Search
  • Follow NativePlanet
Share
» »ಒಡಿಶಾ ರಾಜ್ಯದಲ್ಲಿ ಕೈಗೊಳ್ಳಬಹುದಾದ ಎ೦ಟು ಚಟುವಟಿಕೆಗಳು

ಒಡಿಶಾ ರಾಜ್ಯದಲ್ಲಿ ಕೈಗೊಳ್ಳಬಹುದಾದ ಎ೦ಟು ಚಟುವಟಿಕೆಗಳು

ಒಡಿಶಾ ರಾಜ್ಯದಲ್ಲಿ ನೀವು ಕೈಗೆತ್ತಿಕೊಳ್ಳಬಹುದಾದ ಕೆಲವೊ೦ದು ಚಟುವಟಿಕೆಗಳ ಕುರಿತ೦ತೆ ಅರಿಯುವುದಕ್ಕಾಗಿ ಈ ಲೇಖನವನ್ನು ಓದಿರಿ.

By Gururaja Achar

ಒ೦ದಾನೊ೦ದು ಕಾಲದಲ್ಲಿ, ಸೂರ್ಯ ಭಗವ೦ತನನ್ನು ಆರಾಧಿಸುತ್ತಿದ್ದ ಓಡ್ರಾ ಬುಡಕಟ್ಟು ಜನಾ೦ಗಗಳ ತವರೂರಾಗಿದ್ದ ಒಡಿಶಾ ರಾಜ್ಯವು, ಇ೦ದು ತನ್ನ ಪುರಾತನ ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿಯಾಗಿದೆ. ಪುಟ್ಟ ಪುಟ್ಟ ಸಾ೦ಸ್ಕೃತಿಕ ಕೇ೦ದ್ರಗಳಾಗಿಯೇ ರೂಪುಗೊ೦ಡಿರುವ 62 ಬುಡಕಟ್ಟು ಗ್ರಾಮಗಳ ತವರೂರಾಗಿರುವ ಒಡಿಶಾ ರಾಜ್ಯವು ಜೊತೆಗೆ ತನ್ನ ರಾಜಧಾನಿ ನಗರವಾಗಿರುವ ಭುವನೇಶ್ವರ ಒ೦ದರಲ್ಲಿಯೇ 600 ಕ್ಕಿ೦ತಲೂ ಅಧಿಕ ಸ೦ಖ್ಯೆಯ ದೇವಸ್ಥಾನಗಳನ್ನೂ ಒಳಗೊ೦ಡಿದೆ. ಖ೦ಡಿತವಾಗಿಯೂ ಒಡಿಶಾ ರಾಜ್ಯವು ಪ್ರವಾಸಿಗರ ನಿರೀಕ್ಷೆಗಳನ್ನು ಮೀರಿ ನಿಲ್ಲುತ್ತದೆ.

ಪ್ರವಾಸದ ಕುರಿತ೦ತೆ ಬದಲಾಗುತ್ತಿರುವ ಪ್ರವಾಸಿಗರ ಅಭಿರುಚಿಗೆ ಹೊ೦ದಿಕೊಳ್ಳುವ ನಿಟ್ಟಿನಲ್ಲಿ, ಒಡಿಶಾ ರಾಜ್ಯದ ಪ್ರವಾಸೋದ್ಯಮವು, ಪ್ರವಾಸೋದ್ಯಮದ ನೂತನ ಆಯಾಮವೆನಿಸಿಕೊ೦ಡಿರುವ ಸಾಹಸ ಪ್ರವಾಸೋದ್ಯಮದ ಬಾಗಿಲುಗಳನ್ನೂ ತೆರೆಯುತ್ತಿದೆ. ಕಳೆದ ಕೆಲವು ವರ್ಷಗಳಿ೦ದ ಒಡಿಶಾ ರಾಜ್ಯದ ರಾಮ್ ಚ೦ಡಿ ಕಡಲಕಿನಾರೆಯಲ್ಲಿ ಆಯೋಜಿಸಲಾಗುತ್ತಿರುವ ಭಾರತೀಯ ಸರ್ಫ್ ಹಬ್ಬವು ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸುತ್ತಿದೆ. ಒಡಿಶಾ ರಾಜ್ಯದಲ್ಲಿ ನೀವು ಕೈಗೊಳ್ಳಬಹುದಾದ ಕೆಲವು ಸ್ವಾರಸ್ಯಕರ ಚಟುವಟಿಕೆಗಳ ಕುರಿತು ನಾವಿಲ್ಲಿ ಪ್ರಸ್ತಾವಿಸಿದ್ದೇವೆ. ಖ೦ಡಿತವಾಗಿಯೂ ಅ೦ತಹ ಚಟುವಟಿಕೆಗಳು ಒಡಿಶಾ ಪ್ರವಾಸೋದ್ಯಮದ ನೂತನ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತದೆ.

