Search
  • Follow NativePlanet
Share
» »ಇವು ಆಶ್ಚರ್ಯ, ದಿಗ್ಭ್ರಮೆಗೊಳಿಸುವ ಹಳ್ಳಿಗಳು

ಇವು ಆಶ್ಚರ್ಯ, ದಿಗ್ಭ್ರಮೆಗೊಳಿಸುವ ಹಳ್ಳಿಗಳು

By Vijay

ಗ್ರಾಮ, ಹಳ್ಳಿ ಇವು ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಪದ. ಭಾರತದಲ್ಲಂತೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಳ್ಳಿಗಳಿವೆ. ಹಳ್ಳಿಗಳೆಂದ ತಕ್ಷಣ ಬಹುತೇಕರಿಗೆ ಸಾಮಾನ್ಯವಾಗಿ ಒಂದು ರೀತಿಯ ಚಿತ್ರಣ ಮನದಲ್ಲಿ ಮೂಡಿ ಬರುತ್ತದೆ. ಗುಡಿಸಲುಗಳು, ರೈತಾಪಿ ಜನವರ್ಗ, ಜಾನುವಾರಗಳು, ಕೃಷಿ ಭೂಮಿಗಳು, ಟಾರ್ ಗಳಿಲ್ಲದೆ ರಸ್ತೆಗಳು, ಸೊಂಪಾಗಿ ಬೆಳೆದ ಗಿಡ ಮರಗಳು ಹೀಗೆ ಹಲವು ರೀತಿಯಿಂದ ಹಳ್ಳಿಗಳ ಚಿತ್ರಣವನ್ನು ಊಹಿಸಿಕೊಳ್ಳಬಹುದು.

ಇನ್ನೊಂದು ಸಂಗತಿ ಹೇಳಬೇಕೆಂದರೆ ಬಹುತೇಕರಿಗೆ ಹಳ್ಳಿಗಳಿಗೆಲ್ಲ ಸುತ್ತಾಡ ಬೇಕೆಂದರೆ ಆಗಿ ಬರುವುದಿಲ್ಲ. ನಗರ ಜೀವನಕ್ಕೆ ಒಗ್ಗಿ ಕೊಂಡವರಿಗಂತೂ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳು ದುರ್ಲಭವಾಗಿ ಸಿಗುವುದರಿಂದ ಹಳ್ಳಿಗಳಿಗೆ ತೆರಳುವುದು ಒಂದು ರೀತಿಯ ಕಿರಿ ಕಿರಿ ಉಂಟಾಗುವಂತೆ ಮಾಡುತ್ತದೆ.

ನಿಮಗಿಷ್ಟವಾಗಬಹುದಾದ : ಭಾರತದ ಹತ್ತು ರೋಮಾಂಚಕ ಸ್ಥಳಗಳು

ಆದರೆ ಕಾಲ ಕಳೆದಂತೆ ನಿಧಾನವಾಗಿ ಇಂದು ನಗರ ಮನುಷ್ಯ ಹಳ್ಳಿಗಳನ್ನು ಪ್ರೀತಿಸಲಾರಂಭಿಸಿದ್ದಾನೆ. ಅಲ್ಲಿ ಸಿಗುವ ನೈಜ ಪರಿಸರ, ಕಲ್ಮಶರಹಿತ ವಾತಾವರಣಕ್ಕೆ ಮನ ಸೋತಿದ್ದಾನೆಂದರೂ ತಪ್ಪಾಗಲಾರದು. ಆದರೆ ನಿಮಗಿದು ಗೊತ್ತೆ ಕೆಲವು ಹಳ್ಳಿಗಳು ಅತ್ಯಂತ ವಿಶಿಷ್ಟವಾಗಿದ್ದು ನಗರಗಳಿಗೂ ಸೆಡ್ಡು ಹೊಡೆಯುವಂತಿವೆ. ಇವು ಚಕಿತಗೊಳಿಸುವ ಭಾರತದ ಅಪರೂಪದ ಹಳ್ಳಿಗಳು.

