Search
  • Follow NativePlanet
Share
» »ಕರ್ನಾಟಕ ರಾಜ್ಯದ ಹೆಮ್ಮೆಯ ದೇವಾಲಯವಿದು....

ಕರ್ನಾಟಕ ರಾಜ್ಯದ ಹೆಮ್ಮೆಯ ದೇವಾಲಯವಿದು....

ಭಾರತ ದೇಶವನ್ನು ಒಂದು ಆಧ್ಯಾತ್ಮಿಕವಾದ ದೇಶ ಎಂದು ಖ್ಯಾತಿ ಪಡೆದಿದೆ. ಇಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ನಮಗೆ ಕಾಣಿಸುವುದಿಲ್ಲ. ಆದ್ದರಿಂದಲೇ ಭಾರತ ದೇಶದಲ್ಲಿನ ಪ್ರಜೆಗಳ ಜೀವನವಿಧಾನದಲ್ಲಿ ದೇವಾಲಯ ಒಂದು ಭಾಗವಾಗಿದೆ. ಇನ್ನು ಈ ದೇವಾಲಯದಲ್ಲಿ ಕೆಲವು ನಿಗೂಢವಾದ ರಹಸ್ಯಗಳನ್ನು ಹೊಂದಿರುವ ವೇದಿಕೆ ಆಗಿದ್ದರೆ ಇನ್ನೂ ಕೆಲವು ದೇವಾಲಯಗಳು ತನ್ನ ಅದ್ಭುತವಾದ ಶಿಲ್ಪ ಸಂಪತ್ತಿನಿಂದ ಕಂಗೊಳಿಸುತ್ತಿವೆ.

ಅಂತಹುದೇ ಒಂದು ದೇವಾಲಯವು ನಮ್ಮ ಕರ್ನಾಟಕದಲ್ಲಿದೆ. ಆ ದೇವಾಲಯದ ಹೆಸರು ಅಮೃತೇಶ್ವರ ದೇವಾಲಯ. ಅಮೃತೇಶ್ವರ ದೇವಾಲಯದ ಅದ್ಭುತವಾದ ಶಿಲ್ಪಕಲೆಗಳನ್ನು ಕಣ್ಣಾರೆ ಕಾಣಬೇಕೇ ವಿನಃ ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರೆ ಅತಿಶೋಕ್ತಿಯಲ್ಲ ಈ ಮೂಲಕ ದೇವಾಲಯದ ಪೂರ್ತಿ ವಿವರಗಳನ್ನು ಲೇಖನದ ಮೂಲಕ ತಿಳಿದುಕೊಳ್ಳಿ.

೧. ಅಮೃತ ಪುರದಲ್ಲಿನ ಅಮೃತೇಶ್ವರ ದೇವಾಲಯ

೧. ಅಮೃತ ಪುರದಲ್ಲಿನ ಅಮೃತೇಶ್ವರ ದೇವಾಲಯ

PC:YOUTUBE

ಕರ್ನಾಟಕ ರಾಜ್ಯದಲ್ಲಿನ ಅದ್ಭುತವಾದ ದೇವಾಲಯಗಳಲ್ಲಿ ಅಮೃತೇಶ್ವರ ದೇವಾಲಯವೂ ಕೂಡ ಒಂದು. ಈ ಪ್ರಸಿದ್ಧವಾದ ದೇವಾಲಯ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಅಮೃತಪುರ ಎಂಬ ಚಿಕ್ಕ ಗ್ರಾಮದಲ್ಲಿದೆ.

೨. ಶಾಸನ

೨. ಶಾಸನ

PC:YOUTUBE

ಆ ಗ್ರಾಮಕ್ಕೆ ಅಮೃತೇಶ್ವರ ದೇವಾಲಯದಿಂದಲೇ ಅಮೃತಪುರ‌ ಎಂಬ ಹೆಸರು ಬಂದಿತು ಎಂದು ಹೇಳುತ್ತಾರೆ. ಅಪೂರ್ವವಾದ ಶಿಲ್ಪ ಸೌಂದರ್ಯದಿಂದ ಕಂಗೊಳಿಸುತ್ತಿರುವ ಈ ದೇವಾಲಯವನ್ನು ಹೊಯ್ಸಳ ರಾಜವಂಶಕ್ಕೆ ಸೇರಿದ ಎರಡನೇ ವೀರಬಲ್ಲಾಳ ನಿರ್ಮಿಸಿದ ಹಾಗೆ ಇಲ್ಲಿನ ಶಾಸನದ ಮೂಲಕ ತಿಳಿದುಬರುತ್ತದೆ.

