Search
  • Follow NativePlanet
Share
» »ಮಣಿಪುರದಲ್ಲಿ ಸಾಹಸಮಯ ಚಟುವಟಿಕೆಗಳ ಕೊಡುಗೆಗಳು

ಮಣಿಪುರದಲ್ಲಿ ಸಾಹಸಮಯ ಚಟುವಟಿಕೆಗಳ ಕೊಡುಗೆಗಳು

ಮಣಿಪುರದಲ್ಲಿ ಒಂದು ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನಿಮ್ಮ ಸಾಹಸಮಯ ಉತ್ಸಾಹವನ್ನು ಟ್ರಕ್ಕಿಂಗ್, ಕೇವಿಂಗ್, ರಾಫ್ಟಿಂಗ್, ರಾಕ್ ಕ್ಲೈಂಬಿಂಗ್ ಮುಂತಾದುವುಗಳನ್ನು ಮಾಡಿ ಪೂರೈಸಿಕೊಳ್ಳಿ.

By Manjula Balaraj Tantry

ಭಾರತದಲ್ಲಿಯ ಅತ್ಯುತ್ತಮ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದ್ದರೂ ಕೂಡಾ ಮಣಿಪುರದಲ್ಲಿ ಯಾವಾಗಲೂ ಭಾರತದ ಕಡಿಮೆ ಅನ್ವೇಷಣೆಗೊಳಗಾದ ಜಾಗಗಳೇ ಹೆಚ್ಚಾಗಿರುವ ಸ್ಥಳವಾಗಿದೆ. ಇತ್ತೀಚೆಗೆ ಇದು ಹೆಚ್ಚು ಭೇಟಿ ಕೊಡಲ್ಪಡುವ ಸ್ಥಳಗಳ ಪಟ್ಟಿಯಲ್ಲಿ ಸೇರಿದೆ.

ಅದರಲ್ಲೂ ಪ್ರಕೃತಿ ಪ್ರಿಯರು ಮತ್ತು ಸಾಹಸ ಪ್ರಿಯರು ಮಣಿಪುರದಲ್ಲಿ ಖಚಿತವಾಗಿಯೂ ಭೇಟಿ ಮಾಡಲೇ ಬೇಕಾದ ಸ್ಥಳಗಳಿವೆ. ಆಳವಾದ ಪ್ರತಿಧ್ವನಿಸುವ ಕಣಿವೆಗಳಿಂದ ದಟ್ಟವಾದ ಕಾಡುಗಳವರೆಗೆ ಮತ್ತು ಅದ್ಬುತವಾದ ಸರೋವರಗಳಿಂದ ಸಮೃದ್ಧ ಬಯಲು ಪ್ರದೇಶಗಳವರೆಗೆ ಭಾರತದ ಈ ಸುಂದರವಾದ ರಾಜ್ಯವು ತನ್ನಲ್ಲಿ ಸಂದರ್ಶಕರಿಗೆ ಬೇಕಾದ ಎಲ್ಲಾ ಅಚ್ಚರಿಗಳನ್ನು ಹೊಂದಿದೆ.

ನೀವು ಸಾಹಸವನ್ನು ಪ್ರೀತಿಸುವವರ ಪೈಕಿ ಒಬ್ಬರಾಗಿದ್ದಲ್ಲಿ, ನಿಮ್ಮ ಬ್ಯಾಗುಗಳನ್ನು ಪ್ಯಾಕ್ ಮಾಡಿಕೊಂಡು ಮಣಿಪುರಕ್ಕೆ ಹೋಗುವ ದಾರಿಯಲ್ಲಿ ನೀವು ಹೊರಡಲು ಸಿದ್ದರಾಗಿ. ಉಸಿರಾಡಲು ತಾಜಾ ಗಾಳಿ, ಅಡ್ರಿನಾಲಿನ್ನ ಆ ಅದ್ಭುತ ಅನುಭವವನ್ನು ಪಡೆಯುವುದಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ.