ಈ ಹಳ್ಳಿಗಳ ಕುರಿತು ಇರುವ ವಿಶೇಷತೆಗಳನ್ನು ಕೇಳಿದರೆ, ನೀವು ಸುಸ್ತಾಗಿ ಹೋಗುತ್ತೀರಿ. ಹುಬ್ಬೇರಿಸುತ್ತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೀರಿ. ಇದು ನಿಜ, ಏಕೆಂದರೆ ಈ ಹಳ್ಳಿಗಳ ವಿಶೇಷತೆಗಳೆ ಹಾಗಿದೆ. ಪ್ರಸ್ತುತ ಲೇಖನದಲ್ಲಿ ಆ ಕೆಲವು ಅಪರೂಪದ ಹಾಗೂ ವಿಶೇಷತೆಯುಳ್ಳ ಹಳ್ಳಿಗಳ ಕುರಿತು ತಿಳಿಸಲಾಗಿದೆ. ನೀವು ಒಮ್ಮೆ ಈ ಹಳ್ಳಿಗಳಿಗೆ ಭೇಟಿಯಿತ್ತು ನೋಡಿ.

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಮಾವ್ಲಿನ್ನಾಂಗ್ : ಮೇಘಾಲಯ ರಾಜ್ಯದ ಪೂರ್ವ ಖಾಸಿ ಜಿಲ್ಲೆಯ ಪೈನುರ್ಸ್ಲಾ ಭಾಗದಲ್ಲಿರುವ ಈ ಹಳ್ಳಿಯು ಕೇವಲ ಭಾರತ ಮಾತ್ರವಲ್ಲ ಸಂಪೂರ್ಣ ಏಷಿಯಾ ಖಂಡದಲ್ಲೆ ಅತಿ ಸ್ವಚ್ಛವಿರುವ ಹಳ್ಳಿಯಾಗಿದೆ. ಹೌದು ನೀವು ಕೇಳುತ್ತಿರುವುದು ನಿಜ. ಇಲ್ಲಿನ ರಸ್ತೆಗಳ ಮೇಲಾಗಲಿ, ಅದಿ ಬದಿಗಳಲ್ಲಾಗಲಿ ಸ್ವಲ್ಪವೂ ಕಸ, ಗಲೀಜುಗಳು ಕಾಣಸಿಗದು.

ಚಿತ್ರಕೃಪೆ: Ashwin Kumar

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ರಾಜಧಾನಿ ಶಿಲ್ಲಾಂಗ್ ನಗರ ಕೇಂದ್ರದಿಂದ ಸುಮಾರು 90 ಕಿ.ಮೀ ದೂರದಲ್ಲಿ ಹಚ್ಚ ಹಸಿರಿನಿಂದ ಕೂಡಿದ ದಟ್ಟ ಕಾಡುಗಳ ಮಧ್ಯದಲ್ಲಿ, ತಾಜಾ ನೀರಿನ ಕೆರೆ ತೊರೆಗಳ ಮಧ್ಯದಲ್ಲಿ ಈ ಸ್ವಚ್ಛವಾದ ಗ್ರಾಮವಿದ್ದು ಭೇಟಿ ನೀಡುವವರಿಗೆ ಅತ್ಯದ್ಭುತ ಅನುಭವ ಕರುಣಿಸುತ್ತದೆ.

ಚಿತ್ರಕೃಪೆ: Ashwin Kumar

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ನೂರು ಪ್ರತಿಶತ ಸಾಕ್ಷರತೆ, ಸುಮಾರು 500 ಕ್ಕೂ ಹೆಚ್ಚು ಜನರು ವಾಸವಿರುವ ಈ ಗ್ರಾಮದ ಸುತ್ತಮುತ್ತಲಿನ ಪರಿಸರ ನಿಜಕ್ಕೂ ಸಂತೋಷದಾಯಕವಾಗಿದೆ. ಗ್ರಾಮದ ಜನರ ಮುಖ್ಯ ಕಸುಬು ವೀಳ್ಯದೆಲೆ ಬೆಳೆಯುವುದಾಗಿದೆ.

ಚಿತ್ರಕೃಪೆ: Travelling Slacker

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಕಸ, ತ್ಯಾಜ್ಯಗಳನ್ನು ಇಲ್ಲಿನ ಜನರು ಬಿದಿರಿನಿಂದ ಮಾಡಿದ ಬುಟ್ಟಿಗಳಲ್ಲಿ ತುಂಬಿಸಿ, ತೋಡಲಾದ ಕುಳಿಯಲ್ಲಿ ತುಂಬಿ ನಂತರ ಅದನ್ನು ಗೊಬ್ಬರವನ್ನಾಗಿ ಬಳಸುತ್ತಾರೆ. ಯಾರೆ ಆಗಲಿ ಕಸಗಳನ್ನು ಅಲ್ಲಿ ಇಲ್ಲಿ ಎಸೆಯುವ ಹಾಗಿಲ್ಲ. ಭೇಟಿ ನೀಡುವ ಪ್ರವಾಸಿಗರೂ ಸಹ ಅಚ್ಚುಕಟ್ಟಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಹೀಗಾಗಿ ಇದು ಭಾರತದ ಅತಿ ಅತಿ ಸ್ವಚ್ಛ ಗ್ರಾಮವೆಂದೆ ಹೆಗ್ಗಳಿಕೆ ಗಳಿಸಿದೆ.

