Search
  • Follow NativePlanet
Share
» »ಶ್ರೇಷ್ಠ ಭಾರತದ ಅಪ್ರತಿಮ ಸೌಂದರ್ಯ

ಶ್ರೇಷ್ಠ ಭಾರತದ ಅಪ್ರತಿಮ ಸೌಂದರ್ಯ

By Vijay

ಸಂಸ್ಕೃತದಲ್ಲಿ "ಭಾ" ಎಂದರೆ ಪ್ರಕಾಶ, ಜ್ಞಾನ ಎಂಬ ಅರ್ಥವಿದೆ. "ರತ" ಎಂದರೆ ಸಮರ್ಪಣಾ ಭಾವ, ಮುಡಿಪಾದ ಎಂಬರ್ಥವಿದೆ. ಹೀಗಾಗಿ "ಭಾರತ"ವನ್ನು ಜ್ಞಾನಕ್ಕೆ ಮುಡಿಪಾದ ಭೂಮಿ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಅಲ್ಲದೆ ಇಂಡಿಯಾ ಶಬ್ದಕ್ಕೆ ಜೊತೆ ಜೊತೆಯಾಗಿ ಭಾರತ ಪದವೂ ಸಹ ಈ ದೇಶಕ್ಕಿರುವ ಅಧಿಕೃತ ಹೆಸರಾಗಿದೆ.

ಪುರಾಣಗಳ ಪ್ರಕಾರ, ಭಾರತವು ಹಿಂದೆ ಭರತರಾಜನು ಆಳುತ್ತಿದ್ದ ಸಂದರ್ಭದಲ್ಲಿ ಭರತವರ್ಷ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಪೌರಾಣಿಕವಾಗಿ ಇಂದಿನ ಚೀನಾ, ರಷ್ಯಾ, ಪಾಕಿಸ್ತಾನ, ಅಫಘಾನಿಸ್ತಾನ, ನೇಪಾಳ, ಬಾಂಗ್ಲಾದೇಶ, ಟಿಬೆಟ್ ಗಳವರೆಗೂ ಚಾಚಿದ್ದ ಈ ದೇಶ ಒಂದು ಶ್ರೇಷ್ಠ ಭೂಮಿಯಾಗಿತ್ತು.

ನಿಮಗಿಷ್ಟವಾಗಬಹುದಾದ : ಉತ್ತರದ ಯಾವ ಸ್ಥಳ? ಏನು ವಿಶೇಷ?

ಕಾಲ ಉರುಳಿದಂತೆ ಅನಂತಾನಂತ ಬದಲಾವಣೆಗಳು ಏರ್ಪಟ್ಟು ಪ್ರಸ್ತುತ ಭಾರತವನ್ನು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಮಾತ್ರವೆ ಕಾಣುವಂತಾಗಿದೆ. ಹೀಗಿದ್ದರೂ ಭಾರತ ಉಪಖಂಡವು ಭೌಗೋಳಿಕವಾಗಿ ವಿಶಾಲವಾಗಿದ್ದು ಪ್ರಪಂಚದಲ್ಲೆ ಏಳನೇಯ ಅತಿ ವಿಶಾಲ ಭೂಮಿ ಹೊಂದಿರುವ ದೇಶವಾಗಿದೆ.

ಪ್ರವಾಸೋದ್ಯಮದ ದೃಷ್ಟಿಯಿಂದ ಭಾರತವು ಮೊದಲಿನಿಂದಲೂ ಪಾಶ್ಚಾತ್ಯರಿಗೆ ಒಂದು ಕುತೂಹಲಕರ ಸ್ಥಳವಾಗಿದೆ. ಈ ಕುತೂಹಲಕ್ಕೆ ಕಾರಣ ಇಲ್ಲದಿಲ್ಲ. ಬಹುಶಃ ಪ್ರಪಂಚದಲ್ಲೆ ಅತಿ ಹೆಚ್ಚು ಸಂಪ್ರದಾಯ-ಸಂಸ್ಕೃತಿ, ಆಚಾರ-ವಿಚಾರ, ಭಾಷೆ, ಸಮುದಾಯ ಹೀಗೆ ಹಲವು ವೈವಿಧ್ಯತೆಗಳನ್ನು ಈ ದೇಶದಲ್ಲಿ ಕಾಣಬಹುದಾಗಿದೆ. ಹೀಗೆ ಅನೇಕತೆಯಲ್ಲೂ ಏಕತೆಯನ್ನು ಹೊಂದಿರುವ ಅಖಂಡ ಭಾರತವನ್ನು ಸುತ್ತಲು ಎಲ್ಲ ನೈಜ ಪ್ರವಾಸಿಗರೂ ಬಯಸುತ್ತಾರೆ ಹಾಗೂ ಇಂದಿಗೂ ಆಧ್ಯಾತ್ಮಿಕತೆಯಲ್ಲಿ ಜಗತ್ತಿಗೆ ರಾಜಧಾನಿಯಾಗಿರುವ ಭಾರತಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಲೆ ಇರುತ್ತಾರೆ.

