Search
  • Follow NativePlanet
Share
» »ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರ ಎಂದರೆ ಕೇವಲ ದೇಶದ ಮೂಲೆ-ಮೂಲೆಯಲ್ಲಿರುವ ಜನರಿಗೂ ಅಚ್ಚುಮೆಚ್ಚು. ಪ್ರಕೃತಿ ಪ್ರಿಯರಿಗೆ, ವನ್ಯ ಜಂತುಗಳ ಪ್ರಿಯರಿಗೆ, ಶೃಂಗಾರ ಪುರುಷರಿಗೆ, ಸಾಹಸ ಪ್ರಿಯರಿಗೆ, ಷಾಪಿಂಗ್ ಪ್ರಿಯರಿಗೆ ಇದೊಂದು ಅದ್ಭುತವಾದ ಸ್ಥಳವೇ ಆಗಿದೆ. ಇಲ್ಲಿ ಮೋ

ಬೆಂಗಳೂರು ನಗರ ಎಂದರೆ ಕೇವಲ ದೇಶದ ಮೂಲೆ-ಮೂಲೆಯಲ್ಲಿರುವ ಜನರಿಗೂ ಅಚ್ಚುಮೆಚ್ಚು. ಪ್ರಕೃತಿ ಪ್ರಿಯರಿಗೆ, ವನ್ಯ ಜಂತುಗಳ ಪ್ರಿಯರಿಗೆ, ಶೃಂಗಾರ ಪುರುಷರಿಗೆ, ಸಾಹಸ ಪ್ರಿಯರಿಗೆ, ಷಾಪಿಂಗ್ ಪ್ರಿಯರಿಗೆ ಇದೊಂದು ಅದ್ಭುತವಾದ ಸ್ಥಳವೇ ಆಗಿದೆ. ಇಲ್ಲಿ ಮೋಜು ಮಸ್ತಿ ಮಾಡಲು ಅತ್ಯುತ್ತಮ ಸ್ಥಳದಲ್ಲಿ ಇದು ಕೂಡ ಒಂದಾಗಿದೆ. ಬೆಂಗಳೂರಿಗೆ ತನ್ನದೇ ಆದ ಅಮೋಘವಾದ ಚರಿತ್ರೆ ಕೂಡ ಇದೆ. ಬೆಂಗಳೂರಿನ ಸುತ್ತಮುತ್ತ ನೋಡಬೇಕಾಗಿರುವ ಅನೇಕ ಪ್ರವಾಸಿ ತಾಣಗಳಿದ್ದು, ದೇಶ-ವಿದೇಶಗಳಿಂದ ಈ ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ.

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಕುಡಿತದಲ್ಲಿ ಆಸಕ್ತಿ ಇದೆಯೇ?
ಎಷ್ಟೊ ವಿಧದ ವೈನ್ (ಮಧ್ಯ)ದ ರುಚಿ ಮಾಡಬೇಕಾದರೆ ಇಲ್ಲಿಗೆ ಭೇಟಿ ನೀಡಬಹುದು. ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಸಮೀಪದ ಅದ್ಭುತವಾದ ರುಚಿಗಳ ಪಾನೀಯಗಳು ದೊರೆಯುತ್ತವೆ. ಇಲ್ಲಿನ ವೈನ್ ಯಾರ್ಡ್‍ಗೆ ಒಮ್ಮೆ ಪ್ರವಾಸ ಮಾಡಿ. ಕುಡಿತದ ಜೊತೆ ಜೊತೆಗೆ ಅನೇಕ ಅದ್ಭುತವಾದ ಪ್ರಕೃತಿ ದೃಶ್ಯಗಳನ್ನು ಅಸ್ವಾಧಿಸಬಹುದಾಗಿದೆ.

