Search
  • Follow NativePlanet
Share
» »ವರ್ಷದಲ್ಲಿ ಮೂರು ನಿಮಿಷ ಭೇಟಿಯಾಗುವ ಅಕ್ಕ ತಂಗಿಯರ ಬಗ್ಗೆ ಕೇಳಿದ್ದೀರಾ?

ವರ್ಷದಲ್ಲಿ ಮೂರು ನಿಮಿಷ ಭೇಟಿಯಾಗುವ ಅಕ್ಕ ತಂಗಿಯರ ಬಗ್ಗೆ ಕೇಳಿದ್ದೀರಾ?

ಈ ಜಾತ್ರೆ ಸಂದರ್ಭ ಅಕ್ಕ-ತಂಗಿಯರಿಬ್ಬರೂ ಭೇಟಿಯಾಗುತ್ತಾರೆ. ಕುಶಲೋಪರಿ ವಿಚಾರಿಸುತ್ತಾರೆ, ಅಪ್ಪಿಕೊಳ್ಳುತ್ತಾರೆ.

ಒಂದು ಮನೆಯಲ್ಲಿ ಅಕ್ಕ-ತಂಗಿಯರು ಇದ್ದ ಮೇಲೆ ಅಲ್ಲಿ ಜಗಳ ಸಾಮಾನ್ಯ, ಇಬ್ಬರು ಜುಟ್ಟು ಜುಟ್ಟು ಹಿಡಿದುಕೊಂಡು ಕಿತ್ತಾಡುತ್ತಿರುತ್ತಾರೆ. ಅದೇ ಸ್ವಲ್ಪದರಲ್ಲೇ ಸರಿ ಹೋಗುತ್ತಾರೆ. ಮತ್ತೆ ಅನ್ಯೋನ್ಯದಿಂದ ಮಾತಾಡುತ್ತಾರೆ. ಹಾಗೆಯೇ ಬೆಳೆಯುತ್ತಾ ಹೋದಂತೆ ಕೆಲವೊಮ್ಮೆ ಅಕ್ಕ-ತಂಗಿಯರ ನಡುವೆ ಅನ್ಯೋನ್ಯತೆ ಇನ್ನೂ ಹೆಚ್ಚಾಗುತ್ತದೆ. ಕೆಲವೊಮ್ಮೆ ಇಬ್ಬರ ನಡುವೆ ಅಸೂಯೆ ಮೂಡಿರುತ್ತದೆ. ಅಂತಹದ್ದೇ ಒಂದು ಅಕ್ಕ-ತಂಗಿಯ ಕಥೆಯನ್ನು ನಾವಿಂದು ತಿಳಿಸಲಿದ್ದೇವೆ.

ಯಾರೀ ಅಕ್ಕ-ತಂಗಿಯರು

ಯಾರೀ ಅಕ್ಕ-ತಂಗಿಯರು

PC: youtube

ಈ ಅಕ್ಕ-ತಂಗಿಗಾಗಿ ಇಲ್ಲಿ ವಿಶೇಷ ಜಾತ್ರಾ ಮಹೋತ್ಸವವೂ ನಡೆಯುತ್ತದೆ. ಈ ಜಾತ್ರೆ ಸಂದರ್ಭ ಅಕ್ಕ-ತಂಗಿಯರಿಬ್ಬರೂ ಭೇಟಿಯಾಗುತ್ತಾರೆ. ಕುಶಲೋಪರಿ ವಿಚಾರಿಸುತ್ತಾರೆ, ಅಪ್ಪಿಕೊಳ್ಳುತ್ತಾರೆ. ಅದೂ ಕೂಡಾ ಬರೀ ಮೂರೇ ನಿಮಿಷದ ಭೇಟಿ. ಚಿತ್ರದುರ್ಗದಲ್ಲಿರುವ ಈ ಅಕ್ಕ ತಂಗಿಯರೇ ತ್ರಿಪುರ ಸುಂದರಿ ತಿಪ್ಪಿನ ಘಟ್ಟಮ್ಮ ಹಾಗೂ ಬಂಗಾರಿ ಬರಗೇರಮ್ಮ.