ಆಧ್ಯಾತ್ಮಿಕತೆ, ವಿವಿಧತೆ, ವಿವಿಧ ಸಂಸ್ಕೃತಿ-ಸಂಪ್ರದಾಯ, ಚಿತ್ರ ವಿಚಿತ್ರ ಆಚರಣೆಗಳು, ವಿವಿಧ ಪ್ರಾಂತಗಳ ಉತ್ಸಾಹಭರಿತ ನಿತ್ಯ ಜೀವನದ ಶೈಲಿಯಿಂದ ಶ್ರೀಮಂತವಾಗಿರುವ ಭಾರತದ ಸಂಪೂರ್ಣ ಪ್ರವಾಸ ಜೀವನದಲ್ಲಿ ಒಂದು ಸಾರ್ಥಕತೆಯ ಮನೋಭಾವ ಮೂಡಿಸುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಈ ಲೇಖನದ ಮೂಲಕ ಭಾರತವನ್ನು, ಅದರ ಮುಗ್ಧತೆಯನ್ನು, ಅದರ ಗಾಂಭೀರ್ಯವನ್ನು, ಅದರ ಅಂದ ಚೆಂದವನ್ನು, ಅದರ ತುಂಟತನವನ್ನು, ವಿವಿಧ ಸಮುದಾಯಗಳ ಅದರ ಮಕ್ಕಳನ್ನು ಚಿತ್ರಗಳ ಮೂಲಕ ಪ್ರವಾಸ ಮಾಡಿ ತಿಳಿಯಲು ಪ್ರಯತ್ನಿಸಿ. ಸಮಯವಿದ್ದಾಗ ಇಲ್ಲಿಗೆ ತೆರಳಲು ಅಥವಾ ಇಂತಹ ಅನುಭವ ಪಡೆಯಲು ಪ್ರಯತ್ನಿಸಿ.

ಭಾರತದ ಸಮಗ್ರವನ್ನು ಕೇವಲ ಚಿತ್ರಗಳಲ್ಲಿ ಅನಾವರಣಗೊಳಿಸುವುದು ಅಸಾಧ್ಯ ಹಾಗಾಗಿ ಅದರ ಅತಿ ಸಂಕ್ಷಿಪ್ತ ತಿರುಳನ್ನು ಕೆಲವು ಆಯ್ದ ಚಿತ್ರಗಳ ಮುಲಕ ಮಾತ್ರ ಪ್ರಸ್ತುತಪಡಿಸಲಾಗಿದೆ.

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಅತ್ತಿರಪಲ್ಲಿ ಜಲಪಾತ : ಕೇರಳ ರಾಜ್ಯದಲ್ಲಿರುವ ಅತಿ ಸುಂದರ ಜಲಪಾತವಿದು. ಸಾಕಷ್ಟು ಚಿತ್ರಗಳ ಚಿತ್ರೀಕರಣಗಳು ಇಲ್ಲಿ ಸಾಗಿವೆ. ಕೊಚ್ಚಿಯಿಂದ 70 ಕಿ.ಮಿ ದೂರದಲ್ಲಿರುವ ಈ ಜಲಪಾತ ಕೇಂದ್ರ, ಅದೆ ಹೆಸರಿನ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಅತ್ತಿರಪಲ್ಲಿ ಪಟ್ಟಣದ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದೆ.

ಚಿತ್ರಕೃಪೆ: Mehul Antani

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿರುವ ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ತಲಕೋನ ಒಂದು ಜನಪ್ರೀಯ ಜಲಪಾತ ಕೇಂದ್ರವಾಗಿದೆ. ಈ ಜಲಪಾತದ ನೀರು ತೊರೆಯಾಗಿ ಹರಿಯುವಾಗ ನೀಡುವ ಆನಂದ ಅಷ್ಟಿಷ್ಟಲ್ಲ.

ಚಿತ್ರಕೃಪೆ: Vinoth Chandar

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತೆಲಂಗಾಣದ ಹೈದರಾಬಾದಿನ ಬಿ ಹೆಚ್ ಇ ಎಲ್ ಆವರಣದಲ್ಲಿರುವ ವಾಯು ವಿಹಾರ ಮಾರ್ಗದಲ್ಲಿ ಒಂದು ಸುಂದರ ಮುಂಜಾವು.

ಚಿತ್ರಕೃಪೆ: Sathis Babu

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಉತ್ತರ ಪ್ರದೇಶದ ಪ್ರಖ್ಯಾತ ಧಾರ್ಮಿಕ ತಾಣವಾದ ವರಾಣಸಿ ಅಥವಾ ಕಾಶಿ. ಇಲ್ಲಿರುವ ಗಂಗಾ ನದಿ ತಟದ ಮಣಿಕರ್ಣಿಕಾ ಘಾಟ್ ನಲ್ಲಿ ಅಂತ್ಯಕ್ರಿಯೆ ಪಡೆದುಕೊಂಡವರು ಮೋಕ್ಷ ಹೊಂದುತ್ತಾರೆ ಎಂಬ ಅಚಲವಾದ ನಂಬಿಕೆ ಹಿಂದು ಸಂಪ್ರದಾಯದಲ್ಲಿದೆ.

ಚಿತ್ರಕೃಪೆ: Lyle Vincent

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಪೊಂಗಲ್ ಹಬ್ಬವು ತಮಿಳುನಾಡು ರಾಜ್ಯದಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುವ ಉತ್ಸವವಾಗಿದೆ. ಈ ಸಂದರ್ಭದಲ್ಲಿ ಜರುಗುವ ಜಲ್ಲಿಕಟ್ಟು ಎಂಬ ಗ್ರಾಮೀಣ ಕ್ರೀಡೆಯು ಎತ್ತುಗಳನ್ನು ಪಳಗಿಸುವ ಸಾಹಸಮಯ ಕ್ರೀಡೆಯಾಗಿದೆ.

