Search
  • Follow NativePlanet
Share
» »ಮೈಲಾರದ ಲಿಂಗೇಶ್ವರ ಹಾಗೂ ಜೇಜುರಿಯ ಖಂಡೋಬ

ಮೈಲಾರದ ಲಿಂಗೇಶ್ವರ ಹಾಗೂ ಜೇಜುರಿಯ ಖಂಡೋಬ

By Vijay

ಅಖಂಡ ಭಾರತದಲ್ಲಿ ಸಮಯದ ಪ್ರಕೋಪಕ್ಕೆ ಸಿಲುಕಿ ತುಂಡು ತುಂಡುಗಳಾಗಿ ಕಳೆದು ಹೋಗಿರುವ ಪ್ರದೇಶಗಳು, ಕಥೆಗಳು, ದಂತ ಕಥೆಗಳು ಅದೆಷ್ಟೊ. ಇಂದಿಗೂ ಸಹ ಒಂದೊಂದು ಸ್ಥಳಗಳನ್ನು ಅನ್ವೇಷಿಸುತ್ತ ಹೊರಟರೆ ಸಾಕು, ಇನ್ನೂ ಪ್ರವರ್ಧಮಾನಕ್ಕೆ ಬರದ ಸಾಕಷ್ಟು ವಿಚಾರಗಳು, ಕಥೆಗಳು ಹೊರಬರಬಹುದು.

ಅದರಂತೆ ದೇಶದ ಆಯಾ ಭಾಗಗಳಲ್ಲಿ ಹಿಂದೆ ಆಗಿ ಹೋದ ಆದರೆ ಇಂದಿಗೂ ಜೀವಂತವಿದ್ದು ಕೇವಲ ಸ್ಥಳಿಯತೆಗೆ ಮಾತ್ರ ಸೀಮಿತವಾಗಿರುವ ಸಾಕಷ್ಟು ಸಂಪ್ರದಾಯ-ಆಚರಣೆಗಳು ಅನಾವರಣಗೊಳ್ಳಬಹುದು. ಹೀಗೆ ಮೋಜು, ಮಸ್ತಿ, ಸಂತಸ ಕರುಣಿಸುವ ಪ್ರವಾಸದ ಬದಲಾಗಿ ಒಬ್ಬ ಅನ್ವೇಷಕ ಪ್ರವಾಸಿಗನಾಗಿ ಹೊರಟರೆ ಭಾರತದ ವೈವಿಧ್ಯತೆಯ ಶ್ರೀಮಂತಿಕೆಯನ್ನು ಅತಿ ಸನೀಹದಿಂದ ನೋಡುವ ಅವಕಾಶ ಲಭಿಸುತ್ತದೆ.

ನಿಮಗಿಷ್ಟವಾಗಬಹುದಾದ : ರಾಮಕೃಷ್ಣರ ಜೀವನೋದ್ದೇಶ ಸಾರುವ ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಈ ನಿಟ್ಟಿನಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಪುಣೆಗೊಂದು ಪ್ರಯಾಣ ಮಾಡಿದಾಗ ನೋಡಬಹುದಾದ ಎರಡು ಕೌತುಕಮಯ ಸ್ಥಳಗಳೆ ಮೈಲಾರ ಹಾಗೂ ಜೇಜುರಿ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಮೈಲಾರ ಕ್ಷೇತ್ರವಿದೆ. ಹಡಗಲಿಯಿಂದ 40 ಕಿ.ಮೀ ಹಾಗೂ ರಾಣಿಬೆನ್ನೂರಿನಿಂದ 34 ಕಿ.ಮೀ ಗಳಷ್ಟು ದೂರದಲ್ಲಿದೆ ಮೈಲಾರ.

ಮೈಲಾರ ಲಿಂಗೇಶ್ವರದ ಗೊರವಯ್ಯ ನುಡಿದ 2016 ರ ಭವಿಷ್ಯ

ಶಿವನ ಇನ್ನೊಂದು ರೂಪವೆ ಮೈಲಾರ ಲಿಂಗೇಶ್ವರನಾಗಿದ್ದು, ಈ ಮೈಲಾರ ಲಿಂಗೇಶ್ವರನೆ ಮಹಾರಾಷ್ಟ್ರದಲ್ಲಿ ಪ್ರಬಲವಾಗಿ ಪೂಜಿಸಲ್ಪಡುವ ಖಂಡೋಬನಾಗಿದ್ದಾನೆ. ಮಹಾರಾಷ್ಟ್ರದಲ್ಲಿ ಪ್ರಚಲಿತದಲ್ಲಿರುವ ಖಂಡೋಬನೆ ಕರ್ನಾಟಕ ಭಾಗದಲ್ಲಿ ಮೈಲಾರ ಲಿಂಗೇಶನಾಗಿ ಹೆಚ್ಚು ಜನಪ್ರೀಯನಾಗಿದ್ದಾನೆ.

