Search
  • Follow NativePlanet
Share
» »ಕೇರಳದ ಗುಡ್ಡಗಳ ಪ್ರಚಂಡ ರಸ್ತೆ ಮಾರ್ಗಗಳು

ಕೇರಳದ ಗುಡ್ಡಗಳ ಪ್ರಚಂಡ ರಸ್ತೆ ಮಾರ್ಗಗಳು

By Vijay

ಹಿಮಾಚಲ, ಕಾಶ್ಮೀರ, ಉತ್ತರಾಖಂಡ ರಾಜ್ಯಗಳಲ್ಲಿ ಕಂಡುಬರುವ ಹಿಮಾಲಯ ಪರ್ವತಗಳ ಸುತ್ತಮುತ್ತಲಿರುವ ರಸ್ತೆಗಳಲ್ಲಿ ಒಮ್ಮೆಯಾದರೂ ಪ್ರಯಾಣಿಸಿದ್ದೀರಾ? ನೋಡಿದ ಮಾತ್ರದಲ್ಲೆ ತಲೆ ತಿರುಗಿಸುವಂತಹ ಆಗಸೆತ್ತರದ ಪರ್ವತಗಳ ಮಧ್ಯೆ ಗೆರೆಯಂತೆ ಕಾಣುವ ಈ ರಸ್ತೆಗಳಲ್ಲಿ ಪಯಣಿಸುವುದಕ್ಕೆ ಗಟ್ಟಿ ಗುಂಡಿಗೆ ಇರಲೇಬೇಕು. ಇಂತಹ ಅದ್ಭುತ ಬೆಟ್ಟಗಳ ಮಧ್ಯದಲ್ಲಿ ಮೊನಚಾದ ಸುರುಳಿಗಳಾಕಾರದ ರಸ್ತೆಗಳಲ್ಲಿ ಪ್ರಯಾಣ ಮಾಡಲು ಸಾಕಷ್ಟು ಸಾಹಸಿಗ ಪ್ರವಾಸಿಗರ ಹೆಬ್ಬಯಕೆಯಾಗಿರುತ್ತದೆ ಎಂದರೆ ತಪ್ಪಾಗಲಾರದು.

ವಿಶೇಷ ಲೇಖನ : ಏನಿದು ಸುವರ್ಣ ಚತುಷ್ಪಥ?

ಇಂತಹ ಪರ್ವತ ರಹದಾರಿಗಳು ದೂರದ ಉತ್ತರದಲ್ಲಿರುವುದರಿಂದ ಅಲ್ಲದೆ ಅದಕ್ಕೆ ಸಾಕಷ್ಟು ಸಮಯ ತಗುಲುವುದರಿಂದ ಎಷ್ಟೊ ಸಾಹಸ ಪ್ರವೃತ್ತಿಯ ಪ್ರವಾಸಿಗರಿಗೆ ಸಮಯದ ಅಭಾವದಿಂದಾಗಿ ಅಂತಹ ಪ್ರವಾಸ ಕೈಗೊಳ್ಳುವುದು ಕಷ್ಟಕರವಾಗಿದೆ. ಆದರೆ, ಸಾಹಸಿಗರೆ...ನೀವು ಅಷ್ಟೊಂದು ಚಿಂತಿಸಬೇಕಾಗಿಲ್ಲ. ಹೆಚ್ಚು ಕಮ್ಮಿ ಉತ್ತರದ ಪರ್ವತ ರಹದಾರಿಗಳಷ್ಟೆ ಅನುಭವ ಕೊಡುವ ಕೆಲವು ಸುಂದರ ಹಾಗೂ ರೋಮಾಂಚಕ ರಸ್ತೆ ಮಾರ್ಗಗಳು ಸಂಪೂರ್ಣವಾಗಿ ಪಶ್ಚಿಮ ಘಟ್ಟಗಳಿಂದ ಕೇರಳದ ಭಾಗಗಳಲ್ಲಿ ಕಾಣಬಹುದಾಗಿದೆ.