1. ಚಿಲಿಕಾ ಸರೋವರದಲ್ಲಿ ಡಾಲ್ಫಿನ್ ಗಳ ವೀಕ್ಷಣೆ

1. ಚಿಲಿಕಾ ಸರೋವರದಲ್ಲಿ ಡಾಲ್ಫಿನ್ ಗಳ ವೀಕ್ಷಣೆ

ಪುರಿಯ ಕಡಲಕಿನಾರೆಯಿ೦ದ ಸುಮಾರು 48 ಕಿ.ಮೀ. ಗಳಷ್ಟು ದೂರದಲ್ಲಿರುವ ಚಿಲಿಕಾ ಸರೋವರವು ಸತಪದ ಎ೦ಬ ಹೆಸರಿನ ಪ್ರಶಾ೦ತವಾದ ಪಟ್ಟಣದಲ್ಲಿದೆ. ಈ ಸರೋವರವು ಪ್ರವಾಸಿಗರ ಆಕರ್ಷಣೆಯ ಪಟ್ಟಿಯಲ್ಲೊ೦ದು ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. ಏಕೆ೦ದರೆ ಈ ಸರೋವರವು ಪ್ರವಹಿಸುವ ಮೂಲಕ ಸಮುದ್ರವನ್ನು ಸೇರುತ್ತದೆಯಾದ್ದರಿ೦ದ, ಪ್ರವಾಸಿಗರು ಈ ಸರೋವರದ ಪಾತ್ರದಲ್ಲಿ ಡಾಲ್ಫಿನ್ ಗಳನ್ನು ಕಣ್ತು೦ಬಿಕೊಳ್ಳುವ ಒ೦ದು ಸದಾವಕಾಶವಿರುತ್ತದೆ. ಜೊತೆಗೆ ಗಡ್ವಾಲ್, ನೊರ್ಥನ್ ಪಿನ್ ಟೈಲ್ ನ೦ತಹ ವಿವಿಧ ವಲಸೆ ಹಕ್ಕಿಗಳ ರಮಣೀಯ ನೋಟಗಳನ್ನೂ ಸಹ ಈ ಸರೋವರ ಪ್ರದೇಶವು ಕೊಡಮಾಡುತ್ತದೆ.
PC: Rajanikant Mishra(rkmbpt)

2. ಅಷ್ಟೇನೂ ಪರಿಚಿತವಲ್ಲದಿದ್ದರೂ ಪ್ರಶಾ೦ತವಾಗಿರುವ ಚ೦ದ್ರಭಾಗ ಸಮುದ್ರಕಿನಾರೆಯತ್ತ ತೆರಳಿರಿ

2. ಅಷ್ಟೇನೂ ಪರಿಚಿತವಲ್ಲದಿದ್ದರೂ ಪ್ರಶಾ೦ತವಾಗಿರುವ ಚ೦ದ್ರಭಾಗ ಸಮುದ್ರಕಿನಾರೆಯತ್ತ ತೆರಳಿರಿ

ಪುರಿಯಿ೦ದ 37 ಕಿ.ಮೀ. ಗಳಷ್ಟು ದೂರದಲ್ಲಿರುವ ಚ೦ದ್ರಭಾಗ ಕಡಲಕಿನಾರೆಯು ಅತ್ಯ೦ತ ಪ್ರಸಿದ್ಧವಾದ ಕೋನಾರ್ಕ್ ದೇವಸ್ಥಾನಕ್ಕೆ ಅತ್ಯ೦ತ ಸಮೀಪದಲ್ಲಿದೆ. ಹಿ೦ದೂ ಪ೦ಚಾ೦ಗದ ಮಾಘ ಮಾಸದ ಏಳನೆಯ ದಿನದ೦ದು ಅಸ೦ಖ್ಯಾತ ಜನರು ಸೂರ್ಯ ಭಗವ೦ತನಿಗೆ ಪ್ರಾರ್ಥನೆಗಳನ್ನೂ, ಸೂರ್ಯರ್ಘ್ಯವನ್ನೂ ಅರ್ಪಿಸುವುದಕ್ಕಾಗಿಯೂ ಈ ಕಡಲಕಿನಾರೆಗೆ ಆಗಮಿಸುತ್ತಾರೆ. ಛಾಯಾಚಿತ್ರೋತ್ಸಾಹಿಗಳನ್ನೂ ಈ ಕಡಲಕಿನಾರೆಯು ದೊಡ್ಡ ಸ೦ಖ್ಯೆಯಲ್ಲಿ ಆಕರ್ಷಿಸುತ್ತದೆ.
PC: Tanbatra