೩. ಹೊಯ್ಸಳ ಶೈಲಿಯ ಶಿಲ್ಪ ಸೌಂದರ್ಯ

೩. ಹೊಯ್ಸಳ ಶೈಲಿಯ ಶಿಲ್ಪ ಸೌಂದರ್ಯ

PC:YOUTUBE

ಈ ದೇವಾಲಯದ ನಿರ್ಮಾಣದಲ್ಲಿ ಹೊಯ್ಸಳ ಶೈಲಿಯ ಶಿಲ್ಪ ಸೌಂದರ್ಯವು ಕಾಣಿಸುತ್ತದೆ. ವಿಶಾಲವಾದ ಮಂಟಪ ಈ ದೇವಾಲಯದಲ್ಲಿನ ಪ್ರಧಾನವಾದ ಆಕರ್ಷಣೆ. ಇನ್ನು ಈ ದೇವಾಲಯದಲ್ಲಿ ಸಹಜವಾದ ಪ್ರಹರಿ ಗೋಡೆ ಕೂಡ ಇದೆ.

೪. ಗರ್ಭಗುಡಿ

೪. ಗರ್ಭಗುಡಿ

PC:YOUTUBE

ದುಂಡು ಆಕಾರದಲ್ಲಿರುವ ಈ ಪ್ರಹರಿ ಗೋಡೆಯು ಅತ್ಯಂತ ಸುಂದರವಾಗಿ ಕಾಣಿಸುತ್ತದೆ. ಅದೇ ವಿಧವಾಗಿ ಇಲ್ಲಿ ಇರುವ ಹಾಗೆ ಒಂದು ಮಂಟಪವು ಮುಖಮಂಟಪವನ್ನು ಹಾಗು ಗರ್ಭಗುಡಿಯನ್ನು ಸೇರುವ ಹಾಗೆ ಇದೆ.

೫. ವೀರ ನಾರಾಯಣ ದೇವಾಲಯ

೫. ವೀರ ನಾರಾಯಣ ದೇವಾಲಯ

PC:YOUTUBE

ಈ ವಿಧಾನವನ್ನು ನಾವು ಹೊಯ್ಸಳ ಶಿಲ್ಪ ಶೈಲಿಯಲ್ಲಿ ಮಾತ್ರವೇ ಗಮನಿಸಬಹುದು. ಈ ದೇವಾಲಯದ ಸಂಪೂರ್ಣ ನಿರ್ಮಾಣವು ವೀರ ನಾರಾಯಣ ದೇವಾಲಯದ ಹೋಲಿಕೆಗಳಿವೆ.

೬. ಗರ್ಭಗುಡಿ

೬. ಗರ್ಭಗುಡಿ

PC:YOUTUBE

ಸುಮಾರು 29 ಅಡಿ ಎತ್ತರ ಹಾಗೂ ಒಂಬತ್ತು ಅಡಿ ಅಗಲವಿರುವ ಮಂಟಪದಿಂದ ಗರ್ಭಗುಡಿಯ ಒಳಭಾಗಕ್ಕೆ ಹೋಗಬಹುದು. ಗರ್ಭಗುಡಿಯು ಆಕಾರದಲ್ಲಿ ಇರುವುದನ್ನು ನಾವು ಗಮನಿಸಬಹುದು.

೭. ಭಾರತೀಯ ಶಿಲ್ಪ ಸೌಂದರ್ಯಕ್ಕೆ ಕನ್ನಡಿ

೭. ಭಾರತೀಯ ಶಿಲ್ಪ ಸೌಂದರ್ಯಕ್ಕೆ ಕನ್ನಡಿ

PC:YOUTUBE

ಗರ್ಭಗುಡಿಯ ಗೋಪುರದ ಮೇಲೆ ಇರುವ ಕೀರ್ತಿ ಮುಖಗಳು ಭಾರತೀಯ ಶಿಲ್ಪ ಸೌಂದರ್ಯಕ್ಕೆ ಕನ್ನಡಿಯಾಗಿದೆ. ಈ ದೇವಾಲಯದಲ್ಲಿನ ಮಂಟಪವನ್ನು ಗರ್ಭಗುಡಿಗೆ ಸೇರುವ ಮತ್ತೊಂದು ಚಿಕ್ಕದಾದ ಮಂಟಪ ಕೂಡ ಇದೆ.

