Search
  • Follow NativePlanet
Share
» »ಹೃದಯ ತುಂಬುವ ನಂಜನಗೂಡಿನಿಂದ ನೀಲಂಬೂರು ಪ್ರವಾಸ

ಹೃದಯ ತುಂಬುವ ನಂಜನಗೂಡಿನಿಂದ ನೀಲಂಬೂರು ಪ್ರವಾಸ

By Vijay

ಕರ್ನಾಟಕ ಹಾಗೂ ಕೇರಳವನ್ನು ಒಂದಕ್ಕೊಂದು ಬೆಸೆಯುವ ನಂಜನಗೂಡಿನಿಂದ ಕೇರಳದ ನಿಲಂಬೂರಿಗೆ ಸಂಪರ್ಕ ಕಲ್ಪಿಸುವ ಹೊಸ ರೈಲಿನ ಕೂಗು ಈ ಭಾಗದ ಜನರಿಂದ ಹಿಂದಿನಿಂದಲೂ ಇದ್ದೆ ಇತ್ತು. ಪ್ರಸಕ್ತ 2016 ರಲ್ಲಿ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ಮಾನ್ಯ ಮಂತ್ರಿಗಳಿಂದ ಮಂಡಿಸಲಾದ ಬಜೆಟ್ ನಲ್ಲಿ ಆ ಕೂಗಿಗೆ ಸ್ಪಂದನೆ ಸಿಕ್ಕಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ ಎಂತಲೇ ಹೇಳಬಹುದು.

ಹೌದು, ಪ್ರಸಕ್ತ 2016-17 ರ ರೈಲು ಬಜೆಟ್ ನಲ್ಲಿ ಕರ್ನಾಟಕದ ನಂಜನಗೂಡಿನಿಂದ ಕೇರಳದ ನೀಲಂಬೂರಿಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆಗೆ ಅನುಮೋದನೆ ದೊರೆತಿದೆ. ಇನ್ನೂ ಈ ಯೋಜನೆ ಅನುಷ್ಠಾನಗೊಂಡು ರೈಲು ಸಂಚಾರ ಪ್ರಾಂರಂಭವಾದರೆ ಎರಡೂ ರಾಜ್ಯಗಳ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಮಹತ್ವ ದೊರಕುವುದು ನಿಸ್ಸಂದೇಹ.

ನಿಮಗಿಷ್ಟವಾಗಬಹುದಾದ : ನೆಮ್ಮದಿಯ ಕಂಬಲಕೊಂಡ ಅರಣ್ಯದಲ್ಲೊಂದು ಸುತ್ತು

ನಂಜನಗೂಡು ಹಾಗೂ ನೀಲಂಬೂರು ಕ್ರಮವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯದ ಎರಡು ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ. ನಂಜನಗೂಡು ಧಾರ್ಮಿಕ ತಾಣವಾಗಿ ಪ್ರಸಿದ್ಧಿ ಪಡೆದಿದ್ದರೆ ನಿಲಂಬೂರು ಪ್ರಾಕೃತಿಕ ಸೊಬಗಿನಿಂದ ಜನಮನ್ನಣೆಯನ್ನುಗಳಿಸಿದೆ. ಧಾರ್ಮಿಕತೆ, ಪ್ರಕೃತಿ ಸುಂದರ್ಯ ಎರಡೂ ಅಂಶಗಳು ಬೆರೆತಿರುವ ಈ ತಾಣಗಳಿಗೆ ಭೇಟಿ ನೀಡುವುದೆಂದರೆ ಯಾರಿಗಾದರೂ ಸರಿ, ಸಂತಸ ಉಂಟಾಗದೆ ಇರಲಾರದು.

ಪ್ರಸ್ತುತ ಲೇಖನದಲ್ಲಿ ನಂಜನಗೂಡು ಹಾಗೂ ಅಲ್ಲಿಂದ ಸುಲ್ತಾನ್ ಬತೇರಿಯ ಮೂಲಕವಾಗಿ ನೀಲಂಬೂರಿಗೆ ರಸ್ತೆಯ ಮುಖಾಂತರ ಒಂದು ಸುಂದರ ಪ್ರವಾಸ ಮಾಡುವುದರ ಕುರಿತು ತಿಳಿಯಿರಿ. ರಸ್ತೆಯ ಮೂಲಕ ಇವೆರಡು ಸ್ಥಳಗಳ ಮಧ್ಯೆ ಇರುವ ಅಂತರ 150 ಕಿ.ಮೀ. ತದನಂತರ ಭವಿಷ್ಯದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಿದಾಗ ಅದರ ಆನವಂದವನ್ನು ಪಡೆಯಿರಿ.

