Search
  • Follow NativePlanet
Share
» »ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ಪ್ರತಿಯೊಂದು ದೇವಸ್ಥಾನದಲ್ಲೂ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅನೇಕ ಪವಾಡಗಳು ನಡೆಯುತ್ತಲೇ ಇವೆ. ಪುರಾಣಗಳ ಕಾಲದಿಂದಲೂ ಇಂದಿಗೂ ಜನರು ಅದನ್ನು ನಂಬುತ್ತಾ ಬಂದಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲು ಅನೇಕ ಚಮತ್ಕಾರಗಳೂ ನಡೆಯುತ್ತಾ ಇವೆ. ಜನರು ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ದೇವರು ತಮ್ಮನ್ನು ಕಷ್ಟಗಳಿಂದ ಪಾರುಮಾಡುತ್ತಾನೆ ಎನ್ನುವ ನಂಬಿಕೆ ಜನರದ್ದು. ಅಂತಹ ಹಲವು ದೇವಸ್ಥಾನಗಳು ನಮ್ಮ ದೇಶದಲ್ಲಿವೆ. ಇಂದು ನಾವು ಅಂತಹದ್ದೇ ಒಂದು ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಬಂದು ಪೂಜೆ ಮಾಡುತ್ತಾರೆ.

ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಆಪತ್ಶಯೇಶ್ವರ ದೇವಸ್ಥಾನ

ಆಪತ್ಶಯೇಶ್ವರ ದೇವಸ್ಥಾನ

PC: Rasnaboy

ತಮಿಳುನಾಡಿನ ತಿರುವರೂರು ಜಿಲ್ಲೆಯ ಆಲಂಗುಡಿಯಲ್ಲಿರುವ ಆಪತ್ಶಯೇಶ್ವರ ದೇವಸ್ಥಾನ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಆಪತ್ಶಯೇಶ್ವರ ಅಂದರೆ ಕಷ್ಟಕಾಲದಲ್ಲಿ ರಕ್ಷಿಸುವವನು ಎಂದರ್ಥ. ಇದನ್ನು ಗುರು ಸ್ತಲಂ ಹಾಗು ತಿರು ಇರುಮ್ ಪುಲ್ಲೈ ಎಂದೂ ಕರೆಯಲಾಗುತ್ತದೆ.

ಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವುಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವು

ರಾಜ ಗೋಪುರ

ರಾಜ ಗೋಪುರ

PC: Ssriram mt

ದೇವಾಲಯದಲ್ಲಿನ ರಾಜ ಗೋಪುರದಲ್ಲಿ ಐದು ಪ್ರಮುಖ ಹಮತಗಳನ್ನು ಕಾಣಬಹುದು. ದೇವಾಲಯದ ಸಂಕೀರ್ಣವು ಎರಡು ಎಕರೆಗಳನ್ನು ಒಳಗೊಂಡಿದೆ. ಮಧ್ಯದಲ್ಲಿ ಆಪತ್ಶಯೇಶ್ವರನಿದ್ದಾನೆ. ಆಪತ್ಶಯೇಶ್ವರ ಗುಡಿಯ ಸುತ್ತಲು ಹಲವಾರು ದೇವರುಗಳ ಸನ್ನಿಧಿಯನ್ನು ಹೊಂದಿದೆ ಅವುಗಳಲ್ಲಿ ಮುಖ್ಯವಾದುದು ದಕ್ಷಿಣಮೂರ್ತಿಯ ಸನ್ನಿಧಿ ಹಾಗೂ ವಿನಾಯಕನ ಸನ್ನಿಧಿ.

ದೇವಾಲಯದ ಇತಿಹಾಸ

ದೇವಾಲಯದ ಇತಿಹಾಸ

PC: Rsmn

ಸುಮಾರು 1900 ವರ್ಷಗಳ ಹಿಂದೆ ನಿರ್ಮಿಸಿದ ಚೋಳ ರಾಜರು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ. ಈ ಸ್ಥಳದಲ್ಲೇ ದೇವಿ ಅಂಬಿಕೆಯು ತಪಸ್ಸು ಮಾಡುವ ಮೂಲಕ ಶಿವನ ರೂಪದಲ್ಲಿರುವ ಆಪತ್ಶಯೇಶ್ವರನನ್ನು ವಿವಾಹವಾಗಿದ್ದು ಎನ್ನಲಾಗುತ್ತದೆ.