ಚಿತ್ರಕೃಪೆ: Travelling Slacker

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಕುಲಧಾರಾ : ಇದು ಪಿಶಾಚಗ್ರಸ್ತ, ಆತ್ಮಗಳ ಗ್ರಾಮವೆಂದೆ ಪ್ರಸಿದ್ಧವಾಗಿದೆ. ಇಲ್ಲಿ ಒಂದು ರಾತ್ರಿ ಕಳೆಯುವುದು ಅತಿ ಕಷ್ಟಕರ ಹಾಗೂ ಭಯಾನಕ ಎನ್ನಲಾಗುತ್ತದೆ. ರಾಜಸ್ಥಾನ ರಾಜ್ಯದ ಜೈಸಲ್ಮೇರ್ ನಗರದ ಪಶ್ಚಿಮಕ್ಕೆ ಸುಮಾರು 17 ಕಿ.ಮೀ ದೂರದಲ್ಲಿ ಈ ಪಾಳು ಬಿದ್ದ ಆದರೆ ಪ್ರವಾಸಿ ಆಕರ್ಷಣೆಯಾಗಿರುವ ಈ ಗ್ರಾಮವಿದೆ.

ಚಿತ್ರಕೃಪೆ: Mirza Asad Baig

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ದಂತಕಥೆಯಂತೆ ಹಿಂದೆ ಅಂದರೆ ಸುಮಾರು 300 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಪಲಿವಾಲ್ ಬ್ರಾಹ್ಮಣ ಸಮುದಾಯದವರಿದ್ದರು. ಈ ಪ್ರಾಂತದ ದೃಷ್ಟ ರಾಜನ ಕಣ್ಣು ಆ ಸಮುದಾಯದ ನಾಯಕನ ಮಗಳ ಮೇಲೆ ಬಿತ್ತು ಹಾಗೂ ಅವನು ಅವಳನ್ನು ಬಲ ಪ್ರಯೋಗದಿಂದಾದರೂ ಸರಿ ಪಡಿಯಬೇಕೆಂದು ನಿಶ್ಚಯಿಸಿದನು.

ಚಿತ್ರಕೃಪೆ: Tomas Belcik

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಅದರಂತೆ ಆ ಬ್ರಾಹ್ಮಣ ಸಮುದಾಯಕ್ಕೆ ತನ್ನ ಇಚ್ಛೆ ಹೇಳಿ ಅದಕ್ಕೊಪ್ಪದಿದ್ದರೆ ಸರವರನ್ನೂ ನಾಶ ಮಾಡುವುದಾಗಿ ಹೇಳಿ ಒಂದು ದಿನ ಸಮಯ ಕೊಟ್ಟು ತೆರಳಿದ. ಇತ್ತ ಆ ಬ್ರಾಹ್ಮಣ ಸಮುದಾಯದ ಹಿರಿಯರು ಒಟ್ಟುಗೂಡಿ ಮಾತನಾಡಿ ರಾತೋರಾತ್ರಿ ಆ ಹಳ್ಳಿ ಬಿಟ್ಟು ತೆರಳಿದರು ಹಾಗೂ ಇಲ್ಲಿ ಯಾರೊಬ್ಬರೂ ನೆಲೆಸಲಾರದಂತೆ ಶಾಪವಿಟ್ಟರು.

ಚಿತ್ರಕೃಪೆ: Tomas Belcik

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಹೀಗಾಗಿ ಇಂದಿಗೂ ಕುಲಧಾರಾ ಪಾಳು ಬಿದ್ದ ಗ್ರಾಮವಾಗಿದೆ. ದಿನದ ಸಮಯದಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರಾದರೂ ಸಂಜೆಯ ನಂತರ ಇಲ್ಲಿ ಪ್ರವೇಶ ನಿಶಿದ್ಧ. ಪ್ರವೇಶಿಸಲು ಶುಲ್ಕವಿದ್ದು ಎಷ್ಟೊ ಜನ ಪ್ರವಾಸಿಗರು ತಾವಿಲ್ಲಿ ಭೇಟಿ ನೀಡಿದಾಗ ಹಲವು ವಿಚಿತ್ರಗಳು ಹಾಗೂ ಭಯಮಿಶ್ರಿತ ಭಾವನೆಯನ್ನು ಅನುಭವಿಸಿದ್ದಾರೆಂದು ಒಪ್ಪಿಕೊಂಡಿದ್ದಾರಂತೆ!

