Search
  • Follow NativePlanet
Share
» »ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಜೀವಿಗಳು

ವಿವಿಧ ಸ್ಥಳಗಳಲ್ಲಿ ಕಂಡುಬರುವ ವೈವಿಧ್ಯಮಯ ಜೀವಿಗಳು

By Vijay

ನೀವು ಪ್ರವಾಸ ಪ್ರೀಯರೆ, ಅದರಲ್ಲೂ ವಿಶೇಷವಾಗಿ ಕಾಡು-ಮೇಡು ಪ್ರದೇಶಗಳಲ್ಲಿ ಅಲೆದಾಡುತ್ತ, ಟ್ರೆಕ್ ಮಾಡುತ್ತ ಪ್ರಕೃತಿ ಸೌಂದರ್ಯದ ಜೊತೆಗೆ ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಪ್ರಾಣಿ, ಪಕ್ಷಿ ಹಾಗೂ ಇತರೆ ಜೀವಿಗಳನ್ನು ನೋಡಬಯಸಲು ಆಸಕ್ತಿಯುಳ್ಳ ಪ್ರವಾಸಿಗರೆ...ಹಾಗಿದ್ದಲ್ಲಿ ಪ್ರಸ್ತುತ ಲೇಖನವು ನಿಮಗೊಂದು ಒಳ್ಳೆಯ ಮಾಹಿತಿಗಳ ಕೈಪಿಡಿಯಾಗಬಹುದು.

ಹೌದು, ಭಾರತ ದೇಶವು ಉತ್ತರದಿಂದ ಹಿಡಿದು ದಕ್ಷಿಣದವರೆಗೂ ವೈವಿಧ್ಯಮಯವಾದ ಪ್ರದೇಶಗಳನ್ನು ಒಳಗೊಂಡಿದೆ. ಕೆಲವು ಮರಭೂಮಿಗಳಿಂದ ಕೂಡಿದ್ದರೆ ಇನ್ನೂ ಕೆಲವು ದಟ್ಟ ಹಸಿರಿನ ಗಿಡ-ಮರಗಳ ಕಾಡುಗಳಿಂದ ತುಂಬಿದೆ. ಕೆಲವು ಪ್ರಪಾತ-ಕಣಿವೆಗಳಿಂದ ಕೂಡಿದ್ದರೆ ಮತ್ತೆ ಕೆಲವು ಎತ್ತರದ ಬೆಟ್ಟಗುಡ್ಡಗಳಿಂದ ತುಂಬಿದೆ.

ವಿಶೇಷ ಲೇಖನ : ಪಶ್ಚಿಮ ಘಟ್ಟಗಳ ಅನನ್ಯ ಜೀವ ಸಂಕುಲ

ಹೀಗೆ ಪ್ರಕೃತಿಯ ವಿವಿಧ ಚಿತ್ತಾರಗಳನ್ನು, ವಿನ್ಯಾಸಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಳ್ಳುವುದರ ಮೂಲಕ ಆಸ್ವಾದಿಸಬಹುದು. ಇನ್ನೊಂದು ವಿಷಯವೆಂದರೆ ಪ್ರದೇಶಗಳ ಭೌಗೋಳಿಕತೆಯು ಭಿನ್ನವಾಗಿರುವಂತೆ ಅಲ್ಲಿನ ವಾತಾವರಣ, ಪರಿಸರಕ್ಕನುಗುಣವಾಗಿ ಬದುಕಿರುವ ವೈವಿಧ್ಯಮಯ ಜೀವ ಸಂಪತ್ತನ್ನೂ ಸಹ ಕಾಣಬಹುದು.

ನಮ್ಮಲ್ಲಿ ಬಹುತೇಕರು ಪಕ್ಷಿವೀಕ್ಷಣೆ, ಪ್ರಾಣಿ ವೀಕ್ಷಣೆ ಮಾಡ ಬಯಸುವ ಪ್ರವಾಸಿಗರಿದ್ದಾರೆಂದರೆ ತಪ್ಪಾಗಲಾರದು. ನಿಮಗೂ ಸಹ ಅಂತಹ ಬಯಕೆ ಇದ್ದಲ್ಲಿ, ಈ ಲೇಖನದಲ್ಲಿ ಕೊಡಲಾಗಿರುವ ಆಯಾ ಸ್ಥಳಗಳಿಗೆ ನಿಮಗೆ ಅವಕಾಶ ಲಭಿಸಿದಾಗ ತೆರಳಿ ಅಲ್ಲಿನ ಅಪರೂಪದ ಈ ಪ್ರಾಣಿ/ಜೀವಿಗಳನ್ನು ಕಾಣಬಹುದು. ಇನ್ನೊಂದು ವಿಷಯವೆಂದರೆ ಈ ಜೀವಿಗಳು ಆಯಾ ಸ್ಥಳಗಳಿಗೆ ಮಾತ್ರ ಸೀಮಿತವಾಗಿದ್ದು ಅಪಾಯದಂಚನಲ್ಲಿವೆ. ಹೀಗಾಗಿ ಇವುಗಳ ಕುರಿತು ಮಾಹಿತಿ ಪಡೆದು ಸಾಧ್ಯವಾದಷ್ಟರ ಮಟ್ಟಿಗೆ ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಸಮಾಜದಲ್ಲಿ ನಮ್ಮದೆ ಆದ ಒಂದು ಜವಾಬ್ದಾರಿ ನಿಭಾಯಿಸಿದಂತಾಗುತ್ತದೆ.

