• Follow NativePlanet
Share
Menu
» »ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

Written By:

ನಮ್ಮ ಕರ್ನಾಟಕದಲ್ಲಿ ಅದ್ಭುತವಾದ ದೇವಾಲಯಗಳಿವೆ. ಆಧುನಿಕ ಕಾಲದಲ್ಲಿಯೂ ನಮ್ಮ ಕರ್ನಾಟಕವು ತನ್ನ ಸಾಂಸ್ಕøತಿಕ ಪರಂಪರೆಯನ್ನು ಸಂರಕ್ಷಿಸಿಟ್ಟ ಸ್ಥಳವಾಗಿದೆ. ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಹಾಗು ಆಧ್ಯಾತ್ಮಿಕತೆಯಿಂದ ಶ್ರೀಮಂತಗೊಂಡಿರುವ ಅನೇಕ ಸ್ಥಳಗಳು ನಮ್ಮ ಕರ್ನಾಟಕ ರಾಜ್ಯದಲ್ಲಿದೆ. ಜಗತ್ತಿನ ವಿವಿಧ ಭಾಗಗಳಿಂದ ದೇಶಿಯ ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಕರ್ನಾಟಕದಲ್ಲಿನ ದೇವಾಲಯಗಳು ಕೇವಲ ತನ್ನ ಪೂವ ಪವಿತ್ರತೆಗೆ ಅಲ್ಲದೇ ಇತಿಹಾಸ, ಪರಂಪರೆ ಮತ್ತು ಸಂಪ್ರದಾಯಗಳಲ್ಲಿಯೂ ಕೂಡ ಹೆಸರುವಾಸಿಯಾಗಿದೆ. ಇಷ್ಟೇ ಅಲ್ಲದೇ ಕರ್ನಾಟಕದ ದೇವಾಲಯಗಳು ಅತ್ಯಂತ ಪ್ರಾಚೀನ ಮತ್ತು ವಾಸ್ತುಶಿಲ್ಪದ ಅದ್ಭುತಗಳು. ಲೇಖನದಲ್ಲಿ ಕರ್ನಾಟಕದ 8 ಅತ್ಯಂತ ಪ್ರಸಿದ್ಧವಾದ ದೇವಾಲಯಗಳ ಬಗ್ಗೆ ತಿಳಿಯೋಣ.

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕೊಲ್ಲೂರು ಮೂಕಾಂಬಿಕಾ ದೇವಾಲಯ
ಮಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿದೆ ಕೊಲ್ಲೂರು. ಇಲ್ಲಿ ಆ ಮೂಕಾಂಬಿಕಾ ತಾಯಿಯ ದೇವಾಲಯವಿದೆ. ನಮ್ಮ ಕರ್ನಾಟಕದ ಈ ದೇವಾಲಯವು ಭಾರತದ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಕೊಲ್ಲೂರಿನ ಪಶ್ಚಿಮ ಘಟ್ಟಗಳಲ್ಲಿನ ಕೊಡಚಾದ್ರಿ ಬೆಟ್ಟಗಳ ನಡುವೆ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಈ ದೇವಾಲಯಕ್ಕೆ ಕನಿಷ್ಟ 1200 ವರ್ಷಗಳ ಹಿಂದೆ ನಿರ್ಮಾಣ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. ಅಸುರನಾದ ಮೂಕಾಸುರನನ್ನು ಸಂಹಾರ ಮಾಡಿ ಕೊಲ್ಲೂರು ಮೂಕಾಂಬಿಕೆಯಾಗಿ ಈ ಸ್ಥಳದಲ್ಲಿ ನೆಲೆಸಿದ್ದಾಳೆ. ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವರಾತ್ರಿ ಉತ್ಸವದ ಸಮಯದಲ್ಲಿ.

PC: Vedamurthy.j

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಉಡುಪಿ ಶ್ರೀ ಕೃಷ್ಣ ದೇವಾಲಯ
ಉಡುಪಿ ಶ್ರೀ ಕೃಷ್ಣ ದೇವಾಲಯವು ತನ್ನ ಅನನ್ಯವಾದ ಕೃಷ್ಣ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಶ್ರೀ ಕೃಷ್ಣನ ಭಕ್ತನಾದ ಕನಕದಾಸನನ್ನು ಜಾತಿಯ ಆಧಾರದ ಮೇಲೆ ಸ್ವಾಮಿಯ ದರ್ಶನವನ್ನು ನೀಡಲಿಲ್ಲ ಎಂದೂ ಆ ಭಗವಂತನೇ ತನ್ನ ಭಕ್ತನಿರುವ ದಿಕ್ಕಿಗೆ ತಿರುಗಿದನು ಎಂದು ಹೇಳಲಾಗುತ್ತದೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯಕ್ಕೆ ರಸ್ತೆ, ರೈಲು ಮತ್ತು ವಿಮಾನದ ಮಾರ್ಗದ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