ಸಾಹಸವು ನಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ನಮ್ಮ ಜೀವನಕ್ಕೆ ಉತ್ತಮ ದೃಷ್ಟಿಕೋನವನ್ನು ನೀಡುತ್ತದೆ. ಆದುದರಿಂದ ಮಣಿಪುರದ ಅದ್ಬುತ ನೆಲದಲ್ಲಿ ಸ್ವಲ್ಪ ಸಾಹಸ ಮಾಡಿದರೆ ಹೇಗಿರಬಹುದು?

ರಾಫ್ಟಿಂಗ್

ರಾಫ್ಟಿಂಗ್

ಜಲಪ್ರಿಯರಿಗೆ ರಾಫ್ಟಿಂಗ್ ಒಂದು ಉತ್ತಮವಾದ ಕ್ರೀಡೆಯಾಗಿದೆ. ನದಿಯುದ್ದಕ್ಕೂ ಪ್ರಯಾಣಿಸುವಾಗ ನದಿಯ ಅಲೆಗಳು ನಿಮ್ಮನ್ನು ಮೇಲೆತ್ತಿ ಕೆಳಗೆ ಚಲಿಸುವಂತೆ ಮಾಡುವಾಗ ಯಾವುದೇ ಜಲಪ್ರೇಮಿಗಳು ಅನುಭವಿಸಬಹುದಾದಂತಹ ರೋಮಾಂಚಕ ಅನುಭವವಾಗಿದೆ.

ನೀವು ನಿಮ್ಮ ಸುರಕ್ಷತೆಯ ಬಗ್ಗೆ ಯೋಚಿಸಬೇಕಾಗಿಲ್ಲ ಇಲ್ಲಿ ಸರಿಯಾದ ಮಾರ್ಗದರ್ಶಿಗಳನ್ನು ನೀವು ನಿಮ್ಮ ಪ್ರಯಾಣವನ್ನು ನದಿಗಳಲ್ಲಿ ಪ್ರಾರಂಭಿಸುವ ಮೊದಲು ನೀಡಲಾಗುತ್ತದೆ. ಅಲ್ಲದೆ ರಕ್ಷಣಾ ತಂಡಗಳು ಯಾವಾಗಲೂ ಸಿದ್ದರಾಗಿರುತ್ತಾರೆ.

ಲ್ಯಾಮ್ಡನ್ ಇನ್ಸ್ಟಿಟ್ಯೂಟ್ ನಿಂದ ನಂದಲ್ ಇಬಾನ್ ವರೆಗೆ 16 ಕಿ.ಮೀ. ರಾಫ್ಟಿಂಗ್ ಕೋರ್ಸ್ ಇದೆ, ಇದು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮಣಿಪುರದಲ್ಲಿಯ ನದಿಗಳು ಪ್ರಕ್ಷುಬ್ದ ಹೊಳೆಗಳು ಬೆಟ್ಟದ ಇಳಿಜಾರುಗಳಲ್ಲಿ ಇರುವುದರಿಂದ ರಾಫ್ಟಿಂಗ್ ನ ವಿಶೇಷ ಅನುಭವವನ್ನು ಇಲ್ಲಿಯ ಸಂದರ್ಶಕರಿಗೆ ಒದಗಿಸಿ ಕೊಡುತ್ತದೆ.

ಕೇವಿಂಗ್

ಕೇವಿಂಗ್

ಭೂಮಿ ತಾಯಿಯ ಗುಪ್ತ ಮೂಲೆಗಳನ್ನು ಅನ್ವೇಷಣೆ ಮಾಡಲು ಇಷ್ಟ ಪಡುವವರಾಗಿದ್ದಲ್ಲಿ ಕೇವಿಂಗ್ ಒಂದು ಮೋಜು ನೀಡುವಂತಹ ಚಟುವಟಿಕೆಯಾಗಿದೆ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದು ಮಾತ್ರವಲ್ಲದೆ ನೀವು ಇಲ್ಲಿ ಅನೇಕ ಪ್ರಾಚೀನ ಗುಹೆಗಳನ್ನೂ ಕೂಡಾ ಅನ್ವೇಷಿಸಬಹುದಾಗಿದೆ.