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡು : ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಕ್ಷೇತ್ರವು ಶ್ರೀಕಂಠೇಶ್ವರ / ನಂಜುಂಡೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧಿ ಪಡೆದಿರುವ ಪಟ್ಟಣವಾಗಿದೆ. ಕಪಿಲಾ (ಕಬಿನಿ) ನದಿ ತಟದಲ್ಲಿ ನೆಲೆಸಿರುವ ಈ ಕ್ಷೇತ್ರವು ಭಕ್ತವೃಂದದಲ್ಲಿ "ದಕ್ಷಿಣ ಕಾಶಿ" ಎಂದು ಕರೆಯಲ್ಪಟ್ಟಿದ್ದು ಅತಿ ಪುರಾತನವಾದಂತಹ ಶ್ರೀಕಂಠೇಶ್ವರ ದೇಗುಲದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Dineshkannambadi

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡು ಬೆಂಗಳೂರಿನಿಂದ 163 ಕಿ.ಮೀ ಗಳಷ್ಟು ದೂರವಿದ್ದು, ಮೈಸೂರಿನಿಂದ ಕೇವಲ 30 ಕಿ.ಮೀಗಳಷ್ಟು ಅಂತರದಲ್ಲಿದೆ. ನಂಜನಗೂಡು ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಮೈಸೂರಿನಿಂದ ಇಲ್ಲಿಗೆ ರೈಲುಗಳು ದೊರೆಯುತ್ತವೆ. ಅಲ್ಲದೆ ಮೈಸೂರು ಒಂದು ಮಹಾನಗರವಾಗಿದ್ದು ಇಲ್ಲಿಗೆ ತಲುಪಲು ಭಾರತದ ಹಲವು ಪ್ರಮುಖ ನಗರಗಳಿಂದ ರೈಲುಗಳು ದೊರೆಯುತ್ತವೆ.

ಚಿತ್ರಕೃಪೆ: Sharanabasaveshwar

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಪುರಾಣದ ಪ್ರಕಾರ, ಸುರರು ಹಾಗೂ ಅಸುರರು ನಡೆಸುತ್ತಿದ್ದ ಸಮುದ್ರ ಮಂಥನದ ಸಂದರ್ಭದಲ್ಲಿ ಒಂದು ಸಲ ಅತ್ಯಂತ ಪ್ರಭಾವಶಾಲಿಯಾದ ಕಾರ್ಕೋಟಕ ವಿಷವು ಉತ್ಪನ್ನವಾಯಿತು. ಅದರ ಪ್ರಭಾವದಿಂದ ಇನ್ನೂ ಜಗತ್ತೆ ನಾಶ ಹೊಂದುವ ಸಂದರ್ಭ ಎದುರಾದಾಗ ಪರಮ ಶಿವನು ಈ ಅವಘಡವನ್ನು ತಡೆಯುವ ಉದ್ದೇಶದಿಂದ ತಾನೆ ಸ್ವತಃ ಆ ವಿಷವನ್ನು ನುಂಗಿಬಿಟ್ಟ. ನಂತರ ಪಾರ್ವತಿ ದೇವಿಯು ಆ ವಿಷವು ಶಿವನ ದೇಹದಲ್ಲಿ ಪಸರಿಸದಂತೆ ಕುತ್ತಿಗೆ ಹಿಡಿದು ಸರ್ಪವನ್ನು ಸುತ್ತಿದಳು. ಈ ರೀತಿಯಾಗಿ ಶಿವನಿಗೆ ನೀಲಕಂಠ, ನಂಜುಂಡೇಶ್ವರ ಎಂದು ಕರೆಯಲಾಯಿತು. ಶಿವನ ಈ ರೂಪವಿರುವ ದೇವಾಲಯವೆ ನಂಜುಂಡೇಶ್ವರ. ಕನ್ನಡದಲ್ಲಿ ನಂಜು ಎಂದರೆ ವಿಷ ಎಂಬ ಅರ್ಥವೂ ಸಹ ಇದೆ. ಕಪಿಲಾ ನದಿ ತಟ.