PC: Ashok Prabhakaran

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಧರ್ಮಸ್ಥಳ ಮಂಜುನಾಥ ದೇವಾಲಯ
ಧರ್ಮಸ್ಥಳ ಮಂಜುನಾಥ ದೇವಾಲಯವು ನೇತ್ರಾವತಿ ನದಿಯ ದಡದಲ್ಲಿದೆ. ಇದು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ಮುಖ್ಯ ದೇವತೆಯಾಗಿ ಮಹಾಶಿವನು ಶ್ರೀ ಮಂಜುನಾಥ ಸ್ವಾಮಿಯು ನೆಲೆಸಿದ್ದಾನೆ. ಪ್ರತಿದಿನವೂ ಈ ದೇವಾಲಯಕ್ಕೆ ಸುಮಾರು 10,000 ಕ್ಕಿಂತ ಹೆಚ್ಚಿನ ಜನರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯದ ವಾರ್ಷಿಕ ಉತ್ಸವವು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ಈ ದೇವಾಲಯಕ್ಕೆ ವಿದೇಶದಿಂದಲೂ ಕೂಡ ಭಕ್ತರು ಭೇಟಿ ನೀಡುತ್ತಾರೆ.

PC: Naveenbmಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಗೋಕರ್ಣ ಮಹಾಬಲೇಶ್ವರ ದೇವಾಲಯ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣವು ಒಂದು ಪ್ರಸಿದ್ಧವಾದ ಯಾತ್ರಾ ಕೇಂದ್ರವಾಗಿದೆ. ಇಲ್ಲಿ ಒಂದು ಸುಂದರವಾದ ಬೀಚ್ ಕೂಡ ಇದೆ. ಗೋಕರ್ಣ ದೇವಾಲಯವು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಇಲ್ಲಿ ಗಣಪತಿ ದೇವಾಲಯವು ಕೂಡ ಇದೆ. ಈ ದೇವಾಲಯವನ್ನು ದಕ್ಷಿಣದ ಕಾಶಿ ಅಥವಾ ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಶಿವನ ದೇವಾಲಯಗಳಲ್ಲಿ ಅತ್ಯಂತ ಶಕ್ತಿವಂತ ದೇವಾಲಯಗಳಲ್ಲಿ ಇದು ಕೂಡ ಒಂದು ಎಂದು ಹೇಳಲಾಗಿದೆ.


PC: Sbblr geervaanee


ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಮುರುಡೇಶ್ವರ ದೇವಾಲಯ
ಮುರುಡೇಶ್ವರ ದೇವಾಲಯದ ಮುಖ್ಯವಾದ ಆಕರ್ಷಣೆ ಎಂದರೆ ಅದು ದೊಡ್ಡದಾದ ಶಿವನ ವಿಗ್ರಹವಾಗಿದೆ. ಇದನ್ನು ದೂರದಲ್ಲಿ ಇದ್ದರೂ ಕೂಡ ಕಾಣಬಹುದು. ಇದು ವಿಶ್ವದಲ್ಲಿಯೇ ಶಿವನ 2 ನೇ ಅತ್ಯಂತ ಎತ್ತರದ ಪ್ರತಿಮೆಯಾಗಿದೆ. ಈ ಅದ್ಭುತವಾದ ದೇವಾಲಯವು ಅರೇಬಿಯನ್ ಸಮುದ್ರದ ಬೀಚ್‍ನ ಕಂಡೂಕ ಬೆಟ್ಟದಲ್ಲಿದೆ. ಇದು ಸುಮಾರು 20 ಮಹಡಿಗಳ ದೊಡ್ಡದಾದ ಗೋಪುರವನ್ನು ಹೊಂದಿದೆ. ಈ ಸುಂದರವಾದ ದೇವಾಲಯದಲ್ಲಿ ಶಿವನನ್ನು ಪ್ರಾರ್ಥಿಸಲು ಪ್ರಶಾಂತವಾದ ವಾತಾವರಣವನ್ನು ಒದಗಿಸುತ್ತದೆ.