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಮೂಲತಃ ಕರ್ನಾಟಕದಲ್ಲಿ ನೆಲೆಸಿರುವ ಗೊರವರು ಅಥವಾ ಗೊರವ ಸಮುದಾಯದವರು ಮೈಲಾರಲಿಂಗನ ಪರಮ ಭಕ್ತರು. ತನ್ನದೆ ಆದ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡಂತಹ ಈ ಕಲೆಯು ಉಪ್ಪಾರರು, ನಾಯಕರು ಹಾಗೂ ಹರಿಜನರಲ್ಲಿ ಕಂಡುಬಂದರೂ ಬಹುತೇಕವಾಗಿ ಪ್ರಚಲಿತದಲ್ಲಿರುವುದು ಕುರುಬ ಜನಾಂಗದವರಲ್ಲಿ.

ಚಿತ್ರಕೃಪೆ: Manjunath Doddamani Gajendragad

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಗೊರವರಲ್ಲಿ ಕೆಲವರು ತಮ್ಮನ್ನು ಮೈಲಾರಲಿಂಗನಿಗೆ ಅರ್ಪಿಸಿಕೊಳ್ಳುತ್ತಾರೆ. ಇದನ್ನು 'ಹೊರೆ ಹೊರುವುದು' ಅಥವಾ 'ದೇವರನ್ನು ಹೊರುವುದು' ಎಂದು ಕರೆಯಲಾಗುತ್ತದೆ. ಸಂತಾನ ವೃದ್ಧಿ, ಕಷ್ಟ ನಿವಾರಣೆ ಹೀಗೆ ಕೆಲವು ಇಷ್ಟಾರ್ಥ ಸಿದ್ಧಿಗಳಿಗಾಗಿ ಈ ರೀತಿಯ ಹರಕೆಯನ್ನು ಮಾಡಿಕೊಳ್ಳುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಗೊರವರಿಗೆ ಹೊಂದಿಕೊಂಡಂತೆ ಮೈಲಾರ ಲಿಂಗೇಶನ ಕುರಿತು ಒಂದು ಅದ್ಭುತವಾದ ದಂತಕಥೆಯಿದೆ. ಅದರ ಪ್ರಕಾರ, ಹಿಂದೆ ಮಲ್ಲಾಸುರ ಹಾಗೂ ಮಣಿಕಾಸುರ ಎಂಬ ದಾನವ ಸಹೋದರರಿದ್ದರು. ಬ್ರಹ್ಮನ ಕುರಿತು ಕಠಿಣವಾದ ತಪಗೈದು ತಮಗೆ ಯಾವೊಬ್ಬ ಮನುಷ್ಯನಿಂದಲೂ ಸಾವು ಅಥವಾ ಅಪಾಯ ಸಂಭವಿಸದಂತೆ ವರ ಪಡೆದಿದ್ದರು.

ಚಿತ್ರಕೃಪೆ: Manjunath Doddamani Gajendragad

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಇದರಿಂದ ಹೆಚ್ಚು ಶಕ್ತಿ ಶಾಲಿಗಳಾದ ಅವರು ಹಿಂದೆ ಮುಂದೆ ಯೋಚಿಸದೆ ಜನ, ಋಷಿ-ಮುನಿಗಳಿಗೆಲ್ಲ ತೊಂದರೆ, ಕಿರುಕುಳ ಕೊಡಹತ್ತಿದರು. ಯಾರು ಎಷ್ಟು ಪ್ರಯತ್ನಿಸಿದರೂ ದೈತ್ಯ ಸಹೋದರರಿಗೆ ಸ್ವಲ್ಪ ಮಟ್ಟಿಗಾದರೂ ಸರಿ ಹಾನಿ ಮಾಡಲಾಗಲಿಲ್ಲ. ಇದರಿಂದ ಬೇಸತ್ತ ಎಲ್ಲರೂ ಶಿವ ಮೊರೆ ಹೋದರು.

