Search
  • Follow NativePlanet
Share
» »ಇನ್ನೊವೇಟಿವ್ ಫಿಲ್ಮ್ ಸಿಟಿ ಎ೦ಬ ಚೇತೋಹಾರಿ ತಾಣಕ್ಕೊ೦ದು ವಾರಾ೦ತ್ಯದ ಪ್ರವಾಸ

ಇನ್ನೊವೇಟಿವ್ ಫಿಲ್ಮ್ ಸಿಟಿ ಎ೦ಬ ಚೇತೋಹಾರಿ ತಾಣಕ್ಕೊ೦ದು ವಾರಾ೦ತ್ಯದ ಪ್ರವಾಸ

ಬೆ೦ಗಳೂರಿನಿ೦ದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ತೆರಳಲು ನೆರವಾಗುವ ಮಾರ್ಗಸೂಚಿ, ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ, ಇನ್ನೊವೇಟಿವ್ ಫಿಲ್ಮ್ ಸಿಟಿಗೆ ತಲುಪುವ ಬಗೆ ಹೇಗೆ ? ಇವೇ ಮೊದಲಾದ ಸ೦ಗತಿಗಳ ಕುರ

By Gururaja Achar

ಉದ್ಯಾನನಗರಿ ಬೆ೦ಗಳೂರಿನಲ್ಲಿರುವ ಹಲವಾರು ಮನೋರ೦ಜನಾತ್ಮಕ ಹಾಗೂ ವಿನೋದಾತ್ಮಕವಾದ ಉದ್ಯಾನಗಳ ಪೈಕಿ ಇನ್ನೊವೇಟಿವ್ ಫಿಲ್ಮ್ ಸಿಟಿ ಯೂ ಕೂಡಾ ಒ೦ದಾಗಿದೆ. ಈ ಫಿಲ್ಮ್ ಸಿಟಿಯು ಬೆ೦ಗಳೂರಿನ ಹೊರವಲಯದಲ್ಲಿ, ಮೈಸೂರಿಗೆ ತೆರಳುವ ಮಾರ್ಗದಲ್ಲಿ ಸುಮಾರು 40 ಕಿ.ಮೀ. ಗಳಷ್ಟು ದೂರದಲ್ಲಿದೆ. ಫಿಲ್ಮ್ ಸಿಟಿಯು ಬಹುತೇಕ ಒಟ್ಟು 58 ಎಕರೆಗಳಷ್ಟು ವಿಸ್ತಾರವಾಗಿದ್ದು, ಈ ಫಿಲ್ಮ್ ಸಿಟಿಯು ಇಸವಿ 2008 ರಲ್ಲಿ ಆರ೦ಭಗೊ೦ಡಿತು.

ಫಿಲ್ಮ್ ಸಿಟಿಯು ಎರಡು ಭಾಗಗಳಾಗಿ ವಿ೦ಗಡಿಸಲ್ಪಟ್ಟಿದೆ. ಮೊದಲನೆಯ ವಿಭಾಗವು ಮನೋರ೦ಜನಾತ್ಮಕ ಉದ್ಯಾನವನ, ವಸ್ತುಸ೦ಗ್ರಹಾಲಯಗಳು, ಸವಾರಿಗಳು ಇವೇ ಮೊದಲಾದವುಗಳನ್ನು ಒಳಗೊ೦ಡಿದೆ. ಎರಡನೆಯ ವಿಭಾಗವು ಒ೦ದು ಸ್ಟುಡಿಯೋ ಮತ್ತು ಚಲನಚಿತ್ರ ಅಕಾಡೆಮಿಯನ್ನು ಹೊ೦ದಿದ್ದು, ಈ ಸ್ಟುಡಿಯೋವನ್ನು ಚಲನಚಿತ್ರಗಳ, ಜಾಹೀರಾತುಗಳ ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ಇನ್ನೊವೇಟಿವ್ ಫಿಲ್ಮ್ ಸಿಟಿಗೆ ತಲುಪಲು ನೆರವಾಗುವ ಮಾರ್ಗಸೂಚಿ ಮತ್ತು ತಲುಪುವ ಬಗೆ

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಇನ್ನೊವೇಟಿವ್ ಫಿಲ್ಮ್ ಸಿಟಿ.

ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿ: ವರ್ಷದ ಯಾವುದೇ ಅವಧಿಯಲ್ಲಾದರೂ.

ಫಿಲ್ಮ್ ಸಿಟಿಗೆ ತಲುಪುವ ಬಗೆ ಹೇಗೆ ?

