Search
  • Follow NativePlanet
Share
» »ಮೈಸೂರು ಸುತ್ತಮುತ್ತಲಿನ ಈ ಬೇಸಿಗೆ ತಾಣಗಳಿಗೆ ಹೊರಡಲು ತಯಾರಾಗಿ

ಮೈಸೂರು ಸುತ್ತಮುತ್ತಲಿನ ಈ ಬೇಸಿಗೆ ತಾಣಗಳಿಗೆ ಹೊರಡಲು ತಯಾರಾಗಿ

By Manjula Balaraj Tantry

ಮೈಸೂರು ಭಾರತದಲ್ಲಿ ಪ್ರತೀ ವರ್ಷ ಲಕ್ಷಾಂತರ ಪ್ರಮಾಣದಲ್ಲಿ ಪ್ರವಾಸಿಗರನ್ನು ಮತ್ತು ಪ್ರಯಾಣಿಗರನ್ನು ಸರಾಗವಾಗಿ ಆಕರ್ಷಿಸುವ ಸ್ಥಳಗಳಲ್ಲಿ ಒಂದಾಗಿದ್ದು, ಇಲ್ಲಿಯ ಅದ್ಭುತವಾದ ಸ್ಮಾರಕಗಳ ರೂಪದಲ್ಲಿರುವ ಕೋಟೆಗಳನ್ನು, ಭವ್ಯ ಅರಮನೆಗಳನ್ನು, ಐತಿಹಾಸಿಕ ಕಟ್ಟಡಗಳನ್ನು ಮತ್ತು ಅನನ್ಯ ಸೌಂದರ್ಯತೆಯನ್ನು ವೀಕ್ಷಿಸುವ ಸಲುವಾಗಿ ಇಲ್ಲಿಗೆ ಭೇಟಿ ಕೊಡುತ್ತಾರೆ.

ಆದರೂ ಇಲ್ಲಿಯ ಕೆಲವು ನೈಸರ್ಗಿಕ ತಾಣಗಳು ಕಡಿಮೆ ಅನ್ವೇಷಿತ ಪ್ರದೇಶಗಳಾಗಿಯೇ ಉಳಿದಿದೆ. ಅದರಲ್ಲೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಅದರ ಗಡಿಯನ್ನು ಮೀರಿ ಪ್ರಯಾಣಿಸುವುದಕ್ಕೆ ಆದ್ಯತೆ ನೀಡುತ್ತದೆ. ಬೇಸಿಗೆಯು ಸಮೀಪಿಸುತ್ತಿರುವುದರಿಂದ ಮೈಸೂರಿನ ಸುತ್ತಲಿರುವ ಬೇಸಿಗೆಯಲ್ಲಿ ಕಳೆಯಬಹುದಾದ ತಾಣಗಳಿಗೆ ಪ್ರವಾಸಕ್ಕೆ ಯೋಜಿಸಿ ನಿಮ್ಮ ಮನಸ್ಸು ಮತ್ತು ಆತ್ಮಗಳಿಗೆ ಸಂತೃಪ್ತಿಯನ್ನು ನೀಡಿದರೆ ಹೇಗಿರಬಹುದು?

ವೈತಿರಿ

ವೈತಿರಿ

ಮೈಸೂರಿನಿಂದ ಇರುವ ಅಂತರ- 150 ಕಿ.ಮೀ

ಅಂತರದ ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ವೈತಿರಿ ಒಂದು ಸುಂದರವಾದ ಗುಪ್ತ ಸೌಂದರ್ಯವೆನಿಸಿದ ಸ್ಥಳವಾಗಿದ್ದು ಇದು ದಟ್ಟವಾದ ಹಸಿರು, ವರ್ಣಮಯ ಗದ್ದೆಗಳು ಮತ್ತು ದಟ್ಟವಾದ ಕಾಡುಗಳಿಂದ ಗುರುತಿಸಲ್ಪಡುತ್ತದೆ. ಆದುದರಿಂದ ಇಲ್ಲಿಗೆ ವಿಶ್ರಾಂತಿ ಮತ್ತು ಶಾಂತಿಯುತ ಪರಿಸರವನ್ನು ಅನುಭವಿಸಲು ಮತ್ತು ಮಾಲಿನ್ಯ ರಹಿತ ಪರಿಸರದ ಅನುಭವ ಪಡೆಯಲು ಬರುವ ಅಫ್ಬೀಟ್ ಪ್ರವಾಸಿಗರಲ್ಲಿ ಈ ಜಾಗ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.

