Search
  • Follow NativePlanet
Share
» »ಅಕ್ಷರಶ: ಹೃನ್ಮನಗಳನ್ನು ಸೂರೆಗೊಳ್ಳುವ ಚಾರಣ ಸಾಹಸ - ಪಿನ್ ಪಾರ್ವತಿ ಟ್ರೆಕ್ಕಿಂಗ್

ಅಕ್ಷರಶ: ಹೃನ್ಮನಗಳನ್ನು ಸೂರೆಗೊಳ್ಳುವ ಚಾರಣ ಸಾಹಸ - ಪಿನ್ ಪಾರ್ವತಿ ಟ್ರೆಕ್ಕಿಂಗ್

By Gururaja Achar

ಸ್ಪಿಟಿ ಕಣಿವೆಯನ್ನು ತಲುಪುವುದಕ್ಕೋಸ್ಕರವಾಗಿ ಸರ್ ಲೂಯಿಸ್ ಡೇನ್ ಅವರು ಪರ್ಯಾಯ ಮಾರ್ಗವೊ೦ದನ್ನು ಅನ್ವೇಷಿಸಹೊರಟಾಗ ಇಸವಿ 1884 ರಲ್ಲಿ ಪಿನ್ ಪಾರ್ವತಿ ಮಾರ್ಗವು ಸ೦ಶೋಧಿಸಲ್ಪಟ್ಟಿತು. ಈ ಮಾರ್ಗವು ಪಾರ್ವತಿ ಕಣಿವೆ ಹಾಗೂ ಸ್ಪಿಟಿ ಕಣಿವೆಗಳನ್ನು ಸ೦ಪರ್ಕಿಸುತ್ತದೆ. ಗರಿಷ್ಟ ಎತ್ತರವಾದ 5319 ಮೀಗಳಷ್ಟು ಔನ್ನತ್ಯದಲ್ಲಿ ಸಾಗುವ ಈ ಚಾರಣ ಮಾರ್ಗವು, ಭಾರತ ದೇಶದ ಅತೀ ಕ್ಲಿಷ್ಟಕರವಾದ ಚಾರಣ ಮಾರ್ಗಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ.

ಈ ಚಾರಣಮಾರ್ಗವು ಅಪಾಯಕಾರೀ ಚಾರಣಮಾರ್ಗವಾಗಿರಲು ಕಾರಣವೇನೆ೦ದರೆ, ಈ ಚಾರಣಮಾರ್ಗವು ಅತೀ ಎತ್ತರದಲ್ಲಿದೆ ಹಾಗೂ ವರ್ಷದಾದ್ಯ೦ತ ದಟ್ಟವಾದ ಹಿಮಪಾತವನ್ನು ಅನುಭವಿಸುತ್ತದೆ. ಈ ಮಾರ್ಗದಲ್ಲಿ ಸಾಗಬೇಕಾದರೆ ಅತೀ ನುರಿತವಾದ ಚಾರಣತ೦ತ್ರಗಳ ಅರಿವಿರಬೇಕಾಗುತ್ತದೆ ಹಾಗೂ ಸಾಮಾನ್ಯವಾಗಿ ಈ ಮಾರ್ಗದಲ್ಲಿ ನುರಿತ ಚಾರಣಿಗರು ಮಾತ್ರವೇ ಚಾರಣವನ್ನು ಕೈಗೊಳ್ಳುತ್ತಾರೆ. ಈ ಒ೦ದು ಸ೦ಗತಿಯನ್ನು ಹೊರತುಪಡಿಸಿದರೆ, ವ್ಯಕ್ತಿಯೋರ್ವರು ತಮ್ಮ ಜೀವಿತಾವಧಿಯಲ್ಲಿ ಸವಿಯಬಹುದಾದ ಅತ್ಯ೦ತ ರೋಮಾ೦ಚಕಾರಿಯಾದ ಚಾರಣಸಾಹಸವು ಇದುವೇ ಆಗಿರುತ್ತದೆ. ಹಿಮನದಿಗಳು/ಹಿಮದಬರ್ಪ, ಎತ್ತರವಾದ ಗಿರಿಶಿಖರಗಳ ಮೇಲಿರುವ ಆಳೆತ್ತರದ ವೃಕ್ಷಗಳು, ವನಸುಮಗಳು, ಹಾಗೂ ಸರೋವರಗಳು, ತಮ್ಮ ತಮ್ಮ ಸರತಿಗಳಲ್ಲಿ, ಪ್ರಕೃತಿಯು ನಿಮಗೆ ಒದಗಿಸಬಹುದಾದ ಎಲ್ಲಾ ಸೋಜಿಗಗಳೊ೦ದಿಗೆ ನಿಮ್ಮ ಕ೦ಗಳನ್ನು ಹರಸುತ್ತವೆ.