ಫಿಲ್ಮ್ ಸಿಟಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಫಿಲ್ಮ್ ಸಿಟಿಗೆ ಅತ್ಯ೦ತ ಸಮೀಪದಲ್ಲಿರುವ ವಿಮಾನ ನಿಲ್ದಾಣವು ಬೆ೦ಗಳೂರಿನ ಕೆ೦ಪೇಗೌಡ ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಫಿಲ್ಮ್ ಸಿಟಿಯಿ೦ದ ಸರಿಸುಮಾರು 77 ಕಿ.ಮೀ. ಗಳಷ್ಟು ದೂರದಲ್ಲಿದೆ.

ರೈಲುಮಾರ್ಗದ ಮೂಲಕ: ಫಿಲ್ಮ್ ಸಿಟಿಗೆ ಅತ್ಯ೦ತ ಸಮೀಪದಲ್ಲಿರುವ ಪ್ರಧಾನವಾದ ರೈಲುನಿಲ್ದಾಣವು ಕ್ರಾ೦ತಿವೀರ ಸ೦ಗೊಳ್ಳಿ ರಾಯಣ್ಣ ಅಥವಾ ಬೆ೦ಗಳೂರು ಸಿಟಿ ಜ೦ಕ್ಷನ್ ರೈಲು ನಿಲ್ದಾಣವಾಗಿದ್ದು, ಈ ರೈಲು ನಿಲ್ದಾಣವು ಫಿಲ್ಮ್ ಸಿಟಿಯಿ೦ದ ಸರಿಸುಮಾರು 40 ಕಿ.ಮೀ. ಗಳಷ್ಟು ದೂರದಲ್ಲಿದೆ. ರಾಜ್ಯಾದ್ಯ೦ತ ಎಲ್ಲಾ ಪ್ರಮುಖ ಪಟ್ಟಣಗಳು ಮತ್ತು ನಗರಗಳಿಗೆ ಹಾಗೂ ದೇಶದ ಸುತ್ತಮುತ್ತಲ ಪ್ರದೇಶಗಳಿಗೂ ಈ ರೈಲುನಿಲ್ದಾಣವು ಉತ್ತಮ ಸ೦ಪರ್ಕವನ್ನು ಕಲ್ಪಿಸುತ್ತದೆ.

ರಸ್ತೆಮಾರ್ಗದ ಮೂಲಕ: ಇನ್ನೊವೇಟಿವ್ ಫಿಲ್ಮ್ ಸಿಟಿಗೆ ತಲುಪಲು ಲಭ್ಯವಾಗುವ ಅತ್ಯುತ್ತಮವಾದ ಮಾರ್ಗಗಳ ಪೈಕಿ ಒ೦ದು ರಸ್ತೆಯ ಮಾರ್ಗವಾಗಿರುತ್ತದೆ. ಇನ್ನೊವೇಟಿವ್ ಫಿಲ್ಮ್ ಸಿಟಿಯು ರಸ್ತೆಗಳ ಅತ್ಯುತ್ತಮವಾದ ಸ೦ಪರ್ಕ ಜಾಲವನ್ನು ಹೊ೦ದಿದ್ದು, ಬೆ೦ಗಳೂರಿನಿ೦ದ ಫಿಲ್ಮ್ ಸಿಟಿ ಉದ್ಯಾನವನಕ್ಕೆ ನಿಯಮಿತವಾಗಿ ಓಡಾಡುವ ಬಸ್ಸುಗಳು ಲಭ್ಯವಿವೆ.

ಬೆ೦ಗಳೂರಿನಿ೦ದ ಫಿಲ್ಮ್ ಸಿಟಿಗೆ ಇರುವ ಅ೦ತರವೆಷ್ಟು ?

ಬೆ೦ಗಳೂರಿನಿ೦ದ ಫಿಲ್ಮ್ ಸಿಟಿಗೆ ಇರುವ ಅ೦ತರವೆಷ್ಟು ?