PC- Ashwin Kumar

ವೈತಿರಿ

ವೈತಿರಿ

ಕೆಲವು ವಿರಾಮಗೊಳಿಸುವಂತಹ ಕೊಳಗಳಿಂದ ಹಿಡಿದು ಟ್ರಕ್ಕಿಂಗ್ ಮಾಡಬಹುದಾದ ಬೆಟ್ಟಗಳವರೆಗೆ ಮತ್ತು ಐತಿಹಾಸಿಕ ತಾಣಗಳಿಂದ ಹಿಡಿದು ತಂಪಾದ ಪರಿಸರದವರೆಗೆ ಈ ವೈತಿರಿಯಿ ಗಡಿಯೊಳಗೆ ಮಾಡಬಹುದಾದಂತಹ ಅಸಂಖ್ಯಾತ ವಿಷಯಗಳಿವೆ. ಇಲ್ಲಿ ಭೇಟಿ ಕೊಡಬಹುದಾದ ಪ್ರಮುಖ ಸ್ಥಳಗಳಲ್ಲಿ ಲಕ್ಕಿಡಿ ಬೆಟ್ಟಗಳು, ಮತ್ತು ಪೂಖೋಡೆ ಸರೋವರವೂ ಸೇರಿವೆ. ಇಲ್ಲಿ ಕೆಲವು ಆತ್ಮಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ಬಿಡಿಸಲು ನೀವು ಇಚ್ಚೆಯುಳ್ಳವರಾಗಿದ್ದಲ್ಲಿ, ಇಲ್ಲಿರುವ ಚೈನ್(ಸರಪಳಿ) ಮರಕ್ಕೆ ಭೇಟಿ ಕೊಡಬಹುದು. ಇಲ್ಲಿ ಬುಡಕಟ್ಟು ಯುವಕರ ಆತ್ಮವನ್ನು ಬಂಧಿಸಲಾಗಿದೆ ಎಂದು ನಂಬಲಾಗಿದ್ದು ಆದುದರಿಂದ ಈ ತಾಣವು ಹಲವಾರು ಅಪಘಾತಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಆದುದರಿಂದ ವೈತಿರಿಗೆ ಭೇಟಿ ಕೊಟ್ಟು ನಿಮ್ಮ ಆತ್ಮ ಮತ್ತು ದೇಹವನ್ನು ತೃಪ್ತಿಗೊಳಿಸಿದಲ್ಲಿ ಹೇಗಿರಬಹುದು?

Challiyan

ಕೂನೂರ್

ಕೂನೂರ್

PC- Thangaraj Kumaravel

ಮೈಸೂರಿನಿಂದ ಅಂತರ -145ಕಿ,ಮೀ.

