Search
  • Follow NativePlanet
Share
» »ಮರೆಯಲಾಗದ ಅಂಡಮಾನ್ ನಿಕೋಬಾರ್ ದ್ವೀಪಗಳು

ಮರೆಯಲಾಗದ ಅಂಡಮಾನ್ ನಿಕೋಬಾರ್ ದ್ವೀಪಗಳು

By Vijay

ಭಾರತ ಉಪಖಂಡದ ಸುತ್ತಲು ಹರಡಿರುವ ಸಾಗರ, ಕಡಲಗಳ ಮೇಲೆ ಅಲ್ಲಲ್ಲಿ ನಿರ್ಮಿತವಾಗಿರುವ ದ್ವೀಪಗಳಿಗೆ ಪ್ರವಾಸ ಹೊರಡುವುದು ತನ್ನದೆ ಆದ ಒಂದು ವಿಶೇಷತೆಯನ್ನು ಹೊಂದಿರುತ್ತದೆ. ದಕ್ಷಿಣ ಭಾರತದ ಎರಡು ಬದಿಗಳಲ್ಲಿರುವ ಅಂಡಮಾನ್ ದ್ವೀಪಗಳು ಹಾಗು ಲಕ್ಷದ್ವೀಪಗಳು ಇಂತಹ ಒಂದು ವಿಶೀಷ್ಟ ಪ್ರವಾಸಕ್ಕೆ ಯೋಗ್ಯವಾದ ಸ್ಥಳಗಳಾಗಿವೆ. ಪ್ರಸ್ತುತ ಈ ಲೇಖನದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕುರಿತು ತಿಳಿಯಿರಿ. ಅಂಡಮಾನ್ ಮತ್ತು ನಿಕೋಬಾರ್ ಹಲವು ಚಿಕ್ಕ ಪುಟ್ಟ ದ್ವೀಪಗಳ ಸಮೂಹವಾಗಿದ್ದು, ಭಾರತದ ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದಾಗಿದೆ.

ಬಂಗಾಳ ಕೊಲ್ಲಿ ಹಾಗು ಅಂಡಮಾನ್ ಸಮುದ್ರದ ಸಂಗಮ ಸ್ಥಳದಲ್ಲಿರುವ ಈ ದ್ವೀಪಗಳ ಸಮೂಹವು ಇಂಡೋನೇಷಿಯಾ ದೇಶದ ಆಚೆ ಎಂಬ ಪ್ರದೇಶದಿಂದ ಕೇವಲ 150 ಕಿ.ಮೀ ದೂರದಲ್ಲಿದೆ. ಅಂಡಮಾನ್ ಹಾಗು ನಿಕೋಬಾರ್ ಎರಡು ಪ್ರತ್ಯೇಕವಾದ ದ್ವೀಪ ಸಮೂಹಗಳಾಗಿದ್ದು ಕ್ರಮವಾಗಿ ಉತ್ತರಕ್ಕೂ ಹಾಗು ದಕ್ಷಿಣಕ್ಕೂ ಸ್ಥಿತವಾಗಿವೆ. ಈ ದ್ವೀಪ ಸಮೂಹವನ್ನು ಹಡುಗು ಅಥವಾ ವಿಮಾನ ಪ್ರಯಾಣದ ಮೂಲಕ ಮಾತ್ರ ತಲುಪಬಹುದಾಗಿದೆ.

ರೋಚಕ ಕಥೆ:

ರೋಚಕ ಕಥೆ:

ಹಿಂದೊಮ್ಮೆ ಮಲೇಷಿಯಾ, ಚೀನಾ ಹಾಗು ಸೋಮಾಲಿಯಾ ಕಡಲ್ಗಳ್ಳರು ಗುಲಾಮರನ್ನು ಪಡೆಯುವ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದಾಗ, ಸ್ಥಳೀಯ ಜನರ ಮುಖ ಲಕ್ಷಣವು ಮಂಗಗಳೊಂದಿಗೆ ಹೋಲಿಕೆಯಾಗುತ್ತಿದ್ದುದನ್ನು ಕಂಡು ಈ ಪ್ರದೇಶಕ್ಕೆ ಮಂಗ ಮುಖದ ಜನರುಗಳು ವಾಸಿಸುವ ಭೂಮಿ ಎಂಬರ್ಥದಲ್ಲಿ ಇದಕ್ಕೆ ಹಂಡುಮಾನ್ (ಹನುಮಾನ್) ಎಂಬ ಹೆಸರಿನ್ನಿಟ್ಟಿದ್ದರು ಎಂದು ಹೇಳಲಾಗುತ್ತದೆ. ಕ್ರಮೇಣ ಈ ಹೆಸರು ಅಂಡಮಾನ್ ಎಂಬ ರೂಪ ಪಡೆಯಿತ್ತೆನ್ನಲಾಗಿದೆ.

ಚಿತ್ರಕೃಪೆ: Pratitimajumdar

ಮೂಲನಿವಾಸಿಗಳು:

ಮೂಲನಿವಾಸಿಗಳು:

ಪುರಾತತ್ವ ದಾಖಲೆಯ ಪ್ರಕಾರ, ಇಲ್ಲಿ ಮೂಲನಿವಾಸಿಗಳು 2,200 ವರ್ಷಗಳ ಹಿಂದೆಯೆ ವಾಸಿಸುತ್ತಿದ್ದರೆನ್ನಲಾಗಿದೆ. ನಿಕೋಬಾರ್ ದ್ವೀಪ ಸಮೂಹದಲ್ಲಿ ವಿವಿಧ ಸಂಸ್ಕೃತಿ ಸಂಪ್ರದಾಯಗಳಿಂದ ಬಂದ ಮಿಶ್ರ ಜನರಿಂದ ರೂಪಿತವಾಗಿರುವುದನ್ನು ಕಾಣಬಹುದು.


ಚಿತ್ರಕೃಪೆ: Vaishnav066

ವಸಾಹತುಶಾಹಿ ಪೂರ್ವ:

ವಸಾಹತುಶಾಹಿ ಪೂರ್ವ:

ವಸಾಹತುಶಾಹಿ ಪೂರ್ವ ಕಾಲದಲ್ಲಿ ಚೋಳ ಸಾಮ್ರಾಜ್ಯದ ಮೊದಲನೆಯ ರಾಜೇಂದ್ರ ಚೋಳನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳನ್ನು ವಶಪಡಿಸಿಕೊಂಡಿದ್ದನು. ಸಮುದ್ರಾಕ್ರಮಣದ ಮೂಲಕ ಇತರೆ ದೇಶಗಳನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಆತ ಈ ಪ್ರದೇಶವನ್ನು ಆಧಾರ ಸ್ಥಳವನ್ನಾಗಿ ಮಾಡಿಕೊಂಡಿದ್ದನು.


ಚಿತ್ರಕೃಪೆ: Venkatesh K

ವಸಾಹತುಶಾಹಿ ಕಾಲ:

ವಸಾಹತುಶಾಹಿ ಕಾಲ:

ಡ್ಯಾನಿಶ್ ಈಸ್ಟ್ ಇಂಡಿಯಾ ಕಂಪನಿಯ ಜನರು 1755, 12 ನೆಯ ಡಿಸೆಂಬರ್ ಸಮಯದಲ್ಲಿ ಇಲ್ಲಿಗೆ ಬಂದಾಗ ವಸಾಹತುಶಾಹಿ ಕಾಲ ಆರಂಭವಾಯಿತು. ನಂತರ 16 ಅಕ್ಟೋಬರ್, 1868 ರಲ್ಲಿ ಈ ಪ್ರದೇಶವನ್ನು ಡೆನ್ಮಾರ್ಕ್ ದೇಶವು ಬ್ರಿಟೀಷ್ ಇಂಡಿಯಾ ಕಂಪನಿಗೆ ಮಾರಿತು.