PC:: Nicolas Mirguet

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ವಾವ್...ಸೈಕಲ್ ತುಳಿಯುವ ಅಭಿರುಚಿ ಇದೆಯೇ?
ಫಿಟ್‍ನೆಸ್‍ಗಾಗಿ ಅಥವಾ ಉಲ್ಲಾಸಕ್ಕಾಗಿ ಸೈಕಲ್ ರೈಡ್ ಹೋಗುವವರಿಗೆ ಬೆಂಗಳೂರಿನಲ್ಲಿ ಅನೇಕ ಸುಂದರವಾದ ತಾಣಗಳಿವೆ. ಪ್ರವಾಸ ತಾಣವಾಗಿ ಬೆಂಗಳೂರಿನ ಸಮೀಪದಲ್ಲಿ ನಂದಿ ಹಿಲ್ಸ್ ಇದೆ. ಹಿಲ್ಸ್‍ಗೆ ಹೋಗುವ ಸಮಯದಲ್ಲಿ ಸೈಕಲ್‍ನಿಂದ ಅಲ್ಲಿನ ಅಪೂರ್ವವಾದ ದೃಶ್ಯವನ್ನು ಸವಿಯುತ್ತಾ ತೆರಳಬಹುದು. ಸುಮಾರು 8 ಕಿ.ಮೀ ದೂರದಲ್ಲಿರುವ ಬೆಟ್ಟದ ಪ್ರಯಾಣ ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ ಎಂದೇ ಹೇಳಬಹುದು.

Photo Courtesy: Sean Ellis

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಮೀನು ಹಿಡಿಯುವುದು ಇಷ್ಟವೇ?
ನಿಮಗೆ ಮೀನು ಹಿಡಿಯುವ ಅವ್ಯಾಸವಿದೆಯೇ? ಹಾಗಾದರೆ ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿ ಭೀಮೇಶ್ವರಿ ಫಿಷಿಂಗ್ ಕ್ಯಾಂಪ್‍ಗೆ ತೆರಳಿ. ಇಲ್ಲಿ ಕಾವೇರಿ ನದಿಯ ಜೊತೆ ಜೊತೆಗೆ ಹಚ್ಚ ಹಸಿರಿನ ಪ್ರದೇಶವನ್ನು, ಬೆಟ್ಟಗಳನ್ನು ಹೊಂದಿರುವ ಸುಂದರವಾದ ದೃಶ್ಯವನ್ನು ಆನಂದಿಸಬಹುದು. ದೊಡ್ಡ ದೊಡ್ಡ ಹಾಗು ವಿವಿಧ ಜಾತಿಯ ಮೀನುಗಳನ್ನು ಇಲ್ಲಿ ಹಿಡಿಯಬಹುದು. ಇಲ್ಲಿ ಟ್ರೆಕ್ಕಿಂಗ್, ಬೋಟ್ ರೈಡಿಂಗ್ ಕೂಡ ಮಾಡಬಹುದು.

Photo Courtesy: Rishabh Mathur

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಮಕ್ಕಳ ಜೊತೆ ಆನಂದಿಸಬೇಕಾ?
ಮಕ್ಕಳಿಗೆ ಉತ್ತಮವಾದ ಮನರಂಜನೆ ನೀಡುವ ತಾಣಗಳಲ್ಲಿ ಬನ್ನೇರ್ ಘಟ್ಟ ನ್ಯಾಷನಲ್ ಪಾರ್ಕ್ ಕೂಡ ಒಂದು. ಇದು ಬೆಂಗಳೂರಿನಿಂದ ಸಮೀಪದಲ್ಲಿರುವ ತಾಣವಾಗಿದ್ದು, ಇಲ್ಲಿ ಹುಲಿ, ಸಿಂಹ, ಆನೆ ಇನ್ನು ಅನೇಕ ವಿಧದ ಪ್ರಾಣಿಗಳನ್ನು ನೋಡಬಹುದು. ಇಲ್ಲಿ ಮಕ್ಕಳನ್ನು ಕರೆದುಕೊಂಡು ಹೋದರೆ ಆನಂದ ಹಾಗು ಭಯ ಪಡುವುದರಲ್ಲಿ ಅನುಮಾನವೇ ಇಲ್ಲ.

Photo Courtesy: Muhammad Mahdi Karim

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಸಾವನ ದುರ್ಗ
ಈ ಪ್ರದೇಶವು ಟ್ರೆಕ್ಕಿಂಗ್‍ಗೆ ಅನುಕೂಲವಾದ ಸ್ಥಳವಾಗಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ ಈ ಸಾವನ ದುರ್ಗ. ಇದು ಸಮುದ್ರ ಮಟ್ಟದಿಂದ ಸುಮಾರು 40 ರಿಂದ 50 ಅಡಿ ಎತ್ತರದಲ್ಲಿದೆ. ಇಲ್ಲಿ ರಾಕ್ ಕ್ಲೈಮ್ಬಿಂಗ್, ಟ್ರೆಕ್ಕಿಂಗ್‍ನಂತಹ ಚಟುವಟಿಕೆಗಳನ್ನು ಇಲ್ಲಿ ಅನೇಕ ಮಂದಿ ಆನಂದಿಸುತ್ತಾರೆ.