ಚಿತ್ರಕೃಪೆ: Chandra

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಕುಲ್ಲು ಮನಾಲಿಯ ಕುಲ್ಲು ಕಣಿವೆಯ ಕುರಿತು ಬಹುತೇಕರಿಗೆ ಗೊತ್ತಿರಲೇಬೇಕು. ಆದರೆ ಕುಲ್ಲು ಕಣಿವೆಯ ಬಳಿಯಲ್ಲಿ ಪಾರ್ವತಿ ಕಣಿವೆ ಹಾಗೂ ಪರ್ವತವೊಂದರ ನೆರಳಿನಲ್ಲಿ ಅಡಗಿ ಕುಳಿತಿರುವ ಮಲಾನಾ ಗ್ರಾಮದ ಕುರಿತು ಬಹುತೇಕ ಯಾರಿಗೂ ಗೊತ್ತಿರಲಿಕ್ಕಿಲ್ಲ.

ಚಿತ್ರಕೃಪೆ: RuckSackKruemel

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಈ ಗ್ರಾಮದ ವಿಶೇಷತೆ ಎಂದರೆ ಇಲ್ಲಿನ ನಿವಾಸಿಗಳು ತಾವು ಅಲೆಕ್ಸಾಂಡರ್ ದೊರೆಯ ಸೈನಿಕರ ವಂಶಸ್ಥರೆಂದು ನಂಬುತ್ತಾರೆ. ಜಂಬ್ಲು ದೇವಿ ಗ್ರಾಮ ದೇವಿಯಾಗಿದ್ದು ಗ್ರಾಮದ ಹನ್ನೊಂದು ಆಯ್ದ ಜನರು ದೇವಿಯ ಪ್ರತಿನಿಧಿಗಳಾಗಿರುತ್ತಾರೆ. ಇವರು ತಮ್ಮದೆ ಆದ ಪ್ರಜಾಪ್ರಭುತ್ವವನ್ನು ಹೊಂದಿದ್ದು ಅದು ಜಗತ್ತಿನ ಅತಿ ಪುರಾತನ ಪ್ರಜಾಪ್ರಭುತವಾಗಿದೆ ಎಂದು ನಂಬುತ್ತಾರೆ.

ಚಿತ್ರಕೃಪೆ: RuckSackKruemel

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಇವರು ತಮ್ಮ ಆಚಾರ-ವಿಚಾರ, ಸಂಪ್ರದಾಯ ಸಂಸ್ಕೃತಿಗಳ ಮೇಲೆ ಅಪಾರ ನಂಬಿಕೆ ಉಳ್ಳವರಾಗಿದ್ದು ತಪ್ಪದೆ ಅನುಸರಿಸುತ್ತಾರೆ. ಯಾವುದೆ ತಗಾದೆಗಳು ಉದ್ಭವಿಸಿದಲ್ಲಿ ದೇವಿಯ ಪ್ರತಿನಿಧಿಗಳು ಕೊಡುವ ತೀರ್ಪೆ ಅಂತಿಮ. ಅದನ್ನು ಯಾವ ಕಾರಣದಿಂದಲೂ ಸವಾಲು ಮಾಡುವಂತಿಲ್ಲ.

ಚಿತ್ರಕೃಪೆ: Joachim Götz

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಇನ್ನೂ ಪ್ರವಾಸಿಗರು ಈ ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಭಾವನೆಗಳಿಗೆ ಗೌರವ ಕೊಟ್ಟು ನಡೆಯುವುದು ಉತ್ತಮ. ಏಕೆಂದರೆ ಇವರು ಬೇರೆಡೆಯಿಂದ ಬಂದವರನ್ನು ಮುಟ್ಟಿಸಿಕೊಳ್ಳಲಾರರು. ಅದು ಅಪ್ವೈತ್ರವೆಂದು ನಂಬುತ್ತಾರೆ. ಊಟ್- ತಿಂಡಿಗಳಿಗೆ ವಿಶೇಷವಾದ ವ್ಯವಸ್ಥೆಗಳನ್ನು ಮಾಡುತ್ತಾರೆ. ಅಲ್ಲದೆ ಇಲ್ಲಿ ಭೇಟಿ ನೀಡುವವರು ಅವರಿರುವ ಸಮಯದವರೆಗೆ ಮಲಾನಾ ಪ್ರಜಾಪ್ರಭುತ್ವಕ್ಕೆ ಒಪ್ಪುವ ಶರತ್ತು ವಿಧಿಸುತ್ತಾರೆ.