ಚಿತ್ರಕೃಪೆ: Manjunath Doddamani Gajendragad

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಜನರು, ಸಾಧುಗಳಿಗೆಲ್ಲ ಅಭಯ ಹಸ್ತ ನೀಡಿದ ಶಿವನು ಮೈಲಾರನಾಗಿ ಜನ್ಮ ಪಡೆದು ಏಳು ಕೋಟಿ ಗೊರವರನ್ನು ಕಲೆ ಹಾಕಿ ದೈತ್ಯರೊಡನೆ ಯುದ್ಧ ಸಾರಿದನು. ಯುದ್ಧದ ಸಮಯದಲ್ಲಿ ವೀರಭದ್ರನು ತನ್ನ ಜಡೆಗಳನ್ನು ರಭಸವಾಗಿ ಭೂಮಿಯ ಮೇಲೆ ಅಪ್ಪಳಿಸಿದನು. ಆಗ ಅಲ್ಲಿ ಭಯಂಕರವಾದ ಕಂಚವೀರರು ಜನ್ಮ ತಳೆದು ದೈತ್ಯ ಸಹೋದರರ ಸೇನೆಯ ಮೇಲೆ ದಾಳಿ ಮಾಡಿ ಕೊನೆಗೆ ಇಬ್ಬರೂ ಸಹೋದರರನ್ನು ಹಿಡಿದು ಮೈಲಾರನಿಗೆ ಅರ್ಪಿಸಿದರು.

ಚಿತ್ರಕೃಪೆ: Manjunath Doddamani Gajendragad

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಮೊದಲೆ ಬೆಂಕಿಯಂತಾಗಿದ್ದ ಸಾಕ್ಷಾತ್ ಶಿವನ ರೂಪದ ಮೈಲಾರನು ಇಬ್ಬರನ್ನು ವಧಿಸಿ ಅವರ ಕರಳನ್ನು ತಲೆಯ ಮೇಲೆ ಪಟಕದಂತೆ ಧರಿಸಿ, ಚರ್ಮವನ್ನು ವಸ್ತ್ರವಾಗಿ ಧರಿಸಿ, ಹಲ್ಲುಗಳನ್ನು ಹಾರದಂತೆಯೂ ಹಾಕಿಕೊಂಡು ಆ ಪಾಪಿಗಳ ಕೃರತನದಿಂದ ಜನರನ್ನು ಮುಕ್ತಗೊಳಿಸಿದನು.

ಚಿತ್ರಕೃಪೆ: Manjunath Doddamani Gajendragad

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಅಂದಿನಿಂದ ಗೊರವರ ಪಾಲಿಗೆ ಆರಾಧ್ಯ ದೈವನಾಗಿ ಮೈಲಾರ ಲಿಂಗೇಶನು ಪ್ರಸಿದ್ಧನಾಗಿದ್ದಾನೆ. ವಾರ್ಷಿಕವಾಗಿ ಜರುಗುವ ಮೈಲಾರ ಲಿಂಗೇಶನ ಜಾತ್ರೆಯು ಕರ್ನಾಟಕದಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜನರು ಈ ಜಾತ್ರೆಗೆ ಬರುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಫೆಬ್ರುವರಿ ಸಮಯದಲ್ಲಿ ಜರುಗುವ ಈ ಜಾತ್ರೆಯು ಬಲು ಮುಖ್ಯವಾಗಿ ಗೊರವಯ್ಯನಿಂದ ಒಂದೆ ವಾಕ್ಯದಲ್ಲಿ ನುಡಿಯಲಾಗುವ ಭವಿಷ್ಯವಾಣಿಗೆ ಹೆಚ್ಚು ಜನಪ್ರೀಯವಾಗಿದೆ. ಗೊರವ ಸಮುದಾಯದ ಯಾರಾದರೊಬ್ಬರು 12 ದಿನಗಳ ಕಾಲ ಉಪವಾಸ, ವೃತಾದಿಗಳನ್ನು ಕಟ್ಟು ನಿಟ್ಟಾಗಿ ಮಾಡಿ ನಂತರ ಕ್ಷೇತ್ರದಲ್ಲಿರುವ ಬಿಲ್ಲುಗಂಬವೊಂದರ ಮೇಲೆ ಏರಿ ಒಗಟಿನ ರೂಪದಲ್ಲಿ ಒಂದು ವಾಕ್ಯವನ್ನು ನುಡಿಯುತ್ತಾನೆ. ಈ ವಾಕ್ಯವನ್ನು ಸಮರ್ಥವಾಗಿ ಅರ್ಥಿಸಿಕೊಂಡರೆ ಭವಿಷ್ಯ ಏನೆಂದು ಗೊತ್ತಾಗುತ್ತದೆ ಎಂದು ನಂಬಲಾಗಿದೆ.

