Search
  • Follow NativePlanet
Share
» »ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ

ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ

ವರ್ಷಾಂತ್ಯದಲ್ಲಿ ಎಲ್ಲಿ ಪಾರ್ಟಿ ಮಾಡೋದು, ಯಾವ ತಾಣಕ್ಕೆ ಭೇಟಿ ನೀಡುವುದು ಎಂದು ಆಲೋಚಿಸುತ್ತಾ ಇದ್ದೀರಾ? ಹಾಗಾದ್ರೆ ನಾವಿಂದು ಒಂದು ಸುಂದರ ದ್ವೀಪದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿ ನೀವು ಕ್ಯಾಂಪಿಂಗ್‌ ಮಾಡಬಹುದು. ಜೊತೆಗೆ ಪಾರ್ಟಿಯೂ ಮಾಡಬಹುದು. ಆ ದ್ವೀಪವೇ ಸೊಮಾಸಿಲ ದ್ವೀಪ.

ಎಲ್ಲಿದೆ ಈ ದ್ವೀಪ

ಎಲ್ಲಿದೆ ಈ ದ್ವೀಪ

ಸೊಮಾಸಿಲವು ತೆಲಂಗಾಣ ರಾಜ್ಯದ ಮಹುಬೂಬ್‌ನಗರ ಜಿಲ್ಲೆಯ ಕೊಲ್ಲಾಪುರ ಮಂಡಲ್‌ನಲ್ಲಿರುವ ಒಂದು ಗ್ರಾಮವಾಗಿದೆ. ಇದು ಮಹಬೂಬ್‌ನಗರದಿಂದ ದಕ್ಷಿಣದ ಕಡೆಗೆ 99 ಕಿಲೋಮೀಟರುಗಳಷ್ಟು ದೂರದಲ್ಲಿದೆಕೊಲ್ಲಪುರದಿಂದ 7 ಕಿ.ಮೀ. ದೂರದಲ್ಲಿದೆ.

ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆ ಚಾರಣ ಮಾಡಿದ್ದೀರಾ? ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆ ಚಾರಣ ಮಾಡಿದ್ದೀರಾ?

ನಿಜಾಮರ ಆಳ್ವಿಕೆಯ ಪ್ರದೇಶ

ನಿಜಾಮರ ಆಳ್ವಿಕೆಯ ಪ್ರದೇಶ

PC: youtube

ಕೊಲ್ಲಪುರವು ಹಿಂದೂ ಆಡಳಿತಗಾರರಿಂದ ಆಳಲ್ಪಟ್ಟ ನಿಜಾಮರ ಆಳ್ವಿಕೆಯ ಪ್ರದೇಶವಾಗಿತ್ತು. ಕೃಷ್ಣ ನದಿಯ ಉದ್ದಕ್ಕೂ ನಲ್ಲಮಲಾ ಪ್ರದೇಶದ ಬಹುತೇಕ ಭಾಗ ಕೊಲ್ಲಪುರದ ನಿಯಂತ್ರಣದಲ್ಲಿದೆ. 1871 ರಲ್ಲಿ ಕೊಲ್ಲಪುರ ಆಡಳಿತಗಾರರು ನಿರ್ಮಿಸಿದ ದೊಡ್ಡ ಅರಮನೆ ಇದೆ.

ಕ್ಯಾಂಪಿಂಗ್ ತಾಣ

ವಾರಾಂತ್ಯವನ್ನು ಕಳೆಯಲು ಉತ್ತಮ ತಾಣವಾಗಿದೆ. ಹೊಸವರ್ಷದ ಆಚರಣೆಗೆ , ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಸೂಕ್ತ ತಾಣವಾಗಿದೆ. ಈ ಸಣ್ಣ ದ್ವೀಪದಲ್ಲಿ ನೀವು ಬೋಟಿಂಗ್ ಮಾಡಬಹುದು. ಪಿಶಿಂಗ್ ಮಾಡಬಹುದು. ಕ್ಯಾಂಪಿಂಗ್ ಮಾಡಬಹುದು.

ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳುಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು

ಪಾರ್ಟಿ ಟೈಮ್

ಒಟ್ಟಾರೆ ಒಂದು ಅದ್ಭುತ ತಾಣವಾಗಿದೆ. ಇಲ್ಲಿನ ಇನ್ಫೈನೈಟ್ ಅಡ್ವೆಂಚರ್‌ ಕ್ಲಬ್ ಡಿ.೩೧ ರಂದು ಕ್ಯಾಂಪಿಂಗ್‌ನ್ನು ಆಯೋಜಿಸುತ್ತಿದೆ. ತುಂಗಭದ್ರ ನದಿಯು ಕೃಷ್ಣ ನದಿಯ ಜತೆ ಸೇರಿಕೊಂಡು ನಲ್ಲಮಳದ ಕಾಡುಗಳಿಗೆ ಹರಿಯುತ್ತದೆ.

