Search
  • Follow NativePlanet
Share
» »ದೀಪಗಳ ರೂಪಲ್ಲಿರುವ ಭಯಾನಕ ಪ್ರೇತಾತ್ಮಗಳು

ದೀಪಗಳ ರೂಪಲ್ಲಿರುವ ಭಯಾನಕ ಪ್ರೇತಾತ್ಮಗಳು

ಇಂದಿಗೂ ನಿಗೂಢವಾಗಿ ಇರುವ ಪಶ್ಚಿಮ ಬಂಗಾಳದ ಒಂದು ಪ್ರದೇಶದಲ್ಲಿ ಮಧ್ಯೆ ರಾತ್ರಿಯಂದು ಅಸ್ವಾಭಿಕವಾಗಿ ಹೊಳೆಯುವ ದೀಪಗಳು. ಈ ವಿಚಿತ್ರ ದೀಪಗಳನ್ನು "ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ. ಈ ದೀಪಗಳನ್ನು ದೆವ್ವದ ದೀಪಗಳು ಎಂದೇ ಪ್ರಸಿದ್ಧಿಯಾಗಿದೆ.

ಪ್ರಪಂಚ ಎಷ್ಟೇ ತಂತ್ರಜ್ಞಾನ ಹಾಗೂ ಸಂಶೋಧನೆಗಳಿಂದ ಬೆಳೆಯುತ್ತಿದ್ದರೂ ಕೂಡ ಕೆಲವೊಂದು ರಹಸ್ಯಗಳು ಹಾಗೆಯೇ ಉಳಿದು ಬಿಡುತ್ತವೆ. ಅವುಗಳಿಗೆಲ್ಲಾ ಉತ್ತರವನ್ನು ಕಂಡು ಹಿಡಿಯಲು ಪ್ರಯತ್ನಿಸಿದರೆ ಪ್ರಾಣಕ್ಕೆ ಅಪಾಯವಾಗುವುದು ಖಚಿತ. ಅಂತಹ ಉತ್ತರಗಳನ್ನು ಕಂಡು ಹಿಡಿಯುವ ಬದಲು ಸುಮ್ಮನೆ ಇರುವುದೇ ವಾಸಿ. ಅಂತಹ ಹಲವಾರು ಘಟನೆಗಳು ನಮ್ಮ ದೇಶದಲ್ಲಿಯೂ ಕೂಡ ಇವೆ.

ಅವುಗಳಲ್ಲಿ ಪ್ರಮುಖವಾದುದು ಹಾಗೂ ಇಂದಿಗೂ ನಿಗೂಢವಾಗಿ ಇರುವ ಪಶ್ಚಿಮ ಬಂಗಾಳದ ಒಂದು ಪ್ರದೇಶದಲ್ಲಿ ಮಧ್ಯೆ ರಾತ್ರಿಯಂದು ಅಸ್ವಾಭಿಕವಾಗಿ ಹೊಳೆಯುವ ದೀಪಗಳು. ಈ ವಿಚಿತ್ರ ದೀಪಗಳನ್ನು "ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ. ಈ ದೀಪಗಳನ್ನು ದೆವ್ವದ ದೀಪಗಳು ಎಂದೇ ಪ್ರಸಿದ್ಧಿಯಾಗಿದೆ.

ಈ ಲೇಖನದ ಮೂಲಕ "ಅಲೈಯಾ ಲೈಟ್ಸ್"ನ ಬಗ್ಗೆ ತಿಳಿಯಿರಿ.

ಎಲ್ಲಿ?

ಎಲ್ಲಿ?

ಪಶ್ಚಿಮ ಬಂಗಾಳ, ಭಾರತ ಹಾಗೂ ಬಾಂಗ್ಲಾದೇಶದ ಚೌಗು ಪ್ರದೇಶಗಳಲ್ಲಿನ ಸ್ಥಳೀಯ ಮೀನುಗಾರರಿಂದ ವರದಿ ಮಾಡಲಾದ ವಿವಿಧ ಬಣ್ಣಗಳ ಹೊಳೆಯುವ ದೀಪಗಳಾಗಿವೆ. ಹಾಗಾಗಿ ಈ ಪ್ರದೇಶವು ಭಾರತದ ಅತ್ಯಂತ ನಿಗೂಢ ಹಾಗೂ ಭಯಾನಕ ಪ್ರದೇಶವಾಗಿದೆ.