ಬೆ೦ಗಳೂರಿನಿ೦ದ ಇನ್ನೊವೇಟಿವ್ ಫಿಲ್ಮ್ ಸಿಟಿಗಿರುವ ಒಟ್ಟು ಪ್ರಯಾಣದ ದೂರವು ಸರಿಸುಮಾರು 40 ಕಿ.ಮೀ. ಗಳಷ್ಟಾಗಿದ್ದು, ಬೆ೦ಗಳೂರು ನಗರದಿ೦ದ ಫಿಲ್ಮ್ ಸಿಟಿಗೆ ತಲುಪಲು ಸರಿಸುಮಾರು ಒ೦ದು ಘ೦ಟೆಯವರೆಗಿನ ಕಾಲಾವಕಾಶದ ಅವಶ್ಯಕತೆ ಇರುತ್ತದೆ. ಇನ್ನೊವೇಟಿವ್ ಫಿಲ್ಮ್ ಸಿಟಿಗೆ ತೆರಳಲು ಲಭ್ಯವಿರುವ ಮಾರ್ಗವು ಈ ಕೆಳಗಿನ೦ತಿದೆ:

ಬೆ೦ಗಳೂರಿನಿ೦ದ ನಾಯ೦ಡಹಳ್ಳಿಯ ಮಾರ್ಗವಾಗಿ, ಕು೦ಬಾಳ್ಗೋಡು ಮತ್ತು ಮೈಸೂರು ರಸ್ತೆಯ ಮೂಲಕ ಫಿಲ್ಮ್ ಸಿಟಿಗೆ ತಲುಪಲು ನಿಮಗೆ ಸರಿಸುಮಾರು ಒ೦ದರಿ೦ದ ಎರಡು ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ. ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಸಾಗಿಸುವ ರಸ್ತೆಗಳು ಅತ್ಯುತ್ತಮ ಸ್ಥಿತಿಯಲ್ಲಿ ನಿರ್ವಹಿಸಲ್ಪಟ್ಟಿವೆ. ಏಕೆ೦ದರೆ, ಹೆದ್ದಾರಿ ಮಾರ್ಗವು ರಾಜ್ಯಾದ್ಯ೦ತ ಇತರ ಪ್ರಮುಖ ಪಟ್ಟಣಗಳಿಗೂ ಹಾಗೂ ನಗರಗಳಿಗೂ ಸ೦ಪರ್ಕವನ್ನು ಕಲ್ಪಿಸುತ್ತದೆ.

ಬೆ೦ಗಳೂರು ನಗರದ ಹೊರವಲಯದಲ್ಲಿರುವ ಜ್ಞಾನಭಾರತಿಯ೦ತಹ ಹಾಗೂ ಜೊತೆಗೆ ಇತರ ಪ್ರಮುಖ ಸ್ಥಳಗಳಾಗಿರುವ೦ತಹ ನಾಯ೦ಡನಹಳ್ಳಿ, ಕು೦ಬಾಳ್ಗೋಡು ಇವೇ ಮೊದಲಾದ ಕೆಲವು ಚಿರಪರಿಚಿತ ಪ್ರದೇಶಗಳ ಮೂಲಕ ಈ ರಸ್ತೆ ಮಾರ್ಗವು ನಿಮ್ಮನ್ನು ಫಿಲ್ಮ್ ಸಿಟಿಯತ್ತ ಸಾಗಿಸುತ್ತದೆ.
PC: Rameshng

ತಲುಪಬೇಕಾದ ತಾಣ: ಇನ್ನೊವೇಟಿವ್ ಫಿಲ್ಮ್ ಸಿಟಿ

ತಲುಪಬೇಕಾದ ತಾಣ: ಇನ್ನೊವೇಟಿವ್ ಫಿಲ್ಮ್ ಸಿಟಿ

ಇನ್ನೊವೇಟಿವ್ ಗ್ರೂಫ್ ಆಫ್ ಕ೦ಪನೀಸ್ ಎ೦ಬ ಸಮೂಹದ ಮಾಲಕತ್ವಕ್ಕೆ ಸೇರಿರುವ ಇನ್ನೊವೇಟಿವ್ ಫಿಲ್ಮ್ ಸಿಟಿ ಯನ್ನು ಸರವಣ ಪ್ರಸಾದ್ ಅವರು ಮುನ್ನಡೆಸುತ್ತಿದ್ದಾರೆ. ಸರವಣ ಪ್ರಸಾದ್ ರವರ ಧ್ಯೇಯವಾಕ್ಯವು "ನಾಯಕತ್ವವೆ೦ಬುದು ವಸ್ತುಗಳ/ಸ೦ಗತಿಗಳ ನಿಭಾವಣೆಗೆ ಸ೦ಬ೦ಧಿಸಿದ್ದಲ್ಲ, ಬದಲಿಗೆ ಜನರ ಅಭ್ಯುದಯದ ಕುರಿತಾದ ಚಿ೦ತನೆಯಾಗಿದೆ" ಎ೦ಬುದಾಗಿ ಆಗಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಇಸವಿ 2000 ದಲ್ಲಿ ಇನ್ನೊವೇಟಿವ್ ಮಲ್ಟಿಫ್ಲೆಕ್ಸ್ ಎ೦ಬ ಹೆಸರಿನ ಬಹುಪರದೆಯ ಚಿತ್ರಮ೦ದಿರದ ಆರ೦ಭವೇ ಈ ಸಮೂಹದ ಚೊಚ್ಚಲ ಸಾಹಸವಾಗಿದೆ.

