Search
  • Follow NativePlanet
Share
» »ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ವಿಲಾಂಕುಲಂನಲ್ಲಿರುವ ಅಕ್ಷಯಪುರೀಶ್ವರರ್ ದೇವಾಲಯವು ಮಾನಸಿಕ ಹಾಗೂ ದೈಹಿಕ ಸಮಸ್ಯೆಯಿರುವವರ ನಿವಾರಣಾ ಕೇಂದ್ರವಾಗಿ ಪ್ರಸಿದ್ಧಿಗಳಿಸಿದೆ

By Vijay

ಕಲಿಯುಗದಲ್ಲಿ ಮನುಷ್ಯನ ತೊಂದರೆಗಳಿಗೆ ಮಿತಿಯೆ ಇಲ್ಲ ಎಂದು ಹೇಳುತ್ತಾರೆ. ಎಷ್ಟೆ ಪ್ರಯತ್ನಿಸಿದರೂ ಒಂದಿಲ್ಲ ಒಂದು ಸಮಸ್ಯೆ ಸಾಮಾನ್ಯವಾಗಿ ಪ್ರತಿಯೊಬ್ಬರು ಎದುರಿಸತ್ತಲೆ ಇರುತ್ತಾರೆ. ಅದರಿಂದ ಮುಕ್ತಿ ಪಡೆಯಲೆಂದು ಕೆಲವರು ದಾನ-ಧರ್ಮಾದಿಗಳನ್ನು ಮಾಡಿದರೆ, ಇನ್ನೂ ಕೆಲವರು ನಿರ್ದಿಷ್ಟ, ದೇವಾಲಯ, ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ.

ಇನ್ನೂ ಧಾರ್ಮಿಕರಲ್ಲದವರು ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಇವೆಲ್ಲವು ಅವರವರ ಭಕ್ತಿ-ನಂಬಿಕೆಗಳಿಗೆ ಬಿಟ್ಟ ವಿಚಾರ. ಆದರೂ ನಮ್ಮಲ್ಲಿ ಬಹುತೇಕರು ಧಾರ್ಮಿಮ ಮನೋಭಾವನೆಯುಳ್ಳವರಾಗಿರುವುದರಿಂದ ದೇವಾಲಯಗಳಿಗೆ ತೆರಳಿ ದೇವರ ಅನುಗ್ರಹ ಪಡೆಯಬಯಬಯಸುತ್ತಾರೆ.

ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ಚಿತ್ರಕೃಪೆ: Venkatx3x

ನಿಮಗೂ ಏನಾದರೂ ತೊಂದರೆಗಳಿದ್ದರೆ, ಅಂದರ ಉದಾಹರಣೆಗೆ ಸಾಲದ ಒತ್ತಡ, ಸದಾ ಕೈಕೊಡುತ್ತಿರುವ ಆರೋಗ್ಯ, ಯಾವತ್ತಿಗೂ ಬೆನ್ನು ಬಿಡದ ಒತ್ತಡ ಮುಂತಾದವುಗಳಿಂದ ನೀವು ರೋಸಿ ಹೋಗಿದ್ದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ದೇವಾಲಯಕ್ಕೊಮ್ಮೆ ಭೇಟಿ ನೀಡಿ ನೋಡಿ. ಏಕೆಂದರೆ ಇಂತಹ ಎಲ್ಲ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವಂತೆ!

ಈ ರೀತಿಯಾಗಿ ಇಲ್ಲಿಗೆ ಬಂದು ಒಳಿತು ಕಂಡವರ ನ್ಸ್ಂಬಿಕೆಯಾಗಿದೆ. ಇದೊಂದು ಮಹಾ ಶಕ್ತಿಶಾಲಿ ಸ್ಥಳ ಎಂದೆ ಇಲ್ಲಿಗೆ ಭೇಟಿ ನೀಡುವ ಭಕ್ತರ ಅಭಿಪ್ರಾಯ. ಆದರೆ ಇವೆಲದಕ್ಕೂ ನಂಬಿಕೆ ಸ್ಪಷ್ಟವಾಗಿರಬೇಕೆಂದೂ ಕೆಲ ಹಿರಿಯರು ನುಡಿಯುತ್ತರೆ. ಏಕೆಂದರೆ ಸ್ವತಃ ಶನಿ ದೇವರೆ ಕಷ್ಟಕ್ಕಿಡಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿ ಅದರಿಂದ ಮುಕ್ತಿ ಪಡೆದರಂತೆ.

ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ವಿಲಾ ಗಿಡ, ಚಿತ್ರಕೃಪೆ: Venkatx3x

ಹೌದು, ಆ ದೇವಾಲಯವೆ ಅಕ್ಷಯಪುರೀಶ್ವರರ್ ಅಥವಾ ಅಕ್ಷಯಪುರೀಶ್ವರನ ದೇವಾಲಯ. ಇದು ಶಿವನಿಗೆ ಮುಡಿಪಾದ ಅದ್ಭುತ ದೇವಾಲಯವಾಗಿದೆ. ಅಲ್ಲದೆ ಶನಿಯೊಂದಿಗೆ ಸಾಕಷ್ಟು ನಂಟನ್ನೂ ಸಹ ಈ ದೇವಾಲಯ ಹೊಂದಿದೆ. ಶನಿಲೋಕದಲ್ಲಿರುವ ಪೂಸ ಮರುಂಗಾರ್ ಎಂಬ ಸಿದ್ಧನು ಶನಿತೀರ್ಥವನ್ನು ಕೆಲವು ಶಿವ ದೇವಾಲಯದಲ್ಲಿ ಯಾವಾಗಲೂ ಅಭಿಷೇಕ ಮಾಡುತ್ತಿರುತ್ತಾನಂತೆ.

