Search
  • Follow NativePlanet
Share
» »ಹುಟ್ಟು, ಸಾವಿನ ಎಲ್ಲ ವಿಧಿಗಳನ್ನು ಇಲ್ಲಿ ಮಾಡಬಹುದು!

ಹುಟ್ಟು, ಸಾವಿನ ಎಲ್ಲ ವಿಧಿಗಳನ್ನು ಇಲ್ಲಿ ಮಾಡಬಹುದು!

By Vijay

ಇದೊಂದು ರಮಣೀಯ ಪರಿಸರದ ಮಧ್ಯೆ, ದಟ್ಟ ಕಾಡಿನ ಹಸಿರಿನ ನಡುವೆ ಎಲೆ ಮರೆಯ ಕಾಯಿಯಂತೆ ಪ್ರಶಾಂತವಾಗಿ ನೆಲೆಸಿರುವ ಅತಿ ಪುರಾತನ ದೇವಾಲಯವಾಗಿದೆ. ಈ ದೇವಾಲಯ ನಿರ್ಮಾಣದ ಕುರಿತು ನಿಖರವಾದ ಮಾಹಿತಿಗಳಿಲ್ಲವಾದರೂ ಇದು ನೆಲೆಸಿರುವ ಸ್ಥಳವು ಚೇರರ ಕಾಲದಲ್ಲಿ ಅಂದರೆ ಕ್ರಿ.ಶ 962-1012 ರ ಮಧ್ಯೆ ಒಂದು ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿತ್ತು.

ಕೆಲವು ತಜ್ಞರು ಹೇಳುವ ಪ್ರಕಾರ ಈ ಸ್ಥಳವು ರುಪಗೊಳ್ಳುವುದಕ್ಕಿಂತಲೂ ಮುಂಚಿನಿಂದಲೂ ಇಲ್ಲಿತ್ತಂತೆ. ಹೀಗಾಗಿ ಭಾರತದಲ್ಲಿ ಕಂಡುಬರುವ ಅತಿ ಪುರಾತನ ದೇವಾಲಯಗಳ ಪೈಕಿ ಇದನ್ನೂ ಸಹ ಒಂದೆಂದು ಪರಿಗಣಿಸಬಹುದಾಗಿದೆ.

ಪ್ರಸ್ತುತ ಲೇಖನದಲ್ಲಿ ಈ ದೇವಾಲಯದ ಕುರಿತು, ಹಿನ್ನಿಲೆ ಹಾಗೂ ಸ್ಥಳ ಪುರಾಣಗಳನ್ನು ತಿಳಿಸಲಾಗಿದೆ. ಖಮ್ಡಿತವಾಗಿಯೂ ಪ್ರಕೃತಿಯ ಅಗಾಧ ವೈಭವದ ಮಧ್ಯೆ ನೆಲೆಸಿರುವ ಈ ದೇವಾಲಯನ್ನೊಮ್ಮೆ ದರ್ಶಿಸಲೇಬೇಕು.

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಮೊದಲನೇಯದಾಗಿ ಈ ದೇವಾಲಯವು ಸಾಕಷ್ಟು ಮಹತ್ವ ಪಡೆದ ವಿಷ್ಣುವಿನ ದೇವಾಲಯ ಎನ್ನಲಾಗುತ್ತದೆ. ಏಕೆಂದರೆ ಸ್ವತಃ ಬ್ರಹ್ಮನೆ ಈ ದೇವಾಲಯದ ನಿರ್ಮಾತೃ ಎಂದು ನಂಬಲಾಗಿದೆ.

ಚಿತ್ರಕೃಪೆ: Reji

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಇನ್ನೊಂದು ವಿಶೇಷವೆಂದರೆ, ಈ ಒಂದು ದೇವಾಲಯದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತೆ ಹುಟ್ಟಿನಿಂದ ಹಿಡಿದು ಸಾವಿನವರೆಗೂ ನಡೆಸಲಾಗುವ ಅನೇಕ ವಿಧಿ ವಿಧಾನಗಳನ್ನು ಇಲ್ಲಿನ ಪಾಪನಾಶಿನಿ ನೀರಿನ ತಟದಲ್ಲಿ ನೆರವೇರಿಸಬಹುದಾಗಿದೆಯಂತೆ.