ಇವು ಮಣಿಪುರದ ಉಖ್ರುಲ್ ಮತ್ತು ತಮೆಂಗ್ಲಾಂಗ್ ಜಿಲ್ಲೆಯಲ್ಲಿದೆ. ಈ ಗುಹೆಗಳು ಅತ್ಯಾಕರ್ಷಕ ಮತ್ತು ರೋಮಾಂಚಕ ಸಾಹಸಗಳಿಗೆ ಪರಿಪೂರ್ಣ ಉದಾಹರಣೆಗಳಾಗಿವೆ. ಆಳವಾದ ಗುಹೆಗಳ ಕತ್ತಲೆಯ ಒಳಗೆ ಹೋಗುವುದೇ ಒಂದು ಸಾಹಸಮಯ ಚಟುವಟಿಕೆಯಾಗಿದೆ.

ನೀವು ಮಣಿಪುರದ ಪ್ರಾಚೀನ ಗುಹೆಗಳನ್ನು ಅನ್ವೇಷಿಸುವ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಬಯಸಿದ್ದಲ್ಲಿ ಖಚಿತವಾಗಿಯೂ ಮಣಿಪುರದ ಈ ಐತಿಹಾಸಿಕ ಮತ್ತು ಹೆಚ್ಚು ಅನ್ವೇಷಣೆಗೆ ಒಳಪಡದ ಸ್ಥಳಗಳಿಗೆ ಭೇಟಿಕೊಡಿ.

ರಾಕ್ ಕ್ಲೈಂಬಿಂಗ್ (ಕಠಿಣ ಬಂಡೆಗಳ ಹತ್ತುವಿಕೆ)

ರಾಕ್ ಕ್ಲೈಂಬಿಂಗ್ (ಕಠಿಣ ಬಂಡೆಗಳ ಹತ್ತುವಿಕೆ)

ರಾಕ್ ಕ್ಲೈಂಬಿಂಗ್ ನಿಮಗೆ ಪ್ರಕೃತಿಯ ಜೊತೆ ಹತ್ತಿರದ ಅನುಭವವನ್ನು ನೀಡುವುದು ಮಾತ್ರವಲ್ಲದೆ ಇದು ನಿಮ್ಮ ಶಕ್ತಿ ಮತ್ತು ಸಹನೆಯನ್ನೂ ಕೂಡ ಪರೀಕ್ಷಿಸುತ್ತದೆ. ಇದೊಂದು ರೀತಿಯ ಸಾಹಸವಾಗಿದ್ದು ಇದು ನಿಮಗೆ ಮುಂದುವರಿಸುವ ಮತ್ತು ಬಿಟ್ಟುಕೊಡದೇ ಇರುವ ಪಾಠವನ್ನು ಕಲಿಸುತ್ತದೆ. ಸಂಕ್ಷಿಪ್ತವಾಗಿ ರಾಕ್ ಕ್ಲೈಂಬಿಂಗ್ ನಿಮಗೆ ಜೀವನದಲ್ಲಿಯ ಹೆಚ್ಚಿನ ಪಾಠವನ್ನು ಕಲಿಸುತ್ತದೆ ಎಂದು ಹೇಳಬಹುದು.

ಕಠಿಣವಾದ ಬಂಡೆಗಳನ್ನು ಏರುವ ಮೂಲಕ ಜೀವನದಲ್ಲಿಯ ಪಾಠವನ್ನು ಕಲಿಯುವುದು ಮತ್ತು ಹೆಚ್ಚಿನ ಅನುಭವವನ್ನು ಪಡೆಯುವುದು ಹೇಗಿರುತ್ತದೆ?