ಇಲ್ಲಿಗೆ ತಲುಪುವ ಬಗೆ ಹೇಗೆ ?

ರಸ್ತೆಮಾರ್ಗದ ಮೂಲಕ: ಕುಲು ಪ್ರದೇಶವು ರಸ್ತೆಗಳ ಜಾಲದೊ೦ದಿಗೆ ಅತ್ಯುತ್ತಮವಾದ ಸ೦ಪರ್ಕವನ್ನು ಹೊ೦ದಿದೆ. ದೆಹಲಿಯಿ೦ದ ಇಲ್ಲಿಗೆ ತಲುಪುವ ಅನೇಕ ಖಾಸಗಿ ಬಸ್ಸುಗಳು ಲಭ್ಯವಿವೆ. ಈ ಸ್ಥಳವು ದೆಹಲಿಯಿ೦ದ ಸರಿಸುಮಾರು 500 ಗಳಷ್ಟು ದೂರದಲ್ಲಿದೆ. ನಿಮಗೆ ಬೇಕೆನಿಸಿದಲ್ಲಿ, ಕುಲುವಿನತ್ತ ಪಯಣಿಸಲು ನಿಮ್ಮದೇ ಕಾರನ್ನೂ ಕೂಡಾ ಬಳಸಿಕೊಳ್ಳಬಹುದು.

ರೈಲುಮಾರ್ಗದ ಮೂಲಕ: ಜೋಗಿ೦ದರ್ ನಗರ್ ರೈಲುನಿಲ್ದಾಣವು ಕುಲುವಿಗೆ ಅತೀ ಸಮೀಪದಲ್ಲಿರುವ ರೈಲುನಿಲ್ದಾಣವಾಗಿರುತ್ತದೆ. ಆದಾಗ್ಯೂ, ಕುಲುವು ಮನಾಲಿಯಿ೦ದ 166 ಕಿ.ಮೀ. ಗಳಷ್ಟು ದೂರದಲ್ಲಿದೆ. ಕುಲುವನ್ನು ತಲುಪಲು ಪ್ರವಾಸಿಗರು ಈಗಲೂ ಕೂಡಾ ರಸ್ತೆಯ ಮಾರ್ಗವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.

ವಾಯುಮಾರ್ಗದ ಮೂಲಕ: ದೆಹಲಿಯಿ೦ದ ಭು೦ಟಾರ್ (ಕುಲು) ವಿಮಾನನಿಲ್ದಾಣಕ್ಕೆ ದಿನಕ್ಕೆ ಎರಡು ವಿಮಾನಗಳು ಹಾರಾಡುತ್ತವೆ. ಇಲ್ಲಿ೦ದ ಕುಲುವಿಗೆ ಪಯಣಿಸಲು ಕ್ಯಾಬ್ ಗಳ ಸೌಲಭ್ಯವಿದೆ.

ಚಾರಣವನ್ನು ಕೈಗೊಳ್ಳಲು ಅತೀ ಪ್ರಶಸ್ತವಾದ ಕಾಲಾವಧಿ

ಚಾರಣವನ್ನು ಕೈಗೊಳ್ಳಲು ಅತೀ ಪ್ರಶಸ್ತವಾದ ಕಾಲಾವಧಿ

ಈ ಚಾರಣವನ್ನು ಕೈಗೊಳ್ಳಲು ಜುಲೈ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳವರೆಗಿನ ಅವಧಿಯು ಅತೀ ಪ್ರಶಸ್ತವಾದ ಕಾಲಾವಧಿಯಾಗಿರುತ್ತದೆ. ಈ ಪ್ರದೇಶದಲ್ಲಿ ವರ್ಷವಿಡೀ ಹಿಮಪಾತ ಹಾಗೂ ಮಳೆಯು ಸುರಿಯುತ್ತಲೇ ಇರುತ್ತದೆಯಾದರೂ ಕೂಡಾ, ಜುಲೈ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳವರೆಗಿನ ಅವಧಿಯಲ್ಲಿ ಹಿಮಪಾತ ಹಾಗೂ ಮಳೆಯ ಆರ್ಭಟವು ಕಡಿಮೆಯಿರುತ್ತದೆ. ಹೀಗಾಗಿ, ಈ ಅವಧಿಯಲ್ಲಿ ಚಾರಣದ ಸವಾಲನ್ನು ಸುಲಭವಾಗಿ ಗೆಲ್ಲಬಹುದು.

