Search
  • Follow NativePlanet
Share
» »ಇದಪ್ಪಾ ಆಟ ಅಂದ್ರೆ... ನೀವೂ ಆಡಿ ನೋಡಿ...

ಇದಪ್ಪಾ ಆಟ ಅಂದ್ರೆ... ನೀವೂ ಆಡಿ ನೋಡಿ...

ಪ್ರವಾಸ ಅಂದ್ರೆ ಅದ್ರಲ್ಲೊಂದಿಷ್ಟು ಮಸ್ತಿ-ಮಜಾ ಅನ್ನೋದು ಇರ್ಬೇಕು. ಜೊತೆಗೆ ಥ್ರಿಲ್ಲಾಗಿರೂ ಸಾಹಸ ಕ್ರೀಡೆಗಳಿದ್ರೆ ನೋಡಿ... ಅದರಲ್ಲಿ ಸಿಗೋ ಖುಷಿನೆ ಬೇರೆ.

By Divya

ಪ್ರವಾಸ ಅಂದ್ರೆ ಅದ್ರಲ್ಲೊಂದಿಷ್ಟು ಮಸ್ತಿ-ಮಜಾ ಅನ್ನೋದು ಇರ್ಬೇಕು. ಜೊತೆಗೆ ಥ್ರಿಲ್ಲಾಗಿರೂ ಸಾಹಸ ಕ್ರೀಡೆಗಳಿದ್ರೆ ನೋಡಿ... ಅದರಲ್ಲಿ ಸಿಗೋ ಖುಷಿನೆ ಬೇರೆ. ಅನ್ನೋ ಮನಃಸ್ಥಿತಿ ನಮ್ಮ ಯುವಕರದ್ದು. ಯುವಕರನ್ನು ಆಕರ್ಷಿಸಲು ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಕೆಲವು ಪ್ರವಾಸ ತಾಣದಲ್ಲಿ ಅನೇಕ ಸಾಹಸ ಕ್ರೀಡೆಗಳಿವೆ. ಅವುಗಳ ಪರಿಚಯ ಅಷ್ಟಾಗಿ ತಿಳಿದಿಲ್ಲ.

ಮೈ ಜುಮ್ ಎನಿಸುವಷ್ಟು ಅದ್ಭುತ ಕ್ರೀಡೆಯನ್ನು ಜನ್ಮದಲ್ಲೊಮ್ಮೆ ಆಡಬೇಕು ಎನ್ನುವ ಬಯಕೆ ಅನೇಕರಲ್ಲಿರುತ್ತದೆ. ಅಂತಹವರಿಗಾಗಿಯೇ ಕೆಲವು ಪ್ರವಾಸ ತಾಣಗಳಲ್ಲಿ ವಿಶೇಷ ಆಟಗಳನ್ನು ಇಟ್ಟಿದ್ದಾರೆ. ಬೆಂಗಳೂರಿಗೆ ಹತ್ತಿರ ಇರುವಂತಹ ಈ ತಾಣಗಳಿಗೆ ವಾರದ ರಜೆಯಲ್ಲಿ ಹೋಗಬಹುದು.

ನಿಮಗೆ ಇದನ್ನು ಓದಲು ಇಷ್ಟ ಆಗಬಹುದು - ೪೦ ದಾಟುವ ಮುಂಚೆಯೇ ಭೇಟಿ ನೀಡಬೇಕಾಗಿಲ್ಲ!

ಸ್ಕೈ ಡೈವಿಂಗ್ (ಆಕಾಶ ನೆಗೆತ)

ಸ್ಕೈ ಡೈವಿಂಗ್ (ಆಕಾಶ ನೆಗೆತ)

ಅತ್ಯಂತ ರೋಮಾಂಚಕವಾದ ಈ ಆಟವನ್ನು ಹತ್ತು ಸಾವಿರ ಅಡಿ ಮೇಲಿನಿಂದ ಬಿಡಲಾಗುತ್ತದೆ. ಸರಿಯಾದ ಕಾಳಜಿ ಹಾಗೂ ಮುತುವರ್ಜಿಯಿಂದ ಆಡಿಸುವ ಈ ಆಟವನ್ನು ಮೈಸೂರಿನಲ್ಲಿ ಆಡಬಹುದು. ಕಾಕಿಣಿ ಎಂಟರ್ ಪ್ರೈಸ್ ಎನ್ನುವ ಸಂಸ್ಥೆ ಈ ಆಟಕ್ಕೆ ವೇದಿಕೆ ಕಲ್ಪಿಸಿಕೊಡುತ್ತದೆ. ಇದನ್ನು ಆಡಲು ಇಷ್ಟ ಪಡುವವರು 85 ಕೆ.ಜಿ. ತೂಕ ಹೊಂದಿರಬೇಕು. ಜೊತೆಗೆ ಆರೋಗ್ಯ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಇದರಲ್ಲೂ ಅನೇಕ ಬಗೆಯ ನೆಗೆತಗಳಿರುವುದರಿಂದ ಪ್ರತಿಯೊಂದಕ್ಕೂ ಅನುಗುಣವಾಗಿ ಟಿಕೆಟ್ ಪಡೆಯಬೇಕು. ಶಿಬಿರಗಳಿರುವ ಸಮಯದಲ್ಲಿ ಮಾತ್ರ ಆಡಲು ಅವಕಾಶವಿರುವುದು.
PC: wikipedia.org

