Search
  • Follow NativePlanet
Share
» »ಬಾಹುಬಲಿ ಗುಹೆಗಳು ಇವೆನಾ?

ಬಾಹುಬಲಿ ಗುಹೆಗಳು ಇವೆನಾ?

ಪನ್ನಾ ಮಧ್ಯ ಪ್ರದೇಶ ರಾಜ್ಯದಲ್ಲಿ ವಜ್ರಗಳನ್ನು ಕಂಡುಹಿಡಿದ ಒಂದು ಅದ್ಭುತವಾದ ಪಟ್ಟಣವಾಗಿದೆ. ಪ್ರಪಂಚದಾದ್ಯಂತ ಪನ್ನಾದಲ್ಲಿ ಮಾತ್ರ ವಜ್ರಗಳು ಅತ್ಯಂತ ಸುಂದರವಾಗಿ ನಾಣ್ಯದ ರೂಪದಲ್ಲಿ ಇರುತ್ತದೆ ಎಂತೆ. ಪನ್ನಾ ಇಲ್ಲಿರುವ ರಾಷ್ಟ್ರೀಯ ಉದ್ಯಾನವನದಿ

ಪನ್ನಾ ಮಧ್ಯ ಪ್ರದೇಶ ರಾಜ್ಯದಲ್ಲಿ ವಜ್ರಗಳನ್ನು ಕಂಡುಹಿಡಿದ ಒಂದು ಅದ್ಭುತವಾದ ಪಟ್ಟಣವಾಗಿದೆ. ಪ್ರಪಂಚದಾದ್ಯಂತ ಪನ್ನಾದಲ್ಲಿ ಮಾತ್ರ ವಜ್ರಗಳು ಅತ್ಯಂತ ಸುಂದರವಾಗಿ ನಾಣ್ಯದ ರೂಪದಲ್ಲಿ ಇರುತ್ತದೆ ಎಂತೆ. ಪನ್ನಾ ಇಲ್ಲಿರುವ ರಾಷ್ಟ್ರೀಯ ಉದ್ಯಾನವನದಿಂದ ಪ್ರಸಿದ್ಧಗಳಿಸಿದೆ. ಇದೇ ಅಲ್ಲದೇ ಮತ್ತೊಂದು ಸುಂದರವಾದ ಸ್ಥಳವು ಕೂಡ ಪ್ರಸಿದ್ಧಿ ಪಡೆದಿದೆ. ಅದೇ ಪಾಂಡವರ ಗುಹೆ ಮತ್ತು ಜಲಪಾತಗಳು.

ಮಧ್ಯ ಪ್ರದೇಶ ರಾಜ್ಯದಲ್ಲಿರುವ ಪಟ್ಟಣದಲ್ಲಿ ಅತ್ಯಂತ ಸುಂದರವಾದ ಪಾರ್ಕ್‍ಗಳು, ಪಿಕ್ನಿಕ್ ಸ್ಥಳಗಳು ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಿಸುತ್ತದೆ. ಪನ್ನಾದಲ್ಲಿ ಪ್ರಧಾನವಾದ ಪ್ರವಾಸಿ ಆಕರ್ಷಣೆ ಎಂದರೆ ಅದು ಪನ್ನಾ ನ್ಯಾಷನಲ್ ಪಾರ್ಕ್. ದೇಶದಲ್ಲಿ ಇರುವ ಕೆಲವು ಹುಲಿಗಳ ಸ್ಥಾವರಗಳಲ್ಲಿ ಇದು ಕೂಡ ಒಂದಾಗಿದೆ. ಖಜರಾಹೋದಿಂದ ಈ ಪಾರ್ಕ್‍ಗೆ ನೀವು ಸುಲಭವಾಗಿ ತಲುಪಬಹುದು. ಇಲ್ಲಿ ತಂಗಲು ಹೋಟೆಲ್‍ಗಳು ಹಾಗು ರೆಸಾರ್ಟ್ ಕೂಡ ಇವೆ.