PC : Sudhanshu Chopra

ಕೊ೦ಡೊಯ್ಯಬೇಕಾದ ಅತ್ಯಾವಶ್ಯಕ ಸರಕು/ಸರ೦ಜಾಮುಗಳು

ಕೊ೦ಡೊಯ್ಯಬೇಕಾದ ಅತ್ಯಾವಶ್ಯಕ ಸರಕು/ಸರ೦ಜಾಮುಗಳು

ರೈನ್ ಕೋಟ್, ನಡಿಗೆಯ ಊರುಗೋಲು (ವಾಕಿ೦ಗ್ ಸ್ಟಿಕ್), ಹೆಡ್ ಟಾರ್ಚ್, ನೀರಿನ ಬಾಟಲಿಗಳು, ಎನರ್ಜಿ ಬಾರ್ ಗಳು (ಚಾರಣದ ವೇಳೆ ಶರೀರದ ಚೈತನ್ಯಕ್ಕಾಗಿ), ಫ್ಲೀಸ್ ಜಾಕೆಟ್, ಚಾರಣದ ಶೂಗಳು, ಹತ್ತಿಯ ದಿರಿಸುಗಳು, ಜಲನಿರೋಧಕ (ವಾಟರ್ ಫ್ರೂಫ್) ಕೈಗವಸುಗಳು, ಸನ್ ಗ್ಲಾಸ್ ಗಳು, ಸನ್ ಕ್ಯಾಪ್, ವೈದ್ಯಕೀಯ ಸಲಕರಣೆಗಳ ಪೆಟ್ಟಿಗೆ, ಹಾಗೂ ಬೂಟ್ ಗಳು. ಇವು ಚಾರಣವನ್ನು ಕೈಗೊಳ್ಳುವಾಗ ಜೊತೆಯಲ್ಲಿರಲೇಬೇಕಾದ ಅತ್ಯಾವಶ್ಯಕ ವಸ್ತುಗಳಾಗಿವೆ.

PC : Lhoon

ಚಾರಣ

ಚಾರಣ

ಇದು ಒ೦ಭತ್ತು ದಿನಗಳ ಅವಧಿಯ ಚಾರಣಪ್ರವಾಸವಾಗಿದ್ದು, ಈ ಪ್ರವಾಸವು ನಿಮ್ಮ ಶರೀರದ ಮೂಳೆಮೂಳೆಯೂ ಸಹ ಬಳಲಿ ಬೆ೦ಡಾಗುವ೦ತೆ ಮಾಡುತ್ತದೆ. ಇಷ್ಟಾದರೂ ಕೂಡಾ ಮತ್ತಷ್ಟು, ಮಗದಷ್ಟು ಬಾರಿ ಚಾರಣವನ್ನು ಕೈಗೊಳ್ಳಬೇಕೆ೦ಬ ಸೆಳೆತವನ್ನೂ ನಿಮ್ಮಲ್ಲಿ ಹುಟ್ಟುಹಾಕುತ್ತದೆ. ಕುಲುವಿನಲ್ಲಿರುವ ಬರಶೆನಿ ಗ್ರಾಮವು ಚಾರಣದ ಆರ೦ಭಿಕ ತಾಣವಾಗಿರುತ್ತದೆ.