PC:YOUTUBE

ದೀಪಗಳು

ದೀಪಗಳು

ಈ ದೀಪಗಳನ್ನು ಅನ್ವೇಷಿಸಲು ಹೊರಟರೆ ಪ್ರಾಣವನ್ನು ಕಳೆದುಕೊಳ್ಳುವುದು ಖಚಿತ. ಪಶ್ಚಿಮ ಬಂಗಾಳದ ಒಂದು ಪ್ರದೇಶದಲ್ಲಿ ಈ ವಿಚಿತ್ರವಾದ ದೀಪಗಳಿಂದ ಹಲವಾರು ಮೀನುಗಾರರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

PC:YOUTUBE

ಆಕಾರ

ಆಕಾರ

ಈ ದೀಪಗಳು ಕಪ್ಪು, ನೀಲಿ, ಕೆಂಪು ಮತ್ತು ಹಳದಿ ಬಣ್ಣಕ್ಕೆ ಬದಲಾಗುತ್ತಾ ಇರುತ್ತದೆ. ಇದೊಂದು ಚಲಿಸುವ ಬಣ್ಣದ ಚೆಂಡು. ಸೇಬಿನ ಹಣ್ಣಿನ ಆಕಾರದಲ್ಲಿದ್ದು, ಬೆಂಕಿಯ ದೀಪದಂತೆ ಪ್ರಕಾಶಮಾನವಾಗಿ ರಾತ್ರಿಯ ಸಮಯದಲ್ಲಿ ಚಲಿಸುತ್ತದೆ.


PC:YOUTUBE

ಚಲಿಸುವುದು

ಚಲಿಸುವುದು

ಈ ವಿಚಿತ್ರವಾದ ಪ್ರೇತ ದೀಪಗಳು ಕೆಲವೊಮ್ಮೆ ವೇಗವಾಗಿ ಚಲಿಸಬಹುದು, ಇನ್ನೂ ಕೆಲವೊಮ್ಮೆ ನಿಧಾನವಾಗಿ ಚಲಿಸಬಹುದು. ಯಾರಾದರೂ ಈ ದೀಪಗಳನ್ನು ಹಿಂಬಾಲಿಸಲು ಹೊರಟರೆ ದಾರಿ ತಪ್ಪಿಸುತ್ತದೆ ಎಂತೆ. ಹಾಗೆಯೇ ಅವರ ಜೀವ ತೆಗೆಯುತ್ತದೆ ಎಂತೆ.


PC:YOUTUBE

"ಅಲೈಯಾ ಲೈಟ್ಸ್"

ಬಂಗಾಳದ ಚೌಗು ಪ್ರದೇಶದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಕಾಣಿಸುವ ವಿಚಿತ್ರವಾದ ದೀಪಗಳನ್ನು "ಅಲೈಯಾ ಲೈಟ್ಸ್" ಎಂದು ಕರೆಯಲಾಗಿದೆ.

PC:YOUTUBE

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಈ ಪ್ರೇತ ದೀಪಗಳು ಕೇವಲ ಪಶ್ಚಿಮ ಬಂಗಾಳಕ್ಕೆ ಅಲ್ಲದೇ, ಯುಕೆ, ಫಿನ್ಲ್ಯಾಂಡ್, ಲಾಟ್ಟಿಯಾ ಇನ್ನೂ ಹಲವಾರು ಸ್ಥಳಗಳಲ್ಲಿ ಇಂತಹ ಭಯಾನಕ ದೀಪಗಳನ್ನು ಕಾಣಬಹುದಾಗಿದೆ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಆಸ್ರ್ಟೇಲಿಯಾದಲ್ಲಿಯೂ ಕೂಡ ಇಂತಹ ದೀಪಗಳು ರಾತ್ರಿಯ ಸಮಯದಲ್ಲಿ ಉದ್ಭಿವಿಸುತ್ತದೆ.

PC:YOUTUBE

ಮರಣ ಹೊಂದಿದರು

ಮರಣ ಹೊಂದಿದರು

ಆ ಪ್ರದೇಶದ ಸ್ಥಳೀಯ ಸಮುದಾಯದ ಜನರು ಈ ಭಯಾನಕ ದೀಪಗಳ ಹಿಂದೆ ಹೋಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಈ ದೀಪಗಳು ಸತ್ತ ಮೀನುಗಾರರ ದೆವ್ವಗಳು ಎಂದು ನಂಬಲಾಗಿದೆ. ಹಾಗೇಯೆ ಈ ದೀಪಗಳು ಸಮಾಧಿಗಳಿಂದ ಬರುತ್ತವೆ ಎಂದು ತಿಳಿಸಿದ್ದಾರೆ.

