Search
  • Follow NativePlanet
Share
» »ಮನಸೆಳೆವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು

ಮನಸೆಳೆವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು

By Vijay

ವರುಣನ ಚರಣಗಳು ಧರಣಿಯ ಮೇಲೆ ಬೀಳುತ್ತಲೆ ಪ್ರಕೃತಿಯ ಕಣ ಕಣಗಳೂ ಮೈದುಂಬಿಕೊಂಡು ಕಳೆಗಟ್ಟಿ ಪ್ರತಿಯೊಬ್ಬನ ಕಣ್ಮನಗಳನ್ನು ಸೆಳೆಯುತ್ತದೆ. ಹೌದು, ಮಳೆಗಾಲದ ವಿಶೇಷವೆ ಹಾಗೆ, ಪ್ರಕೃತಿ ಮಾತೆಯು ಮೈನೆರೆದು ಸಿಂಗರಿಸಿಕೊಂಡು ನವ ವಧುವಿನಂತೆ ಕಂಗೊಳಿಸುತ್ತಾಳೆ.

ಕೆರೆ-ತೊರೆ-ನದಿಗಳು ತುಂಬಿಕೊಂಡು ರಭಸವಾಗಿ ಹರಿದರೆ, ಒಣಗಿದ, ಮುದುರಿಕೊಂಡ ಗಿಡ ಮರಗಳು ಮತ್ತೆ ಎದೆಯುಬ್ಬಿಸಿ ಎದ್ದು ನಿಲ್ಲುತ್ತವೆ. ಹಸಿರಿನ ಕಳೆ ಎಲ್ಲೆಡೆ ಆವರಿಸಿಬಿಡುತ್ತದೆ. ವಾತಾವರಣದ ತಾಪಮಾನ ಕಡಿಮೆಯಾಗಿ ಅಹ್ಲಾದಕರ ಪರಿಸರ ಎಲ್ಲೆಡೆ ಉಂಟಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳು

ಈ ಸಮಯದಲ್ಲಿ ವಿಶೇಷವಾಗಿ ಜಲಪಾತಗಳು ಸಾಕಷ್ಟು ಬೇಡಿಕೆ ಪಡೆಯುತ್ತವೆ. ಭೋರ್ಗೆರೆವ ನೊರೆಯ ಹಾಲಿನಂತೆ ಕಂಗೊಳಿಸುವ ಜಲಧಾರೆಯನ್ನು ನೋಡಲು ಜನರು ತಂಡೋಪ ತಂಡವಾಗಿ ತಮಗಿಷ್ಟವಾದ ಜಲಪಾತ ತಾಣಗಳಿಗೆ ಭೇಟಿ ನೀಡಲಾರಂಭಿಸುತ್ತಾರೆ.

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಕರ್ನಾಟಕದ ಎರಡು ಸುಂದರ ಜಲಪಾತ ಕೇಂದ್ರಗಳಿಗೆ ಭೇಟಿ ನೀಡೋಣ. ವಿಶೇಷವೆಂದರೆ ಈ ಎರಡೂ ಜಲಪಾತಗಳಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲೆ, ಅಲ್ಲದೆ ಇವೆರಡೂ ಜಲಪಾತಗಳ ಮಧ್ಯೆ ಇರುವ ಅಂತರ ಕೇವಲ 25 ಕಿ.ಮೀ. ಆದರೆ ಎರಡೂ ಜಲಪಾತಗಳ ವಿಶೇಷತೆಯೆ ಬೇರೆ ಬೇರೆ.

ಯಲ್ಲಾಪುರ ಇವೆರಡೂ ಜಲಪಾತಗಳ ಮಧ್ಯದಲ್ಲಿ ನೆಲೆಸಿರುವ ಪಟ್ಟಣವಾಗಿದ್ದು ಇಲ್ಲಿಂದಲೆ ಅಥವಾ ಇಲ್ಲಿ ಒಂದು ದಿನದ ಮಟ್ಟಿಗಾದರೂ ತಂಗಿ ಸಾತೋಡಿ ಹಾಗೂ ಮಾಗೋಡು ಜಲಪಾತಗಳನ್ನು ಹಾಯಾಗಿ ನೋದಬಹುದು. ಹುಬ್ಬಳ್ಳಿ ಹಾಗೂ ಕಾರವಾರ ಯಲ್ಲಾಪುರಕ್ಕೆ ಹತ್ತಿರದಲ್ಲಿದ್ದು ಬಸ್ಸುಗಳು ದೊರೆಯುತ್ತವೆ.