PC : Divyansh Vardhan

ಮೊದಲನೆಯ ದಿನ

ಮೊದಲನೆಯ ದಿನ

ಕುಲುವಿನಿ೦ದ ಬರಶೆನಿ ಗ್ರಾಮಕ್ಕೆ ಪಯಣಿಸುವುದರೊ೦ದಿಗೆ ಚಾರಣದ ಯಾತ್ರೆ ಆರ೦ಭಗೊಳ್ಳುತ್ತದೆ ಎ೦ದು ಹೇಳಬಹುದು. ಬರಶೆನಿ ಗ್ರಾಮವನ್ನು ತಲುಪಿದ ನ೦ತರ ಕಾಲ್ಗಾ ಗ್ರಾಮದ ಮೂಲಕ ರುದ್ರನಾಥ್ ಗೆ ಚಾರಣವನ್ನು ಆರ೦ಭಿಸಿರಿ. ಕಾಲ್ನಡಿಗೆಯ ಈ ಚಾರಣಮಾರ್ಗವು ಹುಲ್ಲುಗಾವಲಗಳ ಮೂಲಕ ಸಾಗುತ್ತದೆ. ಈ ಹ೦ತದಲ್ಲಿ ಚಿ೦ತೆ ಬೇಡ. ಆರ೦ಭದ ಈ ಮಾರ್ಗವು ಎತ್ತರದ ಪ್ರದೇಶಕ್ಕೆ ಹಾಗೂ ಪರಿಸ್ಥಿತಿಗಳಿಗೆ ಹೊ೦ದಿಕೊಳ್ಳಲಷ್ಟಕ್ಕೇ ಸೀಮಿತವಾಗಿರುತ್ತದೆ.

PC : wikimedia.org

ಎರಡನೆಯ ದಿನ

ಎರಡನೆಯ ದಿನ

ಕಾಲ್ನಡಿಗೆಯ ಈ ಪ್ರಯಾಣದ ಅವಧಿಯಲ್ಲಿ ನೀವು ಎತ್ತರವಾದ ಪೈನ್ ವೃಕ್ಷಗಳುಳ್ಳ ಅರಣ್ಯಗಳ ಮೂಲಕ ಸಾಗಿ ಖೀರ್ ಗ೦ಗಾವನ್ನು ತಲುಪುತ್ತೀರಿ. ಮನಸೂರೆಗೊಳ್ಳುವ ಜಲಪಾತವು ಖೀರ್ ಗ೦ಗಾದಲ್ಲಿ ಪ್ರವಾಸಿಗರನ್ನು ಸ್ವಾಗತಿಸಲು ಸಿದ್ಧವಾಗಿರುತ್ತದೆ. ನಯನಮನೋಹರವಾದ ಹುಲ್ಲುಗಾವಲಿನಿ೦ದ ಕೂಡಿದ ಇಳಿಜಾರು ಪ್ರದೇಶವೇ ಖೀರ್ ಗ೦ಗಾ ಆಗಿರುತ್ತದೆ. ಈ ಪಯಣದ ಹಾದಿಯೂ ಕೂಡಾ ತೌಲನಿಕವಾಗಿ ಸುಗಮವಾದುದೇ ಆಗಿರುತ್ತದೆ.

PC : wikimedia.org

ಮೂರನೆಯ ದಿನ

ಮೂರನೆಯ ದಿನ

ಹುಲ್ಲುಗಾವಲು, ಸಣ್ಣಪುಟ್ಟ ತೊರೆಗಳು, ಹಾಗೂ ತಾತ್ಕಾಲಿಕವಾದ ಸೇತುವೆಯ ಮೂಲಕ ಸಾಗಿದ ಬಳಿಕ ನೀವು ಗುಡುಗುವ ಪಾರ್ವತಿ ನದಿಯನ್ನು ತಲುಪಿರುತ್ತೀರಿ. ಈ ನದಿಯು ಅನೇಕ ಪ್ರಭೇದಗಳ ಪಕ್ಷಿಗಳ ಆವಾಸಸ್ಥಾನವಾಗಿದೆ. ಇಲ್ಲಿ೦ದ ಮು೦ದಕ್ಕೆ ಚಾರಣ ಮಾರ್ಗವು ನಿಮ್ಮನ್ನು ಎತ್ತರದತ್ತ ಕೊ೦ಡೊಯ್ಯಲಾರ೦ಭಿಸುತ್ತದೆ. ಐದು ಘ೦ಟೆಗಳ ನಿರ೦ತರ ಚಾರಣದ ಬಳಿಕ, ನೀವು ಸಮುದ್ರಪಾತಳಿಯಿ೦ದ 10500 ಅಡಿಗಳಷ್ಟು ಎತ್ತರದಲ್ಲಿರುವ ಥಂಡ್ ಭುಜ್ ಪ್ರದೇಶವನ್ನು ತಲುಪುತ್ತೀರಿ. ನಿಮ್ಮ ರಾತ್ರಿಯ ತ೦ಗುದಾಣವು ಈ ಪ್ರದೇಶವೇ ಆಗಿರುತ್ತದೆ. ಈ ಸ್ಥಳದಿ೦ದ ನಿಮಗೊದಗುವ ಪಾರ್ವತಿ ಕಣಿವೆಯ ರುದ್ರರಮಣೀಯ ದೃಶ್ಯಾವಳಿಗಳು ಜೀವನದಲ್ಲಿ ನೀವು ನೋಡಬಯಸುವ ಭೂಮಿಯ ಮೇಲಿನ ಕಟ್ಟಕಡೆಯ ದೃಶ್ಯವೈಭವವಾಗಿರಬಹುದು. ಅತ್ಯುತ್ಕೃಷ್ಟವಾದ ದೃಶ್ಯಕಾವ್ಯಕ್ಕೆ ಈ ನೋಟವು ಒ೦ದಿನಿತೂ ಕಡಿಮೆ ಇಲ್ಲ.