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಪಿಕಾಕ್ ಟ್ಯಾರಂಟುಲಾ : ನವಿಲಿನ ಗರಿಯ ಹಾಗೆ ಬಣ್ಣ ಬಣ್ಣದ ರೋಮಗಳಿಂದ ಅದರಲ್ಲೂ ವಿಶೇಷವಾಗಿ ನೀಳ ವರ್ಣದಿಂದ ಶೋಭಿತವಾಗಿರುವ ಈ ಜೇಡವು ಅಪಾಯದ ಅಂಚಿನಲ್ಲಿರುವ ಜೀವಿಯಾಗಿದೆ. ಆಂಧ್ರಪ್ರದೇಶದ ಎಲೆಯುದುರುವ ಕಾಡುಗಳಲ್ಲಿ ಮಾತ್ರವೆ ಈ ಅಪರೂಪದ ಜೇಡಗಳು ಕಂಡುಬರುತ್ತವೆ. ಮೊದಲನೆಯ ಬಾರಿ ಇದನ್ನು ಗೂಟಿಯ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಲಾಯಿತು. ಆದ್ದರಿಂದ ಇವುಗಳನ್ನು ಗೂಟಿ ಸಫೈರ್, ಗೂಟಿ ಜೇಡ/ಟ್ಯಾರಂಟುಲಾ ಎಂಬಿತ್ಯಾದಿ ಹೆಸರುಗಳಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Micha L. Rieser

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ರಾಮೇಶ್ವರಂ ಪ್ಯಾರಾಚೂಟ್ ಸ್ಪೈಡರ್ : ಇದು ಒಂದು ಬಗೆಯ ಜೇಡರ ಹುಳುವೆ ಆಗಿದೆ. ರಾಮೇಶ್ವರಂ ಆರ್ನಾಮೆಂಟಲ್ ಸ್ಪೈಡರ್ ಎಂತಲೂ ಕರೆಯಲ್ಪಡುವ ಈ ಜೇಡವು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಾಡು ಪ್ರದೇಶಗಳಲ್ಲಿ ಮಾತ್ರವೆ ಕಂಡುಬರುತ್ತವೆ. 2004 ರಲ್ಲಿ ಮೊದಲಬಾರಿಗೆ ರಾಮೇಶ್ವರಂನಲ್ಲಿರುವ ಹನುಮವಿಲಾಸಂ ದೇವಾಲಯದ ಬಳಿ ಆಂಡ್ರಿವ್ ಸ್ಮಿತ್ ಎಂಬುವವರಿಂದ ಈ ಜೇಡವನ್ನು ಪತ್ತೆ ಹಚ್ಚಲಾಯಿತು. ಇದು ಅಪಾಯದಂಚಿನಲ್ಲಿರುವ ಜೇಡವಾಗಿದೆ.

ಚಿತ್ರಕೃಪೆ: Zoological Survey of India

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ರಿವರ್ ಟೆರಾಪಿನ್ : ತಾಜಾ ನೀರಿನಲ್ಲಿ ಅಥವಾ ನದಿಗಳಲ್ಲಿ ಮಾತ್ರವೆ ಕಂಡುಬರುವ ಆಮೆಗಳಾಗಿವೆ ಇವು. ಭಾರತದಲ್ಲಿ ಕೇವಲ ಪಶ್ಚಿಮ ಬಂಗಾಳದ ಮ್ಯಾಂಗ್ರೋವ್ ಕಾಡುಗಳ ನದಿ ಪ್ರದೇಶಗಳಲ್ಲಿ ಹಾಗೂ ಒಡಿಶಾದ ಕೆಲ ಭಾಗಗಳ ನದಿ ನೀರಿನಲ್ಲಿ ಮಾತ್ರವೆ ಈ ಅಪರೂಪದ ಆಮೆಗಳು ಕಂಡುಬರುತ್ತವೆ. ಇವು ಗಂಭೀರವಾಗಿ ವಿನಾಶದಂಚಿನಲ್ಲಿರುವ ಆಮೆಗಳಾಗಿದ್ದು ಜೀವಶಾಸ್ತ್ರಪ್ರಿಯ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

ಚಿತ್ರಕೃಪೆ: wikipedia.