ಚಿತ್ರಕೃಪೆ: _e.t

ಎರಡನೆಯ ವಿಶ್ವಯುದ್ಧ:

ಎರಡನೆಯ ವಿಶ್ವಯುದ್ಧ:

ಈ ಸಂದರ್ಭದಲ್ಲಿ ಬಹುಮಟ್ಟಿಗೆ ಈ ಪ್ರದೇಶವು ಜಪಾನೀಯರ ವಶದಲ್ಲಿತ್ತು ಹಾಗು ಸಾಂದರ್ಭಿಕವಾಗಿ ನೇತಾಜಿ ಸುಭಾಸ್ ಚಂದ್ರ ಬೋಸ್ ರವರ ಅಜಾದ್ ಹಿಂದ್ ಅಧೀನದಲ್ಲಿತ್ತು. ಬೋಸರು ಹಲವು ಬಾರಿ ಈ ದ್ವೀಪ ಸಮೂಹಕ್ಕೆ ಭೇಟಿ ನೀಡಿದ್ದರು.


ಚಿತ್ರಕೃಪೆ: Vedil

ಭಾರತದ ಭಾಗ:

ಭಾರತದ ಭಾಗ:

ಭಾರತವು ಕೊನೆಗೆ ಬ್ರಿಟೀಷರ ಕೈಯಿಂದ 1947 ರಲ್ಲಿ ಮುಕ್ತಿ ಪಡೆದಾಗ, ತೆರಳುತ್ತಿರುವ ಬ್ರಿಟೀಷರು ಆಂಗ್ಲೊ ಇಂಡಿಯನ್ನರು ಹಾಗು ಆಂಗ್ಲೊ ಬರ್ಮಿಯನ್ನರಿಗಾಗಿ ಈ ಸ್ಥಳವನ್ನು ಗುರುತುಮಾಡಿ ಅವರಿಗಾಗಿ ಪ್ರತ್ಯೇಕವಾದ ದೇಶ ರಚನೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ಅವರ ಈ ಬಯಕೆ ಎಂದಿಗೂ ಈಡೇರಲಿಲ್ಲ. ಕೊನೆಗೆ 1950 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವು ಭಾರತದ ಅವಿಭಾಜ್ಯ ಅಂಗವಾಗಿ 1956 ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟವು.

ಪ್ರವಾಸೋದ್ಯಮ:

ಪ್ರವಾಸೋದ್ಯಮ:

ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಭಾರತದ ಮಹತ್ತರ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಸುತ್ತಲೂ ಸಾಗರದ ಅಗರ್ಭ ಜಲಜೀವರಾಶಿಗಳಿಂದ ತುಂಬಿ ಹೋಗಿರುವ ಈ ಪ್ರದೇಶವು ಪ್ರವಾಸಿಗರಿಗೆ ರೋಮಾಂಚನವನ್ನುಂಟು ಮಾಡುವ ಅನುಭೂತಿಯನ್ನು ಕರುಣಿಸುತ್ತದೆ. ಇಲ್ಲಿ ಹಲವು ಉತ್ತಮವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು.

ಚಿತ್ರಕೃಪೆ: Abhijeet Rane

ಸೆಲ್ಯೂಲರ್ ಜೈಲು:

ಸೆಲ್ಯೂಲರ್ ಜೈಲು:

ಇದೊಂದು ಸುಪ್ರಸಿದ್ಧವಾದ ರಾಷ್ಟ್ರೀಯ ಸ್ಮಾರಕವಾಗಿದೆ. ಹಿಂದಿನ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡಿ ಹಾಕಿ ಅವರಿಗೆ ನೀಡಲಾದ ಅಮಾನವೀಯ ಕೃತ್ಯಗಳ ಕರುಣಾಜನಕ ಕಥೆಯನ್ನು ಸಾರಿ ಹೇಳುತ್ತಿದೆ ಈ ಜೈಲು. ಸ್ವಾತಂತ್ರ್ಯಪ್ರಿಯ ಪ್ರವಾಸಿಗರಿಗೆ ಇದೊಂದು ಯಾತ್ರಾಕ್ಷೇತ್ರವೆಂದರೂ ತಪ್ಪಾಗಲಾರದು.