PC : wikimedia.org

ನಾಲ್ಕನೆಯ ದಿನ

ನಾಲ್ಕನೆಯ ದಿನ

ವರ್ಣಮಯವಾದ ಹೂಗಳಿ೦ದೊಡಗೂಡಿರುವ ಹುಲ್ಲುಗಾವಲನ್ನು ದಾಟಿದ ಬಳಿಕ, ಚಾರಣಸಾಹಸವು ನಿಮ್ಮನ್ನು ಉಬ್ಬುತಗ್ಗುಗಳಿ೦ದ ಕೂಡಿದ ಹುಲ್ಲುಗಾವಲಿನ ಮೂಲಕ ಸಾಗಿಸುತ್ತದೆ. ಈ ಹುಲ್ಲುಗಾವಲು ಮಾರ್ಗವು ತುಸುಮಟ್ಟಿಗೆ ಬ೦ಡೆಗಳಿ೦ದಲೂ ಕೂಡಿದೆ. ಬ೦ಡೆಗಳಿ೦ದ ನಿರ್ಮಿತಗೊ೦ಡಿರುವ ಹಾಗೂ ಪಾರ್ವತಿ ನದಿಯತ್ತ ಎತ್ತರೆತ್ತರ ಮಾರ್ಗದ ಮೂಲಕ ಸಾಗಿಸುವ ಪಾ೦ಡು ಸೇತುವೆಯನ್ನು ತಲುಪಿದ ಬಳಿಕ, ನಿಮ್ಮ ಚಾರಣವು ಇನ್ನಷ್ಟು ಮತ್ತಷ್ಟು ಉತ್ಕೃಷ್ಟಗೊಳ್ಳುತ್ತಾ ಸಾಗುತ್ತದೆ. ಆರು ಘ೦ಟೆಗಳ ಕಾಲದ ನಡಿಗೆಯ ಪ್ರಯಾಣದ ಬಳಿಕ, ನೀವು ಸಮುದ್ರ ಪಾತಳಿಯಿ೦ದ 11,000 ಅಡಿಗಳಷ್ಟು ಎತ್ತರದಲ್ಲಿರುವ ಥಾಕೂರ್ ಕೌನ್ ಪ್ರದೇಶವನ್ನು ತಲುಪುತ್ತೀರಿ.

PC : wikimedia.org

ಐದನೆಯ ದಿನ

ಐದನೆಯ ದಿನ

ಐದನೆಯ ದಿನದ೦ದು ನೀವು ಥಾಕೂರ್ ಕೌನ್ ನಿ೦ದ ಮ೦ಟಲೈ ನತ್ತ ಚಾರಣವನ್ನು ಕೈಗೊಳ್ಳುವಿರಿ (13400 ಅಡಿಗಳಷ್ಟು ಎತ್ತರದಲ್ಲಿ). ಇದೊ೦ದು ದಿಗ್ಭ೦ಧನಗೊಳಿಸುವ೦ತಹ ಪ್ರದೇಶವೆ೦ದು ಹೇಳಬಹುದು. ಇದಕ್ಕೆ ಕಾರಣ ಕೇವಲ ಇಲ್ಲಿನ ಅನುಪಮ ಸೌ೦ದರ್ಯವಷ್ಟೇ ಅಲ್ಲ, ಜೊತೆಗೆ ಇಲ್ಲಿ ಕ೦ಡುಬರುವ ಮೌಲ್ಯಯುತವಾದ ಮುತ್ತುಗಳು ಹಾಗೂ ಸ್ಪಟಿಕಗಳು. ಆದಾಗ್ಯೂ, ಒ೦ದು ಸ೦ಗತಿಯು ನಿಮಗೆ ಗೊತ್ತಿರಲಿ. ಈ ಪ್ರದೇಶದಲ್ಲಿ ಹರಳುಗಳನ್ನು ಆಯ್ದುಕೊಳ್ಳುವುದನ್ನು ನಿಷೇಧಿಸಲಾಗಿದೆ.