ಚಿತ್ರಕೃಪೆ: Vinoth Chandar

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ವಿಶಾಲ, ಸುಂದರ ಹಾಗೂ ಸ್ವಚ್ಛವಾಗಿರುವ ದೆಹಲಿಯ ಈ ಜಾಮಿಯಾ ಮಸೀದಿಯು ಭಾರತದಲ್ಲಿರುವ ಶ್ರೇಷ್ಠ ಮಸೀದಿಗಳ ಪೈಕಿ ಒಂದಾಗಿ ಪರಿಗಣಿಸಲ್ಪಟ್ಟಿದೆ.

ಚಿತ್ರಕೃಪೆ: Dennis Jarvis

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಸಿಕ್ಕಿಂ ರಾಜ್ಯದ ಟಿಂಗ್ಮೊನಲ್ಲಿರುವ ರಾಲೊಂಗ್ ಬೌದ್ಧ ಮಠದ ಸನ್ಯಾಸಿಗಳು ವಾಲಿ ಬಾಲ್ ಕ್ರೀಡೆಯಲ್ಲಿ ನಿರತರಾಗಿರುವುದು.

ಚಿತ್ರಕೃಪೆ: Sukanto Debnath

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಚೆನ್ನೈನಿಂದ ಮಹಾಬಲಿಪುರಂಗೆ ತೆರಳುವ ಈಸ್ಟ್ ಕೋಸ್ಟ್ ಹೆದ್ದಾರಿಯಲ್ಲಿ ಸಿಗುವ ಕೋವ್ಲಾಂಗ್ ಕಡಲ ತೀರದಲ್ಲೊಂದು ಸೂರ್ಯೋದಯದ ಸಮಯ. ಈ ಕಡಲ ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದ್ದು ಕೋವಲಂ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತದೆ.

ಚಿತ್ರಕೃಪೆ: Vinoth Chandar

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಹಿಂದುಗಳಿಗೆ ಅಮರನಾಥ ಯಾತ್ರೆ ಪವಿತ್ರವಾದುದು. ವರ್ಷಕ್ಕೊಮ್ಮೆ ಶಿವನು ಹಿಮ ಲಿಂಗದ ರೂಪದಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾನೆ. ಈ ಯಾತ್ರೆಗೆ ಮುಖ್ಯವಾಗಿ ನಡೆಯುತ್ತ ಸಾಗುವುದೆ ಮಾರ್ಗವಾಗಿದೆ. ಸಮುದ್ರ ಮಟ್ಟದಿಂದ 14000 ಅಡಿಗಳಷ್ಟು ಎತ್ತರದಲ್ಲಿ ಮೂಳೆಗಳನ್ನೆ ಕೊರೆಯುವಂತಹ ಚಳಿಯ ಮಧ್ಯದಲ್ಲಿ ಚಾರಣ ಮಾಡುತ್ತ ಸಾಗಬೇಕು. ಒಂದೆಡೆ ಆಮ್ಲಜನಕದ ಕೊರತೆಯಿದ್ದರೆ ಇನ್ನೊಂದೆಡೆ ಮೊನಚಾದ ಗುಡ್ಡಗಳು. ಈ ಸಂದರ್ಭದಲ್ಲಿ ಸಿಗುವ ಒಂದು ಕೆರೆ.

ಚಿತ್ರಕೃಪೆ: Nitin Badhwar

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಯೇರ್ಕಾಡ್ ಅಷ್ಟೊಂದು ಹೆಸರುವಾಸಿಯಾಗಿರದ ಗಿರಿಧಾಮ. ಆದರೆ ಇದರ ಅಂದ ಚೆಂದ ಪಶ್ಚಿಮ ಘಟ್ಟಗಳ ಗಿರಿಧಾಮಗಳಂತೆಯೆ ಅದ್ಭುತವಾಗಿದೆ. ಇಲ್ಲಿನ ಶೋಲಾ ಅರಣ್ಯದ ಪರಿಸರ, ದಟ್ಟ ಹಸಿರು ಭೇಟಿ ನೀಡಿದವರು ಮೂಕ ವಿಸ್ಮಿತರಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Thangaraj Kumaravel

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮಧ್ಯಪ್ರದೇಶ ರಾಜ್ಯದ ಓರ್ಛಾದಲ್ಲಿರುವ 16-17 ನೇಯ ಶತಮಾನದಲ್ಲಿ ಬುಂದೇಲ ರಾಜರಿಂದ ನಿರ್ಮಿತವಾದ ಸ್ಮಾರಕ ಸಮಾಧಿಗಳು. ಬೇಟ್ವಾ ನದಿಯ ತಟದಲ್ಲಿರುವ ಈ ಸ್ಮಾರಕಗಳನ್ನು ಸ್ಥಳೀಯವಾಗಿ ಬುಂದೇಲ ರಾಜರ ಛತ್ರಿಗಳು ಎಂದು ಕರೆಯಲಾಗುತ್ತದೆ. ನಗರ ವಾಸ್ತುಶೈಲಿಯನ್ನು ಹೊಂದಿರುವ ಈ ಸ್ಮಾರಕಗಳು ಐತಿಹಾಸಿಕ ಮಹತ್ವ ಪಡೆದಿವೆ.