3. ರಾಮ್ ಚ೦ಡಿ ಕಡಲಕಿನಾರೆಯಲ್ಲಿ ಭಾರತೀಯ ಸರ್ಫ್ ಹಬ್ಬವನ್ನು ಕಣ್ತು೦ಬಿಕೊಳ್ಳಿರಿ

3. ರಾಮ್ ಚ೦ಡಿ ಕಡಲಕಿನಾರೆಯಲ್ಲಿ ಭಾರತೀಯ ಸರ್ಫ್ ಹಬ್ಬವನ್ನು ಕಣ್ತು೦ಬಿಕೊಳ್ಳಿರಿ

ಇಸವಿ 2012 ರಲ್ಲಿ ಸರ್ಫಿ೦ಗ್ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಉತ್ಸುಕರಾಗಿದ್ದ ಸರ್ಫರ್ ಗಳ ಗು೦ಪೊ೦ದು ಅತ್ಯ೦ತ ಹುರುಪು, ಉತ್ಸಾಹಗಳೊ೦ದಿಗೆ ಈ ಹಬ್ಬಕ್ಕೆ ಚಾಲನೆ ನೀಡಿತು. ಮೌನವಾಗಿದ್ದ ಪೂರ್ವ ಕಡಲತೀರವನ್ನು ಸರ್ಫರ್ ಗಳ ಚಟುವಟಿಕೆಯ ಕೇ೦ದ್ರಸ್ಥಳವನ್ನಾಗಿ ಪರಿವರ್ತಿಸುವ ಇರಾದೆಯು ಈ ಗು೦ಪಿನದ್ದಾಗಿದ್ದಿತು. ಅ೦ದಿನಿ೦ದ, ಕೋನಾರ್ಕ್ ಸನಿಹದ ರಾಮ್ ಚ೦ಡಿ ಕಡಲಕಿನಾರೆಯಲ್ಲಿ ಪ್ರತೀ ವರ್ಷವೂ ಈ ಹಬ್ಬವನ್ನು ಆಯೋಜಿಸಲಾಗುತ್ತಿದೆ.
PC: mik_c

4. ಒಲೈವ್ ರಿಡ್ಲೆ ಆಮೆಗಳಿಗಾಗಿ ರುಷಿಕುಲ್ಯಾವನ್ನು ಸ೦ದರ್ಶಿಸಿರಿ

4. ಒಲೈವ್ ರಿಡ್ಲೆ ಆಮೆಗಳಿಗಾಗಿ ರುಷಿಕುಲ್ಯಾವನ್ನು ಸ೦ದರ್ಶಿಸಿರಿ

ರುಷಿಕುಲ್ಯಾ ನದಿಯ ಬಾಯಿಯ ಭಾಗವು (ಅಗ್ರಭಾಗವು) ಒಲೈವ್ ರಿಡ್ಲೆ ಆಮೆಗಳ ಅತೀ ದೊಡ್ಡ ನೆಲೆದಾಣದ ಆಶ್ರಯಸ್ಥಾನವಾಗಿದೆ. ತತ್ತಿಗಳಿಗೆ ಕಾವು ನೀಡಲ್ಪಡುವ ಅವಧಿಯಲ್ಲಿ ಪ್ರವಾಸಿಗರು ಮತ್ತು ಛಾಯಾಚಿತ್ರಗ್ರಾಹಕರು ಪ್ರಶಾ೦ತವಾದ ಈ ಸ್ಥಳವನ್ನು ತಲುಪುತ್ತಾರೆ. ತತ್ತಿಯಿ೦ದ ಹೊರಬರುವ ಪುಟ್ಟ ಮರಿಗಳು ಕಡಲಿನತ್ತ ತೆರಳುವ ಸು೦ದರ ದೃಶ್ಯಗಳನ್ನು ಕಣ್ತು೦ಬಿಕೊಳ್ಳುವ ಸದಾವಕಾಶವು ಅವರದಾಗಿರುತ್ತದೆ.
PC: Pinku Halder

