Search
  • Follow NativePlanet
Share
» »ರಹಸ್ಯಗಳಿಗೆ ಸಾಕ್ಷಿ... ದೌಲತಾಬಾದ್ ಕೋಟೆ!

ರಹಸ್ಯಗಳಿಗೆ ಸಾಕ್ಷಿ... ದೌಲತಾಬಾದ್ ಕೋಟೆ!

ಶ್ರೀ ರಾಮನು ತನ್ನ ಪ್ರಯಾಣ ಕಾಲದಲ್ಲಿ ಕಳೆದ ಪ್ರದೇಶಗಳಲ್ಲಿ ರಾಂಟೆಕ್ ಮತ್ತು ದೌಲತಾಬಾದ್ ಕೂಡ ಇವೆ. ವಿಷಯಕ್ಕೆ ಬಂದರೆ ದೌಲತಾಬಾದ್ ಕೋಟೆಯ ತನ್ನಲ್ಲಿ ಹಲವಾರು ರಹಸ್ಯಗಳನ್ನು ಹೊಂದಿದೆ. ಇಲ್ಲಿ ಮುಖ್ಯವಾಗಿ ಕೈಲಾಶುನಿ ಎಂಬ ದೇವಾಲಯವಿದ್ದು, ಪ್ರಧಾನ

ಶ್ರೀ ರಾಮನು ತನ್ನ ಪ್ರಯಾಣ ಕಾಲದಲ್ಲಿ ಕಳೆದ ಪ್ರದೇಶಗಳಲ್ಲಿ ರಾಂಟೆಕ್ ಮತ್ತು ದೌಲತಾಬಾದ್ ಕೂಡ ಇವೆ. ವಿಷಯಕ್ಕೆ ಬಂದರೆ ದೌಲತಾಬಾದ್ ಕೋಟೆಯ ತನ್ನಲ್ಲಿ ಹಲವಾರು ರಹಸ್ಯಗಳನ್ನು ಹೊಂದಿದೆ. ಇಲ್ಲಿ ಮುಖ್ಯವಾಗಿ ಕೈಲಾಶುನಿ ಎಂಬ ದೇವಾಲಯವಿದ್ದು, ಪ್ರಧಾನವಾದ ಪ್ರವಾಸಿ ಆಕರ್ಷಣೆ ಕೂಡ ಆಗಿದೆ.

ನೀವು ಉತ್ತರ ಮಹಾರಾಷ್ಟ್ರ ಪ್ರದೇಶದಲ್ಲಿ ಪ್ರಯಾಣಿಸಿದರೆ ಅದ್ಭುತವಾದ ಸ್ಥಳದ ಸೌಂದರ್ಯವನ್ನು ಅಸ್ವಾಧಿಸಬಹುದು. ಅಜಂತ ಮತ್ತು ಎಲ್ಲೋರದಂತಹ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಅದ್ಭುತವಾದ ಸ್ಥಳಗಳನ್ನು ಅತಿ ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಹಾಗಾದರೆ ಲೇಖನದ ಮೂಲಕ ದೌಲತಾಬಾದ್‍ನ ಕೆಲವು ಕುತೂಹಲಕಾರಿ ಮಾಹಿತಿಯನ್ನು ಲೇಖನದ ಮೂಲಕ ತಿಳಿಯೋಣ.

ಔರಂಗಾಬಾದ್ ಗುಹೆಗಳು

ಔರಂಗಾಬಾದ್ ಗುಹೆಗಳು

ಔರಂಗಾಬಾದ್ ಗುಹೆಗಳು ಬಿಬಿ ಕಾ ಮಕ್‍ಗೆ ಉತ್ತರದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಅದ್ಭುತವಾದ ಈ ಗುಹೆಗಳು ಬೌದ್ಧ ಧರ್ಮಕ್ಕೆ ಸಂಬಂಧಿಸಿದೆ. ಇಲ್ಲಿನ ಗುಹೆಗಳು ಅತ್ಯಂತ ಪ್ರಾಚೀನವಾದುದಾಗಿದ್ದು, ಕ್ರಿ.ಶ 2 ನೇ ಶತಮಾನ ಅಥವಾ 7 ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

