Search
  • Follow NativePlanet
Share
» »ಶಾರದಾಂಬೆಯ ಆವಾಸ ಸ್ಥಾನವಾದ ಶೃಂಗೇರಿಗೆ ಒಂದು ಪ್ರಯಾಣ

ಶಾರದಾಂಬೆಯ ಆವಾಸ ಸ್ಥಾನವಾದ ಶೃಂಗೇರಿಗೆ ಒಂದು ಪ್ರಯಾಣ

ಶೃಂಗೇರಿಯು ಒಂದು ಬೆಟ್ಟಗಳ ಪಟ್ಟಣವಾಗಿದ್ದು ಇದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಈ ಸ್ಥಳವು ಶ್ರೀ ಆದಿ ಶಂಕರರು 8ನೇ ಶತಮಾನದಲ್ಲಿ ಅವರ ಮೊದಲನೇ ಮಠವನ್ನು ಸ್ಥಾಪಿಸಿದ ಸ್ಥಳವಾಗಿದೆ.ತುಂಗಾ ನದಿಯ ದಡದಲ್ಲಿರುವ ಈ ಮಠವು ಶ್ರೀಶೃಂಗೇರಿ ಶಾರದಾ ಪೀಠವೆಂದು ಕರೆಯಲ್ಪಡುತ್ತದೆ.

ಶೃಂಗೇರಿ ಎಂಬ ಹೆಸರನ್ನು ಋಷ್ಯಶೃಂಗ ಗಿರಿಯಿಂದ ತೆಗೆದುಕೊಳ್ಳಲಾಗಿದ್ದು, ಇದು ಋಷಿ ವಿಬಂಡಕ ಮತ್ತು ಅವನ ಮಗ ಋಷ್ಯಶೃಂಗನು ಈ ಬೆಟ್ಟದಲ್ಲಿಯೇ ವಾಸ ಮಾಡುತ್ತಿದ್ದ ಎಂದು ನಂಬಲಾಗುತ್ತದೆ. ಋಷ್ಯಶೃಂಗನು ರಾಮಾಯಣದ ಬಾಲಕಾಂಡದಲ್ಲಿ ಒಂದು ಕಥೆಯಲ್ಲಿ ಬರುತ್ತಾನೆ, ಅಲ್ಲಿ ಋಷಿಯು ರೋಮಪಾದನ ಬರಪೀಡಿತ ರಾಜ್ಯಕ್ಕೆ ಮಳೆಯನ್ನು ತಂದನೆಂದು ನಂಬಲಾಗಿದೆ.

ಶೃಂಗೇರಿ

ಶೃಂಗೇರಿ

ಶೃಂಗೇರಿಯು ಒಂದು ದೇವಾಲಯ ನಗರವಾಗಿದ್ದು, ಶಾರಾದಾಂಬ ಎಂಬ ಹೆಸರಿನಿಂದ ಕರೆಯಲ್ಪಡುವ ಸರಸ್ವತಿ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಶಾರದಾಂಬ ದೇವಾಲಯದ ಹೊರತಾಗಿಯೂ ಈ ನಗರವು ಶಿವ ದೇವಾಲಯ ಮತ್ತು ವಿದ್ಯಾ ಶಂಕರ ದೇವಾಲಯಗಳಿಗೂ ಹೆಸರುವಾಸಿಯಾಗಿದೆ.

ಶಾರದಾಂಬಾ ದೇವಾಲಯವನ್ನು 8 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ನಿರ್ಮಿಸಿದರು. ಈ ದೇವಾಲಯದಲ್ಲಿ ಶ್ರೀಗಂಧದ ಮರದಿಂದ ಮಾಡಿದ ದೇವಿಯ ವಿಗ್ರಹವನ್ನು ಆದಿ ಶಂಕರರು ಸ್ಥಾಪಿಸಿದರು, ಆದರೆ 14 ನೇ ಶತಮಾನದಲ್ಲಿ ಇದನ್ನು ಬದಲಿಸಿ ಕುಳಿತಿರುವ ಆಸನದ ಭಂಗಿಯಲ್ಲಿ ದೇವಿಯ ಚಿನ್ನದ ವಿಗ್ರಹವನ್ನು ಸ್ಥಾಪಿಸಲಾಗಿ ಇಲ್ಲಿಯವರೆಗೂ ಅದನ್ನೇ ಪೂಜಿಸಲಾಗುತ್ತದೆ.