ಚಿತ್ರಕೃಪೆ: Jayaprakash R

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಹೀಗೆ ಎಲ್ಲ ವಿಧಿ ವಿಧಾನಗಳನ್ನು ಕೇವಲ ಒಂದೆ ಸ್ಥಳದಲ್ಲಿಯೆ ನಿರ್ವಹಿಸಬಹುದಾದ ಈ ರೀತಿಯ ಏಕೈಕ ದೇವಾಲಯ ಇದಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಎಮ್ತಲೂ ಸಹ ಇಲ್ಲಿಗೆ ಭೇಟಿ ನೀಡುವ ಭಕ್ತರಿಂದ ಸಂಬೋಧಿಸಲಾಗುತ್ತದೆ.

ಚಿತ್ರಕೃಪೆ: Shinekarthikeyan

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಈ ಒಂದು ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೋಚಕವಾದ ಹಿನ್ನಿಲೆಯೊಂದಿದೆ. ಅದರ ಪ್ರಕಾರವಾಗಿ, ಒಂದೊಮ್ಮೆ ಬ್ರಹ್ಮನು ತನ್ನ ವಾಹನವಾದ ಹಂಸದ ಮೇಲೆ ಆರೂಢನಾಗಿ ಲೋಕ ವಿಹರಿಸುತ್ತಿದ್ದಾಗ ಈ ಒಂದು ಸ್ಥಳದಲ್ಲಿ ಹಾದು ಹೋಗುವ ಸಂದರ್ಭ ಬರುತ್ತದೆ.

ಚಿತ್ರಕೃಪೆ: Augustus Binu

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಅತ್ಯದ್ಭುತ ಸೌಂದರ್ಯದ ಪ್ರಕೃತಿ, ಪ್ರಸನ್ನಗೊಳಿಸುವ ಬೆಟ್ಟಗಳು ಹಾಗೂ ದಟ್ಟ ಹಸಿರಿನ ಕಾಡುಗಳು, ನಿಶ್ಕಲ್ಮಶವಾಗಿ ಹರಿಯುತ್ತ ಮನ ಪುಳಕಿತಗೊಳಿಸುವ ಜುಳು ಜುಳು ನೀರು ಇವೆಲ್ಲವನ್ನು ಬ್ರಹ್ಮನು ನೋಡಿದಾಗ ಆನಂದದಿಂದ ತಲೆದೂಗಿ ಕೆಲ ಕಾಲ ಕಳೆಯಲೆಂದು ಇಲ್ಲಿ ಇಳಿದುಬಿಟ್ಟ.

ಚಿತ್ರಕೃಪೆ: Vijayakumarblathur

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ನಂತರ ಅವನ ಕಣ್ಣಿಗೆ ಬಿದ್ದಿದ್ದು ನೆಲ್ಲಿಕಾಯಿ ಗಿಡವೊಂದರ ಕೆಳಗಿದ್ದ ವಿಷ್ಣುವಿನ ವಿಗ್ರಹ. ಅದನ್ನು ಕಂಡ ಬ್ರಹ್ಮ ಅದರ ಮುಂದೆ ಹೋದಾಗ ಅಶರೀರವಾಣಿಯೊಂದು ಕೇಳಿ ಬಂತು.

ಚಿತ್ರಕೃಪೆ: Vijayakumarblathur

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಆ ಅಶರೀರ ವಾಣಿಯು, ಇದು ಸಾಕ್ಷಾತ್ ಸೃಷ್ಟಿ ಪಾಲಕನಾದ ಶ್ರೀಮನ್ನಾರಾಯಣನ ವಿಗ್ರಹವೆಂದು ಇದು ವಿಷ್ಣು ನೆಲೆಸಿರುವ ವೈಕುಂಠವೆಂದೂ ಅಬ್ಬರಿಸಿತು. ಹೀಗಾಗಿ ಇದೊಂದು ವೈಕುಂಠದ ಭಾಗವಾಗಿರುವುದನ್ನರಿತ ಬ್ರಹ್ಮ ಅತೀವ ಸಂತಸಗೊಂಡನು.