PC: C .SHELARE

ಔರಂಗಾಬಾದ್ ಗುಹೆಗಳು

ಔರಂಗಾಬಾದ್ ಗುಹೆಗಳು

ಇಲ್ಲಿನ ಗುಹೆಗಳು ಅತ್ಯಂತ ಆಕರ್ಷಣಿಯುತವಾಗಿದೆ. ಇವುಗಳ ವಾಸ್ತು ಶಿಲ್ಪವು ಹಿಂದೂ ಧರ್ಮದ ಶೈಲಿಯಲ್ಲಿ ಇರುವುದನ್ನು ಕಾಣಬಹುದು. ಅದ್ಭುತವಾದ ಆ ಗುಹೆಗಳ ಪ್ರವೇಶವನ್ನು ಪಡೆಯಬೇಕಾದರೆ ಭಾರತೀಯರಿಗೆ 10 ರೂಪಾಯಿಗಳು ಹಾಗು ವಿದೇಶಿಯರಿಗೆ 100 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಈ ಗುಹೆಗಳನ್ನು ಕಾಣಲು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರವೇಶಕ್ಕೆ ಅನುಮತಿ ಇದೆ.

PC: Ghumakkar Punit

ಬಿಬಿ ಕಾ ಮಕ್ ಬರ

ಬಿಬಿ ಕಾ ಮಕ್ ಬರ

ಬಿಬಿ ಕಾ ಮಕ್ ಬರ ಪ್ರಸಿದ್ಧವಾದ ಕಟ್ಟಡವಾಗಿದೆ. ಔರಂಗಾಬಾದ್‍ನಿಂದ 5 ಕಿ.ಮೀ ದೂರದಲ್ಲಿದೆ. ಇದನ್ನು ಔರಂಗಜೇಬ್ ಕುಮಾರನು ತನ್ನ ತಾಯಿಯಾದ ಬೆಗಂ ರಬಿಯಾ ದುರಾನಿಯ ಜ್ಞಾಪಕಾರ್ಥವಾಗಿ 1678 ರಲ್ಲಿ ನಿರ್ಮಾಣ ಮಾಡಿದನು. ಈ ಕಟ್ಟಡವನ್ನು ತಾಜ್ ಮಹಲ್‍ನಂತೆಯೇ ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಾಜ್ ಮಹಲಿನಂತೆಯೇ ಇರುವುದರಿಂದ ಅಷ್ಟಾಗಿ ಪ್ರಸಿದ್ಧಿಯನ್ನು ಪಡೆಯಲಿಲ್ಲ.


PC:Arian Zwegers

ಬಿಬಿ ಕಾ ಮಕ್ ಬರ

ಬಿಬಿ ಕಾ ಮಕ್ ಬರ

ಈ ಅದ್ಭುತವಾದ ತಾಣಕ್ಕೆ ಭೇಟಿ ನೀಡಲು ಪ್ರವೇಶ ಸಮಯವೆಂದರೆ ಅದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ. ಪ್ರವೇಶ ಶುಲ್ಕ: ಭಾರತೀಯರಿಗೆ 10 ರೂಪಾಯಿ ಹಾಗು ವಿದೇಶಿಯರಿಗೆ 100 ರೂಪಾಯಿಗಳನ್ನು ಪಾವತಿಸಿ ಪ್ರವೇಶಿಸಬೇಕಾಗುತ್ತದೆ.

PC: Shaikh Munir

ದೌಲತಾಬಾದ್ ಕೋಟೆ

ದೌಲತಾಬಾದ್ ಕೋಟೆ

ದೊಡ್ಡ ದೊಡ್ಡದಾದ ಕೋಟೆಗಳನ್ನು ಕಾಣುವುದಕ್ಕೆ ತೆರಳಿದಾಗ ಪ್ರವಾಸಿಗರಿಗೆ ಆಗುವ ಅನುಭವ ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭವವನ್ನು ನೀಡುತ್ತದೆ. ಕಡಿಮೆ ಜನರು ಇದ್ದ ಆ ಕಾಲದಲ್ಲಿ ಇಂತಹ ಸುಂದರವಾದ ಕಟ್ಟಡದ ನಿರ್ಮಾಣ ಹೇಗೆ ಮಾಡಿದರು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಆಶ್ಚರ್ಯಗೊಳಿಸುವಂತಹದು. ನೂರಾರು ವರ್ಷಗಳ ಚರಿತ್ರೆಯನ್ನು ಕಂಡಿದೆ ಈ ಕಟ್ಟಡ. 800 ವರ್ಷಗಳಲ್ಲಿ 8 ರಾಜವಂಶಗಳು ಅಭಿವೃದ್ಧಿ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ ಈ ಕೋಟೆ.


