Search
  • Follow NativePlanet
Share
» »ಹುಬ್ಬಳ್ಳಿಯಿಂದ ಒಂದು ಸುಂದರ ಪ್ರವಾಸ

ಹುಬ್ಬಳ್ಳಿಯಿಂದ ಒಂದು ಸುಂದರ ಪ್ರವಾಸ

By Vijay

"ಚೋಟಾ ಬಾಂಬೆ" ಎಂದು ಜನಪ್ರೀಯವಾಗಿ ಕರೆಯಲ್ಪಡುವ ನಗರ ಹುಬ್ಬಳ್ಳಿ. ಕರ್ನಾಟಕ ರಾಜ್ಯದಲ್ಲಿರುವ ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ಹೆಗ್ಗುರುತು ಎಂದೆ ಹೇಳಬಹುದು. ಭಾರತದಲ್ಲಿ ಯಾವ ರೀತಿಯಾಗಿ ಮುಂಬೈ ನಗರವು ಅತ್ಯಂತ ರಭಸದ ಜೀವನ, ಉಲುವು, ಜೀವ ಕಳೆ ಹಾಗೂ ವಾಣಿಜ್ಯ ಕೇಂದ್ರವಾಗಿ ಮಿಂಚುತ್ತದೆಯೋ ಅದೇ ರೀತಿಯಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿ ಮೊದಲಿನಿಂದಲೂ ಅತ್ಯಂತ ಕ್ರಿಯಾಶೀಲ, ಚಟುವಟಿಕೆಯುಕ್ತ ನಗರವಾಗಿದ್ದುದರಿಂದ ಇದಕ್ಕೆ ಚೋಟಾ ಬಾಂಬೆ ಅಥವಾ ಚಿಕ್ಕ ಬಾಂಬೆ (ಇಂದಿನ ಮುಂಬೈ) ಪಟ್ಟಣ ಎಂಬ ಹೆಸರು ಬಂದಿದೆ.

ಹೋಟೆಲ್ ಮತ್ತು ವಿಮಾನ ಹಾರಾಟ ದರಗಳ ಮೇಲೆ 50% ರಷ್ಟು ಕಡಿತ, ತ್ವರೆ ಮಾಡಿ!

ಬೆಂಗಳೂರಿನಿಂದ ಸುಮಾರು 412 ಕಿ.ಮೀ ಗಳಷ್ಟು ದೂರದಲ್ಲಿರುವ ಹುಬ್ಬಳ್ಳಿಗೆ ತೆರಳಲು ಬೆಂಗಳೂರಲ್ಲದೆ ರಾಜ್ಯದ ಇತರೆ ನಗರಗಳಿಂದಲೂ ಸಹ ಸಾಕಷ್ಟು ಬಸ್ಸುಗಳು ಹಾಗೂ ರೈಲಿನ ಸಮರ್ಪಕವಾದ ವ್ಯವಸ್ಥೆಯಿದೆ. ಹುಬ್ಬಳ್ಳಿ ಮಹಾನಗರದಲ್ಲಿ ತಂಗಲು ಗ್ರಾಹಕರ ಅಥವಾ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಮಿತವ್ಯಯದಿಂದ ಹಿಡಿದು ದುಬಾರಿ ವೆಚ್ಚದವರೆಗೂ ಹಲವಾರು ಹೋಟೆಲುಗಳು, ವಸತಿಗೃಹಗಳು ದೊರೆಯುತ್ತವೆ. ಇನ್ನೂ ಈ ನಗರದ ಸುತ್ತಮುತ್ತಲು ಆಕರ್ಷಕವಾದ ಪ್ರವಾಸಿ ತಾಣಗಳಿದ್ದು ಒಂದೆರಡು ದಿನಗಳ ಕಾಲ ಪ್ರವಾಸ ಮಾಡಿ ಈ ಸ್ಥಳಗಳಿಗೆ ಭೇಟಿ ನೀಡಿ ಆನಂದಿಸಬಹುದು.