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಹೀಗೆ ಮೈಲಾರವು ಮೈಲಾರ ಲಿಂಗೇಶನಿಂದಾಗಿ ಧಾರ್ಮಿಕ ಮಹತ್ವವುಳ್ಳ ಕ್ಷೇತ್ರವಾಗಿದ್ದು ಭಕ್ತಾದಿಗಳನ್ನು ಎಲ್ಲೆಡೆಯಿಂದ ಆಕರ್ಷಿಸುತ್ತದೆ. ಇದರಂತೆ ಮಹಾರಾಷ್ಟ್ರದ ಜೇಜುರಿಯ ಖಂಡೋಬನೂ ಸಹ ಮೈಲಾರ ಲಿಂಗೇಶನ ಸಹ ಅವತಾರವಾಗಿ ಪ್ರಸಿದ್ಧಿ ಪಡೆದಿದ್ದಾನೆ.

ಚಿತ್ರಕೃಪೆ: Anant Rohankar

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಖಂಡೋಬ ದೇವರನ್ನು ಸಾಮಾನ್ಯವಾಗಿ ಮಹಾರಾಷ್ಟ್ರ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಆಂಧ್ರಗಳಲ್ಲಿ ಆರಾಧಿಸಲಾಗುತ್ತದೆ.

ಚಿತ್ರಕೃಪೆ: PratibhaS Pawar

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಆಂಧ್ರದಲ್ಲಿ ಮಲ್ಲಣ್ಣನಾಗಿಯೂ, ಕರ್ನಾಟಕದಲ್ಲಿ ಮೈಲಾರನಾಗಿಯೂ ಖಂಡೋಬನನ್ನು ಪೂಜಿಸಲಾಗುತ್ತದೆ. ಖಂಡೋಬ ಮಹಾರಾಷ್ಟ್ರದ ದೇಶಸ್ಥ ಬ್ರಾಹ್ಮಣ ಕುಲದವರ ಮನೆ ದೇವರೂ ಕೂಡ ಹೌದು.

ಚಿತ್ರಕೃಪೆ: Lisa.davis

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಮಹಾರಾಷ್ಟ್ರದ ಜೆಜುರಿಯಲ್ಲಿರುವ ಖಂಡೋಬನ ದೇವಾಲಯವು "ಜೆಜುರಿ ಚಿ ಖಂಡೋಬ" ನೆಂದೆ ಪ್ರಸಿದ್ಧಿ ಪಡೆದಿದೆ. ಜೆಜುರಿಯು ಪುಣೆ ಜಿಲ್ಲೆಯ ಒಂದು ಪಟ್ಟಣವಾಗಿದ್ದು ಪುಣೆ ಮಹಾ ನಗರದಿಂದ ಸುಮರು 38 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಇಲ್ಲಿಗೆ ತೆರಳಲು ಪುಣೆಯಿಂದ ಸಾಕಷ್ಟು ಬಸ್ಸುಗಳು ಹಾಗೂ ರೈಲಿನ ಸೌಕರ್ಯವಿದೆ. ಮತ್ತೊಂದು ಪ್ರಭಾವಿ ಕ್ಷೇತ್ರವಾದ ಸೋಲಾಪುರದಿಂದ ಕೇವಲ 60 ಕಿ.ಮೀ ದೂರವಿದೆ.