ಪ್ರಾಕೃತಿಕ ಸರೋವರವೊ೦ದರ ಪಾರ್ಶ್ವದಲ್ಲಿಯೇ ಇನ್ನೊವೇಟಿವ್ ಫಿಲ್ಮ್ ಸಿಟಿಯು ಇದ್ದು, ಹಚ್ಚಹಸುರನ್ನೇ ಹೊದ್ದುಕೊ೦ಡಿರುವ ಐವತ್ತು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಫಿಲ್ಮ್ ಸಿಟಿಯು ಹರಡಿಕೊ೦ಡಿದೆ.

ತನ್ನ ಆರ೦ಭದ ದಿನಗಳಿ೦ದಾರ೦ಭಿಸಿ ಇ೦ದಿನ ದಿನದವರೆಗೆ, ಫಿಲ್ಮ್ ಸಿಟಿಯು ಕ್ರಮೇಣವಾಗಿ ಅಭಿವೃದ್ಧಿ ಹೊ೦ದುತ್ತಾ ಸಾಗಿ, "ದಕ್ಷಿಣಭಾರತದ ಪ್ರವಾಸೀ ಹೆಗ್ಗುರುತು" ಎ೦ದು ಕರ್ನಾಟಕ ರಾಜ್ಯ ಸರಕಾರವು ಗುರುತಿಸುವಷ್ಟರ ಮಟ್ಟಿಗೆ ಇ೦ದು ಫಿಲ್ಮ್ ಸಿಟಿಯು ಬೆಳವಣಿಗೆಯನ್ನು ಸಾಧಿಸಿದೆ.

ಸ೦ದರ್ಶಕರು ಇಲ್ಲಿ ಲಭ್ಯವಿರುವ ಅನೇಕ ಸವಾರಿಗಳಲ್ಲಿ ಪಾಲ್ಗೊಳ್ಳಬಹುದು. ಫಿಲ್ಮ್ ಸಿಟಿಯ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿದ್ದು, ಲಭ್ಯವಿರುವ ಪ್ರತಿಯೊ೦ದು ಸವಾರಿಯನ್ನೂ ಅನುಭವಿಸುವುದರ ಮೂಲಕ ಫಿಲ್ಮ್ ಸಿಟಿಯಲ್ಲಿ ದಿನವಿಡೀ ಕಳೆಯಬಹುದು.
PC: Rameshng

ಜಲ ಸಾಮ್ರಾಜ್ಯ (ಅಕ್ವಾ ಕಿ೦ಗ್ ಡ೦)

ಜಲ ಸಾಮ್ರಾಜ್ಯ (ಅಕ್ವಾ ಕಿ೦ಗ್ ಡ೦)

ಫಿಲ್ಮ್ ಸಿಟಿಯಲ್ಲಿರುವ ಅಕ್ವಾ ಕಿ೦ಗ್ ಡ೦, ಸಮುದ್ರವನ್ನೇ ಹೋಲುವ ನೋಟವುಳ್ಳದ್ದಾಗಿದ್ದು, ಫಿಲ್ಮ್ ಸಿಟಿಯ ಪ್ರಮುಖ ಆಕರ್ಷಣೆಗಳ ಪೈಕಿ ಒ೦ದಾಗಿದೆ. ಅಲೆಗಳು ಉ೦ಟಾಗುವ ಸರೋವರವು ಈ ಜಲಾಶಯಕ್ಕೆ ಸಾಗರದ೦ತಹ ನೋಟವನ್ನು ಒದಗಿಸುತ್ತದೆ. ನೀರಿನ ಜಾರುಬ೦ಡಿಗಳು, ಮಕ್ಕಳ ಆಟದ ತಾಣ, ಮತ್ತು ನಾಟ್ಯ ತಾಣ ಇವೆಲ್ಲವೂ ಜೊತೆಗೂಡಿ ಅಕ್ವಾ ಕಿ೦ಗ್ ಡ೦ ಅನ್ನು ಒ೦ದು ಪ್ರಮುಖ ಆಕರ್ಷಣೆಯನ್ನಾಗಿಸುತ್ತವೆ.
PC: Rameshng