PC:YOUTUBE

ಆತ್ಮಗಳು

ಆತ್ಮಗಳು

ಕೆಲವರು ಹೇಳಿಕೆಗಳ ಪ್ರಕಾರ ಪ್ರೇತಾತ್ಮದ ದೀಪಗಳನ್ನು ಅನ್ವೇಷಿಸಲು ಹೊರಟವರು ಮತ್ತೇಂದೂ ಹಿಂದುರುವುದಿಲ್ಲ. ಕೆಲವರು ಮೃತ ಮಟ್ಟರೆ, ಇನ್ನೂ ಕೆಲವರು ಹಲವಾರು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.


PC:YOUTUBE

ಮೀನುಗಾರರು

ಮೀನುಗಾರರು

ಪಶ್ಚಿಮ ಬಂಗಾಳದ ಜಾನಪದ ಕಥೆಗಳ ಪ್ರಕಾರ ಆ ದೀಪಗಳು ಸತ್ತ ಮೀನುಗಾರರ ಆತ್ಮವಾಗಿದೆ. ಕೇವಲ ಮೀನುಗಾರರ ಆತ್ಮವೇ ಅಲ್ಲದೇ ಪರಿಶೋಧಿಸಲು ಹೋರಟವರು ಕೂಡ ದೀಪದ ರೂಪದಲ್ಲಿ ಆತ್ಮಗಳಾಗಿವೆ ಎಂದು ತಿಳಿಸುತ್ತಾರೆ.


PC:YOUTUBE

ವಿಲ್-ಓ-ದಿ-ವಿಪ್ಪ್

ವಿಲ್-ಓ-ದಿ-ವಿಪ್ಪ್

ಈ ಮೊದಲೇ ಹೇಳಿದಂತೆ "ಅಲೈಯಾ ಲೈಟ್ಸ್" ಗಳು ಪಶ್ಚಿಮ ಬಂಗಾಳದ ಪ್ರತ್ಯೇಕವಾದ ಘಟನೆಯಲ್ಲ. ಅವುಗಳು ವಾಸ್ತವವಾಗಿ ಜಾಗತಿಕ ಘಟನೆಗಳ ಒಂದು ಭಾಗವಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಈ ದೀಪಗಳು ಕಂಡು ಬಂದಿದ್ದು ಅದನ್ನು ವಿಲ್-ಓ-ದಿ-ವಿಪ್ಪ್ ಕರೆಯುತ್ತಾರೆ.


PC:YOUTUBE

ಈ ದೀಪಗಳಿಗಿರುವ ಹಲವಾರು ಹೆಸರುಗಳು

ಈ ದೀಪಗಳಿಗಿರುವ ಹಲವಾರು ಹೆಸರುಗಳು

ಜಾಕ್-ಓ-ಲ್ಯಾಂಟರ್ನ್, ಹಿಂಕಿಪಂಕ್, ಹವ್ಯಾಸಿ ಲ್ಯಾಂಟರ್ನ್ ಮತ್ತು ಫ್ರೈಯರ್ ಲ್ಯಾಂಟರ್ನ್ ಎಂದು ಸಹ ಈ ನಿಗೂಢ ದೀಪಗಳಿಗೆ ಹಲವಾರು ಹೆಸರುಗಳಿವೆ.


PC:YOUTUBE

ವಿಜ್ಞಾನಿಗಳು

ವಿಜ್ಞಾನಿಗಳು

ಹಲವಾರು ವಿಜ್ಞಾನಿಗಳು ಪಶ್ಚಿಮ ಬಂಗಾಳದ ಪ್ರದೇಶದಲ್ಲಿ ನಡೆಯುವ ಈ ವಿಚಿತ್ರವಾದ ದೀಪಗಳ ಬಗ್ಗೆ ಯಾವುದೇ ರೀತಿಯ ಸರಿಯಾದ ಉತ್ತರವನ್ನು ನೀಡಿಲ್ಲ.


PC:YOUTUBE

ವಿಶ್ವವಿಖ್ಯಾತ

ವಿಶ್ವವಿಖ್ಯಾತ

ಈ ವಿದ್ಯಾಮಾನವು ಶತಮಾನಗಳಿಂದಲೂ ವಿಶ್ವವಿಖ್ಯಾತ ವಿಜ್ಞಾನ ಮತ್ತು ಧರ್ಮ ಇಬ್ಬರಿಗೂ ಅಸ್ತವ್ಯಸ್ತಗೊಳಿಸಿದೆ.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X