ಈ ದೇವಾಲಯವು ಸ್ಫಟಿಕದ ಲಿಂಗವನ್ನು ಸಹ ಹೊಂದಿದೆ, ಇದನ್ನು ಶಿವನು ಸ್ವತಃ ಆದಿ ಶಂಕರರಿಗೆ ಉಡುಗೊರೆಯಾಗಿ ನೀಡಿದ್ದಾನೆ ಎಂದು ನಂಬಲಾಗಿದೆ. ದೇವಸ್ಥಾನದಲ್ಲಿ ಪ್ರತಿದಿನ ರಾತ್ರಿ 8:30 ಕ್ಕೆ ಚಂದ್ರಮೌಳೀಶ್ವರ ಪೂಜೆಯನ್ನು ನೆರವೇರಿಸಿದಾಗ ಲಿಂಗವನ್ನು ಕಾಣಬಹುದು.

ವಿದ್ಯಾ ಶಂಕರ ದೇವಾಲಯ

ವಿದ್ಯಾ ಶಂಕರ ದೇವಾಲಯ

ವಿದ್ಯಾ ಶಂಕರ ದೇವಾಲಯ ವೈಭವಯುತ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಹೋದರರಾದ ಹರಿಹರ ಮತ್ತು ಬುಕ್ಕರ ಗುರುಗಳಾದ ವಿದ್ಯಾರಣ್ಯರು ವಿದ್ಯಾಶಂಕರ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವನ್ನು ಮಠಾಧೀಶ ವಿದ್ಯಾಶಂಕರರ ಗೌರವಾರ್ಥವಾಗಿ ನಿರ್ಮಿಸಲಾಗಿದ್ದು, ಇದು ಶಿವನಿಗೆ ಅರ್ಪಿತವಾದುದಾಗಿದೆ. ಈ ದೇವಾಲಯವು ವಾಸ್ತುಶಿಲ್ಪ ಅದ್ಬುತವಾಗಿದ್ದು, ವಿಭಿನ್ನವಾದ ಮಾದರಿಗಳನ್ನು ಪ್ರದರ್ಶಿಸುತ್ತದೆ ಇದು ನಿರ್ಮಿಸಿದವರ ಕಲಾ ನೈಪುಣ್ಯತೆಯನ್ನು ಎತ್ತಿ ತೋರಿಸುತ್ತದೆ.

ಸಿರಿಮನೆ ಜಲಪಾತ

ಸಿರಿಮನೆ ಜಲಪಾತ

ಇಲ್ಲಿಂದ 12 ಕಿ.ಮೀ ದೂರದಲ್ಲಿರುವ ಸಿರಿಮನೆ ಜಲಪಾತವು ಪ್ರಮುಖ ಆಕರ್ಷಣೆಯಾಗಿದೆ. ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಹಲವಾರು ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಕಿಗ್ಗಾ ಎಂಬ ಸಣ್ಣ ಹಳ್ಳಿಯಲ್ಲಿ ಕಂಡುಬರುತ್ತದೆ, ಇದನ್ನು ಖಾಸಗಿ ಸಾರಿಗೆಯಿಂದ ಮಾತ್ರ ಪ್ರವೇಶಿಸಬಹುದು.