ವಿಶೇಷ ಲೇಖನ : ಬೆಂಗಳೂರಿನಿಂದ ಕನ್ಯಾಕುಮಾರಿ ರಸ್ತೆ ಪ್ರವಾಸ

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಈ ಲೇಖನದ ಮೂಲಕ ಹುಬ್ಬಳಿಯಿಂದ ನಿಮ್ಮ ಸುಂದರ ಪ್ರವಾಸವನ್ನು ಆರಂಭಿಸಿ ಯಾವೇಲ್ಲ ಐತಿಹಾಸಿಕ, ಪ್ರವಾಸಿ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡುತ್ತ ಮತ್ತೆ ಹುಬ್ಬಳ್ಳಿಗೆ ಮರಳಬಹುದೆಂಬುದರ ಕುರಿತು ತಿಳಿಯಿರಿ. ಹುಬ್ಬಳ್ಳಿಯಿಂದ ಬಾಡಿಗೆ ಕಾರು ಪಡೆದು ಈ ಪ್ರವಾಸ ಮಾಡುವುದು ಬಹು ಉತ್ತಮ.

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ನಗರ ಸುತ್ತಾಟದ ನಂತರ ಈ ಪ್ರವಾಸ ಆರಂಭಿಸುತ್ತ ಮೊದಲಿಗೆ 8 ಕಿ.ಮೀ ದೂರವಿರುವ ಅಮರಗೋಳಕ್ಕೆ ಭೇಟಿ ನೀಡಿ (ಇದು ಹುಬ್ಬಳ್ಳಿ ಬಳಿಯ ಅಮರಗೋಳ). ಧಾರವಾಡ ತಾಲೂಕಿನಲ್ಲಿರುವ ಈ ಪುಟ್ಟ ಗ್ರಾಮವು ಬನಶಂಕರಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. 13 ನೆಯ ಶತಮಾನದಲ್ಲಿ ನಿರ್ಮಿತವಾದ ಈ ಬನಶಂಕರಿ ದೇವಸ್ಥಾನವು ನಗರ ಶೈಲಿಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದ್ದು ವಜ್ರಾಕೃತಿಯ ರಚನೆಗಳಿಗೆ ಹೆಸರುವಾಸಿಯಾಗಿದೆ. ಇದರ ಸನಿಹದಲ್ಲೆ ಜಕಣಾಚಾರಿಯಿಂದ ನಿರ್ಮಿತವಾದ ಶಂಕರಲಿಂಗ ದೇಗುಲವನ್ನೂ ಸಹ ಕಾಣಬಹುದು.

ಚಿತ್ರಕೃಪೆ: Abhijeet Rane

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಅಮರಗೋಳದ ಬನಶಂಕರಿ ದೇವಸ್ಥಾನದ ದರುಶನದ ನಂತರ ರಾಜ್ಯ ಹೆದ್ದಾರಿ 34 (ಧಾರವಾಡ - ಸೌದತ್ತಿ ರಸ್ತೆ) ಹಿಡಿದು ಸುಮಾರು 50 ಕಿ.ಮೀ ಕ್ರಮಿಸಿ ಬೆಳಗಾವಿ ಜಿಲ್ಲೆಯ ಪುರಾತಣ ಪಟಣಗಳಲ್ಲಿ ಒಂದಾದ ಸೌದತ್ತಿ ಶ್ರೀಕ್ಷೇತ್ರವನ್ನು ತಲುಪಿ. ಸೌದತ್ತಿಯು ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದ್ದು ಯಲ್ಲಮ್ಮನ ದೇವಸ್ಥಾನಕ್ಕೆ ಹೆಚ್ಚು ಪ್ರಖ್ಯಾತಿ ಪಡೆದಿದೆ. ಇದು ಎಲ್ಲಮ್ಮನ ಗುಡ್ಡ ಎಂಬ ಹೆಸರಿನಿಂದಲೇ ಈ ಭಾಗದಲ್ಲಿ ಜನಜನಿತವಾಗಿದೆ. ಸೌದತ್ತಿಯ ರೇಣುಕಾ ಎಲ್ಲಮ್ಮನ ದೇವಸ್ಥಾನ.