ಚಿತ್ರಕೃಪೆ: Biswarup Ganguly

ಸಸ್ಯಸಂಪತ್ತು:

ಸಸ್ಯಸಂಪತ್ತು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮಳೆಗಾಡು ಪ್ರದೇಶದ ವಿಶೀಷ್ಟ ಸಸ್ಯ ಸಂಪತ್ತಿನಿಂದ ಕೂಡಿದೆ. ಒಟ್ಟು 2,200 ಬಗೆಯ ಸಸ್ಯರಾಶಿಗಳನ್ನು ಇಲ್ಲಿ ಗುರುತಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ಪ್ರಮಾಣದಲ್ಲಿ ಸುಮಾರು 1300 ಬಗೆಯ ಸಸ್ಯಗಳು ಭಾರತದ ಮುಖ್ಯ ಭೂಮಿಯಲ್ಲಿ ಕಂಡುಬರುವುದೆ ಇಲ್ಲ.


ಚಿತ್ರಕೃಪೆ: Biswarup Ganguly

ಗಿಡಮರಗಳು:

ಗಿಡಮರಗಳು:

ದಕ್ಷಿಣ ಅಂಡಮಾನ್ ಪ್ರದೇಶದಲ್ಲಿ ಹೆಚ್ಚಾಗಿ ಜರೀಗಿಡ (ಫರ್ನ್) ಹಾಗು ಆರ್ಕಿಡ್ ಗಳು ಕಂಡುಬರುತ್ತವೆ. ಅಲ್ಲದೆ ಎಲೆ ಉದುರುವ ಕಾಡುಗಳು ಸಾಮಾನ್ಯವಾಗಿ ಇಲ್ಲಿ ಕಂಡುಬರುತ್ತವೆ. ಅದೆ ಉತ್ತರ ಅಂಡಮಾನ್ ಪ್ರದೇಶದಲ್ಲಿ ನಿತ್ಯಹರಿದ್ವರ್ಣದ ಕಾಡುಗಳು ಹೆಚ್ಚಾಗಿ ಕಂಡುಬರುತ್ತವೆ.

ವನ್ಯಸಂಪತ್ತು:

ವನ್ಯಸಂಪತ್ತು:

ಇಲ್ಲಿ ಕಂಡುಬರುವ ಮಳೆಗಾಡು ಪ್ರದೇಶಗಳು ಹಲವು ವಿಭಿನ್ನ ಪ್ರಾಣಿಸಂಪತ್ತಿನಿಂದ ಶ್ರೀಮಂತವಾಗಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸುಮಾರು 50 ಪ್ರಬೇಧಗಳ ಸಸ್ತನಿಗಳು, 270 ಬಗೆಯ ಪಕ್ಷಿಗಳು ಕಂಡುಬಂದಿವೆ.

ಭೌಗೋಳಿಕತೆ:

ಭೌಗೋಳಿಕತೆ:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಒಟ್ಟಾರೆಯಾಗಿ 572 ದ್ವೀಪಗಳಿವೆ. ಇದರ ಒಟ್ಟಾರೆ ವಿಸ್ತೀರ್ಣ 7,950 ಚ.ಕಿ.ಮೀ. ಅಂಡಮಾನ್ ಸಮೂಹದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದ್ವೀಪಗಳಿದ್ದು, ಅದೇ ನಿಕೋಬಾರ್ ಸಮೂಹದಲ್ಲಿ ಕಡಿಮೆ ಸಂಖ್ಯೆಯಲ್ಲಿ ದ್ವೀಪಗಳಿವೆ.


