Search
  • Follow NativePlanet
Share
» »ನೀರಿನಿಂದ ಮುಳುಗುವ ಶಿವನ ಈ ಮಂದಿರದಲ್ಲಿ ಅದ್ದೂರಿಯಾಗಿ ನಡೆಯುತ್ತೆ ಶಿವರಾತ್ರಿ

ನೀರಿನಿಂದ ಮುಳುಗುವ ಶಿವನ ಈ ಮಂದಿರದಲ್ಲಿ ಅದ್ದೂರಿಯಾಗಿ ನಡೆಯುತ್ತೆ ಶಿವರಾತ್ರಿ

ಇಲ್ಲಿನ ದೇವರಿಗೆ ಯಾವುದೇ ದೇವಸ್ಥಾನದ ರಚನೆ ಇಲ್ಲ. ಅಲ್ಲದೆ ಇಲ್ಲಿ ನಡೆಯುವಷ್ಟು ಅದ್ದೂರಿಯಾಗಿ ಶಿವರಾತ್ರಿಯ ಆಚರಣೆ ಇಡೀ ರಾಜ್ಯದಲ್ಲೇ ಬೇರೆಲ್ಲೂ ನಡೆಯೋದಿಲ್ಲವಂತೆ.

ಶಿವರಾತ್ರಿ ದಿನ ಎಲ್ಲರೂ ಶಿವನ ದೇವಾಲಯಕ್ಕೆ ಹೋಗಲು ಹಾತೊರೆಯುತ್ತಿರುತ್ತಾರೆ. ಶಿವರಾತ್ರಿಯ ಈ ಸಂದರ್ಭದಲ್ಲಿ ನಾವಿಂದು ಒಂದು ವಿಶೇಷವಾದ ಶಿವನ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ದೇವರಿಗೆ ಯಾವುದೇ ದೇವಸ್ಥಾನದ ರಚನೆ ಇಲ್ಲ. ಅಲ್ಲದೆ ಇಲ್ಲಿ ನಡೆಯುವಷ್ಟು ಅದ್ದೂರಿಯಾಗಿ ಶಿವರಾತ್ರಿಯ ಆಚರಣೆ ಇಡೀ ರಾಜ್ಯದಲ್ಲೇ ಬೇರೆಲ್ಲೂ ನಡೆಯೋದಿಲ್ಲವಂತೆ. ಹಾಗಾದರೆ ಅದು ಯಾವ ದೇವಸ್ಥಾನ, ಎಲ್ಲಿದೆ, ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ ಬನ್ನಿ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC:Ranjithsiji
ಅಲುವಾ ಪ್ರದೇಶವು ಪೆರಿಯಾರ್ ನದಿಯ ದಡದಲ್ಲಿ ಎರ್ನಾಕುಲಂನಿಂದ 21 ಕಿ.ಮೀ. ದೂರದಲ್ಲಿದೆ. ಅಲುವಾ ಮಹಾದೇವ ದೇವಸ್ಥಾನವು NH-47 ರಲ್ಲಿರುವ ಮಾರ್ತಾಂಡ ವರ್ಮ ಸೇತುವೆಯಿಂದ 1 ಕಿಮೀ ದೂರದಲ್ಲಿದೆ. ಪೆರಿಯಾರ್ ನದಿಯು ಅಲುವಾ ರೈಲ್ವೆ ಸೇತುವೆ ಬಳಿ ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ ಮತ್ತು ವಿಭಜಿಸುವ ಒಂದು ಭಾಗವನ್ನು ಮಂಗಲಪುಳ ಎಂದು ಕರೆಯಲಾಗುತ್ತದೆ. ಅಲುವಾ ಮಹಾದೇವ ದೇವಸ್ಥಾನವು ಮಂಗಲಪುಳ ಮತ್ತು ಪೆರಿಯಾರ್ ನದಿಯ ನಡುವೆ ಇರುವ ಮರಳಿನ ದಡದಲ್ಲಿದೆ. ಅಲುವಾ ಮಹಾದೇವ ದೇವಾಲಯವನ್ನು ಟ್ರಾವಂಕೂರು ದೇವಸ್ವಮ್ ಮಂಡಳಿ ನಿರ್ವಹಿಸುತ್ತದೆ.