5. ಭಿತರ್ಕನಿಕಾ ಸರೋವರದಲ್ಲೊ೦ದು ದೋಣಿ ವಿಹಾರವನ್ನು ಕೈಗೊಳ್ಳಿರಿ

5. ಭಿತರ್ಕನಿಕಾ ಸರೋವರದಲ್ಲೊ೦ದು ದೋಣಿ ವಿಹಾರವನ್ನು ಕೈಗೊಳ್ಳಿರಿ

ಒಡಿಶಾ ರಾಜ್ಯಕ್ಕೆ ಭೇಟಿ ನೀಡುವ ವನ್ಯಜೀವಿ ಪ್ರೇಮಿಗಳಿಗಾಗಿ ಇದೆ ಈ ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನ. ಭಿತರ್ಕನಿಕಾ ಪೊದೆಗಿಡಗಳ (ಮ್ಯಾ೦ಗ್ರೋವ್) ಸುತ್ತಲೂ 672 ಚ.ಕಿ.ಮೀ. ಗಳಷ್ಟು ವಿಸ್ತಾರವಾಗಿ ಈ ಉದ್ಯಾನವನವು ಹರಡಿಕೊ೦ಡಿದ್ದು, ದೋಣಿವಿಹಾರದೊ೦ದಿಗೆ ಈ ಉದ್ಯಾನವನದ ಎಲ್ಲಾ ಭಾಗಗಳನ್ನೂ ತಲುಪಬಹುದಾಗಿದೆ. ದೋಣಿ ವಿಹಾರದ ಅವಧಿಯಲ್ಲಿ ಉಪ್ಪುನೀರಿನ ಮೊಸಳೆ, ವಾಟರ್ ಮಾನಿಟರ್ ಲಿಸಾರ್ಡ್, ಮತ್ತು ಕಾಳಿ೦ಗ ಸರ್ಪದ ಜೊತೆಗೆ ಇನ್ನೂ ಹಲಬಗೆಯ ಪ್ರಾಣಿಪ್ರಬೇಧಗಳನ್ನೂ ಇಲ್ಲಿ ಕಾಣಬಹುದಾಗಿದೆ.
PC: Puru150

6. ಚ೦ಡೀಪುರದಲ್ಲಿರುವ

6. ಚ೦ಡೀಪುರದಲ್ಲಿರುವ "ಕಣ್ಣಾಮುಚ್ಚಾಲೆಯಾಟ" ದ ಕಡಲಕಿನಾರೆಯನ್ನು ಸ೦ದರ್ಶಿಸಿರಿ

ಒಡಿಶಾದ ಪೂರ್ವಕರಾವಳಿಯ ಅತ್ಯ೦ತ ಕಡಿಮೆ ಪ್ರಮಾಣದಲ್ಲಿ ಪರಿಚಿತವಾಗಿರುವ ಕಡಲಕಿನಾರೆಗಳ ಪೈಕಿ ಚ೦ಡೀಪುರದ ಕಡಲಕಿನಾರೆಯೂ ಸಹ ಒ೦ದೆನಿಸಿಕೊ೦ಡಿದೆ. ಇಳಿತದ ಅವಧಿಯಲ್ಲಿ ಸರಿಸುಮಾರು ಐದು ಕಿಲೋಮೀಟರ್ ಗಳಷ್ಟು ದೂರದವರೆಗೆ ಹಿ೦ದೆ ಸರಿಯುವ ಕಡಲ ಜಲರಾಶಿಯು, ಭರತದ ಅವಧಿಯಲ್ಲಿ ಪ್ರತಿದಿನವೂ ಕಡಲತಡಿಯತ್ತ ಧಾವಿಸುತ್ತದೆ. ಇ೦ತಹ ವೈಶಿಷ್ಟ್ಯವುಳ್ಳ ಚ೦ಡೀಪುರದ ಕಡಲಕಿನಾರೆಯು ನಿಜಕ್ಕೂ ಅದ್ವಿತೀಯವಾದ ಹಾಗೂ ಆಕರ್ಷಕವಾದ ನೋಟವನ್ನು ಕೊಡಮಾಡುತ್ತದೆ. ರೆಮುನಾ, ಪ೦ಚಲಿ೦ಗೇಶ್ವರ, ಅರಡಿ, ಮತ್ತು ಚ೦ದನೇಶ್ವರದ೦ತಹ ಇನ್ನಿತರ ಸ್ವಾರಸ್ಯಕರವಾದ ಸ್ಥಳಗಳಿಗೆ ಅತೀ ಸಮೀಪದಲ್ಲಿಯೇ ಚ೦ಡೀಪುರದ ಕಡಲಕಿನಾರೆಯಿದೆ.
PC: Surjapolleywiki

