» »ರಮ್ಯವಾಗಿದೆ ಕೊಟಿಗಾವ್ ವನ್ಯ ದಾಮ

ರಮ್ಯವಾಗಿದೆ ಕೊಟಿಗಾವ್ ವನ್ಯ ದಾಮ

Posted By: Divya

ಕೊಟಿಗಾವ್ ವನ್ಯ ಜೀವಿ ದಾಮ ಗೋವಾದಲ್ಲಿದೆ. ಪಲೋಲೆಮ್ ಸಮುದ್ರದ ಆಗ್ನೇಯ ಭಾಗದಲ್ಲಿ ಬರುವ ಈ ವನ್ಯ ಜೀವಿ ದಾಮ 9 ಕಿ.ಮೀ. ಅಂತರದಲ್ಲಿದೆ. ಬಹಳ ಸುಂದರವಾಗಿರುವ ಈ ಸ್ಥಳ ಜನ ನಿಬಿಡ ಪ್ರದೇಶದಲ್ಲಿ ಬರುತ್ತದೆ. ಇದು ಗೋವಾದಲ್ಲಿರುವ ಎರಡನೇ ದೊಡ್ಡ ವನ್ಯ ಜೀವಿ ದಾಮ.

Cotigao Wildlife Sanctuary

PC : Tarun

ನಮ್ಮದೇ ವಾಹನ ವ್ಯವಸ್ಥೆ ಇದ್ದರೆ ಇಲ್ಲಿಗೆ ಹೋಗುವುದು ಬಹಳ ಸುಲಭ. ವಿಶಾಲವಾಗಿ ಹಾಗೂ ಬಹಳ ಎತ್ತರಕ್ಕೆ ಬೆಳೆದಿರುವ ಅದ್ಭುತ ಮರಗಳನ್ನು ನೋಡಬೇಕೆಂದಿದ್ದರೆ ಈ ವನ್ಯ ದಾಮ ಸೂಕ್ತ ತಾಣ. ಇದರ ಗಡಿಪ್ರದೇಶ ಕರ್ನಾಟಕದ ಹತ್ತಿರವೇ ಬರುವುದರಿಂದ ನೆರೆಹೊರೆ ಪ್ರದೇಶದ ಜನರು ಸಹ ಇಲ್ಲಿಗೆ ಬರುತ್ತಾರೆ.

Cotigao Wildlife Sanctuary

PC : Tarun

ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯವಾಗಿ ಎಂದಿಗೂ ತೇವದಿಂದ ಕೂಡಿರುವ ಇಲ್ಲಿಯ ಗಿಡ ಮರಗಳು, ತನ್ನ ಬೃಹತ್ತಾದ ಆಕಾರದಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಎಷ್ಟು ಹಚ್ಚ ಹಸುರಿನ ಗಿಡಮರಗಳಿವೆಯೋ ಅಷ್ಟೇ ಪ್ರಮಾಣದಲ್ಲಿ ಎಲೆ ಉದುರುವ ಗಿಡ ಮರಗಳೂ ಇಲ್ಲಿವೆ. ಈ ವನ್ಯ ದಾಮದ ಒಳಗೆ ಹೊಕ್ಕುತ್ತಿದ್ದಂತೆಯೇ ಬಹಳ ಕಿರಿದಾದ ದಾರಿ ಇರುವ ಅನುಭವವಾಗುತ್ತದೆ. ಈ ವನ್ಯ ದಾಮದಲ್ಲಿ ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಪ್ಯಾಂಥರ್ಸ್ ಸೇರಿದಂತೆ ಅನೇಕ ಪ್ರಾಣಿ ಸಂಕುಲವಿದೆ. ಆದರೆ ಇವು ಕಣ್ಣಿಗೆ ಕಾಣುವುದು ಅಪರೂಪ.

Cotigao Wildlife Sanctuary

PC : Tarun

ಏನು ಮಾಡಬೇಕು
ಇಲ್ಲಿರುವ ದಿ ನೇಚರ್ ಇಂಟರ್‍ಪ್ರಿಟೇಷನ್ ಸೆಂಟರ್‍ಗೆ ಭೇಟಿ ನೀಡಿದರೆ ವನ್ಯ ದಾಮದ ಬಗ್ಗೆ, ಅಲ್ಲಿರುವ ಗಿಡ ಮರಗಳು, ಪರಿಸರ ಹಾಗೂ ವನ್ಯ ಜಗತ್ತಿನ ಬಗ್ಗೆ ವಿವರವಾದ ಮಾಹಿತಿ ಪಡೆಯಬಹುದು. ಈ ವನ್ಯ ದಾಮಕ್ಕೆ ಖಾಸಗಿ ವಾಹನಗಳಲ್ಲಿ ಬಂದರೆ, 500 ಮೀಟರ್ ನಿಂದ 5 ಕಿ.ಮೀ ದೂರದ ವರೆಗೂ ಸಾಗಬಹುದು. ಒಬ್ಬ ಮಾರ್ಗದರ್ಶಕರ (ಗೈಡ್) ಮೊರೆ ಹೋದರೆ ಅಲ್ಲಿಯ ಮಾಹಿತಿಯನ್ನು ವಿವರವಾಗಿ ತಿಳಿಯಬಹುದು.

Cotigao Wildlife Sanctuary

PC : Tarun

ಸೂಕ್ತ ಸಮಯ
ಬೆಂಗಳೂರಿನಿಂದ 428 ಕಿ.ಮೀ. ದೂರದಲ್ಲಿರುವ ಕೊಟಿಗಾವ್‍ಗೆ ಬರಲು ಅಕ್ಟೋಬರ್ ನಿಂದ ಮಾರ್ಚ್ ಸೂಕ್ತ ಸಮಯ. ಮಳೆಗಾಲದಲ್ಲಿ ಬಂದರೆ ಗಿಡಮರಗಳು ಬೆಳೆದುಕೊಂಡು, ಓಡಾಡುವ ಜಾಗವೆಲ್ಲಾ ಕವಿದಿರುತ್ತವೆ. ಇದು ಪ್ರತಿದಿನ ಬೆಳಗ್ಗೆ 7 ರಿಂದ 5.30ರ ವರೆಗೆ ತೆರೆದಿರುತ್ತದೆ. ಪ್ರತಿಯೊಬ್ಬರು 5 ರೂ. ಟಿಕೆಟ್ ಪಡೆಯಬೇಕಾಗುತ್ತದೆ. ಕ್ಯಾಮೆರಾ ಕೊಂಡೊಯ್ಯುವುದಾದರೆ ಅದಕ್ಕೂ 25 ರೂ. ಟಿಕೆಟ್ ಪಡೆಯಬೇಕು. ಯಾರು ವನ್ಯ ದಾಮದ ಬಳಿ ತಂಗಲು ಇಷ್ಟಪಡುತ್ತಾರೋ ಅವರು ಅರಣ್ಯ ಅಧಿಕಾರಿಗಳ ಪರವಾನಗಿ ಪಡೆಯಬೇಕಾಗುತ್ತದೆ.

Read more about: goa
Please Wait while comments are loading...