ನಿಜಕ್ಕೂ, ಇಲ್ಲಿರುವ ಕೆಲವು ಬೆಟ್ಟಗಳ ಮಧ್ಯದ ರಸ್ತೆ ಮಾರ್ಗಗಳಿರಬಹುದು ಇಲ್ಲವೆ ಮೊನಚಾದ ತಿರುವುಗಳುಳ್ಳ ಸುರಳಿಯಾಕಾರದ ರಸ್ತೆಗಳಿರಬಹುದು, ಎಲ್ಲವೂ ಚಾಲಕರ ಚಾಲನಾ ಕೌಶಲ್ಯ, ತಾಳ್ಮೆಗಳನ್ನು ಖಂಡಿತವಾಗಿಯೂ ಪರೀಕ್ಷಿಸುತ್ತವೆ. ಅಲ್ಲದೆ ಬೆಕ್ಕಸ ಬೆರಗಾಗುವಂತೆ ಮಾಡುವ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವು ಕಣಿವೆ, ಪ್ರಪಾತ, ಬೆಟ್ಟ, ದಟ್ಟ ಹಸಿರಿನಿಂದ ಕೂಡಿದ ಗಿಡ ಮರಗಳ ಮೂಲಕ ಪ್ರವಾಸಿಗರ, ಪ್ರಯಾಣಿಕರ ಮನ ತಣಿಸುತ್ತವೆ.

ಪ್ರಸ್ತುತ, ಲೇಖನದ ಮೂಲಕ ಕೇರಳದಲ್ಲಿ ಕೈಗೊಳ್ಳಬಹುದಾದ ಕೆಲವು ಆಯ್ದ ಅತ್ಯದ್ಭುತ ಪರ್ವತ ರಸ್ತೆ ರಹದಾರಿಗಳ ಪ್ರವಾಸ ಇಂಟರ್ನೆಟ್ ಮೂಲಕ ಮಾಡಿ ಹಾಗೂ ಸಮಯ ಸಿಕ್ಕಾಗ ನಿಜವಾಗಿ ಮಾಡಿ ನೋಡಿ.

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ವಯನಾಡ್ ಚೂರಮ್/ವಯನಾಡ್ ಘಾಟ್ : ಕೇರಳದ ಪ್ರಖ್ಯಾತ ಪ್ರವಾಸಿ ಕೇಂದ್ರವಾದ ವಯನಾಡಿನ ಲಕ್ಕಿಡಿಯಿಂದ ಕೋಳಿಕೋಡ್ ಜಿಲ್ಲೆಯ ತಾಮರಚೆರಿಗೆ ಹೋಗುವ ಮಾರ್ಗವು ಅತ್ಯದ್ಭುತವಾದ ಘಟ್ಟ ಪ್ರದೇಶಗಳಿಂದ, ಕಣಿವೆ, ಪ್ರಪಾತಗಳಿಂದ ಆವರಿಸಿದ್ದು ಪಯಣಿಸುವವರಿಗೆ ಒಂದು ರೋಮಾಂಚಕ ಅನುಭವ ನೀಡುತ್ತದೆ.

ಚಿತ್ರಕೃಪೆ: Manojk

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ದಟ್ಟ ಹಸಿರಿನ ಮಧ್ಯೆ ಹಾದು ಹೋಗಿರುವ ರಸ್ತೆ.

ಚಿತ್ರಕೃಪೆ: Svg3414

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ರೋಮಾಂಚನ ಗೊಳಿಸುವ ಸರ್ಪದಂತೆ ಸುರುಳಿಯಾಕಾರದ ರಸ್ತೆ. ಇದು ಪೂರ್ವದ ಮುಖ್ಯ ಹೆದ್ದಾರಿಯಾಗಿಯೂ ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Sujithnairv

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಆಂಗ್ಲದಲ್ಲಿ ಜನಪ್ರೀಯವಾಗಿ ಕರೆಯಲಾಗುವ "ಹೇರ್ ಪಿನ್ ಕರ್ವ್" ದ ಒಂದು ಸುಂದರ ನೋಟ.