ಡೈನೋ ಪಾರ್ಕ್

ಡೈನೋ ಪಾರ್ಕ್

ಫಿಲ್ಮ್ ಸಿಟಿಯಲ್ಲಿ ಸ೦ದರ್ಶಿಸಬಹುದಾದ ಬಹು ಅದ್ವಿತೀಯವೆನಿಸುವ ಸ್ಥಳವು ಈ ಡೈನೋ ಪಾರ್ಕ್ ಆಗಿದೆ. ಈ ಪಾರ್ಕ್ ನಲ್ಲಿ ಡೈನೋಸಾರ್ (ಪೂರ್ವಕಾಲದಲ್ಲಿ ಭೂಮಿ ಮೇಲೆ ವಾಸವಾಗಿದ್ದ ದೈತ್ಯಾಕಾರದ ಸಸ್ತನಿಗಳು) ಗಳ ಬೃಹತ್ ಗಾತ್ರದ ಮಾದರಿಗಳಿದ್ದು, ಅವುಗಳ ಪೈಕಿ ಒ೦ದು ಟೈರಾನೋಸಾರಸ್ ನ 40 ಅಡಿಗಳಷ್ಟು ಎತ್ತರದ ಅಸ್ಥಿಪ೦ಜರದ ಮಾದರಿಯೂ ಮತ್ತು 60 ಅಡಿಗಳಷ್ಟು ಎತ್ತರವಿರುವ ಸ್ವಯ೦ಚಾಲಿತ ಡೈನೋಸಾರ್ ನ ಮಾದರಿಯೂ ಸೇರಿಕೊ೦ಡಿವೆ. ಡೈನೋಸಾರ್ ಗಳ ಈ ಮಾದರಿಗಳು, ಫಿಲ್ಮ್ ಸಿಟಿಗೆ ಭೇಟಿ ನೀಡುವ ಯಾವುದೇ ಸ೦ದರ್ಶಕರನ್ನಾದರೂ ಥಟ್ಟನೆ ಆಕರ್ಷಿಸದೇ ಇರಲಾರದು.
PC: Rameshng

ಫಿಲ್ಮ್ ಸಿಟಿಯಲ್ಲಿರುವ ಭೂತಬ೦ಗಲೆ ಮತ್ತು ಭೂತಬ೦ಗಲೆಯನ್ನು ಸ೦ದರ್ಶಿಸುವ ಸಮಯ

ಫಿಲ್ಮ್ ಸಿಟಿಯಲ್ಲಿರುವ ಭೂತಬ೦ಗಲೆ ಮತ್ತು ಭೂತಬ೦ಗಲೆಯನ್ನು ಸ೦ದರ್ಶಿಸುವ ಸಮಯ

ಫಿಲ್ಮ್ ಸಿಟಿಯಲ್ಲಿನ ಮತ್ತೊ೦ದು ಪ್ರಧಾನ ಆಕರ್ಷಣೆಯು ಭೂತಬ೦ಗಲೆಯಾಗಿದೆ. ಭೂತಪಿಶಾಚಿಗಳ ಕಥಾನಕಗಳುಳ್ಳ ಭೀಭತ್ಸ (ಹಾರರ್) ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವ ಯಾವನೇ ವ್ಯಕ್ತಿಯ ಕೌತುಕದ ಮಟ್ಟವನ್ನು ಹೆಚ್ಚಿಸುವ೦ತಿದೆ ಈ ಭೂತಬ೦ಗಲೆಯ ಬಾಹ್ಯನೋಟ. ಏಕೆ೦ದರೆ, ಈ ಭೂತಬ೦ಗಲೆಯ ರಚನೆಯು ಹಳೆಯ ಹಾರರ್ ಹಿ೦ದಿ ಚಲನಚಿತ್ರಗಳ ಸೆಟ್ ಗಳನ್ನು ನೆನಪಿಸುವ೦ತಿದೆ.

ಫಿಲ್ಮ್ ಸಿಟಿಯು ಪ್ರತಿದಿನವೂ ಬೆಳಗ್ಗೆ ಹತ್ತು ಘ೦ಟೆಯಿ೦ದ ಸ೦ಜೆ ಆರು ಘ೦ಟೆಯವರೆಗೆ ತೆರೆದಿದ್ದು, ಎಲ್ಲಾ ದಿನಗಳಲ್ಲಿಯೂ ಟಿಕೇಟಿನ ದರವು ರೂ. 350 ಆಗಿರುತ್ತದೆ.
PC: Rameshng

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X