ಚಿತ್ರಕೃಪೆ: Ashishbagate13

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ವಿಶೇಷವೆಂದರೆ ಖಂಡೋಬನು ಒಬ್ಬ ಸಂಯುಕ್ತ ದೇವರ ಅವತಾರವಾಗಿದ್ದು ಶಿವ, ಭೈರವ, ಸೂರ್ಯ ಹಾಗೂ ಕಾರ್ತಿಕೇಯನ ಗುಣಲಕ್ಷಣಗಳನ್ನು ಹೊಂದಿರುವ ದೈವಿ ಅವತಾರ ಎನ್ನಲಾಗಿದೆ.

ಚಿತ್ರಕೃಪೆ: Ashishbagate13

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಇಷ್ಟೆ ಏಕೆ ಖಂಡೋಬನನ್ನು ಕೆಲ ಮುಸ್ಲಿಮರು ಕೂಡ ಪರಿಪಾಲಿಸುತ್ತಾರೆ. ಮುಸ್ಲಿಮರು ಖಂಡೋಬನನ್ನು ಮಲ್ಲು ಖಾನ್ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಇನ್ನೂ ಕೆಲವರು ಮಾರ್ತಾಂಡ ಭೈರವನೆಂದೂ ಪೂಜಿಸುತ್ತಾರೆ.

ಚಿತ್ರಕೃಪೆ: Ashishbagate13

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಖಂಡೋಬನಿಗೆ ಐವರು ಪತ್ನಿಯರಿದ್ದು ಅವರಲ್ಲಿ ಒಬ್ಬಳು ಮುಸ್ಲಿಮ್ ಸಮುದಾಯದವಳಾಗಿದ್ದಳು ಎನ್ನಲಾಗುತ್ತದೆ. ಅಲ್ಲದೆ ಪಠಾಣಿ ವೇಷಭೂಷಣದಲ್ಲಿ ಖಂಡೋಬನು ಕುದುರೆ ಸವಾರಿ ಮಾಡುತ್ತಿದ್ದ ಹಾಗೂ ಅವನ ಕುದುರೆಯ ಪರಿಪಾಲಕನು ಒಬ್ಬ ಮುಸ್ಲಿಮ್ ಮತದವನಾಗಿದ್ದ. ಆದ್ದರಿಂದ ಇಂದಿಗೂ ಖಂಡೋಬನ ಕುದುರೆಗಳನ್ನು ಸಾಂಪ್ರದಾಯಿಕವಾಗಿ ಮುಸ್ಲಿಮ್ ಕುಟುಂಬವೊಂದು ಜೆಜುರಿಯಲ್ಲಿ ನಿರ್ವಹಿಸುತ್ತಿದೆ.

ಚಿತ್ರಕೃಪೆ: Ranepictography

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಇಲ್ಲಿನ ಸ್ಥಳ ಪುರಾಣದಂತೆ, ಹಿಂದೆ ಈ ಪ್ರದೇಶದಲ್ಲಿ ಮಣಿ, ಮಲ್ಲರೆಂಬ ಇಬ್ಬರು ದೈತ್ಯರಿದ್ದರು. ಬ್ರಹ್ಮನನ್ನು ಕುರಿತು ಅವರು ಕಠೋರವಾದ ತಪಸ್ಸು ಮಾಡಿ ಬ್ರಹ್ಮನಿಂದ ಅವಿನಾಶಿಗಳೆಂದು ವರ ಪಡೆದಿದ್ದರು. ನಂತರ ಪ್ರದೇಶದಲ್ಲಿ ಆತಂಕ ಸೃಷ್ಟಿ ಮಾಡಿದ್ದರು. ಯಜ್ಞ ಯಾಗಾದಿಗಳನ್ನು ವಿಘ್ನಗೊಳಿಸುತ್ತಿದ್ದರು. ಋಷಿ ಮುನಿಗಳನ್ನು ಹಿಂಸಿಸುತ್ತಿದ್ದರು. ಇದರಿಂದ ದೇವತೆಗಳಿಗೆ ಹವಿಸ್ಸು ಸಿಗಲಾರದೆ ವಿಷ್ಣು ಹಾಗೂ ಬ್ರಹ್ಮನ ಬಳಿ ತೆರಳಿ ಸಹಾಯ ಕೇಳಿದರು.

