Search
  • Follow NativePlanet
Share
» »22 ವರ್ಷಗಳಿಂದ ಈ ಊರಲ್ಲಿ ಒಂದೂ ಮದುವೆಯೇ ಆಗಿಲ್ಲವಂತೆ!

22 ವರ್ಷಗಳಿಂದ ಈ ಊರಲ್ಲಿ ಒಂದೂ ಮದುವೆಯೇ ಆಗಿಲ್ಲವಂತೆ!

ನಮ್ಮ ದೇಶದ ಒಂದು ಹಳ್ಳಿಯಲ್ಲಿ ಸುಮಾರು 22 ವರ್ಷಗಳಿಂದ ಯಾವುದೇ ಮದುವೆಯಾಗಿಲ್ಲವಂತೆ. ಇಲ್ಲಿಗೆ ಯಾರೂ ಹುಡುಗಿಯನ್ನು ಕೊಡಲು ಒಪ್ಪುವುದಿಲ್ಲವಂತೆ. ಆದರೂ ಈ ಬಾರಿ 22ವರ್ಷಗಳ ನಂತರ ಈ ಹಳ್ಳಿಯಲ್ಲಿ ಒಂದು ವಿವಾಹ ಕಾರ್ಯ ನಡೆದಿದೆ. ಹಳ್ಳಿಗೆ ವಧುವಿನ ಆಗಮನವಾಗಿದೆ. ಇದರಿಂದ ಹಳ್ಳಿಯವರೆಲ್ಲಾ ಬಹಳ ಖುಷಿಯಿಂದ ಇದ್ದಾರೆ.

ಈ ಜ್ಯೋರ್ತಿಲಿಂಗದ ದರ್ಶಶ ಮಾಡಿದ್ರೆ ಭೂತ, ಪ್ರೇತ ಕಾಟದಿಂದ ಮುಕ್ತಿ ಸಿಗುತ್ತಂತೆ!ಈ ಜ್ಯೋರ್ತಿಲಿಂಗದ ದರ್ಶಶ ಮಾಡಿದ್ರೆ ಭೂತ, ಪ್ರೇತ ಕಾಟದಿಂದ ಮುಕ್ತಿ ಸಿಗುತ್ತಂತೆ!

22ವರ್ಷ ಮದುವೆಯೇ ಕಂಡಿರದ ಊರು

22ವರ್ಷ ಮದುವೆಯೇ ಕಂಡಿರದ ಊರು

PC: PROFulvio Spada

22 ವರ್ಷಗಳ ಕಾಲ ಈ ಹಳ್ಳಿಯಲ್ಲಿ ಯಾವುದೇ ಮದುವೆ ನಡೆದಿಲ್ಲವಂತೆ. ಇದು ಒಂದು ಕಟ್ಟುಕಥೆಯಲ್ಲ, ಬದಲಾಗಿ ರಾಜಸ್ಥಾನದ ಒಂದು ಹಳ್ಳಿಯ ನೈಜ ಕಥೆ. 1996ರಿಂದ ಈ ಹಳ್ಳಿಯಲ್ಲಿ ಯಾವುದೇ ಮದುವೆ ನಡೆದಿಲ್ಲ. 22 ವರ್ಷಗಳ ನಂತರ ಈ ಹಳ್ಳಿ ಮದುವೆ ಕಂಡಿದ್ದು ಹಳ್ಳಿಯ ಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಯಾವುದು ಆ ಹಳ್ಳಿ

ಯಾವುದು ಆ ಹಳ್ಳಿ

PC:plaits

ರಾಜಸ್ತಾನದ ದೋಲ್‌ಪುರ ಜಿಲ್ಲೆಯ ರಾಜ್‌ಘಟ್ ಹಳ್ಳಿಯ 22 ವ ರ್ಷದಿಂದ ಒಂದೂ ಮದುವೆಯನ್ನು ಕಂಡಿರದ ಹಳ್ಳಿಯಾಗಿದೆ. ಈ ಹಳ್ಳಿಯಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ನೀರಿನ ಸೌಲಭ್ಯವಿಲ್ಲ. ಸರಿಯಾದ ರಸ್ತೆ ಇಲ್ಲ. ಈ ಗ್ರಾಮದ ಪುರುಷರ ಎಲ್ಲಾ ಪ್ರಪೋಸಲ್‌ಗಳನ್ನು ಕೈ ಬಿಡಲಾಗಿದೆ. ಯಾರೂ ಕೂಡಾ ಈ ಊರಿಗೆ ತಮ್ಮ ಹೆಣ್ಣನ್ನು ನೀಡಲು ಬಯಸೋದಿಲ್ಲ. ಹಾಗಾಗಿ ಈ ಊರಿನ ಯುವಕರು ಬ್ಯಾಚುಲರ್‌ ಆಗಿಯೇ ಉಳಿಯುವಂತಾಗಿದೆ.

