India
Search
  • Follow NativePlanet
Share
» »ಉದ್ಯಾನನಗರಿ ಬೆಂಗಳೂರಿನಿಂದ ಕಡಲತೀರಗಳ ಪಟ್ಟಣ ಮಂಗಳೂರಿನ ಕಡೆಗೆ ಒಂದು ಪ್ರಯಾಣ

ಉದ್ಯಾನನಗರಿ ಬೆಂಗಳೂರಿನಿಂದ ಕಡಲತೀರಗಳ ಪಟ್ಟಣ ಮಂಗಳೂರಿನ ಕಡೆಗೆ ಒಂದು ಪ್ರಯಾಣ

ಕರಾವಳಿಯಲ್ಲಿ ನೆಲೆಸಿರುವ ಮಂಗಳೂರು ಒಂದು ಕರಾವಳಿ ಪಟ್ಟಣವಾಗಿದೆ ಇದು ಬೆಂಗಳೂರಿನಿಂದ ಸುಮಾರು 352 ಕಿ.ಮೀ ದೂರದಲ್ಲಿದೆ. ಮಂಗಳೂರು ದಕ್ಷಿಣಕನ್ನಡ ಜಿಲ್ಲೆಯ ಅತಿದೊಡ್ಡ ನಗರವಾದ್ದು ಮಹಾನಗರವಲ್ಲದಿದ್ದರೂ ಸಾಮಾನ್ಯವಾಗಿ ದೊಡ್ಡ ನಗರಗಳಲ್ಲೊಂದೆನಿಸಿದೆ.

ಈ ನಗರದಲ್ಲಿರುವ ಮಂಗಳಾದೇವಿಯ ದೇವಾಲಯದ ಕಾರಣದಿಂದಾಗಿ ಆ ಹೆಸರನ್ನೇ ನಗರಕ್ಕೆ ಇಡಲಾಗಿದೆ. ಮೊದಲು ಈ ಸ್ಥಳವನ್ನು ಕದಂಬರು ಆಳುತ್ತಿದ್ದು, ನಂತರ ಕೆಳದಿ ನಾಯಕರು ಮತ್ತು ಕೊನೆಯದಾಗಿ ಇದು ಅದು ಪೋರ್ಚುಗೀಸರ ಕೈ ಸೇರಿತು ಮತ್ತು ಅಂತಿಮವಾಗಿ, ಇದನ್ನು 1956 ರಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು.

ಇದು ವಿಜಯನಗರ ಆಳ್ವಿಕೆಯಲ್ಲಿ 1345 ರಲ್ಲಿ ಮೊದಲು ಕಾಣಿಸಿಕೊಂಡಿತ್ತು ಮತ್ತು ಇಲ್ಲಿಯ ಯುಗಗಳಷ್ಟು ಹಳೆಯದಾದ ಅನೇಕ ಕಲ್ಲಿನ ಶಿಲ್ಪಗಳು ಮಂಗಳೂರನ್ನು ಮಂಗಳಾಪುರ ಎಂದು ಉಲ್ಲೇಖಿಸುತ್ತಿದ್ದುದಕ್ಕೆ ಸಾಕ್ಷಿಯಾಗಿವೆ. ಇದು ಅರಬ್ಬೀ ಸಮುದ್ರದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ.

ಮಂಗಳೂರಿನಲ್ಲಿ ತುಳು ಮತ್ತು ಕೊಂಕಣಿ ಪ್ರಮುಖವಾಗಿ ಮಾತನಾಡುವ ಭಾಷೆಯಾಗಿದ್ದರೂ ಸಹ ನಗರದ ಕಾಸ್ಮೋ ವೈಬಿನಿಂದಾಂಗಿ ಇಲ್ಲಿಯ ಜನರು ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳನ್ನೂ ಕೂಡಾ ಚೆನ್ನಾಗಿ ಮಾತನಾಡುತ್ತಾರೆ.

