Search
  • Follow NativePlanet
Share
» »ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ

ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ

ದಟ್ಟವಾದ ಹಸಿರು ಕಾಡುಗಳು, ಎತ್ತರದ ಜಲಪಾತಗಳು, ಮತ್ತು ಪ್ರಾಚೀನ ದೇವಾಲಯಗಳು ಇವೆಲ್ಲವುಗಳನ್ನು ಒಳಗೊಂಡ ಉತ್ತರ ಕನ್ನಡ ಜಿಲ್ಲೆಯ ಶಿರ್ಸಿಯನ್ನು ಹೆಸರು ವಾಸಿಯಾದ ತಾಣವನ್ನಾಗಿಸಿದೆ. ಈ ಪಟ್ಟಣವು ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿರುವ ಈ ಪಟ್ಟಣವು ಬೆಂಗಳೂರಿನಿಂದ ಸುಮಾರು 407 ಕಿ.ಮೀ ದೂರದಲ್ಲಿದೆ.

bheemangudda-viewpoint

ಶಿರ್ಸಿಯಲ್ಲಿ ಏನೆಲ್ಲಾ ನೋಡಬಹುದು? - ಶಿರ್ಸಿಯಲ್ಲಿ ಮತ್ತು ಅದರ ಸುತ್ತಮುತ್ತ ನೋಡಬಹುದಾದ ಪ್ರವಾಸಿ ಸ್ಥಳಗಳು

ಶಿರ್ಸಿ ಒಂದು ಸಣ್ಣ ನಯನ ಮನೋಹರವಾದ ಸ್ಥಳವಾಗಿದ್ದು, ಅಘನಾಶಿನಿ ನದಿಯು ಶಿರಸಿಯ ಹತ್ತಿರದಲ್ಲಿರುವ ದೋನಿಹಲ್ಲದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಾ . ಭವ್ಯವಾದ ಜಲಪಾತಗಳನ್ನು ಸೃಷ್ಟಿಸುತ್ತಾ ಶಿರಸಿಯ ಕಲ್ಲಿನ ಬೆಟ್ಟಗಳ ಕೆಳಗಿನಿಂದ ಧಾವಿಸುತ್ತದೆ. ಈ ಪಟ್ಟಣವು ಭಾರೀ ಮಾನ್ಸೂನ್ ಮಳೆಯಿಂದ ಆಶೀರ್ವದಿಸಲ್ಪಟ್ಟಿದೆ ಮತ್ತು ವನ್ಯಜೀವಿಗಳಿಂದ ಸಮೃದ್ಧವಾದ ಉಷ್ಣವಲಯದ ಕಾಡುಗಳನ್ನು ಹೊಂದಿದೆ. ಈ ನೈಸರ್ಗಿಕ ಸೌಂದರ್ಯವು ಶಿರಸಿಯನ್ನು ಸಾಕಷ್ಟು ಜನಪ್ರಿಯ ತಾಣವನ್ನಾಗಿ ಮಾಡುತ್ತದೆ.

16 ನೇ ಶತಮಾನದ ಮಾರಿಕಾಂಬಾ ದೇವಾಲಯವು ಇಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಅಲ್ಲದೆ ಮಹಾ ಗಣಪತಿ ದೇವಸ್ಥಾನವೂ ಅಷ್ಟೇ ಜನಪ್ರಿಯವಾಗಿದ್ದು, ಯಾವುದೇ ಹೊಸ ಉದ್ಯಮವನ್ನು ಪ್ರಾರಂಭಿಸುವ ಮೊದಲು ಭಗವಂತನ ಆಶೀರ್ವಾದ ಪಡೆಯಲು ಭಕ್ತರು ಈ ದೇವಾಲಯಕ್ಕೆ ಸೇರುತ್ತಾರೆ.

ಈ ದೇವಾಲಯಕ್ಕೆ ಭೇಟಿ ಕೊಡುವವರು ಎಂದಿಗೂ ನಿರಾಸೆಗೊಳಗಾಗುವುದಿಲ್ಲ ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಇಲ್ಲಿ ಭೇಟಿ ಕೊಡಬಹುದಾದ ಪ್ರಮುಖ ಸ್ಥಳಗಳಲ್ಲಿ ಬನವಾಸಿ, ಸಹಸ್ರಲಿಂಗ ಮತ್ತು ಉಣ್ಚಿಲ್ ಜಲಪಾತಗಳು ಮುಂತಾದವುಗಳು ಸೇರಿವೆ. ಬನವಾಸಿ ಕರ್ನಾಟಕದ ಹಿಂದಿನ ರಾಜಧಾನಿಯಾಗಿದ್ದ ಪುರಾತನ ನಗರವಾಗಿದ್ದು, ಸಹಸ್ರಲಿಂಗವು ದಟ್ಟವಾದ ಕಾಡಿನ ಮಧ್ಯದಲ್ಲಿರುವ ನದಿಯಲ್ಲಿ ಲೀನವಾದ ಸಾವಿರಾರು ಶಿವಲಿಂಗಗಳನ್ನು ಒಳಗೊಂಡಿದೆ.

sirsifort

ಶಿರ್ಸಿಯನ್ನು ತಲುಪುವುದು ಹೇಗೆ?

ಶಿರ್ಸಿಯನ್ನು ತಲುಪುವುದು ಸುಲಭ. ಹತ್ತಿರದ ವಿಮಾನ ನಿಲ್ದಾಣವು ಹುಬ್ಬಳ್ಳಿಯಲ್ಲಿ ಸುಮಾರು 100 ಕಿಮೀ ದೂರದಲ್ಲಿದೆ ಮತ್ತು ಈ ಪ್ರದೇಶವು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

sirsitemple

ಶಿರ್ಸಿಗೆ ಭೇಟಿ ಕೊಡಲು ಸೂಕ್ತ ಸಮಯ

ಈ ಸುಂದರವಾದ ಪಟ್ಟಣವನ್ನು ಅನ್ವೇಷಿಸಲು ಚಳಿಗಾಲದ ತಿಂಗಳುಗಳು ಉತ್ತಮ ಸಮಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X