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಹೆರಾನ್ : ಇದೊಂದು ಅಪಾಯದಂಚಿನಲ್ಲಿರುವ ಹಕ್ಕಿ ಪ್ರಬೇಧವಾಗಿದೆ. ಮಯನ್ಮಾರ್, ನೇಪಾಳಗಳಲ್ಲಿ ಕಂಡುಬರುವ ಈ ಹಕ್ಕಿ ಭಾರತದ ಪೂರ್ವ ಹಿಮಾಲಯ ಪರ್ವತಗಳ ಬುಡದಲ್ಲಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಹಿಮಾಲಯದ ಚಾರಣ ಮಾಡುವ ಸಂದರ್ಭದಲ್ಲಿ ಈ ಹಕ್ಕಿಗಳು ಕಂಡುಬರುತ್ತವೆ.

ಚಿತ್ರಕೃಪೆ: Quartl

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಗ್ರೇಟ್ ಇಂಡಿಯನ್ ಬಸ್ಟಾರ್ಡ್ : ಅಷ್ಟೊಂದು ದೊಡ್ಡದಲ್ಲದಿದ್ದರೂ ಉಷ್ಟ್ರ ಪಕ್ಷಿಯಂತೆ ಕಂಡುಬರುವ ಭಾರತಕ್ಕೆ ಸೀಮಿತವಾದ ಈ ಹಕ್ಕಿಯು ಅಪಾಯದಂಚಿನಲ್ಲಿರುವ ಹಕ್ಕಿಯಾಗಿದೆ. ಐತಿಹಾಸಿಕವಾಗಿ ಈ ಹಕ್ಕಿಯು ಮೊದ ಮೊದಲು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಹರ್ಯಾಣ, ಗುಜರಾತ್ ಮುಂತಾದೆಡೆಯೆಲ್ಲ ಸಾಮಾನ್ಯವಾಗಿ ಕಂಡುಬರುತ್ತಿತ್ತು. ನಶಿಸಿ ಹೋದ ಆಶ್ರಯ ಹಾಗೂ ಅನಧಿಕೃತ ಬೇಟೆಯಿಂದಾಗಿ ಇಂದು ಹಕ್ಕಿಗಳು ಕರ್ನಾಟಕ, ಆಂಧ್ರ, ಮಹಾರಾಷ್ಟ್ರದ ಕೆಲವೆ ಕೆಲವು ನಿರ್ಜನ ಪ್ರದೇಶಗಳಲ್ಲಿ ಮಾತ್ರವೆ ಕಾಣಸಿಗುತ್ತವೆ. ಹಾಗಾದರೆ ನೀವೇನಾದರೂ ಕರ್ನಾಟಕದ ಅಭಯಾರಣ್ಯಗಳಿಗೆ ಸಫಾರಿಗೆಂದು ಹೋದರೆ ಇವುಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Prajwalkm

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಫಾರೆಸ್ಟ್ ಔಲೆಟ್ : ಅಳಿದು ಹೋಗಬಹುದಾದ ಸ್ಥಿತಿಯಲ್ಲಿರುವ ಈ ಅಪರೂಪದ ಗೂಬೆಗಳು ಭಾರತಕ್ಕೆ ಮಾತ್ರವೆ ಸೀಮಿತವಾಗಿವೆ. ಅದರಲ್ಲೂ ವಿಶೇಷವಾಗಿ ಈ ಗೂಬೆಗಳು ಮಹಾರಾಷ್ಟ್ರದ ಕಾಡುಗಳು, ಆಗ್ನೇಯ ಮಧ್ಯ ಪ್ರದೇಶ ಅಥವಾ ಪಶ್ಚಿಮ ಒಡಿಶಾ ರಾಜ್ಯಗಳ ಕಾಡುಗಳಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Ashahar alias Krishna Khan

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಇಂಡಿಯನ್ ವಲ್ಚರ್ : ಅಪಾಯದಂಚಿನಲ್ಲಿರುವ ಈ ರಣಹದ್ದುಗಳು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಎತ್ತರದ ಬೆಟ್ಟಗಳ ಮೊನಚಾದ ತಿರುವುಗಳಲ್ಲಿ ಇವು ವಾಸಿಸುತ್ತವೆ. ಕರ್ನಾಟಕದ ರಾಮನಗರದ ಬಳಿಯಿರುವ ಬೆಟ್ಟಗಳ ಮೇಲಿನ ಬಂಡೆಗಳಲ್ಲಿಯೂ ಈ ಹದ್ದುಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Yann