ಚಿತ್ರಕೃಪೆ: Joachim Götz

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಮೊದಲಿಗೆ ಮಲಾನಾ ತಲುಪುವುದು ಬಲು ಕಷ್ಟಕರವಾಗಿತ್ತು. ಆದರೆ ಇಂದು ಅದು ಸುಲಭವಾಗಿದ್ದು ಮನಾಲಿಗೆ ತಲುಪಿ ಅಲ್ಲಿಂದ ಬಾಡಿಕೆ ಟ್ಯಾಕ್ಸಿಗಳ ಮೂಲಕ ಜರಿ ಮೂಲಕ ನೆರಂಗ್ ವರೆಗೂ ತಲುಪಬಹುದು. ನೆರಂಗ್ ನಿಂದ ಎರಡು ಘಂಟೆಗಳಷ್ಟು ಟ್ರೆಕ್ ಮಾಡುತ್ತ ಮಲಾನಾ ತಲುಪಬಹುದು.

ಚಿತ್ರಕೃಪೆ: Joachim Götz

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಹಿವಾರೆ ಬಜಾರ್ : ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯು ಬೇಸಿಗೆಯಲ್ಲಿ ಸಾಕಷ್ಟು ತಾಪಮಾನ ಅನುಭವಿಸುತ್ತದೆ. ಅಭಿವೃದ್ಧಿ ಕಾರ್ಯಗಳು ಇನ್ನೂ ಆಗಬೇಕು. ಇಷ್ಟೆಲ್ಲ ತೊಂದರೆಗಳ ನಡುವೆಯೂ ಈ ಜಿಲ್ಲೆಯ ಒಂದು ಹಳ್ಳಿಯು ಮಾತ್ರ ನಂಬಲಸಾಧ್ಯವಾದ ಸಾಧನೆ ಮಾಡಿದೆ. ಅದೆ ಹಿವಾರಿ ಬಜಾರ್. ನೀವು ನಂಬಲೇಬೇಕಾದ ಸತ್ಯ ಎಂದರೆ ಇದು ಭಾರತದಲ್ಲೆ ಅತಿ ಶ್ರೀಮಂತ ಹಳ್ಳಿ. ಇಲ್ಲಿ 60 ಕ್ಕೂ ಅಧಿಕ ಕುಟುಂಬಗಳು ಲಕ್ಷಾಧೀಶ್ವರರಲ್ಲ! ಮಿಲಿಯನಾಧಿಪತಿಗಳು. 1995 ರಲ್ಲಿ ಪರ್ ಕ್ಯಾಪಿಟಾ ಆದಾಯ ಮಾಸಿಕ 830 ರೂ.ನಷ್ಟಿದ್ದಿದ್ದು 2015 ರಲ್ಲಿ 30,000 ರೂ.ಗೂ ಅಧಿಕವಾಗಿದೆ. ಇದು ಹಳ್ಳಿಯ ಪಂಚಾಯತ ಸದನ.

ಚಿತ್ರಕೃಪೆ: Naga rick

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಈ ಹಳ್ಳಿಯು ಬೇರೆಲ್ಲ ಗ್ರಾಮಗಳಿಗೆ ಹೋಲಿಸಿದರೆ ಸಾಕಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವೈಫೈ ಸೌಲಭ್ಯ, ಮಳೆ ನೀರು ಕೊಯ್ಲು ಹೀಗೆ ಸಾಕಷ್ಟು ಪ್ರಗತಿ ಸಾಧಿಸಿ ಪ್ರತಿಯೊಬ್ಬರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಗ್ರಾಮದ ಜನರು ಸಾಕಷ್ಟು ಮುಂದುವರೆದವರಾಗಿದ್ದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗ್ರಾಮದ ಅಭಿವೃದ್ಧಿಗೆ ಮುಖ್ಯ ಕಾರಣ ಇಲ್ಲಿನ ಸರಪಂಚರಾದ ಪೋಪಟ್ ರಾವ್ ಪವಾರ್ ಎಂಬುವವರು.

