• Follow NativePlanet
Share
» »ಜಮ್ಮು ಮತ್ತು ಕಾಶ್ಮೀರದ ಅತ್ಯದ್ಬುತ ಭೂ ಪ್ರದೇಶವನ್ನು ಅಲಂಕರಿಸುವ ಪ್ರಾಚೀನ ಕೋಟೆಗಳು

ಜಮ್ಮು ಮತ್ತು ಕಾಶ್ಮೀರದ ಅತ್ಯದ್ಬುತ ಭೂ ಪ್ರದೇಶವನ್ನು ಅಲಂಕರಿಸುವ ಪ್ರಾಚೀನ ಕೋಟೆಗಳು

Posted By: Manjula BalarajTantry

ಜಮ್ಮು ಮತ್ತು ಕಾಶ್ಮೀರ ಈ ಸುಂದರವಾದ ರಾಜ್ಯವು ತನ್ನ ಅತಿವಾಸ್ತವಿಕ ಸೌಂದರ್ಯ, ಆಕರ್ಷಕ ವಾತಾವರಣ ಮತ್ತು ಅದ್ಭುತ ಭೂದೃಶ್ಯಗಳಿಗೆ ಸರುವಾಸಿಯಾಗಿದೆ.ಈ ಸುಂದರವಾದ ಸ್ಥಳವು ಕೆಲವು ಭವ್ಯವಾದ ಐತಿಹಾಸಿಕ ಕೋಟೆಗಳು ಮತ್ತು ಅರಮನೆಗಳನ್ನು ಹೊಂದಿದೆ. ಈ ಸ್ವರ್ಗ ಸದೃಶ್ಯವಾದ ಈ ಭೂ ಪ್ರದೇಶದ ಅದ್ಬುತವಾದ ಕೋಟೆಗಳ ಬಗ್ಗೆ ಓದಿ ತಿಳಿದುಕೊಳ್ಳಿ.

ಜಮ್ಮು ಕಾಶ್ಮೀರದ ಪುರಾತನ ಮತ್ತು ಐತಿಹಾಸಿಕ ಸ್ಮಾರಕಗಳು ನಂಬಲಾಗದ ನೈಸರ್ಗಿಕ ಸೌಂದರ್ಯಗಳು ಇವೆಲ್ಲ ಲಕ್ಷಣಗಳ ಮಧ್ಯೆ ನೆಲೆಸಿದೆ. ಗುಡ್ಡಗಾಡು ಹೊಳೆಗಳು, ಹಿಮದಿಂದ ಆವೃತವಾದ ಪರ್ವತ ಶಿಖರಗಳು, ಹಚ್ಚ ಹಸಿರಿನ ಕಾಡುಗಳು, ಮತ್ತು ಹಸಿರು ತೋಟಗಳು ಈ ಸುತ್ತಮುತ್ತಲಿನ ಪ್ರದೇಶಗಳನ್ನು ಹೆಚ್ಚು ಗುರುತಿಸುವಂತೆ ಮಾಡುವ ಕೆಲವು ವೈಶಿಷ್ಟ್ಯಗಳಾಗಿವೆ.

ಈ ಪ್ರಾಂತ್ಯದ ಪ್ರಶಾಂತತೆಯನ್ನು ವಿವರಿಸುವಲ್ಲಿ ಈ ಪ್ರದೇಶಗಳು ಮುಖ್ಯ ಕಾರಣವಾಗಿವೆ ಮತ್ತು ಈ ಸುಂದರವಾದ ರಾಜ್ಯದಲ್ಲಿ ಹಾದು ಹೋದ ಹಲವು ಆಡಳಿತಗಾರರಿಂದ ನಿರ್ಮಾಣ ಮಾಡಲ್ಪಟ್ಟ ವಾಸ್ತುಶಿಲ್ಪದ ಪ್ರತಿಭೆಯನ್ನು ಪ್ರದರ್ಶಿಸುತ್ತವೆ.

ಇಲ್ಲಿನ ಪ್ರತಿ ಕೋಟೆ ಮತ್ತು ಅರಮನೆಗಳು ಆ ಸ್ಥಳದ ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಈ ಅದ್ಭುತವಾದ ಭೂದೃಶ್ಯವನ್ನು ಹೊಂದಿರುವ ಕೆಲವು ಪ್ರಸಿದ್ಧ ಸ್ಮಾರಕಗಳನ್ನು ನಾವು ಪಟ್ಟಿ ಮಾಡಿದ್ದೇವೆ.

