Search
  • Follow NativePlanet
Share
» »ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಎಸೆದಿದ್ದು ಈ ಬಾವಿಯಲ್ಲಿಯೇ

ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಎಸೆದಿದ್ದು ಈ ಬಾವಿಯಲ್ಲಿಯೇ

ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಆಗಂ ಬಾವಿಯು ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವನ್ನು ಹೊಂದಿದೆ. ಅಶೋಕ ನ ಕಾಲಕ್ಕೆ ಸೇರಿದ ಈ ಬಾವಿಯಲ್ಲಿ ಸಾಕಷ್ಟು ರಹಸ್ಯಗಳಡಗಿವೆ. ಈ ವರೆಗೂ ಈ ಬಾವಿಯ ನೀರು ಆವಿಯಾಗಿಲ್ಲ ಯಾಕೆ? ಅಶೋಕನ ಖಜಾನೆ ಈ ಬಾವಿಯಲ್ಲಿ ಅಡಗಿದೆಯೇ? ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಈ ಬಾವಿಯೊಳಗೆ ಎಸೆದಿದ್ದು ಯಾಕೆ? ಹೀಗೆ ಸಾಕಷ್ಟು ಪ್ರಶ್ನೆಗಳು ಈ ಬಾವಿಯ ಸುತ್ತ ಸುತ್ತುತ್ತವೆ.

ಬ್ರಿಟಿಷ್ ಸಂಶೋಧಕನೊಬ್ಬ ಹುಡುಕಿದ ಬಾವಿ

ಬ್ರಿಟಿಷ್ ಸಂಶೋಧಕನೊಬ್ಬ ಹುಡುಕಿದ ಬಾವಿ

1902-03ರಲ್ಲಿ ಬ್ರಿಟಿಷ್ ಸಂಶೋಧಕ ಲಾರೆನ್ಸ್ ವಾರ್ಡೇಲ್ ಎನ್ನುವವನು ಈ ಬಾವಿಯನ್ನು ಕಂಡುಹಿಡಿದನು. ಆಗ ಅಲ್ಲಿ ಸಾಕಷ್ಟು ಮೂರ್ತಿಗಳು ಕಾಣಸಿಕ್ಕಿದ್ದವು. 750 ವರ್ಷಗಳ ಹಿಂದೆ ಯಾವುದೇ ಮುಸ್ಲಿಂ ಪದಾಧೀಕಾರಿ ಪಾಟ್ನಾ ಪ್ರವೇಶ ಮಾಡಿದ್ರೆ ಮೊದಲಿಗೆ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಈ ಬಾವಿಯಲ್ಲಿ ಎಸೆಯಬೇಕಿತ್ತು. ಯಾವುದೇ ಸ್ಥಳೀಯ ಕಳ್ಳ ಕಳ್ಳತನದಲ್ಲಿ ಸಫಲನಾದರೆ ಕೆಲವು ದೃವ್ಯಗಳನ್ನು ಆ ಬಾವಿಯಲ್ಲಿ ಹಾಕುತ್ತಿದ್ದರು.

ನಮ್ಮ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಿವು, ಇಲ್ಲಿ ವಾಹನ ಚಲಾಯಿಸುವುದು ಡೇಂಜರ್‌!ನಮ್ಮ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಿವು, ಇಲ್ಲಿ ವಾಹನ ಚಲಾಯಿಸುವುದು ಡೇಂಜರ್‌!

ಯಾವತ್ತೂ ಬರಿದಾಗೋದಿಲ್ಲ

ಯಾವತ್ತೂ ಬರಿದಾಗೋದಿಲ್ಲ

Nandanupadhyay

ಈ ಬಾವಿಯನ್ನು ಸಾಮ್ರಾಟ ಅಶೋಕನ ಕಾಲದಲ್ಲಿ 272-232 ಇಸವಿಯಲ್ಲಿ ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಈ ಬಾವಿಯ ವಿಶೇಷತೆ ಎಂದರೆ ಎಷ್ಟೇ ಬರಗಾಲ ಬಂದರೂ ಈ ಬಾವಿಯ ನೀರು ಬತ್ತೋದಿಲ್ಲ. ಹಾಗೆಯೇ ಎಷ್ಟೇ ನೆರೆ ಬಂದರೂ ಈ ಬಾವಿಯ ನೀರು ಹೆಚ್ಚುವುದಿಲ್ಲ. ಮಳೆಗಾಲದಲ್ಲಿ ಈ ಬಾವಿಯ ನೀರಿನ ಮಟ್ಟ 1 ರಿಂದ 1.5ಫೀಟ್ ಹೆಚ್ಚುತ್ತದೆ.

ನೀರಿನ ಬಣ್ಣ ಬದಲಾಗುತ್ತದೆ

ನೀರಿನ ಬಣ್ಣ ಬದಲಾಗುತ್ತದೆ

ಇದರ ಇನ್ನೊಂದು ವಿಶೇಷತೆ ಎಂದರೆ ನೀರಿನ ಬಣ್ಣ ಬದಲಾಗುತ್ತಾ ಇರುತ್ತದೆ. ಇನ್ನು ಈ ಬಾವಿಯ ನೀರಿನ ಆಳವನ್ನು ತಿಳಿಯಲು ಸಾಕಷ್ಟು ಪ್ರಯಾಸಗಳು ನಡೆಸಲಾಯಿತು, ಕೊನೆಗೆ ಪುರಾತತ್ವ ವಿಭಾಗವು ಈ ಬಾವಿಯ ಆಳವು 105 ಫೀಟ್ ಎಂದು ನಿರ್ಧರಿಸಿದೆ. ಆ ಕಾಲದಲ್ಲಿ ಬರೀ 20 ಫೀಟ್ ಅಗೆದರೆ ಸಾಕು ನೀರು ದೊರೆಯುತ್ತಿತ್ತು. ಹೀಗಿರುವಾಗ ಇದು ಬಹಳ ಆಳವಾದ ಬಾವಿಯಾಗಿದೆ.

ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?

ಗಂಗಾ ಸಾಗರದಿಂದ ಸೇರಿದೆ

ಗಂಗಾ ಸಾಗರದಿಂದ ಸೇರಿದೆ

Manoj

ಈ ಬಾವಿಯು ಬಗ್ಗೆ ಇನ್ನೊಂದು ಮಾನ್ಯತೆ ಇದೆ, ಅದೇನೆಂದರೆ ಈ ಬಾವಿಯು ಗಂಗಾಸಾರದಿಂದ ಸೇರಿದೆ. ಹಾಗಾಗಿ ಈ ಬಾವಿಯ ನೀರು ಯಾವತ್ತೂ ಆವಿಯಾಗೋದಿಲ್ಲ. ಹಿಂದೊಮ್ಮೆ ಬ್ರಿಟಿಷರ ಊರುಗೋಲು ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿ ಬಿದ್ದಿರುತ್ತದೆ. ಅದು ಹರಿದುಕೊಂಡು ಬಂದು ಪಾಟಲೀಪುತ್ರದ ಬಾವಿಯ ನೀರಿನಲ್ಲಿ ತೇಲಲಾರಂಭಿಸಿತು. ಇಂದಿಗೂ ಆ ಕೋಲನ್ನು ಕೋಲ್ಕತ್ತಾದ ಮ್ಯೂಸಿಯಂನಲ್ಲಿ ಕಾಣಬಹುದು.

ಅಶೋಕನ ಖಜಾನೆ ಇತ್ತು

ಅಶೋಕನ ಖಜಾನೆ ಇತ್ತು

ಈ ಬಾವಿಯ ಒಳಗೆ ಸಾಮ್ರಾಟ ಅಶೋಕನ ಖಜಾನೆ ಇದೆ ಎನ್ನಲಾಗುತ್ತದೆ. ಈ ಬಾವಿಯ ಒಳಗೆ ಸಣ್ಣ ಸಣ್ಣ 9 ಬಾವಿಗಳಿವೆ. ಕೊನೆಯ ಬಾವಿಯಲ್ಲಿ ಅಶೋಕ ಬಚ್ಚಿಟ್ಟಿರುವ ಖಜಾನೆ ಇದೆ ಎನ್ನಲಾಗುತ್ತದೆ. ಅಶೋಕನ ಸಾಮ್ರಾಜ್ಯ ಕುಮಾರಾರದಿಂದ ಜೋಡಲ್ಪಟ್ಟಿದೆ. ಇಲ್ಲಿ ಸುರಂಗದ ಮೂಲಕ ಖಜಾನೆಯನ್ನು ಇಡಲಾಗಿದೆ ಎನ್ನುತ್ತಾರೆ.

ಬೆಂಗಳೂರಿನ ದೊಡ್ಡಮಾಕಳಿಯಲ್ಲಿ ವಾರಾಂತ್ಯ ಕಳೆಯಲು ಏನೇನಿದೆ ಒಮ್ಮೆ ನೋಡಿ<br /> ಬೆಂಗಳೂರಿನ ದೊಡ್ಡಮಾಕಳಿಯಲ್ಲಿ ವಾರಾಂತ್ಯ ಕಳೆಯಲು ಏನೇನಿದೆ ಒಮ್ಮೆ ನೋಡಿ

99 ಸಹೋದರ ಹೆಣ ಹಾಕಿದ್ದ ಅಶೋಕ

99 ಸಹೋದರ ಹೆಣ ಹಾಕಿದ್ದ ಅಶೋಕ

ಇನ್ನೊಂದು ಕಥೆಯ ಪ್ರಕಾರ ಅಶೋಕನು ರಾಜನಾಗಲು ತನ್ನ 99 ಸಹೋದರರನ್ನು ಹತ್ಯೆ ಮಾಡಿ ಅವರ ಮೃತದೇಹವನ್ನು ಈ ಬಾವಿಯೊಳಗೆ ಹಾಕಿದ್ದನು. ಅಶೋಕನು ತನ್ನ ವಿರೋಧಿಗಳನ್ನು ಹತ್ಯೆ ಮಾಡಿ ಮೃತದೇಹವನ್ನು ಆ ಬಾವಿಯೊಳಗೆ ಹಾಕುತ್ತಿದ್ದನು ಎನ್ನಲಾಗುತ್ತಿತ್ತು.

ಶೀತಲ ಮಾತೆ ಮಂದಿರ

ಶೀತಲ ಮಾತೆ ಮಂದಿರ

ಈ ಬಾವಿಯ ಸಮೀಪದಲ್ಲೇ ಇದೆ ಶೀತಲ ಮಾತೆಯ ಮಂದಿರ. ಹಾಗಾಗಿ ಮೊದಲು ಈ ಬಾವಿಗೆ ಪೂಜೆ ಸಲ್ಲಿಸಿ ನಂತರ ಶೀತಲಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ಸಾಕಷ್ಟು ಜನರು ಈ ಬಾವಿಯ ಪೂಜೆ ಮಾಡಲು ಆಗಮಿಸುತ್ತಾರೆ. ಈ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಸಂತಾನ ಪ್ರಾಪ್ತಿಯ ಇಚ್ಛೆ ಈಡೇರುತ್ತದೆ ಎನ್ನಲಾಗುತ್ತದೆ.

ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X