Todd vanGoethem

ಕೈಲಾಸ ದೇವಾಲಯ

ಕೈಲಾಸ ದೇವಾಲಯ

16 ನೇ ಗುಹೆಯಲ್ಲಿ ಇರುವ ಈ ಕೈಲಾಸ ದೇವಾಲಯವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಏಕಶಿಲಾ ಶಿವಾಲಯವಾಗಿದೆ. ಈ ದೇವಾಲಯಕ್ಕೆ ಕಾಲು ಇಡುತ್ತಿದ್ದಂತೆ ನಮಗೆ ಕಾಣುವ ಭವ್ಯವಾದ ಧ್ವಜಸ್ತಂಭವು ನಮ್ಮನ್ನು ಸ್ವಾಗತಿಸುತ್ತದೆ. ಈ ಧ್ವಜಸ್ತಂಭದ ನಿರ್ಮಾಣಕ್ಕೆ ಸುಮಾರು 150 ವರ್ಷಗಳು ಬೇಕಾಯಿತಂತೆ. ಇದರ ನಿರ್ಮಾಣಕ್ಕೆ ಸುಮಾರು 7.000 ಕಾರ್ಮಿಕರು ಪಾಲ್ಗೊಂಡಿರಬಹುದು ಎಂದು ಹೇಳುತ್ತಾರೆ.

cool_spark

ಕೈಲಾಸ ದೇವಾಲಯ

ಕೈಲಾಸ ದೇವಾಲಯ

ಸುಮಾರು 60.000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವು, 2 ಕಡೆಯಿಂದ 2 ಅಂತಸ್ತಿನ ನಿರ್ಮಾಣಗಳನ್ನು ಕಾಣಬಹುದು. ಈ ಸುಂದರವಾದ ಕೈಲಾಸ ಶಿವಾಲಯಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ಇಲ್ಲಿ ರಾಮಾಯಣ, ಮಹಾಭಾರತದ ಕಥೆಯನ್ನು ಶಿಲ್ಪಗಳ ಮೂಲಕ ಕೆತ್ತನೆಗಳಿರುವುದನ್ನು ಕಾಣಬಹುದು. ಆಶ್ಚರ್ಯ ಏನಪ್ಪ ಎಂದರೆ ಆ ಕಾಲದಲ್ಲಿ ಒಂದು ಗೋಡೆಯ ಮೇಲೆ ಕೆತ್ತನೆ ಮಾಡಿರುವ ನಟರಾಜನ ವಿಗ್ರಹಕ್ಕೆ ಹಾಕಿರುವ ಬಣ್ಣ ಇಂದಿಗೂ ಇರುವುದನ್ನು ಕಾಣಬಹುದು.

ರಾಂಟೆಕ್ ದೇವಾಲಯ

ರಾಂಟೆಕ್ ದೇವಾಲಯ

ರಾಂಟೆಕ್ ಎಂಬ ಪ್ರದೇಶವು ರಾಮ, ಸೀತ ಮತ್ತು ಲಕ್ಷ್ಮಣ ತಮ್ಮ ಪ್ರಯಾಣದ ಕಾಲದಲ್ಲಿ ಕೆಲವು ಕಾಲ ಈ ಸ್ಥಳದಲ್ಲಿ ಕಳೆದಿದ್ದರು ಎಂದು ಹೇಳಲಾಗುತ್ತದೆ. ಇದನ್ನು ಒಂದು ಪುಣ್ಯ ಕ್ಷೇತ್ರವಾಗಿ ಗುರುತಿಸಲಾಗಿದೆ. ಇದು 600 ವರ್ಷಗಳ ಪುರಾತನವಾದ ದೇವಾಲಯವಾಗಿದೆ. ರಾಮನು ಈ ಪ್ರದೇಶದಲ್ಲಿ ಇದ್ದ ಕಾರಣಕ್ಕೆ ಇದನ್ನು ರಾಂಟೆಕ್ ಎಂದು ಕರೆಯುತ್ತಾರೆ. ಇಲ್ಲಿ ಇನ್ನು ಹಲವಾರು ಚಿಕ್ಕ ಚಿಕ್ಕ ದೇವಾಲಯವನ್ನು ಕೂಡ ಕಾಣಬಹುದಾಗಿದೆ.

Muk.khan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X