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಜೆರ್ಡಾನ್ಸ್ ಕೌರ್ಸರ್ : ಈ ಒಂದು ಪುಟ್ಟ ಪಕ್ಷಿಯು ನಿಶಾಚಾರಿಯಾಗಿ ಅಪಾಯದಂಚಿನಲ್ಲಿರುವ ಜೀವಿಯಾಗಿದೆ. ಥಾಮಸ್ ಜೆರ್ಡಾನ್ ಅವರಿಂದ 1848 ರಲ್ಲಿ ಮೊದಲ ಬಾರಿಗೆ ಶೋಧಿಸಲ್ಪಟ್ಟಿತ್ತು. ನಂತರ ಇದು ಅಲೀಯಿತೆಂದು ನಂಬಲಾಯಿತಾದರೂ ಮತ್ತೆ 1986 ರಲ್ಲಿ ಆಂಧ್ರಪ್ರದೇಶದಲ್ಲಿ ಕಂಡುಬಂದಿತು. ಆಂಧ್ರದ ಕಡಪಾ ಜಿಲ್ಲೆಯಲ್ಲಿರುವ ಶ್ರೀ ಲಂಕಮಲ್ಲೇಶ್ವರ ಅಭಯಾರಣ್ಯದ ಪ್ರದೇಶಗಳಲ್ಲಿ ಇದನ್ನು ಅಪರೂಪವಾಗಿ ಕಾಣಬಹುದು.

ಚಿತ್ರಕೃಪೆ: PJeganathan

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಗ್ಯಾಂಜೇಸ್ ಶಾರ್ಕ್ ಮೀನು : ಸಾಮಾನ್ಯವಾಗಿ ಶಾರ್ಕ್ ಮೀನುಗಳು ಹೆಚ್ಚಾಗಿ ಸಮುದ್ರ ನೀರಿನಲ್ಲಿ ಕಂಡುಬರುತ್ತವೆಯಾದರೂ ಕೆಲವು ಜಾತಿಯ ಮೀನುಗಳು ತಾಜಾ ನೀರಿನ ನದಿಗಳಲ್ಲಿಯೂ ಸಹ ಕಂಡುಬರುತ್ತವೆ. ಅಂತಹ ಶಾರ್ಕು ಮೀನುಗಳ ಪೈಕಿ ಒಂದಾಗಿದೆ ಅಪಾಯದಂಚಿನಲ್ಲಿರುವ ಗಂಗಾ ನದಿಯಲ್ಲಿ ಕಂಡುಬರುವ ಈ ಶಾರ್ಕು ಮೀನುಗಳು. ಪೂರ್ವ ಪ್ರದೇಶಗಳಾದ ಬಿಹಾರ, ಪಶ್ಚಿಮಬಂಗಾಳು, ಅಸ್ಸಾಂ ಹಾಗೂ ಒಡಿಶಾದ ನದಿಗಳಲ್ಲಿ ಈ ಅಪರೂಪದ ಮೀನುಗಳು ಕಂಡುಬರುತ್ತವೆ. ಅದರಲ್ಲೂ ವಿಶೇಷವಾಗಿ ಕೊಲ್ಕತ್ತಾದ ಹೂಗ್ಲಿ ನದಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಚಿತ್ರಕೃಪೆ: Zoological Survey of India

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಸ್ಕಿಂಕ್ : ಬರ್ಕುಡಿಯಾ ಇನ್ಸುಲಾರಿಸ್ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದ ಇದು ಹಲ್ಲಿ ಜಾತಿಯ ಕೈಕಾಲುಗಳಿಲ್ಲದ ಜೀವಿಯಾಗಿದೆ. ಹಾವು ಅಥವಾ ಮಳೆಹುಳುವಿನಂತೆ ಕಂಡುಬರುವ ಈ ಜೀವಿಯು ಒಡಿಶಾ ರಾಜ್ಯದಲ್ಲಿರುವ ಪ್ರವಾಸಿ ಆಕರ್ಷಣೆಯುಳ್ಳ ಲಗೂನ್ (ಕ್ಷಾರ ನೀರಿನ ಸರೋವರ) ಚಿಲ್ಕಾ ಕೆರೆಯ ಬರ್ಕುಡ್ ಎಂಬ ದ್ವೀಪಗಳಲ್ಲಿ ಮಾತ್ರವೆ ಕಂಡುಬರುತ್ತವೆ. ಇದು ಅಪಾಯದಂಚಿನಲ್ಲಿರುವ ಜೀವಿಯಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Ltshears