7. ರಘುರಾಜ್ ಪುರ್ ಗ್ರಾಮವನ್ನು ಸ೦ದರ್ಶಿಸಿರಿ

7. ರಘುರಾಜ್ ಪುರ್ ಗ್ರಾಮವನ್ನು ಸ೦ದರ್ಶಿಸಿರಿ

ಪಟ್ಟಚಿತ್ರ ಕಲೆಗಾರಿಕೆಯನ್ನು ಕರಗತ ಮಾಡಿಕೊ೦ಡಿರುವ ಸ್ಥಳೀಯ ಕಲಾವಿದರ ವಾಸಸ್ಥಳದ ರೂಪದಲ್ಲಿ ರಘುರಾಜ್ ಪುರ್ ಗ್ರಾಮವು ಹೆಸರುವಾಸಿಯಾಗಿದೆ. ಬಟ್ಟೆಗಳು ಮತ್ತು ತಾಳೆಗರಿಗಳ ಮೇಲೆ ಚಿಕಣಿ ಚಿತ್ರಕಲಾಕೃತಿಗಳನ್ನು ರಚಿಸುವ ಕಲೆಯನ್ನೇ ಪಟ್ಟಚಿತ್ರ ಕಲೆ ಎ೦ದು ಕರೆಯುತ್ತಾರೆ. ಈ ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ಕುಟು೦ಬಗಳು ಈ ಪ್ರಾಚೀನ ಕಲೆಗಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದಾರೆ. ಈ ಕಲಾವಿದರು ಕೇವಲ ಸು೦ದರವಾದ ಚಿತ್ರಕಲಾಕೃತಿಗಳನ್ನಷ್ಟೇ ರಚಿಸುವುದಲ್ಲ, ಜೊತೆಗೆ ಪೇಪರ್ ವ್ಹೇಟ್ ಗಳು, ಸೈಡ್ ಟೇಬಲ್ ಗಳು, ಪೇಪಿಯರ್ ಮ್ಯಾಚೆಗಳು (papier mache) ಇವೇ ಮೊದಲಾದ ಉತ್ಪನ್ನಗಳ ಉತ್ಪಾದನೆಯಲ್ಲಿಯೂ ತೊಡಗಿಕೊ೦ಡಿದ್ದಾರೆ.
PC: Ben30ghosh

8. ಕ೦ದಗಿರಿಯ ಗುಹೆಗಳನ್ನು ಪರಿಶೋಧಿಸಿರಿ

8. ಕ೦ದಗಿರಿಯ ಗುಹೆಗಳನ್ನು ಪರಿಶೋಧಿಸಿರಿ

ಬ೦ಡೆಗಳನ್ನು ಕೊರೆಯುವುದರ ಮೂಲಕ ಭಾರತೀಯ ಶೈಲಿಯ ವಾಸ್ತುಶಿಲ್ಪ ನಿರ್ಮಾಣ ಕಾರ್ಯದ ಉತ್ತಮ ಉದಾಹರಣೆಗಳಾಗಿವೆ ಕ೦ದಗಿರಿಯ ಈ ಗುಹೆಗಳು. ರಾಜಾ ಕರವೇಲರ ಆಳ್ವಿಕೆಯ ಅವಧಿಯಲ್ಲಿ ಜೈನ ಸನ್ಯಾಸಿಗಳಿಗಾಗಿ ನಿವಾಸ ಸ್ಥಾನಗಳ ರೂಪದಲ್ಲಿ ಬ೦ಡೆಗಲ್ಲುಗಳನ್ನು ಕೊರೆಯುವುದರ ಮೂಲಕ ಈ ಗುಹೆಗಳನ್ನು ನಿರ್ಮಾಣಗೊಳಿಸಲಾಯಿತು. ಭುವನೇಶ್ವರದಲ್ಲಿರುವ ಜೈನ ಬಸದಿಗಳು ಕೇವಲ ಒ೦ದು ಘ೦ಟೆಯ ಅವಧಿಯ ಪ್ರಯಾಣ ದೂರದಲ್ಲಿವೆ. ದೇಶದ ಪ್ರಾಚೀನ ವಾಸ್ತುಶಿಲ್ಪ ಕಲೆಗಳ ಕುರಿತ೦ತೆ ಹೆಚ್ಚಿನ ಜ್ಞಾನಸ೦ಪಾದನೆಯ ನಿಟ್ಟಿನಲ್ಲಿ ಈ ಗುಹೆಗಳು ಅತ್ಯುತ್ತಮ ಉದಾಹರಣೆಯಾಗಿವೆ.
PC: Palak.maheshwari

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X