PC: Manjunath Doddamani Gajendragad


ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಅತ್ಯಂತ ಪ್ರಸಿದ್ಧವಾದ ಕ್ಷೇತ್ರವಾಗಿದೆ. ಸುತ್ತಲೂ ಕಾಡು, ನದಿಗಳು, ಮತ್ತು ಅದ್ಭುತವಾದ ನೈಸರ್ಗಿಕ ಪರಿಸರವನ್ನು ಇಲ್ಲಿ ಆನಂದಿಸಬಹುದಾಗಿದೆ. ಸುಬ್ರಹ್ಮಣ್ಯ ಸ್ವಾಮಿಗೆ ಮೀಸಲಾಗಿರುವ ಈ ದೇವಾಲಯವನ್ನು ಭಾರತದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ದೇಶದ ಮೂಲೆ-ಮೂಲೆಗಳಿಂದ ತಮ್ಮ ಸರ್ಪದೋಷವನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ದೇವಾಲಯಕ್ಕೆ ಬಸ್ಸು, ರೈಲು ಹಾಗು ವಿಮಾನಗಳ ಮೂಲಕ ಸಂಪರ್ಕ ವ್ಯವಸ್ಥೆ ಸಾಧಿಸಬಹುದಾಗಿದೆ.

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕಟೀಲ್ ದುರ್ಗಾಪರಮೇಶ್ವರಿ ದೇವಾಲಯ
ದಕ್ಷಿಣ ಕನ್ನಡದಲ್ಲಿರುವ ಕಟೀಲ್ ಪಟ್ಟಣದಲ್ಲಿರುವ ಕಟೀಲ್ ದುರ್ಗಾಪರಮೇಶ್ವರಿ ದೇವಾಲಯವು ದುರ್ಗಾ ದೇವತೆಗೆ ಸಮರ್ಪಿತವಾದ ದೇವಾಲಯವಾಗಿದೆ. ಭಾರತದ ಅತ್ಯಂತ ಜನಪ್ರಿಯ ಯಾತ್ರಾ ಕೇಂದ್ರಗಳಲ್ಲಿ ಈ ದೇವಾಲಯವು ಒಂದಾಗಿದೆ. ಇದು ನಂದಿನಿ ಎಂಬ ನದಿಯ ದಂಡೆಯಲ್ಲಿದೆ. ಪ್ರಾಕೃತಿಕ ಸೌಂದರ್ಯದಿಂದ ಆವೃತವಾಗಿರುವ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ಮಹಿಮಾನ್ವಿತವಾದ ದೇವಾಲಯವು ಮಂಗಳೂರಿನಿಂದ ಸುಮಾರು 29 ಕಿ.ಮೀ ದೂರದಲ್ಲಿದೆ.

PC: Premnath Kudva

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳು

ಹೊರನಾಡು ಅನ್ನಪೂಣೇಶ್ವರಿ ದೇವಾಲಯ
ಹೊರನಾಡು ಅನ್ನಪೂಣೇಶ್ವರಿ ದೇವಾಲಯವು ಭದ್ರ ನದಿಯ ದಡದಲ್ಲಿದೆ. ಈ ಕ್ಷೇತ್ರವನ್ನು ಹೊರಾನಾಡು ಎಂದು ಕರೆಯಲಾಗುತ್ತದೆ. ಇದು ಅನ್ನಪೂಣೇಶ್ವರಿ ದೇವಿ ಅಥವಾ ಆಹಾರ ದೇವತೆಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವು ಆಗಸ್ತ್ಯರಿಂದ ನಿರ್ಮಾಣ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ. ಇದು ರಾಜ್ಯದ ಪುರಾತನವಾದ ದೇವಾಲಯಗಳಲ್ಲಿ ಒಂದು. ಇಲ್ಲಿನ ತಾಯಿಯ ವಿಗ್ರಹವು ಅತ್ಯಂತ ಸುಂದರವಾಗಿದೆ. ಈ ಹೊರನಾಡು ದೇವಾಲಯಕ್ಕೆ ಭಕ್ತರು ಬಂದು ಪ್ರಾರ್ಥಿಸಿದರೆ ತಮ್ಮ ಜೀವನದಲ್ಲಿ ಎಂದಿಗೂ ಹಸಿವಿನಿಂದ ಹೋಗುವುದಿಲ್ಲ ಎಂದು ನಂಬಲಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