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಪೋಷಿಸುತ್ತಿರುವ ಪ್ರಸಿದ್ದವಾದುದಾಗಿದ್ದರೂ ಕಡಿಮೆ ಅನ್ವೇಷಿತ ಗಿರಿಧಾಮವಾಗಿರುವ ಕೂನೂರ್ ಸ್ಥಳಿಯ ಪ್ರವಾಸಿಗರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುತ್ತದೆ. ಆದುದರಿಂದ ಮತ್ತು ನಗರದ ಸದ್ದು ಗದ್ದಲಗಳಿಂದ ದೂರದ ಪರಿಸರದಲ್ಲಿದ್ದು ಈ ಒಂದು ಭವ್ಯವಾದ ಕಚ್ಚಾ ಸೌಂದರ್ಯತೆಯ ಮತ್ತು ಶಾಂತವಾದ ಸ್ಥಳದಲ್ಲಿ ಶಾಂತತೆಯನ್ನು ಅನ್ವೇಷಣೆ ಮಾಡ ಬಯಸಿದಲ್ಲಿ ಇದೊಂದು ಸೂಕ್ತವಾದ ಸ್ಥಳವಾಗಿದೆ. ಈ ಜಾಗವು ಸುಂದರವಾದ ಟೀ ಎಸ್ಟೇಟ್ ಗಳಿಗೆ , ಕೂನೂರ್ ಪ್ರಸಿದ್ದವಾಗಿದೆ. ಅಲ್ಲದೆ ಇದು ದಟ್ಟ ಹಸಿರು ಹುಲ್ಲುಗಾವಲುಗಳು ಮತ್ತು ಶಿಖರದೆತ್ತರದ ಬೆಟ್ಟಗಳಿಂದ ಆವೃತವಾಗಿದೆ.

ಕೂನೂರ್

ಕೂನೂರ್

Darshanr1212

ಇದು ಕ್ಯಾಂಪಿಂಗ್ ಮಾಡುವವರಿಗೆ ಮತ್ತು ನೀಲಗಿರಿ ಬೆಟ್ಟಗಳನ್ನು ಅನ್ವೇಷಣೆ ಮಾಡಬಯಸುವ ಚಾರುಣಿಗರಿಗೆ ಇದು ಕ್ಯಾಂಪಿಂಗ್ ನ ಒಂದು ತಳಹದಿಯಂತೆ ಕಾರ್ಯನಿರ್ವಹಿಸುತ್ತದೆ. ಇಲ್ಲಿಯ ಅತ್ಯಂತ ಉತ್ತಮವಾದ ಮತ್ತು ಆಸಕ್ತಿದಾಯಕ ಸ್ಥಳಗಳಲ್ಲಿ ಸಿಮ್ ಪಾರ್ಕ್, ಡಾಲ್ಫಿನ್ ನೋಸ್, ಲಾಂಬ್ಸ್ ರಾಕ್ ಹೈ ಫೀಲ್ಡ್ ಚಹಾದ ಕಾರ್ಖಾನೆ ಮತ್ತು ವೆಲ್ಲಿಂಗ್ಟನ್ ಸರೋವರ ಮುಂತಾದುವುಗಳನ್ನು ಒಳಗೊಂಡಿದೆ. ನೀವು ಇಲ್ಲಿಯ ಪಾರಂಪರಿಕ ಸ್ಥಳಗಳಲ್ಲಿಯೂ ನೀಲಗಿರಿ ಪ್ರರ್ವತ ರೈಲಿನಲ್ಲಿ ಒಂದು ಸವಾರಿಯ ಆನಂದ ಪಡೆಯಬಹುದಾಗಿದೆ.

ಕೊಟಗಿರಿ

ಕೊಟಗಿರಿ

PC- Hari Prasad Sridhar

ಮೈಸೂರಿನಿಂದ ಸುಮಾರು - 155 ಕಿಮೀ

ಅಂತರದಲ್ಲಿರುವ ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಇನ್ನೊಂದು ಸ್ವರ್ಗದಂತಿರುವ ಸ್ಥಳವೆಂದರೆ ಅದು ಕೊಟಗಿರಿ ಇದೊಂದು ಸಣ್ಣ ಪಟ್ಟಣವಾಗಿದೆ ಮತ್ತು ಇದು ಇದರ ಸುಂದರವಾದ ನೈಸರ್ಗಿಕ ಹಿನ್ನಲೆಗೆ ಹೆಸರುವಾಸಿಯಾಗಿದೆ ಇದು ಚಹಾ ಎಸ್ಟೇಟುಗಳು ಬಯಲುಗದ್ದೆಗಳು , ಬೆಟ್ಟಗಳು ಮತ್ತು ಅಂಕುಡೊಂಕಾದ ರಸ್ತೆಗಳನ್ನು ತನ್ನಲ್ಲಿ ಹೊಂದಿದೆ. ಇಲ್ಲಿ ಟ್ರಕ್ಕಿಂಗ್ ನಿಂದ ಛಾಯಾಗ್ರಹಣದವರೆಗೆ ಮತ್ತು ಇಲ್ಲಿಯ ಸುಂದರ ದೃಶ್ಯಗಳನ್ನೊಳಗೊಂಡ ಭೂಭಾಗಗಳು ಇವೆಲ್ಲವನ್ನು ಆನಂದಿಸುತ್ತಾ ನಿಮ್ಮ ಚಿಂತೆಯನ್ನು ಇಲ್ಲಿಯ ಪ್ರಶಾಂತವಾದ ಪರಿಸರದಲ್ಲಿ ಮರೆಯಿರಿ. ಇಲ್ಲಿ ಮಾಡಬಹುದಾದಂತಯ ಅನೇಕ ವಿಷಯಗಳಿವೆ.