ಚಿತ್ರಕೃಪೆ: Dennis Jarvis

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ರಾಜಸ್ಥಾನದ ಸರೋವರಗಳ ನಾಡು ಉದೈಪುರದಲ್ಲಿರುವ ತಾಜ್ ಲೇಕ್ ಪ್ಯಾಲೆಸ್ ಹೋಟೆಲ್. ಕೆರೆಯ ಮಧ್ಯದಲ್ಲಿ ನಿರ್ಮಾಣಗೊಂಡ ಈ ಅದ್ದೂರಿ ಹೋಟೆಲ್ ಹೆಚ್ಚಾಗಿ ವಿದೇಶ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Dennis Jarvis

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತಮಿಳುನಾಡಿನ ಕಾಂಚೀಪುರಂನಲ್ಲಿರುವ ಕೈಲಾಸನಾಥರ ದೇವಾಲಯ. ನಗರದ ಒಂದು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿ ಇದು ದಕ್ಷಿಣ ಭಾರತದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Nithi Anand

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮಹಾತ್ಮಾ ಗಂಧಿ ಸೇತು, ಭಾರತದಲ್ಲೆ ಅತಿ ಉದ್ದವಾದ ಹಾಗೂ ಜಗತ್ತಿನಲ್ಲಿರುವ ಅತಿ ಉದ್ದದ ಸೇತುವೆಗಳ ಪೈಕಿ ಒಂದಾದ ಸೇತುವೆ ಇದಾಗಿದೆ. 1982 ರಲ್ಲಿ ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಈ ಸೇತುವೆ ಉದ್ಘಾಟಿಸಲ್ಪಟ್ಟಿದ್ದು ಗಂಗಾ ನದಿಗೆ ಅಡ್ಡವಾಗಿ ನಿರ್ಮಿತವಾಗಿದೆ. ಇದರ ಒಟ್ಟ್ಟಾರೆ ಉದ್ದ 5575 ಮೀ. ಅಂದರೆ 5.575 ಕಿ.ಮೀ ಗಳಷ್ಟು.

ಚಿತ್ರಕೃಪೆ: Chandravir Singh

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಈ ಸೇತುವೆಯ ಉದ್ದವನ್ನು ಪರಿಚಯಿಸುವ ಮತ್ತೊಂದು ನೋಟ.

ಚಿತ್ರಕೃಪೆ: Manoj nav

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ರಾಜಸ್ಥಾನದ ಜೈಸಲ್ಮೇರ್ ನಲ್ಲಿರುವ ವಿಶಿಷ್ಟವಾದ ಜೈಸಲ್ಮೇರ್ ಕೋಟೆ. ಚಿತ್ತೋರ್ಗಡ್ ನಂತರ ಎರಡನೆಯ ಅತಿ ಪುರಾತನ ಕೋಟೆಯೂ ಹಾಗೂ ಎರಡನೆಯ ಅತಿ ದೊಡ್ಡ ಕೋಟೆಯಾಗಿಯೂ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Koshy Koshy

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಬೆಂಗಳೂರು ನಗರದ ರಸ್ತೆಯೊಂದರ ಬದಿಯಲ್ಲಿ ಹಸ್ತ ಸಾಮುದ್ರಿಕ ಶಾಸ್ತ್ರ ಹೇಳುತ್ತ ಬದುಕಿಕೊಂಡಿರುವವನೊಬ್ಬ ತನ್ನ ಅಧ್ಯಯನದಲ್ಲಿ ನಿರತನಾಗಿರುವುದು.

ಚಿತ್ರಕೃಪೆ: Brian Evans

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಅರಬ್ಬಿ ಸಮುದ್ರದ ಹಿನ್ನಿಲೆಯಲ್ಲಿ ಭವ್ಯವಾಗಿ ಗೋಚರಿಸುವ ಶಿವನ ಅತಿ ಎತ್ತರದ ಧ್ಯಾನ ಭಂಗಿಯಲ್ಲಿ ಕುಳಿತಿರುವ ಪ್ರತಿಮೆಯ ಅಂದ ಚೆಂದ ಎಷ್ಟು ನೋಡಿದರೂ ಕಡಿಮೆಯೆ...ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿರುವ ಸುಂದರ ಶಿವ ಪ್ರತಿಮೆ.

ಚಿತ್ರಕೃಪೆ: varun suresh

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಕರ್ನಾಟಕದ ಚಿಕ್ಕಮಗಳೂರಿನಲ್ಲಿರುವ ಕುದುರೆಮುಖ ಹೆಸರುವಾಸಿಯಾದ ಪ್ರವಾಸಿ ಆಕರ್ಷಣೆಯ ಗಿರಿಧಾಮವಾಗಿದೆ. ಇಲ್ಲಿನ ಬೆಟ್ಟಗುಡ್ಡಗಳ ಹಸಿರು, ಶೋಲಾ ಅರಣ್ಯ ಪ್ರಸನ್ನತೆಯ ಭಾವ ಮೂಡಿಸುತ್ತದೆ. ಚಾರಣವಂತೂ ಇಲ್ಲಿ ಮಾಡಲೇಬೇಕಾದ ಪ್ರಮುಖ ಆಕರ್ಷಣೆ. ಈ ಸಂದರ್ಭದಲ್ಲೆ ಕುದುರೆಮುಖ ಪ್ರಕೃತಿಯ ಅಗಾಧ ಸೊಬಗನ್ನು ಕಣ್ತುಂಬ ತುಂಬಿಕೊಳ್ಳಬಹುದು.

ಚಿತ್ರಕೃಪೆ: Premnath Thirumalaisamy

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಕರ್ನಾಟಕದ ಕೊಡಗು ಜಿಲ್ಲೆಯ ಕುಶಾಲ ನಗರದಿಂದ ಆರು ಕಿ.ಮೀ ದೂರದಲ್ಲಿರುವ ಬೈಲಕುಪ್ಪೆಯ ಬೌದ್ಧ ಮಠ. ಈ ರೀತಿಯ ದಕ್ಷಿಣ ಭಾರತದಲ್ಲಿ ಬೌದ್ಧರ ಏಕೈಕ ಮಠವಾಗಿದೆ ಇದು.

