Search
  • Follow NativePlanet
Share
» »1000 ವರ್ಷಗಳ ಇತಿಹಾಸವಿರುವ ಪ್ರಸಿದ್ದ 10 ದೇವಾಲಯಗಳು

1000 ವರ್ಷಗಳ ಇತಿಹಾಸವಿರುವ ಪ್ರಸಿದ್ದ 10 ದೇವಾಲಯಗಳು

ಭಾರತ ದೇಶವು ದೇವಾಲಯದ ತವರುರು. ಈ ಭಾರತದಲ್ಲಿ ಗಲ್ಲಿಗೆ ಒಂದೊಂದು ದೇವಾಲಯಗಳಿವೆ. ಈ ದೇವಾಲಯಗಳಿಂದ ನಮಗೆ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂಬ ಕಾರಣದಿಂದ ಭಕ್ತಿಯಿಂದ ದೇವರನ್ನು ನಮಿಸುತ್ತೇವೆ.

ಭಾರತ ದೇಶವು ದೇವಾಲಯದ ತವರುರು. ಈ ಭಾರತದಲ್ಲಿ ಗಲ್ಲಿಗೆ ಒಂದೊಂದು ದೇವಾಲಯಗಳಿವೆ. ಈ ದೇವಾಲಯಗಳಿಂದ ನಮಗೆ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂಬ ಕಾರಣದಿಂದ ಭಕ್ತಿಯಿಂದ ದೇವರನ್ನು ನಮಿಸುತ್ತೇವೆ. ಆದರೆ ಭಾರತದ ಪುರಾತನವಾದ, ಹಲವಾರು ಐತಿಹಾಸಿಕವಾದ, ಮಹಿಮಾನ್ವಿತವಾದ, ಸುಂದರ ವಾಸ್ತು ಶಿಲ್ಪದಿಂದ ಕೂಡಿದ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡಬೇಕು ಎಂಬುದು ಸಹಜವಾಗಿ ಎಲ್ಲಾರ ಮನದಾಸೆಯಾಗಿರುತ್ತದೆ. ನಮ್ಮ ಸುಂದರ ಭಾರತದಲ್ಲಿ ಸಾವಿರ ವರ್ಷಗಳ ಇತಿಹಾಸ ಹೊಂದಿರುವ 10 ದೇವಾಲಯದ ಬಗ್ಗೆ ಈ ಪ್ರಸುತ್ತ ಲೇಖನದಲ್ಲಿ ತಿಳಿಯಿರಿ.

ಅಂಬರನಾಥ ದೇವಾಲಯ

ಅಂಬರನಾಥ ದೇವಾಲಯ

ಈ ಅಂಬರನಾಥ ದೇವಾಲಯವು ಮಹಾರಾಷ್ಟ್ರದಲ್ಲಿನ ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಮಹಾಶಿವನು ನೆಲೆಸಿದ್ದಾನೆ. ಈ ಶಿವನನು ಅಂಬರನಾಥ ಅಥವಾ ಅಂಬರೇಶ್ವರ ದೇವಾಲಯ ಎಂದು ಸಹ ಕರೆಯುತ್ತಾರೆ. ಇದನ್ನು 1060 ರಲ್ಲಿ ಚಿತ್ರರಾಜ ನಿರ್ಮಿಸಿದ ಎನ್ನಲಾಗಿದೆ.
PC:Rachna 13