ಬೆಂಗಳೂರಿನಿಂದ ಕುಣಿಗಲ್

ಬೆಂಗಳೂರಿನಿಂದ ಕುಣಿಗಲ್

ಬೆಂಗಳೂರಿನಿಂದ ಕುಣಿಗಲ್ ಗೆ ಸುಮಾರು 70 ಕಿಮೀ ಅಂತರದಲ್ಲಿದ್ದು, ಇಲ್ಲಿಗೆ ತಲುಪಲು ಸುಮಾರು ಒಂದೂವರೆ ಗಂಟೆಗಳು ಬೇಕಾಗುತ್ತದೆ. ಕುಣಿಗಲ್ ನಲ್ಲಿಯ ಸಿದ್ದಲಿಂಗೇಶ್ವರ ದೇವಾಲಯವು ಪ್ರಸಿದ್ದವಾಗಿದ್ದು, ಇದು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿದೆ. ಇದು ವೀರಶೈವ ಗುರುಗಳಾದ ತೊಟದ ಸಿದ್ದಲಿಂಗ ಸ್ವಾಮಿಗಳಿಗೆ ಗೌರವಾರ್ಥವಾಗಿ ಸಮರ್ಪಿತವಾದುದಾಗಿದೆ. ಮಾರ್ಕೋನಹಳ್ಳಿ ಅಣೆಕಟ್ಟು ಸಿಂಷಾ ನದಿಗೆ ಕಟ್ಟಲಾಗಿದೆ. ಈ ಅಣೆಕಟ್ಟು ಮುಖ್ಯವಾಗಿ ಸಿದ್ಧಲಿಂಗೇಶ್ವರ ದೇವಸ್ಥಾನವು ಮುಳುಗದಂತೆ ರಕ್ಷಿಸಲು ನಿರ್ಮಿಸಲಾಗಿದೆ. ಶಿಂಷಾ ನದಿಯ ಘರ್ಜನೆಯ ಸದ್ದಿನ ನಡುವೆ ಪಿಕ್ನಿಕ್ ಮಾಡಲು ಇದು ಸೂಕ್ತ ಸ್ಥಳವಾಗಿದೆ.

ಶ್ರವಣಬೆಳಗೊಳ

ಶ್ರವಣಬೆಳಗೊಳ

ದಾರಿಯಲ್ಲಿ ಶ್ರವಣಬೆಳಗೊಳವಿದ್ದು, ಇದು ಜೈನ ಸಮುದಾಯಕ್ಕೆ ಸೇರಿದವರಿಗೆ ಪ್ರಸಿದ್ಧ ಮತ್ತು ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿರುವ ಬಾಹುಬಲಿ ಮೂರ್ತಿಯು 57 ಅಡಿ ಎತ್ತರವಿದ್ದು, ಇದು ವಿಶ್ವದ ಅತಿ ಎತ್ತರದ ಏಕಶಿಲಾ ಪ್ರತಿಮೆಯಾಗಿದೆ.

ಸಕಲೇಶಪುರ

ಸಕಲೇಶಪುರ

ಮಾರ್ಗದಲ್ಲಿ ಮುಂದೆ ಬರುವ ಸ್ಥಳ ಸಕಲೇಶಪುರ. ಚನ್ನರಾಯಪಟ್ಟಣದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಸಕಲೇಶಪುರ ಸಾಹಸಪ್ರಿಯರ ಸ್ವರ್ಗವಾಗಿದೆ. ಗ್ರೀನ್ ರೂಟ್ ಟ್ರೆಕ್, ಜೇನುಕಲ್ ಗುಡ್ಡ ಟ್ರೆಕ್ ಮತ್ತು ಮಂಜೇಹಳ್ಳಿ ಜಲಪಾತಗಳ ಚಾರಣಗಳು ಸಕಲೇಶಪುರದ ಸೌಂದರ್ಯವನ್ನು ಸೆರೆಹಿಡಿಯುವ ಸುಂದರವಾದ ಟ್ರೆಕ್ಕಿಂಗ್ ಹಾದಿಗಳನ್ನು ಒದಗಿಸಿಕೊಡಿತ್ತವೆ. ಹೊಯ್ಸಳ ವಾಸ್ತುಶೈಲಿಯನ್ನು ಅನುಸರಿಸಿ ನಿರ್ಮಿಸಲಾದ ಸಕಲೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.