ಚಿತ್ರಕೃಪೆ: Naga rick

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ರಾಲೇಗಣ್ ಸಿದ್ಧಿ : ಮಹಾರಾಷ್ಟ್ರದ ಅಹ್ಮದ ನಗರ ಜಿಲ್ಲೆಯಲ್ಲಿರುವ ಮತ್ತೊಂದು ಮಾದರಿ ಗ್ರಾಮ. ನಿಜ ಹೇಳಬೇಕೆಂದರೆ ರಾಲೇಗಣ್ ಸಿದ್ಧಿ ಗ್ರಾಮದಿಂದಲೆ ಈ ಹಿಂದೆ ಹೇಳಲಾದ ಹಿವಾರಿ ಬಜಾರ್ ಪ್ರಭಾವಿತಗೊಂಡಿದೆ. ಹಿಂದೊಮ್ಮೆ ನೀರಿನ ತೀವ್ರ ಅಭಾವವಿದ್ದ ಈ ಗ್ರಾಮವು ಇಂದು ಗ್ರಾಮನಿವಾಸಿಗಳ ಪರಿಶ್ರಮದಿಂದ ವರ್ಷದ ಎಲ್ಲ ಸಮಯ ನೀರು ಹೊಂದುವಂತಾಗಿದೆ. ಬಡತನ ಹೆಚ್ಚು ಕಡಿಮೆ ಮಾಯವಾಗಿದೆ. ಇದೆಲ್ಲ ಶ್ರೇಯಕ್ಕೂ ಇಲ್ಲಿನ ಸರಪಂಚರಾದ ಪದ್ಮಭೂಷಣ ಅಣ್ಣಾ ಹಜಾರೆಯವರ ಪರಿಶ್ರಮವಿದೆ. ಅಣ್ಣಾ ಹಜಾರೆ ತಮ್ಮ ರಾಲೇಗಣ್ ಸಿದ್ಧಿ ಗ್ರಾಮದಲ್ಲಿ.

ಚಿತ್ರಕೃಪೆ: Praj0148

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಮುನಸಿಯಾರಿ : ದಟ್ಟ್ಟ ಹಸಿರಿನಿಂದ ಕೂಡಿದ, ಸುತ್ತಲೂ ಹಿಮಾಲಯದ ಅತ್ಯದ್ಭುತ ಶ್ವೇತ ಪರ್ವತಗಳಿಂದ ಸುತ್ತುವರಿದ, ಕಲ್ಪನಾ ಲೋಕದಂತಿರುವ ಒಂದು ಸುಂದರ ತಾಣಕ್ಕೆ ಭೇಟಿ ನೀಡಬೇಕೆ? ಹಾಗಿದ್ದರೆ ಉತ್ತರಾಖಂಡ ರಾಜ್ಯದ ಪಿತ್ತೋರ್ಗಡ್ ಜಿಲ್ಲೆಯಲ್ಲಿರುವ ಮುನಸಿಯಾರಿ ಹಳ್ಳಿಗೆ ಭೇಟಿ ನೀಡಿ.

ಚಿತ್ರಕೃಪೆ: Arfi

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಹಿಮಾಲಯದ ಬುಡದಲ್ಲಿ ನೆಲೆಸಿರುವ ಈ ಗ್ರಾಮ ತನ್ನದೆ ಆದ ವಿಶೇಷತೆಗಲಿಂದ ಕೂಡಿದ್ದು ಈಗೀಗ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ವಿಶೇಷವೆಂದರೆ ಇದು ಅನೇಕ ಸಾಹಸಮಯ ಹಾಗೂ ಜನಪ್ರೀಯ ಟ್ರೆಕ್ ಮಾರ್ಗಗಳ ಬೇಸ್ ಕ್ಯಾಂಪ್ ಆಗಿ ಕಾರ್ಯನಿರ್ವಹಿಸುತ್ತದೆ.

ಚಿತ್ರಕೃಪೆ: Ekabhishek

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ದಿನದ 24 ಗಂಟೆ ವೈಫೈ, ಸೌರಶಕ್ತಿಯ ಬೀದಿ ದೀಪಗಳು, ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹೀಗೆ ಅನೇಕ ಸೌಲಭ್ಯಗಳನ್ನು ನೀವೆಲ್ಲಾದರೂ ಹಳ್ಳಿಗಳಲ್ಲಿ ನೋಡಿದ್ದೀರಾ? ನೋಡಿಲ್ಲ ಎಂದರೆ ಒಂದ್ಸಲ ಗುಜರಾತ್ ರಾಜ್ಯದ ಸಬರಕಾಂತಾ ಜಿಲ್ಲೆಯ ಪುನ್ಸಾರಿ ಗ್ರಾಮಕ್ಕೆ ಭೇಟಿ ನೀಡಿ. ರಾಜಧಾನಿ ಗಾಂಧಿನಗರದಿಂದ 80 ಕಿ.ಮೀ ದೂರದಲ್ಲಿರುವ ಈ ಸ್ಥಳ ಗ್ರಾಮವಾದರೂ ಎಲ್ಲ ರೀತಿಯ ಸಕಲ ಸೌಲಭ್ಯಗಳನ್ನು ಹೊಂದಿದ್ದು ವಿಶೆಷವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Nicosiaparks