ಚಿತ್ರಕೃಪೆ: Natesh Ramasamy

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಆದರೆ ಮೈಸೂರು ನಗರಕ್ಕೆ ಹತ್ತಿರವಾಗಿರುವ ರಂಗನತಿಟ್ಟು ಪಕ್ಷಿಧಾಮ. ಇಡಿ ಭಾರತಕ್ಕೆ ಕಾಶಿ ಹೇಗೆ ಧಾರ್ಮಿಕ ತಾಣವಾಗಿ ಮಹತ್ವವಾಗಿದೆಯೊ ಅದೇ ರೀತಿಯಾಗಿ ರಂಗನತಿಟ್ಟು ಕರ್ನಾಟಕದಲ್ಲಿ ಪಕ್ಷಿಗಳ ವಾಸಕ್ಕೆ ಅಷ್ಟು ಮಹತ್ವ ಪಡೆದಿದೆ. ಹೀಗಾಗಿ ಇದನ್ನು "ಕರ್ನಾಟಕದ ಪಕ್ಷಿ ಕಾಶಿ" ಎಂತಲೂ ಸಹ ಪ್ರೀತಿಯಿಂದ ಕರೆಯಲಾಗುತ್ತದೆ. ವಲಸೆಬಂದ ಸ್ಟಾರ್ಕ್ ಪಕ್ಷಿಗಳು.

ಚಿತ್ರಕೃಪೆ: Navaneeth KN

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಈಶಾನ್ಯ ಭಾರತದಲ್ಲಿರುವ, ಸದಾ ದಟ್ಟ ಮೋಡಗಳಿಂದ ಆವೃತವಾಗಿರುವ, ಅದ್ಭುತ ನಿಸರ್ಗ ಸೌಂದರ್ಯದಿಂದ ಕೂಡಿರುವ ರಾಜ್ಯ ಮೇಘಾಲಯ. ಇಲ್ಲಿರುವ ಚಿರಾಪುಂಜಿ ಜಗತ್ತಿನಲ್ಲಿಯೆ ಹೆಚ್ಚು ಮಳೆ ಪಡೆಯುವ ಪ್ರದೇಶವಾಗಿದೆ. ಈ ತಾಣದ ಬಳಿಯಿರುವ ನೊಹ್ಕಾಲಿಕಾಯ್ ಜಲಪಾತ, ಭಾರತದಲ್ಲಿಯೆ ಅತಿ ಎತ್ತರದಿಂದಿಂದ ಭೂಮಿಗೆ ಧುಮುಕುವ ಜಲಪಾತವಾಗಿದೆ.

ಚಿತ್ರಕೃಪೆ: Hrishikesh Sharma

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಹಾಸನ ಜಿಲ್ಲೆಯಲ್ಲಿರುವ ಕರ್ನಾಟಕದ ಶಿಲ್ಪಕಲೆಯ ತವರೂರು ಬೇಲೂರು ದೇವಾಲಯ.

ಚಿತ್ರಕೃಪೆ: Prof. Mohamed Shareef

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಶವನಸಮುದ್ರದ ಕಾವೇರ್ಯಿಂದ ಒಡಮೂಡುವ ಅದ್ಭುತ ಭರಚುಕ್ಕಿ ಜಲಪಾತದ ಸುಂದರ ನೋಟ.

ಚಿತ್ರಕೃಪೆ: Arun Prabhu

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮಹಾರಾಷ್ಟ್ರದ ಪುಣೆ ನಗರದಿಂದ 30 ಕಿ.ಮೀ ದೂರದಲ್ಲಿರುವ ಸಿಂಹಗಡ್ ಕೋಟೆಯ ರಮಣೀಯ ನೋಟ. ಸಹ್ಯಾದ್ರಿ ಬೆಟ್ಟಗಳಲ್ಲಿ ನೆಲೆಸಿರುವ ಈ ಅದ್ಭುತ ದುರ್ಗವು ಹಿಂದೆ ಹಲವಾರು ಮಹತ್ವದ ಯುದ್ಧಗಳಿಗೆ ಸಾಕಷಿಯಾಗಿತ್ತು. ಪ್ರಸ್ತುತ ತನ್ನ ಅದ್ಭುತ ದೃಶ್ಯಾವಳಿಗಳಿಂದ ಯುವ ಪ್ರವಾಸಿಗರ ನೆಚ್ಚಿನ ಚಾರಣ ತಾಣವಾಗಿದೆ.

ಚಿತ್ರಕೃಪೆ: Dhinal Chheda

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮುರುದ್ ಎಂಬ ಕರಾವಳಿ ಗ್ರಾಮದಲ್ಲಿ ಅರಬ್ಬಿ ಸಮುದ್ರದ ,ಮಧ್ಯದಲ್ಲಿ ಎದೆಯುಬ್ಬಿಸಿ ನಿಂತಿರುವ ಮುರುದ್-ಜಂಜೀರಾ ಎಂಬ ಐತಿಹಾಸಿಕ ಕೋಟೆ.

ಚಿತ್ರಕೃಪೆ: Ishan Manjrekar

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮುಂಬೈಗೆ ಹತ್ತಿರದಲ್ಲಿರುವ ಪ್ರಖ್ಯಾತ ವಾರಾಂತ್ಯದ ರಜೆಗಳ ತಾಣವಾದ ಖಂಡಾಲಾ ಬಳಿಯಿರುವ ಬೆರಗುಗೊಳಿಸುವ ಕುಣೆ ಜಲಪಾತ.