ಇಲ್ಲಿನ ವಿಶೇಷತೆ ಏನು?

ಇಲ್ಲಿನ ವಿಶೇಷತೆ ಏನು?

PC:Aruna
ಅಲುವಾ ಮಹಾದೇವ ದೇವಸ್ಥಾನದ ಅನನ್ಯ ಲಕ್ಷಣವೆಂದರೆ ಶಿವಲಿಂಗವನ್ನು ದೇವಸ್ಥಾನದಲ್ಲಿ ಇರಿಸಲಾಗಿಲ್ಲ. ಭಗವಾನ್ ಪರಶುರಾಮನಿಂದ ಸ್ಥಾಪಿಸಲ್ಪಟ್ಟ ಶಿವಲಿಂಗವನ್ನು ಶ್ರೀ ರಾಮನು ಪೆರಿಯಾರ್ ನದಿಯ ಮರಳು ತೀರಗಳಲ್ಲಿ ಪೂಜಿಸುತ್ತಿದ್ದನು . ಹಾಗಾಗಿ ಈ ಸ್ಥಳವನ್ನು ಅಲುವಾ ಮನಾಲ್ ಪುರಮ್ ಎಂದು ಕರೆಯಲಾಗುತ್ತದೆ. ಅಂದರೆ ಮರಳಿನಿಂದ ಕೂಡಿದ ಭೂಮಿ.

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

ಈ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ದಂತಕಥೆಗಳು ಇವೆ. ಶಿವಲಿಂಗವನ್ನು ಪರಶುರಾಮನು ಸ್ಥಾಪಿಸಿದ ನಂತರ ಇಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಲಾಯಿತು ಆದರೆ ಪ್ರವಾಹದಿಂದ ಅದು ನಾಶವಾಯಿತು. ದೇವಸ್ಥಾನದ ರಚನೆಯು ಆ ಸ್ಥಳದಲ್ಲಿ ಅಸ್ತಿತ್ವದಲ್ಲಿಲ್ಲ, ಹಾಗಾಗಿ ಲಿಂಗವನ್ನು ಸಂರಕ್ಷಿಸಲು ಯಾವುದೇ ದೇವಾಲಯದ ರಚನೆಯ ಅಗತ್ಯವಿಲ್ಲ ಎನ್ನಲಾಗುತ್ತದೆ.

ದೇವಸ್ಥಾನ ಕಟ್ಟಲು ಪ್ರಾರಂಭಿಸಿದ ಭೂತಗಣಗಳು

ದೇವಸ್ಥಾನ ಕಟ್ಟಲು ಪ್ರಾರಂಭಿಸಿದ ಭೂತಗಣಗಳು

ಮತ್ತೊಂದು ದಂತಕಥೆಯ ಪ್ರಕಾರ, ಭೂತಗಣಗಳು ಅಲ್ಲಿ ರಾತ್ರಿಯಲ್ಲಿ ಶಿವಲಿಂಗವನ್ನು ಪೂಜಿಸುತ್ತಿದ್ದರು. ಅವರು ಶಿವಲಿಂಗಕ್ಕೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದರು. ಆದರೆ ಒಂದೇ ರಾತ್ರಿಯಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಶಿವನು ಅವರಿಗೆ ಹೇಳಿದನು. ಭೂತಗಣಗಳು ಅದಕ್ಕೆ ಒಪ್ಪಿ ದೇವಸ್ಥಾನ ನಿರ್ಮಾಣವನ್ನು ಪ್ರಾರಂಭಿಸಿದರು. ದೇವಸ್ಥಾನ ಅರ್ಧ ಮುಗಿಯುತ್ತಿದ್ದಂತೆ ವಿಷ್ಣು ಅಲ್ಲಿಗೆ ಒಂದು ಕೋಳಿಯ ವೇಷದಲ್ಲಿ ಬಂದು ಕೋಳಿಯಂತೆ ಕೂಗುತ್ತಾನೆ. ಭೂತಗಣಗಳು ಬೆಳಗಾಯಿತೆಂದು ತಿಳಿದು ಅಲ್ಲಿಂದ ಹೊರಟು ಹೋಗುತ್ತಾರೆ.