ಚಿತ್ರಕೃಪೆ: Nayvik

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಲ್ಲಿರುವ ನಂಜುಂಡೇಶ್ವರ ದೇವಸ್ಥಾನವು ಅತಿ ಪುರಾತನವಾದ ದೇಗುಲವಾಗಿದ್ದು, ಆಕರ್ಷಕ ಕೆತ್ತನೆಗಳನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ವರ್ಷಕ್ಕೆ ಎರಡು ಬಾರಿ ದೊಡ್ಡ ಜಾತ್ರೆ ಹಾಗೂ ಚಿಕ್ಕ ಜಾತ್ರೆಗಳನ್ನು ಇಲ್ಲಿ ಆಯೊಜಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಸಾವಿರಾರು ಜನ ಇಲ್ಲಿ ನೆರೆಯುತ್ತಾರೆ.

ಚಿತ್ರಕೃಪೆ: Barry Silver

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡು ಕೇವಲ ಪುಣ್ಯ ಕ್ಷೇತ್ರವಾಗಿರಲಾರದೆ ಹಲವಾರು ವಿಶೇಷತೆಗಳನ್ನೂ ಸಹ ಹೊಂದಿರುವ ತಾಣವಾಗಿದೆ. ಅಂತಹ ಕೆಲವು ವಿಶೇಷತೆಗಳನ್ನು ಮುಂದಿನ ಸ್ಲೈಡುಗಳಲ್ಲಿ ಒಂದೊಂದಾಗಿ ಓದಿರಿ. ಅಂದ ಹಾಗೆ ಈ ಪಟ್ಟಣವು ವಿವಿಧ ರೀತಿಯ ಬಾಳೆ ಹಣ್ಣುಗಳಿಗಾಗಿಯೂ ಹೆಸರು ಮಾಡಿದೆ. ನಂಜನಗೂಡಿನ ರಸಬಾಳೆ ಎಲ್ಲೆಡೆಯೂ ಲೋಕಪ್ರಿಯವಾಗಿದೆ.

ಚಿತ್ರಕೃಪೆ: Sarvagnya

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಸಮುದ್ರ ಮಂಥನದಲ್ಲಿ ಶಿವನು ಹಾಲಾಹಲ ವಿಷ ಸೇವಿಸಿದ ಪ್ರಸಂಗದ ನಂತರ ಲಕ್ಷ್ಮಿ ದೇವಿಯು ಉದ್ಭವವಾಗಿ, ವಿಷ್ಣುವನ್ನು ಕುರಿತು ವಿವಾಹವಾಗಲು ಬಯಸಿದಳು ಹಾಗೂ ತಂದೆಯ ಆದೇಶದಂತೆ ನಂಜನಗೂಡಿಗೆ ತೆರಳಿ ಶಿವನನ್ನು ಕುರಿತು ತಪಸ್ಸು ಆಚರಿಸಿದಳು. ಇದರಿಂದ ಪ್ರಸನ್ನನಾದ ಶಿವನು ವಿಷ್ಣು-ಲಕ್ಷ್ಮಿಯರ ಕಲ್ಯಾಣವನ್ನು ನೆರವೇರಿಸಿದನು.