ಕೊಟಗಿರಿ

ಕೊಟಗಿರಿ

Natataek

ಈ ಒಂದು ಉತ್ತಮವಾದ ಪರಿಸರದಲ್ಲಿ ನಿಮ್ಮ ಸಮಯವನ್ನು ಕಳೆಯ ಬಯಸುವಿರಾದಲ್ಲಿ ನೀವು ಮೈಸೂರಿನಿಂದ ಕೊಟಗಿರಿಗೆ ಪ್ರವಾಸವನ್ನು ಆಯೋಜಿಸಿ. ಇಲ್ಲಿ ಭೇಟಿ ಕೊಡಬಹುದಾದ ಪ್ರಮುಖ ಸ್ಥಳಗಳಲ್ಲಿ ರಂಗಸ್ವಾಮಿ ಶಿಖರ, ಕೋದಾನಂದ ವೀಕ್ಷಣೀಯ ಕೇಂದ್ರ ಮತ್ತು ಎಲ್ಕ್ ಜಲಪಾತಗಳನ್ನು ಒಳಗೊಂಡಿದೆ.

ಬಿ ಆರ್ ಬೆಟ್ಟಗಳು

ಬಿ ಆರ್ ಬೆಟ್ಟಗಳು

PC- Shyamal

ಮೈಸೂರಿನಿಂದ 82 ಕಿ.ಮೀ ಅಂತರದಲ್ಲಿರುವ ಮತ್ತು ಮೈಸೂರಿಗೆ ಅತ್ಯಂತ ಹತ್ತಿರದಲ್ಲಿರುವ ಗಿರಿಧಾಮವಾಗಿರುವ ಬಿ.ಆರ್ ಬೆಟ್ಟಗಳು ಇಲ್ಲಿಯ ವನ್ಯಜೀವಿ ಧಾಮಗಳಿಗೆ ಪ್ರಸಿದ್ದವಾಗಿದೆ ಮತ್ತು ಕರ್ನಾಟಕದ ಒಂದು ಜನಪ್ರಿಯ ಮತ್ತು ಶ್ರೀಮಂತ ಸ್ಥಳವಾಗಿದೆ. ಶಾಂತತೆಯ ಸಾರವನ್ನು ಇಲ್ಲಿಯ ದಟ್ಟವಾದ ಹಸಿರು ಬೆಟ್ಟಗಳಲ್ಲಿ ಕಾಣಬಹುದಾಗಿದೆ.