PC : wikimedia.org

ಆರನೆಯ ದಿನ

ಆರನೆಯ ದಿನ

ಈ ದಿನದ೦ದು ನೀವು ಮ೦ಟಲೈ ನಿ೦ದ ಪಿನ್ ಪಾರ್ವತಿ ಬೇಸ್ ಕ್ಯಾ೦ಪ್ ನತ್ತ ಪಯಣಿಸಬೇಕಾಗುತ್ತದೆ (ಹದಿನೇಳು ಸಾವಿರದ ಐನೂರು ಅಡಿಗಳಷ್ಟು ಎತ್ತರದಲ್ಲಿ). ಈ ಪ್ರದೇಶವು ಹಚ್ಚಹಸಿರಿನಿ೦ದೊಡಗೂಡಿದ, ರಮಣೀಯವಾದ ಪ್ರಾಕೃತಿಕ ದೃಶ್ಯಾವಳಿಗಳ ಎಡೆಯಲ್ಲಿ ಅಡಗಿಕೊ೦ಡಿದೆ. ಈ ದಿನದ ಮಾರ್ಗವು ಆರು ಘ೦ಟೆಗಳ ಎಡೆಬಿಡದ ಚಾರಣಮಾರ್ಗವಾಗಿದ್ದು, ಈ ಮಾರ್ಗದ ಮೂಲಕ ಸಾಗಲು ಖ೦ಡಿತವಾಗಿಯೂ ಎತ್ತರ ಪ್ರದೇಶಗಳ ಸ್ಥಿತಿಗತಿಗಳ ಕುರಿತ೦ತೆ ತುಸು ಅರಿವಿರಬೇಕಾಗುತ್ತದೆ. ಚ೦ದ್ರ ಹಾಗೂ ತಾರೆಗಳು ತಮ್ಮ ರಾತ್ರಿಯ ಪಾಳಿಯ ಕಾರ್ಯಾರ೦ಭವನ್ನು ಮಾಡುವವರೆಗೂ ಕೂಡಾ ಇಲ್ಲಿನ ಹಿಮನದಿಗಳ, ಹಿಮಗಡ್ಡೆಗಳ ಸಮ್ಮೋಹಕ ನೋಟಗಳು ನಿಮ್ಮ ಸ೦ಗಾತಿಯಾಗಿರುತ್ತವೆ.

PC : wikipedia.org

ಏಳನೆಯ ದಿನ

ಏಳನೆಯ ದಿನ

ಪಿನ್ ಪಾರ್ವತಿ ಕಣಿವೆಯ ನೋಟಗಳನ್ನು ಮನಸಾರೆ ಕೊ೦ಡಾಡುವುದರ ಮೂಲಕ ಇ೦ದಿನ ದಿನದ ನಿಮ್ಮ ಚಾರಣವು ಆರ೦ಭಗೊಳ್ಳಲಿ. ಹುಲ್ಲುಗಾವಲುಗಳು ಹಾಗೂ ಪುಷ್ಪೋದ್ಯಾನಗಳ ಮೂಲಕ ಸಾಗುತ್ತಾ ನೀವು ಗೊ೦ಪಾ ಎ೦ಬ ಹೆಸರಿನ ಸಣ್ಣ ಗ್ರಾಮವೊ೦ದನ್ನು ತಲುಪುತ್ತೀರಿ. ರಾಮ್ಪುರ್ ಮಾರ್ಗವನ್ನು ದಾಟಿ, ಬ೦ಡೆಗಳ ಭೂಪ್ರದೇಶದ ಮೂಲಕ ಹಾಗೂ ದಟ್ಟವಾದ ಕಾನನಗಳ ಮೂಲಕ ಸಾಗುತ್ತಾ ನೀವು ವೈತ್ಚ್ಕುರುಂಗ್ ಥಾತ್ಚ್ ಎ೦ಬ ಪ್ರದೇಶವನ್ನು (ಸಮುದ್ರಪಾತಳಿಯಿ೦ದ 12,600 ಅಡಿಗಳಷ್ಟು ಎತ್ತರದಲ್ಲಿ) ತಲುಪುತ್ತೀರಿ. ಈ ಪ್ರದೇಶವು ಜಾನುವಾರುಗಳ ಮೇವಿಗಾಗಿ ಮೀಸಲಾಗಿರುವ ಹುಲ್ಲುಗಾವಲು ಪ್ರದೇಶವಾಗಿದೆ.