  • ಹುಬ್ಬಳ್ಳಿಗಿರುವ ರೈಲುಗಳು ವೇಳಾಪಟ್ಟಿ
  • ಕಾರವಾರಕ್ಕಿರುವ ರೈಲುಗಳ ವೇಳಾಪಟ್ಟಿ
ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೊಡ್ಡಿ ಎಂತಲೂ ಬರೆಯಲ್ಪಡುವ/ಕರೆಯಲ್ಪಡುವ ಈ ಜಲಪಾತ ಕೇಂದ್ರವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇದನ್ನು ಒಮ್ಮೊಮ್ಮೆ ಪ್ರೀತಿಯಿಂದ "ಮಿನಿ ನಯಾಗ್ರಾ" ಜಲಪಾತ ಎಂತಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Adnan Alibaksh

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಈ ಜಲಪಾತ ಅಷ್ಟೊಂದೇನೂ ಎತ್ತರವಾಗಿಲ್ಲ. ಇದರ ಎತ್ತರ ಹದಿನೈದು ಮೀಟರ್. ಅಂದರೆ ಸುಮಾರು 49.2 ಅಡಿಗಳಷ್ಟು ಮಾತ್ರವೆ. ಆದರೆ, ಇದು ಸಾಕಷ್ಟು ಅಗಲವಾಗಿರುವುದರಿಂದ ಇದನ್ನು ಮಿನಿ ಅಥವಾ ಚಿಕ್ಕ ನಯಾಗ್ರಾ ಜಲಪಾತ ಎಂಬ ಹೆಸರಿನಿಂದಲೂ ಸಂಭೋದಿಸುತ್ತಾರೆ.

ಚಿತ್ರಕೃಪೆ: Bharath Kumar V

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಜಲಪಾತವಿರುವುದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿಯಲ್ಲಿ. ಯಲ್ಲಾಪುರದಿಂದ ಸುಮಾರು 32 ಕಿ.ಮಿ ಗಳಷ್ಟು ದೂರದಲ್ಲಿ ಈ ಜಲಪಾತ ಕೇಂದ್ರವಿದೆ.

ಚಿತ್ರಕೃಪೆ: Phaneesh N

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ನೀವು ಈ ಜಲಪಾತಕ್ಕೆ ಭೇಟಿ ನೀಡಬೇಕಿದ್ದಲ್ಲಿ ಮೊದಲಿಗೆ ಯಲ್ಲಾಪುರಕ್ಕೆ ತೆರಳಿ ನಂತರ ಅಲ್ಲಿಂದ ಬಾಡಿಗೆ ಆಟೋ ಅಥವಾ ಕಾರುಗಳನ್ನು ಮಾಡಿಕೊಂಡು ಹೊರಡುವುದು ಉತ್ತಮ. ಏಕೆಂದರೆ ಸಾತೋಡಿವರೆಗೆ ಯಾವುದೆ ಬಸ್ಸುಗಳು ದೊರೆಯುವುದಿಲ್ಲ. ನಿಮ್ಮ ಸ್ವಂತ ವಾಹನವಿದ್ದಲ್ಲಿ ಇನ್ನೂ ಅನುಕೂಲ.

ಚಿತ್ರಕೃಪೆ: anoop madhavan

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಯಲ್ಲಾಪುರದ ಮುಖ್ಯ ರಸ್ತೆಯಿಂದ ತಿರುವು ಪಡೆದು ಸಾತೋಡಿಯೆಡೆ ತೆರಳಬೇಕು. ಮಾಹಿತಿ ಫಲಕವಿರುವ ಕಾರಣ ಸಾಗುವುದು ಸರಳವಾಗುತ್ತದೆ. ಅಲ್ಲದೆ ಸ್ಥಳೀಯವಾಗಿಯೂ ವಿಚಾರಿಸಿ ಮುಂದೆ ಹೊರಡಬಹುದು.

