Search
  • Follow NativePlanet
Share
» »ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ಇನ್ನೇನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ.ಈ ವರ್ಷ 28 ಜೂನ್‍ನಿಂದ 26 ಆಗಸ್ಟ್ ವರೆಗೆ ಅಮರನಾಥ ಯಾತ್ರೆ ನಡೆಯಲಿದೆ. ಈಗಾಗಲೇ ಸಾಕಷ್ಟು ಮಂದಿ 2 ತಿಂಗಳುಗಳ ಹಿಂದೆಯೇ ಅಮರನಾಥ ಯಾತ್ರೆಗೆ ಬುಕ್ಕಿಂಗ್ ಮಾಡಿದ್ದಾರೆ. 60 ದಿನಗಳ ಅಮರನಾಥ ಯಾತ್ರೆಗೆ ಹೊರಡಲು ಬಹಳ ಉತ್ಸುಕರಾಗಿದ್ದಾರೆ.

ಇಷ್ಟೊಂದು ಕಠಿಣಕರ ಯಾತ್ರೆಯನ್ನು ಪೂರ್ಣಗೊಳಿಸುವುದು ಅಷ್ಟೊಂದು ಸುಲಭದ ಮಾತಲ್ಲ. ದಾರಿಯುದ್ದಕ್ಕೂ ಏನೆಲ್ಲಾ ಅಡೆತಡೆಗಳು ಎದುರಾಗುತ್ತವೆ. ಎದ್ದು ಬಿದ್ದು ಹೋಗಬೇಕಾಗುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರೂ ಕೂಡಾ ಈ ಯಾತ್ರೆಯನ್ನು ಕೈಗೊಳ್ಳುತ್ತಾರೆ.

ಹೆಲಿಕಾಫ್ಟರ್ ಸೌಲಭ್ಯ

ಹೆಲಿಕಾಫ್ಟರ್ ಸೌಲಭ್ಯ

PC:Nittin sain

ಅಮರನಾಥ ಯಾತ್ರೆಯ ರಸ್ತೆಯು ಬಹಳ ಕಠಿಣವಾಗಿರುವುದರಿಂದ ಇಲ್ಲಿಯವರೆಗೆ ತಲುಪುವುದು ಸುಲಭವೇನಲ್ಲ. ಭಕ್ತರ ಅನುಕೂಲಕ್ಕಾಗಿ ಇಲ್ಲಿ ಹೆಲಿಕಾಫ್ಟರ್ ಸೌಲಭ್ಯ ಕೂಡಾ ಮಾಡಲಾಗಿದೆ. ಹೆಲಿಕಾಫ್ಟರ್ ಸಹಾಯದಿಂದ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ಅತೀ ಕಡಿಮೆ ಸಮಯದಲ್ಲಿ ಬಾಬಾ ಅಮರನಾಥನ ದರ್ಶನ ಮಾಡಬಹುದು.

ಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾ

ಎಲ್ಲಿದೆ ಹೆಲಿಕಾಫ್ಟರ್ ಪಿಕ್‌ಅಪ್ ಪಾಯಿಂಟ್

ಎಲ್ಲಿದೆ ಹೆಲಿಕಾಫ್ಟರ್ ಪಿಕ್‌ಅಪ್ ಪಾಯಿಂಟ್

PC:Hardik Buddhabhatti

ಅಮರನಾಥ ದೇವಸ್ಥಾನದ ಅಫೀಶೀಯಲ್ ವೆಬ್‍ಸೈಟ್ ಪ್ರಕಾರ ಹೆಲಿಕಾಫ್ಟರ್ ಯಾತ್ರೆಗೆ 2 ಪಿಕ್‍ಅಪ್ ಪಾಯಿಂಟ್‍ಗಳಿವೆ. ಒಂದು ಬಲ್‍ಟಾಲ್ ಹಾಗೂ ಇನ್ನೊಂದು ಪಹಲ್‍ಗಾಮ್. ಈ ಎರಡೂ ಸ್ಥಳಗಳಿಂದ ಹೆಲಿಕಾಫ್ಟರ್ ಬಾಡಿಗೆ ಭಿನ್ನವಾಗಿದೆ. ಪಿಕ್‍ಅಪ್ ಪಾಯಿಂಟ್‍ವರೆಗೆ ನೀವು ನಿಮ್ಮ ಗಾಡಿಯಲ್ಲೇ ತಲುಪಬೇಕು.