ಚಿತ್ರಕೃಪೆ: Manjunath Doddamani

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ರೇಣುಕ ಎಲ್ಲಮ್ಮನ ದೇವಸ್ಥಾನದ ಹೊರತಾಗಿ ಸೌದತ್ತಿಯಲ್ಲಿರುವ ಕೋಟೆಯು ಸಹ ಪ್ರವಾಸಿ ಆಕರ್ಷಣೆಯಾಗಿದೆ. ಈ ಕೋಟೆಯಲ್ಲಿ ಕಾಡು ಸಿದ್ಧೇಶ್ವರನ ದೇವಸ್ಥಾನವಿದ್ದು ಅಪಾರ್ತವಾಗಿ ಭಕ್ತಾದಿಗಳನ್ನು ಸೆಳೆಯುತ್ತದೆ.

ಚಿತ್ರಕೃಪೆ: Manjunath Doddamani

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಸೌದತ್ತಿ ತಲುಪುವುದಕ್ಕಿಂತ ಮುಂಚೆಯೆ 12 ಕಿ.ಮೀ ದೂರದಲ್ಲಿ ನವೀಲುತೀರ್ಥ ಜಲಾಶಯವನ್ನು ಭೇಟಿ ನೀಡಿ. ಇಲ್ಲಿ ರಾಮಾಪುರ ಎಂಬಲ್ಲಿ ಜೋಗುಳಬಾವಿ ಎಂಬ ತೀರ್ಥ ತಾಣವಿದೆ. ಇಲ್ಲಿ ಭಕ್ತಾದಿಗಳು ಪುಣ್ಯ ಸ್ನಾನ ಮಾಡಿ ನಂತರ ಎಲ್ಲಮ್ಮನಗುಡ್ಡಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manjunath Doddamani

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಸೌದತ್ತಿಯ ಭೇಟಿಯ ನಂತರ ನೇರವಾಗಿ ನರಗುಂದದ ಮೂಲಕ ಸುಮಾರು 80 ಕಿ.ಮೀ ಗಳಷ್ಟು ಕ್ರಮಿಸಿ ಬಾದಾಮಿಯನ್ನು ತಲುಪಬೇಕು. ಬದಾಮಿ ಎಂದ ತಕ್ಷಣ ನೆನಪಾಗುವುದು ಬನಶಂಕರಿ ಅಮ್ಮನವರ ದೇವಸ್ಥಾನ. ಈ ದೇವಸ್ಥಾನವು ತಿಲಕಾರಣ್ಯ ಕಾಡಿನ ಭಾಗದಲ್ಲಿ ನೆಲೆಸಿರುವುದರಿಂದ ದೇವಿಯನ್ನು ವನಶಂಕರಿ ಎಂತಲೂ ಕೂಡ ಕರೆಯಲಾಗುತ್ತದೆ. ಶಾಖಾಂಬರಿ ಅವತಾರವಾದ ಈ ದೇವಿಯ ದೇವಾಲಯವಿರುವುದು ಬದಾಮಿಯಲ್ಲಿರುವ ಚೊಳಚಗುಡ್ಡದಲ್ಲಿ.

ಚಿತ್ರಕೃಪೆ: Nvvchar

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಭೂತನಾಥ ದೇವಾಲಯ: ಬಾದಾಮಿಯಲ್ಲಿರುವ ಪ್ರೇಕ್ಷಣೀಯ ಸ್ಥಳ. 5 ನೇಯ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಾಣವಾದ ಈ ದೇವಾಲಯ ಸಂಕೀರ್ಣದಲ್ಲಿ ಎರಡು ದೇವಾಲಯಗಳಿವೆ. ಕೆರೆಗೆ ಎದುರಾಭಿಮುಖವಾಗಿ ನಿಂತಿರುವ ಈ ದೇವಾಲಯದ ಆರಾಧ್ಯ ದೈವ ಭೂತನಾಥನ ರೂಪದಲ್ಲಿ ಪೂಜಿಸಲ್ಪಡುವ ಶಿವ.