೮.ಹೊಯ್ಸಳ ಸಾಮ್ರಾಜ್ಯದ ಚಿನ್ಹೆ

೮.ಹೊಯ್ಸಳ ಸಾಮ್ರಾಜ್ಯದ ಚಿನ್ಹೆ

PC:YOUTUBE

ಅದರ ಮೇಲೆ ಹೊಯ್ಸಳ ಸಾಮ್ರಾಜ್ಯದ ಚಿನ್ಹೆಯಾದ ಸಿಂಹವನ್ನು ಕೆತ್ತನೆ ಮಾಡಲಾಗಿದೆ ದೇವಾಲಯದ ಗರ್ಭಗುಡಿಯ ಮೇಲಿನ ಭಾಗದಲ್ಲಿ ಕೆತ್ತನೆ ಮಾಡಲಾದ ಪದ್ಮ ಆಕಾರವು ಅಂದಿನ ಶಿಲ್ಪಕಲೆಗೆ ಪ್ರತ್ಯಕ್ಷ ನಿದರ್ಶನ.

೯. ಪದ್ಮ ಕೆತ್ತನೆ

೯. ಪದ್ಮ ಕೆತ್ತನೆ

PC:YOUTUBE

ಸುಮಾರು ಸಾವಿರ ರೇಖೆಗಳಿಂದ ಕೂಡಿದ ಈ ಪದ್ಮ ಕೆತ್ತನೆಯನ್ನು ಕಾಣುವ ಸಲುವಾಗಿ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪದ್ಮ ಕೆತ್ತನೆಯು ಪ್ರವಾಸಿಗರ ಮುಖ್ಯ ಆಕರ್ಷಣೆ ಎಂದೇ ಹೇಳಬಹುದು. ಈ ದೇವಾಲಯದ ಗೋಡೆಯ ಮೇಲೆ ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಕೂಡ ಗಮನಿಸಬಹುದು. ೧೦. ಅದೇ ವಿಧವಾಗಿ ಕನ್ನಡ ಭಾಷೆಯ ಜೊತೆಜೊತೆಗೆ ದಕ್ಷಿಣ ಭಾರತಕ್ಕೆ ಸೇರಿದ ಭಾಷೆಗಳಾದ ಕೊಂಕಣಿ ತೆಲುಗಿಗೆ ಸೇರಿದ ಶಾಸನಗಳನ್ನು ಕೂಡ ನಾವು ಇಲ್ಲಿ ಕಾಣಬಹುದು.

೧೧. ಅನೇಕ ಪ್ರವಾಸಿತಾಣ

೧೧. ಅನೇಕ ಪ್ರವಾಸಿತಾಣ

PC:YOUTUBE

ಇಲ್ಲಿ ಸಮೀಪದಲ್ಲಿ ಬಾಬಾಬುಡನ್ ಗಿರಿ, ಅಯ್ಯನಕೆರೆ, ಕೋದಂಡರಾಮ ದೇವಾಲಯ, ಮಾಣಿಕ್ಯದಾರ ಜಲಪಾತ ಇನ್ನು ಅನೇಕ ಪ್ರವಾಸಿತಾಣಗಳಿವೆ ಒಮ್ಮೆ ಭೇಟಿ ನೀಡಿ ಬನ್ನಿ.

೧೨. ತೆರಳುವ ಬಗೆ ಹೇಗೆ?

೧೨. ತೆರಳುವ ಬಗೆ ಹೇಗೆ?

PC:YOUTUBE

ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆಗೆ ತಲುಪಿ ಅಲ್ಲಿಂದ ಅಮೃತ ಪುರದಲ್ಲಿನ ಅಮೃತೇಶ್ವರ ದೇವಾಲಯಕ್ಕೆ ತಲುಪಲು ಸುಮಾರು ಐದು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ರೈಲು ಅಥವಾ ಬಸ್ಸಿನ ಮೂಲಕ ಸುಲಭವಾಗಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X