ಮೂರು ನಿಮಿಷಗಳ ಭೇಟಿ

ಮೂರು ನಿಮಿಷಗಳ ಭೇಟಿ

PC:youtube
ಈ ಅಕ್ಕ-ತಂಗಿಯ ಭೇಟಿಯೂ ವಿಶೇಷವಾಗಿರುತ್ತದೆ. ಈ ಮೂರು ನಿಮಿಷಗಳ ಭೇಟಿಗಾಗಿ ಅಕ್ಕ-ತಂಗಿಯರು ಮೂರು ವಾರಗಳಿಂದಲೇ ತಯಾರಿ ನಡೆಸುತ್ತಿರುತ್ತಾರೆ. ಈ ಭೇಟಿಗೆ ಸಾಕ್ಷಿಯಾಗಲು ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಕ್ಕ-ತಂಗಿಯರ ಭೇಟಿಯನ್ನು ಕಂಡು ಭಾವಪರವಶರಾಗುತ್ತಾರೆ.

ಇದರ ಹಿಂದಿನ ಕಥೆ

ಇದರ ಹಿಂದಿನ ಕಥೆ

PC:youtube
ಈ ಭೇಟಿ ಉತ್ಸವವು ಬಂಜೆತನದ ಸುತ್ತ ಹುಟ್ಟಿದ ಕಥೆಯಾಗಿದೆ. ಚಿತ್ರದುರ್ಗದಲ್ಲಿ ಬರಗೇರಮ್ಮ ಹಾಗೂ ತಿಪ್ಪಿನ ಘಟ್ಟಮ್ಮ ಎನ್ನುವ ಇಬ್ಬರು ಅಕ್ಕ-ತಂಗಿಯರಿರುತ್ತಾರೆ. ತಂಗಿ ತಿಪ್ಪಿನಘಟ್ಟಮ್ಮಳಿಗೆ ಏಳು ಜನ ಮಕ್ಕಳಿರುತ್ತಾರೆ. ಅಕ್ಕ ಬರಗೇರಮ್ಮ ಬಂಜೆ ಆಗಿರುತ್ತಾಳೆ. ತಂಗಿಯ ಮಕ್ಕಳನ್ನು ತನ್ನ ಮಕ್ಕಳೆಂದೇ ಪ್ರೀತಿಸುತ್ತಿರುತ್ತಾಳೆ. ಪ್ರತಿ ನಿತ್ಯ ತಂಗಿಯ ಮನೆಗೆ ಹೋಗಿ ಮಕ್ಕಳ ಜತೆ ಆಟವಾಡುತ್ತಾ ಕಾಲ ಕಳೆಯುತ್ತಿರುತ್ತಾಳೆ. ಆದರೆ, ಒಂದು ದಿನ ಬಂಜೆಯಾದ ಅಕ್ಕ ಬರಗೇರಮ್ಮ ತನ್ನ ಮಕ್ಕಳನ್ನು ಮುಟ್ಟಕೂಡದು ಎಂದು ತಿಪ್ಪಿನಘಟ್ಟಮ್ಮ ತನ್ನ ಮಕ್ಕಳನ್ನು ಬಚ್ಚಿಡುತ್ತಾಳೆ.

ಕಲ್ಲುಗಳಾದ ಮಕ್ಕಳು

ಕಲ್ಲುಗಳಾದ ಮಕ್ಕಳು

PC:youtube
ತಂಗಿಯ ವರ್ತನೆ ಕಂಡು ಬರಗೇರಮ್ಮಗೆ ಬೇಸರವಾಗಿ ಮುಚ್ಚಿಟ್ಟ ಮಕ್ಕಳು ಕಲ್ಲಾಗಲಿ ಎಂದು ಶಾಪ ಹಾಕುತ್ತಾಳೆ. ಅದರಂತೆಯೇ ತಿಪ್ಪಿನಘಟ್ಟಮ್ಮ ನ ಮಕ್ಕಳು ಕಲ್ಲಾಗುತ್ತಾರೆ. ಇಂದಿಗೂ ಈ ದೇಗುಲದಲ್ಲಿ ಶಾಪಗ್ರಸ್ಥ ಮಕ್ಕಳು ಶಿಲೆಯ ರೂಪದಲ್ಲಿರುವುದನ್ನು ಕಾಣಬಹುದು.

