Search
  • Follow NativePlanet
Share
» »ಏಕಾಂತದ ಪ್ರಯಾಣಕ್ಕಾಗಿ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಅದ್ಬುತವಾದ ಸ್ಥಳಗಳು

ಏಕಾಂತದ ಪ್ರಯಾಣಕ್ಕಾಗಿ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಅದ್ಬುತವಾದ ಸ್ಥಳಗಳು

ಹಲವಾರು ವರ್ಷಗಳಿಂದೀಚೆ ಏಕಾಂತ ಪ್ರಯಾಣದ ಆಸಕ್ತಿಯು ಜನರಲ್ಲಿ ಹೆಚ್ಚುತ್ತಿದೆ. ಭಾರತವನ್ನು ಬಲು ಹತ್ತಿರದಿಂದ ನೋಡಿದಲ್ಲಿ ಭಾರತದ ದಕ್ಷಿಣಭಾಗವು ಪ್ರವಾಸಕ್ಕೆ ಯೋಗ್ಯವಾದ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ ಇವುಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವವರಿಗಾಗಿ ಅತ್ಯುತ್ತಮವಾದ ಮತ್ತು ಸುರಕ್ಷಿತವಾದ ಸ್ಥಳಗಳನ್ನು ಒಳಗೊಂಡಿದೆ.

ಏಕಾಂಗಿಯಾಗಿ ಪ್ರಯಾಣಿಸುವವರು ಹೆಚ್ಚಾಗಿ ಜನ ದಟ್ಟಣೆ ಇಲ್ಲದ ಪ್ರದೇಶಗಳನ್ನು ಇಷ್ಟ ಪಡುತ್ತಾರೆ ಇದರಿಂದಾಗಿ ಅಲ್ಲಿ ಅವರು ಯಾವುದೇ ತೊಂದರೆಗಳಿಲ್ಲದೆ ಸ್ವತಂತ್ರವಾಗಿ ಓಡಾಡಬಹುದಾಗಿದೆ. ದಕ್ಷಿಣಭಾರತವು ಆಯ್ಕೆ ಮಾಡಲು ಸೂಕ್ತವಾದಂತಹ ಹಲವಾರು ಬಗೆಯ ಪ್ರವಾಸಿ ತಾಣಗಳನ್ನು ಒದಗಿಸಿಕೊಡುತ್ತದೆ. ನಿಮ್ಮ ಬಜೆಟ್ ಗೆ ಮತ್ತು ನೀವು ಯಾವ ತರಹದ ಪ್ರಯಾಣಿಕರು ಎಂಬುದಕ್ಕೆ ಅನುಗುಣವಾಗಿ ನಿಮಗಾಗಿ ಇಲ್ಲಿ ಕೆಲವು ಸೂಕ್ತವಾದ ದಕ್ಷಿಣಭಾರತದ ಪ್ರವಾಸಿ ತಾಣಗಳ ಪಟ್ಟಿಯನ್ನು ಮಾಡಿದ್ದೇವೆ.

ಅರಕು ಕಣಿವೆ

ಅರಕು ಕಣಿವೆ

ಆಂಧ್ರಪ್ರದೇಶವು ಗಿರಿಧಾಮಗಳಿಗಾಗಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದ ರಾಜ್ಯವಲ್ಲವಾದರೂ ಅರಕು ಕಣಿವೆಯು ಈ ರಾಜ್ಯದ ಏಕೈಕ ಗಿರಿಧಾಮವಾಗಿದ್ದು ಭೇಟಿಗೆ ಯೋಗ್ಯವಾದುದಾಗಿದೆ. ಈ ಸ್ಥಳವು ವಿಶಾಖಪಟ್ಟಣಂ (ವೈಜಾಗ್) ನಿಂದ ಕೇವಲ 115 ಕಿಮೀ ದೂರದಲ್ಲಿದೆ ಮತ್ತು ವೈಜಾಗ್‌ನಿಂದ ಕಣಿವೆಯವರೆಗಿನ ರಸ್ತೆ ಪ್ರಯಾಣವು ಮೋಡಿಮಾಡುವ ದೃಶ್ಯಾವಳಿಗಳಿಂದ ತುಂಬಿದೆ.