ಚಿತ್ರಕೃಪೆ: Challiyan

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಒಂದೆಡೆ ಬೆಟ್ಟ...ಇನ್ನೊಂದೆಡೆ ಪ್ರಪಾತ...ಮಧ್ಯದಲ್ಲಿ ಸಾಗುವ ರಸ್ತೆ...ಹೇಗಿದೆ ರೋಮಾಂಚನ ಅನ್ನೋಣವೆ! ಇದು ಪಲ್ಚುರಮ್ ಬಳಿ ಇರುವ ಸ್ಥಿತಿ.

ಚಿತ್ರಕೃಪೆ: Vinayaraj

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಪಲ್ಚುರಮ್ ನ ಮೊನಚಾದ ತಿರುವು. ವೇಗ ಬಯಸುವ ಕುಶಲ ಚಾಲಕರೂ ಸಹ ಜೋಪಾನವಾಗಿ ಸಹನೆಯಿಂದ ಸಾಗಲೇಬೇಕಾದ ಅನಿವಾರ್ಯ.

ಚಿತ್ರಕೃಪೆ: Vinayaraj

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ರಸ್ತೆಯು ಕೇವಲ ಸುರುಳಿಯಾಗಿರದೆ ಇಳಿಜಾರಿಕೆಯನ್ನೂ ಸಹ ಹೊಂದಿದ್ದು ನಿಧಾನವಾಗಿ ಸಾಗಬೇಕಾಗುತ್ತದೆ.

ಚಿತ್ರಕೃಪೆ: Vinayaraj

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಅಲ್ಲಲ್ಲಿ ರಸ್ತೆಗಳ ಬದಿಗಳಲ್ಲಿ ಪ್ರಯಾಣಿಸುವವರ ಚಪಲ ತಣಿಸಲು ಬಂಡಿ ಅಂಗಡಿಗಳು ಸದಾ ಸನ್ನದ್ಧರಾಗಿ ಕಾಯುತ್ತಿರುತ್ತವೆ.

ಚಿತ್ರಕೃಪೆ: Shiju0007

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಇಂತಹ ರಸ್ತೆ ಮಾರ್ಗಗಳಿಂದಲೆ ಬೆಟ್ಟಗಳ ಸುತ್ತ ಮುತ್ತಲಿನ ರಮಣೀಯ ಪ್ರಕೃತಿಯನ್ನು ನೋಡಲು ಸಹಾಯಕವಾಗಿದೆ.

ಚಿತ್ರಕೃಪೆ: Hrishikesh.kb

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಬಾನಿಗೆ ಮುಖ ಮಾಡಿ ಬೆಳ್ಳನೆಯ ಹೊದೆ ಹೊದ್ದು ನಿದ್ರಿಸುತಿದೆ ಭೂಮಿ.

ಚಿತ್ರಕೃಪೆ: Manuspanicker

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಒಂದೊಮ್ಮೆ ನೋಡಿದಾಕ್ಷಣ ತಲೆ ತಿರುಗಿಸುವಂತಹ ಅದ್ಭುತ ನೋಟ.

ಚಿತ್ರಕೃಪೆ: Irshadpp

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಮೊಂಡು ಘಾಟು ರಸ್ತೆಯ ಮೇಲೆ ಎಂಟೆದೆಯ ಗಂಡಾಗಿ ಪ್ರಯಾಣಿಕರ ಗುರಿಗಳಿಗೆ ತಲುಪಿಸಲು ಸಂಯಮದಿಂದ ಚಲಿಸುತ್ತಿರುವ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಒಂದು ಸಾಮಾನ್ಯ ಬಸ್ಸು.