ಅಖನೂರ್ ಕೋಟೆ

ಅಖನೂರ್ ಕೋಟೆ

ಈ ಕೋಟೆಯು ಸಮುದ್ರ ಮಟ್ಟದಿಂದ 988 ಅಡಿ ಎತ್ತರದಲ್ಲಿ ಚೀನಾಬ್ ನದಿಯ ದಡದಲ್ಲಿ ಜಮ್ಮು ಪೂಂಚ್ ಹೆದ್ದಾರಿಯಲ್ಲಿರುವ ಐತಿಹಾಸಿಕ ಪಟ್ಟಣದಲ್ಲಿದೆ. ಈ ಪುರಾತನ ಕೋಟೆಯು ಈ ಪಟ್ಟಣದ ಇತಿಹಾಸವನ್ನು ಪ್ರತಿಬಿಂಬಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಿಯಾನ್ ತೇಜ್ ಸಿಂಗ್ 1762 ರಲ್ಲಿ ಈ ಕೋಟೆಗೆ ಅಡಿಪಾಯ ಹಾಕಿದರು ಮತ್ತು ರಾಜಾ ಆಲಂ ಸಿಂಘ್ 1802 ರಲ್ಲಿ ಪೂರ್ಣಗೊಳಿಸಿದರು.

ಈ ಕೋಟೆಯು ಟ್ರಿಕುಟಾ ಪರ್ವತಗಳು, ಶಿವಲಿಕ್ ಪರ್ವತಗಳು, ಮತ್ತು ಹಚ್ಚ ಹಸಿರಿನ ವಾತಾವರಣ ನಯನ ಮನೋಹರ ನೋಟವನ್ನು ನೀಡುತ್ತದೆ. ಅರಮನೆಯು ಒಂದು ಗೋಡೆಯಿಂದ ಪ್ರತ್ಯೇಕಿಸಲ್ಪಟ್ಟ ದ್ವಿಮಹಡಿಯನ್ನು ಹೊಂದಿದೆ. ಪ್ರಾಚೀನ ಕಮಾನುಗಳು ಮತ್ತು ಭಿತ್ತಿಚಿತ್ರಗಳಿಂದ ಅಲಂಕರಿಸಲ್ಪಟ್ಟ ಗೋಡೆಗಳನ್ನು ಒಳಗೊಂಡ ಸುಂದರವಾದ ಅಂಗಳವಿದೆ.

PC: Vinod K Sharma

ಬಹು ಕೋಟೆ

ಬಹು ಕೋಟೆ

ಸುಮಾರು 3,000 ವರ್ಷಗಳ ಹಿಂದೆ ಹಿಂದೆ ಈ ಐತಿಹಾಸಿಕ ಕೋಟೆಯನ್ನು ರಜಪೂತ ರಾಜ ಬಹು ಬಾಹು ಲೊಚನ್ ರಿಂದ ನಿರ್ಮಿಸಲ್ಪಟ್ಟಿತು. ಈ ಐತಿಹಾಸಿಕ ಕೋಟೆಯು ಜಮ್ಮುವಿನ ಅದ್ಬುತವಾದ ವಿಸ್ಮಯವೆನಿಸಿದೆ. ಡೊಗ್ರಾ ರಾಜವಂಶದವರಿಂದ ಹಲವಾರು ಬಾರಿ ಪುನಃಸ್ಥಾಪಿಸಲಾಗಿದೆ ಮತ್ತು ಪುನರುಜ್ಜೀವನಗೊಳಿಸಲಾದ ಈ ಬಹು ಕೋಟೆಯು ಜಮ್ಮು ನಗರದ ತಾವಿ ನದಿಯಲ್ಲಿದೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಂದರ ಜಲಪಾತಗಳನ್ನು ಹೊಂದಿದೆ.

ಈ ಕೋಟೆಯ ಮೇಲ್ಬಾಗದಲ್ಲಿ ವರ್ಣರಂಜಿತ ಹಾಗೂ ರೋಮಾಂಚಕ ಹೂವುಗಳಿಂದ ಅಲಂಕರಿಸಲ್ಪಟಟಿದೆ. ಈ ಪ್ರಾಚೀನ ಕೋಟೆಯ ಒಳಗಡೆ ಬಹು ದೇವಾಲಯವಿರುವುದರಿಂದ ಇದೊಂದು ಪ್ರಸಿದ್ದವಾದ ತೀರ್ಥಯಾತ್ರಾ ಸ್ಥಳವೆನಿಸಿದೆ. ಹಲವಾರು ಭಕ್ತರು ತಮ್ಮ ಪ್ರಾರ್ಥನೆಗಳನ್ನು ಮತ್ತು ಪೂಜೆಗಳನ್ನು ಅರ್ಪಿಸಲು ದೇವಾಲಯಕ್ಕೆ ಬರುತ್ತಾರೆ.