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಪೊತನಿಕ್ಕಾಡ್ : ಕೇರಳದ ಎರ್ನಾಕುಲಂ ಬಳಿಯಿರುವ ಈ ಗ್ರಾಮ ಒಂದು ವಿಶೇಷ ಹೆಗ್ಗಳಿಕೆಯನ್ನು ಹೊಂದಿದೆ. ಭಾರತದಲ್ಲೆ ನೂರು ಪ್ರತಿಶತದಷ್ಟು ಸಂಪೂರ್ಣ ಸಾಕ್ಷರತೆ ಹೊಂದಿದ ಪ್ರಪ್ರಥಮ ಹಳ್ಳಿ ಇದಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: DanielbdaDirector

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಕೋದಿನ್ಹಿ : ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಈ ಗ್ರಾಮವು ತನ್ನಲ್ಲಿರುವ ಅತಿ ಹೆಚ್ಚಿನ ಸಂಖ್ಯೆಯ ಅವಳಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೆ ಹೆಸರು ಮಾಡಿದೆ. ಹೌದು ಈ ಒಂದು ಪುಟ್ಟ ಗ್ರಾಮದಲ್ಲಿ 200 ಕ್ಕೂ ಅಧಿಕ ಜೊತೆಗಳ ಅವಳಿಗಳನ್ನು ಕೆಲವು ಜೊತೆ ತ್ರಿವಳಿಗಳನ್ನೂ ಕಾನಬಹುದಾಗಿದೆ. ನೀವು ಒಮ್ಮೆ ಭೇಟಿ ನೀಡಿ ನೋಡಿ ಬನ್ನಿ. ಸಾಮ್ದರ್ಭಿಕ ಚಿತ್ರ.

ಚಿತ್ರಕೃಪೆ: Perumalnadar

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಕೊಕ್ಕರೆಬೆಳ್ಳೂರು : ಮೂಕ ಜೀವಿಗಳಿ ಪ್ರೀತಿಯ ಆಸರೆ ಕಲ್ಪಿಸಿ ಆಶ್ರಯದಾತವಾಗಿದೆ ಈ ಹಳ್ಳಿ. ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ಈ ಗ್ರಾಮವು ಇಲ್ಲಿ ಬರುವ ವಿಶೇಷವಾದ ಕೊಕ್ಕರೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಅಂತೆಯೆ ಕೊಕ್ಕರೆಬೆಳ್ಳೂರು ಎಂಬ ಹೆಸರುಗಳಿಸಿದೆ.

ಚಿತ್ರಕೃಪೆ: Nvvchar

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಸಾಮಾನ್ಯವಾಗಿ ಪಕ್ಷಿಗಳು ರೈತರು ಬೆಳೆಯುವ ಬೆಳೆಗಳನ್ನು ಹಾಳು ಮಾಡಿ ಶತ್ರು ಎಂದೆನಿಸಿಕೊಂಡರೆ ಇಲ್ಲಿ ಬರುವ ಈ ವಿಶೇಷ ಕೊಕ್ಕರೆ ಪಕ್ಷಿಗಳು ಇಲ್ಲಿನ ನಿವಾಸಿಗರ ಪ್ರೀತಿಯ ಅತಿಥಿಗಳಾಗಿವೆ. ಅಲ್ಲದೆ ಇವುಗಳಿಗೆ ಗ್ರಾಮಸ್ಥರೆ ಸೇರಿ ಪ್ರತ್ಯೇಕವಾದ ಸ್ಥಳ ನಿರ್ಮಿಸಿದ್ದು ಅಲ್ಲಿ ಇವು ನಿರಾತಂಕವಾಗಿ ವಿರಮಿಸುತ್ತವೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಕೊಕ್ಕರೆಬೆಳ್ಳೂರು ಪ್ರಸಿದ್ಧವಾಗಿದೆ. ಕೇವಲ ಕೊಕ್ಕರೆಗಳಲ್ಲದೆ ಇತರೆ ಪಕ್ಷಿಗಳನ್ನೂ ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: Nvvchar