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಕೆಂಪು ಕಿರೀಟದ ಆಮೆ : ಭಾರತದಲ್ಲಿ ಉತ್ತರ ಭಾರತದ ಆಳವಾದ ಹರಿಯುವ ನದಿಗಳಲ್ಲಿ ಮಾತ್ರವೆ ಈ ಅಪರೂಪದ ಆಮೆಗಳು ಕಂಡುಬರುತ್ತವೆ. ಮಾಂಸ, ಕವಚಗಳಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಈ ಆಮೆಗಳನ್ನು ಬೇಟೆಯಾಡಲಾಗಿದ್ದು, ಇಂದು ಇವು ಅವಸಾನದ ಅಂಚಿನಲ್ಲಿವೆ. ಚಪ್ಪಟೆಯಾದ ಕವಚ ಹೊಂದಿದ್ದು ತಲೆಯ ಮೇಲಿನ ಭಾಗವು ಕೆಂಪು ಬಣ್ಣದ ವಿನ್ಯಾಸದಿಂದ ಕೂಡಿರುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Nandini Velho

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಹಾವ್ಕ್ಸ್ ಬಿಲ್ ಸಮುದ್ರದಾಮೆ : ಈ ಸಮುದ್ರದಾಮೆಗಳು ಜಪಾನ್, ಆಸ್ಟ್ರೇಲಿಯಾ, ನಿವ್ಜಿಲ್ಯಾಂಡ್ ದೇಶಗಳ ಕರಾವಳಿಗಳಲ್ಲಿ ಕಂಡುಬರುತ್ತಾವಾದರೂ ಭಾರತದ ಮಟ್ಟಿಗೆ ಹವಳದ ದಿಬ್ಬಗಳುಳ್ಳ ಲಕ್ಷದ್ವೀಪ, ಹಿಂದುಮಹಾಸಾಗರಗಳಲ್ಲಿಯೂ ಕಂಡುಬರುತ್ತವೆ. ಪ್ರವಾಸಿ ಚಟುವಟಿಕೆಗಳಲ್ಲೊಂದಾದ ಸ್ಕೂಬಾ ಡೈವಿಂಗ್ ಮಾಡುವಾಗ ಅದೃಷ್ಟವಿದ್ದರೆ ಈ ಆಮೆಗಳನ್ನು ಕಾಣಬಹುದು. ಇವು ಅಪಾಯದಂಚಿನಲ್ಲಿರುವ ಸಂತತಿಯ ಆಮೆಗಳಾಗಿವೆ.

ಚಿತ್ರಕೃಪೆ: Jamaican college grad

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಘಡೀಯಾಲ್ : ಇವು ಒಂದು ಪ್ರಬೇಧದ ಮೀನುಗಳನ್ನು ತಿಂದು ಬದುಕುವ ಮೊಸಳೆಗಳಾಗಿವೆ. ಇವು ಸಾಮಾನ್ಯವಾಗಿ ಪಾಕಿಸ್ತಾನದ ಇಂಡಸ್ ನದಿ, ಬಾಂಗ್ಲಾ ದೇಶದ ಭಾಗದಲ್ಲಿ ಹರಿದಿರುವ ಬ್ರಹ್ಮಪುತ್ರಾ ನದಿ ಹಾಗೂ ಭಾರತದ ಕೆಲವು ನದಿಗಳಲ್ಲಿದ್ದರೂ ಪ್ರಸ್ತುತ ಮೊದಲೆರಡು ಭಾಗಗಳ ನದಿಗಳಲ್ಲಿ ಇವುಗಳ ಸಂತತಿ ನಶಿಸಿ ಹೋಗಿದ್ದು ಕೇವಲ ಭಾರತದಲ್ಲಿರುವ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳ ಗಡಿಗಳಲ್ಲಿ ಹರಿದಿರುವ ಚಂಬಲ್ ನದಿಯ ಭಾಗವಾಗಿರುವ ರಾಷ್ಟ್ರೀಯ ಚಂಬಲ್ ಅಭಯಾರಣ್ಯ ಹಾಗೂ ಉತ್ತರ ಪ್ರದೇಶದ ಕತರ್ನಿಯಾಘಾಟ್ ಅಭಯಾರಣ್ಯಗಳಲ್ಲಿ ಕಂಡುಬರುವ ಅಪಾಯದಂಚಿನಲ್ಲಿರುವ ಜೀವಿಗಳಾಗಿವೆ.

