು 40 ಪ್ರತಿಶತದಷ್ಟು ಒಳಚರಂಡಿ ನೀರನ್ನು ಪಡೆಯುತ್ತಿದ್ದು ಅತಿಯಾಗಿ ಕಲುಷಿತಗೊಂಡ ಕೆರೆಗಳಲ್ಲಿ ಒಂದಾಗಿದೆ.

ಆಗರ ಕೆರೆ

ಆಗರ ಕೆರೆ

ಆಗರ ಕೆರೆಯು ಇದೆ ಹೆಸರಿನ ಹಳ್ಳಿಯಾದ ಆಗರದಲ್ಲಿ ನೆಲೆಸಿದೆ. ಇದೊಂದು ಪಂಚಾಯತ್ ಹಳ್ಳಿಯಾಗಿದ್ದು ಬೆಂಗಳೂರು ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿದೆ. ನೋಡಲು ಸುಂದರವಾಗಿರುವ ಈ ಕೆರೆಯು ಹೆಚ್.ಎಸ್.ಆರ್ ಲೇಔಟ್ ಗೆ ಬಹು ಹತ್ತಿರದಲ್ಲಿದೆ.

ಹೆಸರಘಟ್ಟ ಕೆರೆ

ಹೆಸರಘಟ್ಟ ಕೆರೆ

ಬೆಂಗಳೂರಿನ ವಾಯವ್ಯ ಭಾಗಕ್ಕೆ ಸುಮಾರು 18 ಕಿ.ಮೀ ದೂರದಲ್ಲಿ ನೆಲೆಸಿದೆ ಈ ಕೃತಕ ಹೆಸರಘಟ್ಟ ಕೆರೆ. ನಗರದ ನೀರಿನ ಅವಶ್ಯಕತೆಯನ್ನು ಪೂರೈಸುವ ಉದ್ದೇಶದಿಂದ 1894 ರಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಈ ಕೆರೆಯನ್ನು ನಿರ್ಮಿಸಲಾಯಿತು. ಅಂದಿನ ಮೈಸೂರು ದೀವಾನರಾಗಿದ್ದ ಶೇಷಾದ್ರಿ ಅಯ್ಯರ್ ಹಾಗು ಮುಖ್ಯ್ ಇಂಜಿನಿಯರ್ ಎಂ.ಸಿ.ಹಚ್ಚಿನ್ಸ್ "ಚಾಮರಾಜೇಂದ್ರ ವಾಟರ್ ವರ್ಕ್ಸ್" ಹೆಸರಿನಲ್ಲಿ ಈ ಯೋಜನೆ ರೂಪಿಸಿದ್ದರು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಸರಘಟ್ಟ ಮಾರ್ಗವಾಗಿ ಸುಮಾರು 30 ಕಿ.ಮೀ ದೂರದಲ್ಲಿರುವ ಈ ಕೆರೆಯನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ಕಿಂಗ್ ಫಿಶರ್

ಕಿಂಗ್ ಫಿಶರ್

ಕೆರೆಯಲ್ಲಿ ಸಿಗುವ ಚಿಕ್ಕ ಪುಟ್ಟ ಮೀನುಗಳನ್ನು ಥಟ್ಟನೆ ಹಿಡಿಯುವ ಕಿಂಗ್ ಫಿಶರ್.

ಪರ್ಪಲ್ ಹೆರಾನ್

ಪರ್ಪಲ್ ಹೆರಾನ್

ಯುರೋಪ್, ಆಫ್ರಿಕಾ ಹಾಗು ದಕ್ಷಿಣ ಏಷಿಯಾದಲ್ಲಿ ಕಂಡುಬರುವ ಈ ಹಕ್ಕಿಗಳು 31 ರಿಂದ 38 ಇಂಚುಗಳಷ್ಟು ಉದ್ದವಾಗಿದ್ದು, ಸುಮಾರು 28 ರಿಂದ 37 ಇಂಚುಗಳಷ್ಟು ಎತ್ತರವಾಗಿರುತ್ತವೆ.