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಮೊದಲಿಗೆ ಈ ಹಳ್ಳಿಯಲ್ಲಿ ಅಲ್ಕೋಹಾಲ್ ಸೇವಿಸುವವರ ಪ್ರಮಾಣ 70% ರಷ್ಟಿತ್ತು. ಒಂದು ಶೌಚಾಲಯವೂ ಸಹ ಇರಲಿಲ್ಲ. ಎಲ್ಲೆಲ್ಲೂ ಗಲೀಜು. ಇಂತಹ ಒಂದು ಹಳ್ಳಿ ಇಂದು ನೋಡಿದರೆ ನೀವು ದಿಗ್ಭ್ರಮೆಗೊಳ್ಳುವ ಹಾಗಿದೆ. ಮದ್ಯ ಕುಡಿಯುವವರು ಒಬ್ಬರೂ ಇಲ್ಲ. ಇರುವ ಎಲ್ಲ ಕುಟುಂಬಗಳು ಶೌಚಾಲಯ ಹೊಂದಿವೆ. ಇನ್ನೊಂದು ಅಚ್ಚರಿ ಎಂದರೆ ಅಂಗಡಿಗಳಲ್ಲಿ ಅಂಗಡಿಯಾತ ಇರುವುದೇ ಇಲ್ಲ. ಅಲ್ಲಿರುವ ಸಾಮಾನುಗಳನ್ನು ತೆಗೆದುಕೊಂಡು ಅದರ ನಿಗದಿತ ಶುಲ್ಕವನ್ನು ಹಣದ ಪೆಟ್ಟಿಗೆಯಲ್ಲಿ ಹಾಕಿ ಜನರು ಮರಳುತ್ತಾರೆ. ಹೌದು ಈ ಮಾದರಿ ಹಾಳಿಯೆ ಕಾಥೇವಾಡಿ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿದೆ. ಹಿಂದೊಮ್ಮೆ ಕಸದಂತಿದ್ದ ಈ ಹಳ್ಳಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ದತ್ತು ಪಡೆದು ಇಂದು ಮಾದರಿ ಗ್ರಾಮವನ್ನಾಗಿ ಮಾಡಿ ರಸದಂತೆ ಮಾಡಿದೆ. ನೀವೂ ಒಮ್ಮೆ ಭೇಟಿ ನೀಡಿ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Gagan Josan

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ನಾಕೋ : ಒಂದು ಬದಿಯಿಂದ ಇನ್ನೊಂದು ಬದಿಗೆ ಸ್ಥಳಾಂತರಗೊಂಡ ಹಳ್ಳಿ. ಹಿಮಾಚಲ ಪ್ರದೇಶದ ಚೀನಾ ಗಡಿಗೆ ಸನೀಹವಾಗಿ ಕಿನ್ನೌರ್ ಜಿಲ್ಲೆಯಲ್ಲಿ ಈ ಸುಂದರವಾದ ಹಳ್ಳಿಯಿದೆ. ಇಲ್ಲಿನ ಪ್ರಮುಖ ಆಕರ್ಷಣೆ ನಾಕೊ ಕೆರೆ ಹಾಗೂ ಅತಿ ಪುರಾತನ ಬೌದ್ದ ದೇವಾಲಯ. ಮೊದಲಿ ಇಲ್ಲಿನ ನದಿಯ ಒಂದು ಬದಿಯಲ್ಲಿ ಈ ಹಳ್ಳಿ ಸ್ಥಿತವಿದ್ದು ನಂತರ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.

ಚಿತ್ರಕೃಪೆ: Sumita Roy Dutta

ಚಕಿತಗೊಳಿಸುವ ಹಳ್ಳಿಗಳು:

ಚಕಿತಗೊಳಿಸುವ ಹಳ್ಳಿಗಳು:

ಭೂಕಂಪನ ಚಲನವಲನಗಳು ಹೆಚ್ಚಾಗಿದ್ದ ಕಾರಣ ಇಂದು ಸಾಕಷ್ಟು ಭದ್ರವಾದ ನೆಲೆಯಲ್ಲಿ ಈ ಹಳ್ಳಿಯಿದೆ. ನಾಕೋ ಕೆರೆ ಅತಿ ಪ್ರಮುಖ ಹಾಗು ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದೆ. ಕಲ್ಪಾದಿಂದ ಈ ಹಳ್ಳಿಗೆ ತಲುಪಬಹುದಾಗಿದೆ. ಒಣ ಅಪ್ರಿಕೋಟ್ ಹಾಗೂ ಸೇಬು ಇಲ್ಲಿನ ಜನರ ಪ್ರಮುಖ ಬೆಳೆ.

ಚಿತ್ರಕೃಪೆ: Snotch

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X