ಚಿತ್ರಕೃಪೆ: Sharath Venkatagiri

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಜಲಪಾತವು ರಮಣೀಯ ಪ್ರಕೃತಿ ಸೊಬಗಿನ ಮಧ್ಯದಲ್ಲಿ ಜಲಮೂಲವೊಂದರಿಂದ ಉಂಟಾಗಿದ್ದು ಪ್ರಕೃತಿಪ್ರಿಯ ಪ್ರವಾಸಿಗರು ಇಲ್ಲಿ ಆನಂದಮಯ ಸಮಯ ಕಳೆಯಬಹುದು. ಈ ಜಲಪಾತದ ಬಳಿ ತಂಗಲು ಕಾಟೆಜುಗಳು, ಹೋಟೆಲ್ ಲಭ್ಯ. ಆದರೆ ಮುಂಚಿತವಾಗೆ ಕ್ಜಾಯ್ದಿರಿಸಿ ಹೊರಡುವುದು ಉತ್ತಮ. ಸಾತೋಡಿ ಬಳಿಯಿರುವ ಒಂದು ಹೋಟೆಲ್.

ಚಿತ್ರಕೃಪೆ: ShilpaSV

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿಯ ಜಲಪಾತದಿಂದ ಧುಮುಕುವ ನೀರು ಮುಂದೆ ಸಾಗುತ್ತ ಕೊಡಸಳ್ಳಿ ಜಲಾಶಯದಲ್ಲಿ ಸಮ್ಗ್ರಹವಾಗುತ್ತದೆ ಹಾಗೂ ಆ ನಂತರ ಕಾಳಿ ನದಿಯಲ್ಲಿ ಸೇರ್ಪಡೆಗೊಳ್ಳುತ್ತದೆ. ಕೊಡಸಳ್ಳಿ ಆಣೆಕಟ್ಟಿನ ಹಿನ್ನೀರು.

ಚಿತ್ರಕೃಪೆ: Krishna Kulkarni

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಕೊಡಸಳ್ಳಿ ಆಣೆಕಟ್ಟನ್ನು ಕರ್ನಾಟಕ ಪಾವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ನಿಂದ ನಿರ್ಮಾಣ ಮಾಡಲಾಗಿದ್ದು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದೊಂದು ಜಲೋತ್ಪನ್ನ ಆಣೆಕಟ್ಟಾಗಿದೆ.

ಚಿತ್ರಕೃಪೆ: Karthickbala

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಜಲಪಾತದ ವಿಶೇಷವೆಂದರೆ ಇದರ ಬುಡದವರೆಗೂ ಇಳಿಯಬಹುದಾಗಿದ್ದು ಇದರ ಅಂದ ಚೆಂದವನ್ನು ಬಹು ಹತ್ತಿರದಿಂದ ಆಸ್ವಾದಿಸಬಹುದು.

ಚಿತ್ರಕೃಪೆ: Hema Priyadharshini

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಮಳೆಗಾಲದ ಸಮಯದಲ್ಲಿ ಇದು ಮೈದುಂಬಿ ಹರಿಯುವುದರೊಂದಿಗೆ ಸುತ್ತಲಿನ ಪರಿಸರವೂ ಸಹ ಸಾಕಷ್ಟು ಹಸಿರುಮಯವಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಲಪಾತ ತಾಣಕ್ಕೆ ಭೇಟಿ ನೀಡಲಾರಂಭಿಸುತ್ತಾರೆ.

