Search
  • Follow NativePlanet
Share
» »ಮನುಷ್ಯ ಮೊಗದ ಗಣೇಶ; ಪಿತೃ ಪಿಂಡಗಳು ಶಿವಲಿಂಗಗಳಾಗಿ ಪರಿವರ್ತಿತವಾಗಿದ್ದು ಇಲ್ಲೇ

ಮನುಷ್ಯ ಮೊಗದ ಗಣೇಶ; ಪಿತೃ ಪಿಂಡಗಳು ಶಿವಲಿಂಗಗಳಾಗಿ ಪರಿವರ್ತಿತವಾಗಿದ್ದು ಇಲ್ಲೇ

ಹಲವಾರು ದೇವಿ ದೇವತೆಗಳನ್ನು ಪೂಜಿಸುವ ವಿಶ್ವದ ಏಕೈಕ ದೇಶ ಭಾರತವಾಗಿದೆ. ದೇವರ ಮೇಲಿನ ಭಕ್ತಿ, ನಂಬಿಕೆ ಬಹಳ ಇದೆ. ಭಾರತವು ಪೌರಾಣಿಕ ಸಂಸ್ಕೃತಿಯ ಭಾಗವಾಗಿತ್ತು ಹಾಗಾಗಿ ಇಲ್ಲಿ ಇಂದಿಗೂ ಹಳೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಲಾಗುತ್ತಿದೆ. ಈ ವಿಷ್ಯದಲ್ಲಿ ಹಿಂದೂ ಸಂಪ್ರದಾಯವು ಬಹಳ ಸಕ್ರಿಯವಾಗಿದೆ.

ಭಾರತವನ್ನು ಆಳಿದ ಹಿಂದೂ ರಾಜರುಗಳು ಅನೇಕ ಮಂದಿರಗಳ ನಿರ್ಮಾಣ ಮಾಡಿದ್ದಾರೆ. ದಕ್ಷಿಣ ಭಾರತದ ಬಗ್ಗೆ ಹೇಳುವುದಾದರೆ ಇಲ್ಲಿ ಮಂದಿರಗಳ ನಿರ್ಮಾಣವು ಶೌರ್ಯ ಹಾಗೂ ಶಕ್ತಿಯ ಪ್ರತೀಕವಾಗಿದೆ. ಹಾಗಾಗಿ ನಿಮಗೆ ದಕ್ಷಿಣ ಭಾರತದಲ್ಲಿ ವಿಶಾಲವಾದ ಮಂದಿಗಳು ಕಾಣಸಿಗುತ್ತವೆ. ಇಲ್ಲಿ ಹಲವಾರು ಪ್ರಾಚೀನ ಮಂದಿಗಳೂ ಇವೆ. ಅವುಗಳ ಇತಿಹಾಸ ಪೌರಾಣಿಕ ಕಾಲಕ್ಕೆ ಸಂಬಂಧಿಸಿದೆ. ಇಲ್ಲಿ ಪೌರಾಣಿಕ ಕಥೆಯನ್ನು ಒಳಗೊಂಡಿರುವ ಅನೇಕ ಅದ್ಭುತ ಮಂದಿಗಳೂ ಇವೆ. ಇಂದು ನಾವು ಅಂತಹದ್ದೇ ಒಂದು ಅದ್ಭುತ ಮಂದಿರದ ಬಗ್ಗೆ ಹೇಳ ಹೊರಟಿದ್ದೇವೆ. ಇದನ್ನು ಕೇಳಿ ನೀವು ಆಶ್ಚರ್ಯಚಕಿತರಾಗುವುದಂತೂ ಖಂಡಿತ.