ಪುಷ್ಕಾರ ಸ್ನಾನ

ಪುಷ್ಕಾರ ಸ್ನಾನ

PC: youtube

12 ವರ್ಷಗಳಿಗೊಮ್ಮೆ ಸೊಮಾಸಿಲ ಡ್ಯಾಮ್ ಬಳಿ ಆಚರಿಸಲಾಗುವ ಪುಷ್ಕಾರ ಸ್ನಾನವು ಬಹಳ ಪ್ರಾಧಾನ್ಯತೆಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸಾಕಷ್ಟು ಜನ ಭಕ್ತರು ಇಲ್ಲಿ ಬಂದು ಪುಷ್ಕರ ಸ್ನಾನ ಮಾಡುತ್ತಾರೆ.

ಮುನ್ನಾರ್‌ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು ಮುನ್ನಾರ್‌ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು

ಬೋಟಿಂಗ್

ಬೋಟಿಂಗ್

ತೆಲಂಗಾಣದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಬೋಟಿಂಗ್ ಅನ್ನು ಪ್ರಾರಂಭಿಸಲಾಗಿದೆ. ತೆಲಂಗಾಣ ರಾಜ್ಯ ಪ್ರವಾಸೋದ್ಯಮ ನಿಗಮವು (TSTDC) ರಾಜ್ಯಕ್ಕೆ ಭೇಟಿ ನೀಡುವವರನ್ನು ಆಕರ್ಷಿಸಲು ನವೀನ ಮಾರ್ಗಗಳನ್ನು ಕಂಡುಹಿಡಿದಿದೆ.

ಸೋಮೇಶ್ವರ ಸ್ವಾಮಿ ದೇವಾಲಯ

ಸೋಮೇಶ್ವರ ಸ್ವಾಮಿ ದೇವಾಲಯ

PC:youtube

ಇಲ್ಲಿ ಒಂದು ಪ್ರಸಿದ್ದ ಶ್ರೀ ಲಲಿತಾ ಸೋಮೇಶ್ವರ ಸ್ವಾಮಿ ದೇವಾಲಯವಿದೆ. 7 ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಶಿವನಿಗೆ ಅರ್ಪಿಸಲಾದ ಮಂದಿರ ಇದಾಗಿದೆ. ಇಲ್ಲಿ ಮಹಾಶಿವರಾತ್ರಿ ಮತ್ತು ಕಾರ್ತಿಕ ಪೌರ್ಣಮಿಯನ್ನು ಹೆಚ್ಚು ಧಾರ್ಮಿಕ ಉತ್ಸಾಹದಿಂದ ಆಚರಿಸಲಾಗುತ್ತದೆ.

ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ

ಕೊಲ್ಲಾಪುರ ಅರಮನೆ

ಕೊಲ್ಲಾಪುರ ಅರಮನೆ

ಸಂಕೀರ್ಣದಲ್ಲಿರುವ ಹಲವಾರು ಕಟ್ಟಡಗಳೊಂದಿಗೆ ಕೊಲ್ಲಾಪುರ ಅರಮನೆಯು ಭವ್ಯವಾದ ರಚನೆಯಾಗಿದೆ. ಅರಮನೆಯು ಮರದ ಬಾಗಿಲುಗಳಿಂದ ದೊಡ್ಡ ದ್ವಾರವನ್ನು ಹೊಂದಿದೆ. ಸಂಕೀರ್ಣದ ಒಳಗಡೆ ಸಾಕಷ್ಟು ತೆರೆದ ಪ್ರದೇಶವು ಆಡಳಿತ ಕಟ್ಟಡವಾಗಿ ಬಳಸಲಾಗುವ ಅದ್ಭುತ ಕಟ್ಟಡವನ್ನು ಹೊಂದಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಈ ಸೊಮಾಸಿಲ ದ್ವೀಪಕ್ಕೆ ಹೋಗಬೇಕಾದರೆ ಮೊದಲು ಪ್ರವಾಸಿಗರು ಕೊಲ್ಲಪುರವನ್ನು ತಲುಪಬೇಕು. ಕೊಲ್ಲಪುರವು ಹೈದರಾಬಾದ್‌ನಿಂದ 180 ಕಿಮೀ ನೈಋತ್ಯದಲ್ಲಿದೆ. ಹೈದರಾಬಾದ್‌ನಿಂದ ನೀವು ಕೊಲ್ಲಪುರಕ್ಕೆ ಬಸ್‌ ಆಥವಾ ನಿಮ್ಮ ಖಾಸಗಿ ವಾಹನದ ಮೂಲಕ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X