Photo Courtesy: Shyamal

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬಂಡಿಪೂರ ಜಂಗಲ್ ಸಫಾರಿ
ಬಂಡಿಪೂರ ಅರಣ್ಯದಲ್ಲಿ ಒಂದು ರಾತ್ರಿ ಕಳೆಯಬೇಕು. ಏಕಂದರೆ ಇಲ್ಲಿ ಸುಂದರವಾದ ರೆಸಾರ್ಟ್‍ಗಳಿವೆ. ಪ್ರಕೃತಿಯ ಒಡಿಲಲ್ಲಿ ಒಂದು ದಿನದ ಮಟ್ಟಿಗಾದರೂ ವಿಶ್ರಾಂತಿಯನ್ನು ಪಡೆಯಿರಿ. ಇಲ್ಲಿ ಜಂಗಲ್ ಸಫಾರಿ, ಅರಣ್ಯದಲ್ಲಿ ಆನೆಗಳ ಸವಾರಿ, ಹುಲಿಗಳು, ಚಿರತೆಗಳನ್ನು ಕಂಡು ಆನಂದಿಸಬಹುದು.

Photo Courtesy: Pavan

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ರಂಗ ಶಂಕರ
ಬೆಂಗಳೂರಿನಲ್ಲಿರುವ ರಂಗ ಶಂಕರ ಡ್ರಾಮಾ ಥಿಯೇಟರ್ ಅತ್ಯಂತ ಪ್ರಸಿದ್ದವಾದುದು. ಇಲ್ಲಿ ಭಾರತ ದೇಶದ ಪ್ರೋಗ್ರಾಂ ಮಾತ್ರವೇ ಅಲ್ಲದೇ ವಿದೇಶಿಯ ಪ್ರೋಗ್ರಾಂ ಕೂಡ ನಿರ್ವಹಿಸುತ್ತಾರೆ. ಅತಿ ಕಡಿಮೆ ಖರ್ಚಿನಲ್ಲಿ ಅಧಿಕ ಆನಂದವನ್ನು ಉಂಟು ಮಾಡುವ ಈ ಮನರಂಜನೆಗೆ ಒಮ್ಮೆ ಭೇಟಿ ನೀಡಲೇ ಬೇಕು ಅಲ್ಲವೇ? ಇಲ್ಲಿ ಆನೇಕ ನಾಟಕಗಳು ನಡೆಯುತ್ತಿರುತ್ತದೆ.

Photo Courtesy: ZeHawk

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಷಾಪಿಂಗ್ ಮಾಡಲು ಸೂಕ್ತವಾದ ಸ್ಥಳ
ಬೆಂಗಳೂರಿನಲ್ಲಿ ಚಿಕ್ಕಪೇಟೆ ಅಥವಾ ಕಮರ್ಷಿಯಲ್ ಸ್ಟ್ರೀಟ್‍ಗಳು ಷಾಪಿಂಗ್‍ಗಳಿಗೆ ಫೇಮಸ್. ನಿಮಗೆ ಬೇಕಾದ ಎಲ್ಲಾ ವಸ್ತುಗಳು, ಆಹಾರಗಳು ಇಲ್ಲಿ ದೊರೆಯುತ್ತವೆ. ಇಲ್ಲಿ ವಸ್ತ್ರಗಳು ಅನೇಕ ವರೈಟಿ ದೊರೆಯುವುದರಿಂದ ಇಲ್ಲಿಗೆ ಸಾವಿರಾರು ಜನರು ಷಾಪಿಂಗ್ ಮಾಡುತ್ತಾ ಇರುತ್ತಾರೆ. ಇಲ್ಲಿ ಅನೇಕ ರೆಸ್ಟೋರೆಂಟ್‍ಗಳು, ಹೋಟೆಲ್‍ಗಳನ್ನು ಕೂಡ ಕಾಣಬಹುದು.

Photo Courtesy: Saad Faruque

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X