PC: Nvvchar

ಚಿಕ್ತಾನ್ ಕೋಟೆ

ಚಿಕ್ತಾನ್ ಕೋಟೆ

ಚಿಕ್ಟಾನ್ ಖಾರ್ ಎಂದು ಕರೆಯಲ್ಪಡುವ ಈ ಉದ್ಯಾನವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಚಿಕ್ತನ್ ಗ್ರಾಮದಲ್ಲಿದೆ. ಬಾಲ್ಟಿ ಕುಶಲಕರ್ಮಿಗಳು 16 ನೇ ಶತಮಾನದಲ್ಲಿ ಈ ರಾಜಮನೆತನದ ಕೋಟೆಯನ್ನು ನಿರ್ಮಿಸಿದ��ು ಮತ್ತು ಇದು ಈ ಪ್ರದೇಶದಲ್ಲಿ ಆಳಿದ ವಿವಿಧ ಆಡಳಿತಗಾರರ ರಾಜಮನೆತನದ ನಿವಾಸವಾಗಿ ಉಪಯೋಗಿಸಲ್ಪಟ್ಟಿದೆ.

ಇಂದು ಈ ಕೋಟೆಯಲ್ಲಿ ಕೆಲವು ಅವಶೇಷಗಳ ಅಂಚಿಗೆ ಬಂದಿದ್ದರೂ ಈ ಕೋಟೆಯನ್ನು ಕಲ್ಲು ಮತ್ತು ಮಣ್ಣಿನಿಂದ ಕಟ್ಟಲಾಗಿದ್ದು ಒಂದು ಐತಿಹಾಸಿಕ ಸೌಂದರ್ಯತೆಯನ್ನು ಮೆರೆಯುತ್ತದೆ. ಸಿಂಧೂ ನದಿಯ ತೀರದಲ್ಲಿ ಆಳವಾದ ಕಣಿವೆಯಲ್ಲಿ ನೆಲೆಸಿದ್ದು ಮತ್ತು ಭವ್ಯವಾದ ಪರ್ವತಗಳು ಅದರ ಹಿನ್ನೆಲೆಯನ್ನು ಅಲಂಕರಿಸುತ್ತವೆ. ಕಟ್ಟಡದ ಛಾವಣಿಗಳನ್ನು ಬೆಂಬಲಿಸಲು ಮತ್��ು ಬಾಗಿಲು ಮತ್ತು ಕಿಟಕಿ ಚೌಕಟ್ಟುಗಳನ್ನು ಬೆಂಬಲಿಸಲು ಮರವನ್ನು ಬಳಸಲಾಗಿದೆ.

PC: Official Website


ಭೀಮ್ಗಡ್ ಕೋಟೆ

ಭೀಮ್ಗಡ್ ಕೋಟೆ

ಸಾಮಾನ್ಯವಾಗಿ ರೆಯಾಸಿ ಕೋಟೆ ಎಂದು ಕರೆಯಲ್ಪಡುವ ಭೀಮಗಢ ಕೋಟೆ ಜಮ್ಮು ನಗರದ ವಾಯುವ್ಯ ಭಾಗದಲ್ಲಿರುವ ರೇಸಿ ನಗರದಲ್ಲಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಡೊಗ್ರಾ ಆಡಳಿತಗಾರರು ಈ ಪ್ರದೇಶವನ್ನು ರಕ್ಷಣೆಗಾಗಿ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ.

ಮಹಾರಾಜ ಗುಲಾಬ್ ಸಿಂಗ್ ಈ ಕೋಟೆಯನ್ನು ಕಲ್ಲುಗಳನ್ನು ಬಳಸಿ ಪುನರ್ನಿರ್ಮಾಣ ಮಾಡಿದರು ಮತ್ತು ಕೋಟೆಯನ್ನು ಪೂರ್ಣಗೊಳಿಸಲು 30 ವರ್ಷಗಳಿಗೂ ಹೆಚ್ಚು ಸಮಯ ತೆಗೆದುಕೊಂಡರು ಎಂದು ಹೇಳಲಾಗುತ್ತದೆ.