ಚಿತ್ರಕೃಪೆ: Ranepictography

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಕೊನೆಗೆ ಅಲ್ಲಿಯೂ ದಾರಿ ತೋರದೆ ಶಿವನ ಬಳಿ ಹೋಗಿ ತಮ್ಮ ಚಿಂತಾಜನಕ ಪರಿಸ್ಥಿತಿಯನ್ನು ವಿವರಿಸಿದರು. ಅದಕ್ಕೆ ಶಿವನು ಸ್ಪಂದಿಸುತ್ತ ಖಂಡೋಬನಾಗಿ ಜನ್ಮ ಎತ್ತಿ ಬಂಗಾರದಂತೆ [ಬಂಗಾರದಂತಹ ಗಿರಿಧಾಮ]ಹೊಳೆಯುತ್ತ ಕುದುರೆಯ ಮೇಲೆ ಆರೂಢನಾಗಿ ಬಂದು ಮಣಿ ಮಲ್ಲರನ್ನು ಸಂಹರಿಸುತ್ತಾನೆ ಎನ್ನುತ್ತದೆ ಪೌರಾಣಿಕ ಕಥೆ.

ಚಿತ್ರಕೃಪೆ: Ashishbagate13

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಇಂದಿಗೂ ಜೆಜುರಿಯ ದೇವಸ್ಥಾನದಲ್ಲಿ ಅರಿಷಿಣವು ಎಲ್ಲೆಲ್ಲೂ ಹರಡಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಈ ಸ್ಥಳವು ಐತಿಹಾಸಿಕವಾಗಿಯೂ ಒಂದು ಪ್ರಮುಖ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ಮರಾಠಾ ವೀರ ದೊರೆ ಛತ್ರಪತಿ ಶಿವಾಜಿ ಮಹಾರಾಜನು ಈ ಒಂದು ಸ್ಥಳದಲ್ಲೆ ತನ್ನ ತಂದೆಯಾದ ಶಹಾಜಿಯನ್ನು ಬಹು ಸಮಯದ ನಂತರ ಇಲ್ಲಿ ಭೇಟಿ ಮಾಡಿದ್ದನು.

ಚಿತ್ರಕೃಪೆ: Vithu.123

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ನವಂಬರ್ ತಿಂಗಳಿನಲ್ಲಿ ಖಂಡೋಬ ದೇವರ ವಾರ್ಷಿಕೋತ್ಸವವನ್ನು ಅತಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸುತ್ತಮುತ್ತಲಿನ ಪ್ರದೇಶಗಳಿಂದ ಬಂದು ಪಾಲ್ಗೊಳ್ಳುತ್ತಾರೆ. ಅಲ್ಲದೆ ದಸರಾ ಉತ್ಸವವನ್ನೂ ಕೂಡ ಇಲ್ಲಿ ಆಚರಿಸಲಾಗುತ್ತದೆ. ವಿಶೇಷವಾಗಿ ದಸರಾ ಸಂದರ್ಭದಲ್ಲಿ ಖಡ್ಗವನ್ನು ಮೇಲೆ ಎತ್ತಿ ಗರಿಷ್ಠ ಸಮಯದವರೆಗೆ ಹಿಡಿಯುವ ಸ್ಪರ್ಧೆಯಂತೂ ಆಕರ್ಷಕವಾಗಿರುತ್ತದೆ. ಜೇಜುರಿಯಲ್ಲಿ ಅದ್ದೂರಿಯ ಗಣೇಶೋತ್ಸವದ ಒಂದು ಸಂದರ್ಭ.

ಚಿತ್ರಕೃಪೆ: Dharmadhyaksha

ಮೈಲಾರ ಹಾಗೂ ಜೇಜುರಿ:

ಮೈಲಾರ ಹಾಗೂ ಜೇಜುರಿ:

ಜೆಜುರಿಗೆ ಪುಣೆಯಿಂದ ಸುಲಭವಾಗಿ ತೆರಳಬಹುದಾಗಿದೆ. ರೈಲಾಗಲಿ, ಬಸ್ಸಾಗಲಿ ಪುಣೆ ನಗರದಿಂದ ಜೆಜುರಿಗೆ ತೆರಳಲು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ. ಇನ್ನು ತಂಗಲು ಬಯಸಿದರೆ ಈ ಬೆಟ್ಟ ಕ್ಷೇತ್ರದ ಸುತ್ತಮುತ್ತಲು ತಂಗುದಾಣ ಹಾಗೂ ವಸತಿ ಗೃಹಗಳು ಲಭ್ಯವಿದೆ.

ಚಿತ್ರಕೃಪೆ: Ashishbagate13

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X