ಹಂಪಿ

ಹಂಪಿ

ಹಂಪೆ ಎನ್ನುವ ಹೆಸರೇ ಸಾಕು ನಿಮ್ಮನ್ನು ದೇವಾಲಯಗಳ ಅವಶೇಷಗಳು ಮತ್ತು ನಗರದ ಇನ್ನಿತರ ರಚನೆಗಳತ್ತ ನಿಮ್ಮನ್ನು ಪ್ರಯಾಣ ಮಾಡಿಸುತ್ತವೆ. ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖವನ್ನು ಹೊಂದಿರುವ ಈ ಪುರಾತನ ನಗರವು ಆ ಕಾಲದ ರಾಜರ ನೇತೃತ್ವದ ಭವ್ಯ ಜೀವನದ ಬಗ್ಗೆ ಹೇಳುತ್ತವೆ ಅಲ್ಲದೆ ಇದು ದೇವಾಲಯಗಳ ಅವಶೇಷಗಳಿಗೆ ಹೆಸರುವಾಸಿಯಾಗಿದೆ. ಹಂಪಿ ಸ್ಮಾರಕಗಳ ಗುಂಪುಗಳು ಭಾರತದಲ್ಲಿನ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿನಿಂದ ಹಂಪಿ ತಲುಪಲು ರಸ್ತೆಯ ಮೂಲಕ ಸುಮಾರು 6 ಗಂಟೆ ತೆಗೆದುಕೊಳ್ಳುತ್ತದೆ.

 ಕೇರಳದ ಹೀನೀರಿನ ಪ್ರದೇಶ

ಕೇರಳದ ಹೀನೀರಿನ ಪ್ರದೇಶ

ಕೇರಳದ ಹಿನ್ನೀರಿನ ಕಡೆಗೆ ಪ್ರಯಾಣವು ಒಂದು ಅತ್ಯದ್ಬುತವಾದ ಅನುಭವವಾಗಿದೆ. ಸಮುದ್ರದ ತರಂಗಗಳ ಮೃದುವಾದ ಸಂಗೀತವನ್ನು ಆಲಿಸಲು ಮತ್ತು ಮಸಾಲೆಯುಕ್ತ ಹಾಗೂ ಕೇರಳದ ಶ್ರೀಮಂತ ಪಾಕಪದ್ಧತಿಯನ್ನು ಆನಂದಿಸಲು ನೀವು ಈ ಸ್ಥಳಕ್ಕೆ ಭೇಟಿ ನೀಡಿದ ಸಮಯದಲ್ಲಿ ತಪ್ಪಿಸಿಕೊಳ್ಳಲೇಬಾರದಂತಹ ಒಂದು ಉತ್ತಮ ಅನುಭವವಾಗಿದೆ. ವೆಂಬನಾಡ್, ಕುಮಾರಕೊಮ್ ಮತ್ತು ಅಲೆಪ್ಪಿ ಇಲ್ಲಿ ಹೌಸ್‌ಬೋಟ್‌ಗಳಿಗೆ ಜನಪ್ರಿಯವಾಗಿವೆ.

ಕನ್ಯಾಕುಮಾರಿ.

ಕನ್ಯಾಕುಮಾರಿ.

ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ಸಂಗಮವು ಕನ್ಯಾಕುಮಾರಿಯನ್ನು ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು ಭೇಟಿ ನೀಡಲೇಬೇಕೆನ್ನುವಂತಹ ಸ್ಥಳವಾಗಿಸಿದೆ. ಏಕಾಂತ ಪ್ರಯಾಣವು ನಿಮಗೆ ಇಲ್ಲಿ ಹಲವಾರು ಆಯ್ಕೆಗಳನ್ನು ನೀಡುತ್ತದೆ. ಇಲ್ಲಿ ನೀವು ಸಮುದ್ರ ತೀರದಲ್ಲಿ ಸುಮ್ಮನೆ ಕುಳಿತು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸುತ್ತಾ ಆಕಾಶವು ಕೆಲವೇ ನಿಮಿಷಗಳಲ್ಲಿ ವರ್ಣರಂಜಿತವಾಗುವುದನ್ನು ಕಾಣಬಹುದಾಗಿದೆ. ಕನ್ಯಾಕುಮಾರಿಯು ತಮಿಳುನಾಡಿನಲ್ಲಿ ನೆಲೆಸಿದ್ದು, ಇದು ಕರ್ನಾಟಕ ಮತ್ತು ಕೇರಳಕ್ಕೆ ಹತ್ತಿರದಲ್ಲಿದೆ. ಬೆಂಗಳೂರಿನಿಂದ ರಾತ್ರಿ ಪ್ರಯಾಣಿಸಿದರೆ ಬೆಳಗ್ಗೆಯ ಸಮಯದಲ್ಲಿ ನಿಮ್ಮನ್ನು ಈ ಸುಂದರವಾದ ಸ್ಥಳಕ್ಕೆ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X