ಚಿತ್ರಕೃಪೆ: Nishad T R

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಹೀಗೆ ಸಂತಸಗೊಂಡ ಬ್ರಹ್ಮನು ಆ ಸ್ಥಳದಲ್ಲಿ ವಿಷ್ಣುವಿಗೆ ದಿನ ನಿತ್ಯ ಪೂಜೆ ಸಲ್ಲುವಂತಾಗುವ ಉದ್ದೇಶದಿಂದ ಇಲ್ಲಿ ದೇವಾಲಯದ ನಿರ್ಮಾಣ ಮಾಡಿದ ಹಾಗೂ ಅದನ್ನು ಸಹಾಯಮಲಕ ಎಂದು ಕರೆದ. ಇದರಿಂದ ಪ್ರಸನ್ನನಾದ ವಿಷ್ಣು, ಇಲ್ಲಿನ ನೀರು ಎಲ್ಲ ರೀತಿಯ ಪಾಪ ಕರ್ಮಗಳನ್ನು ತೊಳೆಯುವ ಶಕ್ತಿ ಹೊಂದುವಂತೆ ವರದಾನ ನೀಡಿದ.

ಚಿತ್ರಕೃಪೆ: Anil C

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಹೀಗಾಗಿ ಇಂದಿಗೂ ಇಲ್ಲಿ ಪಾಪನಾಶಿನಿ ಎಂಬ ನೀರಿನ ಮೂಲವೊಂದನ್ನು ಕಾಣಬಹುದಾಗಿದೆ. ಪ್ರತೀತಿಯಂತೆ ಇಲ್ಲಿ ಮಿಂದವರು ತಮ್ಮ ಎಲ್ಲ ಪಾಪ ಕರ್ಮಗಳಿಂದ ಮುಕ್ತರಾಗಿ ಜೀವನ್ಮರಣಗಳ ಚಕ್ರದಿಂದ ಶಾಶ್ವತವಾಗಿ ಮುಕ್ತಿ ಪಡೆಯುತ್ತಾರೆಂದು ನಂಬಲಾಗಿದೆ. ದೇವಾಲಯ ಹಾಗೂ ಪಾಪನಾಶಿನಿ ಬಳಿ ಇರುವ ಕಾಡಿನ ಮಧ್ಯದ ಶ್ರೀ ಕಾಳಿ ಮಂದಿರ

ಚಿತ್ರಕೃಪೆ: Dhruvaraj S

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಅಲ್ಲದೆ ದೇವಾಲಯಕ್ಕೆ ತನ್ನದೆ ಆದ ಕೊಳವೊಂದಿದ್ದು ಅದನ್ನು ಪಂಚತೀರ್ಥ ಎಂದು ಕರೆಯುತ್ತಾರೆ. ಇಲ್ಲಿಂದ ದೇವಾಲಯಕ್ಕೆ ಪುರಾತನ ಕಾಲುವೆಯೊಂದರ ಮೂಲಕ ನೀರು ಹರಿದು ಹೋಗುತ್ತದೆ. ಇದೊಂದು ರೀತಿಯ ವಿಶೇಷವಾದ ವ್ಯವಸ್ಥೆ ಎಂದೆ ಹೇಳಬೇಕು.

ಚಿತ್ರಕೃಪೆ: Praveenp

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಇನ್ನೊಂದು ದಂತಕಥೆಯ ಪ್ರಕಾರ, ಬ್ರಹ್ಮನು ವಿಷ್ಣುವಿನ ದೇವಾಲಯ ನಿರ್ಮಿಸುವಲ್ಲಿ ನಿರತನಾಗಿದ್ದಾಗ ಗರುಡನು ತನ್ನ ಬಾಯಲ್ಲಿ ಅಮೃತವಿರುವ ಬಿಂದಿಗೆಯನ್ನು ಹಿಡಿದು ಆಗಸದಲ್ಲಿ ವೃತ್ತಾಕಾರದಲ್ಲಿ ಹಾರಾಡುತ್ತಿತ್ತು. ಈ ಸಂದರ್ಭದಲ್ಲಿ ಅಮೃತದ ಕೆಲವು ಹನಿಗಳು ಪಾಪನಾಶಿನಿ ನೀರಿನ ತೊರೆಯಲ್ಲಿ ಬಿದ್ದು ಆ ನೀರು ಎಲ್ಲ ಪಾಪಗಳನ್ನು ನಿವಾರಿಸುವ ಶಕ್ತಿ ಪಡೆಯಿತೆನ್ನಲಾಗಿದೆ.