ಚಿತ್ರಕೃಪೆ: Pavithrah

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಮತ್ತೊಂದು ಕಥೆಯ ಪ್ರಕಾರ, ಕೇಸಿ ಎಂಬ ಅಸುರನು ಒಂದೊಮ್ಮೆ ಇಲ್ಲಿ ತನ್ನ ಅನಾಚಾರದಿಂದ ಭಯದ ವಾತಾವರಣ ಸೃಷ್ಟಿಸಿದ್ದ. ಒಂದೊಮ್ಮೆ ಶಿವನು ದೈತ್ಯನನ್ನು ಯಜ್ಞ ಕುಂಡದೆದೆ ತಂದು ಉರಿದು ಬೂದಿಯಾಗಿ ಮಾಡಿದ ನಂತರ ಆ ಬೂದಿಯನ್ನು ಶಿವನು ಸೇವಿಸಿದ. ಆ ಬೂದಿಯ ಪ್ರಭಾವ ಎಷ್ಟಿತ್ತೆಂದರೆ ಸ್ವತಃ ಶಿವನು ಕೆಲಕಾಲ ದೈಹಿಕವಾಗಿ ಬಳಲಿದ. ಆದ್ದರಿಂದ, ಇಂದಿಗೂ ಸಹ ದೇಹಬಾಧೆಯಿರುವ ಅನೇಕರು ಇಲ್ಲಿಗೆ ಬಂದು ಶಿವನನ್ನು ಕುರಿತು ದೇಹ ಸ್ಥಿತಿ ಸರಿಹೋಗುವಂತೆ ಪ್ರಾರ್ಥಿಸುತ್ತಾರೆ.

ಚಿತ್ರಕೃಪೆ: Sekhar gunturu

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ರಾಷ್ಟ್ರೀಯ ಹೆದ್ದಾರಿ 212 ಅನ್ನು ಬಳಸಿಕೊಂಡು ನಂಜನಗೂಡಿನ ದಕ್ಷಿಣಕ್ಕೆ 38 ಸಾಗಿದರೆ ದೊರೆಯುವ ಒಂದು ಪುಟ್ಟ ಹಾಗೂ ಸುಂದರ ಸ್ಥಳವೆ ಗುಂಡ್ಲುಪೇಟೆ. ಚಾಮರಾಜನನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಗುಂಡ್ಲುಪೇಟೆ, ಊಟಿ ಹಾಗೂ ವಯನಾಡ್ ತಲುಪುವ ಮುಂಚೆ ದೊರೆಯಬಹುದಾದ ಕರ್ನಾಟಕ ರಾಜ್ಯದ ಕೊನೆಯ ಪಟ್ಟಣವಾಗಿದ್ದು ಉಪಹಾರ ಕೇಂದ್ರಗಳು ಇಲ್ಲಿ ಲಭ್ಯವಿದೆ. ಗುಂಡ್ಲುಪೇಟೆಯ ಸುತ್ತ ಮುತ್ತ ಸಾಕಷ್ಟು ಭವ್ಯವಾದ ತಾಣಗಳಿವೆ. ಅವೆಲ್ಲ ತಾಣಗಳಿಗೆ ಇದೊಂದು ವಿಶ್ರಾಂತ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

ಚಿತ್ರಕೃಪೆ: Prof tpms

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನಿಮಗಿಷ್ಟವಿದ್ದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಬಹುದು. ಗುಂಡ್ಲುಪೇಟೆಯಿಂದ ಸುಮಾರು 15 ಕಿ.ಮೀ ಗಳಷ್ಟು ಮಾತ್ರವೆ ದೂರದಲ್ಲಿರುವ ಈ ತಾಣವು ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ವೇಣುಗೊಪಾಲ ಸ್ವಾಮಿಯ ದೇಗುಲಕ್ಕೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Dhruvaraj S

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಬಂಡೀಪುರ ರಾಷ್ಟ್ರೀಯ ಉದ್ಯಾನ : ವನ್ಯಜೀವಿಗಳ ವೀಕ್ಷಣೆ, ಜಂಗಲ್ ಸಫಾರಿ ಮುಂತಾದವುಗಳನ್ನು ಇಷ್ಟಪಡುವವರು ಸಹ ಗುಂಡ್ಲುಪೇಟೆಯಿಂದ 12 ಕಿ.ಮೀ ಗಳಷ್ಟು ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಬಹುದು. ನಿಜ ಹೇಳಬೇಕೆಂದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ಉದ್ಯಾನದ ವ್ಯಾಪ್ತಿಯಲ್ಲೆ ಬರುತ್ತದೆ.