ಗಮ್ಯಸ್ಥಾನ - ಮಂಗಳೂರು

ಗಮ್ಯಸ್ಥಾನ - ಮಂಗಳೂರು

ಮಂಗಳೂರು ಸಕಲೇಶಪುರದಿಂದ ಸುಮಾರು 130 ಕಿ.ಮೀ ಅಂತರದಲ್ಲಿದೆ. ಈ ಸ್ಥಳದಿಂದ ಸುಮಾರು ಮಂಗಳೂರಿಗೆ ತಲುಪಲು 3 ಗಂಟೆಗಳು ಬೇಕಾಗುವುದು. ನೀವು ಮಂಗಳೂರಿನಲ್ಲಿದ್ದಾಗ ನೋಡಬಹುದಾದ ಸ್ಥಳಗಳು

ಪಣಂಬೂರ್ ಬೀಚ್

ಪಣಂಬೂರ್ ಬೀಚ್

ಪಣಂಬೂರ್ ಬೀಚ್ ಮಂಗಳೂರಿನ ಅತ್ಯಂತ ಸುಂದರವಾದ ಕಡಲತೀರವಾಗಿದೆ. ಇದು ಭಾರತದಲ್ಲಿಯ ಅತ್ಯಂತ ಸುರಕ್ಷಿತ ಬೀಚ್ ಎಂದು ಕರೆಸಿಕೊಳ್ಳುತ್ತದೆ. ಈ ಬೀಚ್ ನಲ್ಲಿ ಪರಿಣಿತ ಹಾಗೂ ನುರಿತ ಲೈಫ್ ಗಾರ್ಡ್ ಗಳನ್ನು ಎಲ್ಲಾ ಸಮಯದಲ್ಲಿಯೂ ಇರುವಂತೆ ನೇಮಿಸಲಾಗಿದೆ. ಇಲ್ಲಿಯ ಕಡಲತೀರದಲ್ಲಿ, ಜೆಟ್ ಸ್ಕೈ, ಬೋಟಿಂಗ್, ಒಂಟೆ ಸವಾರಿ, ಏಟಿವಿಎಸ್ , ಪ್ಯಾರಾ ಸೈಲಿಂಗ್, ವಾಟರ್ ಸ್ಕೂಟರ್, ಸರ್ಫಿಂಗ್ ಇತ್ಯಾದಿ ಮೋಜಿನ ಹಾಗೂ ಸಾಹಸಮಯ ಚಟುವಟಿಕೆಗಳನ್ನು ಹೊಂದಿದೆ. ನೀವು ಪಣಂಬೂರು ಕಡಲತೀರದಲ್ಲಿ ಡಾಲ್ಫಿನ್‌ಗಳನ್ನು ನೋಡಬಹುದು.

ಸೈಂಟ್ ಅಲೋಶಿಯಸ್ ಚರ್ಚ್

ಸೈಂಟ್ ಅಲೋಶಿಯಸ್ ಚರ್ಚ್

ಈ ಸುಂದರ ಪ್ರಾರ್ಥನಾ ಮಂದಿರವನ್ನು 1880 ರಲ್ಲಿ ನಿರ್ಮಿಸಲಾಯಿತು. ಸೈಂಟ್ ಅಲೋಶಿಯಸ್ ಪ್ರಾರ್ಥನಾ ಮಂದಿರದ ವಾಸ್ತು ಶಿಲ್ಪವನ್ನು ರೋಮ್ ನಲ್ಲಿರುವ ಇನ್ನಿತರ ಪ್ರಾರ್ಥನಾ ಮಂದಿರಗಳೊಂದಿಗೆ ಹೋಲಿಸಲಾಗುತ್ತದೆ. ಇಲ್ಲಿಯ ಗೋಡೆಗಳಲ್ಲಿ ಸುಂದರವಾದ ವರ್ಣಚಿತ್ರಗಳಿಂದ ತುಂಬಿದೆ, ಇದು ಭಾರತದ ಇತರ ಪ್ರಾರ್ಥನಾ ಮಂದಿರಗಳಲ್ಲಿ ವ್ಯಾಪಕವಾಗಿ ಎಲ್ಲಿಯೂ ಕಂಡುಬರುವುದಿಲ್ಲ. ಮನುಕುಲದ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಅಲೋಶಿಯಸ್ ಗೊನ್ಜಾಗಾ ಅವರಿಗೆ ಈ ಪ್ರಾರ್ಥನಾ ಮಂದಿರವನ್ನು ಸಮರ್ಪಿಸಲಾಗಿದೆ. ಅಲೋಶಿಯಸ್ ಕಾಲೇಜನ್ನು 1880 ರಲ್ಲಿ ನಿರ್ಮಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X