ಮೈಕ್ರೋಲೈಟ್ ಫ್ಲೈಯಿಂಗ್ (ಮೋಟಾರು ಅಳವಡಿಸಿದ ಹಾರಾಟ)

ಮೈಕ್ರೋಲೈಟ್ ಫ್ಲೈಯಿಂಗ್ (ಮೋಟಾರು ಅಳವಡಿಸಿದ ಹಾರಾಟ)

ಎರಡು ಸೀಟ್‍ಗಳನ್ನು ಅಳವಡಿಸಲಾದ ಚಿಕ್ಕದಾದ ಈ ವಿಮಾನವನ್ನು ನಾವೇ ಓಡಿಸಬಹುದು. ನುರಿತ ಪೈಲಟ್‍ಗಳು ಜೊತೆಯಲ್ಲಿಯೇ ಇದ್ದು ಮಾರ್ಗದರ್ಶನ ನೀಡುವರು. ಸಾವಿರ ಅಡಿ ಎತ್ತರದಲ್ಲಿ ಹಾರಾಡಿ ಖುಷಿ ಪಡಬಹುದು. ಇದನ್ನು ಬೆಂಗಳೂರು ಎರೋಸ್ಪೋಡ್ಸ್ ಸಂಸ್ಥೆ ನಡೆಸಿಕೊಡುತ್ತದೆ. ಬೆಂಗಳೂರಿನ ಜಕ್ಕೂರು ಏರ್‍ಫೀಲ್ಡ್ ಹಾಗೂ ಮೈಸೂರಿನ ನಿಗದಿತ ಪ್ರದೇಶದಲ್ಲಿ ಆಡಿಸಲಾಗುತ್ತದೆ. ಆಡುವಾಗ ಆಕಾಶವು ಮೋಡಗಳಿಂದ ಮುಕ್ತವಾಗಿರಬೇಕು.
PC: wikipedia.org

ಸ್ಕೂಬಾ ಡೈವಿಂಗ್

ಸ್ಕೂಬಾ ಡೈವಿಂಗ್

ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಆಡಬಹುದು. ನುರಿತ ತಜ್ಞರಿಂದ ತರಬೇತಿ ನೀಡಿಯೇ ಸ್ಕೂಬ್ ಡೈವಿಂಗ್ ಮಾಡಿಸಲಾಗುತ್ತದೆ. ಹೆಚ್ಚು ಆಕರ್ಷಕ ಹಾಗೂ ರೋಮಾಂಚಕ ಅನುಭವ ನೀಡಬಲ್ಲ ಈ ಆಟಕ್ಕೂ ಟಿಕೆಟ್ ಪಡೆಯಬೇಕು. ಬೆಂಗಳೂರಿನಿಂದ ಈ ತಾಣ 372 ಕಿ.ಮೀ. ದೂರದಲ್ಲಿದೆ. ಮಳೆಗಾಲವನ್ನು ಹೊರತು ಪಡಿಸಿ ಉಳಿದೆಲ್ಲಾ ಕಾಲದಲ್ಲೂ ಆಡಲು ಅವಕಾಶ ಇರುತ್ತದೆ.
PC: wikipedia.org

ವಾಟರ್ ರಾಫ್ಟಿಂಗ್

ವಾಟರ್ ರಾಫ್ಟಿಂಗ್

ಈ ಆಟವನ್ನು ಕೊಡಗಿನ ದುಬಾರೆಯಲ್ಲಿ, ಉಡುಪಿಯ ಹತ್ತಿರದಲ್ಲಿರುವ ಸೀತಾ ನದಿಯಲ್ಲಿ ಹಾಗೂ ದಾಂಡೇಲಿಯ ಕಾಳಿ ನದಿತೀರದಲ್ಲಿ ಆಡಬಹುದು. ಈ ಆಟ ಆಡಲು ಸೂಕ್ತ ಸಮಯವೆಂದರೆ ನವೆಂಬರ್ ನಿಂದ ಮಾರ್ಚ್. ಈ ಆಟವನ್ನು ಆಡಲು ನೀರಿನ ಮಟ್ಟ ಹೆಚ್ಚಿರಬೇಕು. ಕಡಿಮೆ ನೀರಿನಲ್ಲಿ ಆಡಲು ಸಾಧ್ಯವಿಲ್ಲ.
PC: wikimedia.org