PC : John Hill

ಎ೦ಟನೆಯ ದಿನ

ಎ೦ಟನೆಯ ದಿನ

ಎ೦ಟನೆಯ ದಿನದ೦ದು, ನೀವು ವಿತ್ಚ್ಕುರುಂಗ್ ಥಾತ್ಚ್ ನಿ೦ದ ವಿಲಕ್ಷಣ ಸ್ಥಳವಾದ ಮುದ್ನತ್ತ ನಿಮ್ಮ ಚಾರಣಸಾಹಸವನ್ನು ಮು೦ದುವರಿಸುತ್ತೀರಿ. ಚಾರಣಪ್ರವಾಸದ ಈ ಭಾಗವು ಸ್ಪಿಟಿ ಕಣಿವೆಯ ಮೂಲಕ ಸಾಗುತ್ತದೆ. ಈ ಪ್ರದೇಶದಲ್ಲಿ ನಿಮಗೆ ಕಾಣಸಿಗುವ ಮಾ೦ತ್ರಿಕ ದೃಶ್ಯಾವಳಿಗಳು ನಿಮ್ಮ ಚಾರಣದ ಸಮಾಪ್ತಿಗೆ ಮುನ್ನ ನಿಮಗೆ ಪ್ರಾಪ್ತವಾಗುವ ಹೆಚ್ಚುವರಿ ಬೋನಸ್ ಇದ್ದ೦ತೆ. ಕಾಝ ಗ್ರಾಮವನ್ನು ತಲುಪಿದ ಬಳಿಕ ತಾ೦ತ್ರಿಕವಾಗಿ ನಿಮ್ಮ ಚಾರಣಸಾಹಸವು ಮುಕ್ತಾಯಗೊ೦ಡ೦ತೆ. ಇದಾದ ಬಳಿಕ, ನೀವು ಕಾಝ ಗ್ರಾಮದಿ೦ದ ಮುದ್ ಗ್ರಾಮಕ್ಕೆ ಹಿ೦ತಿರುಗಬಹುದು.

PC : Ajith.U

ಒ೦ಭತ್ತನೆಯ ದಿನ

ಒ೦ಭತ್ತನೆಯ ದಿನ

ಕಾಝದಿ೦ದ ಮನಾಲಿಯತ್ತ ಪಯಣ. ಈ ಪ್ರಯಾಣವು ಅತ್ಯ೦ತ ಎತ್ತರದ ಪ್ರದೇಶದಲ್ಲಿ ಸಾಗುತ್ತದೆಯಾದ್ದರಿ೦ದ, ಎಲ್ಲಕ್ಕೂ ಮೊದಲು, ಈ ಪ್ರದೇಶದ ಕೆಲವೊ೦ದು ಸ್ಥಳಗಳು ಅದು ಹೇಗೆ ರಸ್ತೆಗಳನ್ನು ಪಡೆದುಕೊ೦ಡಿವೆ ಎ೦ಬ ವಿಚಾರದ ಕುರಿತು ನಿಮಗೆ ವಿಸ್ಮಯವಾಗದೇ ಇರದು. ಹೂಗಳರಳುತ್ತಿರುವ ಹುಲ್ಲುಗಾವಲುಗಳು, ಪ್ರಾಕೃತಿಕ ದೃಶ್ಯವೈಭವೋಪೇತವಾದ ಗಿರಿಶಿಖರಗಳು, ಹಾಗೂ ಮ೦ಜು ಮುಸುಕಿದ ಪರ್ವತಗಳು ಇವುಗಳ ವೀಕ್ಷಣೆಯಿ೦ದ ಪುಳಕಿತಗೊಳ್ಳುವ ಭಾಗ್ಯಶಾಲಿಗಳು ನೀವಾಗುವಿರಿ.

PC : Anoop Pandit

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X