ಬ್ರಿಹಿಡೇಶ್ವರ ದೇವಾಲಯ

ಬ್ರಿಹಿಡೇಶ್ವರ ದೇವಾಲಯ

ಈ ಬ್ರಿಹಿಡೇಶ್ವರ ದೇವಾಲಯವು ತಮಿಳುನಾಡಿನ ತಂಜಾವುರಿನಲ್ಲಿದೆ. ಬ್ರಿಹಿಡೇಶ್ವರ ದೇವಾಲಯದಲ್ಲಿ ಮಹಾ ಶಿವನು ನೆಲೆಸಿದ್ದಾನೆ. ಈ ದೇವಾಲಯವನ್ನು ರಾಜಾರಾಜೇಶ್ವರ ದೇವಾಲಯ ಎಂದು ಸಹಾ ಕರೆಯುತ್ತಾರೆ. ಇದು ಅತ್ಯಂತ ಹಳೆಯ ದೇವಾಲಯದಲ್ಲಿ ಒಂದಾಗಿದೆ. ಈ ದೇವಾಲಯವನ್ನು ಕ್ರಿ,ಪೂ 1010 ರಲ್ಲಿ ಚೋಳರ ವಾಸ್ತು ಶಿಲ್ಪದಲ್ಲಿ ರಾಜಾ ರಾಜಾ ಚೋಳ ನಿರ್ಮಿಸಿದ ದೇವಾಲಯವಾಗಿದೆ.

PC Prince Gladson


ಕೈಲಾಸ ದೇವಾಲಯ

ಕೈಲಾಸ ದೇವಾಲಯ

ಈ ದೇವಾಲಯವು ಭಾರತದ ಅತಿ ದೊಡ್ಡದಾದ ಕಲ್ಲಿನ ದೇವಾಲಯವಾಗಿದೆ. ಇದು ಮಹಾರಾಷ್ಟ್ರದ ಎಲ್ಲೋರದಲ್ಲಿದೆ. ಇದನ್ನು 8ನೇ ಶತಮಾನದಲ್ಲಿ ಪಲ್ಲವರ ವಾಸ್ತು ಶಿಲ್ಪದಲ್ಲಿ ನಿರ್ಮಿಸಲಾಗಿದೆ.

PC Arian Zwegers


ಶೋರೆ ದೇವಾಲಯ

ಶೋರೆ ದೇವಾಲಯ

ಈ ಶೋರೆ ದೇವಾಲಯವು ತಮಿಳುನಾಡಿನ ಮಹಾಬಲಿಪುರಂನಲ್ಲಿದೆ. ಇದು ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ಹಳೆಯದಾದ ದೇವಾಲಯವಾಗಿದ್ದು, ಪಲ್ಲವರ ರಾಜ ಎರಡನೇ ನರಸಿಂಹ ವರ್ಮನ್ ಕ್ರಿ,ಪೂ 700 ರಲ್ಲಿ ನಿರ್ಮಿಸಿದನು ಎಂದು ಊಹಿಸಲಾಗಿದೆ.

PC Namrta Rai


ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

12 ಜೋತ್ರ್ಯಿಲಿಂಗಗಳ ಪೈಕಿ ಈ ಸೋಮನಾಥ ದೇವಾಲಯವು ಒಂದಾಗಿದೆ. ಈ ದೇವಾಲಯವು ಮಹಾ ಶಿವನ ದೇವಾಲಯವಾಗಿದ್ದು, ಸುಮಾರು 7 ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ ಎನ್ನಲಾಗಿದೆ. ಈ ಪುಣ್ಯ ಕ್ಷೇತ್ರವು ಗುಜರಾತ್‍ನಲ್ಲಿದೆ. ಈ ದೇವಾಲಯದ ನಿರ್ಮಾಣವನ್ನು ಸಿಯೂನ ಸಾಮ್ರಾಜ್ಯಸ್ಥರು ಸ್ಥಾಪನೆ ಮಾಡಿದರು ಆದರೆ ಕ್ರಿ.ಪೂ 1024 ರಲ್ಲಿ ಮೊಹಮದ್ ಘಜ್ನಿಯು ಈ ಮಹೊನ್ನತ ದೇವಾಲಯವನ್ನು ನಾಶ ಪಡಿಸಿದನು.

PC Anhilwara


ಚೆನ್ನಕೇಶವ ದೇವಾಲಯ

ಚೆನ್ನಕೇಶವ ದೇವಾಲಯ

ಈ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ದ ಪುರಾತನವಾದ ದೇವಾಲಯವಾಗಿದೆ. ಚೆನ್ನಕೇಶವ ದೇವಾಲಯವು ಬೇಲೂರಿನ ಯೋಗಾಚಿ ನದಿಯ ದಡದ ಮೇಲೆ ನಿರ್ಮಿಸಲಾಗಿದೆ. ಹೊಯ್ಸಳರು ಸುಮಾರು 10ನೇ ಶತಮಾನ ದಿಂದ 10 ನೇ ಶತಮಾನದ ಮಧ್ಯೆ ಭಾಗದಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ.