ಚಿತ್ರಕೃಪೆ: Ramnath Bhat

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಬಾದಾಮಿಯು ಗುಹಾ ದೇವಾಲಯಗಳಿಗೆ ಬಹು ಪ್ರಸಿದ್ಧವಾಗಿದೆ. ಸಾಕಷ್ಟು ವಿದೇಶಿ ಪ್ರವಾಸಿಗರು ಈ ಗುಹಾ ದೇವಾಲಯಗಳನ್ನು ಅನ್ವೇಷಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ಗುಹಾ ದೇವಾಲಯ 1: ಮೊದಲನೇಯ ಗುಹಾ ದೇವಾಲಯದಲ್ಲಿ ಇಬ್ಬರು ದ್ವಾರಪಾಲಕರನ್ನು ಕೆತ್ತಲಾಗಿದ್ದು ಒಳಗೆ ಶಿವನ 5 ಅಡಿ ವಿಗ್ರಹವನ್ನು ಕೆತ್ತಲಾಗಿದೆ. ನೃತ್ಯ ಭಂಗಿಯಲ್ಲಿರುವ ಈ ಶಿವನ ವಿಗ್ರಹದಲ್ಲಿ 18 ಕೈಗಳಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Akshatha

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಗುಹಾ ದೇವಾಲಯ 2: ಎರಡನೇಯ ಗುಹೆಯಲ್ಲಿ ದ್ವಾರಪಾಲಕರು ಕಮಲದ ಹೂವನ್ನು ಹಿಡಿದು ನಿಂತಿರುವುದನ್ನು ಗಮನಿಸಬಹುದಾಗಿದೆ. ಪೂರ್ವ ಹಾಗು ಪಶ್ಚಿಮ ಗೋಡೆಗಳಲ್ಲಿ ವರಾಹ ಹಾಗು ತ್ರಿವಿಕ್ರಮರ ಬೃಹತ್ ಚಿತ್ರಗಳಿವೆ.

ಚಿತ್ರಕೃಪೆ: Akshatha

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಗುಹಾ ದೇವಾಲಯ 3: ಮೂರನೇಯ ಗುಹಾ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದ್ದು ಬೃಹತ್ ಹಾಗು ಸುಂದರವಾಗಿದೆ. ಪರವಸುದೇವ, ಭೂವರಾಹ, ಹರಿಹರ ಹಾಗು ನರಸಿಂಹರ ತೇಜಸ್ಸು ತುಂಬಿದ ವಿಗ್ರಹಗಳನ್ನು ಇಲ್ಲಿ ಗಮನಿಸಬಹುದಾಗಿದೆ.

ಚಿತ್ರಕೃಪೆ: Jean-Pierre Dalbéra

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಗುಹಾ ದೇವಾಲಯ 4: ನಾಲ್ಕನೇಯ ಗುಹೆಯು ಜೈನ ಮತಕ್ಕೆ ಸಂಬಂಧಿಸಿದ ದೇವಾಲಯವಾಗಿದೆ. ಮೂರನೆ ಗುಹೆಯ ಪೂರ್ವಕ್ಕೆ ಈ ದೇವಾಲಯವಿರುವುದನ್ನು ಕಾಣಬಹುದು. ಜೈನ ತೀರ್ಥಂಕರರ, ಯಕ್ಷ, ಯಕ್ಷಿಯರ ಚಿತ್ರಗಳನ್ನು ಇಲ್ಲಿನ ಖಂಬಗಳ ಮೇಲೆ ಕೆತ್ತಿರುವುದನ್ನು ಗಮನಿಸಬಹುದಾಗಿದೆ.

ಚಿತ್ರಕೃಪೆ: Dineshkannambadi

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಬಾದಾಮಿಯ ಸ್ಥಳ ವೀಕ್ಷಣೆಯ ನಂತರ ಬಾದಾಮಿ ತೊರೆದು ರಾಜ್ಯ ಹೆದ್ದಾರಿ 14 ರ ಮೂಲಕ 21 ಕಿ.ಮೀ ಗಳಷ್ಟು ದೂರ ಸಾಗಿ ಐತಿಹಾಸಿಕ ಪ್ರಸಿದ್ಧ ಸ್ಥಳವಾದ ಪಟ್ಟದಕಲ್ಲನ್ನು ತಲುಪಿ. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಒಂದು ಪ್ರಸಿದ್ಧ ಐತಿಹಾಸಿಕ ಆಕರ್ಷಣೆಗಳುಳ್ಳ ಪ್ರವಾಸಿ ಸ್ಥಳವಾಗಿದೆ. ಇಲ್ಲಿ ಸಾಕಷ್ಟು ರಾಷ್ಟ್ರೀಯ ಸ್ಮಾರಕಗಳಿವೆ. ಮಲ್ಲಿಕಾರ್ಜುನ ದೇವಸ್ಥಾನ ಒಂದು ರಾಷ್ಟ್ರೀಯ ಸ್ಮಾರಕವಾಗಿದ್ದು ಗುರುತರವಾದ ಆಕರ್ಷಣೆಯಾಗಿದೆ.