ಪನ್ನಾ ನ್ಯಾಷನಲ್ ಪಾರ್ಕ್

ಪನ್ನಾ ನ್ಯಾಷನಲ್ ಪಾರ್ಕ್

ಪನ್ನಾ ನ್ಯಾಷನಲ್ ಪಾರ್ಕ್, ಪನ್ನಾ ನಗರಕ್ಕೆ ಸಮೀದಲ್ಲಿದೆ. ಇದು ಮಧ್ಯ ಪ್ರದೇಶ ರಾಜ್ಯದ ಭಾಗವಾಗಿದೆ. ದೇಶದಲ್ಲಿಯೇ ಹೆಸರುವಾಸಿಯಾದ ಹುಲಿಗಳ ವಾಸಸ್ಥಾನಗಳಲ್ಲಿ ಇದೂ ಕೂಡ ಒಂದಾಗಿದ್ದು ಪ್ರಸಿದ್ಧಿಯನ್ನು ಪಡೆದಿದೆ. ಈ ನ್ಯಾಷನಲ್ ಪಾರ್ಕ್ ಹುಲಿಗಳು ಮತ್ತು ಆನೇಕ ಇತರ ಪ್ರಾಣಿಗಳನ್ನು ಕೂಡ ಕಾಣಬಹುದಾಗಿದೆ. ಈ ಸುಂದರವಾದ ಸ್ಥಳಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

Photo Courtesy: Janvi Singh

ಪನ್ನಾ ನ್ಯಾಷನಲ್ ಪಾರ್ಕ್

ಪನ್ನಾ ನ್ಯಾಷನಲ್ ಪಾರ್ಕ್

ಸಾಮಾನ್ಯವಾಗಿ ಪನ್ನಾ ನ್ಯಾಷನಲ್ ಪಾರ್ಕ್ ಕಾಣಲು ಅತ್ಯಂತ ಆಸಕ್ತಿಕರವಾಗಿರುತ್ತದೆ. ಇಂಡೋ-ಗಂಗಾ ಮೈದಾನಕ್ಕೆ ಸೇರಿದ ಈ ಪ್ರದೇಶವಾದ್ದರಿಂದ ಇಲ್ಲಿ ನೀವು ಎಂದೂ ಕಂಡಿರದ ಪ್ರಾಣಿ ಸಂಕುಲವನ್ನು ಕಂಡು ಆನಂದಿಸಬಹುದಾಗಿದೆ. ಈ ಪ್ರದೇಶ ಮೊದಲು ತೇಗದ ಮರದಿಂದ ಪ್ರಾರಂಭವಾಗುತ್ತದೆ.

ಪನ್ನಾ ನ್ಯಾಷನಲ್ ಪಾರ್ಕ್

ಪನ್ನಾ ನ್ಯಾಷನಲ್ ಪಾರ್ಕ್

ಪನ್ನಾ ನ್ಯಾಷನಲ್ ಪಾರ್ಕ್‍ನಲ್ಲಿ ಚಿರತೆಗಳು, ಆನೆಗಳು, ಗಂಭೀರವಾದ ಹುಲಿಗಳು ಮತ್ತು ಜಿಂಕೆಗಳನ್ನು ಕಾಣಬಹುದು. ಅಷ್ಟೇ ಅಲ್ಲದೇ ವಿವಿಧ ಪಕ್ಷಿಗಳು, ಗೂಬೆಗಳು ಮತ್ತು ಇತರ ಪಕ್ಷಿ ಸಂಕುಲವನ್ನು ಕಾಣಬಹುದಾಗಿದೆ.

Photo Courtesy: Yajuvendra Upadhyaya

ಕೆನ್ ಫುರಿಯಲ್ ಅಭಯಾರಣ್ಯ

ಕೆನ್ ಫುರಿಯಲ್ ಅಭಯಾರಣ್ಯ

ಕೆನ್ ಫುರಿಯಲ್ ಅಭಯಾರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಗೊರಿಲ್ಲಾಗಳನ್ನು ಸಂರಕ್ಷಿಸಲು ಸ್ಥಾಪಿಸಲಾದ ಅಭಯಾರಣ್ಯವಾಗಿದೆ. ಈ ಅಭಯಾರಣ್ಯದಲ್ಲಿ ನೋಡುವುದಕ್ಕೆ ಅತ್ಯಂತ ಸುಂದರವಾಗಿದೆ. ಸುತ್ತಲೂ ದಟ್ಟವಾದ ಅರಣ್ಯವನ್ನು ಹೊಂದಿದ್ದು, ಪನ್ನಾ ನಗರಕ್ಕೆ ಅತ್ಯಂತ ಸಮೀಪದಲ್ಲಿಯೇ ಇದೆ. ಈ ಅಭಯಾರಣ್ಯಕ್ಕೆ ಭೇಟಿ ನೀಡಿದರೆ 45 ಕಿ.ಮೀ ದೊಡ್ಡದಾಗಿರುವ ಒಂದು ನದಿಯನ್ನು ನೀವು ಕಾಣಬಹುದಾಗಿದೆ.

