Search
  • Follow NativePlanet
Share
» »ವೈಭವೋಪೇತ ಪರಂಪರೆಯನ್ನು ಕಂಡ ಭವ್ಯ ಅವೇಶೇಷಗಳ ಭೂಮಿ - ಹಳೆಬೀಡು

ವೈಭವೋಪೇತ ಪರಂಪರೆಯನ್ನು ಕಂಡ ಭವ್ಯ ಅವೇಶೇಷಗಳ ಭೂಮಿ - ಹಳೆಬೀಡು

ಹಳೆಬೀಡು ಹೆಸರೇ ಸೂಚಿಸುವಂತೆ "ಹಳೆಯ ಪಟ್ಟಣ" ಎಂದು ಅರ್ಥೈಸುತ್ತದೆ. ಒಂದು ಕಾಲದಲ್ಲಿ ಹೊಯ್ಸಳರ ವೈಭವೋಪೇತ ರಾಜಧಾನಿಯಾಗಿತ್ತು. ಹಿಂದಿನ ಕಾಲದಲ್ಲಿ ಇದನ್ನು "ಸಮುದ್ರಕ್ಕೆ ಬಾಗಿಲು" ಎಂದು ಅರ್ಥೈಸುವ ದ್ವಾರಸಮುದ್ರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು.

exteriorview-halebidu-1

ರಾಜಧಾನಿ ಬೆಂಗಳೂರಿನಿಂದ 184 ಕಿ.ಮೀ ಅಂತರದಲ್ಲಿರುವ ಹಾಸನ ಜಿಲ್ಲೆಯಲ್ಲಿರುವ ಹಳೇಬೀಡು ಸಾಂಸ್ಕೃತಿಕ ನಗರ ಮೈಸೂರಿನಿಂದ ಸುಮಾರು 118 ಕಿ.ಮೀ ದೂರದಲ್ಲಿದೆ. ಈ ನಗರವು 12ನೇ ಶತಮಾನದ ವೈಭವವನ್ನು ಅನುಭವಿಸಿದ್ದಾಗಿದೆ. ಬಹಮನಿ ಸುಲ್ತಾನನಿಂದ ಎರಡು ಬಾರಿ ಲೂಟಿ ಮಾಡಿದ ನಂತರ ನಗರವನ್ನು ನಂತರ ಹಳೇಬೀಡು ಎಂದು ಕರೆಯಲಾಯಿತು.

halebidu -temple-2

ಈ ಗತವೈಭವವನ್ನು ಸಾರುವ ನಗರದ ತಾಣಗಳು ಮತ್ತು ಶಬ್ದಗಳು - ಹಳೆಬೀಡಿನಲ್ಲಿರುವ ಪ್ರವಾಸಿ ತಾಣಗಳು

ಕೇತುಮಲ್ಲ ನಿರ್ಮಿಸಿದ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಾಲಯಗಳು ಆಗಿನ ದೊರೆ ಮತ್ತು ಅವನ ರಾಣಿ ವಿಷ್ಣುವರ್ಧನ ಮತ್ತು ಶಾಂತಲೆಗೆ ಗೌರವಾರ್ಥವಾಗಿ ನಿರ್ಮಿಸಿದ್ದಾಗಿದೆ. ಹೊಯ್ಸಳೇಶ್ವರನ ದೇವಾಲಯವು ಏಕಶಿಲೆಯ ನಂದಿಯಿಂದ ರಕ್ಷಿಸಲ್ಪಟ್ಟಿದೆ. 12 ನೇ ಶತಮಾನದ ಆಡಳಿತಗಾರರು ಜೈನ ಧರ್ಮವನ್ನು ಅನುಸರಿಸುತ್ತಿದ್ದರೂ, ಈ ಪ್ರದೇಶದಲ್ಲಿ ಅನೇಕ ಶಿವ ದೇವಾಲಯಗಳನ್ನು ಕಾಣಬಹುದು ಮತ್ತು ಹಳೆಯ ದಿನಗಳ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ದೇವಾಲಯದ ಸುತ್ತಮುತ್ತಲಿನ ಕೆತ್ತನೆಗಳು ಮತ್ತು ಶಿಲ್ಪಗಳಲ್ಲಿ ಸುಂದರವಾಗಿ ಸೆರೆಹಿಡಿಯಬಹುದಾಗಿದೆ.

FAQ's
  • ಹಳೇಬೀಡು ತಲುಪುವುದು ಹೇಗೆ

    ಕಲೆ ಮತ್ತು ವಾಸ್ತುಶಿಲ್ಪದಿಂದ ಸಮೃದ್ಧವಾಗಿರುವ ಈ ನಗರವು ಬೇಲೂರಿನಿಂದ ಸುಮಾರು 16 ಕಿಮೀ ದೂರದಲ್ಲಿದೆ, ಇದು ಚೆನ್ನಕೇಶವ ದೇವಾಲಯಕ್ಕೆ ಬಹಳ ಪ್ರಸಿದ್ಧವಾಗಿದೆ. ಹಳೇಬೀಡು ದೇಶದ ಪಾರಂಪರಿಕ ತಾಣಗಳಲ್ಲಿ ಒಂದಾಗಿದ್ದು, ಭೇಟಿ ನೀಡಲೇಬೇಕಾದ ತಾಣವಾಗಿದೆ.

  • ಹಳೆಬೀಡಿಗೆ ಭೇಟಿ ಕೊಡಲು ಉತ್ತಮ ಸಮಯ

    ಈಗ ಪಾಳುಬಿದ್ದ ನಗರವಾಗಿದ್ದರೂ ಕ್ಕೂಡಾ ಇದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಳೇಬೀಡಿಗೆ ಭೇಟಿ ನೀಡಲು ವರ್ಷದ ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಜನವರಿ. 2001 ರ ಜನಗಣತಿಯ ಪ್ರಕಾರ 8962 ಜನಸಂಖ್ಯೆಯನ್ನು ಹೊಂದಿರುವ ನಗರವು ರಾಜ್ಯದ ಇತರ ಭಾಗಗಳಿಗೆ ಬಸ್‌ಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X