ಚಿತ್ರಕೃಪೆ: Yathin S Krishnappa

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಹುಲುಗನಮುರಡಿ ಬೆಟ್ಟವೂ ಸಹ ಗುಂಡ್ಲುಪೇಟೆಯಿಂದ ಕೇವಲ 22 ಕಿ.ಮೀ ದೂರದಲ್ಲಿರುವ ಪ್ರವಾಸಿ ಆಕರ್ಷಣೆಯ ಬೆಟ್ಟ ತಾಣವಾಗಿದೆ. ಈ ಬೆಟ್ಟದ ತುದಿಯಲ್ಲಿರುವ ವೆಂಕಟರಮಣಸ್ವಾಮಿಯ ದೇಗುಲ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Philanthropist 1

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಗುಂಡ್ಲುಪೇಟೆಯ ನಂತರ ಪಶ್ಚಿಮಕ್ಕೆ ರಾಅಷ್ಟ್ರೀಯ ಹೆದ್ದಾರಿ 212 ಬಳಸಿಕೊಂಡು ಕೇರಳ ಪ್ರವೇಶಿಸಿ ಸುಲ್ತಾನ್ ಬತೇರಿಯನ್ನು ತಲುಪಬಹುದು. ವಯನಾಡ್ ಜಿಲ್ಲೆಯಲ್ಲಿರುವ ಐತಿಹಾಸಿಕ ಶ್ರೀಮಂತಿಕೆಯುಳ್ಳ ಪ್ರವಾಸಿ ಕ್ಷೇತ್ರ ಇದಾಗಿದೆ.

ಚಿತ್ರಕೃಪೆ: Nijusby

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಅನೇಕ ಐತಿಹಾಸಿಕ ಹಾಗೂ ಇತರೆ ಆಕರ್ಷಣೆಗಳನ್ನು ಸುಲ್ತಾನ್ ಬತೇರಿಯಲ್ಲಿ ನೋಡಬಹುದಾಗಿದ್ದು ಇಲ್ಲಿರುವ ಒಂದು ಪ್ರಮುಖ ತಾಣವೆಂದರೆ ಜೈನ ದೇವಾಲಯ. ಇದನ್ನು ಸುಲ್ತಾನ್ ಬತೇರಿ ಜೈನ ದೇವಾಲಯ ಎಂದೆ ಕರೆಯಲಾಗುತ್ತದೆ.

ಚಿತ್ರಕೃಪೆ: Manojk

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಸುಲ್ತಾನ ಬತೇರಿಯ ನಂತರ ದಕ್ಷಿಣಕ್ಕೆ ಸುಮಾರು 75 ಸಾಗಿದಾಗ ದೊರೆಯುವ ಸ್ಥಳವೆ ನೀಲಂಬೂರು. ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್, ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Wikipedia

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿಕ ಸೌಂದರ್ಯವು ಹೃದಯಸ್ಪರ್ಶಿಯಾಗಿರುವುದಲ್ಲದೆ, ಅನನ್ಯ ವನ್ಯಜೀವಿ, ಆಕರ್ಷಕ ಮತ್ತು ರೋಮಾಂಚಕ ನೀರಿನ ಜಲಧಾರೆಯನ್ನೂ ಹೊಂದಿದೆ. ಮಲಬಾರ್ ವಸಾಹತು ಇತಿಹಾಸದಲ್ಲಿ ಒಂದು ವಿಶೇಷ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ.

ಚಿತ್ರಕೃಪೆ: Vengolis

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನೀಲಗಿರಿ ಬೆಟ್ಟಗಳು, ಎರ್ನಾಡು, ಪಾಲಕ್ಕಾಡ್ ಮತ್ತು ಕ್ಯಾಲಿಕಟ್ ಪಟ್ಟಣಗಳು ನೀಲಾಂಬುರ್ ನಗರದ ಗಡಿಗಳಾಗಿದ್ದು, ಚಲಿಯಾರ್ ನದಿಯ ದಡದಲ್ಲಿದೆ, ಹಿತಕರವಾದ ಹಸಿರು ಮತ್ತು ಫಲವತ್ತಾದ ಭೂಮಿ ಹೊಂದಿದೆ. ಉತ್ತಮ ಸಂಪರ್ಕವಿದ್ದು ಇದರ ಹತ್ತಿರದ ಪಟ್ಟಣಗಳೆಂದರೆ ಮಲಪ್ಪುರಂ ಪಟ್ಟಣ (40 ಕಿ.ಮೀ), ಕೋಯಿಕೋಡ್ (72 ಕಿ.ಮೀ), ತ್ರಿಶೂರ್ (120 ಕಿ.ಮೀ), ಗುದಲುರ್(50 ಕಿ.ಮೀ) ಮತ್ತು ಊಟಿ (100 ಕಿ.ಮೀ). ನೆರೆಯ ಪಟ್ಟಣಗಳಿಗೆ ಮತ್ತು ಜಿಲ್ಲೆಗಳಿಗೆ ಈ ಮೂಲಕವೂ ಪ್ರವೇಶಿಸಬಹುದು.