 ಬ್ರಹ್ಮೋತ್ಸವ

ಬ್ರಹ್ಮೋತ್ಸವ

PC:Ssriram mt

ದೇವಾಲಯದಲ್ಲಿ ದಿನಕ್ಕೆ ಆರು ಬಾರಿ ಪೂಜೆ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 1 ಗಂಟೆ ಬರೆಗೆ ಹಾಗು ಸಂಜೆ 4.30ರಿಂದ ರಾತ್ರಿ 8.30ರವರೆಗೆ ದೇವಸ್ಥಾನ ತೆರೆದಿರುತ್ತದೆ. ಇಲ್ಲಿ ನಾಲ್ಕು ವಾರ್ಷಿಕ ಉತ್ಸವಗಳು ನಡೆಯುತ್ತವೆ. ಎಪ್ರಿಲ್-ಮೇ ತಿಂಗಳಲ್ಲಿ ಬ್ರಹ್ಮೋತ್ಸವ ನಡೆಯುತ್ತದೆ.

ನಾಗದೋಷ ಪರಿಹಾರ

ನಾಗದೋಷ ಪರಿಹಾರ

PC:Ravn

ಆಪತ್ಶಯೇಶ್ವರ ದೇವಸ್ಥಾನಕ್ಕೆ ಬಂದು ಇಲ್ಲಿನ ವಿನಾಯಕನ ಮೂರ್ತಿಯನ್ನು ಬೇಡಿಕೊಂಡರೆ ನಾಗದೋಷ ಪರಿಹಾರವಾಗುತ್ತಂತೆ. ಅಲ್ಲದೆ ಮದುವೆಗೆ ಸಂಬಂಧಿಸಿದ ಸಮಸ್ಯೆ, ಮಕ್ಕಳ ಸಮಸ್ಯೆ ದೂರವಾಗುತ್ತಂತೆ. ಹಾಗಾಗಿ ಅನೇಕ ಭಕ್ತರು ಆಪತ್ಶಯೇಶ್ವರ ದೇವಸ್ಥಾನಕ್ಕೆ ಬಂದು ವಿನಾಯಕನನ್ನು ಭಕ್ತಿಯಿಂದ ಪೂಜಿಸುತ್ತಾರೆ.

ತುಪ್ಪದ ದೀಪ

ತುಪ್ಪದ ದೀಪ

PC:Sreekumar K. S.

ಈ ದೇವಸ್ಥಾನದ ಇನ್ನೊಂದು ವಿಶೇಷತೆಯೆಂದರೆ ನೀವು ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪವನ್ನು ಹಚ್ಚಿದರೆ ನಿಮ್ಮ ಸಂಕಷ್ಟವೆಲ್ಲಾ ದೂರವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಇಲ್ಲಿನ ದಕ್ಷಿಣ ಮೂರ್ತಿ ದೇವರಿಗೆ 24ಸುತ್ತು ಬಂದು, ಹೂವನ್ನು ಅರ್ಪಿಸಿ ಸಿಹಿ ಪೊಂಗಲ್ ನೈವೇದ್ಯವಿಟ್ಟು, ಹಾಲಿನ ಅಭಿಷೇಕ ಮಾಡಿದ್ರೆ ನಿಮ್ಮ ಸಂಕಷ್ಟಗಳೆಲ್ಲಾ ದೂರವಾಗುತ್ತದೆ ಎನ್ನಲಾಗುತ್ತದೆ.

ಧಾರ್ಮಿಕ ದತ್ತಿ ಇಲಾಖೆ ನೋಡಿಕೊಳ್ಳುತ್ತಿದೆ

ಧಾರ್ಮಿಕ ದತ್ತಿ ಇಲಾಖೆ ನೋಡಿಕೊಳ್ಳುತ್ತಿದೆ

ಅಮವಾಸ್ಯೆ ಪೌರ್ಣಮಿಯಂದು ವಿಶೇಷ ಪೂಜೆ ನಡೆಯುತ್ತದೆ. ಈ ದೇವಾಲಯವನ್ನು16 ನೇ ಶತಮಾನದಲ್ಲಿ ಚೋಳರಿಂದ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಆದರೆ ಇದೀಗ ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಈ ದೇವಾಲಯವನ್ನು ನಿರ್ವಹಿಸುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X