 ಶೃಂಗೇರಿ ಶಾರದ ಪೀಠ

ಶೃಂಗೇರಿ ಶಾರದ ಪೀಠ

ಶೃಂಗೇರಿ ಶಾರದ ಪೀಠವು ಆದಿ ಶಂಕರರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಒಂದಾಗಿದೆ. ಶಂಕರರು ಸ್ಥಾಪಿಸಿದ ಇತರ ಮಠಗಳು ಪುರಿ, ದ್ವಾರಕಾ ಮತ್ತು ಬದರಿನಾಥದಲ್ಲಿ ಕಂಡುಬರುತ್ತವೆ. ಶಾರದ ಪೀಠವು ಸ್ಮಾರ್ತ ಸಂಪ್ರದಾಯದ ಕೇಂದ್ರವಾಗಿ ಉಳಿದಿದೆ. ಈ ಮಠದ ಮುಖ್ಯಸ್ಥರನ್ನು ಜಗದ್ಗುರು ಎಂದು ಕರೆಯಲಾಗುತ್ತದೆ ಮತ್ತು ಶಂಕರಾಚಾರ್ಯ ಎಂಬ ಬಿರುದನ್ನು ಸಹ ಹೊಂದಿದ್ದಾರೆ. ಪ್ರಸ್ತುತ ಮಠಾಧೀಶರು ಶಂಕರಾಚಾರ್ಯ ಶ್ರೀ ಭಾರತೀ ತೀರ್

FAQ's
  • ಪ್ರಯಾಣಿಸುವ ಮಾರ್ಗಗಳು

    ಬೆಂಗಳೂರಿನಿಂದ ಶೃಂಗೇರಿಗೆ ಒಟ್ಟು ಅಂತರವು ಸುಮಾರು 442 ಕಿಮೀ. ಇದ್ದು ಇದಕ್ಕಾಗಿ ತಲುಪಬಹುದಾದ ಮೂರು ಮಾರ್ಗಗಳಿವೆ, ಅವುಗಳು ಈ ಕೆಳಗಿನಂತಿವೆ:

    ಮಾರ್ಗ 1: ಬೆಂಗಳೂರು - ನೆಲಮಂಗಲ - ಕುಣಿಗಲ್ - ಹಾಸನ - ಬೇಲೂರು - ಚಿಕ್ಕಮಗಳೂರು - ಶೃಂಗೇರಿ ರಾ.ಹೆ 75 ಮೂಲಕ

    ಮಾರ್ಗ 2: ಬೆಂಗಳೂರು - ನೆಲಮಂಗಲ - ತುಮಕೂರು - ಹಿರಿಯೂರು - ತರೀಕೆರೆ - ಕೊಪ್ಪ - ಶೃಂಗೇರಿ ರಾ.ಹೆ 48 ಮತ್ತು ರಾ.ಹೆ 24 ಮೂಲಕ

     

  • ಇಲ್ಲಿಗೆ ತಲುಪುವುದು ಹೇಗೆ?


    ವಿಮಾನದ ಮೂಲಕ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಂದ ಸುಮಾರು 66 ಕಿಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ಕೆಲವು ವಿದೇಶಗಳಿಗೆ ಸಂಪರ್ಕ ಹೊಂದಿದೆ.

     

    ರೈಲಿನ ಮೂಲಕ: ಮಂಗಳೂರು ಜಂಕ್ಷನ್ ಹತ್ತಿರದ ಪ್ರಮುಖ ರೈಲು ಮಾರ್ಗವಾಗಿದ್ದು, ಈ ನಿಲ್ದಾಣವು ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳಿಗೆ ಮತ್ತು ದೇಶದ ವಿವಿಧ ಸ್ಥಳಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

     

    ರಸ್ತೆಯ ಮೂಲಕ: ಶೃಂಗೇರಿಯನ್ನು ತಲುಪಲು ಉತ್ತಮ ಮಾರ್ಗವೆಂದರೆ ರಸ್ತೆಯ ಮೂಲಕ. ಪಟ್ಟಣವು ರಸ್ತೆಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಪ್ರಮುಖ ನಗರಗಳಿಂದ ಶೃಂಗೇರಿಗೆ ಸಾಮಾನ್ಯ ಬಸ್ಸುಗಳು ಕಾರ್ಯನಿರ್ವಹಿಸುತ್ತವೆ.

     

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X