ಕೆನ್ ಫುರಿಯಲ್ ಅಭಯಾರಣ್ಯ

ಕೆನ್ ಫುರಿಯಲ್ ಅಭಯಾರಣ್ಯ

ಕೆನ್ ಫುರಿಯಲ್ ಅಭಯಾರಣ್ಯದಲ್ಲಿ 6 ಮೀಟರ್ ದೊಡ್ಡದಾದ ಗೊರಿಲ್ಲಾ, ಆನೇಕ ಸರಿಸೃಪಗಳು ಸುಂದರವಾದ ನದಿ, ನದಿಯ ಬಳಿ ಕೃಷ್ಣ ಜಿಂಕೆಗಳು, ಕಾಡು ಹಂದಿಗಳು, ನವಿಲುಗಳನ್ನು ಕಾಣಬಹುದು. ಮಕ್ಕಳು ಮತ್ತು ಪ್ರವಾಸಿಗರು ಈ ಅಭಯಾರಣ್ಯಕ್ಕೆ ತಪ್ಪದೇ ಭೇಟಿ ನೀಡಲೇಬೇಕು.

ಭೇಟಿಯ ಸಮಯ: ಬೆಳಗ್ಗೆಯಿಂದ ಸಾಯಂಕಾಲದವರೆಗೆ ಯಾವುದೇ ಸಮಯದಲ್ಲೂ ಪ್ರವೇಶ ಅವಕಾಶವಿರುತ್ತದೆ. ವರ್ಷದ ಪ್ರತಿ ದಿನ ಪ್ರವಾಸಿಗರಿಗೆ ಪ್ರವೇಶವನ್ನು ನೀಡಲಾಗುತ್ತದೆ.

Photo Courtesy: Karl O'Brien

ಪಾಂಡವರ ಗುಹೆಗಳು ಮತ್ತು ಜಲಪಾತಗಳು

ಪಾಂಡವರ ಗುಹೆಗಳು ಮತ್ತು ಜಲಪಾತಗಳು

ಪಾಂಡವರ ಗುಹೆಗಳು ಮತ್ತು ಜಲಪಾತಗಳು ಪನ್ನಾ ಪಟ್ಟಣಕ್ಕೆ ಸುಮಾರು 12 ಕಿ.ಮೀ ದೂರದಲ್ಲಿದೆ. ಅಷ್ಟೇ ಅಲ್ಲದೇ ನ್ಯಾಷನಲ್ ಪಾರ್ಕ್‍ಗೆ ಸಮೀಪದಲ್ಲಿ ಕೂಡ ಇದೆ. ಈ ಜಲಪಾತಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಕೂಡ ಇದೆ. ಹಾಗಾಗಿಯೇ ಸುಲಭವಾಗಿ ಈ ಸ್ಥಳಕ್ಕೆ ಸೇರಿಕೊಳ್ಳಬಹುದಾಗಿದೆ. ಇದೊಂದು ಅದ್ಭುತವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

Photo Courtesy: Sujith

ಪಾಂಡವರ ಗುಹೆಗಳು ಮತ್ತು ಜಲಪಾತಗಳು

ಪಾಂಡವರ ಗುಹೆಗಳು ಮತ್ತು ಜಲಪಾತಗಳು

ಮಾಸಗಳು ಎಂಬ ಯಾವುದೇ ಸಂಬಂಧವಿಲ್ಲದೇ ವರ್ಷದಲ್ಲಿ ಯಾವಾಗಲೂ ಪಾಂಡವರ ಜಲಪಾತವು ಧಾರಾಳವಾಗಿ ಪ್ರವಹಿಸುತ್ತಿರುತ್ತದೆ. ಜಲಪಾತವು ಸುಮಾರು 100 ಮೀಟರ್ ದೊಡ್ಡದಾಗಿರುತ್ತದೆ. ಮಳೆಗಾಲದ ಸಮಯದಲ್ಲಿ ಈ ಜಲಪಾತವನ್ನು ಭೇಟಿ ಮಾಡಬೇಕು ಎಂದಾದರೆ ಒಂದು ಅದ್ಭುತವಾದ ಅನುಭೂತಿಯನ್ನು ನೀವು ಪಡೆಯುವಿರಿ.