ಅಡಕೆ ಮರದ ಎಲೆಯಲ್ಲಿ ನೈವೇದ್ಯ

ಅಡಕೆ ಮರದ ಎಲೆಯಲ್ಲಿ ನೈವೇದ್ಯ

PC:കാക്കര
ಶ್ರೀ ರಾಮನು ಸೀತಾ ದೇವಿಯನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ, ಇಲ್ಲಿ ಜಟಾಯುಗಾಗಿ ತರ್ಪಣವನ್ನು ನೀಡಿದ ಸ್ಥಳ ಇದಾಗಿದೆ. ಇನ್ನೊಂದು ದಂತಕಥೆಯ ಪ್ರಕಾರ ವಿಲ್ವಾಂಗಂಗಲಂ ಸ್ವಾಮಿಯರ್ ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ, ಅಲ್ಲಿ ಅವರು ಶಿವನ ಉಪಸ್ಥಿತಿಯನ್ನು ಅರಿತುಕೊಳ್ಳುತ್ತಾರೆ ಮತ್ತು ಪರಶುರಾಮನಿಂದ ಸ್ಥಾಪಿಸಲ್ಪಟ್ಟ ಶಿವಲಿಂಗವನ್ನು ಗುರುತಿಸುತ್ತಾರೆ. ಅಲ್ಲಿಇ ಶಿವನ ಕುರಿತಾಗಿ ಧ್ಯಾನ ಮಾಡುತ್ತಾರೆ. ಶಿವನು ಪ್ರತ್ಯಕ್ಷಗೊಂಡು ಅಲ್ಲಿ ಪೂಜೆ ಪ್ರಾರಂಭಿಸುವಂತೆ ತಿಳಿಸುತ್ತಾನೆ. ಅದರಂತೆಯೇ ಪೊಟ್ಟಾಯಲ್ ಇಲ್ಯಾಯತು, ತೊಟ್ಟಲ್ಲಿಲ್ ನಂಬಿಯಾರ್ ಮತ್ತು ಇದಾಮಾಣ ನಂಪೂದರಿ ಶಿವ ಪೂಜೆಗೆ ಬೇಕಾದ ಎಲ್ಲಾ ಏರ್ಪಾಡನ್ನು ಮಾಡುತ್ತಾರೆ. ವಿಲ್ವಾಂಗಂಗಲಂ ಪೂಜೆ ನಡೆಸುತ್ತಾರೆ. ಆದರೆ ನೈವೇದ್ಯವನ್ನು ನೀಡಲು ಯಾವುದೇ ಪಾತ್ರೆಗಳು ಇರಲಿಲ್ಲ. ಹಾಗಾಗಿ ವಿಲ್ವಾಮಂಗಲಂ ಒಂದು ಕುವಂಗಿನ್ ಪಾಲಾ ಅಂದರೆ ಅಡಕೆ ಮರದ ಹಾಲೆಯನ್ನು ಬಳಸುತ್ತಾರೆ. ಹಾಗಾಗಿ ಇಂದಿಗೂ ಸಹ ಈ ದೇವಸ್ಥಾನದಲ್ಲಿ ಕುವಂಗಿನ್ ಪಾಲಾದಲ್ಲಿ ನೈವೇದ್ಯಮವನ್ನು ನೀಡಲಾಗುತ್ತದೆ ಮತ್ತು ಇದನ್ನು ಪಳನೈವೇದಮ್ ಎಂದು ಕರೆಯಲಾಗುತ್ತದೆ.