ಚಿತ್ರಕೃಪೆ: Aliven Sarkar

http://commons.wikimedia.org/wiki/File:Neil.JPG

ರಾಸ್ ದ್ವೀಪ:

ರಾಸ್ ದ್ವೀಪ:

ಪೋರ್ಟ್ ಬ್ಲೇರ್ ಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿ ಈ ದ್ವೀಪವನ್ನು ಕಾಣಬಹುದು. ಪ್ರಸ್ತುತ ಭಾರತೀಯ ನೌಕಾ ದಳದಿಂದ ನಿರ್ವಹಿಸಲ್ಪಡುತ್ತಿರುವ ಈ ದ್ವೀಪಕ್ಕೆ ಭೇಟಿ ನೀಡುವಾಗ ದಾಖಲೆ ಪುಸ್ತಕದಲ್ಲಿ ಹೆಸರನ್ನು ನಮೂದಿಸಿ ಪ್ರವೇಶ ಪಡೆಯಬೇಕು.

ಚಿತ್ರಕೃಪೆ: Shimjithsr

ವೈಪರ್ ದ್ವೀಪ:

ವೈಪರ್ ದ್ವೀಪ:

ಪೋರ್ಟ್ ಬ್ಲೇರ್ ಗೆ ಹತ್ತಿರದಲ್ಲಿದೆ ಈ ದ್ವೀಪ. ಅಂಡಮಾನಿನ ಪ್ರಸಿದ್ಧ ಸೆಲ್ಯೂಲರ್ ಜೈಲನ್ನು ನಿರ್ಮಿಸುವ ಮುಂಚೆಯೆ ಈ ದ್ವೀಪದಲ್ಲಿ ಒಂದು ಬಂದಿಖಾನೆಯಿತ್ತು. ಬ್ರಿಟೀಷ್ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸುವ ಉದ್ದೇಶದಿಂದ ಹೋರಾಟಕ್ಕಿಳಿದಿದ್ದ ವೀರ ಹೋರಾಟಗಾರರನ್ನು ಬಂಧಿಸಿ ಇಲ್ಲಿ ಹಿಂಸೆಯನ್ನು ನೀಡಲಾಗುತ್ತಿತ್ತು.


ಚಿತ್ರಕೃಪೆ: Biswarup Ganguly

ವಂಡೂರ್ ಕಡಲ ತೀರ:

ವಂಡೂರ್ ಕಡಲ ತೀರ:

ದಕ್ಷಿಣ ಅಂಡಮಾನಿನ ದಕ್ಷಿಣದ ತುದಿಯಲ್ಲಿರುವ ವಂಡೂರ್ ಎಂಬ ಗ್ರಾಮದಲ್ಲಿ ಈ ಕಡಲ ತೀರವಿದೆ. ಪೋರ್ಟ್ ಬ್ಲೇರ್ ಪಟ್ಟಣದಿಂದ ರಸ್ತೆಯ ಮೂಲಕ ಸುಮಾರು 30 ಕಿ.ಮೀ ದೂರದಲ್ಲಿ ಈ ಕಡಲ ತೀರವಿದೆ. ಇಲ್ಲಿ ರಾಷ್ಟ್ರೀಯ ಮರೈನ್ ಪಾರ್ಕ್ ಸಹ ಇದೆ.

ಚಿತ್ರಕೃಪೆ: Biswarup Ganguly

ಮತ್ತೊಂದು ನೋಟ:

ಮತ್ತೊಂದು ನೋಟ:

ವಂಡೂರ್ ಕಡಲ ತೀರದ ಮತ್ತೊಂದು ನೋಟ.


ಚಿತ್ರಕೃಪೆ: Biswarup Ganguly

ಪ್ರಶಾಂತ ಪರಿಸರ:

ಪ್ರಶಾಂತ ಪರಿಸರ:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮುದ್ರ ದಂಡೆಗಳು ನೋಡಲು ವಿಹಂಗಮವಾಗಿದ್ದು, ಉತ್ಕೃಷ್ಟವಾದ ರಜೆಯ ಅನುಭವವನ್ನು ಕರುಣಿಸುತ್ತವೆ.

