Search
  • Follow NativePlanet
Share
» »ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!

ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!

By Vijay

ನಾವು ಸಾಮಾನ್ಯವಾಗಿ, ಯಾರೋ ಏನೋ ಹೇಳಿ ನಂತರ ಅದಕ್ಕೆ ವಿರುದ್ಧವಾಗಿ ರಾಗ ಎಳೆದಾಗ, ಏನು ಬಣ್ಣ ಬದಲಾಯಿಸ್ತಿಯಪ್ಪ ಎನ್ನುವುದಿದೆ. ಆದರೆ ಈ ಅರ್ಥ ಈ ಶಿವಲಿಂಗಕ್ಕೆ ಒಪ್ಪುವುದಿಲ್ಲ. ಸ್ವಾಭಾವಿಕವಾಗಿಯೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾವಣೆಯಾಗುತ್ತದೆ ಈ ಶಿವಲಿಂಗದ್ದು.

ಕೋಟಿಲಿಂಗೇಶ್ವರಕ್ಕೊಂದು ಭೇಟಿ

ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Nvamsi76

ಬೆಳಿಗ್ಗೆ ಕೆಂಪು ಬಣ್ಣ ಹೊಂದಿದ್ದರೆ ಮಧ್ಯಾಹ್ನದ ಸಮಯಕ್ಕೆಲ್ಲ ಶಿವಲಿಂಗದ ಬಣ್ಣ ಕೇಸರಿಯಾಗಿರುತ್ತದೆ. ಬರ ಬರುತ್ತ ಸಂಜೆಯಾಗುತ್ತಿದ್ದಂತೆ ಈ ಶಿವಲಿಂಗವು ಗೋಧಿ ಬಣ್ಣಕ್ಕೆ ತಿರುಗುತ್ತದೆ. ಏಕೆ ಈ ರೀತಿ ಬಣ್ಣ ಬದಲಾವಣೆಯಾಗುತ್ತದೆಂದು ಇನ್ನೂ ವರೆಗೂ ಯಾರಿಂದಲೂ ತಿಳಿಯಲು ಸಾಧ್ಯವಾಗಿಲ್ಲವಂತೆ.

ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Janki1694

ಅಲ್ಲದೆ ಈ ಶಿವಲಿಂಗವು ತನ್ನ ದರುಶನ ಕೋರಿ ಬರುವ ಭಕ್ತರೆಲ್ಲರ ಬೇಡಿಕೆಗಳನ್ನು ಈಡೇರಿಸುತ್ತದೆ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತಾದಿಗಳು. ಅದರಲ್ಲೂ ವಿಶೇಷವಾಗಿ ಕಂಕಣ ಭಾಗ್ಯ ಬಯಸುತ್ತಿರುವ ಹುಡುಗ, ಹುಡುಗಿಯರ ಈಡೇರಿಕೆಗಳು ಬಹು ಬೇಗ ಸಂಪನ್ನವಾಗುತ್ತದೆ ಎಂದು ಹೇಳಲಾಗುತ್ತದೆ.

ವಿವಿಧ ಆಕಾರ ಮತ್ತು ಗಾತ್ರಗಳ ಶಿವಲಿಂಗಗಳು

ಹೀಗೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತ, ಸಕಲರ ಇಷ್ಟಾರ್ಥಗಳನ್ನು ಈಡೇರಿಸುತ್ತ ನೆಲೆಸಿರುವ ಶಿವಲಿಂಗ ರೂಪದ ಶಿವನನ್ನು ಅಚಲೇಶ್ವರನೆಂದು ಕರೆಯಲಾಗುತ್ತದೆ. ಅಚಲೇಶ್ವರ ಎಂಬ ಹೆಸರಿನಲ್ಲಿ ಮಹಾದೇವ ಹಲವು ದೇವಾಲಯಗಳಿವೆಯಾದರೂ ಈ ಲೇಖನದಲ್ಲಿ ಹೇಳಲಗಿರುವ ಈ ದೇವಾಲಯ ರಾಜಸ್ಥಾನದ ಢೋಲಪುರ್ ಜಿಲ್ಲೆಯಲ್ಲಿದ್ದು ಚಂಬಲ್ ಬಳಿಯಿದೆ.

ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Sriharsha95

ಈ ಪ್ರದೇಶವು ಬಹುತೇಕರಿಗೆ ತಿಳಿದಿಲ್ಲ ಹಾಗೂ ಇದು ಮಧ್ಯ ಪ್ರದೇಶ ಮತ್ತು ರಾಜಸ್ಥಾನಗಳ ಗಡಿಯಲ್ಲಿ ಸ್ಥಿತವಿದೆ. ಚಂಬಲ್ ಪ್ರದೇಶದ ನಿರ್ಜನ ಪ್ರದೇಶವೊಂದರಲ್ಲಿ ನೆಲೆಸಿರುವುದರಿಂದ ಇಲ್ಲಿಗೆ ತಲುಪುವುದು ತುಸು ಕಷ್ಟಕರವಾಗಿದ್ದರೂ ಇದರ ಕೌತುಕಮಯ ಅಂಶಗಳಿಂದ ಇತ್ತೀಚಿನ ಕೆಲ ವರ್ಷಗಳಿಂದ ಸಾಕಷ್ಟು ಜನಮನ್ನಣೆಗಳಿಸುತ್ತಿದೆ ಈ ದೇವಾಲಯ.

ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Nilrocks

ಇನ್ನೊಂದು ಕೌತುಕವೆಂದರೆ ಈ ಶಿವಲಿಂಗದ ತಳ. ಇದರ ತಳ ಎಷ್ಟು ಆಳವಾಗಿದೆ ಎಂದು ಇನ್ನೂ ತಿಳಯಲಾಗಿಲ್ಲವಂತೆ. ಹಿಂದೆ ಪಕ್ಕದ ಸ್ಥಳದಿಂದ ಭೂಮಿ ತೋಡುತ್ತ ಎಷ್ಟು ಆಳ ಹೋದರೂ ಶಿವಲಿಂಗದ ತಳಪಾಯ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲವಂತೆ. ಕೊನೆಗೆ ಇದು ಶಿವನ ಮಹಾತ್ಮೆ ಎಂದು ಬಗೆದ ಜನ ತೋಡುವ ಕಾರ್ಯವನ್ನೆ ಸ್ಥಗಿತಗೊಳಿಸಿದರಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X