ಮದುವೆಯಾದ ಪವನ್ ಕುಮಾರ್

ಮದುವೆಯಾದ ಪವನ್ ಕುಮಾರ್

PC: bhishek727

ಆದರೆ ಈ ಬಾರಿ ಪವನ್ ಎನ್ನುವ ಯುವಕ ಮದುವೆಯಾಗಿದ್ದು ರಾಜ್‌ಘಟ್‌ ಹಳ್ಳಿಗೆ ಹೊಸ ವಧುವಿನ ಆಗಮನವಾಗಿದೆ. ಇತ್ತೀಚೆಗೆ ಮದುವೆಯಾಗಿರುವವನು. 22 ವರ್ಷಗಳ ನಂತರ ಮದುವೆಯ ಕಾರ್ಯವನ್ನು ನೋಡುತ್ತಿದ್ದೇವೆ ಎನ್ನುತ್ತಾರೆ ವರನ ಕಡೆಯವರು.

ಮಧ್ಯಪ್ರದೇಶದ ವಧು

ಮಧ್ಯಪ್ರದೇಶದ ವಧು

PC:The Wandering Angel

ಪವನ್‌ಕುಮಾರ್ ಮಧ್ಯಪ್ರದೇಶದದಿಂದ ವಧುವನ್ನು ತನ್ನ ಹಳ್ಳಿಗೆ ಕರೆದುಕೊಂಡು ಬಂದಿದ್ದಾನೆ. ಹಳ್ಳಿಯು ಬಹಳ ಹಿಂದುಳಿದಿದ್ದು ಇಲ್ಲಿ ಇರುವವರೆಲ್ಲರೂ ಬಡತನ ರೇಖೆಯಲ್ಲಿ ಬದುಕುವವರು ಇಲ್ಲಿನ 350ಜನರಿರುವ ಈ ಹಳ್ಳಿಯಲ್ಲಿ 40 ಕಚ್ಚಾ ಮನೆಗಳಿವೆ. ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿ ಕೇವಲ ಒಂದೇ ಒಂದು ಪ್ರಾಥಮಿಕ ಶಾಲೆ ಇದೆ. ಹ್ಯಾಂಡ್‌ಪಂಪ್‌ವೊಂದಿದೆ.

ವಿದ್ಯಾರ್ಥಿಗಳೇ ಇಲ್ಲದ ಶಾಲೆ

ವಿದ್ಯಾರ್ಥಿಗಳೇ ಇಲ್ಲದ ಶಾಲೆ

ಇಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳಿದ್ದಾರೆ. ಪೂರ್ತಿ ಕತ್ತಲೆಯಿಂದ ಕೂಡಿದ ಹಳ್ಳಿ ಇದಾಗಿದೆ. ಈ ಹಳ್ಳಿಯಲ್ಲಿರುವ ಸುಮಾರು 125ಮಹಿಳೆಯರಲ್ಲಿ ಕೇವಲ ಇಬ್ಬರಿಗೆ ಮಾತ್ರ ತಮ್ಮ ಹೆಸರನ್ನು ಬರೆಯಲು ತಿಳಿದಿದೆ. ಇಲ್ಲಿನ ಮಹಿಳೆಯರು ಟಿವಿಯನ್ನು ಕಂಡಿಲ್ಲ, ಫ್ರಿಡ್ಜ್ ಎಂದರೆ ಏನು ಅನ್ನೋದೇ ಗೊತ್ತಿಲ್ಲ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Nikhilb239

ಧೋಲ್‌ಪುರ್ ಜೈಪುರ್ ನಗರದಿಂದ 283ಕಿ.ಮೀ ದೂರದಲ್ಲಿದೆ. ಈ ಊರಿನಲ್ಲಿ ಕೇವಲ ಒಂದೇ ಒಂದು ಕುಡಿಯುವ ನೀರಿನ ಪೈಪ್ ಇದೆ. ಗ್ಲೋಲಿಯರ್ ಧೋಲ್ಪುರದ ಸಮೀಪದ ದೊಡ್ಡ ಪಟ್ಟಣ. ಗ್ವಾಲಿಯರ್ ನಿಂದ ಧೋಲ್ಪುರಕ್ಕೆ 65.9 ಕಿಲೋಮೀಟರ್ ದೂರವಿದೆ. ಈ ತಾಣವು ಗ್ವಾಲಿಯರ್ ನಿಂದ ಮೊರಾಗೆ ಪ್ರವೇಶಿಸಬಹುದಾಗಿದೆ. ಇದು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಗಡಿಯ ಸಮೀಪದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X