ಪ್ರವೇಶದ್ವಾರವನ್ನು ಬಾಲಕಾ ಕಲ್ಲಿನಿಂದ ಮಾಡಲಾದ ರಾಜಸ್ಥಾನಿ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ಪ್ರವೇಶ ದ್ವಾರದಲ್ಲಿ ಹನುಮಾನ್ ಮತ್ತು ಮಹಾಕಾಳಿ ದೇವಿಯ ಬೃಹತ್ ಪ್ರತಿಮೆ ಇದೆ. ಈ ಕೋಟೆಯು ದೇವಾಲಯ, ಕೊಳ, ಮತ್ತು ಅನೇಕ ಕೋಣೆಗಳನ್ನೂ ಹೊಂದಿದೆ.

PC: Shubham Sharma


ರಾಮ್ ನಗರ್ ಕೋಟೆ

ರಾಮ್ ನಗರ್ ಕೋಟೆ

ಪುರಾಣ ಮಹಲ್ ಎಂದು ಕರೆಯಲ್ಪಡುವ ರಾಮನಗರ ಕೋಟೆಯನ್ನು 1844 ಎ.ಡಿ.ನಲ್ಲಿ ರಾಜಾ ಸುಚೇತ್ ಸ��ಂಗ್ ಅವರು ನಿರ್ಮಿಸಿದರು. ಶೀಶ್ ಮಹಲ್ ನ ನೆರೆಹೊರೆಯಲ್ಲಿದ್ದು ಇಲ್ಲಿ ಅವರ ಹೆಂಡತಿಯಿಂದ ನಡೆಸಲಾಗುತ್ತಿದ್ದ ಸತಿ ಪೂಜೆಯು ಪ್ರಸಿದ್ದಿಯನ್ನು ಪಡೆದಿತ್ತು. ಈಗ ಈ ಮಹಾರಾಣಿಯ ಸಮಾಧಿಯಾಗಿ ಮಾರ್ಪಟ್ಟಿದೆ.

ಸಮುದ್ರ ಮಟ್ಟದಿಂದ ಸುಮಾರು 828 ಮೀಟರ್ ಎತ್ತರದಲ್ಲಿ ಎತ್ತರದಲ್ಲಿದೆ, ಈ ಕೋಟೆಯು ಎಲ್ಲಾ ಮೂಲೆಗಳಿಂದ ಹಸಿರಿನಿಂದ ಕೂಡಿದ ಪರ್ವತಗಳನ್ನೊಳಗೊಂಡ ಪರಿಸರದಲ್ಲಿ ನೆಲೆಸಿದೆ. ಹೂವಿನ ವಿನ್ಯಾಸಗಳು ಮತ್ತು ಗಾರೆ ಬಣ್ಣದಿಂದ ಅಲಂಕರಿಸಲ್ಪಟ್ಟ ಅದ್ಭುತ ಮರದ ��ಾವಣಿಗಳು ಮತ್ತು ಗೋಡೆಗಳು ವೀಕ್ಷಿಸಲು ಅದ್ಬುತವಾದ ಅನುಭವವನ್ನು ಕೊಡುತ್ತದೆ. ಈ ಕೋಟೆಯನ್ನು ತಲುಪಲು ಕಿರಿದಾದ ಸೇತುವೆಯನ್ನು ಬಳಸಿ ಮಾತ್ರ ತಲುಪಬಹುದು.

PC: Malikbek


ಜಸ್ಮೇರ್ಗಡ್

ಜಸ್ಮೇರ್ಗಡ್

ಈ ಪುರಾತನ ಕೋಟೆಯ ಹಿರಾನಗರವು ರಜಪೂತರ ಆಳ್ವಿಕೆಯ ಜಸ್ರೋಟ ಕುಲದ ಮಹಾನ್ ಇತಿಹಾಸದ ಒಂದು ತುಣುಕು ನೋಟವನ್ನು ನೀಡುತ್ತದೆ. ಇದು ಹಿರಾನಗರದ ವಾಯುವ್ಯ ಭಾಗದಲ್ಲಿದ್ದು ಸಮುದ್ರ ಮಟ್ಟದಿಂದ 308 ಮೀಟರ್ ಎತ್ತರದಲ್ಲಿದ್ದು ಭಾರತ-ಪಾಕಿಸ್ತಾನದ ಬಾರ್ಡರ್ ಕಡೆಗೆ ಹೋಗುವ ಗಡಿ ರಸ್ತೆಯಲ್ಲಿದೆ.