ಟ್ರಕ್ಕಿಂಗ್

ಟ್ರಕ್ಕಿಂಗ್

ಪ್ರವಾಸಿಗರಿಗೆ ಬೇಕಾಗುವ ಎಲ್ಲಾ ವಿಷಯಗಳನ್ನು ಹೊಂದಿರುವ ಜಾಗವೆಂದರೆ ಅದು ಮಣಿಪುರ . ಒರಟಾದ ಭೂಪ್ರದೇಶಗಳಿಂದ ಸ್ವಚ್ಚವಾದ ಬಯಲುಗಳವರೆಗೆ, ಈ ಅದ್ಬುತ ಸ್ಥಳವು ತನ್ನಲ್ಲಿ ಸಾಹಸಪ್ರಿಯರಿಗೆ ಬೇಕಾದ ಅನೇಕ ಅದ್ಬುತಗಳನ್ನು ಹೊಂದಿದೆ. ಉಕ್ರುಲ್ ನಿಂದ ತಮೆಂಗ್ಲಾಂಗ್ ವರೆಗೆ ದಟ್ಟ ಕಾಡುಗಳನ್ನು ಹೊಂದಿದೆ. ರೋಯಿಂಗ್ ವಾಟರ್ ಕ್ಯಾಸ್ಕೇಡ್ ಗಳು ಮತ್ತು ಶಿರುಯಿ ಬೆಟ್ಟಗಳ ಕಡಿದಾದ ಇಳಿಜಾರುಗಳ ಮಾರ್ಗವು ಚಾರಣಿಗರಿಗೆ ಸ್ವರ್ಗವಾಗಿದೆ.

ರಾಜ್ಯದಾದ್ಯಂತ ಇಲ್ಲಿ ಸಾವಿರಾರು ಟ್ರಕ್ಕಿಂಗ್ ಮಾಡಬಹುದಾದ ಸ್ಥಳಗಳಿದ್ದು ಮಣಿಪುರವು ಈಶಾನ್ಯ ಭಾರತದ ಅತ್ಯುತ್ತಮ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಒಂದಾಗಿದೆ. ಇದು ಡಿಝುಕ ಕಣಿವೆಯಾಗಿರಬಹುದು ಅಥವಾ ಸೇನಾಪತಿ ಪಥಗಳಾಗಿರಬಹುದು ಮಣಿಪುರವು ತನ್ನಲ್ಲಿ ಚಾರಣ ಮಾಡುವವರಿಗೆ ರೋಮಾಂಚಕ ಹಾಗೂ ಅಚ್ಚರಿಗೊಳಿಸುವಲ್ಲಿ ಎಂದಿಗೂ ವಿಫಲಗೊಂಡಿಲ್ಲ.

ವಿಂಡ್ ಸರ್ಫಿಂಗ್

ವಿಂಡ್ ಸರ್ಫಿಂಗ್

ಲೋಕ್ಟಾಕ್ ಸರೋವರದ ವಿಶಾಲ ಮೈದಾನದಲ್ಲಿ ವಿಂಡ್ ಸರ್ಫಿಂಗ್ ಪ್ರಯತ್ನಿಸಲು ನೀವು ಇಚ್ಚಿಸುವುದಾದರೆ ನೀವು ಮಣಿಪುರ ಪರ್ವತಾರೋಹಣ ಮತ್ತು ಟ್ರೆಕ್ಕಿಂಗ್ ಅಸೋಸಿಯೇಷನ್ ​​ ಆಯೋಜಿಸಿರುವ ಈ ಅನುಭವವನ್ನು ಪಡೆಯುವಲ್ಲಿ ನೀವು ಸಾಕಷ್ಟು ಅದೃಷ್ಟಶಾಲಿಯಾಗಿರುತ್ತೀರಿ.

ಭಾರತದಲ್ಲಿಯ ಅತೀ ದೊಡ್ಡ ಸರೋವರಗಳಲ್ಲಿ ಒಂದಾಗಿದ್ದು ಮತ್ತು ಈಶಾನ್ಯ ಭಾರತದ ಅತೀ ದೊಡ್ಡ ಸರೋವರವಾಗಿರುವ ಲೋಕ್ಟಾಖ್ ಸರೋವರವು ವಿಂಡ್ ಸರ್ಫಿಂಗ್ ಮಾಡಲು ಒಂದು ಸೂಕ್ತವಾದ ಸ್ಥಳವಾಗಿದೆ. ಮಣಿಪುರದ ಸಾಹಸಮಯ ಪ್ರಯಾಣದ ಶಾಶ್ವತ ಅನುಭವವನ್ನು ನಿಮ್ಮ ಜೊತೆ ಕೊಂಡೊಯ್ಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X