ಚಿತ್ರಕೃಪೆ: Sarath Kuchi

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತಾಜ್ ಮಹಲ್ ಎಂದು ತಿಳಿದಿದ್ದೀರಾ? ಖಂಡಿತವಾಗಿಯೂ ಅಲ್ಲ. ತಾಜ್ ಮಹಲ್ ನೊಂದಿಗೆ ಹೆಚ್ಚಿನ ಸಾಮ್ಯತೆ ಹೊಂದಿರುವ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ಬಿಬಿ ಕಾ ಮಕ್ಬರಾ ಎಂಬ ಸಮಾಧಿ ಸ್ಮಾರಕ.

ಚಿತ್ರಕೃಪೆ: Arian Zwegers

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮುಂಬೈನ "ಗೇಟ್ ವೇ ಆಫ್ ಇಂಡಿಯಾ" ಸ್ಮಾರಕದ ಮುಂದಿರುವ ಬಂದರು ಪ್ರದೇಶ.

ಚಿತ್ರಕೃಪೆ: David Brossard

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮಹಾರಾಷ್ಟ್ರದ ಔರಂಗಾಬಾದ್ ನಗರದ ವಾಯವ್ಯಕ್ಕೆ ಸುಮಾರು 30 ಕಿ.ಮೀ ದೂರದಲ್ಲಿರುವ ಎಲ್ಲೋರಾ ಗುಹೆಗಳು ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿನ ಗುಹೆಗಳ ರಚನೆಗಳನ್ನು ಅವಲೋಕಿಸುವಾಗ ಒಂದೆ ಬಂಡೆಯಲ್ಲಿ ಕೆತ್ತಲಾದ ಕೈಲಾಸನಾಥ ದೇವಾಲಯ ಅದ್ಭುತವಾಗಿ ಕಂಡುಬರುತ್ತದೆ. ಬೆಟ್ಟದಲ್ಲಿಯೆ ಕೆತ್ತಲಾದ ಈ ಅಪ್ರತಿಮೆ ಕಲಾತ್ಮಕತೆಯ ದೇವಾಲಯವು ರಾಷ್ಟ್ರಕೂಟರ ರಾಜನಾದ ಒಂದನೆಯ ಕೃಷ್ಣನಿಂದ ನಿರ್ಮಿಸಲ್ಪಟ್ಟಿದೆ ಎಂದು ಕನ್ನಡದಲ್ಲಿ ಕೆತ್ತಲಾದ ಶಾಸನವು ತಿಳಿಸುತ್ತದೆ.

ಚಿತ್ರಕೃಪೆ: Kunal Mukherjee

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಮುರುಂಬ್ ದೇವ್ ಚಾ ಡೊಂಗರ್ ಎಂದು ಮರಾಠಿ ಭಾಷೆಯಲ್ಲಿ ಕರೆಯಲ್ಪಡುವ ಈ ಅದ್ಭ್ಹುತ ಕೋಟೆ ಹೆಸರಿಗೆ ತಕ್ಕ ಹಾಗೆ ರಾಜ್ಗಡ್ ಕೋಟೆ ಎಂದೆ ಹೆಸರುಪಡೆದಿದೆ. ಎತ್ತರದ ಪರ್ವತದ ಮೇಲೆ ನೆಲೆಸಿರುವ ಈ ಕೋಟೆಯಲ್ಲಿ ಶಿವಾಜಿ ಮಹಾರಾಜ ಅತಿ ಹೆಚ್ಚಿನ ಸಮಯ ಕಳೆದಿದ್ದಾನೆ ಎಂಬ ಮಾತಿದೆ. ಪುಣೆಯಲ್ಲಿರುವ ಈ ಕೋಟೆಯು ಹಿಂದೆ ಅನೇಕ ಐತಿಹಾಸಿಕ ಪ್ರಸಂಗಗಳಿಗೆ ಸಾಕ್ಷಿಯಾಗಿದೆ. ಇಂದು ಚಾರಣಕ್ಕೆ ಯೋಗ್ಯವಾದ ತಾಣವಾಗಿದೆ.

ಚಿತ್ರಕೃಪೆ: vivek Joshi

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಬೆಟ್ಟಗಳ ತುದಿಯಲ್ಲಿ ಕಂಡುಬರುವ ಕಾರ್ತಿಕ ದೀಪ. ಇದೊಂದು ಅದ್ಭುತ ಧಾರ್ಮಿಕ ಚಟುವಟಿಕೆಯಾಗಿದ್ದು ಸಾಕಷ್ಟು ಜನ ಭಕ್ತಾದಿಗಳು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ.

ಚಿತ್ರಕೃಪೆ: Vinoth Chandar

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಕೊಡೈಕೆನಲ್ ಒಂದು ಪ್ರಖ್ಯಾತ ಗಿರಿಧಾಮ ಕೇಂದ್ರ. ವರ್ಷವೂ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಈ ಸುಂದರ ಗಿರಿಧಾಮಕ್ಕೆ ಭೇಟಿ ನೀಡಲು ಬರುತ್ತಾರೆ. ಇಲ್ಲಿನ ಕೆರೆಗಳು, ಪ್ರಕೃತಿ ಸೌಂದರ್ಯ, ತಾಜಾ ಪರಿಸರ, ನಿಶ್ಕಲ್ಮಷ ವಾತಾವರಣ ಇದಕ್ಕೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಿವೆ. ಅಪ್ಪರ್ ಲೇಕ್.