ರುತ್‍ಲ್ಯಾಂಡ್ ದ್ವೀಪ:

ರುತ್‍ಲ್ಯಾಂಡ್ ದ್ವೀಪ:

109.3 ಚ.ಕಿ.ಮೀ ವಿಸ್ತೀರ್ಣವುಳ್ಳ ಈ ದ್ವೀಪವು ಸುಮಾರು 60 ಕಿ.ಮೀಗಳಷ್ಟು ಉದ್ದವಾದ ಕಡಲ ತೀರವನ್ನು ಹೊಂದಿದೆ. ಹೆಚ್ಚು ಆಳವಿಲ್ಲದ ನೀರನ್ನು ಹೊಂದಿರುವ ಈ ಕಡಲ ತೀರವು ಹವಳದ ದಿಬ್ಬಗಳು ಹಾಗು ಹಲವು ಬಣ್ಣ ಬಣ್ಣದ ಮೀನುಗಳಿಂದ ಸಂಪದ್ಭರಿತವಾಗಿದೆ.


ಚಿತ್ರಕೃಪೆ: Scheherezade Duniyadar

ಕಾರ್ಬೀನ್ಸ್ ಕೋವ್ ಬೀಚ್:

ಕಾರ್ಬೀನ್ಸ್ ಕೋವ್ ಬೀಚ್:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾದ ಪೋರ್ಟ್ ಬ್ಲೇರ್ ಪಟ್ಟಣದಿಂದ ಕೇವಲ ಏಳು ಕಿ.ಮೀ ದೂರದಲ್ಲಿದೆ ಈ ಸುಂದರ ದೃಶ್ಯಾವಳಿಯ ಕಡಲ ತೀರ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಪಹಾರಗೃಹಗಳು ಹಾಗು ತಂಗಲು ಹೋಟೆಲುಗಳು ಲಭ್ಯವಿದೆ.

ಚಿತ್ರಕೃಪೆ: Voguru

ತಲುಪುವ ಬಗೆ:

ತಲುಪುವ ಬಗೆ:

ಅಂಡಮಾನ್ ಮತ್ತು ನಿಕೋಬಾರ್ ಒಂದು ದ್ವೀಪ ಸಮೂಹವಾಗಿರುವುದರಿಂದ ಕೇವಲ ವಿಮಾನ ಹಾಗು ಹಡುಗು ಅಥವಾ ದೋಣಿಯ ಮೂಲಕ ಮಾತ್ರವೆ ತಲುಪಬಹುದಾಗಿದೆ. ಇಲ್ಲಿಗೆ ತಲುಪಲು ದೆಹಲಿ, ಕೊಲ್ಕತ್ತಾ ಹಾಗು ಚೆನ್ನೈಗಳಿಂದ ನಿರಂತರವಾಗಿ ವಿಮಾನಗಳು ಲಭ್ಯವಿರುತ್ತದೆ. ಕೆಲವು ನಿರ್ದಿಷ್ಟ ದಿನಗಳಲ್ಲಿ ಭುವನೇಶ್ವರದಿಂದಲೂ ಸಹ ಇಲ್ಲಿಗೆ ವಿಮಾನ ಲಭ್ಯವಿದೆ. ಹಡಗಿನ ಮೂಲಕ ಪ್ರಯಾಣಿಸಬೇಕಿದ್ದರೆ ಚೆನ್ನೈ, ವಿಶಾಖಪಟ್ಟಣ ಹಾಗು ಕೊಲ್ಕತ್ತಾಗಳಿಂದ ಹಡುಗು ಪ್ರಯಾಣ ಲಭ್ಯವಿದೆ. ಆದರೆ ತಿಂಗಳಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ಈ ಪ್ರಯಾಣ ಲಭ್ಯವಿರುತ್ತದೆ. ಅಲ್ಲದೆ ಹಡಗಿನ ಮುಖಾಂತರ ಅಂಡಮಾನಿಗೆ ತೆರಳಲು ಕನಿಷ್ಠ 60 ರಿಂದ 70 ಘಂಟೆಗಳಷ್ಟು ಕಾಲ ತಗಲುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X