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ದತ್ತಾತ್ರೇಯ ನೈಟ್ ಫ್ರಾಗ್ : ಅಯ್ಯೊ ಇದೇನಿದು ಹೆಸರು ಈ ರೀತಿಯಾಗಿದೆ ಎಂದು ಅಚ್ಚರಿಯಾಗಿರಬೇಕಲ್ಲವೆ? ಹೌದು, ಇದನ್ನು ವೈಜ್ಞಾನಿಕವಾಗಿ ದತ್ತಾತ್ರೇಯ ನೈಟ್ ಫ್ರಾಗ್ ಅಂದರೆ ರಾತ್ರಿಯಲ್ಲಿ ಚಟುವಟಿಕೆಯಿಂದಿರುವ ಕಪ್ಪೆ ಎಂದೆ ಹೆಸರಿಸಲಾಗಿದೆ. ಇಲ್ಲಿಯವೆರೆಗೆ ಇದು ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ದತ್ತಾತ್ರೇಯ ಪೀಠ (ಬಾಬಾ ಬುಡನ್ ಗಿರಿ) ದ ಆಸು ಪಾಸಿನ ಸ್ಥಳಗಳಲ್ಲಿ ಮಾತ್ರವೆ ಕಂಡುಬಂದಿರುವುದರಿಂದ ಈ ಹೆಸರನ್ನಿಡಲಾಗಿದೆ. ನೀವು ಬಾಬಾ ಬುಡನ್ ಗಿರಿಗೇನಾದರೂ ಪ್ರವಾಸ ಕೈಗೊಂಡಾಗ ಈ ಕಪ್ಪೆಯನ್ನೊಮ್ಮೆ ಹುಡುಕಲು ಪ್ರಯತ್ನಿಸಿ ನೋಡಿ.

ಚಿತ್ರಕೃಪೆ: Karthickbala

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಅಂಬೋಲಿ ಪೊದೆ ಕಪ್ಪೆ : ಇದೂ ಸಹ ಒಂದು ವಿಶಿಷ್ಟವಾದ ಚಿಕ್ಕ ಕಪ್ಪೆಯಾಗಿದೆ. ಮುಖ್ಯವಾಗಿ ಇದು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿರುವ ಸುಂದರ ಗಿರಿಧಾಮ ಹಾಗೂ ಪ್ರವಾಸಿ ಪ್ರಖ್ಯಾತಿಯ ಅಂಬೋಲಿಯಲ್ಲಿ ಕಂಡುಬರುವುದರಿಂದ ಈ ಹೆಸರು ಬಂದಿದೆ. ಅಲ್ಲದೆ ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಲೋಂಡಾ, ಕ್ಯಾಸಲ್ ರಾಕ್ ಹಾಗೂ ಜೋಗ ಜಲಪಾತ, ಕುದುರೆಮುಖ, ಮಾವಿನಗುಡಿ ಕಂಡುಬರುತ್ತದೆ.

ಚಿತ್ರಕೃಪೆ: Chinmayisk

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ನಮ್ದಫಾ ಹಾರುವ ಅಳಿಲು : ಈ ಅಳಿಲುಗಳು ಇತರೆ ಸಾಮಾನ್ಯ ಅಳಿಲುಗಳಂತಿದ್ದರೂ ಭೌತಿಕವಾಗಿ ಕೆಲವು ಶಾರೀರಿಕ ಬದಲಾವಣೆಗಳನ್ನು ಹೊಂದಿವೆ. ಮುಂಗಾಲು ಹಾಗೂ ಹಿಂಗಾಲುಗಳನ್ನು ಬೆಸೆಯುವ ಒಂದು ಪರದೆಯಂತಹ ರಚನೆ ಹೊಂದಿದ್ದು, ಗಾಳಿಯಲ್ಲಿ ಕೆಲ ಕ್ಷಣಗಳವರೆಗೆ ಹಾರಲು ನೆರವಾಗುತ್ತವೆ. ಆದ್ದರಿಂದ ಇವುಗಳನ್ನು ಹಾರುವ ಅಳಿಲುಗಳೆನ್ನುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: vil.sandi

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಈಶಾನ್ಯ ಭಾರತದ ಕಾಡುಗಳಲ್ಲಿ ಮಾತ್ರವೆ ಕಂಡುಬರುವ ಈ ಅಳಿಲುಗಳು ಮಾಂಸ ಹಾಗೂ ಉಣ್ಣೆಗಳಿಗಾಗಿ ಹೆಚ್ಚು ಬೇಟೆಯಾಡಲ್ಪಟ್ಟಿದ್ದು ಇಂದು ಅವಸಾನದ ಅಂಚಿನಲ್ಲಿವೆ. ಅರುಣಾಚಲಪ್ರದೇಶ ರಾಜ್ಯದಲ್ಲಿರುವ ನಮ್ದಫಾ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬರುವುದರಿಂದ ಇವುಗಳನ್ನು ನಮ್ದಫಾ ಹಾರುವ ಅಳಿಲು ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Pratikppf