ಚಿತ್ರಕೃಪೆ: Anil C

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಪರಶುರಾಮರು ತಮ್ಮ ಪಿತೃವಾದ ಜಮದಗ್ನಿಯವರ ಅಂತಿಮ ವಿಧಿ ವಿಧಾನಗಳನ್ನು ಇಲ್ಲಿಯೆ ನೆರವೇರಿಸಿದ್ದರೆನ್ನಲಾಗಿದೆ ಹಾಗೂ ತಮಗೆ ಬಂದೊದಗಿದ ಹತ್ಯಾ ದೋಷವನ್ನು ನಿವಾರಿಸಿಕೊಳ್ಳುವ ಉದ್ದೇಶದಿಂದ ಇಲ್ಲಿನ ಪಾಪನಾಶಿನಿಯಲ್ಲಿ ಸ್ನಾ ಮಾಡಿದ್ದರೆನ್ನಲಾಗಿದೆ.

ಚಿತ್ರಕೃಪೆ: Bobinson K B

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಇಂದಿಗೂ ಪ್ರತಿ ದಿನ ನಸುಕಿನ ಸಮಯದಲ್ಲಿ ಸ್ವತಃ ಬ್ರಹ್ಮನೆ ವಿಷ್ಣುವಿನನ್ನು ಪೂಜಿಸಲೆಂದು ಇಲ್ಲಿಗೆ ಬರುತ್ತಾನೆನ್ನಲಾಗುತ್ತದೆ. ಹಾಗಾಗಿ ಅವನ ಪೂಜೆ ಸರಾಗವಾಗಿ ಸಾಗಲೆಂದು ಹಿಂದಿನ ದಿನ ರಾತ್ರಿ ದೇವಾಲಯ ಮುಚ್ಚುವ ಸಮಯದಲ್ಲಿ ಅರ್ಚಕರು ತಾಜಾ ಹೂವುಗಳು ಹಾಗೂ ಇತರೆ ಸಾಮಗ್ರಿಗಳನ್ನು ಇಲ್ಲಿಟ್ಟು ತೆರಳುತ್ತಾರಂತೆ!

ಚಿತ್ರಕೃಪೆ: RajeshUnuppally

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಈ ದೇವಾಲಯವಿರುವುದು ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ. ಜಿಲ್ಲೆಯ ಉತ್ತರ ಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟಗಳ ದಟ್ಟ ಕಾಡಿನ ಪ್ರದೇಶಗಳಲ್ಲಿರುವ ತಿರುನೆಲ್ಲಿ ಎಂಬ ಸ್ಥಳದಲ್ಲಿ ಈ ದೇವಾಲಯವಿದೆ. ಇದನ್ನು ತಿರುನೆಲ್ಲಿ ಮಹಾ ವಿಷ್ಣುವಿನ ದೇವಾಲಯ ಎಂದೆ ಕರೆಯುತ್ತಾರೆ. ಬ್ರಹ್ಮಗಿರಿ ಬೆಟ್ಟಗಳು.

ಚಿತ್ರಕೃಪೆ: L. Shyamal

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ಬ್ರಹ್ಮ ನಿರ್ಮಿತ ವಿಷ್ಣು ದೇವಾಲಯ:

ವಯನಾಡ್ ಜಿಲ್ಲೆಯ ದೊಡ್ಡ ಪಟ್ಟಣಗಳ ಪೈಕಿ ಒಂದಾದ ಮಾನಂತವಾಡಿಯಿಂದ ತಿರುನೆಲ್ಲಿ ಸುಮಾರು 31 ಕಿ.ಮೀ ದೂರವಿದ್ದು ಇಲ್ಲಿಗೆ ತೆರಳಲು ರಸ್ತೆಯ ಮಾರ್ಗವಿದೆ. ಬಾಡಿಗೆ ವಾಹನಗಳ ಮೂಲಕ ಸುಲಭವಾಗುಇ ತೆರಳಬಹುದಾಗಿದೆ.

ಚಿತ್ರಕೃಪೆ: Vijayakumarblathur

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X