ಚಿತ್ರಕೃಪೆ: Kamaljith K V

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಈ ರಸ್ತೆಯಲ್ಲಿ ಸಾಗುವಾಗ ಅದೆಷ್ಟೊ ಪ್ರಯಾಣಿಕರಿಗೆ ಅಲ್ಲಲ್ಲಿ ಕೆಲವು ಕಡೆ ನಿಂತು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬ ನೋಡಿ ಆನಂದಿಸಿ ಮುನ್ನಡೆಯುವ ಬಯಕೆ.

ಚಿತ್ರಕೃಪೆ: Irshadpp

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ವಯನಾಡ್ ಘಾಟ್ ನಲ್ಲಿ ರಾತ್ರಿಯ ಸಮಯದಲ್ಲಿ ವಾಹನಗಳು ಸಂಚರಿಸುವಾಗ ಅವುಗಳಿಂದ ಹೊಮ್ಮುವ ದೀಪದ ಪ್ರಕಾಶವು ಗಾಢ ಅಂಧಕಾರದಲ್ಲಿ ರಸ್ತೆಯ ಸುರುಳಿಯನ್ನು ಅಚ್ಚುಕಟ್ಟಾಗಿ ತೋರಿಸುವುದನ್ನು ಕಂಡಾಗ ಯಾರಿಗಾದರೂ ಸರಿ ರೋಮಾಂಚನ ಆಗದೆ ಇರಲಾರದು.

ಚಿತ್ರಕೃಪೆ: Sreejithk2000

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಮುನ್ನಾರ್ ರಸ್ತೆಗಳು : ಕೇರಳದ ಮತ್ತೊಂದು ಪ್ರಖ್ಯಾತ ಗಿರಿಧಾಮ ತಾಣವಾದ ಮುನ್ನಾರ್ ಗೆ ತೆರಳುವಾಗಲೂ ಅಷ್ಟೆ...ಮುನ್ನಾರ್ ಸುತ್ತಮುತ್ತಲೂ ಅಷ್ಟೆ ಅದ್ಭುತವಾದ ಘಾಟ್ ರಸ್ತೆಗಳ ಆನಂದವನ್ನು ಸವಿಯಬಹುದಾಗಿದೆ.

ಚಿತ್ರಕೃಪೆ: Vinayaraj

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಮಳೆ ಹಾಗೂ ಚಳಿಗಾಲದ ಸಮಯದಲ್ಲಂತೂ ಮುನ್ನಾರ್ ಗಿರಿಧಾಮವು ಮಂಜು ಮುಸುಕಿದ ವಾತಾವರಣವನ್ನು ಹೊಂದಿರುತ್ತದೆ. ರಸ್ತೆಗಳ ಮೇಲೆ ನಿಂತು ಪ್ರಪಾತಗಳನ್ನು ನೋಡಿದಾಗ ಮನ ರೋಮಾಂಚನಗೊಳ್ಳದೆ ಇರಲಾರದು. ಮುನ್ನಾರ್ ನಲ್ಲಿರುವ ಒಂದು ವೀಕ್ಷಣಾ ಕೇಂದ್ರದಿಂದ.

ಚಿತ್ರಕೃಪೆ: Vinayaraj

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಮಟ್ಟುಪೆಟ್ಟಿ ಹಾಗೂ ಮುನ್ನಾರ್ ಮಧ್ಯದ ಘಾಟ್ ರಸ್ತೆಯಲ್ಲಿ....

ಚಿತ್ರಕೃಪೆ: Rameshng

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಘಮ ಘಮ ಸುವಾಸನೆ ಪಸರಿಸಿರುವ ಮುನ್ನಾರ್ ನ ಚಹಾ ತೋಟಗಳ ಮಧ್ಯದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಪಯಣಿಸುವುದೆ ಒಂದು ಚೆಂದದ ಅನುಭವ.

ಚಿತ್ರಕೃಪೆ: Vinayaraj

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ತಿರುವುಗಳಲ್ಲಿ ತಿರುಗುತ್ತ....ಬೆಟ್ಟ ರಸ್ತೆಯ ಏರುತ್ತ...ಘಟ್ಟಗಳ ಸೌಂದರ್ಯ ಸವಿಯುತ್ತ...ಸಾಗಿದಾಗ, ಆದ ಸುಸ್ತು ನಾಪತ್ತೆ.