ಹೆಲಿಕಾಫ್ಟರ್ ಬಾಡಿಗೆ ಎಷ್ಟು?

ಹೆಲಿಕಾಫ್ಟರ್ ಬಾಡಿಗೆ ಎಷ್ಟು?

ಬಲ್‍ಟಾಲ್‍ನಿಂದ ಪಂಜ್‍ತಾನಿವರೆಗಿನ ಹೆಲಿಕಾಫ್ಟರ್‌ನ ಬಾಡಿಗೆ 1600ರೂ. ಹೋಗಲು , ಬರಲು ಎರಡೂ ಸೇರಿ 3200ರೂ. ಆಗುತ್ತದೆ. ಪಹಲ್‍ಗಾಮ್‍ನಿಂದ ಪಂಜ್‍ತರನಿವರೆಗೆ 2751ರೂ. ಆಗುತ್ತದೆ ಹೋಗಲು ಬರಲು ಎರಡೂ ಸೇರಿ 5502ರೂ. ಆಗುತ್ತದೆ. ಪಂಜ್‍ತರನಿಯಿಂದ ಅಮರನಾಥ ಗುಹೆ ತಲುಪಲು ಸುಮಾರು 2.ಕಿ.ಮಿ ದೂರವಿದೆ.

ಬುಕ್ಕಿಂಗ್ ನಡೆದಿದೆ

ಬುಕ್ಕಿಂಗ್ ನಡೆದಿದೆ

PC:Gktambe

ಈ ಯಾತ್ರೆಗಾಗಿ ಅಮರನಾಥ ದೇವಸ್ಥಾನದ ಅಧೀಕೃತ ವೆಬ್‍ಸೈಟ್‍ನಲ್ಲಿ ಬುಕ್ಕಿಂಗ್ ನಡೆದಿದೆ. ಈ ಪ್ಯಾಕೇಜ್‍ನಲ್ಲಿ ಕೇವಲ ಹೆಲಿಕಾಫ್ಟರ್ ಬಾಡಿಗೆ ಸೇರಿದೆ. ಅಮರನಾಥ ಯಾತ್ರೆಗೆ ಕೆಲವು ಖಾಸಗಿ ವೆಬ್‍ಸೈಟ್‍ಗಳಲ್ಲೂ ಹೆಲಿಕಾಫ್ಟರ್ ಬುಕ್ಕಿಂಗ್ ನಡೆದಿದೆ.

 ಟ್ರಾವೆಲ್ ಪ್ಯಾಕೇಜ್

ಟ್ರಾವೆಲ್ ಪ್ಯಾಕೇಜ್

ಟ್ರಾವೆಲಿಂಗ್ ವೆಬ್‍ಸೈಟ್‍ನಲ್ಲಿ 3 ದಿನ ಹಾಗೂ 2 ರಾತ್ರಿಯ ಪ್ಯಾಕೇಜ್ ಲಭ್ಯವಿದೆ. 3 ದಿನ ಹಾಗೂ 2 ರಾತ್ರಿ ಪ್ಯಾಕೇಜ್‍ಗೆ 8499ರೂ. ಇದರ ಪಿಕ್‍ಅಪ್ ಪಾಯಿಂಟ್ ನೀಲ್‍ಘಾಟ್. ಪಹಲ್‍ಗಾಮ್‍ನಿಂದ ಅಮರನಾಥ ಯಾತ್ರೆಗೆ ಟ್ರಾವೆಲ್ ಪ್ಯಾಕೇಜ್ 14949 ರೂ. ಕೂಡಾ 3 ದಿನ ಹಾಗೂ 2 ರಾತ್ರಿಯ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್‍ನಲ್ಲಿ ಹೆಲಿಕಾಫ್ಟರ್‌ನ ಬಾಡಿಗೆ ಹಾಗೂ ಹೋಟೆಲ್, ಫುಡ್ ಹಾಗೂ ಕಾರ್‌ನ ವ್ಯವಸ್ಥೆ ಕೂಡಾ ಸೇರಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X