ಚಿತ್ರಕೃಪೆ: Mukul Banerjee

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ವಿರೂಪಾಕ್ಷ ದೇವಸ್ಥಾನ: ಪಟ್ಟದಕಲ್ಲಿನಲ್ಲಿರುವ ವಿರೂಪಾಕ್ಷನ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿ ಗಮನ ಸೆಳೆಯುತ್ತದೆ. ಅಲ್ಲದೆ ಇಲ್ಲಿರುವ ರಚನೆಗಳಲ್ಲಿ ವೈವೋಪೇತ ಹಾಗೂ ದೊಡ್ಡದಾದ ದೇಗುಲ ಇದಾಗಿದೆ. ಚಾಲುಕ್ಯ ವಾಸ್ತುಶೈಲಿಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Anil Kusugal

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಗಳಗನಥ ದೇವಾಲಯ: ಪಟ್ಟದಕಲ್ಲಿನ ಗಳಗನಾಥ ದೇವಾಲಯವು ಒಂದು ರಾಷ್ಟ್ರೀಯ ಸ್ಮಾರಕವಾಗಿ ಗಮನ ಸೆಳೆಯುತ್ತದೆ. ಅಂತರಾಳ, ಮುಖಮಂಟಪಗಳನ್ನು ಹೊಂದಿರುವ ಈ ದೇಗುಲವು 8 ನೇಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ.

ಚಿತ್ರಕೃಪೆ: Mukul Banerjee

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಪಟ್ಟದಕಲ್ಲಿನ ಭೇಟಿಯ ನಂತರ ಅಲ್ಲಿಂದ ಕೇವಲ 14 ಕಿ.ಮೀ ಗಳಷ್ಟು ಅಂತರದಲ್ಲಿರುವ ಐಹೊಳೆಯನ್ನು ತಲುಪಿ. ಇದೂ ಸಹ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ತಾಣವಾಗಿದ್ದು ಅದ್ಭುತ ಕಲಾಕೃತಿಗಳ, ವಾಸ್ತುಶಿಲ್ಪದ ಕೆತ್ತನೆಯುಳ್ಳ ಸುಂದರ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. ಚಿತ್ರದಲ್ಲಿರುವುದು ಅಂಬಿಗೇರ್ಗುಡಿಯ ಈ ದೇವಸ್ಥಾನವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Akshatha

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಲಾಡ್ ಖಾನ್ ದೇವಾಲಯ: ಐಹೊಳೆಯ ಗಳಗನಾಥ ದೇವಾಲಯ ಸಂಕೀರ್ಣದಲ್ಲಿರುವ ಲಾಡ್ ಖಾನ್ ದೇವಾಲಯವು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ.

ಚಿತ್ರಕೃಪೆ: Mukul Banerjee

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ರಾವಣ ಫಡಿ : ಐಹೊಳೆಯಲ್ಲಿರುವ ರಾವಣ ಫಡಿ ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಇದೊಂದು ಆರನೇಯ ಶತಮಾನದಲ್ಲಿ ನಿರ್ಮ್ಮಿಸಲಾದ (ಕೆತ್ತಲ್ಪಟ್ಟ) ಗುಹಾ ದೇವಾಲಯವಾಗಿದೆ.

ಚಿತ್ರಕೃಪೆ: Meesanjay

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಚ್ಚಪ್ಪಯ್ಯ ಮಠ: ಐಹೊಳೆಯಲ್ಲಿರುವ ಮತ್ತೊಂದು ಐತಿಹಾಸಿಕ ಹಾಗೂ ರಾಷ್ಟ್ರೀಯ ಸ್ಮಾರಕ ಹುಚ್ಚಪ್ಪಯ್ಯ ಮಠ.

