Search
  • Follow NativePlanet
Share
» »ಈ ಊರಲ್ಲಿ ಕಾರು ಡ್ರೈವರ್ ಇಲ್ಲದೆಯೇ ಮೇಲಕ್ಕೇರುತ್ತೆ !

ಈ ಊರಲ್ಲಿ ಕಾರು ಡ್ರೈವರ್ ಇಲ್ಲದೆಯೇ ಮೇಲಕ್ಕೇರುತ್ತೆ !

ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಛತ್ತೀಸ್‌ಗಡ್‌ನಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳೂ ಇವೆ. ಅಂತಹ ಛತ್ತೀಸ್‌ಗಡ್‌ನ ಶಿಮ್ಲಾ ಎಂದು ಕರೆಯಲಾಗುವ ಮೈನ್‌ಪಾಟ್‌ನಲ್ಲೂ ಒಂದು ವಿಶೇಷ ಸ್ಥಳವಿದೆ. ಅದೇನೆಂದರೆ ಅಲ್ಲಿ ವಾಹನಗಳು ಡ್ರೈವರ್ ಇಲ್ಲದೆಯೇ ಮೇಲಕ್ಕೆ ಚಲಿಸಲಾರಂಭಿಸುತ್ತದೆ.

ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?ಮಂದಿರಗಳಲ್ಲಿನ ಕಾಮುಕ ಶಿಲ್ಪಕಲಾಕೃತಿಯ ರಹಸ್ಯ ಏನು ?

ಡ್ರೈವರ್ ಇಲ್ಲದೆ ಮೇಲಕ್ಕೆ ಚಲಿಸೋ ಕಾರು

ಡ್ರೈವರ್ ಇಲ್ಲದೆ ಮೇಲಕ್ಕೆ ಚಲಿಸೋ ಕಾರು

PC: youtube
ಅಂಬಿಕಾಪುರದಿಂದ 47 ಕಿ.ಮೀ ದೂರದಲ್ಲಿರುವ ಮೈನ್‌ಪಾಟ್ ಬೆಟ್ಟವು ರಹಸ್ಯಗಳಿಂದ ಕೂಡಿದೆ. ಮೈನ್‌ಪಾಟ್‌ನಲ್ಲಿ ಒಂದು ವಿಶೇಷ ಜಾಗವಿದೆ ಅಲ್ಲಿ ನಾಲ್ಕು ಚಕ್ರದ ವಾಹನಗಳು ತನ್ನಿಂದ ತಾನೇ ಮೇಲಕ್ಕೆ ಚಲಿಸುತ್ತದೆ. ಸುಮಾರು 100 ಮೀ. ಚಲಿಸುತ್ತದಂತೆ.

ಪ್ರಕೃತಿಯ ಚಮತ್ಕಾರ

ಪ್ರಕೃತಿಯ ಚಮತ್ಕಾರ

PC: Flikr
ಇಂತಹದೊಂದು ಸ್ಥಳದ ಪರಿಚಯವಾಗಿದ್ದೇ ಇತ್ತೀಚೆಗೆ. ಬೆಟ್ಟದ ನಡುವೆ ಅಡಗಿರುವ ಈ ಚಮತ್ಕಾರದ ಬಗ್ಗೆ ಜನರಿಗೆ ತಿಳಿಯುತ್ತಿದ್ದಂತೆ ಪ್ರವಾಸಿಗರ ದಂಡೇ ಬಂದು ನಿಂತಿದೆ. ಇಂತಹ ಚಮತ್ಕಾರವನ್ನು ನೋಡಲು ದೂರ ದೂರದ ಊರುಗಳಿಂದಲೂ ಜನರು ಬರುತ್ತಿದ್ದಾರೆ.ಈಗ ಛತ್ತೀಸ್‌ಗಡ್‌ನ ಪ್ರವಾಸಿತಾಣಗಳ ಪಟ್ಟಿಯಲ್ಲಿ ಇದೂ ಸೇರಿಕೊಂಡಿದೆ.