ಚಿತ್ರಕೃಪೆ: PP Yoonus

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ವಿಶ್ವದ ಅತ್ಯಂತ ಪ್ರಖ್ಯಾತ ಮತ್ತು ಹಳೆಯ ಸಾಗವಾನಿ ನೆಡುತೋಪು ಎಂದು ನಿಲಂಬೂರ್ ಪ್ರಖ್ಯಾತಿ ಹೊಂದಿದೆ. ಇದು ಪ್ರತಿ ವರ್ಷ ಸಾವಿರಾರು ಜನರನ್ನು ಆಕರ್ಷಿಸುವ ಭಾರತದ ಮೊದಲ ಸಾಗವಾನಿ ಮ್ಯೂಸಿಯಂ ಆಗಿದೆ. ಸಸ್ಯ ಪ್ರೇಮಿ ಹಾಗೂ ತೇಗದ ಮರದ ಬಗ್ಗೆ ತಿಳಿಯಲು ಬಯಸುವ ಪ್ರವಾಸಿಗರಿಗೆ ಮ್ಯೂಸಿಯಂನ ಸಿಬ್ಬಂದಿಗಳು ಎಲ್ಲ ವಿವರಣೆಗಳನ್ನು ಕೊಡುತ್ತಾರೆ.

ಚಿತ್ರಕೃಪೆ: Vengolis

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಇಲ್ಲಿ ವಿಶ್ವದ ಅತಿ ಎತ್ತರದ ಮತ್ತು ದೊಡ್ಡ ತೇಗದ ಮರವನ್ನು ಕಾಣಬಹುದಾಗಿದ್ದು, ಸಾಗವಾನಿ ಸಂರಕ್ಷಣೆ ಮತ್ತೊಂದು ವಿಶ್ವ ದಾಖಲೆಯನ್ನು ಈ ಪಟ್ಟಣದ ಹೆಸರಿನಲ್ಲಿ ದೃಢೀಕರಿಸಲಾಗಿದೆ. ಇದು ಸಮೃದ್ಧವಾದ ಬಿದಿರಿಗೂ ಪ್ರಸಿದ್ಧಿಯಾಗಿದೆ. ನಿಲಿಂಬಾ (ಬಿದಿರು) ಎನ್ನುವ ಪದ ಈ ಊರಿಗೆ ನಿಲಂಬೂರ್ ಎಂದು ಹೆಸರಿಸಲು ಕಾರಣವಾಯಿತು. ಕರ್ನಾಟಕದ ಬಂಡಿಪುರ ಅಭಯಾರಣ್ಯ, ತಮಿಳುನಾಡಿನ ಮುತುಮಲೈ ಅಭಯಾರಣ್ಯ, ಕೇರಳದದ ವಾಯನಾಡ್ ಅಭಯಾರಣ್ಯಗಳ ಸಾಲಿನಲ್ಲಿ ಇದು ಕೂಡ ಸೆರ್ಪಡೆಯಾಗುತ್ತದೆ.

ಚಿತ್ರಕೃಪೆ: Vengolis

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ತೇಗದಿಂದಾಗಿ ನಿಲಂಬೂರ್ ಅರಣ್ಯಗಳು ರೋಸ್ ವುಡ್ಸ್, ಮಹೋಗಾನಿ ಮತ್ತು ವೆಂಟೀಕ್ ಮರಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಕೇರಳದ ಪ್ರಾಚೀನ ಬುಡಕಟ್ಟಿನ ಗುಂಪುಗಳಾದ ಚೊಲಯ್ನಿಕನ್ಸ ಜನಾಂಗದವರು ಇಲ್ಲಿ ನೆಲೆಸಿದ್ದಾರೆ.

