Search
  • Follow NativePlanet
Share
» »ಕನ್ಯಾಕುಮಾರಿಗೆ ಹೋಗಿ ಇದನ್ನೆಲ್ಲಾ ನೋಡಿದ್ದೀರಾ ?

ಕನ್ಯಾಕುಮಾರಿಗೆ ಹೋಗಿ ಇದನ್ನೆಲ್ಲಾ ನೋಡಿದ್ದೀರಾ ?

ನೀವು ತೀರ್ಥಯಾತ್ರೆಯ ಜೊತೆಗೆ ಸಮುದ್ರತೀರದ ಸೌಂದರ್ಯದ ಆನಂದವನ್ನು ಪಡೆಯಬೇಕೆಂದಿದ್ದರೆ ಕನ್ಯಾಕುಮಾರಿ ಬೆಸ್ಟ್ ತಾಣವಾಗಿದೆ. ತಮಿಳುನಾಡಿನ ದಕ್ಷಿಣ ತೀರದಲ್ಲಿರುವ ಕನ್ಯಾ , ಬಂಗಾಳಕೊಲ್ಲಿ ಹಾಗೂ ಅರಬೀ ಸಮುದ್ರದ ಸಂಗಮವನ್ನು ಕಾಣಬಹುದು. ಇಲ್ಲಿ 2ಸಮುದ್ರದ ಸಂಗಮವನ್ನು ಕಾಣಬಹುದು. ಇದು ಪ್ರತಿಯೋರ್ವ ಪ್ರವಾಸಿಗನಿಗೂ ಉತ್ತಮ ಅನುಭವವನ್ನು ನೀಡುತ್ತದೆ. ಕನ್ಯಾಕುಮಾರಿಯಲ್ಲಿ ತಿರುಗಾಡಲು ಇನ್ನೂ ಅನೇಕ ಸ್ಥಳಗಳಿವೆ. ಅವುಗಳು ಯಾವ್ಯಾವು ಎನ್ನುವುದನ್ನು ತಿಳಿಯಿರಿ.

ಕನ್ಯಾಕುಮಾರಿ ಮಂದಿರ

ಕನ್ಯಾಕುಮಾರಿ ಮಂದಿರ

PC: Kainjock

ಕನ್ಯಾಕುಮಾರಿ ಮಂದಿರವು ಇಲ್ಲಿನ ಪ್ರಸಿದ್ಧ ಪ್ರವಾಸಿತಾಣವಾಗಿದೆ. ಇಲ್ಲಿ ದೇವಿ ದೇವತೆಗಳ ಜೊತೆ ಅಲ್ಲಿನ ಸಮುದ್ರ ತಟದಲ್ಲಿ ಸಮುದ್ರ ತೀರದ ಆನಂದವನ್ನು ಸವಿಯಬಹುದು. ಸಮುದ್ರದ ಅಲೆಗಳು ಈ ದೇವಸ್ಥಾನಕ್ಕೆ ತಗುಲುತ್ತಾ ಇರುತ್ತದೆ.

ವಿವೇಕಾನಂದ ಸ್ಮಾರಕ

ವಿವೇಕಾನಂದ ಸ್ಮಾರಕ

PC: Nataraja

ಕನ್ಯಾಕುಮಾರಿ ಸಮುದ್ರದ ನಡುವೆ ಒಂದು ದೊಡ್ಡ ಬಂಡೆಗಲ್ಲಿನ ಮೇಲೆ ವಿವೇಕಾನಂದ ಸ್ಮಾರಕವನ್ನು ನಿರ್ಮಿಸಲಾಗಿದೆ. ಇಲ್ಲಿ ವಿವೇಕಾನಂದರ ಪ್ರತಿಮೆ ಕೂಡಾ ಇದೆ.