ಚಿತ್ರಕೃಪೆ: Mukul Banerjee

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಐಹೊಳೆಯಲ್ಲಿ ಕಂಡುಬರುವ ಮನೋಹರವಾದ, ಆಕರ್ಷಕ ಕೆತ್ತನೆಗಳ ಪುರಾತನ ದೇಗುಲ ರಚನೆಗಳನ್ನು ವೀಕ್ಷಿಸಿದ ನಂತರ ರಾಜ್ಯ ಹೆದ್ದಾರಿ 133 ಅನ್ನು ಹಿಡಿದು ಸುಮಾರು 41 ಕಿ.ಮೀ ಗಳಷ್ಟು ಪ್ರಯಾಣ ಬೆಳೆಸಿ ಗಜೇಂದ್ರಗಡ ಪಟ್ಟಣವನ್ನು ತಲುಪಿ. ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡವು ಖಂಡಿತವಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ವೀರ ಮದಕರಿಯ ಜೊತೆಗೆ ಹಲವು ಕನ್ನಡ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Manjunath Doddamani

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಈ ಸ್ಥಳವು (ಗಜೇಂದ್ರಗಡ) ಪ್ರಧಾನವಾಗಿ ತನ್ನಲ್ಲಿರುವ ಕಾಲಕಾಲೇಶ್ವರ ದೇವಾಲಯದಿಂದಾಗಿ ಪ್ರಖ್ಯಾತವಾಗಿದೆ. ಇದನ್ನು ದಕ್ಷಿಣ ಕಾಶಿ ಎಂದೂ ಕೂಡ ಕರೆಯಲಾಗುತ್ತದೆ. ಇದೊಂದು ಬೃಹತ್ ಬೆಟ್ಟದ ಮೇಲೆ ಕೆತ್ತಲಾದ ಸುಂದರ ದೇವಾಲಯವಾಗಿದೆ.

ಚಿತ್ರಕೃಪೆ: Manjunath Doddamani

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಗಜೇಂದ್ರಗಡದಿಂದ ಮತ್ತೆ ಪ್ರಯಾಣವನ್ನು ಗದಗ ಪಟ್ಟಣದೆಡೆ ಮುಂದುವರೆಸುತ್ತ ಗದಗ್ ತಲುಪಿ ಅಲ್ಲಿಂದ ಮುಂದೆ ಬಿಂಕದಗಟ್ಟಿ, ಹುಲಗೇರಿ ಮಾರ್ಗವಾಗಿ ಒಟ್ಟಾರೆಯಾಗಿ 78 ಕಿ.ಮೀ ಕ್ರಮಿಸಿ ಅಣ್ಣಿಗೇರಿ ಎಂಬ ಗ್ರಾಮ ತಲುಪಿ. ಕನ್ನಡದ ಆದಿಕವಿ ಪಂಪನ ಜನ್ಮ ಸ್ಥಳವಾದ ಅಣ್ಣಿಗೇರಿಯು ತನ್ನಲ್ಲಿರುವ 11 ನೆಯ ಶತಮಾನದ ದ್ರಾವಿಡ ಶೈಲಿಯ ಅಮೃತೇಶ್ವರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Dineshkannambadi

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಹುಬ್ಬಳ್ಳಿಯ ಸುತ್ತ ಕಿರು ಪ್ರವಾಸ:

ಅಣ್ಣಿಗೇರಿಯ ಭೇಟಿಯ ನಂತರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 63 ರ ಮೂಲಕ 38 ಕಿ.ಮೀ ಚಲಿಸಿ ನೇರವಾಗಿ ಪ್ರವಾಸ ಪ್ರವಾಸ ಪ್ರಾರಂಭಿಸಿದ ಸ್ಥಳವಾದ ಹುಬ್ಬಳ್ಳಿಗೆ ಮರಳಿರಿ.

ಚಿತ್ರಕೃಪೆ: Syedzohaibullah

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X