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಹಿಮಾಲಯನ್ ತೋಳ : ಅತ್ಯಂತ ಶೀತಮಯ ಪ್ರದೇಶಗಳಲ್ಲಿ ಬದುಕಲು ರೂಪಗೊಂಡಂತಹ ತೋಳ ಇದಾಗಿದೆ. ಜಮ್ಮು-ಕಾಶ್ಮೀರ ರಾಜ್ಯದ ಉತ್ತರ ಭಾಗದ ಪರ್ವತ ಪ್ರದೇಶಗಳು ಹಾಗೂ ಇತ್ತೀಚೆಗೆ ಹಿಮಾಚಲಪ್ರದೇಶದ ಸ್ಪಿತಿ ಕಣಿವೆಗಳಲ್ಲಿ ಕಂಡುಬಂದಿರುವ ಅಪರೂಪದ ತೋಳುಗಳು ಇವಾಗಿವೆ. ದಾರ್ಜೀಲಿಂಗ್ ನ ಪ್ರಾಣಿ ಸಂಗ್ರಹಾಲಯದಲ್ಲಿರುವ ಹಿಮಾಲಯನ್ ತೋಳಗಳು.

ಚಿತ್ರಕೃಪೆ: PROshankar s.

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಎಲ್ವಿರಾ ಇಲಿ : ತಮಿಳುನಾಡಿನಲ್ಲಿ ಹರಡಿರುವ ಪೂರ್ವಘಟ್ಟಗಳು ಪ್ರವಾಸಿ ಆಕರ್ಷಣೆಗಳುಳ್ಳ ಬೆಟ್ಟ ಶ್ರೇಣಿಯಾಗಿದೆ. ಚಾರಣದಂತಹ ಚಟುವಟಿಕೆಗಳಿಗೂ ಸಹ ಪೂರ್ವ ಘಟ್ಟಗಳು ಅವಕಾಶ ಒದಗಿಸಿವೆ. ನಿಮಗೇನಾದರೂ ತಮಿಳುನಾಡಿನ ಪೂರ್ವಘಟ್ಟಗಳಲ್ಲಿ ಪ್ರವಾಸ ಅಥವಾ ಚಾರಣ ಮಾಡುವ ಅವಕಾಶ ದೊರೆಯಿತೆಂದರೆ ಈ ವಿಶಿಷ್ಟ ಜಾತಿಯ ಇಲಿಗಳನ್ನು ನೋಡಲು ಮರೆಯದಿರಿ. ಏಕೆಂದರೆ ಈ ಇಲಿಗಳು ಕೇವಲ ಪೂರ್ವಘಟ್ಟಗಳಲ್ಲಿ ಮಾತ್ರವೆ ಕಂಡುಬರುವ ಜೀವಿಗಳಾಗಿದ್ದು ಪ್ರಸ್ತುತ ವಿನಾಶದ ಅಂಚಿನಲ್ಲಿವೆ.

ಚಿತ್ರಕೃಪೆ: Michael Barritt & Karen May

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಅಂಡಮಾನ್ ಶ್ರಿವ್ : ಭಾರತದ ಅಂಡಮಾನ್ ದ್ವೀಪಗಳಲ್ಲಿ ಮಾತ್ರವೆ ಕಂಡುಬರುವ, ಇಲಿ ಜಾತಿಗೆ ಸೇರಿದ ಒಂದು ಸಸ್ತನಿ ಇದಾಗಿದೆ. ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಚಟುವಟಿಕೆಯಿಂದಿರುವ ಈ ಸಸ್ತನಿಯು ಅಪಾಯದಂಚಿನಲ್ಲಿರುವ ಜೀವಿಯಾಗಿದೆ.

ಚಿತ್ರಕೃಪೆ: Zoological Survey of India

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಕೊಂದಾನಾ ಮೆದು ಚರ್ಮದ ಇಲಿ : ಇದು ಗತಿಸಿ ಹೋಗಬಹುದಾದ ಜೀವಿಗಳಲ್ಲಿ ಹೆಸರುಪಡೆದುಕೊಂಡಿದೆ. ಈ ಇಲಿಗಳು ಮಹಾರಾಷ್ಟ್ರದ ಸಿಂಹಗಡ್ ಪ್ರದೇಶದ ಬೆಟ್ಟ ಗುಡ್ಡಗಳ ವಲಯದಲ್ಲಿ ಮಾತ್ರವೆ ಕಂಡುಬರುತ್ತವೆ.