PC: Gayatri Krishnamoorthy


ಕೇದಾರನಾಥ ದೇವಾಲಯ

ಕೇದಾರನಾಥ ದೇವಾಲಯ

ಕೇದಾರನಾಥ ದೇವಾಲಯವನ್ನು ಕ್ರಿ.ಪೂ 8ನೇ ಶತಮಾನದಲ್ಲಿ ಕಟ್ಟಿಸಿರಬಹುದು ಎಂದು ಊಹಿಸಲಾಗಿದೆ. ಇದೊಂದು ಶಿವನ ದೇವಾಲಯವಾಗಿದ್ದು ಆದಿ ಗುರು ಶಂಕರಾಚಾರ್ಯರು ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇದು 12 ಜೋತ್ರ್ಯಿಲಿಂಗಗಳಲ್ಲಿ ಕೇದಾರನಾಥ ದೇವಾಲಯದ ಲಿಂಗವು ಒಂದಾಗಿದೆ.

PC: Shaq774


ಆದಿ ಕುಂಬೇಶ್ವರ ದೇವಾಲಯ

ಆದಿ ಕುಂಬೇಶ್ವರ ದೇವಾಲಯ

ಆದಿ ಕುಂಬೇಶ್ವರ ದೇವಾಲಯವು ತಮಿಳುನಾಡಿನ ಕುಂಭಕೋಣಂನಲ್ಲಿ ಇದೆ. ಈ ದೇವಾಲಯವನ್ನು ಚೋಳರು ಕ್ರಿ,ಪೂ 9 ನೇ ಶತಮಾನದಲ್ಲಿ ನಿರ್ಮಿಸಿದರು ಎನ್ನಲಾಗಿದೆ. ಈ ದೇವಾಲಯದಲ್ಲಿ ಮಾಹಾ ದೇವ ಶಿವನು ನೆಲೆಸಿದ್ದಾನೆ.

PC:Hari Krishna

ಜಗತ್‍ಪಿತ ಬ್ರಹ್ಮ ದೇವಾಲಯ

ಜಗತ್‍ಪಿತ ಬ್ರಹ್ಮ ದೇವಾಲಯ

ಜಗತ್‍ಪಿತ ಬ್ರಹ್ಮ ದೇವಾಲಯವು ಮಹಾರಾಷ್ಟ್ರದಲ್ಲಿ ಬಿಟ್ಟು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇದು ಏಕೈಕ ಬ್ರಹ್ಮನ ದೇವಾಲಯವಾಗಿದೆ. ಈ ದೇವಾಲಯವು ಸುಮಾರು 2000 ವರ್ಷಗಳ ಇತಿಹಾಸ ಹೊಂದಿದೆ ಎಂದು ಮೂಲಗಳು ತಿಳಿಸುತ್ತವೆ.

PC : V.Vasant

ವರದರಾಜ ಪೆರುಮಾಳ್ ದೇವಾಲಯ

ವರದರಾಜ ಪೆರುಮಾಳ್ ದೇವಾಲಯ

ಈ ದೇವಾಲಯವನ್ನು ಮಾಹಾ ವಿಷ್ಣುವಿಗೆ ಆರಾಧಿಸುವ ದೇವಾಲಯವಾಗಿದೆ. ಕಾಂಚಿಪರಂನಲ್ಲಿ ವರದರಾಜ ಪೆರುಮಾಳ್ ದೇವಾಲಯವಿದ್ದು, 11 ನೇ ಶತಮಾನದಲ್ಲಿ ಚೋಳರು ಈ ಪುಣ್ಯ ಕ್ಷೇತ್ರವನ್ನು ನಿರ್ಮಿಸಿದರು ಎನ್ನಲಾಗಿದೆ.

PC:Hari Krishna

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X