ಚಿತ್ರಕೃಪೆ: Thangaraj Kumaravel

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿರುವ ಚೆಟ್ಟಿನಾಡ್ ಒಂದು ಜನಪ್ರೀಯ ಪ್ರದೇಶವಾಗಿದೆ. ಹೆಚ್ಚಾಗಿ ಅದ್ಭುತವಾದ ಮಾಂಸಾಹಾರಿ ಖಾದ್ಯ, ಅರಮನೆ ಹಾಗೂ ರಾಜ ಸಮ್ಪ್ರದಾಯಕ್ಕೆ ಖ್ಯಾತಿಗಳಿಸಿದೆ. ಇಂದಿಗೂ ಚೆಟ್ಟಿನಾಡ್ ಖಾದ್ಯವೆಂದರೆ ಬಹುತೇಕರ ಬಾಯಲ್ಲಿ ನೀರೂರುತಾದೆ. ಕಾರೈಕುಡಿಯಲ್ಲಿರುವ ಚೆಟ್ಟಿನಾಡ್ ಅರಮನೆಯ ಒಂದು ಒಳಾಂಗಣ.

ಚಿತ್ರಕೃಪೆ: Natesh Ramasamy

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆ ಸ್ಮಾರಕ ಹಾಗೂ ತಿರುವಳ್ಳುವರ್ ಪ್ರತಿಮೆ.

ಚಿತ್ರಕೃಪೆ: Natesh Ramasamy

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಚೆನ್ನೈ ಬಳಿಯಿರುವ ಮಹಾಬಲಿಪುರಂನಲ್ಲಿರುವ ಕೃಷ್ಣನ ಬೆಣ್ಣೆ ಚೆಂಡು. ಈ ಬಂಡೆಗಲ್ಲು ಬಾಗಿದ ಚಿಕ್ಕೆ ಬೆಟ್ಟವೊಂದರ ಮೇಲೆ ಕೆಳಗೆ ಉರುಳದಂತೆ ನಿಂತಿರುವುದು ಒಂದು ರೀತಿಯ ಪ್ರಾಕೃತಿಕ ವಿಸ್ಮಯವಾಗಿದೆ.

ಚಿತ್ರಕೃಪೆ: Leon Yaakov

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಚೆನ್ನೆಐ ನಗರ ಕೆಂದ್ರಕ್ಕೆ ಹತ್ತಿರದಲ್ಲಿರುವ ಮಣಿಮಂಗಳಂ ಹಾಗೂ ಶ್ರೀಪೆರಂಬದೂರುಗಳನ್ನು ಒಂದಕ್ಕೊಂದು ಬೆಸೆಯುವ ರಸ್ತೆ.

ಚಿತ್ರಕೃಪೆ: Simply CVR

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಕೇರಳದ ಭೇಟಿಯನ್ನು ಸದಾ ನೆನಪಿನಲ್ಲಿಡುವಂತೆ ಮಾಡುತ್ತದೆ ಅಲ್ಲಿ ಹಿನ್ನೀರು. ಅದರಲ್ಲೂ ವಿಶೇಷವಾಗಿ ಹಿನ್ನೀರಿನ ಮೇಲೆ ದೋಣಿ ಮನೆಯಲ್ಲಿ ಹಾಯಾಗಿ ಸಾಗುವುದೆಂದರೆ ಎಂದಿಗೂ ಮರೆಯಲಾಗದ ಸುಂದರ ಅನುಭವವೆ ಹೌದು.

ಚಿತ್ರಕೃಪೆ: Saad Faruque

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಕೇರಳದ ಪ್ರಖ್ಯಾತ ಪ್ರವಾಸಿ ಗಿರಿಧಾಮ ಮುನ್ನಾರ್ ಸುತ್ತಮುತ್ತಲಿರುವ ಅದ್ಭುತ ನೋಟ ಕರುಣಿಸುವ, ಘಮ ಘಮ ಸುವಾಸನೆಯ ಚಹಾ ತೋಟಗಳು.

ಚಿತ್ರಕೃಪೆ: tornado_twister

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಕಾಸರಗೋಡು ಜಿಲ್ಲೆಯ ಕರಾವಳಿ ಗ್ರಾಮವಾದ ಮಂಜೇಶ್ವರದಲ್ಲಿರುವ ಶ್ರೀಮದ್ ಅನಂತೇಶ್ವರ ದೇವಾಲಯ ಸಂಕೀರ್ಣ.

ಚಿತ್ರಕೃಪೆ: Arun Prabhu

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಕೇರಳದ ತಿರುವನಂತಪುರಂನ ಕೋವಲಂ ಕಡಲ ತೀರದ ಲೈಟ್ ಹೌಸ್ ಬಳಿಯಿರುವ ವಿಳಿಂಜಮ್ ಮಸೀದಿಯ ಸುಂದರ ನೋಟ.

ಚಿತ್ರಕೃಪೆ: Arun Jr

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಬೇಕಲ್, ಕೇರಳದಲ್ಲಿರುವ ಅತಿ ದೊಡ್ಡ ಐತಿಹಾಸಿಕ ಕೋಟೆ ಇದಾಗಿದೆ. ಸಾಕಷ್ಟು ಚಲನಚಿತ್ರಗಳು ಇಲ್ಲಿ ಚಿತ್ರೀಕರಣವೂ ಗೊಂಡಿವೆ. ಕಾಸರಗೋಡಿನಲ್ಲಿರುವ ಈ ಕೋಟೆಯ ತಾಣವು ಕರ್ನಾಟಕದ ಮಂಗಳೂರಿನಿಂದ ಕೇವಲ 57 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: V.v

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ದಿನವೆಲ್ಲಾ ದುಡಿದು ಸಂಜೆಯ ಸಮಯದಲ್ಲಿ ಟ್ರ್ಯಾಕ್ಟರ್ ಮೂಲಕ ಮನೆಗೆ ತೆರಳುತ್ತಿರುವ ರೈತ, ಆಲಂಪುರ, ತೆಲಂಗಾಣ.