ರಾಕ್ ಕ್ಲೈಂಬಿಂಗ್

ರಾಕ್ ಕ್ಲೈಂಬಿಂಗ್

ಬೆಂಗಳೂರಿಗೆ ಹತ್ತಿರ ಇರುವ ರಾಮನಗರದಲ್ಲಿ ರಾಕ್ ಕ್ಲೈಂಬಿಂಗ್ ಆಟ ಆಡಿಸಲಾಗುತ್ತದೆ. ಮಾರ್ಸ್ ಎಡ್ವೆಂಚರ್ಸ್ ಎನ್ನುವ ಸಂಸ್ಥೆ ಇದನ್ನು ನಡೆಸಿಕೊಡುತ್ತದೆ. ಕೃತಕ ರಾಕ್ ಕ್ಲೈಬಿಂಗ್ ಆಟವನ್ನು ಆಡಲು ಇಷ್ಟ ಪಡುವವರು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ರಾಕ್ ಕ್ಲೈಂಬಿಂಗ್ ಆಡಬಹುದು.
PC: wikipedia.org

ಗುಹೆಗಳಲ್ಲಿ ಆವಿಷ್ಕಾರ

ಗುಹೆಗಳಲ್ಲಿ ಆವಿಷ್ಕಾರ

ಕಾರವಾರದ ಹತ್ತಿರದಲ್ಲಿರುವ ಉಳವಿಯಲ್ಲಿ ಒಂದು ಗುಹೆಯಿದೆ. ಇದು ಕಿರಿದಾದ ಒಳ ಪ್ರವೇಶವನ್ನು ಹೊಂದಿದ್ದು, ಅದರೊಳಗೆ ಹೋಗಿ, ಅಲ್ಲಿರುವ ಹೊಸ ಸಂಗತಿಗಳ ಆವಿಷ್ಕಾರ ಮಾಡಬಹುದು. ಮಾರ್ಸ್ ಅಡ್ವೆಂಚರ್ಸ್ ಅವರ ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ಪಡೆಯಬಹುದು.
PC: wikipedia.org

ಪ್ಯಾರಾಸೈಲಿಂಗ್

ಪ್ಯಾರಾಸೈಲಿಂಗ್

ಈ ಆಟವನ್ನು ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಆಡಬಹುದು. ಅಲ್ಲದೆ ಗೋಕರ್ಣದಲ್ಲೂ ಈ ಆಟವನ್ನು ಆಡಬಹುದು. ಇಲ್ಲಿ ಈ ಆಟಕ್ಕೆ ನಿಗದಿತ ಟಿಕೆಟ್ ಪಡೆಯಬೇಕಾಗುವುದು. ಅಲ್ಲದೆ ವಾತಾವರಣವೂ ಸೂಕ್ತವಾಗಿರಬೇಕಾಗುತ್ತದೆ.
PC: wikimedia.org

ಜೆಟ್‍ಸ್ಕಿ ರೈಡ್

ಜೆಟ್‍ಸ್ಕಿ ರೈಡ್

ಈ ಆಟವನ್ನು ಮುರುಡೇಶ್ವರ ಸಮುದ್ರದಲ್ಲಿ ಹಾಗೂ ಮಲ್ಪೆ ಸಮುದ್ರ ತೀದಲ್ಲಿ ಆಡಲು ಅವಕಾಶವಿದೆ. ಚಲನ ಚಿತ್ರಗಳಲ್ಲಿ ತೋರಿಸುವಷ್ಟು ಸಾಹಸವನ್ನು ಇಲ್ಲಿ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಜಾಗರೂಕರಾಗಿ ಇರಬೇಕು. ನುರಿತ ಚಾಲಕರ ಮಾರ್ಗದರ್ಶನ ಇರುತ್ತದೆ. ಇಲ್ಲಿಯೂ ಟಿಕೆಟ್ ಪಡೆದು ಆಡಬೇಕು.
PC: wikipedia.org

ಡರ್ಟ್ ಬೈಕಿಂಗ್

ಡರ್ಟ್ ಬೈಕಿಂಗ್

ಕೋಲಾರದ ಸಮೀಪ ಇರುವ ಬಿಗ್ ರಾಕ್ ಮೊಟೊಪಾರ್ಕ್ ಎನ್ನುವಲ್ಲಿ ಈ ಆಟವನ್ನು ಆಡಬಹುದು. ಬೈಕ್ ಸವಾರರಿಗೊಂದು ರೋಚಕ ಅನುಭವ ನೀಡಬಲ್ಲದು. ಈ ಆಟವನ್ನು ಎಲ್ಲಾ ಕಾಲದಲ್ಲೂ ಆಡಬಹುದು.
PC: wikipedia.org

Read more about: bangalore mysore udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X