ಚಿತ್ರಕೃಪೆ: Subramanya C K

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಯಲ್ಲಾಪುರವು ಹುಬ್ಬಳ್ಳಿಯಿಂದ, ಬೆಳಗಾವಿಯಿಂದ, ಕಾರವಾರದಿಂದ ಹಾಗೂ ಬೆಂಗಳೂರಿನಿಂದ ಕ್ರಮವಾಗಿ 70, 152, 100, 427 ಕಿ.ಮೀ ಗಳಷ್ಟು ದೂರವಿದ್ದು ಬಸ್ಸುಗಳು ದೊರೆಯುತ್ತವೆ. ಮುಂದೆ ಯಲ್ಲಾಪುರದ ಹೋಟೆಲಿನಲ್ಲಿ ತಂಗಿ ಸಾತೋಡಿ ಹಾಗೂ ಮಾಗೋಡು ಜಲಪಾತ ತಾಣಗಳಿಗೆ ಭೇಟಿ ನೀಡಬಹುದು.

ಚಿತ್ರಕೃಪೆ: Tiruka.yatrika

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಮಾಗೋಡು ಜಲಪಾತವೂ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು ಯಲ್ಲಾಪುರದ ಬಳಿಯಲ್ಲೆ ಇರುವುದರಿಂದ ಮಳೆಗಾಲದ ಸಮಯದಲ್ಲಿ ಪ್ರವಾಸಿಗರು ಯಲ್ಲಾಪುರಕ್ಕೆ ತೆರಳಿ ಈ ಎರಡೂ ಅದ್ಭುತ ಜಲಪಾತಗಳನ್ನು ನೋಡಿ ಆನಂದಿಸಬಹುದು.

ಚಿತ್ರಕೃಪೆ: Prad.gk

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಮಾಗೋಡು ಜಲಪಾತ ಸಾತೋಡಿಯ ವಿರುದ್ಧ ದಿಕ್ಕಿನಲ್ಲಿದ್ದು ಮಾಗೋಡು ಎಂಬ ಸ್ಥಳದಿಂದ ಸುಮಾರು ಮೂರು ಕಿ.ಮೀ ಹಾಗೂ ಯಲ್ಲಾಪುರದಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿಗೂ ಸಹ ತೆರಳಲು ಬಾಡಿಗೆ ಆಟೋಗಳು, ಕಾರುಗಳು ಯಲ್ಲಾಪುರದಿಂದ ದೊರೆಯುತ್ತವೆ.

ಚಿತ್ರಕೃಪೆ: Tiruka.yatrika

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಮೂಲತಃ ಮಾಗೋಡು ಜಲಪಾತ ಬೆಡ್ತಿ ಅಥವಾ ಶಲ್ಮಲ ನದಿಯಿಂದ ಉಂಟಾದ ಜಲಪಾತವಾಗಿದೆ. ಒಟ್ಟು ಎರಡು ಹಂತಗಳಲ್ಲಿ ಈ ಜಲಪಾತ ಭುವಿಗೆ ಧುಮುಕುತ್ತದೆ ಹಾಗೂ ಒಟ್ಟಾರೆ ಸುಮಾರು 108 ಮೀ. ಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: krishanu_seal

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಸಾತೋಡಿ ಹಾಗೂ ಮಾಗೋಡು ಜಲಪಾತಗಳು:

ಈ ಜಲಪಾತದ ಬುಡಕ್ಕೂ ಸಹ ತೆರಳಬಹುದಾಗಿದ್ದು ಮಳೆಗಾಲದಲ್ಲಿ ಇದು ಕೊಂಚ ಅಪಾಯಕಾರಿ. ಅಲ್ಲದೆ ಕೆಳಗಿಳಿದ ನಂತರ ಮಾಗೋಡು ಜಲಪಾತದ ಸಂಪೂರ್ಣ ನೋಟ ನೋಡಲಾಗುವುದಿಲ್ಲ. ಹೀಗಾಗಿ ನಿಗದಿಪಡಿಸಿದ ವೀಕ್ಷಣಾ ಕೇಂದ್ರದಿಂದ ಈ ಜಲಪಾತದ ಗಮ್ಯವಾದ ನೋಟವನ್ನು ಪಡೆಯಬಹುದು.

ಚಿತ್ರಕೃಪೆ: ShrinivasN

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X