ಅಂತಹ ದೇವಾಲಯಗಳಲ್ಲಿ ಇದೂ ಸಹ ಒಂದಾಗಿದೆ. ಹಾಗಾಗಿ ಶನಿ ದೋಷ ತೀವ್ರವಿರುವವರೂ ಸಹ ಇಲ್ಲಿಗೆ ಬಂದು ಕ್ರಮಬದ್ಧವಾದ ಕೆಲವು ಆಚರಣೆಗಳನ್ನು ಮಾಡಿದರೆ ಚೂರಿ ಇರಿತವಾಗುವೆಡೆ ಸೂಜಿ ಚುಚ್ಚಿದ ಹಾಗೆ ಆಗಬಹುದಾಗಿದ್ದ ತೊಡಕುಗಳು ಕಡಿಮೆ ಪ್ರಮಾಣದಲ್ಲಾಗುತ್ತವಂತೆ!

ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ಚಿತ್ರಕೃಪೆ: Venkatx3x

ಇದಕ್ಕೆ ಹೊಂದಿಕೊಂಡಂತೆ ಒಂದು ಕಥೆಯಿದೆ. ಆ ಪ್ರಕಾರವಾಗಿ, ಯಮ ದೇವರಿಂದ ಒಮ್ಮೆ ಶನಿ ದೇವರು ಪೆಟ್ಟು ತಿಂದು ಕುಂಟರಾದರಂತೆ. ತಮ್ಮನ್ನು ತಾವು ಇದರಿಂದ ಮುಕ್ತಿ ಪಡೆಯಲು ಶಿವನ ಈ ದೇವಾಲಯಕ್ಕೆ ಬಂದು ಮನಸ್ಸಿನಿಂದ ಪ್ರಾರ್ಥಿಸಿದರಂತೆ. ತೆವಳಿಕೊಂಡು ನಡೆಯುವಾಗ ಇಲ್ಲಿದ್ದ ವಿಲಾ ಗಿಡದ ಬೇರುಗಳಲ್ಲಿ ಕಾಲು ಸಿಕ್ಕಿ ಶನಿ ದೇವರು ಕೆಳ ಬಿದ್ದರಂತೆ.

ಈ ಸಂದರ್ಭದಲ್ಲಿ ಅವರು ಬಿದ್ದ ಸ್ಥಳದ ಕೆಳಗೆ ಅಡಕವಾಗಿ ಜ್ಞಾನವರಿ ನೀರಿನ ತೊರೆಯು ಮೇಲೆ ರಭಸವಾಗಿ ಪುಟಿಯಲಾರಂಭಿಸಿತಂತೆ, ಹೀಗೆ ಅದು ಮೇಲೆ ಪುಟಿಯುವಾಗ ಶನಿ ದೇವರನ್ನೂ ಸಹ ಮೇಲೆತ್ತಿತಂತೆ. ಆಗ ಶಿವನು ಪ್ರಸನ್ನನಾಗಿ ಶನಿ ದೇವರಿಗೆ ಮದುವೆಯಾಗಲೆಂದು ಹರಸಿದನಂತೆ. ಶನಿ ದೇವರು ಮತ್ತೆ ಮೊದಲಿನಂತಾಗಿ ಶಿವನನ್ನು ನಮಸ್ಕರಿಸಿದರಂತೆ.

ರಾಹು ದೋಷ ನಿವಾರಿಸುವ ಮಗುದೇಶ್ವರರ್!

ಹಾಗಾಗಿ ಈ ದೇವಾಲಯವು ಸಾಕಷ್ಟು ಪ್ರಸಿದ್ಧಿಗಳಿಸಿರುವ ದೇವಾಲಯವಾಗಿದೆ. ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವವರು ಈ ದೇವಾಲಯಕ್ಕೆ ಭೇಟಿ ನೀಡಲು ಬಯಸುತ್ತಾರೆ. ನಿಮಗೂ ಸಹ ಇಚ್ಛೆಯಿದ್ದಲ್ಲಿ ಒಂದೊಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ.

ಕೈಬಿಸಿ ಕರೆಯುವ ಕಿಕ್ಕೇರಿಯ ಬ್ರಹ್ಮೇಶ್ವರ!

ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ವಿಲಾಂಕುಲಂ ಎಂಬ ಪಟ್ಟಣದಲ್ಲಿ ಶಿವನ ಈ ದೇವಾಲಯವಿದ್ದು ಅಕ್ಷಯಪುರೀಶ್ವರರ್ ದೇವಾಲಯವೆಂದೆ ಪ್ರಸಿದ್ಧಿಗಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X