Search
  • Follow NativePlanet
Share
» »ಇಲ್ಲಿ ಭಜರಂಗಿಯದ್ದೇ ಪಂಚಾಯತಿ..ಊರಿಗೆಲ್ಲಾ ಹನುಮನೇ ನ್ಯಾಯಾಧೀಶ

ಇಲ್ಲಿ ಭಜರಂಗಿಯದ್ದೇ ಪಂಚಾಯತಿ..ಊರಿಗೆಲ್ಲಾ ಹನುಮನೇ ನ್ಯಾಯಾಧೀಶ

ಚತ್ತೀಸ್‌ಗಡ್‌ನ ಬಿಲಾಸ್‌ಪುರದಲ್ಲಿ ಉಚ್ಛನ್ಯಾಯಾಲಯ ಇದ್ದರೂ ಹೆಚ್ಚಿನ ಜನರು ವಿವಾದಗಳನ್ನು ಬರೆಗೆಹರಿಸಲು ಹನುಮಾನ್ ಮಂದಿರಕ್ಕೆ ತೆರಳುತ್ತಾರೆ. ಇಲ್ಲಿ ಭಜರಂಗಿ ಪಂಚಾಯತ್ ಎನ್ನುವ ಮಂದಿರವಿದೆ. ಇಲ್ಲಿ ಕಳೆದ 80 ವರ್ಷಗಳಿಂದ ಸಣ್ಣ ದೊಡ್ಡ ವಿವಾದಗಳ ಇತ್ಯರ್ಥ ನಡೆಯುತ್ತಿದೆ. ಇಂತಹ ಸಂಪ್ರದಾಯ ಮುಂದುವರೆಯುತ್ತಾ ಬರುತ್ತಿದೆ. 1983ರಲ್ಲಿ ಈ ಮಂದಿರ ನಿರ್ಮಾಣಗೊಂಡಿದೆ.

ಹನುಮನೇ ನ್ಯಾಯಾಧೀಶ

ಹನುಮನೇ ನ್ಯಾಯಾಧೀಶ

ಈ ಮಂದಿರದಲ್ಲಿ ಇಂದಿಗೂ ಜನರು ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಅಲ್ಲಿ ಸೇರುತ್ತಾರೆ. ಅಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಇದರ ಜೊತೆಗೆ ಧಾರ್ಮಿಕ ಅನುಷ್ಠಾನ ಕೂಡಾ ಆಗುತ್ತದೆ. ದೇವರ ಪೂಜೆ ಕೇವಲ ತಮ್ಮ ಕೋರಿಕೆಗಳ ಈಡೇರಿಕೆಗಾಗಿ ಮಾತ್ರವಲ್ಲ. ಸರಿ ತಪ್ಪುಗಳ ನಿರ್ಧಾರಕ್ಕೂ ಮಾಡಲಾಗುತ್ತದೆ.

ಭಜರಂಗಿ ಪಂಚಾಯತ್ ಮಂದಿರ

ಭಜರಂಗಿ ಪಂಚಾಯತ್ ಮಂದಿರ

ಬಿಲಾಸ್‌ಪುರದಲ್ಲಿರುವ ಈ ಮಂದಿರ 80 ವರ್ಷಗಳಿಂದ ಊರಿನ ಜನರ ಸಮಸ್ಯೆಯನ್ನು ಇತ್ಯರ್ಥ ಮಾಡುತ್ತಾ ಬಂದಿದೆ. ಊರಿನ ಜನರಿಗೆ ಯಾವುದೇ ಸಮಸ್ಯೆ ಇರಲಿ ಅದನ್ನು ಬಗೆಹರಿಸಲು ಭಜರಂಗಿ ಪಂಚಾಯತ್ ಮಂದಿರಕ್ಕೆ ಬರುತ್ತಾರೆ.

ಹನುಮಾನ್ ತೀರ್ಪು

ಹನುಮಾನ್ ತೀರ್ಪು

ಇಲ್ಲಿ ಹಳ್ಳಿಯ ಪ್ರತಿಯೊಂದು ನಿರ್ಧಾರವೂ ಹನುಮಾನ್ ದೇವರೇ ಮಾಡುತ್ತಾರೆ. ಇಲ್ಲಿಯ ಪಂಚಾಯತ್ ಹನುಮಾನನ್ನು ಸಾಕ್ಷಿಯಾಗಿಟ್ಟುಕೊಂಡು ತೀರ್ಪು ನೀಡುತ್ತಾರೆ. ಆ ತೀರ್ಪಿನಲ್ಲಿ ಹನುಮಾನ್‌ನ ಆದೇಶವಿರುತ್ತದೆ ಎನ್ನುವುದು ಅಲ್ಲಿನ ಜನರ ನಂಬಿಕೆ.

ಭಜರಂಗಿ ಆಶೀರ್ವಾದ ಪಡೆದೇ ಶುಭಕಾರ್ಯ

ಭಜರಂಗಿ ಆಶೀರ್ವಾದ ಪಡೆದೇ ಶುಭಕಾರ್ಯ

ಭಕ್ತಿ ಇರುವವರು ಭಜರಂಗಿಯ ಆಶೀರ್ವಾದವನ್ನು ಪಡದೇ ಮನೆಯಲ್ಲಿ ಮಂಗಳಕರ ಕಾರ್ಯ ಮಾಡುತ್ತಾರೆ. ಇನ್ನು ನವ ವಿವಾಹಿತೆ ವಧು ಮೊದಲು ಭಜರಂಗಿಯ ಆಶೀರ್ವಾದ ಪಡೆದು ನಂತರ ಮನೆಯೊಳಗೆ ಪ್ರವೇಶಿಸುತ್ತಾರೆ. ಮಂದಿರದಲ್ಲಿ ಹನುಮಾನ್ ಭಕ್ತರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಹನುಮಾನ್ ಜಯಂತಿಯಂದೂ ವಿಶೇಷ ಕಾರ್ಯಕ್ರಮ ಜರಗುತ್ತದೆ.

Read more about: chhattisgarh temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X