 ವಿವೇಕಾನಂದ ರಾಕ್

ವಿವೇಕಾನಂದ ರಾಕ್

PC: Babipal197414

ಕನ್ಯಾಕುಮಾರಿಯಲ್ಲಿ ಸಮುದ್ರದ ನಡುವೆ ಇರುವ ಇನ್ನೊಂದು ಬೃಹತ್ ಬಂಡೆಯ ಮೇಲೆ ವಿವೇಕಾನಂದ ಮೆಮೋರಿಯಲ್ ಇದೆ. ಈ ಬಂಡೆಯನ್ನು ವಿವೇಕಾನಂದ ರಾಕ್ ಎಂದು ಕರೆಯುತ್ತಾರೆ. ವಿವೇಕಾನಂದರು ಕನ್ಯಾಕುಮಾರಿಗೆ ಬಂದಿದ್ದಾಗ ಇದೇ ಬಂಡೇ ಮೇಲೆ ಕುಳಿತುಕೊಳ್ಳುತ್ತಿದ್ದರು ಎನ್ನಲಾಗುತ್ತದೆ. ಇಲ್ಲೇ ಅವರಿಗೆ ದಿವ್ಯ ಜ್ಞಾನ ಪ್ರಾಪ್ತಿಯಾಗಿದ್ದು ಎನ್ನಲಾಗುತ್ತದೆ.

ಗುಂಗಾನಾಥ್ ಮಂದಿರ

ಗುಂಗಾನಾಥ್ ಮಂದಿರ

PC: M.Mutta

ಗುಂಗಾನಾಥ್ ಮಂದಿರವು ಇಲ್ಲಿನ ಪ್ರಸಿದ್ಧ ಸ್ಥಳಗಳಲ್ಲಿ ಒಂದು . ಇದು ಸುಮಾರು 100ವರ್ಷಗಳ ಕಾಲ ಹಳೆಯ ಮಂದಿರ ಎನ್ನಲಾಗುತ್ತದೆ.

ಗಾಂಧಿ ಸ್ಮಾರಕ

ಗಾಂಧಿ ಸ್ಮಾರಕ

PC: PP Yoonus

ಇಲ್ಲೊಂದು ಗಾಂಧಿ ಸ್ಮಾರಕವಿದೆ. ಮಹಾತ್ಮ ಗಾಂಧಿಯ ಅಸ್ಥಿ ಕಲಶವನ್ನು ಇದೇ ಜಾಗದಲ್ಲಿಡಲಾಗಿತ್ತು. ಇಲ್ಲಿ ನೀವು ಗಾಂಧಿಗೆ ಸಂಬಂಧಿಸಿದ ವಸ್ತುಗಳನ್ನು ಕಾಣಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Omyekiae

ವಿಮಾನ ನಿಲ್ದಾಣ: ಕನ್ಯಾಕುಮಾರಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ತ್ರಿರುವನಂತಪುರಂ ವಿಮಾನ ನಿಲ್ದಾಣ. ಇದು ಕನ್ಯಾಕುಮಾರಿಯಿಂದ ಸುಮಾರು 95 ಕಿ.ಮೀ ದೂರದಲ್ಲಿದೆ. ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಟ್ಯಾಕ್ಸಿ, ಬಸ್ ಮೂಲಕ ತಲುಪಬಹುದು.

ರೈಲು ಮಾರ್ಗ: ಕನ್ಯಾಕುಮಾರಿಗೆ ರೈಲು ಮೂಲಕವೂ ಪ್ರಯಾಣಿಸಬಹುದು. ದೇಶದ ಎಲ್ಲಾ ಭಾಗಗಳಿಂದಲೂ ಇಲ್ಲಿಗೆ ರೈಲು ಸೇವೆ ಇದೆ. ಹಿಮಸಾಗರ್ ಎಕ್ಸ್‌ಪ್ರೆಸ್, ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಹಾಗೂ ಮಧುರೈ ಲಿಂಕ್ ಎಕ್ಸ್‌ಪ್ರೆಸ್ ಕನ್ಯಾಕುಮಾರಿಗೆ ಹೋಗುತ್ತದೆ.

Read more about: india travel kanyakumari tamilnadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X