Photo Courtesy: Sujith

ಪಾಂಡವರ ಗುಹೆಗಳು

ಪಾಂಡವರ ಗುಹೆಗಳು

ಪುರಾಣಗಳ ಪ್ರಕಾರ ಬಹಿಷ್ಕರಣಕ್ಕೆ ಗುರಿಯಾದ ಪಾಂಡವರು ವನವಾಸ ಮಾಡುವ ಸಮಯದಲ್ಲಿ ಈ ಸ್ಥಳಲ್ಲಿ ಆಶ್ರಯ ಪಡೆದಿದ್ದರು ಎಂದು ತಿಳಿದುಬರುತ್ತದೆ. ಈ ಗುಹೆಗಳಲ್ಲಿ ಜಲಪಾತದ ಒಂದು ಭಾಗದಲ್ಲಿ ಕಾಲಿನ ಚಿಹ್ನೆಯನ್ನು ಗುರುತಿಸಬಹುದು. ಜಲಪಾತ ಹಾಗು ಅದರ ಪರಿಸರ ಪ್ರಾಂತ್ಯಗಳು ಪ್ರವಾಸಿಗರಿಗೆ ಪಿಕ್ನಿಕ್ ಸ್ಥಳವಾಗಿ ಆನಂದವನ್ನು ನೀಡುತ್ತದೆ.

Photo Courtesy: Joao Pedro Lopes

ಮಹಾಮತಿ ಸನ್ನಿಧಾನ

ಮಹಾಮತಿ ಸನ್ನಿಧಾನ

ಪನ್ನಾ ನಗರವು ಹಿಂದುಗಳಿಗೆ ಪವಿತ್ರವಾದ ನಗರವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ಮಹಾಮತಿ ಪ್ರನ್ನಾಥ ಸ್ವಯಂ ಸಂದೇಶವನ್ನು ಭೋದಿಸಿದರಂತೆ. ಅಷ್ಟೇ ಅಲ್ಲದೇ ಅವರ ಶಿಷ್ಯರ ಸಮೇತವಾಗಿ 13 ವರ್ಷಗಳ ಕಾಲ ಈ ಸ್ಥಳದಲ್ಲಿಯೇ ಜೀವಿಸಿದರಂತೆ.

Photo Courtesy: Manfred Sommer

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ವಿಮಾನ ಮಾರ್ಗದ ಮೂಲಕ
ಪನ್ನಾದಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಖಜರಾಹೋದಲ್ಲಿನ ಖಜರಾಹೋ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಪನ್ನಾ ಪಟ್ಣಣದಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಅತವಾ ಬಸ್ಸುಗಳ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರೈಲ್ವೆ ಮಾರ್ಗದ ಮೂಲಕ
ಪನ್ನಾದಲ್ಲಿ ರೈಲ್ವೆ ಸ್ಟೇಷನ್ ಇಲ್ಲ. ಹಾಗಾಗಿ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಖಜರಾಹೋ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 75 ಕಿ.ಮೀ ದೂರದಲ್ಲಿ ಪನ್ನಾ ಪಟ್ಟಣವಿದೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರಸ್ತೆ ಮಾರ್ಗವಾಗಿ
ಆನೇಕ ಸ್ಲಿಪರ್, ಎ.ಸಿ ಕೋಚ್ ಮುಂತಾದವುಗಳಿಂದ ದೆಹಲಿ, ಆಗ್ರಾ, ಝನ್ಸಿ, ಲಕ್ನೊ, ಫರಿದಾಬಾದ್, ವಾರಾಣಾಸಿ, ನಾಗ್ಪೂರ್ ಅಲಹಾಬಾದ್, ಇಂಡೋರ್, ಭೋಪಾಲ್ ಇನ್ನು ಹಲವಾರು ನಗರಗಳಿಂದ ಈ ಮಧ್ಯ ಪ್ರದೇಶದ ಪನ್ನಾ ಪಟ್ಟಣಕ್ಕೆ ರಸ್ತೆ ಸಂಪರ್ಕ ಸಾಧಿಸುತ್ತದೆ.

ಭೂ ಪ್ರಪಂಚವೆಲ್ಲವೂ ನೀರಿನಲ್ಲಿ ಮುಳುಗಿ ಹೋಗುತ್ತದೆ: 300 ವರ್ಷಗಳ ಹಳೆಯ ಏಕಪಾದ ಮೂರ್ತಿಭೂ ಪ್ರಪಂಚವೆಲ್ಲವೂ ನೀರಿನಲ್ಲಿ ಮುಳುಗಿ ಹೋಗುತ್ತದೆ: 300 ವರ್ಷಗಳ ಹಳೆಯ ಏಕಪಾದ ಮೂರ್ತಿ

ಋತುಚಕ್ರವಾಗುವ ದೇವಿಯ ದೇವಾಲಯ ಎಲ್ಲಿದೆ ಗೊತ್ತ?ಋತುಚಕ್ರವಾಗುವ ದೇವಿಯ ದೇವಾಲಯ ಎಲ್ಲಿದೆ ಗೊತ್ತ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X