ಚಿತ್ರಕೃಪೆ: Dpradeepkumar

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನಿಲಂಬೂರ್ ನಲ್ಲಿ ನೋಡಬಹುದಾದಂತಹ ಸ್ಥಳಗಳು ಸಾಕಷ್ಟಿವೆ. ಕೊನೊಲ್ಲಿ ಕಥಾವಸ್ತು ಮತ್ತು ತೇಗದ ಮ್ಯೂಸಿಯಂ ಪಟ್ಟಣದ ಅತ್ಯಧಿಕ ಭೇಟಿ ನೀಡಲ್ಪಡುವ ಪ್ರವಾಸೀ ಆಕರ್ಷಣೆಯ ತಾಣವಾಗಿದ್ದಲ್ಲದೆ, ಅದ್ಯಂಪಾರಾ ಫಾಲ್ಸ್ ಮತ್ತು ವೆಲ್ಲಂತೊಡೆ ಫಾಲ್ಸ್ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Sidheeq

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ನೆಡುನಾಯಕಮ್ ನಿಲಂಬೂರ್ ನ ಇನ್ನೊಂದು ಪ್ರಮುಖ ಸ್ಥಾನಗಳಲ್ಲಿ ಒಂದಾಗಿದೆ. ಅದರ ಮಳೆಕಾಡು, ಆನೆ ಶಿಬಿರಗಳು ಮತ್ತು ಮರದ ಮನೆಗಳು ಹೆಸರುವಾಸಿಯಾಗಿದೆ. ಬಯೋ ರಿಸೌರ್ಸಸ್ ಪಾರ್ಕ್ ಆಫ್ ನಿಲಂಬೂರ್, ನಿಸರ್ಗ ಪ್ರೇಮಿಗಳನ್ನು ಇನ್ನೂ ಆಕರ್ಷಿಸುತ್ತದೆ ಹಾಗೂ ಇಲ್ಲಿರುವ ಬಟರ್ಫ್ಲೈ ಪಾರ್ಕ್ ಕೂಡ ಪ್ರಸಿದ್ದಿಯಾಗಿದೆ.

ಚಿತ್ರಕೃಪೆ: Dhruvaraj S

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಹೊಸ ಅಮರಾಂಬಲಮ್ ಸಂರಕ್ಷಿತ ಅರಣ್ಯ, ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಪಾರ್ಕ್ ಪಕ್ಷಿಗಳ ಅಪರೂಪದ ತಳಿಗಳಿಗೆ ವಾಸಸ್ಥಾನವಾಗಿದೆ. ನಿಲಂಬೂರ್ ನ ಕೊವಿಲಕಮ್ ಹಾಗೂ ವೆಟ್ಟಕ್ಕೊರುಮಕನ್ ಪ್ರಮುಖ ದೇವಸ್ಥಾನವಾಗಿದ್ದು ವರ್ಷವಿಡೀ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.

ಚಿತ್ರಕೃಪೆ: Prof tpms

ನಂಜನಗೂಡಿನಿಂದ ನೀಲಂಬೂರು:

ನಂಜನಗೂಡಿನಿಂದ ನೀಲಂಬೂರು:

ಸುಂದರ ಪರಿಸರ ಹಾಗೂ ಪ್ರಶಾಂತತೆ ಪ್ರವಾಸಿಗನನ್ನು ಮಂತ್ರಮುಗ್ಧನನ್ನಾಗಿಸುತ್ತದೆ. ಇಲ್ಲಿ ಉತ್ತಮ ರೆಸಾರ್ಟುಗಳು ಮತ್ತು ಹೋಮ್ ಸ್ಟೆಗಳು ಲಭ್ಯವಿದ್ದು ಆಹ್ಲಾದಕರ ಸಾಂಪ್ರದಾಯಿಕ ಮಲಬಾರ್ ಭೋಜನಕ್ಕೆ ಮನಸೋಲುವುದರಲ್ಲಿ ಸಂದೇಹವಿಲ್ಲ.

ಚಿತ್ರಕೃಪೆ: Vengolis

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more