ಬಾಲಾ ಕ್ಷೇತ್ರ

ಬಾಲಾ ಕ್ಷೇತ್ರ

ಮಾನ್ಸೂನ್ ಕಾಲದಲ್ಲಿ ಇಡೀ ಪ್ರದೇಶವು ಪ್ರವಾಹಕ್ಕೆ ಸಿಲುಕುತ್ತದೆ ಮತ್ತು ಶಿವಲಿಂಗ ನೀರಿನಲ್ಲಿ ಮುಳುಗಿರುತ್ತದೆ. ಆದ್ದರಿಂದ ಒರನ್ಮಾ ನಂಪೂತಿರಿಗಳು ಮಳೆಗಾಲದಲ್ಲಿ ಪೂಜೆಯನ್ನು ನಿರ್ವಹಿಸಲು ನದಿಯ ದಡದ ಮೇಲಿರುವ ಸಣ್ಣ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಿದರು. ಈ ದೇವಸ್ಥಾನವನ್ನು ಬಾಲಾ ಕ್ಷೇತ್ರವೆಂದು ಕರೆಯಲಾಗುತ್ತದೆ.

ಮಳೆಗಾಲದ ಪ್ರವಾಹದಲ್ಲಿ ಮುಳುಗುತ್ತದೆ ಶಿವಲಿಂಗ

ಮಳೆಗಾಲದ ಪ್ರವಾಹದಲ್ಲಿ ಮುಳುಗುತ್ತದೆ ಶಿವಲಿಂಗ

ಸ್ವಾಭಾವಿಕವಾಗಿ ಅಪೂರ್ಣವಾದರೂ, ಈ ದೇವಾಲಯವು ಹಲವಾರು ಪ್ರವಾಹಗಳನ್ನು ಎದುರಿಸಿದೆ ಮತ್ತು ವಾಸ್ತುಶಿಲ್ಪಿಗಳು ಅದರ ಅಡಿಪಾಯ ಮತ್ತು ರಚನೆಯ ಬಗ್ಗೆ ನಿಗೂಢವಾಗಿ ನಿಂತಿದೆ ಎಂಬುದು ಸತ್ಯ. ಟ್ರಾವಂಕೂರು ದೇವಸ್ವಮ್ ಬೋರ್ಡ್ ಅಧಿಕಾರಿಗಳು ಕೆಲವು ವರ್ಷಗಳ ಹಿಂದೆ ಇಲ್ಲಿ ದೇವಾಲಯ ರಚನೆಯನ್ನು ನಿರ್ಮಿಸಿದರು. ಆದರೆ ದೇವಾಲಯದ ರಚನೆಯ ನಿರ್ಮಾಣವು ಶಿವನ ಆಶಯಕ್ಕೆ ವಿರುದ್ಧವಾಗಿದೆ ಎಂಬುದು ನಂತರ ತಿಳಿದುಬಂತು.