ಬಿ ಆರ್ ಬೆಟ್ಟಗಳು

ಬಿ ಆರ್ ಬೆಟ್ಟಗಳು

T. R. Shankar Raman

ಇದರ ಗಡಿಯೊಳಗಿನ ಮುಖ್ಯವಾದ ಅಂಶಗಳಲ್ಲಿ ಕ್ಯಾಂಪಿಂಗ್, ಟ್ರಕ್ಕಿಂಗ್, ಛಾಯಾಗ್ರಹಣ ಮಾತ್ರವಲ್ಲದೆ ಇಲ್ಲಿಯ ಮನಮೋಹಕ ದೃಶ್ಯಗಳನ್ನು ಇಲ್ಲಿಯ ಶ್ರೀಮಂತ ಕಾಡುಗಳಲ್ಲಿ ಆನಂದಿಸಬಹುದಾಗಿದೆ. ಈ ಋತುವಿನಲ್ಲಿ ಬಿ ಆರ್ ಬೆಟ್ಟಗಳಲ್ಲಿ ಒಂದು ಭೇಟಿ ಕೊಟ್ಟು ಇಲ್ಲಿಯ ಅದ್ಬುತ ವನ್ಯಜೀವಿಗಳನ್ನು ವೀಕ್ಷಿಸಿದರೆ ಹೇಗಿರಬಹುದು?

ಯೇರ್ಕಾಡ್

ಯೇರ್ಕಾಡ್

PC- Riju K

ಮೈಸೂರಿನಿಂದ ಅಂತರ - 250 ಕಿ.ಮೀ

ಸುಂದರವಾದ ದೃಶ್ಯಗಳನ್ನು ಉಣಬಡಿಸುವಂತಹ ಸ್ಥಳವಾಗಿರುವ ಯೇರ್ಕಾಡ್ ದಕ್ಷಿಣದ ಆಭರಣವೆಂದು ಹೆಸರುವಾಸಿಯಾಗಿದೆ. ಮತ್ತು ಬೇಸಿಗೆಯನ್ನು ಕಳೆಯಲು ಒಂದು ಉತ್ತಮವಾದ ಸ್ಥಳವೆಂದು ಗುರುತಿಸಲ್ಪಟ್ಟಿದೆ. ಇದರ ನೈಸರ್ಗಿಕ ಸೌಂದರ್ಯತೆಯ ಹಿನ್ನಲೆಯನ್ನು ಗಮನಿಸಿದರೆ ಇದು ಊಟಿಯನ್ನು ಹೋಲುತ್ತದೆ ಇದನ್ನು ಬಡವರ ಊಟಿ ಎಂದೂ ಕರೆಯಲಾಗುತ್ತದೆ.

ಯೇರ್ಕಾಡ್

ಯೇರ್ಕಾಡ್

Mohammed Aswath Ali

ಊಟಿಗೆ ಹೋಗದೆಯೇ ಅಲ್ಲಿಯ ಪರಿಸರ ಮತ್ತು ಅದ್ಬುತಗಳನ್ನು ಅನುಭವಿಸಲು ಸಿಕ್ಕಿದರೆ ಹೇಗಿರಬಹುದು? ಸರಿ, ನೀವು ಜನಭರಿತ ಗಿರಿಧಾಮಗಳಿಂದ ಬೇಸತ್ತಿದ್ದರೆ ಈ ಬೇಸಿಗೆಯಲ್ಲಿ ನಿಮ್ಮನ್ನು ಯೆರ್ಕಾಡ್ ಕೈ ಬೀಸಿ ಕರೆಯುತ್ತದೆ. ಯೆರ್ಕಾಡ್ ನಲ್ಲಿಯ ಪ್ರಮುಖ ಸ್ಥಳಗಳಲ್ಲಿ ಯೇರ್ಕಾಡ್ ಸರೋವರ, ಸೀಕ್ರೇಡ್ ಹಾರ್ಟ್ ಚರ್ಚ್, ಪಗೋಡಾ, ಲೇಡೀಸ್ ಸೀಟ್, ಬಾಟನಿಕಲ್ ತೋಟ, ಮತ್ತು ಕಿಲ್ಲಿಯೂರ್ ಜಲಪಾತ ಇವೆಲ್ಲವನ್ನು ಒಳಗೊಂಡಿದೆ ಆದುದರಿಂದ ತ್ವರೆ ಮಾಡಿ! ಈ ಸ್ಥಳವು ಜನಪ್ರೀಯತೆಗೊಂಡು ಸಾಮಾನ್ಯ ಪ್ರವಾಸಿಗರಿಂದ ಕಿಕ್ಕಿರಿಯುವ ಮುನ್ನ ನೀವು ಇಲ್ಲಿಯ ನೋಟವನ್ನು ಸವಿಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X