ಆದಿ ವಿನಾಯಕ ಮಂದಿರ

ಆದಿ ವಿನಾಯಕ ಮಂದಿರ

ತಮಿಳುನಾಡಿನಲ್ಲಿರುವ ಆದಿ ವಿನಾಯಕ ಮಂದಿರವು ಗಣೇಶನಿಗೆ ಸಮರ್ಪೀತವಾದದ್ದಾಗಿದೆ. ಈ ಮಂದಿರವು ಭಾರದಲ್ಲಿರುವ ಉಳಿದ ಗಣೇಶನ ಮಂದಿರಗಳಿಗಿಂತಲೂ ಭಿನ್ನವಾಗಿದೆ. ಸಾಮಾನ್ಯವಾಗಿ ಉಳಿದೆಲ್ಲಾ ಮಂದಿರಗಳಲ್ಲಿ ಗಣಮುಖ ಸ್ವರೂಪದ ಗಣೇಶನನ್ನು ಪೂಜಿಸಲಾಗುತ್ತದೆ. ಆದರೆ ಇಲ್ಲಿ ಗಣೇಶನನ್ನು ಮನುಷ್ಯ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ಗಣೇಶನ ಮುಖ ಆನೆಯ ಮುಖದಂತಲ್ಲ ಬದಲಾಗಿ ಮನುಷ್ಯನ ರೀತಿ ಇದೆ. ಈ ಕಾರಣಕ್ಕಾಗಿಯೇ ಈ ಮಂದಿರವು ಬಹಳ ಪ್ರಸಿದ್ಧಿ ಹೊಂದಿದೆ. ಇಲ್ಲಿ ಭಕ್ತರು ತಮ್ಮ ಪೂರ್ವಜರ ಆತ್ಮದ ಶಾಂತಿಗಾಗಿ ಪೂಜಿಸಲು ಇಲ್ಲಿಗೆ ಬರುತ್ತಾರೆ.

ಅಷ್ಟನಾಗ ಅಂದ್ರೆ ಯಾರು , ಹಾವಿನ ನಾಲಗೆ ಇಬ್ಭಾಗವಾಗಿರೋದು ಯಾಕೆ ಗೊತ್ತಾ? ಅಷ್ಟನಾಗ ಅಂದ್ರೆ ಯಾರು , ಹಾವಿನ ನಾಲಗೆ ಇಬ್ಭಾಗವಾಗಿರೋದು ಯಾಕೆ ಗೊತ್ತಾ?

ಒಂದು ಅದ್ಭುತ ಮಂದಿರ

ಒಂದು ಅದ್ಭುತ ಮಂದಿರ

ಈ ಮಂದಿರಕ್ಕೆ ಒಂದು ಪೌರಾಣಿಕ ಕಥೆಯೂ ಇದೆ. ಅದೇನೆಂದರೆ ಇಲ್ಲಿ ಶ್ರೀರಾಮನು ಆಗಮಿಸಿದ್ದನಂತೆ. ಶ್ರೀರಾಮ ತನ್ನ ಪೂರ್ವಜರಿಗಾಗಿ ಇಲ್ಲಿ ಪೂಜೆ ಮಾಡಿದ್ದನಂತೆ. ಶ್ರೀರಾಮನು ಪ್ರಾರಂಭಿಸಿದ ಈ ಪರಂಪರೆಯನ್ನು ಇಂದಿಗೂ ವಿಧಿ ವಿಧಾನಗಳ ಮೂಲಕ ಆಚರಿಸಲಾಗುತ್ತಿದೆ. ಈ ಮಂದಿರವು ಉಳಿದ ದಕ್ಷಿಣ ಮಂದಿಗಳಷ್ಟು ವಿಶಾಲವಾಗಿಲ್ಲ. ಸಾಮಾನ್ಯವಾಗಿ ಪೂರ್ವಜರ ಆತ್ಮದ ಶಾಂತಿಗಾಗಿ ಪೂಜೆಯನ್ನು ನದಿಯ ದಡದಲ್ಲಿ ನಡೆಸಲಾಗುತ್ತದೆ. ಆದರೆ ಇಲ್ಲಿ ಧಾರ್ಮಿಕ ಅನುಷ್ಠಾನ ಮಾಡಲಾಗುತ್ತದೆ. ಸ್ಥಳೀಯರನ್ನು ಹೊರತುಪಡಿಸಿ ದೂರದೂರದ ಊರುಗಳಿಂದಲೂ ಜನರು ಇಲ್ಲಿಗೆ ಆಗಮಿಸುತ್ತಾರೆ.