ದಿನದಲ್ಲಿ ಒಂದೇ ಪೂಜೆ

ದಿನದಲ್ಲಿ ಒಂದೇ ಪೂಜೆ

ಶಿವಲಿಂಗವು ಪೂರ್ವಕ್ಕೆ ಎದುರಾಗಿರುತ್ತದೆ. ದೇವಾಲಯದ ಮುಂದೆ ನಂದಿಯ ವಿಗ್ರಹ ಇದೆ. ದಿನವೂ ಒಂದೇ ಪೂಜೆ ನಡೆಸಲಾಗುತ್ತದೆ. ಮಕರಾಮ್ 1 ರಿಂದ ಮೇಡಮ್ 1 ಗೆ ಮಾತ್ರ ಅಥಾಝಾ ಪೂಜೆಯನ್ನು ನಡೆಸಲಾಗುತ್ತದೆ ಮತ್ತು ಇತರ ದಿನಗಳಲ್ಲಿ ಮಾತ್ರವೇ ನೈವೇದ್ಯವನ್ನು ಮಾತ್ರವೇ ನೀಡಲಾಗುತ್ತದೆ. ಕುಂಭಂನಲ್ಲಿ ಶಿವರಾತ್ರಿ, ಮೀನಾಮ್ನಲ್ಲಿ ಉಟ್ಸಾವಂ, ತುಲಮ್ ಮತ್ತು ಕಾರ್ಕಿಡಕಂನಲ್ಲಿರುವ ವಾವು ಬಲಿ ಉತ್ಸವಗಳು ನಡೆಯುತ್ತದೆ. ಧಾರ ಮತ್ತು ರುದ್ರಭೀಷೇಕಂವನ್ನು ಇಲ್ಲಿನ ಶಿವನಿಗೆ ಅರ್ಪಿಸಲಾಗುತ್ತದೆ.

ಪ್ರಮುಖ ಉತ್ಸವಗಳು

ಪ್ರಮುಖ ಉತ್ಸವಗಳು

ಅಲುವಾ ದೇವಸ್ಥಾನದ ಪ್ರಮುಖ ಉತ್ಸವವೆಂದರೆ ಕುಂಭಮ್ (ಫೆಬ್ರವರಿ-ಮಾರ್ಚ್) ನ ಮಹಾ ಶಿವರಾತ್ರಿ. ಅಲುವಾದಲ್ಲಿ ಶಿವರಾತ್ರಿಯನ್ನು ಆಚರಿಸುವಷ್ಟು ಅದ್ದೂರಿಯಾಗಿ ಆಚರಿಸಲಾಗುವ ಬೇರೆ ಸ್ಥಳ ಕೇರಳದಲ್ಲಿಲ್ಲ ಎಂದೇ ಹೇಳಬಹುದು. ಶಿವರಾತ್ರಿ ಹಬ್ಬವು ವರ್ಣರಂಜಿತ ಆಚರಣೆಯಾಗಿದ್ದು, ಭಕ್ತರು ಪ್ರಾರ್ಥನೆಯಲ್ಲಿ ಇಡೀ ರಾತ್ರಿ ಮನೆಯಿಂದ ಹೊರಗುಳಿಯುತ್ತಾರೆ. ಆಲೂವಾದಲ್ಲಿನ ಶಿವರಾತ್ರಿ ಉತ್ಸವವು ಬಹಳ ಪ್ರಸಿದ್ಧವಾಗಿದೆ.

ನದಿಯಲ್ಲಿ ಪುಣ್ಯ ಸ್ನಾನ

ನದಿಯಲ್ಲಿ ಪುಣ್ಯ ಸ್ನಾನ

PC:Ranjithsiji
ಹೆಚ್ಚಿನ ಯಾತ್ರಿಕರು ಪವಿತ್ರ ರಾತ್ರಿ ನಂತರ ಬೆಳಿಗ್ಗೆ ತಮ್ಮ ಪೂರ್ವಜರಿಗೆ ಬಲಿ ನೀಡುತ್ತಾರೆ. ಶಿವರಾತ್ರಿ ಆಚರಣೆಯಲ್ಲಿ ಬ್ರಹ್ಮಮೂರ್ತದಲ್ಲಿ ನದಿಯಲ್ಲಿ ಸ್ನಾನ ಮಾಡಿವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶಿವರಾತ್ರಿ ದಿನದಿಂದ ಒಂದು ತಿಂಗಳ ಕಾಲ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಜಾತ್ರೆಯಲ್ಲಿ ಅನೇಕ ಸಾಮಾಗ್ರಿಗಳನ್ನು, ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X