ಇಂಡಿಯನ್ ಪಾಂಡ್ ಹೆರಾನ್

ಇಂಡಿಯನ್ ಪಾಂಡ್ ಹೆರಾನ್

ಪ್ಯಾಡಿ ಬರ್ಡ್ಸ್ ಎಂದೂ ಕರೆಯಲ್ಪಡುವ ಈ ಹಕ್ಕಿಗಳು ಭಾರತ, ಇರಾನ್, ಬರ್ಮಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲಿ ಕಂಡುಬರುತ್ತವೆ.

ಲಿಟಲ್ ಎಗ್ರೆಟ್

ಲಿಟಲ್ ಎಗ್ರೆಟ್

ಲಿಟಲ್ ಎಗ್ರೆಟ್ ಒಂದು ಶ್ವೇತ ವರ್ಣದ ಚಿಕ್ಕ ಹೆರಾನ್ ಹಕ್ಕಿ. 55 ರಿಂದ 65 ಸೆ.ಮೀ ಉದ್ದವಿರುವ ಈ ಹಕ್ಕಿಗಳ ರೆಕ್ಕೆಗಳ ಒಟ್ಟು ಉದ್ದ 88 ರಿಂದ 106 ಸೆ.ಮೀ ಗಳಷ್ಟು.

ಮ್ಯಾಪಿ ರಾಬಿನ್

ಮ್ಯಾಪಿ ರಾಬಿನ್

ಮ್ಯಾಪಿ ರಾಬಿನ್ ಅಥವಾ ಶಮಾ ಹಕ್ಕಿಗಳು ಪುಟ್ಟ ಗಾತ್ರದ್ದಾಗಿದ್ದು ಕೆರೆ ದಡದಲ್ಲಿ ಸಿಗುವ ಹುಳು ಹುಪ್ಪಟಿಗಳನ್ನು ತಿನ್ನುತ್ತದೆ.

ಗ್ರೇ ಹೆರಾನ್

ಗ್ರೇ ಹೆರಾನ್

ಹೆರಾನ್ ಕುಟುಂಬದ ಈ ಹಕ್ಕಿಯು ಭಾರತ, ಯುರೋಪ್ ಹಾಗು ಆಫ್ರಿಕಾ ದೇಶಗಳಲ್ಲಿ ಕಂಡುಬರುತ್ತದೆ. ಗರಿಷ್ಠ 39 ಇಂಚುಗಳಷ್ಟು ಎತ್ತರವಾಗಿರುವ ಈ ಹಕ್ಕಿಯು 40 ಇಂಚುಗಳಷ್ಟು ಉದ್ದವಾಗಿರುತ್ತದೆ.

ಕ್ರೋವ್ ಫಿಸಂಟ್

ಕ್ರೋವ್ ಫಿಸಂಟ್

ರತ್ನ ಪಕ್ಷಿ ಎಂತಲೂ ಕರೆಯಲ್ಪಡುವ ಈ ಹಕ್ಕಿಯು ಭಾರತ, ದಕ್ಷಿಣ ಚೈನಾ ಹಾಗಿ ಇಂಡೊನೇಷಿಯಾಗಳಲ್ಲಿ ಕಂಡುಬರುತ್ತದೆ. ಕಾಗೆಯ ಹಾಗೆಯೆ ಕಾಣುವ ಈ ಹಕ್ಕಿಯು ಕಂದು ಬಣ್ಣದ ರೆಕ್ಕೆ, ಉದ್ದನೆಯ ಬಾಲ ಹಾಗು ಕೆಂಪು ಬಣ್ಣದ ಕಣ್ಣುಗಳನ್ನು ಒಳಗೊಂಡಿರುತ್ತದೆ.

ಕಾಮನ್ ಮೈನಾ

ಕಾಮನ್ ಮೈನಾ

ಎಲ್ಲೆಡೆಯು ಸಾಮಾನ್ಯವಾಗಿ ಕಂಡುಬರುವ ಈ ಹಕ್ಕಿಗಳು ಭಾರತೀಯ ಸಂಸ್ಕೃತಿಯಲ್ಲಿ ವಿಶೀಷ್ಟ ಸ್ಥಾನವನ್ನು ಪಡೆದಿವೆ. ಸಂಸ್ಕೃತ್ ಹಾಗು ಪ್ರಕೃತ ಸಾಹಿತ್ಯದಲ್ಲೂ ಇವುಗಳ ಕುರಿತು ಉಲ್ಲೇಖಿಸಲಾಗಿದೆ.

Read more about: bangalore lakes birds
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more