ಚಿತ್ರಕೃಪೆ: Arindam Ghosh

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಭದ್ರಾಚಲಂನ ಉತ್ತರಕ್ಕಿರುವ ಸುಂದರ ಹಾಗು ನಯನ ಮನೋಹರವಾದಂತಹ ಬೋಗತ ಜಲಪಾತ ಕೇಂದ್ರ.

ಚಿತ್ರಕೃಪೆ: Chatwithmahesh

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಹೈದರಾಬಾದ್ ಪಶ್ಚಿಮಕ್ಕೆ 11 ಕಿ.ಮೀ ಗಳಷ್ಟು ದೂರದಲ್ಲಿರುವ ಪ್ರಸಿದ್ಧ ಐತಿಹಾಸಿಕ, ಪ್ರಸ್ತುತ ಪ್ರವಾಸಿ ಆಕರ್ಷಣೆಯಾಗಿರುವ ಗೊಲ್ಕೊಂಡಾ ಕೋಟೆ. ಕೋಹಿನೂರ್, ನಸ್ಸಕ್ ಹಾಗೂ ಹಾಪ್ ನಂತಹ ವಿಶ್ವದ ಅತಿ ಸುಂದರ ಹಾಗೂ ಅತಿ ದುಬಾರಿ ವಜ್ರಗಳು ಈ ತಾಣದ ಉತ್ಪನ್ನಗಳಾಗಿರುವುದು ಬಲು ವಿಶೇಷ ಹಾಗೂ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಚಿತ್ರಕೃಪೆ: Masrur Ashraf

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಹೈದರಾಬಾದ್ ಹೊರವಲಯದಲ್ಲಿರುವ ಭಾರತದ ಅತಿ ದೊಡ್ಡ ರಾಮೋಜಿ ಫಿಲ್ಮ್ ಸಿಟಿ. ಪ್ರತಿ ದಿನ ಇಲ್ಲಿ ಹಲವಾರು ಧಾರವಾಹಿ, ವಿವಿಧ ಭಾಷೆಗಳ ಚಲನ ಚಿತ್ರಗಳು, ಚಿತ್ರೀಕರಣಗೊಳ್ಳುತ್ತಿರುತ್ತವೆ. ಹೀಗೊಂದು ರಾಜಸಭೆಯ ವೈಭವವನ್ನು ಅನಾವರಣಗೊಳಿಸುವ ಸೆಟ್.

ಚಿತ್ರಕೃಪೆ: Ankur P

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ವಿಜಯವಾಡಾದ ಕೃಷ್ಣಾ ನದಿಯ ಮೇಲ್ಮೈನಿಂದ ಕಂಡುಬರುವ ಗುಡ್ಡ ಹಾಗೂ ಅಲ್ಲಿ ಸ್ಥಾಪಿತವಾಗಿರುವ ದುರ್ಗೆಯ ದೇವಸ್ಥಾನ.

ಚಿತ್ರಕೃಪೆ: Ashwin Kumar

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಆಂಧ್ರಪ್ರದೇಶದ ವೈಜಾಗ್ ಅಥವಾ ವಿಶಾಖಾಪಟ್ಟಣಂನ ಪ್ರಖ್ಯಾತ ರಿಶಿಕೊಂಡ ಕಡಲ ತೀರದ ಸುಂದರ ನೋಟ.

ಚಿತ್ರಕೃಪೆ: Amit Chattopadhyay

ಭವ್ಯ ಭಾರತದ ಅದಮ್ಯ ಗುರುತುಗಳು:

ಭವ್ಯ ಭಾರತದ ಅದಮ್ಯ ಗುರುತುಗಳು:

ಗುಜರಾತ್ ರಾಜ್ಯದಲ್ಲಿ ಮಕರ ಸಂಕ್ರಾಂತಿಯು ಅತ್ಯಂತ ವೈಭವದಿಂದ ಆಚರಿಸಲ್ಪಡುತ್ತದೆ. ಇಲ್ಲಿ ಇದನ್ನು ಉತ್ತರಾಯಣ ಎಂದೆ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ದಿನ ಹಾಗೂ ರಾತ್ರಿಗಳು ವಿಶೇಷವಾಗಿರುತ್ತವೆ. ದಿನವೆಲ್ಲ ಪೂರ್ತಿಯಾಗಿ ಗಾಳಿ ಪಟಗಳನ್ನು ಹಾರಿಸಿದರೆ ರಾತ್ರಿಯ ಸಮಯದಲ್ಲಿ ಆಗಸದಲ್ಲಿ ದಿಪ ಹಚ್ಚಿಕೊಂಡು ಹಾರುವ ಆಕಾಶಬುಟ್ಟಿಗಳನ್ನು ಬಿಡುತ್ತಾರೆ. ಈ ಸುಂದರ ಅನುಭವ ಪಡೆಯುವ ಇಚ್ಛೆ ನಿಮಗಿದ್ದಲ್ಲಿ ಜನವರಿಯ ಸಂದರ್ಭದಲ್ಲಿ ಗುಜರಾತ್ ರಾಜ್ಯಕ್ಕೊಮ್ಮೆ ಭೇಟಿ ನೀಡಿ.

ಚಿತ್ರಕೃಪೆ: Bhavishya Goel

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X