Search
  • Follow NativePlanet
Share
» »ಭಾರತದ ಏಕೈಕ ಗರುಡಸ್ವಾಮಿಯ ದೇವಾಲಯ ; ಸರ್ಪದೋಷಕ್ಕೆ ಇಲ್ಲಿ ಸಿಗುತ್ತೆ ಪರಿಹಾರ

ಭಾರತದ ಏಕೈಕ ಗರುಡಸ್ವಾಮಿಯ ದೇವಾಲಯ ; ಸರ್ಪದೋಷಕ್ಕೆ ಇಲ್ಲಿ ಸಿಗುತ್ತೆ ಪರಿಹಾರ

By Vijay

ಗರುಡ ಪಕ್ಷಿಯು ಹಿಂದು ನಂಬಿಕೆಯ ಪ್ರಕಾರ ಪವಿತ್ರ ಸ್ಥಾನ ಪಡೆದಿರುವ ಪಕ್ಷಿಯಾಗಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ವಿಷ್ಣುವಿನ ವಾಹನವಾಗಿ ಗರುಡ ದೇವನನ್ನು ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಆದರೆ ಗರುಡ ದೇವನೆ ಮುಖ್ಯ ದೈವವಾಗಿ ಆರಾಧಿಸಲ್ಪಡುವ ದೇವಾಲಯಗಳು ಭಾರತದಲ್ಲಿ ಬಹುಶಃ ಎಲ್ಲಿಯೂ ಕಂಡುಬರುವುದಿಲ್ಲ.

ಸೂರ್ಯದ ವಿಶಿಷ್ಟ ಸದಾಶಿವರುದ್ರನ ದೇವಸ್ಥಾನ

ಭಾರತದ ಏಕೈಕ ಗರುಡಸ್ವಾಮಿಯ ದೇವಾಲಯ!

ಸಾಂದರ್ಭಿಕ ಚಿತ್ರ, ರಚಿತ್ರಕೃಪೆ: Opponent

ಆದರೆ, ಕರ್ನಾಟಕ ರಾಜ್ಯದಲ್ಲಿ ಗರುಡಸ್ವಾಮಿಗೆಂದೆ ಮುಡಿಪಾದ ಅಪರೂಪದ ದೇವಾಲಯವೊಂದಿರುವುದು ವಿಶೇಷ. ಇದೆ ಕೊಲದೇವಿಯ ಗರುಡಸ್ವಾಮಿಯ ದೇವಾಲಯ. ಕೋಲಾರ ಜಿಲ್ಲೆಯ ಮುಳುಬಾಗಲು ತಾಲೂಕಿನಲ್ಲಿ ಈ ದೇವಾಲಯವಿದೆ. ಮುಳುಬಾಗಿಲಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕೊಲದೇವಿ ಎಂಬ ಕ್ಷೇತ್ರದಲ್ಲಿ ಈ ದೇವಸ್ಥಾನವಿದ್ದು ಮುಳಬಾಗಲುವಿನಿಂದ ಇಲ್ಲಿಗೆ ತೆರಳಬಹುದಾಗಿದೆ.

ಭಾರತದ ಏಕೈಕ ಗರುಡಸ್ವಾಮಿಯ ದೇವಾಲಯ!

ಹಿಂದೆ ದ್ವಾಪರಯುಗದಲ್ಲಿ ಅರ್ಜುನನೊಮ್ಮೆ ಬೇಟೆಯಾಡಲು ಕಾಡಿಗೆ ತೆರಳಿ ಬಾಣಗಳನ್ನು ಬಿಡುತ್ತಿದ್ದಾಗ ಅವುಗಳ ರಭಸ ಹಾಗೂ ಶಕ್ತಿಯಿಂದ ಕಾಡಲ್ಲಿ ಬೆಂಕಿ ಹತ್ತಿ ಸಾಕಷ್ಟು ಹಾವುಗಳು ಸಾಯಲ್ಪಟ್ಟವು. ಇದರಿಂದೆ ಅರ್ಜುನನಿಗೆ ಸರ್ಪದೋಷ್ ಉಂಟಾಗಿ ಅದರಿಂದ ಮುಕ್ತಿ ಪಡೆಯಲು ಗರುಡನನ್ನು ಪೂಜಿಸಬೇಕೆಂಬ ಪರಿಹಾರವು ಋಷಿ ಮುನಿಗಳಿಂದ ಸಲಹೆ ರುಪದಲ್ಲಿ ಸಿಕ್ಕಿತು. ಹೀಗಾಗಿ ಅರ್ಜುನನೆ ಸ್ವತಃ ಪ್ರತಿಷ್ಠಾಪಿಸಿದ ಗರುಡ ದೇವಾಲಯ ಇದಾಗಿದೆ ಎಂಬ ಪ್ರತೀತಿಯಿದೆ.