ಬಿಸರ್‌ಪಾನಿಯಲ್ಲಿದೆ ಈ ಸ್ಥಳ

ಬಿಸರ್‌ಪಾನಿಯಲ್ಲಿದೆ ಈ ಸ್ಥಳ

PC: Ayazmaqbool
ಇಲ್ಲಿ ನೀವು ನ್ಯೂಟ್ರಲ್ ಗೇರ್‌ನಲ್ಲಿ ಕಾರನ್ನು ನಿಲ್ಲಿಸಿದರೆ ಅದು ತನ್ನಿಂದ ತಾನೇ ಬೆಟ್ಟದ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಈ ಸ್ಥಳ ಬೆಟ್ಟದ ಮೇಲಿದೆ. ಗುರುತ್ವಾಕರ್ಷಣೆಯ ಕಾರಣದಿಂದ ಗಾಡಿ ಕೆಳಕ್ಕೆ ಚಲಿಸಬೇಕಿತ್ತು. ಬದಲಾಗಿ ಇಲ್ಲಿ ಮೇಲಕ್ಕೆ ಚಲಿಸುತ್ತಿದೆ.

ಪ್ರವಾಸಿಗರನ್ನು ಸೆಳೆಯುತ್ತಿದೆ

ಪ್ರವಾಸಿಗರನ್ನು ಸೆಳೆಯುತ್ತಿದೆ


ಛತ್ತೀಸ್‌ಗಡ್‌ನಲ್ಲಿ ಇಂತದ್ದೊಂದು ಸ್ಥಳ ಇರುವುದು ಒಂದು ವರದಾನವೆಂಬಂತಾಗಿದೆ. ಇದನ್ನು ನೋಡುವ ಸಲುವಾಗಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಭೂಗೋಳ ಹಾಗೂ ಭೂಗರ್ಭ ವಿಶ್ಲೇಷಕ ಡಾ. ಅನಿಲ್ ಪ್ರಕಾರ, ಗಾಡಿಗಳು ಬೆಟ್ಟದ ಮೇಲೆ ಚಲಿಸುತ್ತಿರುವುದಕ್ಕೆ ಗ್ರಾವಿಟಿ ಫೋರ್ಸ್ ಕಾರಣ ಎನ್ನುತ್ತಾರೆ.

ನೀರು ಕೂಡಾ ಮೇಲ್ಮುಕವಾಗಿ ಹರಿಯುತ್ತೆ

ನೀರು ಕೂಡಾ ಮೇಲ್ಮುಕವಾಗಿ ಹರಿಯುತ್ತೆ

PC: wikicommans
ಬಿಸರ್‌ಪಾನಿಯಲ್ಲಿ ಇನ್ನೊಂದು ಇಂತಹದ್ದೇ ಸ್ಥಳವಿದೆ ಅಲ್ಲಿ ಹರಿಯುವ ನೀರು ಮೇಲ್ಮುಕವಾಗಿ ಹರಿಯುತ್ತದೆ. ಸಾಮಾನ್ಯವಾಗಿ ನೀರು ಕೆಳಮುಖವಾಗಿ ಹರಿಯುತ್ತಾ ಹೋಗುತ್ತದೆ. ಗ್ರಾವಿಟಿ ಶಕ್ತಿಗೆ ಸವಾಲು ನೀಡುವ ರೀತಿಯಲ್ಲಿ ಕಣಿವೆಗಳಲ್ಲಿ ಹರಿಯುವ ನೀರು ಮೇಲ್ಮುಕವಾಗಿ ಹರಿಯುತ್ತಿದೆ.

ಹೋಗುವುದು ಹೇಗೆ?

ಹೋಗುವುದು ಹೇಗೆ?

ಅಂಬಿಕಾಪುರಕ್ಕೆ ಸಮೀಪದ ಏರ್‌ಪೋರ್ಟ್ ಎಂದರೆ ರಾಂಚಿ ಏರ್‌ಪೋರ್ಟ್, ಜಾರ್ಖಂಡ್. ಅಂಬಿಕಾಪುರ್ ಇಲ್ಲಿಂದ 222 ಕಿ.ಮೀ ದೂರದಲ್ಲಿದೆ. ಅದೇ ವಾರಣಾಸಿ ಏರ್‌ಪೋರ್ಟ್ ನಿಂದ 249 ಕೀ.ಮೀ ದೂರದಲ್ಲಿದಲ್ಲಿದೆ. ರೈಲಿನ ಮೂಲಕ ಹೋಗುವುದಾದರೆ ಅಂಬಿಕಾಪುರ ರೈಲ್ವೆ ಸ್ಟೇಶನ್‌ನಲ್ಲಿ ಇಳಿಯಬೇಕು. ಬಸ್‌ ಮೂಲಕವೂ ಅಂಬಿಕಾಪುರ ಬಸ್‌ಸ್ಟ್ಯಾಂಡ್‌ನಲ್ಲಿ ಇಳಿದು ಹೋಗಬೇಕು.

Read more about: travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X