ಚಿತ್ರಕೃಪೆ: Shanmugamp7

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ತಿರುವಿನಲ್ಲಿ ಎಚ್ಚರ, ಅತೀ ವೇಗ ಖಂಡಿತ ಸಲ್ಲದು, ಜಾಗರೂಕತೆ ಅವಶ್ಯಕ ಇಲ್ಲದಿದ್ದರೆ ಅಪಘಾತ ಅನಾವಶ್ಯಕ. ಮುನ್ನಾರ್ ನ ಒಂದು ವೀಕ್ಷಣಾ ತಾಣದಿಂದ ವಿನ್ಯಾಸದಿಂದ ಕೂಡಿರುವ ರಸ್ತೆ ಮಾರ್ಗ.

ಚಿತ್ರಕೃಪೆ: Rameshng

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ವರ್ಣಚಿತ್ರದಂತೆ ಮನಸೆಳೆವ ನೈಜ ಪ್ರಕೃತಿ ಸೌಂದರ್ಯದ ಅಗಾಧತೆ....ರಸ್ತೆಯಲ್ಲಿ ಸಾಗುವಾಗ ಸಿಗದೆ ಇರಲಾರದು.

ಚಿತ್ರಕೃಪೆ: Bimal K C

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಬೆಟ್ಟವೆ ಹೊದಿಗೆಯನ್ನು ಹೊಚ್ಚಿಕೊಂಡಿರುವಂತೆ ಆಭಾಸ ಮೂಡಿಸುವ ಮುನ್ನಾರ್ ಚಹಾ ತೋಟಗಳು ಹಾಗೂ ಅದರ ಸುವಾಸನೆಯ ಕಂಪನ್ನು ಸದಾ ಪಡೆಯುವಂತೆ ಅನುವು ಮಾಡಿಕೊಟ್ಟಿರುವ ಸುಂದರ ರಸ್ತೆ ಮಾರ್ಗ.

ಚಿತ್ರಕೃಪೆ: Lukas Vacovsky

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ವಗಮೋನ್ ರಸ್ತೆಗಳು : ವಗಮೋನ್ ಕೂಡ ಕೇರಳದ ಒಂದು ಪ್ರವಾಸಿ ಪ್ರಖ್ಯಾತಿಯ ಗಿರಿಧಾಮ ಪ್ರದೇಶವಾಗಿದೆ. ಕೊಟ್ಟಾಯಂ ಕುಮಳಿ ರಸ್ತೆಯ ಅಂದ ಚೆಂದ ನೋಡಿದವನೆ ಧನ್ಯ.

ಚಿತ್ರಕೃಪೆ: Visakh wiki

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ವಗಮೋನ್ ಘಾಟ್ ರಸ್ತೆಯು ನಿಸ್ಸಂಶಯವಾಗಿ ಒಂದು ವಿನೂತನ ಅನುಭವವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ.

ಚಿತ್ರಕೃಪೆ: Sajetpa

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಜರಿದು ಕೆಳಗಿನ ಪ್ರಪಾತಕ್ಕೆ ಬೀಳದಂತೆ ರಸ್ತೆಯ ಒಂದು ಬದಿಯಲ್ಲಿ ಕಲ್ಲಿನ ಕಟ್ಟೆಯನ್ನು ಕಟ್ಟಿದ್ದರೂ ಜಾಗರೂಕತೆಯಿಂದ ಚಾಲನೆ ಮಾಡಬೇಕಾಗಿರುವುದು ಈ ರಸ್ತೆಯಲ್ಲಿ ಅನಿವಾರ್ಯವಾಗಿದೆ. ಕೊಟ್ಟಾಯಂ ಜಿಲ್ಲೆಯ ಪಾಲಾರ್ ಪಟ್ಟಣದಿಂದ ವಗಮೋನ್ ಗೆ ಹೋಗುವ ದಾರಿ.