ರಾಮನಿಗೆ ಸಂಬಂಧಿಸಿದ ಪೌರಾಣಿಕ ಕಥೆ

ರಾಮನಿಗೆ ಸಂಬಂಧಿಸಿದ ಪೌರಾಣಿಕ ಕಥೆ

ಪೌರಾಣಿಕ ಕಥೆಗಳ ಪ್ರಕಾರ, ರಾಮನು ತನ್ನ ತಂದೆಯ ಅಂತಿಮ ಸಂಸ್ಕಾರ ಮಾಡುತ್ತಿದ್ದರು. ಆಗ ಅವರು ಇಟ್ಟಿದ್ದ ನಾಲ್ಕು ಪಿಂಡ ಕೀಟಗಳಾಗಿ ಬದಲಾಗುತ್ತದೆ. ಹೀಗೆ ಪದೇ ಪದೇ ಆಗುತ್ತದೆ. ಆಗ ಶ್ರೀರಾಮನು ಶಿವನಲ್ಲಿ ಪ್ರಾರ್ಥನೆ ಮಾಡುತ್ತಾನೆ. ಆಗ ಶಿವನು ಶ್ರೀರಾಮನಿಗೆ ಈ ಮಂದಿರಕ್ಕೆ ಬಂದು ಪೂಜೆ ಮಾಡುವಂತೆ ತಿಳಿಸುತ್ತಾನೆ. ಹಾಗಾಗಿ ಶ್ರೀರಾಮನು ಈ ಮಂದಿರಕ್ಕೆ ಆಗಮಿಸುತ್ತಾನೆ. ತಂದೆಯ ಆತ್ಮದ ಶಾಂತಿಗೆ ಶಿವನನ್ನು ಪೂಜಿಸುತ್ತಾನೆ. ಆಗ ನಾಲ್ಕು ಪಿಂಡಗಳು ನಾಲ್ಕು ಶಿವಲಿಂಗದ ರೂಪದಲ್ಲಿ ಬದಲಾಗುತ್ತದೆ. ಸದ್ಯಕ್ಕೆ ಈ ನಾಲ್ಕು ಶಿವಲಿಂಗಗಳು ಆದಿ ವಿನಾಯಕ ಮಂದಿರದ ಸಮೀಪದಲ್ಲಿರುವ ಮುಕ್ತೇಶ್ವರ ಮಂದಿರದಲ್ಲಿ ಇದೆ.

ಲೈಫ್‌ನಲ್ಲಿ ಒಮ್ಮೆಯಾದ್ರೂ ಕೂರ್ಗ್‌ಗೆ ಹೋಗಬೇಕು ಯಾಕೆ? ಲೈಫ್‌ನಲ್ಲಿ ಒಮ್ಮೆಯಾದ್ರೂ ಕೂರ್ಗ್‌ಗೆ ಹೋಗಬೇಕು ಯಾಕೆ?

ಶಿವನ ಮಂದಿರ

ಶಿವನ ಮಂದಿರ

ಈ ಮಂದಿರದಲ್ಲಿ ಗಣೇಶನ ಮನುಷ್ಯ ರೂಪದ ಜೊತೆಗೆ ಶಿವನನ್ನೂ ಪೂಜಿಸಲಾಗುತ್ತದೆ. ಇಲ್ಲಿ ಶಿವನಿಗೆ ಸಮರ್ಪಿತವಾದ ಮಂದಿರವೂ ಇದೆ. ಅಲ್ಲೇ ಸಮೀಪದಲ್ಲಿ ಸರಸ್ವತಿ ಮಂದಿರವೂ ಇದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಆದಿ ವಿನಾಯಕನ ಜೊತೆಗೆ ಸರಸ್ವತಿ ಹಾಗೂ ಶಿವನ ಮಂದಿರಕ್ಕೂ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಧಾರ್ಮಿಕ ನಂಬಿಕೆ

ಧಾರ್ಮಿಕ ನಂಬಿಕೆ

ಇಲ್ಲಿ ಪ್ರತಿವರ್ಷ ಸಂಕಷ್ಟ ಚತುರ್ಥಿಯಂದು ಮಹಾ ಗುರು ಅಗಸ್ತ್ಯರು ಆದಿ ವಿನಾಯಕನ ಪೂಜೆ ಮಾಡಲು ಆಗಮಿಸುತ್ತಾರೆ. ಇಲ್ಲಿ ಗಣೇಶನ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುವುದು ಜನರ ನಂಬಿಕೆ. ಹಾಗಾಗಿ ದೂರದ ಊರುಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ನೀವು ವಿಮಾನದ ಮೂಲಕ ಹೋಗುವುದಾದರೆ ತಿರುಚಿನಾಪಳ್ಳಿ ಅಥವಾ ಮದುರೈ ಏರ್‌ ಪೋರ್ಟ್‌ನಿಂದ ಹೋಗಬಹುದು. ರೈಲು ಮೂಲಕ ಹೋಗುವುದಾದರೆ ತಿರುವರೂರ್‌ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು. ರಸ್ತೆ ಮಾರ್ಗದ ಮೂಲಕವೂ ಇಲ್ಲಿಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X