ಭಾರತದ ಏಕೈಕ ಗರುಡಸ್ವಾಮಿಯ ದೇವಾಲಯ!

ಚಿತ್ರಕೃಪೆ: wikipedia

ಅಲ್ಲದೆ, ಇನ್ನೊಂದು ಕಥೆಯಂತೆ, ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕವಿಮಾನದಲ್ಲಿ ಕೊಂಡೊಯ್ಯುತ್ತಿರುವಾಗ, ಸೀತೆಯ ಅರ್ತನಾದವನ್ನು ಕೇಳಿದ ಜಟಾಯು ತನ್ನ ಸಾಮರ್ಥ್ಯಕ್ಕೆ ಮೀರಿ ಸೀತೆಯನ್ನು ಕಾಪಾಡಲು ಪ್ರಯತಿಸಿತಾದರೂ ರಾವಣನ ಖಡ್ಗದಿಂದ ಕೊಲ್ಲಲ್ಪಟ್ಟಿತು. ಹೀಗಾಗಿ ಈ ಸ್ಥಳಕ್ಕೆ ಕೊಲದೇವಿ ಎಂಬ ಹೆಸರುಅಂದಿತೆನ್ನಲಾಗಿದೆ. ಅಲ್ಲದೆ ಈ ಒಂದು ಸ್ಥಳದಲ್ಲಿ ಜಟಾಯು ಪ್ರಾಣ ಬಿಟ್ಟು ವಿಷ್ಣುವಿನ ಕೃಪೆಗೆ ಪಾತ್ರವಾಗಿ ನಂತರ ಇದೆ ಸ್ಥಳದಲ್ಲಿ ಗರುಡ ದೇವರಾಗಿ ನಂಬಿಕೊಂಡು ಬರುವ ಭಕ್ತಾದಿಗಳ ಸಕಲ ಕಷ್ಟಗಳನ್ನು ದೂರ ಮಾಡುವ ದೈವವಾಗಿ ಪ್ರಖ್ಯಾತವಾಗಿದೆ.

ನಿಮಗಿಷ್ಟವಾಗಬಹುದಾದ : ಕೋಲಾರದಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳು

ಈ ದೇವಾಲಯದಲ್ಲಿ ಕೇವಲ ಗರುಡಸ್ವಾಮಿಯಲ್ಲದೆ ಆಂಜನೇಯನ ವಿಶಿಷ್ಟ ರೂಪವನ್ನು ಕಾಣಬಹುದಾಗಿದೆ. ಅಲ್ಲದೆ ಇನ್ನೊಂದು ವಿಶೇಷವೆಂದರೆ ಗರುಡಸ್ವಾಮಿಯು ಇಲ್ಲಿ ತನ್ನ ಹೆಗಲಿನ ಎರಡೂ ಬದಿಗಳಲ್ಲಿ ವಿಷ್ಣು ಹಾಗೂ ಲಕ್ಷ್ಮೆ ದೇವಿಯರನ್ನು ಕುಳ್ಳಿರಿಸಿಕೊಂಡು ನಿಂತಿರುವುದು. ಹೀಗಾಗಿ ವಿಷ್ಣುವಿನ ಆಶೀರ್ವಾದವೂ ಸಹ ಇಲ್ಲಿ ಸುಲಭವಾಗಿ ದೊರೆಯುತ್ತದೆಂಬ ಪ್ರಬಲ ನಂಬಿಕೆ ಇಲ್ಲಿ ಭೇಟಿ ನೀಡುವ ಭಕ್ತರಲ್ಲಿದೆ. ಬೆಂಗಳೂರಿನಿಂದ ಈ ಕ್ಷೇತ್ರಕ್ಕೆ ಹೋಗಬಯಸುವವರು ರಾಷ್ಟ್ರೀಯ ಹೆದ್ದಾರಿ ನಾಲ್ಕು ಬಳಸಿಕೊಂಡು ಕೋಲಾರ ದಾಟಿ ನಂತರ ಎಡತಿರುವು ಪಡೆದು ಮುಡಿಯನೂರು ಕ್ರಾಸ್ ತಲುಪಿ ಅಲ್ಲಿಂದ ಕೊಲದೇವೆಇಗೆ ತೆರಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X