ಸುಬಾ ಚಕ್, ಜಂಡಿ, ಸನ್ಯಾಲ್, ಚಂಜ್ಜಾಲ್ ಮುಂತಾದ ಗ್ರಾಮಗಳು ಕೋಟೆಯ ಭೂದೃಶ್ಯವನ್ನು ಅಲಂಕರಿಸುತ್ತವೆ. ಡೋಗ್ರಾ ಸಾಮ್ರಾಜ್ಯದ ರಾಜ ಧಯಾನ್ ಸಿಂಗ್ ಅವರ ಮಗನಾದ ರಾಜಾ ಹಿರಾ ಸಿಂಗ್ ಅವರು ಅಧಿಕಾರವನ್ನು ವಶಪಡಿಸಿಕೊಂಡಾಗ ಈ ಕೋಟೆಯನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ರಾಜಾ ಹಿರಾ ಸಿಂಗ್ ಈ ಐತಿಹಾಸಿಕ ಕೋಟೆಯಲ್ಲಿ ನೆಲೆಸಿದ್ದರು, ಮತ್ತು ಹಿರಾನಗರ ಪಟ್ಟಣವನ್ನು 1947 ರಲ್ಲಿ ಅವರ ಹೆಸರಿನ್ನು ಈ ಪಟ್ಟಣಕ್ಕೆ ಇಡಲಾಯಿತು.


PC: Official Website

ಹರಿ ಪರ್ಬತ್ ಕೋಟೆ

ಹರಿ ಪರ್ಬತ್ ಕೋಟೆ

18 ನೇ ಶತಮಾನದ ಅಫ್ತಾ ಗವರ್ನರ್ ಅಟಾ ಮೊಹಮ್ಮದ್ ಖಾನ್ ಅವರು ನಿರ್ಮಿಸಿದ ಶ್ರೀನಗರದಲ್ಲಿನ ಪ್ರಮುಖ ಕೋಟೆಗಳಲ್ಲಿ ಒಂದಾಗಿದೆ. ಡೇರಿ ಸರೋವರದ ಪಶ್ಚಿಮಕ್ಕೆ ಹರಿ ಪರ್ಭಾತ್ ಅಥವಾ ಕೊಹ್-ಎ-ಮರಿಯನ್ ಬೆಟ್ಟದ ಮೇಲೆ ನೆಲೆಸಿದ್ದು, ವಾಸ್ತುಶಿಲ್ಪವು ಮಧ್ಯ ಏಷ್ಯಾದಲ್ಲಿ ನಿರ್ಮಿಸಲಾದ ಶಾಸ್ತ್ರೀಯ ಪರ್ಷಿಯನ್ ಶೈಲಿಯ ಹಲವಾರು ಕೋಟೆಗಳೊಂದಿಗೆ ವ್ಯಾಪಕವಾದ ಪ್ರಭಾವಗಳನ್ನು ಮತ್ತು ಹೋಲಿಕೆಗಳನ್ನು ಹೊಂದಿದೆ.

ಕೋಟೆಯ ಮಹಾದ್ವಾರ ಪ್ರವೇಶ ದ್ವಾರಗಳನ್ನು ಕಾಥಿ ದರ್ವಾಜಾ ಮತ್ತು ಸಾಂಗೀನ್ ದರ್ವಾಜಾ ಎಂದು ಹೆಸರಿಸಲಾಗಿದೆ, ಇದೊಂದು ವಿಮರ್ಶನಾತ್ಮಕ ಪ್ರವೇಶ ದ್ವಾರವಾಗಿದೆ. ಇದರ ಅಕ್ಕ ಪಕ್ಕಗಳಲ್ಲಿ ಶರಿಕಾ ದೇವಿ ಮಂದಿರ, ಗುರುದ್ವಾರ ಚೆವಿನ್ ಪತ್ಶಾಹಿ, ಮತ್ತು ಮಗ್ದೂಮ್ ಸಾಹಿಬ್ ಮುಂತಾದ ಹಲವು ಧಾರ್ಮಿಕ ಸ್ಥಳಗಳಿವೆ. ಇವೂ ಕೂಡಾ ಕೋಟೆಯ ಆಕರ್ಷಣೆಗೆ ಕಾರಣವಾಗಿವೆ.

PC: Shibnaths2

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