ಚಿತ್ರಕೃಪೆ: Zoological Survey of India

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಪಿಗ್ಮಿ ಹಾಗ್ : ಇದೊಂದು ಹಂದಿಯ ಜಾತಿಗೆ ಸೇರಿದ ಸಸ್ತನಿಯಾಗಿದೆ. ಸಾಮಾನ್ಯವಾಗಿ ಶ್ವೇತ ವರ್ಣದ ಹಂದಿಗಳನ್ನು ಹಾಗ್ ಎಂದು ಕರೆಯುತ್ತಾರೆ. ಆದರೆ ಇವು ಪಿಗ್ಮಿಗಳಂತೆ ಅಂದರೆ ಕುಬ್ಜವಾಗಿರುವುದರಿಂದ ಇವುಗಳನ್ನು ಪಿಗ್ಮಿ ಹಾಗ್ ಗಳೆಂದೆ ಕರೆಯುತ್ತಾರೆ. ಮೊದಲಿಗೆ ಇವು ಭಾರತ, ನೇಪಾಳ ಹಾಗೂ ಬರ್ಮಾಗಳಲ್ಲಿ ಕಂಡುಬರುತ್ತಿದ್ದವಾದರೂ ಪ್ರಸ್ತುತ ಭಾರತದ ಅಸ್ಸಾಂ ರಾಜ್ಯದಲ್ಲಿ ಮಾತ್ರವೆ ಕಂಡುಬರುತ್ತವೆ. ಅಲ್ಲದೆ ಇಡಿ ಪ್ರಪಂಚದಲ್ಲೆ ಇದರ ಗಣತಿಯು 160 ನ್ನೂ ಸಹ ಮೀರುವುದಿಲ್ಲ.

ಚಿತ್ರಕೃಪೆ: Joydeep Chakrabarty

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ನಾರ್ಕೊಂಡಮ್ ಹಾರ್ನ್ ಬಿಲ್ : ಅಂಡಮಾನ್ ದ್ವೀಪದಲ್ಲಿರುವ ನಾರ್ಕೊಂಡಂ ಎಂಬ ನಡುಗಡ್ಡೆಯ ಪ್ರದೇಶಗಳಲ್ಲಿ ಕಂಡುಬರುವ ಅಪರೂಪದ ಹಾರ್ನ್ ಬಿಲ್ ಪಕ್ಷಿಯಾಗಿದೆ. ಅಪಾಯದಂಚಿನಲ್ಲಿರುವ ಈ ಹಕ್ಕಿಗಳು ನೋಡಲು ಆಕರ್ಷಕವಾಗಿರುತ್ತವೆ.

ಚಿತ್ರಕೃಪೆ: Kalyan Varma

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಏಷಿಯನ್ ಸಿಂಹ : ಗುಜರಾತ್ ರಾಜ್ಯದ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಮೃಗರಾಜನೆಂದು ಖ್ಯಾತವಾದ ಈ ಅದ್ಭುತ ಸಿಂಹಗಳನ್ನು ಕಾಣಬಹುದಾಗಿದೆ. ಸಫಾರಿ ಸಮಯದಲ್ಲಿ ಈ ಸಿಂಹಗಳು ಸ್ವಚ್ಚಂದವಾಗಿ ತಮ್ಮ ನೆಲೆಯಲ್ಲಿ ವಾಸಿಸುವುದನ್ನು ಕಾಣಬಹುದು. ಈ ಸಿಂಹಗಳು ಅಪಾಯದಂಚಿನಲ್ಲಿದ್ದರೂ ಇತ್ತೀಚಿನ ಕೆಲ ವರ್ಷಗಳಿಂದ ಸರ್ಕಾರವು ತೆಗೆದುಕೊಂಡ ಸಂರಕ್ಷಣಾ ಕ್ರಮಗಳ ಫಲವಾಗಿ ಇವುಗಳ ಸಂತತಿಯು ವೃದ್ಧಿಸುತ್ತಿದೆ.

ಚಿತ್ರಕೃಪೆ: Asim Patel

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ವಿವಿಧ ಸ್ಥಳಗಳ ಅದ್ಭುತ ಜೀವಿಗಳು:

ಬಂಗಾಳ ಹುಲಿ : ಭಾರತದ ಪಶ್ಚಿಮ ಬಂಗಾಳದಲ್ಲಿ ಮಾತ್ರವೆ ಕಂಡುಬರುವ ಈ ಅದ್ಭುತ ಹುಲಿಗಳು "ರಾಯಲ್ ಬೆಂಗಾಲ್ ಟೈಗರ್ಸ್" ಎಂತಲೂ ಸಹ ಕರೆಯಲ್ಪಡುತ್ತವೆ. ಬಾಂಗ್ಲಾದೇಶ ಹಾಗೂ ಭಾರತದ ಸುಂದರಬನ್ ನ ಮ್ಯಾಂಗ್ರೋವ್ ಕಾಡುಗಳಲ್ಲಿ ಕಂಡುಬರುವ ಪ್ರಪಂಚದಲ್ಲಿ ಏಕೈಕ ಹುಲಿಗಳು ಬಂಗಾಳ ಹುಲಿಗಳಾಗಿವೆ. ಇದು ಭಾರತ ಹಾಗೂ ಬಾಂಗ್ಲಾ ದೇಶದ ರಾಷ್ಟ್ರೀಯ ಪ್ರಾಣಿಯೂ ಹೌದು.

ಚಿತ್ರಕೃಪೆ: FlickreviewR

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X