ವರ್ಷಕ್ಕೊಮ್ಮೆ ಭೇಟಿ

ವರ್ಷಕ್ಕೊಮ್ಮೆ ಭೇಟಿ

PC:youtube
ಶಾಪ ನೀಡಿದ ಅಕ್ಕ-ತಂಗಿಯ ಮುಖವನ್ನು ಇನ್ಯಾವತ್ತೂ ನೋಡುವುದಿಲ್ಲ ಎಂದು ಸಿಟ್ಟಿನಿಂದ ಹೇಳಿ ಹೋಗುತ್ತಾಳೆ. ಬಳಿಕ ಭಕ್ತರ ಕೋರಿಕೆಯ ಮೇರೆಗೆ ಏಕನಾಥೇಶ್ವರಿ ಮದ್ಯಸ್ಥಿಕೆ ವಹಿಸಿ ವರ್ಷಕ್ಕೊಮ್ಮೆ ರಾಜಬೀದಿಯಲ್ಲಿ ಅಕ್ಕ-ತಂಗಿ ಭೇಟಿ ಆಗುವಂತೆ ಸೂಚಿಸಿದಳಂತೆ. ಅಕ್ಕ-ತಂಗಿಯರ ಭೇಟಿಯ ಪ್ರತೀಕವಾಗಿ ಇಂದಿಗೂ ಭೇಟಿ ಉತ್ಸವ ಆಚರಣೆಯಲ್ಲಿದೆ .

ತಲುಪುವುದು ಹೇಗೆ?

ಕರ್ನಾಟಕ ರಾಜ್ಯದಲ್ಲಿ, ಚಿತ್ರದುರ್ಗವು ನೋಡಲೇಬೇಕಾದ ಸ್ಥಳವಾಗಿದೆ. ದೇಶದ ಇತರ ಪ್ರಮುಖ ನಗರಗಳಿಂದ ಚಿತ್ರದುರ್ಗಕ್ಕೆ ನೀವು ನಿಯಮಿತ ರೈಲುಗಳನ್ನು ಸುಲಭವಾಗಿ ಪಡೆಯಬಹುದು. ಚಿತ್ರದುರ್ಗಕ್ಕೆ ವಿಮಾನ ನಿಲ್ದಾಣವಿಲ್ಲ. ಹತ್ತಿರದ ವಿಮಾನ ನಿಲ್ದಾಣವೆಂದರೆ ಹುಬ್ಬಳ್ಳಿ ವಿಮಾನ ನಿಲ್ದಾಣ. ಚಿತ್ರದುರ್ಗಕ್ಕೆ ದೇಶದ ಇತರ ಪ್ರಮುಖ ನಗರಗಳಿಂದ ನಿಯಮಿತವಾದ ಬಸ್ಸುಗಳಿವೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:Sanjay Godbole
ಚಿತ್ರದುರ್ಗದಲ್ಲಿನ ಹಲವಾರು ಆಕರ್ಷಣೆಗಳೆಂದರೆ: ಚಿತ್ರದುರ್ಗ ಕೋಟೆ, ಕಲ್ಲಿನಾ ಕೋಟೆ, ದೊಡ್ಡಹಟ್ರಾಂಗಪ್ಪ ಹಿಲ್, ಮೊಲಕಾಲ್ಮುರು, ರಾಮಾಯಣ ದೇವಸ್ಥಾನ, ಜಾಮಿಯಾ ಮಸೀದಿ, ಅಶೋಕ ಸಿದ್ದಪುರ, ರಾಮಗಿರಿ, ತುರುಮಲ್ಲೇಶ್ವರ ದೇವಸ್ಥಾನ. ಅಕ್ಟೋಬರ್ ನಿಂದ ಫೆಬ್ರವರಿ ಚಿತ್ರದುರ್ಗಕ್ಕೆ ಹೋಗಲು ಉತ್ತಮ ಸಮಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X