ಚಿತ್ರಕೃಪೆ: Rojypala

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಪಶ್ಚಿಮ ಘಟ್ಟಗಳ ಅಗಾಧತೆಯ ಮುಂದೆ ತಳಕುತ್ತ ನಿಧಾನಗತಿಯಲ್ಲಿ ಮುಂದೆ ಸಾಗುತ್ತಿರುವ ವಾಹನಗಳು.

ಚಿತ್ರಕೃಪೆ: Rojypala

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ವಗಮೋನ್ ರಸ್ತೆಯ ಮತ್ತೊಂದು ವಿಶೇಷ ವೆಂದರೆ ಮಳೆಗಾಲದ ಸಮಯ. ಈ ಸಂದರ್ಭದಲ್ಲಿ ಘಟ್ಟ ರಸ್ತೆಯ ಕೆಲ ಸ್ಥಳಗಳಲ್ಲಿ ಮಳೆ ನೀರಿನಿಂದ ಸಂಗ್ರಹವಾದ ಕೃತಕ ಜಲಪಾತಗಳು ಅಲ್ಲಲ್ಲಿ ಹುಟ್ಟಿಕೊಂಡು ರಸ್ತೆಯ ಮೇಲೆ ಸಾಗುವಾಗ ಪ್ರಯಾಣಿಕರಿಗೆ ವಿನೂತನ ಅನುಭೂತಿ ನೀಡುತ್ತವೆ.

ಚಿತ್ರಕೃಪೆ: Visakh wiki

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ಪಾಲಕ್ಕಾಡ್ ಗ್ಯಾಪ್/ಘಾಟ್ : ತಮಿಳುನಾಡಿನ ಕೊಯಮತ್ತೂರಿನಿಂದ ಕೇರಳದ ಪಾಲಕ್ಕಾಡ್ ತಲುಪುವ ಮಾರ್ಗ ಅದರಲ್ಲೂ ವಿಶೇಷವಾಗಿ ಪಶ್ಚಿಮ ಘಟ್ಟಗಳ ಮಧ್ಯೆ ಸಾಗುವ ರಸ್ತೆಯನ್ನು ಜನಪ್ರೀಯವಾಗಿ ಪಾಲಕ್ಕಾಡ್ ಗ್ಯಾಪ್ ಅಥವಾ ಘಾಟ್ ಇಲ್ಲವೆ ಪಾಲ್ಘಾಟ್ ಎಂದು ಕರೆಯಲಾಗುತ್ತದೆ. ಬೋಡಿ ಮೆಟ್ಟು ಎಂಬ ಬಟ್ಟದ ಬಳಿ ಹಾದು ಹೋಗಿರುವ ರಸ್ತೆ ಮಾರ್ಗ.

ಚಿತ್ರಕೃಪೆ: Kujaal

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ರಾಷ್ಟ್ರೀಯ ಹೆದ್ದಾರಿ 49, ಕೊಚ್ಚಿ-ಧನುಷ್ಕೋಡಿ ರಸ್ತೆ ಮಾರ್ಗ....

ಚಿತ್ರಕೃಪೆ: Hemanthjijo

ಕೇರಳದ ಘಾಟ್ ರಸ್ತೆಗಳು:

ಕೇರಳದ ಘಾಟ್ ರಸ್ತೆಗಳು:

ವಯನಾಡ್ ಜಿಲ್ಲೆಯ ಎಲಪಿಡಿ ಹಾಗೂ ಕಣ್ಣೂರು ಜಿಲ್ಲೆಯ ಕೊಲಕ್ಕಾಡ್ ಪಟ್ಟಣಗಳನ್ನು ಒಂದಕ್ಕೊಂದು ಬೆಸೆಯುವ ಎಲಪಿಡಿ-ಕೊಲಕ್ಕಾಡ್ ರಸ್ತೆ ಮಾರ್ಗ.

ಚಿತ್ರಕೃಪೆ: Nishanth

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X